Browsing: ಸಿನೆಮಾ

ಸಿನೆಮಾ

ಚಡ್ಡಿ ದೋಸ್ತ್ ಸಿನಿಮಾ ನೋಡಿ ಗೋಲ್ಡ್ ಕಾಯಿನ್ ಗೆಲ್ಲಿ

ಹಾಸ್ಯದ ಜೊತೆ ಸ್ನೇಹ, ಪ್ರೀತಿಯ ಕಥಾನಕ ಹೊಂದಿದ, ರೆಡ್ ಅಂಡ್ ವೈಟ್ ಸೆವೆನ್ ರಾಜ್ ನಿರ್ಮಾಣದ ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ಚಿತ್ರವು ಕಳೆದ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗಿ, ಎಲ್ಲಾ ಕಡೆಯಿಂದ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ದಿನದಿಂದ ದಿನಕ್ಕೆ ಚಿತ್ರದ ಕಲೆಕ್ಷನ್ ಕೂಡ ಇಂಪ್ರೂವ್ ಆಗ್ತಿದೆ. ಕಾಮಿಡಿಯೊಂದಿಗೆ ಆರಂಭವಾಗುವ ಚಿತ್ರದ ಕ್ಲೈಮ್ಯಾಕ್ಸ್ ಸೀನ್ ಪ್ರೇಕ್ಷಕರ ಕಣ್ಣನ್ನು ಒದ್ದೆಯಾಗಿಸುತ್ತದೆ. ಆಸ್ಕರ್ ಕೃಷ್ಣ ನಿರ್ದೇಶನದ ಈ ಚಿತ್ರಕ್ಕೆ ಲೋಕೇಂದ್ರಸೂರ್ಯ. ಕಥೆ, ಚಿತ್ರಕಥೆ, ಸಂಭಾಷಣೆ ರಚಿಸಿದ್ದಾರೆ. ನಿರ್ಮಾಪಕ ಸೆವೆನ್ ರಾಜ್ ಒಬ್ಬ…

ಈವಾರ ತೆರೆಗೆ,’ ಜನುಮದ ಜಾತ್ರೆ’

ಶ್ರೀ ಮಣಿಕುಪ್ಪೆ ಆಂಜನೇಯ ಸ್ವಾಮಿ ಪ್ರೊಡಕ್ಷನ್ ಲಾಂಛನ ದಲ್ಲಿ ದೊಡ್ಮನೆ ಮಂಜುನಾಥ್ ಎಂ ಅವರ ನಿರ್ಮಾಣದ ಈ ಚಿತ್ರವನ್ನು ಈ ವಾರ ರಾಜ್ಯದ್ಯಂತ ತೆರೆಗೆ ತರುತ್ತಿದ್ದಾರೆ. ಆಟೋ ಚಾಲಕನಾಗಿದ್ದುಕೊಂಡೇ ಜನುಮದಜಾತ್ರೆ ಎಂಬ ಸಿನಿಮಾ ನಿರ್ದೇಶನ ಮಾಡಿರುವ ಆಟೋ ಆನಂದ್ . ಪಕ್ಕಾ ಹಳ್ಳಿ ಸೊಗಡಿನಲ್ಲಿ ನಡೆಯುವ ಪ್ರೇಮಕಥೆಯ ಚಿತ್ರ ಇದಾಗಿದ್ದು, ಮಲೆ ಮಹದೇಶ್ವರ ಬೆಟ್ಟ, ಮಂಡ್ಯ, ತುಮಕೂರು, ಕೊರಟಗೆರೆ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಎಲ್ಲಾ ಪ್ರೇಮ ಕಥೆಗಳ ಹಾಗೆ ಇದೂ ಕೂಡ ಗ್ರಾಮೀಣ ಪರಿಸರದ ಹಿನ್ನೆಲೆಯಲ್ಲಿ…

