Browsing: ಕ್ರೈಮ್

ಕ್ರೈಮ್

ಹಿರಿಯೂರು ಬಳಿ ಅಫಘಾತ; ನಾಲ್ವರು ಸಾವು

ಚಿತ್ರದುರ್ಗ ; ಎಚ್ ಲಕ್ಷ್ಮಣ್ ಚಿತ್ರದುರ್ಗ, ಡಿ, 13: ಜಿಲ್ಲೆಯ ಹಿರಿಯೂರು ಬಳಿಯ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಆಲೂರು ಕ್ರಾಸ್ (ತೊರೆ ಸೇತುವೆ ಬಳಿ) ಬಳಿ ಸರಣಿ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ನಾಲ್ವರು ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಕಾರು ಹಾಗೂ ಲಾರಿಗಳ ಮಧ್ಯೆ ಭೀಕರ ಸರಣಿ ಅಪಘಾತ ಸಂಭವಿಸಿ ನಾಲ್ವರು ಸ್ಥಳದಲ್ಲೇ ಅಸುನೀಗಿದ್ದು, ಹತ್ತಕ್ಕೂ ಹೆಚ್ಚು ಜನ ಗಾಯಗೊಂಡರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಕಾಫಿ ಹೌಸ್‌ನ ಆಲೂರು…

ಕಾಳು ಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ ದಂಧೆ!

Writing- ಪರಶಿವ ಧನಗೂರು ಕಾಳು ಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ ದಂಧೆ! ದೇಶದಲ್ಲಿ ಕಡುಬಡವರು ಹೊಟ್ಟೆಹಸಿವಿನಿಂದ ನರಳಬಾರದೆಂದು, ಸರ್ಕಾರಗಳು ಉಚಿತವಾಗಿ ನೀಡುತ್ತಿರುವ ಪಡಿತರ ಯೋಜನೆಯ ಅನ್ನಭಾಗ್ಯ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿಸಿ ಹೊರ ರಾಜ್ಯಗಳ ರೈಸ್ ಮಿಲ್ ಗಳಿಗೆ, ರೈಸ್ ಮಾರ್ಕೆಟ್ ಗಳಿಗೆ ಸಾಗಿಸುವ ದಂಧೆ ಈಗ ಹೆಚ್ಚು ರಾಜ್ಯಾದ್ಯಂತ ಸಕ್ರಿಯವಾಗಿದೆ. ಫಲಾನುಭವಿ ಗಳಿಂದ ಕಡಿಮೆ ಬೆಲೆಗೆ ಪಡೆದುಕೊಳ್ಳುವ ಕಾಳಸಂತೆಕೋರರು, ಅನ್ನಭಾಗ್ಯದ ಹಸಿವು ನೀಗಿಸಬೇಕಾದ ಅಕ್ಕಿಯನ್ನು ತಮ್ಮ ಸೀಕ್ರೆಟ್ ಗೋಡೌನ್ ಗಳಿಗೆ ಸಾಗಿಸಿ ಬಿಚ್ಚಿಟ್ಟ, ಆನಂತರ…

ಸರ್ಕಾರ ಗಾಂಜಾಗೆ ಜೈ ಎಂದಿದ್ದೇಕೇ..?

