Browsing: ಅಂಕಣ

ಅಂಕಣ

ಪ್ರಾಚೀನ ಶಿಲ್ಪಾವಶೇಷಗಳೂ, ನಂಬಿಕೆ-ಆಚರಣೆಗಳೂ. . .     

ಪ್ರಾಚೀನ ಶಿಲ್ಪಾವಶೇಷಗಳೂ, ನಂಬಿಕೆ-ಆಚರಣೆಗಳೂ. . .      ಪ್ರಾಚೀನ ಮಾನವನ ಜೀವನ ವಿಧಾನಗಳನ್ನು ತಿಳಿಸುವ ಮಹತ್ವದ ಕುರುಹುಗಳೆಂದರೆ ಅವಶೇಷಗಳು. ಅವುಗಳಲ್ಲಿ ಶಿಲಾಯುಧ, ಮಡಕೆ-ಕುಡಿಕೆ, ಶಿಲಾ ಸಮಾಧಿಗಳು; ಇತಿಹಾಸ ಕಾಲದ ಶಿಲಾಶಾಸನ, ಮೂರ್ತಿಶಿಲ್ಪ, ಉಬ್ಬುಶಿಲ್ಪ, ವೀರಗಲ್ಲು, ಮಾಸ್ತಿಗಲ್ಲು, ದೇವಾಲಯ, ಕೋಟೆ-ಕೊತ್ತಲ ಇತ್ಯಾದಿ ಸೇರಿವೆ. ಇವೆಲ್ಲವೂ ಪ್ರಾಚೀನರ ಚರಿತ್ರೆಯನ್ನು ಅರಿಯುವ ಮಹತ್ವದ ದಾಖಲೆಗಳೇ ಆಗಿವೆ. ಈ ಬಗೆಯ ಪ್ರಾಚೀನ ಅವಶೇಷಗಳ ಮೇಲೆ ಜನರು ಇಂದಿಗೂ ಇಟ್ಟುಕೊಂಡು ಆಚರಿಸುತ್ತಿರುವ ನಂಬಿಕೆ-ಆಚರಣೆಗಳು ವಿಶಿಷ್ಟವಾಗಿವೆ. ಈ ಬಗೆಯ ನಂಬಿಕೆಗಳಲ್ಲಿ ಅವಶೇಷಗಳ ರಕ್ಷಣೆಯ…

ನಶ್ವರ ಬದುಕಿಗೆ ಅತಿ ಚಿಂತೆ ಬೇಡ

ನಶ್ವರ ಬದುಕಿಗೆ ಅತಿ ಚಿಂತೆ ಬೇಡ. ಗುರುವಿಗೆ ಶರಣಾಗಿ ಆತ್ಮತತ್ತ್ವವನ್ನು ತಿಳಿಯುವುದು ಬಾಲ್ಯದಲ್ಲಿಯೇ ಸೂಕ್ತ ಎಂಬ ಸಿದ್ಧನ ಮಾತನ್ನು ಮಿತ್ರರಾದ ಸೋಮ ಭೀಮರು ಒಪ್ಪಿದರು.ಸಿದ್ಧನೊಂದಿಗೆ ಅವರೂ ಗುರು ಶೋಧನೆಗೆ ಹೆಜ್ಜೆ ಹಾಕಿದರು. ಮೂವರೂ ಚಳಕಾಪುರದಿಂದ ನಡೆಯುತ್ತಾ ಅಂದಾಜು ಒಂದು ಹರದಾರಿ (೫ ಕಿ. ಮೀ) ದೂರದ ಗ್ರಾಮ(ಸದಾಶಿವ ಪೇಟೆ) ವನ್ನು ತಲುಪಿದರು.ಸೋಮ ಭೀವರು ಹಸಿದು ಬಳಲಿದ್ದರು.ಊಟಕ್ಕಾಗಿ ಅಂಗಲಾಚಿದರು.ಆಗ ಸಿದ್ಧನು ಅವರಿಗೆ ಹೀಗೆ ಹೇಳಿದನು: ದೇಹದ ಚಿಂತೆಯನ್ನು ಮಾಡಬೇಡಿರಿ. ಹೃದಯದಲ್ಲಿ ಅಖಂಡವಾಗಿ ಪರಮಾತ್ಮನ ಧ್ಯಾನವನ್ನು ಮಾಡಿರಿ. ಆ ಸುಖಾಮೃತದ…

ಸ್ವಾತಂತ್ರ್ಯ ಚಳವಳಿ ಮತ್ತು ಹನುಮಕ್ಕಜ್ಜಿಯ ದಿಟ್ಟ ಹೋರಾಟದ ನೆನಪು!