ಸೈಮಾ ೨೦೧೯ ಪ್ರಶಸ್ತಿ ಪ್ರಕಟ; ಪ್ರಶಸ್ತಿಗಳನ್ನು ಬಾಚಿಕೊಂಡ ʻಯಜಮಾನʼ

ಸೈಮಾ ೨೦೧೯ ಪ್ರಶಸ್ತಿಗಳ ವಿತರಣೆ ಸಮಾರಂಭ ಶನಿವಾರ ಹೈದರಾಬಾದ್‌ನಲ್ಲಿ ನಡೆದಿದ್ದು, ದರ್ಶನ್ ನಟನೆಯ ’ಯಜಮಾನ’ ಸಿನಿಮಾಕ್ಕೆ ಕನ್ನಡ ವಿಭಾಗದಲ್ಲಿ ಹೆಚ್ಚು ಪ್ರಶಸ್ತಿಗಳು ಲಭ್ಯವಾಗಿವೆ ’ಯಜಮಾನ’ ಸಿನಿಮಾದ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ನಟ ದರ್ಶನ್‌ಗೆ ನೀಡಲಾಗಿದೆ. ಅತ್ಯುತ್ತಮ ನಟಿ ಪ್ರಶಸ್ತಿಯನ್ನು ’ಆಯುಶ್‌ಮಾನ್ ಭವ’ ಸಿನಿಮಾದ ನಟನೆಗೆ ರಚಿತಾ ರಾಮ್ ಪಡೆದುಕೊಂಡಿದ್ದಾರೆ. ’ಅವನೇ ಶ್ರೀಮನ್ನಾರಾಯಣ’ ಸಿನಿಮಾದ ನಟನೆಗೆ ರಕ್ಷಿತ್ ಶೆಟ್ಟಿಗೆ ವಿಮರ್ಶಕರ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದೆ. ದರ್ಶನ್ ಕಾರ್ಯಕ್ರಮಕ್ಕೆ ಗೈರಾಗಿದ್ದ ಕಾರಣ ನಿರ್ಮಾಪಕಿ ಶೈಲನಾ ನಾಗ್ ಪ್ರಶಸ್ತಿಯನ್ನು…

ವಿಶೇಷತೆಗಳ ಗುಚ್ಚ `ತ್ರಿವೇದಂ’

ಹೊಸಬರ ತ್ರಿವೇದಂ ಚಿತ್ರದಲ್ಲಿ ಹಲವು ವಿನೂತನಗಳು ಇರುವುದು ವಿಶೇಷ. ಸಾಮಾನ್ಯವಾಗಿ ನೈಜ ಕತೆಯನ್ನು ಆದರಿಸಿದ ಚಿತ್ರಗಳು ಬಂದಿವೆ, ಬರುತ್ತಲೆ ಇದೆ. ಆದರೆ ಇದರಲ್ಲಿ ಮೂರು ಸತ್ಯ ಘಟನೆಗಳು ಬೇರೆ ಬೇರೆ ಸ್ಥಳಗಳಲ್ಲಿ ನಡೆದಿದೆ. ೨೦೧೨ರಲ್ಲಿ ಬೆಂಗಳೂರಿನ ಕುರುಬರಹಳ್ಳಿ, ಆರು ವರ್ಷದ ಕೆಳಗೆ ಮಂಡ್ಯಾ ಮತ್ತು ಹನ್ನರೆಡು ವರ್ಷದ ಹಿಂದೆ ಮೈಸೂರು ಆಸುಪಾಸುದಲ್ಲಿ ಜರುಗಿದೆ. ಅಂದರೆ ತ್ರಿವಳಿ ಕತೆಗಳನ್ನು ಒಗ್ಗೂಡಿಸಿ ಒಂದು ಸಿನಿಮಾ ಮಾಡಲು ಹೊರಟಿದ್ದಾರೆ. ಹಾಗಂತ ಒಂದಕ್ಕೊಂದು ಸಂಬಂದವಿರುವುದಿಲ್ಲ ಹಾಗೂ ಸಮಾನಾಂತರವಾಗಿ ಸಾಗುತ್ತದೆ. ಎಲ್ಲವು ಪ್ರೀತಿ ಕುರಿತಾಗಿದ್ದು…

ಪಂಚಭಾಷಾ ತಾರೆ, ನಿರ್ಮಾಪಕಿ ಪಂಡರಿಬಾಯಿ

ಪಂಚಭಾಷಾ ತಾರೆ, ನಿರ್ಮಾಪಕಿ ಪಂಡರಿಬಾಯಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ೧೯೨೮ರ ಸೆಪ್ಟೆಂಬರ್ ೧೮ರಂದು ಜನಿಸಿದ ಪಂಡರಿಬಾಯಿಯವರ ತಂದೆ ರಂಗರಾವ್ ಖ್ಯಾತ ಕೀರ್ತನಕಾರರು. ಜನಿಸಿದಾಗ ಗೀತಾ ಎಂದು ಹೆಸರು ಇರಿಸಿದ್ದರಾದರೂ, ಪಂಡರಾಪುರಕ್ಕೆ ಹೋಗಿ ಬಂದ ನಂತರ ಮಗಳ ಹೆಸರನ್ನು ಪಂಡರಿಬಾಯಿ ಎಂದು ಬದಲಿಸಿದರು. ತಾಯಿ ಕಾವೇರಿಬಾಯಿ ಭಟ್ಕಳದಲ್ಲಿ ಶಾಲಾ ಶಿಕ್ಷಕಿ. ಸಹೋದರ ವಿಮಲಾನಂದದಾಸ್ ಬಾಲ್ಯದಲ್ಲೇ ಹರಿಕಥಾ ವಿದ್ವಾಂಸರಾಗಿ ಖ್ಯಾತಗೊಂಡಿದ್ದರು. ನಾಟಕಗಳಲ್ಲಿ ಸಹ ಅಭಿನಯಿಸಿದವರು. ವಿಮಲಾನಂದದಾಸ್ ಮುಂದೆ ಕೆಲವು ಕನ್ನಡ ಚಲನಚಿತ್ರಗಳಲ್ಲಿಯೂ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದರು. ಪಂಡರಿಬಾಯಿ ತಮ್ಮ…