Writing- ಪರಶಿವ ಧನಗೂರು ಸರ್ಕಾರ ಗಾಂಜಾಗೆ ಜೈ ಎಂದಿದ್ದೇಕೇ? ಮಾದಕ ವಸ್ತುಗಳ ಸಾಗಾಣಿಕೆ-ಮಾರಾಟ-ಸೇವನೆ ವಿರುದ್ಧ ಜಗತ್ತಿನ ಎಲ್ಲಾ ದೇಶಗಳ ಜೊತೆ ಸೇರಿಕೊಂಡು 1960ರಲ್ಲೇ ಸಮರ ಸಾರಿದ್ದ ನಮ್ಮ ಭಾರತ ದೇಶ, ಯುದ್ಧ ಘೋಷಿಸಿ ಗೆಲ್ಲುವ ಮೊದಲೇ ಸೋಲೊಪ್ಪಿಕೊಳ್ಳುತ್ತಿರುವ ಕಾರಣವೇನೆಂದು ತಿಳಿಯುತ್ತಿಲ್ಲ. ಕೇಂದ್ರ ಸರ್ಕಾರ ಈಗ ಕಳೆದ ಅಕ್ಟೋಬರ್ ತಿಂಗಳಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಮೂಲಕ “ಸಣ್ಣ ‌ಪ್ರಮಾಣದ ಮಾದಕ ವಸ್ತು ಸೇವಿಸುವ, ಇಟ್ಟುಕೊಳ್ಳುವ ವ್ಯಕ್ತಿಗಳಿಗೆ ಶಿಕ್ಷೆ ಬೇಡ!” ಎಂಬ ಆದೇಶ ಹೊರಡಿಸಿ ತಮ್ಮ ಕೆಳಹಂತದ…

ನಕಲಿ ಛಾಪಾ ಕಾಗದದ ನೆಟ್ವರ್ಕ್ ಜಾಲ  ರೀ ಆಕ್ಟೀವ್..!

writing-ಪರಶಿವ ಧನಗೂರು ನಕಲಿ ಛಾಪಾ ಕಾಗದದ ನೆಟ್ವರ್ಕ್ ಜಾಲ  ರೀ ಆಕ್ಟೀವ್ ದೇಶದ ಆರ್ಥಿಕತೆಯನ್ನೆ ಬುಡಮೇಲು ಮಾಡಲು ಹೊರಟಿದ್ದ, ಭಾರತವನ್ನೇ ಬೆಚ್ಚಿ ಬೀಳಿಸಿದ್ದ ಬಹುಕೋಟಿ ಛಾಪಾ ಕಾಗದದ ಹಗಹರಣವೂ 2001ರಲ್ಲಿ ಬೆಳಕಿಗೆ ಬಂದದ್ದು ಬೆಂಗಳೂರಿನಲ್ಲೇ! ಸುಮಾರು ಹತ್ತು ವರ್ಷಗಳ ಕಾಲ ಸಿಬಿಐ ಮತ್ತು ಹಲವು ರಾಜ್ಯಗಳ ಪೊಲೀಸರಿಂದ ತನಿಖೆ ಗೊಳಪಟ್ಟಿದ್ದ 20.000 ಕೋಟಿ ರೂಪಾಯಿಗಳ ಮೌಲ್ಯದ ಈ ನಕಲಿ ಛಾಪಾ ಕಾಗದದ ಹಗಹರಣದ ರೂವಾರಿ ಬೆಳಗಾವಿ ಜಿಲ್ಲೆಯ ಖಾನಾಪುರ ಮೂಲದ ಅಬ್ದುಲ್ ಕರೀಂ ಲಾಲಾ ತೆಲಗಿ.…

ಕಲ್ಲು ಎತ್ತಿಹಾಕಿ ಇಬ್ಬರ ಕೊಲೆ

ಆನೇಕಲ್, ಅ,23 ಇ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಇಬ್ಬರನ್ನು ಹತ್ಯೆ ಮಾಡಿರುವ ಘಟನೆ ಇಲ್ಲಿನ ಅತ್ತಿಬೆಲೆ- ಟಿವಿಎಸ್ ರಸ್ತೆಯಲ್ಲಿ ತಡರಾತ್ರಿಯಲ್ಲಿ  ನಡೆದಿದೆ. ಕೊಲೆಯಾದವರನ್ನು ಅತ್ತಿಬೆಲೆಯ ದೀಪಕ್ ಹಾಗೂ ಮಾಯಸಂದ್ರದ ಬಾಸ್ಕರ್ ಎಂದು ಗುರುತಿಸಲಾಗಿದೆ. ಹಣಕಾಸಿನ ವ್ಯವಹಾರದಲ್ಲಿ ಗಲಾಟೆ ನಡೆದು ಮತ್ತೊಂದು ಕಡೆಯವರು ಈ ಇಬ್ಬರನ್ನು ಅಟ್ಟಾಡಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೊಲೆಯಾದವರುಈ ಬಗ್ಗೆ ಮಾಹಿತಿ ತಿಳಿದ ಅತ್ತಿಬೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಮೃತದೇಹಗಳ ಪಕ್ಕದಲ್ಲಿ ಎರಡು ಬೈಕ್​ಗಳು…