ಸ್ವಾತಂತ್ರ್ಯ ಚಳವಳಿ ಮತ್ತು ಹನುಮಕ್ಕಜ್ಜಿ ಯ ದಿಟ್ಟ ಹೋರಾಟದ ನೆನಪು! “ತಮ್ಮಾ, ನಿನ್ನ ಎಮ್ಮೆ ಹೊಲಕ್ಕೆ ನುಗ್ಗಿದೆ, ಜಲ್ದಿ ಹೋಗಿ ಹೊರಕ್ಕೆ ಓಡಿಸು, ಮಲ್ಲಣ್ಣ ನೋಡಿದರೆ ಅವಾಂತರವಾದೀತು” ಎನ್ನುವ ಹನುಮಕ್ಕಜ್ಜಿಯ ಕೂಗು ಆಕೆಯೇ ಮಾತುಗಳಲ್ಲಿ ಸೃಷ್ಟಿಸಿದ್ದ ಮೈಸೂರು ದಸರಾದ ಮಾಯದ ಮತ್ತು ಮಾದಕಲೋಕದ ಗುಂಗಿನಿಂದ ನನ್ನನ್ನು ಹೊರತಂದಿತ್ತು. ನೆಲದ ಮೇಲಿದ್ದ ಬಾರುಕೋಲನ್ನು ಎತ್ತಿಕೊಂಡವನು ಓಡಿ ಹೋಗಿ ಬಳ್ಳಾರಿ ರುದ್ರಣ್ಣನವರ ಹೊಲ ಹೊಕ್ಕು ಬೆಳೆದು ನಿಂತಿದ್ದ ಎಳೆಯ ಜೋಳದ ಪೈರುಗಳಿಗೆ ಬಾಯಿ ಹಾಕಿದ್ದ ನನ್ನ ಎಮ್ಮೆಯ ಮೈಮೇಲೆ ಜೋರಾಗಿ…

ಜೋಡೆತ್ತು ಮಾಡೀತೆ ಕಸರತ್ತು?

ಸ್ವಂತ ಬಲದ ಮೇಲೆ ಸರ್ಕಾರ ರಚಿಸುವ ಕಸರತ್ತನ್ನು ಜಾತ್ಯತೀತ ಜನತಾ ದಳ ಈಗಾಗಲೇ ಆರಂಭಿಸಿದೆ. ಚುನಾವಣೆಗೆ ಎರಡು ವರ್ಷ ಇರುವಾಗಲೇ ತಾನು ಸಾಗಲಿರುವ ದಾರಿಯ ಸೂಚನೆಯನ್ನು ಅದು ಹಾನಗಲ್ ಮತ್ತು ಸಿಂಧಗಿ ಉಪಚುನಾವಣೆ ನೆಪದಲ್ಲಿ ಕೊಟ್ಟಿದೆ. ಈ ಎರಡೂ ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಅದರ ತೀರ್ಮಾನ ದೂರಗಾಮಿ ಪರಿಣಾಮ ಬೀರುವ ಸಾಧ್ಯತೆ ಇದೆ. ಮುಸ್ಲಿಂ ಮತಗಳನ್ನು ತನ್ನತ್ತ ಸೆಳೆಯುವ ತಂತ್ರವಾಗಿ ಜೆಡಿಎಸ್ ನಾಯಕತ್ವ ಈ ಹೆಜ್ಜೆ ಇಟ್ಟಿದೆ. ಜೋಡೆತ್ತು ಮಾಡೀತೆ ಕಸರತ್ತು? ಕರ್ನಾಟಕ ವಿಧಾನ ಸಭೆಗೆ…

ಕಡು ರಾತ್ರಿಗಳೆಂಬ ನಾಲಿಗೆಯ ಮೇಲೆ…

ಕಡು ರಾತ್ರಿಗಳೆಂಬ ನಾಲಿಗೆಯ ಮೇಲೆ… ಬಾಲ್ಯಕ್ಕೆ ಸಂಭ್ರಮದ ನೂರು ನೆನಪುಗಳಿರುವಂತೆಯೇ ಭಯದ ಹಲವು ಕರಿನೆರಳುಗಳೂ ಇರುತ್ತವೆ.ಮನೆ ಸುತ್ತಲ ದೆವ್ವದ ಮರ.ಓಣಿ ಆಚೆಗಿನ ಹಾಳು ಮನೆ,ಊರ ತುದಿಯ ಸ್ಮಶಾನದ ಗೋರಿಗಳು ಮಕ್ಕಳಿಗೆ ಭಯದ ತಾಣಗಳೂ ಹೌದು.ಇದಕ್ಕೆ ಕಾರಣ ಅಜ್ಜನೋ ಅಜ್ಜಿಯೋ ರಾತ್ರಿಗಳಲ್ಲಿ ಹೇಳುತಿದ್ದ ದೆವ್ವ ಬ್ರಹ್ಮ ರಾಕ್ಷಸರ ಹಲವು ಕಥೆಗಳೇ! ಕಟ್ಟೆಮೇಲೆ ಕುಳಿತ ರಾಟಿ ಮಾವ ಹೇಳುತಿದ್ದ ” ಅಮವಾಸೆ ದಿನ ಚಳ್ಳಿ ಮರದ ದುರ್ಗಮ್ಮನ ಬೇವಿನ ಮರದ ದೆವ್ವ ಜೋಕಾಲಿ ಆಡೋದನ್ನ ನೋಡಿ ಓಡುತ್ತಲೇ ಕಲ್ಲೆಸೆದಾಗ ಅದು…

ಜೈನ ಜಿನಾಲಯಗಳು ದೇವಾಲಯಗಳಾದದ್ದು. . .

