ಸಿನೆಮಾ
ಬಚ್ಚಲ ಮನೆಯಲ್ಲಿ ಬಿದ್ದು ನಟಿ ಲೀಲಾವತಿಗೆ ಸೂಂಟ ಮುರಿತ
ಬೆಂಗಳೂರು, ಆ, 07: ಹಿರಿಯ ನಟಿ ಲೀಲಾವತಿ ಅವರು ಬಚ್ಚಲ ಮನೆಯಲ್ಲಿ ಕಾಲು ಜಾರಿಬಿದ್ದು ಕಾಲು ಮತ್ತು ಸೊಂಟಕ್ಕೆ ಪೆಟ್ಟುಬಿದ್ದಿದೆ. ಬೆಂಗಳೂರು ಹೊರವಲಯದ ಸೋಲದೇವನಹಳ್ಳಿಯ ತೋಟದ ಮನೆಯಲ್ಲಿ ಇಂದು ಬೆಳಿಗ್ಗೆ ಈ ಘಟನೆ ನಡದಿದ್ದು ತಕ್ಷಣ ಅವರನ್ನು ಸಮೀಪದ ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಒಂದು ತಿಂಗಳು ವಿಶ್ರಾಂತಿ ತಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ ಎಂದು ಪುತ್ರ ವಿನೋದ್ ರಾಜ್ ತಿಳಿಸಿದ್ದಾರೆ. ಬಚ್ಚಲು ಮನೆಯಲ್ಲಿ ಬಿದ್ದ ತಕ್ಷಣ ಲೀಲಾವತಿ ಅವರಿಗೆ ಬಾಗಿಲು ತೆಗೆಯಲು ಸಾಧ್ಯವಾಗಿಲ್ಲ ಸುಮಾರು ಒಂದು…



