ಮಗನಿಂದಲೇ ತಂದೆ ಅತನಜೊತಗಿದ್ದ ಮಹಿಳೆಯನ್ನು ಕೊಲೆ ಮಾಡಿದ ಮಗ

ಮೈಸೂರು,ಅ,22:ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ತಂದೆ ಮತ್ತು ಆತನ ಜೊತೆಯಿದ್ದ ಮಹಿಳೆಯನ್ನು ಮಗ ಬರ್ಭರವಾಗಿ ಹತ್ಯೆ ಮಾಡಿದ ಘಟನೆ ಸಾಂಸ್ಕೃತಿಕ ನಗರ ಮೈಸೂರಿನ ಹೊರವಲಯದಲ್ಲಿ ನಡೆದಿದೆ. ಮೈಸೂರಿನ ಶ್ರೀ ನಗರದಲ್ಲಿ ಈ ಘಟನೆ ನಡೆದಿದೆ. ಶಿವಪ್ರಕಾಶ್ (56) ಮತ್ತು ಲತಾ (48) ಕೊಲೆಯಾದವರು. ಕೊಲೆ ಮಾಡಿದ ಸಾಗರ್ ನಾಪತ್ತೆ ಯಾಗಿದ್ದಾನೆ. ಶಿವಪ್ರಕಾಶ್ ಕೆ.ಜಿ ಕೊಪ್ಪಲು ನಿವಾಸಿಯಾಗಿದ್ದು, ಲತಾ ಮೈಸೂರಿನ ಶ್ರೀನಗರದಲ್ಲಿ ವಾಸಿಸುತ್ತಿದ್ದರು. ಈ ನಡುವೆ ಲತಾ ಮನೆಗೆ ನುಗ್ಗಿದ ಸಾಗರ್ ಮೊದಲು ತಂದೆಯನ್ನ ಮಚ್ಚಿನಿಂದ ಕೊಲೆ ಮಾಡಿದ್ದಾನೆ. ನಂತರ…

ಗಗನಕ್ಕೆರುತ್ತಿರುವ ಬಿಟ್ ಕಾಯಿನ್ ಗೆ ಭಾರತದಲ್ಲೇಕೆ ಭಾರೀ ಬೇಡಿಕೆ?

ಗಗನಕ್ಕೆರುತ್ತಿರುವ ಬಿಟ್ ಕಾಯಿನ್ ಗೆ ಭಾರತದಲ್ಲೇಕೆ ಭಾರೀ ಬೇಡಿಕೆ? Writing-ಪರಶಿವ ಧನಗೂರು ಈಗ ಜಗತ್ತಿನ ಎಲ್ಲೆಡೆ ಕ್ರಿಪ್ಟೋಕರೆನ್ಸಿ ಯದೇ ಟ್ರೆಂಡ್! ವಿಶ್ವ ದ ಅತ್ಯಂತ ದುಬಾರಿ ಡಿಜಿಟಲ್ ಮನಿ ಬಿಟ್ ಕಾಯಿನ್ ಮತ್ತು ಇಥೇರಿಯಂ ಮೇಲೆ ದಿನದಿಂದ ದಿನಕ್ಕೆ ಜನರ ಹೂಡಿಕೆ ತಾರಕ್ಕಕ್ಕೇರುತ್ತಿದೆ! ಕಳೆದ ಏಳು ದಿನಗಳಲ್ಲಿ ಶೇಕಡಾ 32% ಬೆಲೆ ಹೆಚ್ಚಳ ಕಂಡಿರುವ ಬಿಟ್ ಕಾಯಿನ್ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟ್ರೆಂಡಿಂಗ್ ನಲ್ಲಿದೆ. ಚುನಾಯಿತ ಸರ್ಕಾರಗಳಿಗೇ ಚುರುಕು ಮುಟ್ಟಿಸಿ ಸವಾಲು ಒಡ್ಡುತ್ತಿರುವ ಈ ಖಾಸಗಿ ಕಾಸು…