ಜೈನ ಜಿನಾಲಯಗಳು ದೇವಾಲಯಗಳಾದದ್ದು. . . ಹಿಂದಿನ ಸಂಚಿಕೆಯಿಂದ ಕೊಪ್ಪಳ ಜಿಲ್ಲೆಯಲ್ಲಿ ದೇವಾಲಯಗಳಾಗಿ ಪರಿವರ್ತನೆ ಹೊಂದಿದ ಜಿನಾಲಯಗಳು ಕೊಪ್ಪಳವು ಪ್ರಾಚೀನ ಕಾಲದಲ್ಲಿ ಮಹಾಕೊಪಣಾಚಲವಾಗಿದ್ದು, ಇದು ಜೈನರ ದಕ್ಷಿಣ ಕಾಶಿಯೆಂದೇ ಪ್ರಸಿದ್ಧಿ ಪಡೆದಿದ್ದಿತು. ಇಲ್ಲಿ ಅನೇಕ ಬಸದಿಗಳು ನೂರಾರು ಶಾಸನಗಳು ಕಂಡುಬಂದಿವೆ. ಇದಕ್ಕೆ ಪೂರಕವಾಗಿ ಸ್ಥಳೀಯರು ಕೊಪ್ಪಳದಲ್ಲಿ ೭೭೨ ಜೈನ ಬಸದಿಗಳಿದ್ದವೆಂಬುದನ್ನು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಹಾಗೆಯೇ ಶಾಸನಗಳಲ್ಲಿ ಜಿನಬಸದಿಗಳ ಉಲ್ಲೇಖವಿದ್ದು ಅವುಗಳಲ್ಲಿ ಜಯಧೀರ ಜಿನಾಲಯ, ಪುಷ್ಪದಂತ ತೀರ್ಥಂಕರ ಸೌಧ, ಕುಶ ಜಿನಾಲಯ, ಸಾಂತಲದೇವಿ, ಚಂದ್ರನಾಥ, ನೇಮಿನಾಥ, ಶಾಂತಿನಾಥ, ಕಲ್ಯಾಣಕೀರ್ತಿ,…

ಕಂಪನಿಯೊಳಗಿನ ಮನಸುಗಳ ಒಳತುಡಿತಗಳು

ಕಂನಿಯೊಳಗಿನ ಮನಸುಗಳ ಒಳತುಡಿತಗಳು ಬೆಳಿಗ್ಗೆ ಒಂಬತ್ತರ ಸುಮಾರಿಗೆ ಮುಂಬೈನಿಂದ ಬಂದ ನನ್ನ ಬಾಸ್ ಅಮರನಾಥ್ ಅವರ ಫೋನ್ , ಲೈನ್ ನ ಸಮಸ್ಯೆಯಿಂದಾಗಿ ಅಷ್ಟು ಸ್ಪುಟವಾಗಿ ಕೇಳುತ್ತಿರಲಿಲ್ಲ. ಸಂಭಾಷಣೆಯಿಂದ ನನಗೆ ಅರ್ಥವಾಗಿದ್ದು ಎಂದರೆ ಆ ದಿನ ರಾತ್ರಿ ಬಾಂಬೆ-ಜೋಧಪುರ ಎಕ್ಸ್ಪ್ರೆಸ್ ರೈಲಿನಲ್ಲಿ ಅಹಮದಾಬಾದ್ ಗೆ ಡಿ. ಒ. ಟಿ. ((DOT) ಭದ್ರಾ ಎಕ್ಸ್ಚೇಂಜ್ ರಿಪೇರಿ ಕಾರ್ಯಕ್ಕಾಗಿ ಒಬ್ಬ ಸೀನಿಯರ್ ಎಂಜಿನಿಯರ್ ಬರಲಿದ್ದಾರೆ ಮತ್ತು ನಾನು ರೈಲ್ವೆ ಸ್ಟೇಷನ್ ಗೆ ಹೋಗಿ ಅವರನ್ನು ಭೇಟಿಯಾಗಿ ನಾಳಿನ ಅವರ ರಿಪೇರಿಗೆ…

ಜಾತಿ ಸಮೀಕ್ಷಾ ವರದಿ: ರಾಜಕೀಯ ಜಟಾಪಟಿ

ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ನಡೆಸಿರುವ ಡಾ.ಕಾಂತರಾಜ್ ಆಯೋಗದ ವರದಿ ಸದ್ಯಕ್ಕೆ ನೆನೆಗುದಿಗೆ ಬಿದ್ದಿದೆ. ಅದನ್ನು ಸರ್ಕಾರಕ್ಕೆ ಅಧಿಕೃತವಾಗಿ ಸಲ್ಲಿಸುವ ಕೆಲಸವನ್ನು ಆಯೋಗದ ಅಧ್ಯಕ್ಷರು ಆಗ ಮಾಡಲಿಲ್ಲ. ವರದಿಯಲ್ಲಿರುವ ಶಿಫಾರಸುಗಳ ವಿರುದ್ಧ ಹೈಕೋರ್ಟ್‌ನಲ್ಲಿ ಖಟ್ಲೆ ದಾಖಲಾಗಿರುವುದರಿಂದ ಅದು ಇತ್ಯರ್ಥವಾಗುವರೆಗೆ ಕಾಯಬೇಕಿದೆ. ಈ ಮಧ್ಯೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಜಾತಿ ಸಮೀಕ್ಷಾ ವರದಿ: ರಾಜಕೀಯ ಜಟಾಪಟಿ ಜಾತಿ ಸಮೀಕ್ಷೆ ಆಗಬೇಕೆಂಬ ಆಗ್ರಹಕ್ಕೆ ಬಹುದೊಡ್ಡ ಬೆಂಬಲ ದೇಶವ್ಯಾಪಿ ವ್ಯಕ್ತವಾಗುತ್ತಿದೆ. ಕರ್ನಾಟಕ…

ಜೈನ ಜಿನಾಲಯಗಳು ದೇವಾಲಯಗಳಾದದ್ದು. . .