‘ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ’ ಮುಂದಿನ ವಾರ ತೆರೆಗೆ

ಸೆವೆನ್ ರಾಜ್ ಪ್ರೊಡಕ್ಷನ್ ಅಡಿಯಲ್ಲಿ ರೆಡ್ ಅಂಡ್‌ ವೈಟ್ ಖ್ಯಾತಿಯ ಸೆವೆನ್ ರಾಜ್‌ ಅವರ ನಿರ್ಮಾಣದ ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ಹಾಸ್ಯದ ಜೊತೆ ಸ್ನೇಹ, ಪ್ರೀತಿಯ ಕಥಾನಕ ಹೊಂದಿದ ಚಿತ್ರ. ಸೆ.೧೭ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರಕ್ಕೆ ಆಸ್ಕರ್ ಕೃಷ್ಣ ಆ್ಯಕ್ಚನ್ ಕಟ್ ಹೇಳುವುದರೊಂದಿಗೆ ನಾಯಕನಾಗೂ ನಟಿಸಿದ್ದಾರೆ. ಹಿಂದೆ ಮನಸಿನ ಮನಸಿನ ಮರೆಯಲಿ ಎಂಬ ಅಪ್ಪಟ ಪ್ರೇಮಕಥಾನಕದ ಸಿನಿಮಾ ಮಾಡಿದ್ದ ಆಸ್ಕರ್ ಕೃಷ್ಣ ಅವರ ನಿರ್ದೇಶನದ ಮತ್ತೊಂದು ಮಾಸ್ ಎಂಟರ್‌ಟೈನರ್ ಚಿತ್ರ ಇದಾಗಿದೆ. ನಿರ್ಮಾಪಕ ಸೆವೆನ್ ರಾಜ್…

ಕುರಿಗಾಹಿಗಳ ಜತೆ ಊಟಸವಿದ ಪುನಿತ್ ರಾಜ್ ಕುಮಾರ್

ನಟ ಪುನಿತ್ ರಾಜ್ ಕುಮಾರ್ ಕುರಿಗಾಹಿಗಳ ಜೊತೆ ಕಾಲಕಳೆದು ಅವರೊಂದಿಗೆ ಬೋಜನ ಸ್ವೀಕರಿಸುವ ಮೂಲಕ ಎಲ್ಲರ ಗಮನ ಸೆಳದಿದ್ದಾರೆ ಗಂಗಾವತಿಯ ಅಂಜನಾದ್ರಿ ಬೆಟ್ಟದಲ್ಲಿಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭಾನುವಾರ ಕೊಪ್ಪಳದ ಗಂಗಾವತಿ ಸನಿಹದಲ್ಲಿರುವ ಅಂಜನಾದ್ರಿ ಬೆಟ್ಟಕ್ಕೆ ದೇವರ ದರ್ಶನಕ್ಕೆ ತೆರಳಿದ್ದರು. ಕೊರೋನಾ ನಿಯಮಗಳ ಕಾರಣಕ್ಕೆ ಪುನೀತ್ ರಾಜಕುಮಾರ್ ಗೆ ಪ್ರವೇಶಾವಕಾಶ ಸಿಗಲಿಲ್ಲ. ಇದರಿಂದ ಬೇಸರಗೊಳ್ಳದೇ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಓಡಾಟ ನಡೆಸಿದ ಪುನೀತ್ ರಾಜಕುಮಾರ್, ಗಂಗಾವತಿ ಸಮೀಪದ ಹಳ್ಳಿಗಳಿಗೆ ಭೇಟಿ ನೀಡಿದರು. ಕುರಿಗಾಹಿಗಳ ಬಳಿ ತೆರಳಿದ ಪುನೀತ್ ಅವರ…

