Browsing: ಜಿಲ್ಲೆ

ಜಿಲ್ಲೆ

ಪುನೀತ್ ಸತ್ಕಾರ್ಯಗಳು ಎಲ್ಲರಿಗೂ ಆದರ್ಶವಾಗಲಿ; ರಘುಮೂರ್ತಿ

ಚಳ್ಳಕೆರೆ, ಮಾ,24:ಪರರಿ ಗೋಸ್ಕರ ಬದುಕುವ ವ್ಯಕ್ತಿಗಳು ಅವರು ಸತ್ತಮೇಲೂ ಕೂಡ ಬದುಕಿರುತ್ತಾರೆ ನಮಗೋಸ್ಕರ ಬದುಕುವ ವ್ಯಕ್ತಿಗಳನ್ನು ಸಮಾಜವು ಶಾಶ್ವತವಾಗಿ ಅವರುಗಳ ನೆನಪಿನಿಂದ ದೂರ ಮಾಡುತ್ತದೆ ಎಂದು ತಹಸಿಲ್ದಾರ್ ಎನ್ ರಘುಮೂರ್ತಿಮೂರ್ತಿ ಹೇಳಿದರು ಚಳ್ಳಕೆರೆ ಬೀಡ್ಸ್ ವತಿಯಿಂದ ಹಮ್ಮಿಕೊಂಡಿದ್ದ  ಪುನೀತ್ ರಾಜಕುಮಾರ್ ಅವರ ಗೀತ ಗಾಯನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಜೀವಿತಾವಧಿಯಲ್ಲಿ ಅವರು ಮಾಡಿರುವಂತಹ ಸತ್ಕಾರ್ಯಗಳು ಸಮಾಜಕ್ಕೆ ಏನಾದರೂ ತಿಳಿದಿದ್ದಲ್ಲಿ ಅವರಿಗೆ ಗುಡಿಕಟ್ಟಿಸಿ ಅವರನ್ನು ದೇವರ ರೀತಿಯಲ್ಲಿ ಆರಾಧಿಸುತ್ತಿದ್ದರು ಆದರೆ ದುರಾದೃಷ್ಟವಶಾತ್…

ಅಕ್ರಮ ಪಡಿತರ ಅಕ್ಕಿ ವಶ

ಚಳ್ಳಕೆರೆ ,ಮಾ,23:ತಾಲೂಕಿನ ನೆಹರೂ ರುತ್ತದ ಬಳಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ 12 ಟನ್ ಪಡಿತರ ಅಕ್ಕಿಯನ್ನು ಚಳ್ಳಕೆರೆ ತಾಸಿಲ್ದಾರ್ ಮತ್ತು ಸಿಬ್ಬಂದಿ ವರ್ಗದವರು ವಶಪಡಿಸಿಕೊಂಡಿದ್ದಾರೆ ಬಳ್ಳಾರಿಯಿಂದ ತುಮಕೂರು ಕಡೆಗೆ ಹೋಗುತ್ತಿದ್ದ ಲಾರಿ ಸಂಖ್ಯೆ ಕೆಎ 06 AA5508 ರಲ್ಲಿ 12 ಅಕ್ಕಿಯನ್ನು ಅನಧಿಕೃತವಾಗಿ ಸರಬರಾಜು ಮಾಡುತ್ತಾರೆಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಇಂದು ಮಧ್ಯಾನ ತಶಿಲ್ದಾರ್ ಆಹಾರ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಈ ಲಾರಿಯನ್ನು ತಪಾಸಣೆ ಮಾಡಿ ಡ್ರೈವರ್ ಅಜ್ಮನ್ ಸಮೇತ ದಸ್ತಗಿರ್ ಮಾಡಿ ಇವರುಗಳ ಮೇಲೆ…