ಜೈನ ಜಿನಾಲಯಗಳು ದೇವಾಲಯಗಳಾದದ್ದು. . . ಜೈನಧರ್ಮವು ಭಾರತದ ಪ್ರಾಚೀನ ಧರ್ಮಗಳಲ್ಲೊಂದು. ಇದು ಕರ್ನಾಟಕಕ್ಕೆ ಸಂಪ್ರತಿ ಚಂದ್ರಗುಪ್ತ ಹಾಗೂ ಭದ್ರಬಾಹುವಿನಿಂದ ಬಂತೆಂಬುದು ವಿದ್ವಾಂಸರ ಅಭಿಮತ. ಅಂದಿನಿಂದ ಜೈನ ಧರ್ಮವು ವಿಕಸನಗೊಳ್ಳುತ್ತಾ ರಾಷ್ಟ್ರಕೂಟ, ಗಂಗ, ಕಲ್ಯಾಣ ಚಾಲುಕ್ಯ ಮತ್ತು ಹೊಯ್ಸಳ ಮನೆತನಗಳು ಹಾಗೂ ಆಳರಸರ ಅವಧಿಯಲ್ಲಿ ಕರ್ನಾಟಕದಾದ್ಯಂತ ಉಜ್ವಲವಾಗಿ ಬೆಳೆದುದನ್ನು ಕಾಣುತ್ತೇವೆ. ಈ ನಡುವೆ ಸಾಕಷ್ಟು ಏರಿಳಿತಗಳನ್ನೂ ಈ ಧರ್ಮವು ಕಂಡಿದೆ. ಆದರೆ ಕುಮ್ಮಟದ ಅರಸರು, ವಿಜಯನಗರ ಹಾಗೂ ನಂತರದ ಅವಧಿಯಲ್ಲಿ ಈ ಧರ್ಮಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯದೆ…

ಊಟ ಊಟಗಳನ್ನ ಸುತ್ತಿ…

ಊಟ ಊಟಗಳನ್ನ ಸುತ್ತಿ… ಹಸಿವೆಂಬ ಹೆಬ್ಬಾವು ಬಸಿರ ಹಿಡಿದರೆ ವಿಷವೇರಿತ್ತಯ್ಯ ಆಪಾದ ಮಸ್ತಕಕೆ ಹಸಿವಿಗನ್ನವನಿಕ್ಕಿ ವಿಷವನಿಳಿಸಬಲ್ಲಡೆ ವಸುಧೆಯೊಳಗೆ ಆತನೇ ಗಾರುಡಿಗ ಕಾಣಾ ರಾಮನಾಥ. ಚುಮು ಚುಮು ಬೆಳಕರಿದು ನೆಲಕೆ ಮುಗಿಲ ಕಣ್ಣೀರು ಇಬ್ಬನಿಯಾಗಿ ಬೀಳುವಾಗಲೇ ತಿರುಕವ್ವ, ಬಸವ್ವ,ಚೌಡವ್ವರೆಂಬ ಧರೆಯ ಹಳ್ಳಿ ಮನೆಗಳ ಹೊಲೆ ಹೊತ್ತಿ ರೊಟ್ಟಿಯ ಸಪ್ಪುಳವು ಮೊಳಗುತಿತ್ತು. ಮನೆ ಮುಂದೆ ಇಂಡಿ ದುಂಡಿಯ ನಾದ ಬಳೆಗಳೊಂದಿಗೆ ತೂಗುತಿತ್ತು.ಅಂಗಳದ ಕೋಳಿ ಪುಟ್ಟಿಯಲ್ಲಿ ಹುಂಜಗಳು ಬೆಳಕಾತ್ರಲೇ… ಎಂದು ಕೂಗುತ್ತಲೇ ಈಚಲ ಚಾಪೆಗಳಲ್ಲಿ ಅಡ್ಡಾದ ಮಕ್ಕಳು ಅವ್ವನ ಕೂಗಿಗೆ…

