ಬೆಂಗಳೂರು, ಮೇ ೧೬: ಇದು ನಿಜಕ್ಕೂ ಅಚ್ಚರಿಯ ವಿಷಯ ಹೀಗೂ ಸರ್ಕಾರ ಜನರನ್ನು ಯಾಮರಿಸುತ್ತದೆಯೇ ಎನ್ನುವ ಅನುಮಾನಗಳು ಈಗ ಕಾಡುತ್ತಿವೆ. ಯಾಕೆಂದರೆ ರಾಜ್ಯದಲ್ಲಿ ದಿಡೀರ್ ಕೊರೊನಾ ವೈರಸ್ ಸೋಂಕಿತರ ಸಖ್ಯೆ ಇಳಿಮುಖವಾಗಿದೆ ಅದು ಸಾವಿರ ಗಟ್ಟಲೆ ಇಳಿಕೆಯಾಗಿದೆ ಎಂದರೆ ಅದರ ಹಿಂದಿನ ಅಸಲಿ ಸತ್ಯವನ್ನು ಹುಡುಕುತ್ತಾ ಹೋದಾಗ ಸತ್ಯಾಂಶಗಳು ಬಯಲಾಗಿವೆ.
ಹೌದು. ರಾಜ್ಯ ಸರ್ಕಾರ ಲಾಕ್‌ಡೌನ್ ಮಾಡಿದರೂ ಕೂಡ ಸೋಂಕಿತ ಸಂಖ್ಯೆ ದಾಖಲೆ ಮಟ್ಟದಲ್ಲಿ ಏರತೊಡಗಿದವು ಇದರಿಂದ ಸರ್ಕಾರಕ್ಕೆ ಒಂದು ರೀತಿ ಮುಜುಗರ ಉಂಟಾಯಿತು ಇದರಿಂದ ಕೊರೊನಾ ತಪಾಸಣೆಯನ್ನೇ ಕಡಿತಗೊಳಿಸಿದರೆ ಹೇಗೆ? ಇಂತ ಯೋಚನೆ ಮಾಡಿಯೇ ಸರ್ಕಾರ ಈಗ ಕೊರೊನಾ ತಪಾಸಣೆಯನ್ನೆ ಕಡಿತಗೊಳಿಸಿದೆ ಹೀಗಾಗಿ ದಿಡೀರ್ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ ಇದು ಆರೋಗ್ಯ ಇಲಾಖೆ ನೀಡಿದ ಮಾಹಿತಿ ಮೂಲಕ ದೃಡಪಟ್ಟಿದೆ.
ರಾಜ್ಯದಲ್ಲಿ ಕಳೆದ ೨೪ ಗಂಟೆಗಳಲ್ಲೇ ೩೧೫೩೧ ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದು ದಿನದಲ್ಲಿ ಕೊವಿಡ್-೧೯ ಸೋಂಕಿನಿಂದ ೪೦೩ ಮಂದಿ ಪ್ರಾಣ ಬಿಟ್ಟಿದ್ದು, ಇದೇ ಅವಧಿಯಲ್ಲಿ ೩೬೪೭೫ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಭಾನುವಾರದ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಒಟ್ಟು ೨೨,೦೩,೪೬೨ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಈವರೆಗೂ ೧೫,೮೧,೪೫೭ ಸೋಂಕಿತರು ಗುಣಮುಖರಾಗಿದ್ದು, ೨೧೮೩೭ಕ್ಕೆ ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಉಳಿದಂತೆ ೬,೦೦,೧೪೭ ಕೊವಿಡ್-೧೯ ಸಕ್ರಿಯ ಪ್ರಕರಣಗಳಿವೆ.
