ಭಾರತ-ಶ್ರೀಲಂಕ ವೇಳಾಪಟ್ಟಿ ಪ್ರಕಟ

Share

ನವದೆಹಲಿ,ಜೂ,07: ಶ್ರೀಲಂಕಾ ವಿರುದ್ಧ ಭಾರತದ ಪರ್ಯಾಯ ತಂಡವು ಆಡಲಿರುವ ತಲಾ ಮೂರು ಏಕದಿನ ಹಾಗೂ ಟ್ವೆಂಟಿ–20 ಪಂದ್ಯಗಳ ಕ್ರಿಕೆಟ್‌ ಸರಣಿಯು ಜುಲೈ 13ರಿಂದ 25ರವರೆಗೆ ನಡೆಯಲಿದೆ.

ಆಯ್ಕೆಗಾರರು ಶಿಖರ್ ಧವನ್ ಅಥವಾ ಹಾರ್ದಿಕ ಪಾಂಡ್ಯ ನಾಯಕತ್ವದಲ್ಲಿ ಸಾಕಷ್ಟು ಯುವ ಆಟಗಾರರನ್ನು ಆಯ್ಕೆ ಮಾಡುವ ನಿರೀಕ್ಷೆಯಿದೆ. ಸಂಪೂರ್ಣ ಫಿಟ್ ಆಗಿರುವ ಶ್ರೇಯಸ್ ಅಯ್ಯರ್‌ ಕೂಡ ನಾಯಕತ್ವದ ರೇಸ್‌ನಲ್ಲಿದ್ದಾರೆ.

ಸೋನಿ ಸ್ಪೋರ್ಟ್ಸ್ ವಾಹಿನಿಯು ಜಾಲತಾಣಗಳ ಮೂಲಕ ಸರಣಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಮೂರು ಏಕದಿನ ಪಂದ್ಯಗಳು ಕ್ರಮವಾಗಿ ಜುಲೈ 13, 16 ಮತ್ತು 18ರಿಂದ ನಡೆಯಲಿವೆ. ಜುಲೈ 21, 23 ಮತ್ತು 25ರಂದು ಮೂರು ಟ್ವೆಂಟಿ–20 ಪಂದ್ಯಗಳನ್ನು ನಿಗದಿ ಮಾಡಲಾಗಿದೆ. ಪಂದ್ಯಗಳು ನಡೆಯುವ ತಾಣಗಳನ್ನು ಇನ್ನೂ ಪ್ರಕಟಿಸಿಲ್ಲ.

ಒಂದೇ ಸಮಯದಲ್ಲಿ ಭಾರತದ ಎರಡು ತಂಡಗಳು ಬೇರೆ ಬೇರೆ ದೇಶಗಳಲ್ಲಿ ಆಡಲಿರುವ ಅಪರೂಪದ ಸಂದರ್ಭ ಇದು. ವಿರಾಟ್ ಕೊಹ್ಲಿ ನೇತೃತ್ವದ ತಂಡವು ಇದೇ ವೇಳೆಯಲ್ಲಿ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳಿಗೆ ಸಿದ್ಧತೆ ನಡೆಸಲಿದೆ.

ಇದೇ 18ರಿಂದ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗಾಗಿ ವಿರಾಟ್‌ ಕೊಹ್ಲಿ ನೇತೃತ್ವದ ಟೆಸ್ಟ್ ತಂಡವು ಈಗಾಗಲೇ ಇಂಗ್ಲೆಂಡ್‌ನಲ್ಲಿದೆ. ಇಂಗ್ಲೆಂಡ್ ಎದುರಿನ ಸರಣಿಯು ಆಗಸ್ಟ್ 4ರಂದು ಪ್ರಾರಂಭವಾಗಲಿದೆ.

Girl in a jacket
error: Content is protected !!