ಗಣೇಶ ಹಬ್ಬ ಮತ್ತು ಸಾಂಸ್ಕೃತಿಕ ಉತ್ಸವದ ವೈಶಿಷ್ಟ್ಯ

ಗಣೇಶ ಹಬ್ಬ ಮತ್ತು ಸಾಂಸ್ಕೃತಿಕ ಉತ್ಸವದ ವೈಶಿಷ್ಟ್ಯ ಐದು ದಿನಗಳ ಕಾಲ ವಿಜೃಂಭಿಸಿದ ಪ್ರಥಮ ಸಾರ್ವಜನಿಕ ಗಣೇಶೋತ್ಸವದ ಯಶಸ್ವಿ ಮುಕ್ತಾಯದ ನಂತರ ಗುರುತ್ರ್ಯಯರೂ ಸೇರಿ ಗಣೇಶೋತ್ಸವ ಮಂಡಳಿಯ ಸಕಲ ಪದಾಧಿಕಾರಿಗಳಲ್ಲಿ ಹೊಸ ಚೈತನ್ಯವೊಂದು ಗರಿಗೆದರಿತ್ತು. ಅಂದುಕೊಂಡಕ್ಕಿಂತಲೂ ಹೆಚ್ಚಿನಮಟ್ಟದಲ್ಲಿ ಸಿಕ್ಕ ಯಶಸ್ಸು ಮುಂಬರುವ ವರ್ಷಗಳಲ್ಲಿ ನಡೆಯುವ ಉತ್ಸವಗಳ ಸಾಂಸ್ಕೃತಿಕ ಸಾಧ್ಯತೆಗಳನ್ನು ಬಹಳ ದೊಡ್ಡ ರೀತಿಯಲ್ಲಿ ವಿಸ್ತರಿಸಿತ್ತು. ಬರುವ ವರ್ಷದ ಉತ್ಸವದ ತಯಾರಿಯನ್ನು ಸರಿಸುಮಾರು ಎರಡು ತಿಂಗಳುಗಳ ಮೊದಲೇ ಶುರುಮಾಡಿಕೊಂಡಿದ್ದ ಸಮಿತಿ ಆ ವರ್ಷದ ಉತ್ಸವದ ಯಶಸ್ಸಿಗಾಗಿ ಬಹಳಷ್ಟು ಶ್ರಮಪಟ್ಟಿತ್ತು.…

ದಕ್ಷಿಣ ಕರ್ನಾಟಕದ ಅಪರೂಪದ ಪ್ರಾಚೀನ ಬೌದ್ಧ ಕೇಂದ್ರ ರಾಜಘಟ್ಟ

ದಕ್ಷಿಣ ಕರ್ನಾಟಕದ ಅಪರೂಪದ ಪ್ರಾಚೀನ ಬೌದ್ಧ ಕೇಂದ್ರ ರಾಜಘಟ್ಟ ೨೦೦೭ನೆಯ ಇಸವಿ. ಕ್ಷೇತ್ರಕಾರ್ಯಕ್ಕೆಂದು ಹೊರಟ ಸಂದರ್ಭ. ಕರ್ನಾಟಕದ ಪ್ರಮುಖ ಪ್ರಾಚೀನ ಸಾಂಸ್ಕೃತಿಕ ನೆಲೆಗಳನ್ನು ನೋಡುವ ತವಕದಿಂದ ಮೈಸೂರು, ಸೋಮನಾಥಪುರ, ತಲಕಾಡು, ಶ್ರೀರಂಗಪಟ್ಟಣ ಮೊದಲಾದ ಚಾರಿತ್ರಿಕ ಸ್ಥಳಗಳನ್ನು ಅಧ್ಯಯನದ ದೃಷ್ಟಿಯಿಂದ ನೋಡಿ ದಾಖಲಿಸಿಕೊಳ್ಳಲು ಪಯಣಿಸಿದ್ದೆನು. ಇವೆಲ್ಲವನ್ನೂ ನೋಡಿ ಬೆಂಗಳೂರಿಗೆ ಬಂದಾಗ ನನಗೆ ನೋಡಬೇಕೆಂಬ ಕುತೂಹಲ ಹುಟ್ಟಿಸಿದ ಪ್ರಾಚೀನ ನೆಲೆ ರಾಜಘಟ್ಟ. ಈ ಸ್ಥಳವು ಅಷ್ಟೊತ್ತಿಗಾಗಲೇ ಉತ್ಖನನದ ಮೂಲಕ ಜಗತ್ತಿಗೆ ಚಿರಪರಿಚಿತವಾಗಿತ್ತು. ಅದು ಸಾಕಾವಾದದ್ದು ೨೦೦೧ ಮತ್ತು ೨೦೦೪…

ಭಗತ್ ಸಿಂಗ್ ಎಂಬ ಬೆಳಕಿಗೆ ಬೆನ್ನು ಮಾಡಿರುವ ಸಮಾಜ

ಭಗತ್ ಸಿಂಗ್ ಎಂಬ ಬೆಳಕಿಗೆ ಬೆನ್ನು ಮಾಡಿರುವ ಸಮಾಜ ಬ್ರಿಟಿಷರ  ನೇಣುಗಂಬಕ್ಕೆ ನಗು ನಗುತ್ತಲೇ ಕೊರಳೊಡ್ಡಿದ್ದ ಆ ಸ್ವಾತಂತ್ರ್ಯ ಕ್ರಾಂತಿಯ ಕಿಡಿ ಉಸಿರಾಡಿದ್ದು ಇಪ್ಪತ್ಮೂರೇ ವರ್ಷ. ಉಕ್ಕು ಹರೆಯದ ಈ ಬಿಸಿ ಗುಂಡಿಗೆ ದಾಸ್ಯದ ವಿರುದ್ಧ ಮಾತ್ರವೇ ಅಲ್ಲ, ಸಮ ಸಮಾಜ, ಸಹಬಾಳುವೆಗಾಗಿ ಮಿಡಿದ ಪರಿ ಅಭೂತಪೂರ್ವ. ಭಗತ್ ಸಿಂಗ್ ದೇಹ ಬಹು ಹಿಂದೆಯೇ ಮಣ್ಣು ಸೇರಿರಬಹುದು. ಆದರೆ ಕೋಮುವಾದ, ಅಮಾನವೀಯ ಅಸ್ಪೃಶ್ಯತೆ, ಧರ್ಮ-ಜಾತಿಗಳ, ಮೇಲು- ಕೀಳುಗಳ ನೆವದಲಿ ನಡೆವ ಕ್ರೌರ್ಯ-ಶೋಷಣೆ- ವಿರುದ್ಧ ಆತ ಎತ್ತಿದ…