ಕೊವಿಡ್-೧೯ ಪರೀಕ್ಷೆ ಸಂಖ್ಯೆಯಲ್ಲಿ ಇಳಿಮುಖ
ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿನ ಹೊಸ ಪ್ರಕರಣಕ್ಕಿಂತ ಗುಣಮುಖರ ಸಂಖ್ಯೆ ಹೆಚ್ಚುತ್ತಿದೆ ಎಂದು ನಿರಾತಂಕದಿಂದ ಇರುವಂತಿಲ್ಲ. ರಾಜ್ಯದಲ್ಲಿ ಕೊವಿಡ್-೧೯ ಸಂಖ್ಯೆ ಇಳಿಮುಖವಾಗುವುದರ ಹಿಂದೆ ಬೇರೆಯದ್ದೇ ಕಾರಣ ಅಡಗಿದೆ. ಕಳೆದ ೨೪ ಗಂಟೆಗಳಲ್ಲಿ ೯೭೧೩ ಜನರಿಗೆ ರಾಪಿಡ್ ಆಂಟಿಜೆನಿಕ್ ಪರೀಕ್ಷೆ ನಡೆಸಲಾಗಿದೆ. ೧,೦೩,೫೦೬ ಜನರಿಗೆ ಕೊರೊನಾ ತಪಾಸಣೆ ನಡೆಸಲಾಗಿದ್ದು, ಒಂದು ದಿನದಲ್ಲಿ ಒಟ್ಟು೧,೧೩,೨೧೯ ಮಂದಿಗೆ ಮಾತ್ರ ಕೊವಿಡ್-೧೯ ಸೋಂಕಿನ ತಪಾಸಣೆ ನಡೆಸಲಾಗಿದೆ.
ಪ್ರತಿನಿತ್ಯ ೧೫೦೦೦ಕ್ಕಿಂತಲೂ ಹೆಚ್ಚು ಕೊರೊನಾವೈರಸ್ ಸೋಂಕಿತ ಪ್ರಕರಣಗಳನ್ನು ವರದಿ ಮಾಡುತ್ತಿದ್ದ ಬೆಂಗಳೂರಿನಲ್ಲಿ ೧೦,೦೦೦ಕ್ಕಿಂತಲೂ ಕಡಿಮೆ ಪ್ರಕರಣಗಳು ಪತ್ತೆಯಾಗಿವೆ. ಕಳೆದ ೨೪ ಗಂಟೆಗಳಲ್ಲಿ ಕೇವಲ ೮೩೪೪ ಮಂದಿಗೆ ಸೋಂಕು ತಗುಲಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ ೧೦,೫೧,೦೫೮ಕ್ಕೆ ಏರಿಕೆಯಾಗಿದೆ. ಕಳೆದ ೨೪ ಗಂಟೆಗಳಲ್ಲಿ ಮಹಾಮಾರಿಗೆ ೧೪೩ ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ ೯೪೮೩ಕ್ಕೆ ಏರಿಕೆಯಾಗಿದೆ. ೩,೬೧,೩೮೦ ಕೊವಿಡ್-೧೯ ಸಕ್ರಿಯ ಪ್ರಕರಣಗಳಿವೆ.
ಜಿಲ್ಲೆಯಲ್ಲಿ ಎಷ್ಟು ಪ್ರಕರಣಗಳು;
ರಾಜ್ಯದಲ್ಲಿ ಒಟ್ಟು ೩೧೫೩೧ ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ ೪೩೧, ಬಳ್ಳಾರಿ ೧೭೨೯, ಬೆಳಗಾವಿ ೧೭೬೨, ಬೆಂಗಳೂರು ಗ್ರಾಮಾಂತರ ೧೦೮೨, ಬೆಂಗಳೂರು ೮೩೪೪, ಬೀದರ್ ೧೨೯, ಚಾಮರಾಜನಗರ ೪೪೦, ಚಿಕ್ಕಬಳ್ಳಾಪುರ ೫೫೮, ಚಿಕ್ಕಮಗಳೂರು ೯೬೩, ಚಿತ್ರದುರ್ಗ ೬೪೦, ದಕ್ಷಿಣ ಕನ್ನಡ ೯೫೭, ದಾವಣಗೆರೆ ೧೧೫೫, ಧಾರವಾಡ ೯೩೭, ಗದಗ ೪೫೩, ಹಾಸನ ೧೧೮೨, ಹಾವೇರಿ ೧೮೪, ಕಲಬುರಗಿ ೬೪೫, ಕೊಡಗು ೧೯೧, ಕೋಲಾರ ೫೬೯, ಕೊಪ್ಪಳ ೬೧೭, ಮಂಡ್ಯ ೭೦೯, ಮೈಸೂರು ೧೮೧೧, ರಾಯಚೂರು ೪೬೪, ರಾಮನಗರ ೪೦೩, ಶಿವಮೊಗ್ಗ ೬೪೩, ತುಮಕೂರು ೨೧೩೮, ಉಡುಪಿ ೭೪೫, ಉತ್ತರ ಕನ್ನಡ ೧೦೮೭, ವಿಜಯಪುರ ೩೩೦, ಯಾದಗಿರಿ ೨೩೩ ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.