ಸಿನೆಮಾ
‘ದಾರಿ ಯಾವುದಯ್ಯಾ ವೈಕುಂಠಕೆ’ ಚಿತ್ರಕಥೆಗೆ ಪ್ರಶಸ್ತಿ
ಕನ್ನಡದ ಚಿತ್ರ ‘ದಾರಿ ಯಾವುದಯ್ಯಾ ವೈಕುಂಠಕೆ ಚಿತ್ರಕಥೆಗೆ ಉತ್ತಮ ಚಿತ್ರಕತೆ ಪ್ರಶಸ್ತಿ ದೊರಕಿದೆ. ಮಹಾರಾಷ್ಟ್ರದ ಪುಣೆಯಲ್ಲಿ ಛಪತ್ರಪತಿ ಶಿವಾಜಿ ಅಂತರಾಷ್ಟ್ರೀಯ ಚಲನಚಿತರೋತ್ಸವದಲ್ಲಿ ಈ ಪ್ರಶಸ್ತಿಗೆ ಆಯ್ಕೆಯಾಗಿದೆ ಇದರ ಜೊತೆಗೆ “ಸ್ಪೇನ್” ನಲ್ಲಿ ನಡೆಯುವ ಬಾರ್ಸೆಲೋನಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಉತ್ತಮ ನಿರ್ದೇಶನ ಪ್ರಶಸ್ತಿಗಾಗಿ ಬೇರೆ ಬೇರೆ ದೇಶದ ನಿರ್ದೇಶಕರ ಜೊತೆ ಸ್ಪರ್ಧೆಗಿಳಿದು ಕೊನೆಗೂ “ಅತ್ಯುತ್ತಮ ನಿರ್ದೇಶಕ” ಪ್ರಶಸ್ತಿಯನ್ನು ದಕ್ಕಿಸಿಕೊಂಡಿದೆ. “ನಾವ್ಡಾ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ೧೬೦೦ ಸಿನಿಮಾಗಳ ಪೈಕಿ ನನಗೇ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಬಂದಿದ್ದು ಹೆಚ್ಚು ಖುಷಿ ತಂದಿತು.…