ನಾಪತ್ತೆಯಾಗಿದ್ದ ಮಕ್ಕಳು ಮಂಗಳೂರಿನಲ್ಲಿ ಪತ್ತೆ

ಮಂಗಳೂರು, ಅ, ೧೨: ಬೆಂಗಳೂರಿನಲ್ಲಿ ನಾಪತ್ತೆಯಾಗಿದ್ದ ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಅಮೃತವರ್ಷಿಣಿ, ರಾಯಲ್ ಸಿದ್ಧಾರ್ಥ, ಚಿಂತನ್, ಭೂಮಿ ಎಂಬ ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗಿದ್ದು, ಬೆಂಗಳೂರಿನಿಂದ ಸ್ಲಿಪರ್ ಬಸ್‌ನಲ್ಲಿ ಮಂಗಳೂರು ತಲುಪಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳೂರಿಗೆ ಬಂದಿಳಿದ ಮಕ್ಕಳ ಬಗ್ಗೆ ಅನುಮಾನಗೊಂಡ ಆಟೋ ರಿಕ್ಷಾ ಚಾಲಕರು, ಮಕ್ಕಳನ್ನು ಕರೆತಂದು ಪಾಂಡೇಶ್ವರ ಪೊಲೀಸ್ ಠಾಣೆಗೆ ಬಿಟ್ಟಿದ್ದಾರೆ. “ಮೊದಲು ರೈಲು ಮೂಲಕ ಬೆಳಗಾವಿಗೆ ಹೋಗಿದ್ದೆವು. ಅಲ್ಲಿಂದ ಮೈಸೂರಿಗೆ ಬಂದು ಮತ್ತೆ ಬೆಂಗಳೂರಿಗೆ ಹೋಗಿ ಸೋಮವಾರ ಸಂಜೆ ಮೆಜೆಸ್ಟಿಕ್‌ನಿಂದ ಮಂಗಳೂರಿಗೆ…

ದೆಹಲಿ ರೌಡಿಗಳ ಆಳ್ವಿಕೆಗೆ ಗ್ಯಾಂಗ್ ಸ್ಟರ್ ಸಿಂಡಿಕೇಟ್..!!

ದೆಹಲಿ ರೌಡಿಗಳ ಆಳ್ವಿಕೆಗೆ ಗ್ಯಾಂಗ್ ಸ್ಟರ್ ಸಿಂಡಿಕೇಟ್..!! Writing;ಪರಶಿವ ಧನಗೂರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೌಡಿಗಳ ಗ್ಯಾಂಗ್ ಹಾವಳಿ ಜಾಸ್ತಿಯಾಗಿದ್ದು, ದಶಕಗಳಿಂದಲೂ ಅಂಡರ್ ವರ್ಲ್ಡ್ ಗ್ಯಾಂಗ್ ಸ್ಟರ್ ಗಳು ರಕ್ತದ ಹಸಿವು ಹತ್ತಿಸಿಕೊಂಡು ದೆಹಲಿಯ ಬೀದಿಗಳಲ್ಲಿ ರಕ್ತದ ಕಾಲುವೆ ನಿರ್ಮಾಣ ಮಾಡಿ ಪ್ರತೀಕಾರದ ಹೆಸರಲ್ಲಿ ನಗರವನ್ನು ನರಕಕ ಮಾಡಿಬಿಟ್ಟಿದ್ದಾರೆ! ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ನ್ಯಾಯಾಲಯದಲ್ಲಿ ನ್ಯಾಯಾದೀಶರೆದುರು ರೌಡಿಯೊಬ್ಬನನ್ನು ವಿಚಾರಣೆ ನಡೆಸುವಾಗ ಗುಂಡಿಟ್ಟು ಕೊಂದಿರುವ ದಾಖಲೆಯೇ ಬರೆದಿರುವ ನರಹಂತಕ ನಟೋರಿಯಸ್ ದಿಲ್ಲಿಯ ಮಾಫಿಯಾ ಡಾನ್ ಗಳು ಇಡೀ…