ಬೆಳ್ಳಂಬೆಳಗ್ಗೆ ಬಿಡಿಎ ಮಧ್ಯವರ್ತಿಗಳ ಮನೆ ಮೇಲೆ ಎಸಿಬಿ ದಾಳಿ

ಬೆಂಗಳೂರು, ಮಾ,೨೨: ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಭ್ರಷ್ಟ ಅಧಿಕಾರಿಗಳ ಮೇಲೆ ಸಮರ ಸಾರಿರುವ ಎಸಿಬಿ, ಇಂದು ಬೆಳ್ಳಂಬೆಳಗ್ಗೆ ಭ್ರಷ್ಟರ ಬೇಟೆಯಾಡಿದೆ. ನಗರದ ೯ ಭ್ರಷ್ಟ ಬಿಡಿಎ ಮಧ್ಯವರ್ತಿಗಳ ಕಚೇರಿ, ನಿವಾಸಗಳ ಮೇಲೆ ಎಸಿಬಿ ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಇನ್ನೂ ಮಹತ್ವದ ದಾಖಲೆ ಹುಡುಕಾಟದಲ್ಲಿ ತೊಡಗಿದ್ದಾರೆ. ಎಸಿಬಿ ಅಧಿಕಾರಿಗಳು ಬೆಂಗಳೂರು ನಗರದ ವಿವಿಧ ಸ್ಥಳಗಳಲ್ಲಿ ೯ ಮಧ್ಯವರ್ತಿಗಳು,ಏಜೆಂಟರು, ಭ್ರಷ್ಟ,ಅಕ್ರಮ ವಿಧಾನಗಳಿಂದ ಸಾರ್ವಜನಿಕ ಸೇವಕರ ಮೇಲೆ ಪ್ರಭಾವ ಬೀರುವ ತಮ್ಮ ವೈಯಕ್ತಿಕ ಪ್ರಭಾವದ ಮೂಲಕ ಬೆಂಗಳೂರಿನ ಚಟುವಟಿಕೆಗಳಲ್ಲಿ…

ದೇಶದ ಮೊಟ್ಟಮೊದಲ ಡಿಜಿಟಲ್ ವಾಟರ್ ಬ್ಯಾಂಕ್ `ಅಕ್ವೇರಿಯಂ’ ಉದ್ಘಾಟನೆ

ಬೆಂಗಳೂರು,ಮಾ,14: ಜಲ ಸಂರಕ್ಷಣೆ, ನೈರ್ಮಲ್ಯ, ಜಲಭೂಗರ್ಭ ವಿಜ್ಞಾನ ಮತ್ತು ಡೇಟಾ ವಿಜ್ಞಾನಗಳಲ್ಲಿ 10 ಲಕ್ಷ ಯುವಜನರಿಗೆ ತರಬೇತಿ ನೀಡುವ ಗುರಿ ಹೊಂದಿರುವ ದೇಶದ ಮೊಟ್ಟಮೊದಲ ಡಿಜಿಟಲ್ ವಾಟರ್ ಬ್ಯಾಂಕ್ ಆದ `ಅಕ್ವೇರಿಯಂ’ ನವೋದ್ಯಮಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಸೋಮವಾರ ಚಾಲನೆ ನೀಡಿದರು. ಈ ಸಂಬಂಧ ನಗರದ ಖಾಸಗಿ ಹೋಟೆಲೊಂದರಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `5 ಟ್ರಿಲಿಯನ್ ಡಾಲರ್ ಆರ್ಥಿಕಶಕ್ತಿಯ ಆತ್ಮನಿರ್ಭರ ಭಾರತವನ್ನು ಕಟ್ಟುವಲ್ಲಿ ಶುದ್ಧನೀರು ಮತ್ತು ಜಲಭದ್ರತೆ ಎರಡೂ ಪ್ರಮುಖ…

ಮಹಿಳಾ ಶಕ್ತಿಯು ಸಂಘಟನೆಯಾಗಿ ಬೆಳೆಯಬೇಕು : ಬಿ. ವೈ. ರಾಘವೇಂದ್ರ

ಶಿಕಾರಿಪುರ,ಮಾ,12 : ಭಾರತ ದೇಶದಲ್ಲಿ ಭೂಮಿಯನ್ನು, ನದಿಯನ್ನು ಹಾಗೂ ಗೋವನ್ನು ತಾಯಿಯಂತೆ ಗೌರವಿಸುವ ಪರಂಪರೆ ನಮ್ಮದು, ಕರ್ನಾಟಕ ಸರ್ಕಾರವು ಬಾಲ್ಯ ವಿವಾಹವನ್ನು ತಡೆಯುವ ಉದ್ದೇಶದಿಂದ ಮದುವೆಯ ವಯಸ್ಸನ್ನು 18 ರಿಂದ 21 ಕ್ಕೆ ಏರಿಸಿದ್ದಾರೆ, ಕೇಂದ್ರ ಸರ್ಕಾರವು ಬೇಟಿ ಬಚಾವ್, ಬೇಟಿ ಪಡಾವ್ ಯೋಜನೆಯನ್ನು ಜಾರಿಗೆ ತಂದಿದೆ, ಮಹಿಳಾ ಸುರಕ್ಷತೆಗೆ ಆದ್ಯತೆಯನ್ನು ನೀಡಿ ವಿವಿಧ ಯೋಜನೆಯನ್ನು ಚಾಲ್ತಿಗೆ ತಂದಿದೆ, ಸ್ಥಳೀಯ ಮಟ್ಟದಲ್ಲಿ ಇರುವ ಮಹಿಳಾ ಶಕ್ತಿಯು ಸಂಘಟನೆಯಾಗಿ ಬೆಳೆಯಬೇಕು ಎಂದು ಸಂಸದ ಬಿ. ವೈ. ರಾಘವೇಂದ್ರ ಅವರು…