ದಲಿತರಿಗೆ ಅಧಿಕಾರ: ಪೈಪೋಟಿ ವ್ಯವಹಾರ

ಪಂಜಾಬಿನಲ್ಲಿ ದಲಿತ ಮುಖಂಡ ಚರಣಜಿತ್ ಸಿಂಗ್ ಚೆನ್ನಿಯವರನ್ನು ಮುಖ್ಯಮಂತ್ರಿ ಮಾಡಿರುವ ಕಾಂಗ್ರೆಸ್ ಇಷ್ಟರಲ್ಲೇ ನಡೆಯಲಿರುವ ಚುನಾವಣೆ ನಂತರ ಬೇರೆ ರಾಗ ಹಾಡುವ ಲಕ್ಷಣ ಸ್ಪುಟವಾಗುತ್ತಿದೆ. ಕಾಂಗ್ರೆಸ್ ಮಾತ್ರವೇ ಅಲ್ಲ, ಬಿಜೆಪಿ, ಆಪ್, ಶಿರೋಮಣಿ ಅಕಾಲಿ ದಳ ಪಕ್ಷಗಳೂ ದಲಿತ ಕಾರ್ಡ್‌ನೊಂದಿಗೆ ಚುನಾವಣಾ ಆಟ ಆಡುವುದಕ್ಕೆ ಸಿದ್ಧತೆ ನಡೆಸಿವೆ. ದಲಿತರಿಗೆ ಅಧಿಕಾರ: ಪೈಪೋಟಿ ವ್ಯವಹಾರ ಇಷ್ಟು ವರ್ಷದ ಜನತಂತ್ರವನ್ನು ಅನುಭವಿಸಿರುವ ದೇಶ ಇದೀಗ ಮತ್ತೊಂದು ಹೊಸ ಆಯಾಮಕ್ಕೆ ಹೊರಳುವ ಸನ್ನಾಹದಲ್ಲಿರುವುದು ಪಂಜಾಬ್‌ನಲ್ಲಿ ಆಗಿರುವ ರಾಜಕೀಯ ಬೆಳವಣಿಗೆಗಳಿಂದ ಸ್ಪಷ್ಟವಾಗುತ್ತಿದೆ. ಕಾಂಗ್ರೆಸ್…

ಗಣೇಶ ಮೂರ್ತಿ ತಯಾರಿಕೆ ಮತ್ತು ಆರ್ಥಿಕ ಸಬಲತೆ

ಗಣೇಶ ಮೂರ್ತಿ ತಯಾರಿಕೆ ಮತ್ತು ಆರ್ಥಿಕ ಸಬಲತೆ ಗಣೇಶನ ಉತ್ಸವಕ್ಕೆ ಒಂದು ತಿಂಗಳ ಮುಂಚೆಯೇ ಗುರುತ್ರ್ಯಯರ ಸಾರ್ವಜನಿಕ ಗಣೇಶೋತ್ಸವದ ತಯಾರಿಗಳು ಮೊದಲುಗೊಂಡವು. ಊರಿನ ರೈತರ ಕೈತುಂಬಾ ಕಾಸು ಓಡಿಯಾಡುತ್ತಿದ್ದ ಕಾರಣವರ್ಷದಿಂದ ಹಬ್ಬದ ಹಣಸಂಗ್ರಹಣೆಯ ಗುರಿ ಅಂದುಕೊಂಡಿದ್ದಕ್ಕಿಂತಲೂ ಸುಲಭವಾಗಿ ಕೈಗೆಟುಕಿತ್ತು. ಊರಮಟ್ಟದಲ್ಲಿ ಮೊದಲ ಬಾರಿಗೆ ಇಂತಹ ಪ್ರಯತ್ನ ನಡೆದಾಗ ಎಲ್ಲೆಡೆಯಿಂದ ಉತ್ತೇಜನಕಾರಿ ಮತ್ತು ಪ್ರೋತ್ಸಾಹದಾಯಕ ಸಂಗತಿಗಳು ಬಹಿರಂಗಗೊಂಡವು. ಇದು ಅಳುಕುತ್ತಲೆ ಸಾರ್ವಜನಿಕ ಗಣೇಶೋತ್ಸವದ ಕಲ್ಪನೆ ಮಾಡಿದ ತ್ರಿಮೂರ್ತಿಗಳ ಮುಖಗಳಲ್ಲಿನ ಮಾಸದ ಮಂದಹಾಸಕ್ಕೆ ಕಾರಣವಾಗಿತ್ತು. ಗಣೇಶನ ಮೂರ್ತಿಯನ್ನು ಎಲ್ಲಿಂದ ತರುವುದು?…

