ರದ್ದಾದ ಟಿ.20 ಅ.7ರಂದು ಯುಎಇ ನಲ್ಲಿ ನಡೆಸಲು ನಿರ್ಧಾರ

Share

ನವದೆಹಲಿ,ಜೂ,26:ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾದ ಕಾರಣ ಟಿ-20 ವಿಶ್ವಕಪ್ ಟೂರ್ನಿ ರದ್ದಾಗಿದ್ದು ಈಗ ಅಕ್ಟೋಬರ್ 17 ರಂದು ಯುಎಇಯಲ್ಲಿ ನಡೆಸಲು ನಿರ್ದರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಗೆ (ಐಸಿಸಿ) ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೂಚಿಸಿದೆ ಎಂದು ಹೇಳಲಾಗಿದೆ.

ಟಿ–20 ವಿಶ್ವಕಪ್ ಪಂದ್ಯಗಳು ಅಬುದಾಭಿ, ಶಾರ್ಜಾ ಮತ್ತು ದುಬೈನಲ್ಲಿ ನಡೆಯಲಿದ್ದು, ಕ್ವಾಲಿಫಯರ್ ಸುತ್ತಿನ ಪಂದ್ಯಗಳನ್ನು ಒಮಾನ್ ಆಯೋಜಿಸಲಿದೆ. ಭಾರತದಲ್ಲಿ ಟೂರ್ನಿ ಆಯೋಜಿಸಲು ಸಾಧ್ಯವಾಗದಿದ್ದರೆ ಯುಎಇಯಲ್ಲಿ ನಡೆಸುವುದಾಗಿ ಬಿಸಿಸಿಐ ಈ ಹಿಂದೆಯೇ ತಿಳಿಸಿತ್ತು.

ಟೂರ್ನಿಯ ಆಯೋಜನೆ ಹಕ್ಕುಗಳನ್ನು ತನ್ನ ಬಳಿಯೇ ಉಳಿಸಿಕೊಳ್ಳಲು ಬಿಸಿಸಿಐ ಉತ್ಸುಕವಾಗಿತ್ತು. ಆದರೂ ಸರ್ಕಾರದಿಂದ ತೆರಿಗೆ ವಿನಾಯಿತಿ ದೊರೆಯದಿರುವುದು ಮತ್ತು ಐಪಿಎಲ್ ಬಯೋಬಬಲ್ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಇತರ ದೇಶಗಳ ಆಟಗಾರರು ಭಾರತಕ್ಕೆ ಬರಲು ಒಪ್ಪುತ್ತಾರೆಯೇ ಎಂಬುದು ಖಚಿತವಿಲ್ಲದ ಕಾರಣ ಬಿಸಿಸಿಐ ಈ ನಿರ್ಧಾರಕ್ಕೆ ಮುಂದಾಗಿರಬಹುದು ಎನ್ನಲಾಗಿದೆ

Girl in a jacket
error: Content is protected !!