ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಗೆಲುವು

Share

ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಗೆಲುವು

by ಕೆಂಧೂಳಿ

ಇಂಗ್ಲೆಂಡ್ ವಿರುದ್ಧದ ಎರಡನೇ ಟಿ೨೦ ಪಂದ್ಯದಲ್ಲಿ ಭಾರತ ಗೆಲುವು ದಾಖಲಿಸಿತು.ಚೆಪಾಕ್‌ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಭಾರತ ಈ ಗೆಲುವು ದಾಖಲಿಸಿತು. ಭಾರತದ ಪರ ತಿಲಕ್ ವರ್ಮಾ ಅವರು ೭೨ ರನ್ ಹೊಡೆಯುವ ಮೂಲಕ ಭಾರತದ ಗೆಲುವಿಗೆ ಕಾರಣರಾದರು. ವಾಷಿಂಗ್ಟನ್ ಸುಂದರ್ ಕೂಡ ೨೬ ರನ್ ಗಳಿಸಿ ಗಮನ ಸೆಳೆದರು. ಟಾಸ್ ಗೆದ್ದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊದಲ ಬ್ಯಾಟ್ ಮಾಡಿದ ಇಂಗ್ಲೆಂಡ್ ೨೦ ಓವರ್‌ಗಳಲ್ಲಿ ೯ ವಿಕೆಟ್ ಕಳೆದುಕೊಂಡು ೧೬೫ ರನ್ ಪೇರಿಸಿತು. ಭಾರತ ೮ ವಿಕೆಟ್ ಕಳೆದುಕೊಂಡು ಜಯ ಸಾದಿಸಿತು. ಐಸಿಸಿ ವರ್ಷದ ಟಿ೨೦ ಆಟಗಾರ ಪ್ರಶಸ್ತಿ ಗೆದ್ದ ಅರ್ಷದೀಪ್ ಸಿಂಗ್ .ರೋಹಿತ್, ಜೈಸ್ವಾಲ್, ರಹಾನೆ..ತಾರೆಯರಿದ್ದ ಮುಂಬೈ ವಿರುದ್ಧ ಜಮ್ಮುವಿಗೆ ಸ್ಮರಣೀಯ ಜಯ.

Girl in a jacket
error: Content is protected !!