ಸೂರ್ಯ ಎಂಬ ಭಾವಾನಂದ ಮತ್ತು ಲೋಕಾನಂದದ ರೂಪಕಗಳು…

ಸೂರ್ಯ ಎಂಬ ಭಾವಾನಂದ ಮತ್ತು ಲೋಕಾನಂದದ ರೂಪಕಗಳು… ಕಾವ್ಯ ಜನಪ್ರಿಯ ಚರಿತ್ರೆಯಂತೆ ಸರಳ ರೇಖೆಯಲ್ಲಿ ಸಾಗುವುದಿಲ್ಲ.ಲೋಕಸಂವಾದಕ್ಕಿಂತಲೂ ಭಾವ ಸಂವಾದ ಬಯಸುವ ಕಾವ್ಯವು ಭಿನ್ನ ಆಯಾಮಗಳ ಸಂಕೀರ್ಣ ರೂಪ ಹೊತ್ತಿದೆ.ಕವಿ ದೃಷ್ಟಿಗೆ ವಿದ್ವತ್ತಿನ ಹಾಗೂ ಅನುಭವಗಳ ಹಿನ್ನೆಲೆ ಇದ್ದಷ್ಟೂ ಆತನ ಸೃಷ್ಟಿ ಶೀಲ ಜಗತ್ತು ಭಿನ್ನ ಭಿನ್ನವಾಗಿ ನಿರ್ಮಾಣವಾಗುತ್ತದೆ. ಕವಿ ತಾನು ಸೃಷ್ಟಿಸುವ ಕಾವ್ಯಗಳ ಮೂಲಕವೇ ತನ್ನ ಓದುಗರನ್ನೂ ಇತರರಿಗಿಂತ ಭಿನ್ನವಾಗಿಸಬಲ್ಲ. ಕವಿಯ ಕಾವ್ಯವನ್ನ ವಿಶಿಷ್ಟ ಪದರಚನೆ ಎಂದು ಕಾವ್ಯ ಮೀಮಾಂಸೆ ಗುರ್ತಿಸುತ್ತದೆ. ಅಲಂಕಾರ ಎನ್ನುವ ಪದವು ಸೌಂದರ್ಯವನ್ನ…

ನಾಣ್ಯವೆಂಬ ಹಣದ ಇತಿಹಾಸವೂ, ಅರ್ಥವ್ಯವಸ್ಥೆಯೂ

ನಾಣ್ಯವೆಂಬ ಹಣದ ಇತಿಹಾಸವೂ, ಅರ್ಥವ್ಯವಸ್ಥೆಯೂ ನಾಣ್ಯವೆಂಬುದು ಯಾವುದೇ ಪಡಿ, ಪದಾರ್ಥಗಳನ್ನು ಕೊಳ್ಳುವ ಮತ್ತು ಮಾರುವವರ ನಡುವಿನ ಕೊಂಡಿಯಾಗಿ ಬಳಕೆಗೊಳ್ಳುವ ಚಲಾವಣೆ ಸಾಧನ. ಅದು ನಿರ್ದಿಷ್ಟ ಅಳತೆ, ತೂಕ ಮತ್ತು ಆಕಾರದ ಮೂಲಕ ಮೌಲ್ಯವನ್ನು ಹೊಂದಿರುವ ಕ್ರಮಬದ್ಧವಾಗಿ ತಯಾರಾದ ಮಾಧ್ಯಮ. ಅದು ಲೋಹ ಅಥವಾ ಕಾಗದವಾಗಿರಬಹುದು. ಮಹಮದ್ ಬಿನ್ ತೊಗಲಕ್ ಕಾಲಕ್ಕೆ ಚರ್ಮವೇ ನಾಣ್ಯವಾಗಿ ಬಳಕೆಗೊಂಡದ್ದೂ ಇತಿಹಾಸವೇ. ನಾಣ್ಯ ಅಂದಂದಿನ ಅರ್ಥವ್ಯವಸ್ಥೆಯ ಪ್ರತೀಕವೇ ಆಗಿದೆ. ಜಗತ್ತಿನಲ್ಲಿ ಇಂದು ಕಾಗದವೇ ಮೌಲ್ಯದ ನಿರ್ಧಾರಕ ಸಾಧನವಾಗಿದೆ. ಇತ್ತೀಚೆಗೆ ಹಣವೆನ್ನುವುದು ಕೈಯಿಂದ ಕೈಗೆ…