ಬೃಹತ್ ಮಕ್ಕಳ ಮಾರಾಟ ಜಾಲ ಪತ್ತೆ

ಬೆಂಗಳೂರು,ಅ.06:  ಮುಂಬೈನಿಂದ ಕಡಿಮೆ ಹಣಕ್ಕೆ ಮಕ್ಕಳನ್ನು ಖರೀದಿಸಿ ತಂದು ಬೆಂಗಳೂರಿನಲ್ಲಿ ಮಕ್ಕಳಿಲ್ಲದ ಪೋಷಕರಿಗೆ ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡುತ್ತಿದ್ದ ಮಕ್ಕಳ ಮಾರಾಟ ಜಾಲವನ್ನ ಪೋಲಸರು  ಭೇದಿಸಿದ್ದಾರೆ. ಮಕ್ಕಳ ಮಾರಾಟ ದಂಧೆಗೆ ಗರ್ಭಿಣಿ ಮಹಿಳೆಯರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊಡುವ ತಾಯಿ ಕಾರ್ಡ್ ನ್ನೇ ನಕಲು ಮಾಡಿ ದುರ್ಬಳಕೆ ಮಾಡಿಕೊಂಡಿರುವ ಆಘಾತಕಾರಿ ಸಂಗತಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ಚಾಮರಾಜಪೇಟೆಯ ಸಿರ್ಸಿ ವೃತ್ತದಲ್ಲಿರುವ ಹೆರಿಗೆ ಆಸ್ಪತ್ರೆಯಲ್ಲಿ ಕಳ್ಳತನವಾಗಿದ್ದ ಮಗುವಿನ ಜಾಡು ಹಿಡಿದು ತನಿಖೆ ನಡೆಸಿದ ಪೊಲಿಸ್ ಸಬ್‌ಇನ್‌ಸ್ಪೆಕ್ಟರ್ ಶ್ರೀನಿವಾಸ್ ಬಾಂಬೆಯಿಂದ…

ಒಂದೇ ಕುಟುಂಬದ ಮೂವರು‌ ಆತ್ಮಹತ್ಯೆ.

ಬೆಂಗಳೂರು,ಅ,02:  ಇತ್ತೀಚೆಗಷ್ಟೇ ಒಂದೇ ಕುಟುಂಬದ ಐವರು ಆತ್ಮಹತ್ಯೆಮಾಡಿಕೊಂಡಿರುವ ಘಟನೆ ಮಾಸುವ ಮುನ್ನವೇ ಮತ್ತೊಂದು ಅದೇ ರೀತಿಯ ಘಟನೆ ಮರುಕಳಿಸಿದ್ದು,ಒಂದೇ ಕುಟುಂಬದ ಮೂವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರು ಘಟನೆ ಬೆಂಗಳೂರು ಉತ್ತರ ತಾಲೂಕಿನ ಪ್ರಕೃತಿ ಬಡಾವಣೆಯ ಮನೆಯೊಂದರಲ್ಲಿ ನಡೆದಿದೆ. ತಾಯಿ ಸೇರಿದಂತೆ ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವುದು  ಬಳಕಿಗೆ ಬಂದಿದೆ. ಆತ್ಮಹತ್ಯೆಗೆ ಶರಣಾದವರನ್ನು ವಸಂತಾ(40), ಯಶ್ವಂತ್(15), ನಿಶ್ಚಿತಾ(6) ಎಂದು ಗುರುತಿಸಲಾಗಿದೆ. ರೂಂ ಒಂದರಲ್ಲಿ ತಾಯಿ ಮಗಳು ಒಂದೇ ಫ್ಯಾನ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರೆ, ಮತ್ತೊಂದು ಕಡೆ ಮಗ…

ಬೆಂಗಳೂರಿನಲ್ಲಿ ಮತ್ತೆ ತಲೆಯೆತ್ತಿದ ರೈಸ್ ಪುಲ್ಲಿಂಗ್ ದಂಧೆ!

