ಬಾಹ್ಯಾಕಾಶ ನೌಕೆಯ ಬೆನ್ನಲುಬಾಗಿ ನಿಂತವರು ಭಾರತೀಯ ಮಹಿಳೆ

Share

ಮೆಲ್ಬರ್ನ್,ಜೂ,07:ಭಾರತೀಯ ಮೂಲದ ಎಂಜಿನಿಯರ್ ಸುಭಾಷಿಣಿ ಅಯ್ಯರ್ ನಾಸಾ ಮಹತ್ವಾಕಾಂಕ್ಷೆ ಯೋಜನೆಯಾದ ಚಂದ್ರನಲ್ಲಿಗೆ ಬಾಹ್ಯಾಕಾಶ ನೌಕೆಯನ್ನು ಕಳಿಸುವ ಬೆನ್ನಲುಬಾಗಿ ನಿಂತಿದ್ದಾರೆ.

ಒರಿಯನ್‌ ಬಾಹ್ಯಾಕಾಶ ನೌಕೆಯನ್ನು ಚಂದ್ರನಲ್ಲಿಗೆ ಹೊತ್ತೂಯ್ಯಲಿರುವ ಆರ್ಟೆಮಿಸ್‌ 1 ಯೋಜನೆಯ ಬಿಡಿ ಭಾಗಗಳ ನಿರ್ಮಾಣ ಹಾಗೂ ಆರಂಭಿಕ ಹಂತದ ನಿರ್ವಹಣೆಯನ್ನು ನೋಡಿಕೊಳ್ಳುವ ತಂಡದಲ್ಲಿ ಸುಭಾಷಿಣಿ ಕೂಡ ಒಬ್ಬರು. ರಾಕೆಟ್‌ನ ಕೋರ್‌ ಸ್ಟೇಜ್‌ ನಿರ್ಮಾಣ ಪೂರ್ಣಗೊಂಡು, ಅದನ್ನು ಹಸ್ತಾಂತರಿಸುವವರೆಗೆ ನಾಸಾಗೆ ಎಲ್ಲ ರೀತಿಯ ಸಹಾಯ ಮಾಡುವ ಜವಾಬ್ದಾರಿಯೂ ಅವರ ಮೇಲಿದೆ.

ತಮಿಳುನಾಡಿನ ಕೊಯಮತ್ತೂರಿನವರಾದ ಸುಭಾಷಿಣಿ ಕಳೆದ 2 ವರ್ಷಗಳಿಂದ ಬಾಹ್ಯಾಕಾಶ ಉಡಾವಣೆ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮಾನವನು ಚಂದ್ರನ ಮೇಲ್ಮೆ„ ಸ್ಪರ್ಶಿಸಿ ಈಗಾಗಲೇ 50 ವರ್ಷಗಳಾಗಿವೆ. ಈಗ ನಾವು ಮತ್ತೆ ಮನುಷ್ಯನನ್ನು ಚಂದ್ರನಲ್ಲಿಗೆ ಮತ್ತು ಅದರಾಚೆಗೂ (ಮಂಗಳ ಗ್ರಹಕ್ಕೆ) ಕಳುಹಿಸಲು ಸಿದ್ಧತೆ ನಡೆಸಿದ್ದೇವೆ ಎಂದು ಸುಭಾಷಿಣಿ ಹೇಳಿದ್ದಾರೆ. 1992ರಲ್ಲಿ ವಿಎಲ್‌ಬಿ ಜಾನಕಿಯಮ್ಮಾಳ್‌ ಕಾಲೇಜಿನಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪೂರೈಸಿದ ಮೊದಲ ಮಹಿಳೆ ಎಂಬ ಖ್ಯಾತಿಯೂ ಅವರಿಗಿದೆ.

Girl in a jacket
error: Content is protected !!