ಬೆಂಗಳೂರು,ಜ,06: ಯಾವದೇ ಕಾರಣಕ್ಕೂ ಕಾಂಗ್ರೆಸ್ ಪಾದಯಾತ್ರಗೆ ಅನುಮತಿ ನೀಡುವ ಪ್ರಶ್ನೆಯೇ ಇಲ್ಲ ಒಂದು ವೇಳೆ ಕೋವಿಡ್ ನಿಯಮ ಉಲ್ಲಂಘಿಸಿದ್ರೆ ಕ್ರಮ ತಗೆದುಕೊಳ್ಳಲಾಗುತ್ತದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮಗಳ ಜತೆ ಮಾತನಾಡಿದ ಅವರು, ಸಿದ್ಧರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ಡಿಕೆ ಶಿವಕುಮಾರ್ ಮಂತ್ರಿಯಾಗಿ ಸರ್ಕಾರ ನಡೆಸಿದವರು. ಅವರೇ ಈಗ ಕೋವಿಡ ನಿಯಮ ಉಲ್ಲಂಘಿಸಿದರೆ ಹೇಗೆ. ಅವರೇ ಹೀಗೆ ಮಾತನಾಡಿದರೇ ಹೇಗೆ. ಕಾಂಗ್ರೆಸ್ ವಿವೇಚನೆ ಮಾಡಬೇಕು. ಕಾಂಗ್ರೆಸ್ ಪಕ್ಷದವರಿಗೆ ಒಂದು ನಿಯಮ ಬೇರೆಯವರಿಗೆ ಒಂದು ನಿಯಮ ಜಾರಿ ಮಾಡಿಲ್ಲ. ಬಿಜೆಪಿ ಸಭೆ ಕೂಡ ರದ್ಧಾಗಿದೆ ಎಂದರು.
ಕೋವಿಡ್ ಬಿಗಿ ನಿಯಮ ನಮಗೇನೂ ಖುಷಿ ಇಲ್ಲ. ಕಾಂಗ್ರೆಸ್ ನಿಯಮ ಉಲ್ಲಂಘಿಸಿದರೇ ಕ್ರಮ ಖಚಿತ. ಪಾದಯಾತ್ರೆಗೆ ಅನುಮತಿ ನೀಡುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪಾದಾಯಾತ್ರೆಗೆ ಅನುಮತಿ ಇಲ್ಲ; ಅರಗ ಜ್ಞಾನೇಂದ್ರ
Share