ಪ್ರೀತಿ ಮತ್ತು ಕ್ರೈ ಕಥೆಯ ಸಾಮರ್ಥ್ಯಾ

ಕಾರ್ತಿಕ್ ಮೂವೀಸ್ ಲಾಂಛನದಲ್ಲಿ ರಾಜರಬಂಡಿ ಕಾರ್ತಿಕ್ ನಿರ್ಮಿಸುತ್ತಿರುವ ಸಾಮರ್ಥ್ಯಾ ಚಿತ್ರಕ್ಕೆ ಇತ್ತೀಚೆಗೆ ಕಂಠೀರವ ಸ್ಟುಡಿಯೋವಿನಲ್ಲಿ ಮುಹೂರ್ತ ಆಚರಿಸಿಕೊಂಡಿದ್ದು ಚಿತ್ರದ ಪ್ರಥಮ ದೃಶ್ಯಕ್ಕೆ ಸಾ.ರಾ.ಗೋವಿಂದು ಕ್ಲಾಪ್ ತೋರಿದಾಗ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್ ರವರು ಕ್ಯಾಮೆರಾ ಚಾಲನೆ ನೀಡಿದರು.ಚಿತ್ರರಂಗದ ಮೇರು ವ್ಯಕ್ತಿಗಳ ಸಮ್ಮುಖದಲ್ಲಿ ನಡೆದ – ಈ ಚಿತ್ರದ ನಿರ್ದೇಶನ ಹೆಚ್.ವಾಸು. ಇದು ಇವರ ೨೪ನೇ ಚಿತ್ರ. ಚಿತ್ರಕ್ಕೆ ಸಂಭಾಷಣೆ ಶಶಿ, ಛಾಯಾಗ್ರಹಣ-ಎ.ವಿ. ಕೃಷ್ಣಕುಮಾರ್ (ಕೆ.ಕೆ), ಸಂಗೀತ-ಅರುಣ್ ಆಂಡ್ರ್ಯು, ಸಾಹಿತ್ಯ-ಕೆ. ಕಲ್ಯಾಣ್, ವಿ ನಾಗೇಂದ್ರ ಪ್ರಸಾದ್, ವಿಶ್ವಾ.ಜಿ,…

ನಶೆಯ ಜೊತೆ ನಡೆಯುತ್ತದೆ ಮೈಮಾಟದ ದಂಧೆ!

writing-ಪರಶಿವ ಧನಗೂರು ಇಡೀ ದಕ್ಷಿಣ ಭಾರತೀಯ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿದ್ದ ಹೈಟೆಕ್ ಸಿಂಥೆಟಿಕ್ ಡ್ರಗ್ಸ್ ರಾಕೆಟ್ ಮತ್ತೆ ಸದ್ದು ಮಾಡುತ್ತಿದೆ. ಡ್ರಗ್ಸ್ ಪೂರೈಕೆ ದಂಧೆಯಲ್ಲಿ ತೊಡಗಿದ್ದ ಕಾರಣಕ್ಕೆ ಬೆಂಗಳೂರಿನ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿ ಜೈಲು ಪಾಲಾಗಿದ್ದ ಖ್ಯಾತ ಕನ್ನಡದ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಯ ಡ್ರಗ್ಸ್ ಪತ್ತೆಗೆ ಹೈದರಾಬಾದ್ ಲ್ಯಾಬಿಗೆ ಕಳುಹಿಸಿದ್ದ ಕೂದಲಿನ ಎಫ್ ಎಸ್ ಎಲ್ ವರದಿಯಲ್ಲಿ ಪಾಸಿಟಿವ್ ಬಂದಿದ್ದು, ಇಬ್ಬರು ನಟಿಯರು ಮತ್ತೊಮ್ಮೆ ಬೆಂಗಳೂರಿನ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಜೈಲಿನ…

ಕಾಶ್ಮೀರದಲ್ಲಿ’ ಓ ಮೈ ಲವ್ ‘ಚಿತ್ರದ ಟೈಟಲ್ ಸಾಂಗ್

ಜಿಸಿಬಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಜಿ. ರಾಮಾಂಜಿನಿ ಅವರು ಕಥೆ ಬರೆದು ಬಹುಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಚಿತ್ರ ಓ ಮೈ ಲವ್ ಚಿತ್ರದ ಟೈಟಲ್ ಹಾಡು ಹಾಗೂ ಮಾತಿನ ಭಾಗದ ಚಿತ್ರೀಕರಣವನ್ನು ಅಕ್ಟೋಬರ್ ತಿಂಗಳಲ್ಲಿ ಉತ್ತರ ಭಾರತದ ಕಾಶ್ಮೀರದ ಸುಂದರ ತಾಣಗಳಲ್ಲಿ ನಡೆಸಲಾಗುವುದು ಎಂದು ನಿರ್ದೇಶಕ ‌ಸ್ಮೈಲ್ ಶ್ರೀನು ತಿಳಿಸಿದ್ದಾರೆ. ಅಲ್ಲದೆ ಇದೇ ೩೦ರಿಂದ ಹನುಮಗಿರಿ ಬೆಟ್ಟ, ರಾಮನಗರ, ಚನ್ನಪಟ್ಟಣ, ನಾಗರಬಾವಿ, ಹೆಚ್.ಎಂ.ಟಿ.ಗ್ರೌಂಡ್, ಯೂನಿವರ್ಸಿಟಿ ರಸ್ತೆಯಲ್ಲಿ ಫೈಟ್, ಚೇಸಿಂಗ್ ಸೀನ್ ಗಳ ಚಿತ್ರೀಕರಣ ನಡೆಯಲಿದೆ.‌. ಈಗಾಗಲೇ ಬಹುತೇಕ ಶೂಟಿಂಗ್…

