ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಮತ್ತಷ್ಟು ಇಳಿಮುಖ

Share

ಬೆಂಗಳೂರು,ಜೂ,೧೫:ಲಾಕ್‌ಡೌನ್ ಎಫೆಕ್ಟ್ ಮತ್ತು ಕೊರೊನಾ ನಿಯಂತ್ರಣಕ್ಕೆ ತಗೆದುಕೊಂಡಿರುವ ಕೆಲ ನಿರ್ಧಾರಗಳಿಂದ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಇಳಿಮುಖ ಕಾಣುತ್ತಿದೆ.

ಇದರ ಪರಿಣಾಮವಾಗಿ ಮಂಗಳವಾರ ೫,೦೪೧ ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ ೨೭,೭೭,೦೧೦ಕ್ಕೆ ಏರಿಕೆಯಾಗಿದೆ.
ಕಳೆದ ೨೪ ಗಂಟೆಯಲ್ಲಿ ಮಹಾಮಾರಿಗೆ ೧೧೫ ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ ೩೩,೧೪೮ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರಿನಲ್ಲಿ ಇಂದು ೯೮೫ ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ ೧೧,೯೯,೧೪೩ಕ್ಕೆ ಏರಿಕೆಯಾಗಿದೆ. ಇನ್ನು ನಗರದಲ್ಲಿ ಸೋಂಕಿಗೆ ೧೬ ಮಂದಿ ಬಲಿಯಾಗಿದ್ದಾರೆ.
ರಾಜ್ಯದಲ್ಲಿ ಇಂದು ಸಹ ಹೊಸ ಪಾಸಿಟಿವ್ ಪ್ರಕರಣಗಳಿಗಿಂತ ಹೆಚ್ಚು ಅಂದರೆ ೧೪,೭೮೫ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ ೨೫,೮೧,೫೫೯ಕ್ಕೆ ಏರಿಕೆಯಾಗಿದೆ. ಇನ್ನು ೧,೬೨,೨೮೨ ಸಕ್ರೀಯ ಪ್ರಕರಣಗಳಿವೆ.
ರಾಜ್ಯಾದ್ಯಂತ ಇಂದು ೧,೩೨,೬೦೦ ಕೋವಿಡ್ ಟೆಸ್ಟ್ ನಡೆಸಲಾಗಿದ್ದು, ೫,೦೪೧ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. ೩.೮೦ಕ್ಕೆ ಇಳಿದಿದೆ.
ಹೊಸ ಪ್ರಕರಣಗಳ ಪೈಕಿ ಬೆಂಗಳೂರು ನಗರದಲ್ಲಿ ೯೮೫, ಬೆಳಗಾವಿಯಲ್ಲಿ ೯೫, ಬಳ್ಳಾರಿಯಲ್ಲಿ ೧೨೨, ಚಿಕ್ಕಬಳ್ಳಾಪುರದಲ್ಲಿ ೬೫, ಚಿಕ್ಕಮಗಳೂರು ೨೨೪, ದಕ್ಷಿಣ ಕನ್ನಡದಲ್ಲಿ ೪೮೨, ದಾವಣಗೆರೆಯಲ್ಲಿ ೧೮೩, ಹಾಸನದಲ್ಲಿ ೫೨೨, ಮೈಸೂರಿನಲ್ಲಿ ೪೯೦, ಶಿವಮೊಗ್ಗದಲ್ಲಿ ೨೮೨, ತುಮಕೂರಿನಲ್ಲಿ ೩೨೯, ಉಡುಪಿಯಲ್ಲಿ ೧೦೭, ಉತ್ತರ ಕನ್ನಡದಲ್ಲಿ ೧೨೨ ಪ್ರಕರಣಗಳು ವರದಿಯಾಗಿವೆ.
ಕಳೆದ ೨೪ ತಾಸಿನಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಪೈಕಿ ಬೆಂಗಳೂರು ನಗರದಲ್ಲಿ ೧೬, ಬೆಳಗಾವಿ ೩, ಶಿವಮೊಗ್ಗ ೫, ಹಾವೇರಿ ೩, ಧಾರವಾಡದಲ್ಲಿ ೭, ಮೈಸೂರಿನಲ್ಲಿ ೨೬ ಪ್ರಕರಣಗಳು ಸೇರಿವೆ.

Girl in a jacket
error: Content is protected !!