ಅಂಕಣ
ಕರ್ನಾಟಕ ಇತಿಹಾಸದ ಕಿರೀಟ ಬೀದರ್
ಕರ್ನಾಟಕ ಇತಿಹಾಸದ ಕಿರೀಟ ಬೀದರ್ ಬೀದರ್ ಜಿಲ್ಲೆಯು ಭೌಗೋಳಿಕ ಮತ್ತು ಚಾರಿತ್ರಿಕವಾಗಿ ಕರ್ನಾಟಕಕ್ಕೆ ಶಿಖರಪ್ರಾಯವೇ ಆಗಿದೆ. ಈ ಜಿಲ್ಲೆಯು ಬಾದಾಮಿ ಚಾಲುಕ್ಯ, ರಾಷ್ಟ್ರಕೂಟ ಚಾಲುಕ್ಯರ ಕಾಲದಿಂದಲೂ ಪ್ರಸಿದ್ಧವಾಗಿದ್ದಿತು. ಬಸವಕಲ್ಯಾಣವು ಕಲ್ಯಾಣ ಚಾಲುಕ್ಯರು ಮತ್ತು ಕಲಚುರಿಗಳ ರಾಜಧಾನಿ ಪಟ್ಟಣ. ೧೨ನೇ ಶತಮಾನದಲ್ಲಿ ಬಸವಾದಿ ಶರಣರ ಧಾರ್ಮಿಕ ಕ್ರಾಂತಿಯ ಭೂಮಿಕೆಯಾಗಿ, ಸಮಸಮಾಜದ ಕನಸನ್ನು ಹೊತ್ತ ಜನತಾ ಚಳವಳಿಯಿಂದ ಸಾಮಾಜಿಕ ಸಂಚಲನವನ್ನು ಮೂಡಿಸಿದ ಸುಧಾರಣೆಯ ನೆಲೆವೀಡು. ವಚನಗಳ ಮೂಲಕ ಕನ್ನಡಕ್ಕೆ ವಿಶಿಷ್ಟ ಸ್ಥಾನವನ್ನು ನೀಡಿದ ಶ್ರೇಯ ಈ ಜಿಲ್ಲೆಯದು. ಸಮಾಜದ ಎಲ್ಲ…