ಈರುಳ್ಳಿ ಬೆಲೆ ಮತ್ತು ಆರ್ಥಿಕ ಪರಿಸ್ಥಿತಿಯ ಸಂದರ್ಭ

ಈರುಳ್ಳಿ ಬೆಲೆ ಮತ್ತು‌ಆರ್ಥಿಕ ಪರಿಸ್ಥಿತಿಯ ಸಂದರ್ಭ ೧೯೭೫ನೆ ಇಸವಿ ಅನೇಕ ಕಾರಣಗಳಿಂದಾಗಿ ನನ್ನ ನೆನಪಿನ ಪಟಲದಲ್ಲಿ ಸ್ಥಿರಸ್ಥಾಯಿಯಾಗಿ ಉಳಿದುಬಿಟ್ಟಿದೆ. ನಾನು ಸರಕಾರಿ ಮಾಧ್ಯಮಿಕ ಶಾಲೆಯ ಆರನೇ ಇಯತ್ತೆಯಲ್ಲಿ ಓದುತ್ತಿದ್ದ ಆ ವರ್ಷದಲ್ಲಿ ನನ್ನೂರಿನಲ್ಲಿ ‘ಪ್ರಥಮ’ ಎನ್ನಬಹುದಾದ ಅನೇಕ ಸಂಗತಿಗಳು ಜರುಗಿದವು. ಈ ಸಾಲಿನಲ್ಲಿ ಮೊಟ್ಟಮೊದಲನೆಯದಾಗಿ ನಿಲ್ಲುವಂತಹುದು ಮತ್ತು ಮುಂಬರುವ ಎಲ್ಲಾ ಪ್ರಥಮಗಳಿಗೆ ನಾಂದಿ ಹಾಡಿದ್ದು ನನ್ನೂರಿನ ರೈತರನ್ನು ಕುರಿತಾದದ್ದು. ಹಿಂದೆಂದೂ ಕಂಡು ಕೇಳರಿಯದ ಮಟ್ಟದ ಹಣ ಆ ವರ್ಷ ರೈತಾಪಿವರ್ಗದ ಕೈಸೇರಿತ್ತು. ಅನೇಕ ವರುಷಗಳಿಂದ ಈರುಳ್ಳಿ ಬೆಳೆಯುವ…

ಸನ್ನತಿ ಎಂಬ ಪ್ರಾಚೀನ ಬೌದ್ಧ ಕೇಂದ್ರವೂ…

ಸನ್ನತಿ ಎಂಬ ಪ್ರಾಚೀನ ಬೌದ್ಧ ಕೇಂದ್ರವೂ ಸನ್ನತಿ ಎಂಬ ಸ್ಥಳವು ಜಗತ್ತಿಗೆ ಮೊಟ್ಟಮೊದಲು ಪರಿಚಿತವಾದದ್ದು ಕಪಟರಾಳ ಕೃಷ್ಣರಾವ್ ಅವರಿಂದ. ಇದು ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿದ್ದು, ಯಾದಗಿರಿಯಿಂದ ೫೦ಕಿ.ಮೀ. ದೂರದಲ್ಲಿದೆ. ಭೌಗೋಳಿಕವಾಗಿ ಸನ್ನತಿ ಪರಿಸರವು ಮನಮೋಹಕ ಮತ್ತು ರಮ್ಯರಮಣೀಯ ಎಡೆ. ಹಾವಿನೋಪಾದಿಯಲ್ಲಿ ಹರಿಯುವ ಭೀಮಾ ನದಿಯು ಇಲ್ಲಿ ಅರ್ಧಚಂದ್ರಾಕಾರವಾದ ಪರಿಸರವನ್ನು ಸೃಷ್ಟಿಸಿದೆ. ನದಿಯ ಎಡದಂಡೆಯ ಈ ಅರ್ಧಚಂದ್ರಾಕೃತಿಯ ಭೂಭಾಗವೇ ಸನ್ನತಿ. ಸ್ವಾಭಾವಿಕವಾಗಿಯೇ ರಕ್ಷಣಾ ಕೋಟೆಯಂತಿರುವ ಭೀಮಾ ನದಿಯು ಪ್ರಾಚೀನ ಕಾಲದಿಂದಲೂ ಇಲ್ಲಿ ಮಾನವ ಸಮಾಜ, ಸಂಸ್ಕೃತಿ ವಿಕಸನಗೊಳ್ಳಲು…

ಬಸ್ ಸ್ಟ್ಯಾಂಡ್ ಎಂಬ ಹಾವು ಏಣಿ ಆಟದ ಸುತ್ತಾ …

ಬಸ್ ಸ್ಟ್ಯಾಂಡ್ ಎಂಬ ಹಾವು ಏಣಿ ಆಟದ ಸುತ್ತಾ .. ಬಸ್ ಸ್ಟ್ಯಾಂಡ್ ಎಂಬದು ಮಾಯಾಲೋಕ.. ಅಲ್ಲಿ ಸುಮ್ಮನೆ ಕುಳಿತರೂ ಹತ್ತಾರು ಬಗೆಯ ಕಥೆಗಳು ಕೈ ಬೀಸಿ ಕರೆಯುತ್ತವೆ. ಇನ್ನೂ ಯಾವ ಜವಾಬ್ದಾರಿಯೂ ಇಲ್ಲದ ಹುಡುಗ ಹುಡುಗಿಯರ ಮೊಬೈಲ್ ತುಂಬಾ ಪ್ರೇಮಲೋಕ…! ಪಕ್ಕದಲ್ಲೇ ಸಂಜೆಗೆ ಮುಖಮಾಡಿ ಕುಳಿತವರು. ಬದುಕಿನ ಆಸೆಯನ್ನೇ ಕಳಕೊಂಡು ಆಸ್ಪತ್ರೆಗಳ ರಿಪೋರ್ಟ ಹಿಡಿದು ಶೂನ್ಯ ನೋಡುತ್ತಾ ಮೌನ ಮತ್ತು ನಿರಾಸಕ್ತಿ ಹೊತ್ತವರು. ಹಕ್ಕಿಗಳ ಹಿಂಡಂತೆ ಸಂಸಾರಗಳನ್ನೇ ಮೂಟೆಗಳಲ್ಲಿ ಕಟ್ಟಿಕೊಂಡು ಮತ್ತೆಲ್ಲಿಗೋ ಪಯಣ ಹೊರಟವರು.…

1 3 4 5 6 7 10
error: Content is protected !!