Posted by: H.D.Savita
ಟೋಕಿಯೋ,ಆ,02 :ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತದ ಮಹಿಳಾ ಹಾಕಿ ತಂಡ ಅತಿದೊಡ್ಡ ಸಾಧನೆ ಮಾಡಿದೆ. ಬಲಿಷ್ಠ ಆಸ್ಟ್ರೇಲಿಯಾ ಹಾಕಿ ತಂಡವನ್ನು ಮಣಿಸಿ, ಸೆಮಿಸ್ ಗೆ ಕಾಲಿಟ್ಟಿದೆ. ಈ ಮೂಲಕ ಇದೇ ಮೊದಲಬಾರಿಗೆ ಭಾರತದ ಮಹಿಳಾ ಹಾಕಿ ತಂಡ ಸೆಮಿಫೈನಲ್ಸ್ ಪ್ರವೇಶ ಮಾಡಿದಂತೆ ಆಗಿದೆ. ಕ್ವಾರ್ಟರ್ ಫೈನಲ್ ನಲ್ಲಿ ಆಸ್ಟ್ರೇಲಿಯಾದ ವಿರುದ್ಧ ೧-೦ಅಂಕಗಳ ಅಂತರದಲ್ಲಿ ಜಯಗಳಿಸಿದೆ..
ಭಾರತದ ಮಹಿಳಾ ಹಾಕಿ ತಂಡ ಇದೀಗ ಬರೋಬ್ಬರಿ 41ವರ್ಷಗಳ ನಂತರ ಇಂತಹದೊಂದು ಸಾಧನೆ ಮಾಡಿದೆ.
1980ರಲ್ಲಿ ಮಾಸ್ಕೋದಲ್ಲಿ ಕ್ವಾರ್ಟರ್ ಫೈನಲ್ ಮ್ಯಾಚ್ ನಲ್ಲಿ ಭಾರತ ಸೋತು ನಾಲ್ಕನೇಯ ಸ್ಥಾನ ಪಡೆದಿದ್ದೇ ಇಲ್ಲಿಯವರೆಗೆ ಭಾರತದ ಮಹಿಳಾ ಹಾಕಿ ತಂಡದ ಶ್ರೇಷ್ಠ ಸಾಧನೆಯಾಗಿತ್ತು.
ಸೆಮಿಸ್ ನಲ್ಲಿ ಭಾರತ, ಅರ್ಜೆಂಟೈನಾ, ನೆದರ್ಲ್ಯಾಂಡ್ಸ್, ನ್ಯೂಜಿಲ್ಯಾಂಡ್, ಸ್ಪೇನ್ ಅಥವಾ ಗ್ರೇಟ್ ಬ್ರಿಟನ್ , ಈ ಯಾವುದಾದರೂ ಒಂದು ದೇಶದ ಜೊತೆ ಕಣಕ್ಕಿಳಿಯಲಿದೆ. ಬಲಿಷ್ಠ ಆಸ್ಟ್ರೇಲಿಯಾವನ್ನು ಸೋಲಿಸುವಲ್ಲಿ ಗುರ್ಜತ್ ಕೌರ್ ಪ್ರಮುಖ ಪಾತ್ರ ವಹಿಸಿದ್ದಾರೆ.