ಮನೆ ಮನೆಗೆ ಕಂದಾಯ ದಾಖಲೆ ಉದ್ಟಾಟನೆ

ಚೆಳ್ಳಕೆರೆ, ಮಾ, 12:ಕಂದಾಯ ದಾಖಲೆಗಳು ರೈತರ ಮನೆ ಬಾಗಿಲಿಗೆ ಎನ್ನುವ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯ ಕಾರ್ಯಕ್ರಮವನ್ನು ಚಳ್ಳಕೆರೆ ತಾಲ್ಲೂಕು ಮರುಕಟ್ಟೆ ಗ್ರಾಮದಲ್ಲಿ ಏರ್ಪಡಿಸಲಾಗಿತ್ತು . ಆರಂಭದಲ್ಲಿ ಶಾಸಕರಾದ ತಾಶೀಲ್ದಾರ್ ಆದ ಎನ್ ರಘುಮೂರ್ತಿ ಇವರನ್ನು ಎತ್ತಿನ ಬಂಡಿ ಗಾಡಿಯಲ್ಲಿ ಸ್ವಾಗತಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜು ಮತ್ತು ಗ್ರಾಮ ಪಂಚಾಯತಿಯ ಎಲ್ಲ ಸದಸ್ಯರುಗಳು ವಿವಿಧ ವಾದ್ಯ ಮೇಳದೊಂದಿಗೆ ಗ್ರಾಮದ ಕೇರಿಗಳಲ್ಲಿ ಸಂಚರಿಸಿ ಜನಪದ ಶೈಲಿಯ ಅರಳಿಕಟ್ಟೆಯಲ್ಲಿ ಸಮಾರಂಭ ಆಯೋಜಿಸಿ ಉದ್ಘಾಟಿಸಲಾಯಿತು. ನಂತರ ಮಾತನಾಡಿದ ಶಾಸಕ ಟಿ ರಘುಮೂರ್ತಿ…

ವಿಜ್ಞಾನಿ ಮತ್ತು ಇಂಜಿನಿಯರ್ ರಾಜ್ಯ ಪ್ರಶಸ್ತಿ ಪ್ರಧಾನ

ಬೆಂಗಳೂರು, ಮಾ,12:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ಇಂದು ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಜ್ಞಾನಿ ಮತ್ತು ಇಂಜಿನಿಯರ್ ರಾಜ್ಯ ಪ್ರಶಸ್ತಿ ಪ್ರಧಾನ ಮಾಡಿದರು ಡಾ. ಬಿ ಎನ್ ಗಂಗಾಧರ, ಪ್ರೊ. ಗೈತಿ ಹಾಸನ್ ಅವರಿಗೆ ಸರ್.ಎಂ.ವಿಶ್ವೇಶ್ವರಯ್ಯ, ಪ್ರೊ. ಲಲಿತ್ ಮೋಹನ್ ಪಟ್ನಾಯಕ್, ಪ್ರೊ. ಶೆಟ್ಟಿ ಹುಂತ್ರಿಕೆ ಶೇಖರ್ ಅವರಿಗೆ ಡಾ.ರಾಜಾರಾಮಣ್ಣ, ಪ್ರೊ. ಎಚ್. ನಾಗಭೂಷಣ, ಡಾ. ಜಿ. ವೆಂಕಟಸುಬ್ರ…