ಸಂಜನಾ -ರಾಗಿಣಿ ಡ್ರಗ್ಸ್ ಸೇವನೆ ದೃಢ

ನಟಿಯರಾದ ಸಂಜನಾ, ರಾಗಿಣಿ ಡ್ರಗ್ಸ್ ಸೇವಿಸಿರುವುದು ಎಫ್‌ಎಸ್‌ಎಲ್ ಪರೀಕ್ಷೆಯಲ್ಲಿ ದೃಢಪಟ್ಟಿದೆ. ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ, ವಿರೇನ್ ಖನ್ನಾ, ರವಿಶಂಕರ್, ಲೂಮ್ ಪೆಪ್ಪರ್, ರಾಹುಲ್ ತೋನ್ಸೆ ಡ್ರಗ್ಸ್ ಸೇವಿಸಿರುವುದು ಎಫ್‌ಎಸ್‌ಎ ಪರೀಕ್ಷೆಯಲ್ಲಿ ದೃಡಪಟ್ಟಿದೆ. ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ತಲೆ ಕೂದಲನ್ನು ೨೦೨೦ರ ಅಕ್ಟೋಬರ್‌ನಲ್ಲಿ ಹೈದರಾಬಾದ್‌ನ ಈSಐಗೆ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರ ವರದಿ ಈಗ ಸಿಸಿಬಿ ಪೊಲೀಸರ ಕೈಸೇರಿದೆ. ಸದರಿ ರಿಪೋರ್ಟ್‌ನಲ್ಲಿ ಇಬ್ಬರೂ ನಟಿಯರು ಡ್ರಗ್ಸ್ ಸೇವಿಸಿದ್ದರು ಎನ್ನುವುದು ದೃಢಪಟ್ಟಿದ್ದು, ಜತೆಗೆ ವಿರೇನ್ ಖನ್ನಾ ಕೂಡ…

ಭಾರತಿ ವಿಷ್ಣುವರ್ಧನ್ ಕುರಿತ ಬಾಳೆ ಬಂಗಾರ ಸಾಕ್ಷ್ಯಚಿತ್ರ ಶೀಘ್ರ ಬಿಡುಗಡೆ

ಬೆಂಗಳೂರು, ಆ, 16:  ಭಾರತಿ ವಿಷ್ಣುವರ್ಧನ್ ಕುರಿತ ಸಾಕ್ಷ್ಯ ಚಿತ್ರ ಬಾಳೆ ಬಂಗಾರ ಕನ್ನಡ ಚಿತ್ರರಂಗದಲ್ಲಿ  ಗಮನ ಸೆಳೆಯುತ್ತಿದೆ. ‘ಬಾಳೆ ಬಂಗಾರ’ ಬಿಡುಗಡೆಗೆ ಸಿದ್ಧವಾಗಿದ್ದು, ಇದೀಗ ಟ್ರೈಲರ್ ಲಾಂಚ್ ಆಗಿದೆ.ಅನಿರುದ್ಧ್ ಪರಿಕಲ್ಪನೆ, ಸಂಶೋಧನೆ, ನಿರೂಪಣೆ, ನಿರ್ದೇಶನ ಮಾಡಿ, ಕೀರ್ತಿ ಇನ್ನೋವೇಶ್ ಬ್ಯಾನರ್ ನಲ್ಲಿ ‘ಬಾಳೆ ಬಂಗಾರ’ ನಿರ್ಮಿಸಿದ್ದಾರೆ. ನಿನ್ನೆ ಭಾರತಿ ವಿಷ್ಣುವರ್ಧನ್ ಜನ್ಮದಿನ ನಿಮಿತ್ತ ಟ್ರೈಲರ್ ಬಿಡುಗಡೆಯಾಗಿದೆ. ಹಿರಿಯ ನಟ ಶಿವರಾಂ, ನಿರ್ದೇಶಕ ಭಗವಾನ್, ಶಿವರಾಜ್ ಕುಮಾರ್, ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಸೇರಿದಂತೆ ಭಾರತಿ…

