ರೋಹಿತ್ ಶರ್ಮಾ ಅಬ್ಬರಕ್ಕೆ ಇಂಗ್ಲೆಂಡ್ ಸೋಲಿಗೆ ಶರಣು

Share

ರೋಹಿತ್ ಶರ್ಮಾ ಅಬ್ಬರಕ್ಕೆ ಇಂಗ್ಲೆಂಡ್ ಸೋಲಿಗೆ ಶರಣು

by-ಕೆಂಧೂಳಿ
ರೋಹಿತ್ ಶರ್ಮಾ ಅಬ್ಬರದ ಬ್ಯಾಟಿಂಗ್‌ಗೆ ಇಂಗ್ಲೆಂಡ್ ತಂಡ ಸೋಲನ್ನು ಒಪ್ಪಿಕೊಂಡಿತು. ಕಟಕ್ ಇಂಟರ್‌ನ್ಯಾಷಿನಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತೀಯ ತಂಡ ಗೆದ್ದು ಬೀಗಿದೆ
೩೦೫ ರನ್‌ಗಳ ಬಿಗ್ ಟಾರ್ಗೆಟ್ ಬೆನ್ನತ್ತಿದ ಟೀಮ್ ಇಂಡಿಯಾ ಪರ ಓಪನಿಂಗ್‌ಮಾಡಿದ ಕ್ಯಾಪ್ಟನ್ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ಆಕ್ರಮಣಕಾರಿ ಆಗಿ ಬ್ಯಾಟ್ ಬೀಸಿದ ಇವರು ಸ್ಫೋಟಕ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.
ಇನ್ನು, ಕ್ರೀಸ್‌ನಲ್ಲೇ ನೆಲಕಚ್ಚಿ ನಿಂತು ಆಡಿದ ರೋಹಿತ್ ಇಂಗ್ಲೆಂಡ್ ಬೌಲರ್‌ಗಳನ್ನು ಕಾಡಿದ್ರು. ಕೇವಲ ೩೦ ಬಾಲ್‌ನಲ್ಲಿ ಅರ್ಧಶತಕ ಪೂರೈಸಿದ ಇವರು ಬಳಿಕ ತಾಳ್ಮೆಯಿಂದ ಬ್ಯಾಟ್ ಮಾಡಿದ್ರು. ಬ್ಯಾಕ್‌ಟು ಬ್ಯಾಕ್ ವಿಕೆಟ್ ಕಳೆದುಕೊಂಡ್ರೂ ಕುಗ್ಗದ ರೋಹಿತ್ ಶತಕ ದಾಖಲಿಸಿದ್ರು.
ಕೇವಲ ೯೦ ಬಾಲ್‌ನಲ್ಲಿ ೧೧೯ ರನ್ ಸಿಡಿಸಿದ ರೋಹಿತ್ ಬೌಂಡರಿಗಳ ಸುರಿಮಳೆಗೈದರು. ಬ್ಯಾಕ್ ಟು ಬ್ಯಾಕ್ ೭ ಭರ್ಜರಿ ಸಿಕ್ಸರ್ ಸಿಡಿಸಿದ್ರು. ಹಾಗೆಯೇ ಸುಮಾರು ೧೨ ಫೋರ್ ಬಾರಿಸಿದ್ರು. ಇವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ ೧೩೦ಕ್ಕೂ ಹೆಚ್ಚಿತ್ತು. ಈ ಮೂಲಕ ತನ್ನನ್ನು ಟೀಕಿಸಿದವರಿಗೆ ಖಡಕ್ ಉತ್ತರ ಕೊಟ್ಟರು.
ಇಂಗ್ಲೆಂಡ್ ತಂಡದ ವಿರುದ್ಧ ಟೀಮ್ ಇಂಡಿಯಾ ಉಪನಾಯಕ ಶುಭ್ಮನ್ ಗಿಲ್ ಅಬ್ಬರಿಸಿದರು. ಗಿಲ್‌ತಾಳ್ಮೆಯಿಂದಲೇ ಬ್ಯಾಟ್ ಬೀಸಿ ಜವಾಬ್ದಾರಿಯುತ ಆಟ ಆಡಿದ್ರು. ಇನ್ನು, ಕ್ರೀಸ್‌ನಲ್ಲೇ ನೆಲಕಚ್ಚಿ ನಿಂತು ಆಡಿದ ಗಿಲ್ ಅವರು ಸ್ಫೋಟಕ ಅರ್ಧಶತಕ ಸಿಡಿಸಿದರು. ತಾನು ಆಡಿದ ೫೨ ಬಾಲ್‌ನಲ್ಲಿ ೬೦ ರನ್‌ಬಾರಿಸಿದ್ರು. ೧ ಭರ್ಜರಿ ಸಿಕ್ಸರ್, ಬರೋಬ್ಬರಿ ೯ ಫೋರ್ ಚಚ್ಚಿದ್ರು. ಈ ಮೂಲಕ ಉಪನಾಯಕನಾಗಿ ಅತ್ಯುತ್ತಮ ಬ್ಯಾಟಿಂಗ್ ಮಾಡಿದರು.

ವಿರಾಟ್ ಕೊಹ್ಲಿ ೫ ರನ್‌ಗೆ ಔಟಾದ್ರು. ಶ್ರೇಯಸ್ ೪೭, ಅಕ್ಷರ್ ಪಟೇಲ್ ೪೧, ರಾಹುಲ್ ೧೦, ಹಾರ್ದಿಕ್‌ಪಾಂಡ್ಯ ೧೦, ಜಡೇಜಾ ೧೧ ರನ್ ಗಳಿಸಿದರು. ಭಾರತ ತಂಡ ಇನ್ನೂ ೫.೩ ಓವರ್ ಬಾಕಿ ಇರುವಂತೆಯೇ ೪೪.೫ ಓವರ್‌ನಲ್ಲಿ ೬ ವಿಕೆಟ್ ನಷ್ಟಕ್ಕೆ ೩೦೮ ರನ್ ಕಲೆ ಹಾಕಿ ಗೆದ್ದು ಬೀಗಿದೆ.

Girl in a jacket
error: Content is protected !!