 ಹೆಣ್ಣು ಮಗುವಿನ ಮೇಲಿನ ಅಸಡ್ಡೆಯನ್ನು ಮೊದಲು ಕಡಿಮೆ ಮಾಡಿಕೊಳ್ಳಬೇಕು: ಸಚಿವೆ ಶಶಿಕಲಾ ಜೊಲ್ಲೆ

ಬೆಂಗಳೂರು ಮಾ, 9: ಮೊದಲು ಮಹಿಳೆಯರು ಹೆಣ್ಣು ಮಗುವಿನ ಮೇಲಿನ ಅಸಡ್ಡೆಯನ್ನು ಕಡಿಮೆ ಮಾಡಿಕೊಳ್ಳುವ ಅವಶ್ಯಕತೆ ಹೆಚ್ಚಾಗಿದೆ ಎಂದು ಮಾನ್ಯ ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವೆ ಶಶಿಕಲಾ ಅ ಜೊಲ್ಲೆ ಅಭಿಪ್ರಾಯಪಟ್ಟರು. ಜಯನಗರದ ಯುನೈಟೆಡ್‌ ಆಸ್ಪತ್ರೆಯ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಹೊರತಂದಿರುವ ಕೇವಲ 390 ರೂಪಾಯಿಗಳಲ್ಲಿ ಮಹಿಳಾ ಸಮಗ್ರ ಆರೋಗ್ಯ ಪರೀಕ್ಷೆಯನ್ನು ಮಾಡುವಂತಹ ವಿಶೇಷ ಪ್ಯಾಕೇಜ್‌ಗೆ ಚಾಲನೆ ನೀಡಿ ಮಾತನಾಡಿದರು. ಸೊಸೆ ಅಥವಾ ಮಗಳು ಹೆರಿಗೆ ಆದಾಗ ಮೊದಲು ಕೇಳುವ ಪ್ರಶ್ನೆ ಗಂಡೋ,…

ಕಂದಾಯ ದಾಖಲೆಗಳು ಇನ್ನೂ ಮನೆಬಾಗಿಲಿಗೆ

ಚಳ್ಳಕೆರೆ,ಮಾ,10: ಕ್ಷೇತ್ರ ಹಾಗೂ ಮೊಳಕಾಲ್ಮೂರು ಕ್ಷೇತ್ರದ ಗ್ರಾಮೀಣ ಪ್ರದೇಶದ ಹಳ್ಳಿಯ ಜನ ಕಂದಾಯ ಇಲಾಖೆ ಹಲವು ದಾಖಲೆಗಳಾದ ಪಹಣಿ ,ಅಟ್ಲಾಸ್, ಆದಾಯ ಜಾತಿ ಪ್ರಮಾಣ ಪತ್ರ ಮತ್ತು ಇತರೆ ಕಂದಾಯ ದಾಖಲೆಗಳಿಗೆ ತಾಲೂಕು ಕಚೇರಿಗೆ ಅಲೆದಾಡಿಸುವುದನ್ನು ತಪ್ಪಿಸುವ ಸಲುವಾಗಿ ಸರ್ಕಾರ ನೂತನ ಕಾರ್ಯಕ್ರಮವನ್ನ ಕಂದಾಯ ದಾಖಲೆಗಳು ರೈತರ ಮನೆ ಬಾಗಿಲಿಗೆ ಎಂಬ ವಿನೋತನ ಕಾರ್ಯಕ್ರಮವನ್ನು ರಾಜ್ಯ ವ್ಯಾಪ್ತಿ ಜಾರಿಗೆ ತಂದಿದೆ .ಚಳ್ಳಕೆರೆ ಹಾಗೂ ಮೊಳಕಾಲ್ಮೂರು ಕ್ಷೇತ್ರದ ಸಚಿವರು ಹಾಗೂ ಶಾಸಕರು ಹಾಗೂ ಚಿತ್ರದುರ್ಗ ಜಿಲ್ಲಾಧಿಕಾರಿಗಳ ಆದೇಶದಂತೆ ಅಧಿಕಾರಿಗಳೇ…

ಚಿತ್ರ ಡಾನ್ ಬೋಸ್ಕೋದಲ್ಲಿ ಮಹಿಳಾ ದಿನಾಚರಣೆ

ಚಿತ್ರದುರ್ಗ,ಮಾ,10:ಇಲ್ಲಿನ  ಚಿತ್ರ ಡಾನ್ ಬೋಸ್ಕೋ ಸಂಸ್ಥೆಯ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಶ್ರೀಮತಿ ಸುಧಾ ಅವರು ಮಹಿಳೆಯರು ಸ್ವಾವಲಂಬನೆ ಮತ್ತು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು ಆಗ ಮಾತ್ರ ಸುಸ್ಥಿರ ಸಮಾಜ ಕಟ್ಟಬಹುದೆಂದು ಹೇಳಿದರು. ಅಭಿವೃದ್ಧಿಯ ಕಾಲಘಟ್ಟದಲ್ಲಿ ಮಹಿಳೆಯರು ಶಿಕ್ಷಣ ಮತ್ತು ಸಾಮಾಜಿಕವಾಗಿ ಚಲನಶೀಲರಾಗಬೇಕು ಆಗ ಮಾತ್ರ ಅತ್ಯುತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯ ಪಟ್ಟರು. ಡಾನ್ ಬೋಸ್ಕೋ ಸಂಸ್ಥೆಯ ನಿರ್ದೇಶಕರಾದ ಫಾದರ್…

ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿದ ಫೊರ್ಟಿಸ್ ಆಸ್ಪತ್ರೆ

ಬೆಂಗಳೂರು,ಮಾ,09: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಫೋರ್ಟಿಸ್ ಆಸ್ಪತ್ರೆ ಹಾಗೂ ವಿದ್ಯಾ ಫೌಂಡೇಷನ್ ಸಹಭಾಗಿತ್ವದಲ್ಲಿ 200ಕ್ಕೂ ಹೆಚ್ಚು ಬಡ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಫೊರ್ಟಿಸ್ ಆಸ್ಪತ್ರೆ ಸ್ತೀರೋಗ ತಜ್ಞೆ ಡಾ. ಗಾಯತ್ರಿ ಕಾಮತ್, ಬಡ ಕುಟುಂಬದ ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ. ಯಾವುದೇ ಆರೋಗ್ಯ ಸಮಸ್ಯೆ ಇದ್ದರೂ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳುವುದು ಅಪರೂಪ. ಆರ್ಥಿಕ ಪರಿಸ್ಥಿತಿಯ ಕಾರಣ ಅವರು…

ಮಾರ್ಚ್ 7ರಿಂದ ಮೂರು ದಿನ `ಬೆಂಗಳೂರು- ಇಂಡಿಯಾ ನ್ಯಾನೋ ಸಮಾವೇಶ

ಬೆಂಗಳೂರು,ಮಾ,02: `ಸುಸ್ಥಿರ ಅಭಿವೃದ್ಧಿಗಾಗಿ ನ್ಯಾನೋ ತಂತ್ರಜ್ಞಾನ’ ಎನ್ನುವ ಧ್ಯೇಯದೊಂದಿಗೆ 12ನೇ ವರ್ಷದ `ಬೆಂಗಳೂರು-ಇಂಡಿಯಾ ನ್ಯಾನೋ’ ಸಮಾವೇಶವು ಪ್ರಥಮ ಬಾರಿಗೆ ವರ್ಚುಯಲ್ ಮಾದರಿಯಲ್ಲಿ ಮಾರ್ಚ್ 7ರಿಂದ 9ರವರೆಗೆ ನಡೆಯಲಿದೆ ಎಂದು ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ಬುಧವಾರ ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದು, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದರು. 12ನೇ ವರ್ಷದ `ಬೆಂಗಳೂರು-ಇಂಡಿಯಾ ನ್ಯಾನೋ ಸಮಾವೇಶ’ಕ್ಕೆ…

ಕೋವಿಡ್ ಸಂದರ್ಭದಲ್ಲಿ ಆನ್‌ಲೈನ್ ತರಗತಿಯಿಂದ ಶೇ.67ರಷ್ಟು ಬಾಲಕಿಯರು ವಂಚಿತರಾಗಿದ್ದಾರೆ: ಸೇವ್ ದಿ ಚಿಲ್ಡ್ರನ್ ಸಂಸ್ಥೆ ವರದಿ

ಬೆಂಗಳೂರು,ಮಾ,02: ಕೋವಿಡ್ ಸಂದರ್ಭದಲ್ಲಿ ಕೊಳಗೇರಿ ಪ್ರದೇಶದ ಹೆಣ್ಣು ಮಕ್ಕಳ ಕುರಿತು ಸೇವ್ ದಿ ಚಿಲ್ಡ್ರನ್ ಅಧ್ಯಯನ ನಡೆಸಿದ್ದು, ಆತಂಕಕಾರಿ ವಿಷಯಗಳನ್ನು ವರದಿಯಲ್ಲಿ ಬಹಿರಂಗ ಪಡಿಸಿದೆ. ಹೌದು, ಬುಧವಾರ ವರ್ಚುವಲ್ ಮೂಲಕ “ ದಿ ವರ್ಲ್ಡ್ ಆಫ್ ಇಂಡಿಯನ್ ಗರ್ಲ್ಸ್-ವಿಂಗ್ಸ್ 2022” ಶೀರ್ಷಿಕೆಯಲ್ಲಿ ಸೇವ್ ದಿ ಚಿಲ್ಡ್ರನ್ ಸಂಸ್ಥೆಯು ವರದಿ ಬಿಡುಗಡೆ ಮಾಡಿದೆ. ಕೋವಿಡ್ ಸಾಂಕ್ರಮಿಕದ ಕಾರಣ ಬಾಲಕರಿಗಿಂತ ಬಾಲಕರಿಯರೇ ಹೆಚ್ಚಾಗಿ ಶಾಲೆ ತೊರೆದಿದ್ದಾರೆ. ಕೊಳಚೆ ಪ್ರದೇಶ ಹಾಗೂ ಗ್ರಾಮೀಣ ಭಾಗದಲ್ಲಿ ಶೇ.67ರಷ್ಟು ಬಾಲಕಿಯರು ಆನ್‌ಲೈನ್ ತರಗತಿಯನ್ನು…