ಬೃಹತ್ ಬಜೆಟ್ ನ ಕೃಷ್ಣರಾಜ ಚಿತ್ರ

ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ. ಅದರಲ್ಲೂ ಕೆಜಿಎಫ್, ವಿಕ್ರಾಂತ್ ರೋಣ, ಕಬ್ಜದಂಥ ಸಿನಿಮಾಗಳಿಂದ ಕನ್ನಡ ಸಿನಿಮಾರಂಗವನ್ನು ಇಡೀ ದೇಶವೇ ತಿರುಗಿ ನೋಡುವಂತಾಗಿದೆ. ಈಗ ಮತ್ತೊಂದು ಅಂಥದ್ದೇ ದೊಡ್ಡ ಸಿನಿಮಾವೊಂದು ಸೆಟ್ಟೇರಲು ಅಣಿಯಾಗುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲೀಷ್ ಸೇರಿ ಏಳು ಭಾಷೆಗಳಲ್ಲಿ ಈ ಚಿತ್ರ ಅದ್ದೂರಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಇಂಥ ಬಿಗ್ ಪ್ರಾಜೆಕ್ಟ್ ಗೆ ಕೈಹಾಕಿರುವವರು ದೊಡ್ಡಬಳ್ಳಾಪುರ ಮೂಲದ ಉದ್ಯಮಿ ಹಾಗೂ ಶ್ರೀಭಗವತಿ ದೇವಿಯ ಆರಾಧಕ ಗಾನಶರವಣ…

ನಿರ್ಮಾಪಕ ವಿಜಯಕುಮಾರ್ ನಿಧನ

ಬೆಂಗಳೂರು,ಆ,16: ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಬಿ.ವಿಜಯ್ ಕುಮಾರ್(63) ಹೃದಯಘಾತದಿಂದಾಗಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲ್ತಿದ್ದ ವಿಜಯ್ ಕುಮಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾಗಿದ್ದರು. ಸಿಂಹಾದ್ರಿಯ ಸಿಂಹ ಸೇರಿ ಹಲವು ಚಿತ್ರ ನಿರ್ಮಾಣ ಮಾಡಿದ್ದರು. ಭಾನುವಾರ ರಾತ್ರಿ 9.30ರ ಸುಮಾರಿಗೆ ವಿಜಯ್ ಕುಮಾರ್ ಅವರು ಹೃದಯಾಘಾತದಿಂದ ನಿಧನರಾದರು. ಡಾ.ವಿಷ್ಣುವರ್ಧನ್ ಗೆ ಆಪ್ತರಾಗಿದ್ದ ನಿರ್ಮಾಪಕ ವಿಜಯ್ ಕುಮಾರ್, ನಟ ವಿಷ್ಣುವರ್ಧನ್ ಲಯನ್ ಜಗಪತಿ ರಾವ್, ಜಗದೇಕ ವೀರ ಮತ್ತು ಸಿಂಹಾದ್ರಿಯ ಸಿಂಹ ಮುಂತಾದ ಚಿತ್ರಗಳ ನಿರ್ಮಾಣ…

ಸಿನಿಮಾ ಮಂದಿಯ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಬಲಿ?

Writing- ಪರಶಿವ ಧನಗೂರು ಕನ್ನಡ ಸಿನಿಮಾ ಮಂದಿಗೆ ಬುದ್ಧಿ ಬರುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಸರ್ಕಾರ ಮದ್ಯೆ ಪ್ರವೇಶಿಸಿ ಚಿತ್ರೀಕರಣದ ವೇಳೆಯಲ್ಲಿ ಕಲಾವಿದರ ರಕ್ಷಣೆಗೆ ಸರಿಯಾದ ನೀತಿ ನಿಯಮ ಜಾರಿಮಾಡಿ ಎಚ್ಚರಿಸದಿದ್ದರೇ ಇನ್ನೆಷ್ಟು ಜೀವಗಳನ್ನು ಬಲಿಪಡೆಯುತ್ತಾರೋ ಈ ಬಣ್ಣದಜನ ಎನ್ನುತ್ತಿದ್ದಾರೆ ಕರ್ನಾಟಕದ ಜನ. ಕೆದಕುತ್ತಾ ಹೋದರೆ ಕನ್ನಡ ಸಿನಿಮಾ ರಂಗದಲ್ಲಿ ಶೂಟಿಂಗ್ ದುರಂತಗಳ ಕತೆ ಸಾಲು ಸಾಲೇ ಇವೆ! ಮೊದಲಿಗೆ 25 ವರ್ಷಗಳ ಹಿಂದೆ ಸದ್ದು ಮಾಡಿದ್ದು ಲಾಕಪ್ ಡೆತ್ ಸಿನಿಮಾದ ಬೈಕ್ ಜಂಪ್ ದುರಂತ. ಅಂದಿನ…

ಐ ಲವ್ ಯು ರಚ್ ಚಿತ್ರೀಕರಣ ವೇಳೆ ಪೈಟರ್ ಗೆ ವಿದ್ಯುತ್ ತಗುಲಿ ಸಾವು

ರಾಮನಗರ,ಆ,09: ಕನ್ನಡದ ಲವ್ ಯು ರಚ್ಚು ಚಿತ್ರೀಕರಣದ ವೇಳೆ ವಿದ್ಯುತ್ ತಗುಲಿ ಪೈಟರ್ ಸಾವನ್ನಪ್ಪಿದ ಘಟನೆ ನಡೆದಿದೆ. ರಾಮನಗರ ಜಿಲ್ಲೆಯ ಜೋಗನದೊಡ್ಡಿಯಲ್ಲಿ ಪೈಟಿಂಗ್ ಶೂಟ್ ನಡೆಯುತ್ತಿತ್ತು ಈ ವೇಳೆ ವಿದ್ಯುತ್ ತಂತಿ ತಗುಲಿ ಫೈಟರ್ ವಿವೇಕ್ (28) ಮೃತಪಟ್ಟಿದ್ದಾರೆ. ಅಜಯ್ ರಾವ್ ಮತ್ತು ರಚಿತಾ ರಾಮ್ ಅಭಿಯನದ ಲವ್ ಯೂ ರಚ್ಚು ಸಿನಿಮಾ ಶೂಟಿಂಗ್ ರಾಮನಗರ ತಾಲೂಕಿನ ಜೋಗನದೊಡ್ಡಿಯಲ್ಲಿ ನಡೆಯುತಿತ್ತು. ಸ್ಟಂಟ್ ಅನ್ನು ಖಾಸಗಿ ರೆಸಾರ್ಟ್ ಬಳಿ ಚಿತ್ರೀಕರಿಸಲಾಗುತ್ತಿತ್ತು ಮತ್ತು ವಿವೇಕ್ ಮತ್ತು ಸ್ಟಂಟ್ ಸಿಬ್ಬಂದಿ ಆ…

ಕ್ರೈಂ ಥ್ರಿಲ್ಲರ್ ಮಾರಿಗೋಲ್ಡ್..!

ಆರಂಭದಿಂದಲೂ ತನ್ನ ಶೀರ್ಷಿಕೆಯ ಮೂಲಕವೇ ನಿರೀಕ್ಷೆ ಹುಟ್ಟಿಸಿರುವ‍, ತೀರ್ಥಳ್ಳಿ ಹುಡುಗ ದಿಗಂತ್‌ ಅಭಿನಯದ ಚಿತ್ರ ಮಾರಿಗೋಲ್ಡ್. ಈಗಾಗಲೇ ಚಿತ್ರದ ಪೋಸ್ಟ್‌ ‌ಪ್ರೊಡಕ್ಷನ್ ಕೆಲಸಗಳು ಪ್ರಗತಿಯಲ್ಲಿದ್ದು, ಚಿತ್ರದ ಡಬ್ಬಿಂಗ್ ಕಾರ್ಯ ಮುಗಿದು, ಹಿನ್ನೆಲೆ ಸಂಗೀತ ಅಳವಡಿಕೆ ಕೊನೇ ಹಂತದಲ್ಲಿದೆ. ಇಷ್ಟರಲ್ಲೇ ಸೆನ್ಸಾರ್ ಅಂಗಳಕ್ಕೆ ಹೋಗಲು ಸಿದ್ದವಾಗಿರುವ ‘ಮಾರಿಗೋಲ್ಡ್’ ಚಿತ್ರ. ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ. ಪಕ್ಕಾ ಕ್ರೈಮ್‌ ಥ್ರಿಲ್ಲರ್‌ ಕಥಾನಕ‌ ಹೊಂದಿರುವ ಈ ಚಿತ್ರವನ್ನು ರಾಘವೇಂದ್ರ ಎಂ.ನಾಯಕ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇದು ರಾಘವೇಂದ್ರ ನಾಯಕ್…