ಮಹಿಳಾ ದಿನಾಚರಣೆ ಪ್ರಯುಕ್ತ ಮಾ.8ರಂದು ವಂಡರ್‌ಲಾದಲ್ಲಿ ಮಹಿಳೆಯರಿಗೆ ಮಾತ್ರ ಪ್ರವೇಶ

ಬೆಂಗಳೂರು, ಮಾ,02:ಅಂತರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ವಂಡರ್‌ಲಾದಲ್ಲಿ ಮಾರ್ಚ್‌ 8 ರಂದು ಕೇವಲ ಮಹಿಳೆಯರಿಗೆ ಮಾತ್ರ ಪ್ರವೇಶವಿದ್ದು, ಒಂದು ಟಿಕೆಟ್ ಖರೀದಿಸಿದರೆ ಮತ್ತೊಬ್ಬರಿಗೆ ಉಚಿತ ಪ್ರವೇಶ ಘೋಷಿಸಿದೆ. ಅಂತರಾಷ್ಟ್ರೀಯ ಮಹಿಳಾ ದಿನವನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ವಂಡರ್‌ಲಾ ಆ ದಿನದಂದು ಕೇವಲ ಮಹಿಳೆಯರು ಹಾಗೂ ಯುವತಿಯರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. 10 ವರ್ಷ ಒಳಗಿನ ಗಂಡು ಮಕ್ಕಳಿಗೆ ಪ್ರವೇಶವಿದ್ದು, ಉಳಿದಂತೆ ಯಾವ ಪುರುಷರಿಗೂ ಆ ದಿನ ಪ್ರವೇಶವಿರುವುದಿಲ್ಲ. ಇದಷ್ಟೆ ಅಲ್ಲದೆ, ವಂಡರ್‌ಲಾ ರೆಸಾರ್ಟ್‌HBನಲ್ಲಿಯೂ ಸಹ ಮಹಿಳೆಯರಿಗೆ…

ದೇಶದಲ್ಲೇ ವಿನೂತನ ಪು ನೀತ್ಉಪಗ್ರಹ ಅಭಿವೃದ್ಧಿ ಯೋಜನೆಗೆ ಚಾಲನೆ

ಬೆಂಗಳೂರು,ಫೆ,28: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸರಕಾರಿ ಶಾಲೆಗಳ ಮಕ್ಕಳೇ ಉಪಗ್ರಹ ಅಭಿವೃದ್ಧಿ ಮಾಡಲಿದ್ದು, ಇದಕ್ಕೆ ದಿವಂಗತ ನಟ ಪುನೀತ್ ರಾಜಕುಮಾರ್ ಗೌರವಾರ್ಥವಾಗಿ ಅವರ ಹೆಸರನ್ನೇ ಇಡಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. `ರಾಷ್ಟ್ರೀಯ ವಿಜ್ಞಾನ ದಿನ’ದ ಅಂಗವಾಗಿ ಮಲ್ಲೇಶ್ವರಂನ 18ನೇ ಅಡ್ಡರಸ್ತೆಯಲ್ಲಿರುವ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಈ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (ಕೆಸ್ಟೆಪ್ಸ್) ಮತ್ತು ಭಾರತೀಯ ತಂತ್ರಜ್ಞಾನ…

ಸಾಮಾಜಿಕ ನ್ಯಾಯ ಪರಿಕಲ್ಪನೆ ಆರಂಭವಾಗಿದ್ದು ಬಸವಣ್ಣನ ಕಾಲದಿಂದ; ರಘುಮೂರ್ತಿ

ಚಳ್ಳಕೆರೆ, ಫೆ,24:ಸಾಮಾಜಿಕ ನ್ಯಾಯದ ಪರಿಕಲ್ಪನೆ 12ನೇ ಶತಮಾನದ ಬಸವಣ್ಣನವರಿಂದ ಲು ಪ್ರಾರಂಭವಾಗಿದೆ ಎಂದು ತಹಶಿಲ್ದಾರ ರಘುಮೂರ್ತಿ ಹೇಳಿದರು. ಚಳ್ಳಕೆರೆ ತಾಲೂಕಿನ ಹಳ್ಳಿ ಗ್ರಾಮದಲ್ಲಿ ಸಾಮಾಜಿಕ ಪರಿಕಲ್ಪನೆಯ ದಿನಾಚರಣೆಯ ಪ್ರಾಸ್ತಾವಿಕವಾಗಿ ಮಾತನಾಡಿ ಬಸವಣ್ಣನವರಿಂದ ಡಾಕ್ಟರ್ ಬಿಆರ್ ಅಂಬೇಡ್ಕರ್ ರವರ ವರೆಗೂ ಸಮಾಜದಲ್ಲಿ ಇವತ್ತು ಸಮಾನತೆಯ ಬಗ್ಗೆ ಜಾಗೃತಿ ಉಂಟು ಮಾಡಿದರು ಸಮಾಜದಲ್ಲಿ ಶೇಕಡ ನೂರರಷ್ಟು ಪರಿವರ್ತನೆ ಕಾಣದಿರುವುದು ತುಂಬಾ ವಿಷಾದದ ಸಂಗತಿ ಎಂದರು. ಕಾರ್ಲ್ ಮಾರ್ಕ್ಸ್ ಮಾರ್ಟಿನ್ ಲೂಥರ್ ಕಿಂಗ್ ದಯಾನಂದ ಸರಸ್ವತಿ ಸ್ವಾಮಿ ವಿವೇಕಾನಂದ ಜ್ಯೋತಿ…

ಆನ್ ಲೈನ್ ಶಿಕ್ಷಣಕ್ಕೆ ಅನುಮತಿ; ನಿಯಮಾವಳಿ ಸುಧಾರಣೆಗೆ ಸಲಹೆ

ಬೆಂಗಳೂರು,ಫೆ,21: ಮುಕ್ತ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಿದವರಿಗೆ ಉದ್ಯೋಗ ನೇಮಕಾತಿಯಲ್ಲಿ ಯಾವುದೇ ತಾರತಮ್ಯಕ್ಕೆ ಅವಕಾಶ ನೀಡದಂತೆ ನಿಗಾ ವಹಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರತಿಪಾದಿಸಿದರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಸೋಮವಾರ ಇಲ್ಲಿ ಏರ್ಪಡಿಸಿದ್ದ ಅಖಿಲ ಭಾರತ ಮುಕ್ತ ವಿಶ್ವವಿದ್ಯಾಲಯಗಳ ಕುಲಪತಿಗಳ ಸಮಾವೇಶದಲ್ಲಿ ‘ಕೋವಿಡ್ ಹಾಗೂ ಎನ್.ಇ.ಪಿ-2020 ಹಿನ್ನೆಲೆಯಲ್ಲಿ ಆನ್ ಲೈನ್ ಡಿಜಿಟಲ್ ಕಲಿಕೆ (ಒ.ಡಿ.ಎಲ್.) ಮತ್ತು ಆನ್ ಲೈನ್ ಕಲಿಕೆ (ಆನ್ ಲೈನ್ ಲರ್ನಿಂಗ್) ಉತ್ತೇಜಿಸಲು ನಿಯಮಾವಳಿಗಳಲ್ಲಿ ಗುಣಾತ್ಮಕ ಸುಧಾರಣೆ’ ಕುರಿತ ವಿಚಾರ ಸಂಕಿರಣವನ್ನು…

ತ್ರಿಪದಿಗಳ ಮೂಲಕ ಜನಸಮೂಹಕ್ಕೆ ಅರಿವು ಮೂಡಿಸಿದ ಸರ್ಜಜ್ಞ: ರಘುಮೂರ್ತಿ

ಚಳ್ಳಕೆರೆ, ಫೆ,20:ಸರ್ವಜ್ಞ ತನ್ನ ತ್ರಿಪದಿ ಎಂಬ ಮೂರು ಸಾಲುಗಳ ಮೂಲಕ ಬದುಕಿನ ಒಳಿತ ಕೆಡುಕುಗಳ ಬಗ್ಗೆ ಮನಮುಟ್ಟುವಂತೆ ಹೇಳಿರುವುದನ್ನು ಮುನ್ನೂರು ಸಾಲುಗಳಲ್ಲಿ ಹೇಳಬಹುದಾದ–ಬರೆಯಬಹುದಾದ ಅರ್ಥವನ್ನು ತುಂಬಿದ್ದಾರೆ ಎಂದು ತಹಶೀಲ್ದರ್ ಎನ್. ರಘುಮೂರ್ತಿ ಹೇಳಿದರು . ನಗರದ ತಾಲ್ಲೂಕು ಕಚೇರಿಯ ಸಭಾಗಂಣದಲ್ಲಿ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಆಡಳಿತ ಮತ್ತು ಕುಂಬಾರ ಸಮುದಾಯದ ವತಿಯಿಂದ ಹಮ್ಮಿಕೊಂಡಿದ್ದ ತ್ರಿಪದಿ ಕವಿ ಸರ್ವಜ್ಞ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಸರ್ವಜ್ಞ ರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲುಸುವುದರ ಮೂಲಕ ಕಾರ್ಯಕ್ರಮ ಚಾಲನೆ…