ಬಿಗ್‌ಬಾಸ್ ಸೀಸನ್ ೮ ರ ವಿನ್ನರ್ ಆಗಿ ಪಾವಗಡ ಮಂಜು

ಬಿಗ್ ಬಾಸ್ ಸೀಸನ್ ೮ ರ ವಿನ್ನರ್ ಲ್ಯಾಗ್ ಮಂಜು ಅಲಿಯಾಸ್ ಮಂಜು ಪಾವಗಡ ಹೊರಹೊಮ್ಮಿದ್ದಾರೆ. ಅವರಿಗೆ ೪೫,೦೩,೪೯೫ ಮತಗಳು ಬಿದ್ದರೆ, ರನ್ನರ್ ಅಪ್ ಅರವಿಂದ್ ಅವರಿಗೆ ೪೩,೩೫,೯೫೭ ಮತಗಳು ಬಿದ್ದಿವೆ. ಇದು ಬಿಗ್ ಬಾಸ್ ಇತಿಹಾಸದಲ್ಲೇ ದಾಖಲೆಯಾಗಿದೆ. ರಂಗಭೂಮಿ ಹಿನ್ನಲೆಯುಳ್ಳ ಮಂಜು, ತಮ್ಮ ಹಾಸ್ಯ ಪ್ರಜ್ಞೆ ಮೂಲಕ ಮನೆಯ ಎಲ್ಲ ಸದಸ್ಯರು ಮತ್ತು ವೀಕ್ಷಕರ ಮನ ಗೆದ್ದಿದ್ದರು. ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್ ಜೊತೆಗಿನ ಕೆಲ ಗದ್ದಲಗಳನ್ನು ಬಿಟ್ಟರೆ ಬೇರಾವ ಜಗಳದಲ್ಲೂ ಮಂಜು ಕಾಣಿಸಿಕೊಂಡವರಲ್ಲ.ಹಾಸ್ಟೆಲ್ ಟಾಸ್ಕ್…

ರಶ್ಮಿಕ ಮಂದಣ್ಣರ ಬಣ್ಣದ ಬದುಕಿನ ಮಾತು…!

ಭಾರತೀಯ ಚಿತ್ರರಂಗದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಲವು ವರ್ಷಗಳ ನಂತರ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. ತಮ್ಮ ಮುಂದಿನ ಸಿನಿಮಾ ಪ್ರಾಜೆಕ್ಟ್‌ಗಳ ಬಗ್ಗೆ ಹಂಚಿಕೊಂಡ ರಶ್ಮಿಕಾ ಟ್ರೋಲ್ ಪೇಜ್‌ಗಳನ್ನು ಎದುರಿಸಿದ್ದು ಹೇಗೆ ಎಂದು ರಿವೀಲ್ ಮಾಡಿದ್ದಾರೆ. ರಶ್ಮಿಕಾ ವೃತ್ತಿ ಜೀವನದ ಗ್ರಾಫ್ ಎತ್ತರಕ್ಕೆ ಏರುತ್ತಿದೆ ಆದರೆ ಒಮ್ಮ ವೈಯಕ್ತಿಕ ಜೀವನದಲ್ಲಿ ತೆಗೆದುಕೊಂಡ ನಿರ್ಧಾರದಿಂದ ಟ್ರೋಲ್‌ಗೆ ಗುರಿಯಾದರು. ಈ ಪರಿಸ್ಥಿತಿಯನ್ನು ಪೋಷಕರ ಜೊತೆ ಎದುರಿಸಿದ್ದ ರಶ್ಮಿಕಾ ಮಂದಣ್ಣ ಹೇಗೆ ನಿಭಾಯಿಸಿದ್ದರು ಎಂದು ಹೇಳಿಕೊಂಡಿದ್ದಾರೆ. ’ಪ್ರಾರಂಭದಲ್ಲಿ ಇದು ತುಂಬಾನೇ ಕಷ್ಟವಾಗಿತ್ತು.…

ಬಚ್ಚಲ ಮನೆಯಲ್ಲಿ ಬಿದ್ದು ನಟಿ ಲೀಲಾವತಿಗೆ ಸೂಂಟ ಮುರಿತ

ಬೆಂಗಳೂರು, ಆ, 07: ಹಿರಿಯ ನಟಿ ಲೀಲಾವತಿ ಅವರು ಬಚ್ಚಲ ಮನೆಯಲ್ಲಿ ಕಾಲು ಜಾರಿಬಿದ್ದು ಕಾಲು ಮತ್ತು ಸೊಂಟಕ್ಕೆ ಪೆಟ್ಟುಬಿದ್ದಿದೆ. ಬೆಂಗಳೂರು ಹೊರವಲಯದ ಸೋಲದೇವನಹಳ್ಳಿಯ ತೋಟದ ಮನೆಯಲ್ಲಿ ಇಂದು ಬೆಳಿಗ್ಗೆ ಈ ಘಟನೆ ನಡದಿದ್ದು ತಕ್ಷಣ ಅವರನ್ನು ಸಮೀಪದ ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಒಂದು ತಿಂಗಳು ವಿಶ್ರಾಂತಿ ತಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ ಎಂದು ಪುತ್ರ ವಿನೋದ್ ರಾಜ್ ತಿಳಿಸಿದ್ದಾರೆ. ಬಚ್ಚಲು ಮನೆಯಲ್ಲಿ ಬಿದ್ದ ತಕ್ಷಣ ಲೀಲಾವತಿ ಅವರಿಗೆ ಬಾಗಿಲು ತೆಗೆಯಲು ಸಾಧ್ಯವಾಗಿಲ್ಲ ಸುಮಾರು ಒಂದು…

1 5 6 7 8 9 10
error: Content is protected !!