ಶಿವಾಜಿ ಆದರ್ಶಗಳನ್ನು ಮೂಗೂಡಿಸಿಕೊಳ್ಳಲು ಯುವಕರಿಗೆ ಕರೆ

ಚೆಳ್ಳಕೆರೆ,ಫೆ,19:ಶಿವಾಜಿ ಮಹಾರಾಜರು ಹಿಂದೂ ರಾಷ್ಟ್ರದ ಅಸ್ಮಿತೆಯನ್ನು ಕಾಪಾಡಿ ದಂತ ದಿಟ್ಟ ಹಾಗೂ ದೇಶಪ್ರೇಮಿ ರಾಜ ಇವರಿಗೆ ಹಿಂದೂ ರಾಷ್ಟ್ರದ ಕನಸು ಸ್ವರಾಜ್ಯ ಮತ್ತು ಸ್ವಧರ್ಮದ ಭಾವನೆಯನ್ನು ಮೈಗೂಡಿಸಿಕೊಂಡಿದ್ದ ಧೀಮಂತ ನಾಯಕ ಎಂದು ತಹಸೀಲ್ದಾರ್ ರಘು ಮೂರ್ತಿ ಹೇಳಿದರು . ತಾಲೂಕು ಕಚೇರಿಯಲ್ಲಿ ಛತ್ರಪತಿ ಶಿವಾಜಿಯವರ ಜಯಂತೋತ್ಸವ ವನ್ನು ಉದ್ಘಾಟಿಸಿ ಮಾತನಾಡಿ ಇವರು ಪರಕೀಯರ ವಿರುದ್ಧ ಹೋರಾಡುವ ಛ ಲವನ್ನು ಹೊಂದಿದ್ದರು ದೇಶದಲ್ಲಿನ ಭದ್ರತೆಗೆ ಕಂಟಕಪ್ರಾಯರಾಗಿ ದ್ದ ಔರಂಗಜೇಬ್ ಅಲ್ಲಾವುದ್ದೀನ್ ಖಿಲ್ಜಿ ಮಲ್ಲಿಕಾ ಕಾಫ್ ಮುಂತಾದವರನ್ನು ಹುಟ್ಟಡಗಿಸಿದ…

ಬಂಜಾರ ಸಮುದಾಯದವಾಸ್ಮಿತೆ ಉಳಿಸಿದ ಸೇವಾಲಾಲ್; ರಘುಮೂರ್ತು

ಚೆಳ್ಳಕೆರೆ,ಫೆ,16: ಸೇವಾಲಾಲ್ ಮಹಾರಾಜ ರವರು ಬಂಜಾರ ಸಮುದಾಯದ ಅಸ್ಮಿತೆಯನ್ನು ಉಳಿಸಿದಂತ ಆದರ್ಶ ಪುರುಷರಿಂದ ತಶಿಲ್ದಾರ್ ಎಂ ರಘುಮೂರ್ತಿ ಹೇಳಿದರು . ಅವರು  ಮಂಗಳವಾರತಾಲೂಕು ಕಚೇರಿಯಲ್ಲಿ 283 ನೇ ಸೇವಾಲಾಲ್ ಜಯಂತಿಯ ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಾರಾಜ್ ಸೇವಾಲಾಲ್ ಅವರು ತಪಸ್ಸು ಧ್ಯಾನ ಭಕ್ತಿ ಮತ್ತು ಆಧ್ಯಾತ್ಮದಿಂದ ಈ ಸಮಾಜವನ್ನು ಸದೃಡ ಗೊಳಿಸಿದವರು ಬಾಲ ಬ್ರಹ್ಮಚಾರಿಯಾಗಿ ಸಾಧು ಪುರುಷರಾಗಿ ಸಮಾಜಕ್ಕೆ ಧೈರ್ಯ ಸಾಹಸ ಮತ್ತು ಆತ್ಮಸ್ಥೈರ್ಯವನ್ನು ತುಂಬಿದಂತ ಯುಗಪುರುಷ ರೆಂದು ಹೇಳಿ ಪ್ರಸ್ತುತ ಈ ಸಮಾಜದ ಎಲ್ಲ ವ್ಯಕ್ತಿಗಳು…

1 3 4 5 6 7 15
error: Content is protected !!