ಬೆಂಗಳೂರಿನಲ್ಲಿ ಮತ್ತೆ ತಲೆಯೆತ್ತಿದ ರೈಸ್ ಪುಲ್ಲಿಂಗ್ ದಂಧೆ! Writing-ಪರಶಿವ ಧನಗೂರು ಕೊರೋನೋತ್ತರ ಕಾಲದಲ್ಲಿ ಖರ್ಚಿಗೂ ಕಾಸಿಲಿಲ್ಲದೇ ಅಂಡೆಲೆಯುತ್ತಿರುವ ವಂಚಕರ-ಮೋಸಗಾರರ ಮಾಫಿಯಾ ಮತ್ತೇ ರೀಆಕ್ಟೀವ್! ನಗರದಲ್ಲಿ ಸದ್ದಿಲ್ಲದೇ ತಲೆ ಎತ್ತಿದೆ ನೋಟು ಎಕ್ಸ್ಚೇಂಜ್ ಮಾಫಿಯಾ! ಜಾಲ ವಿಸ್ತರಿಸಲು ಪೀಲ್ಡಿಗೆ ಇಳಿದ ರೈಸ್ ಫುಲ್ಲಿಂಗ್ ವಂಚಕರು! ಒಂದೆಡೆ ಬಡಜನರು, ಮಧ್ಯಮ ವರ್ಗದ ಜನರು ಸೈಬರ್ ವಂಚನೆಗೊಳಗಾಗಿ ಕಾಸು ಕಳೆದುಕೊಂಡು ಕಕ್ಕಾಬಿಕ್ಕಿಯಾಗಿ ಶಾಕ್ ನಿಂದ ಹೊರಬರುವ ಮೊದಲೇ ಹಣಕ್ಕಾಗಿ ಈಗ ಎಲ್ಲಾ ಕಡೆ ಮೋಸಗಾರರ ವಿವಿಧ ರೀತಿಯ ಗುಂಪುಗಳು ಕಾರ್ಯಾಚರಣೆ…

ಐಎಸ್ ಐ ಗೂಢಾಚಾರಿಗಳ ಕಣ್ಣು ಈಗ ಕರ್ನಾಟಕ ದತ್ತ..!

ಐಎಸ್ ಐ ಗೂಢಾಚಾರಿಗಳ ಕಣ್ಣು ಈಗ ಕರ್ನಾಟಕ ದತ್ತ..! Writing;ಪರಶಿವನ ಧನಗೂರು ದಕ್ಷಿಣ ಕಮಾಂಡರ್ ಸೇನಾ ಗುಪ್ತದಳದ ಅಧಿಕಾರಿಗಳು ಮತ್ತು ಬೆಂಗಳೂರಿನ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಏಜೆಂಟ್ ನಂತೆ ಕೆಲಸಮಾಡುತ್ತಿದ್ದ ನಕಲಿ ಸೇನಾಧಿಕಾರಿ ಜಿತೇಂದರ್ ಸಿಂಗ್ ಎಂಬಾತನನ್ನು ಬಂಧಿಸಿದ್ದಾರೆ. ಬೆಂಗಳೂರಿನ ಕಾಟನ್ ಪೇಟೆಯ ಜಾಲಿಮೊಹಲ್ಲಾದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ರಾಜಸ್ಥಾನ ಮೂಲದ ಈ ಜಿತೇಂದರ್ ಸಿಂಗ್ ಪಾಕಿಸ್ತಾನದ ಅಂತಾರಾಷ್ಟ್ರೀಯ ಗಡಿ ಹಂಚಿಕೊಂಡಿರುವ ಬಾಡ್ಮೇರ್ ಜಿಲ್ಲೆಯವನು. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ…

ಉಬರ್ ಚಾಲಕನಿಂದ ಯುವತಿ ಮೇಲೆ ಅತ್ಯಾಚಾರ

ಬೆಂಗಳೂರು, ಸೆ,23:ಒಂಟಿ ಹೆಣ್ಣನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಬೇಕಾದ ಉಬರ್ ಚಾಲಕ ಮಹಿಳೆ ಮೇಲೆ ಅತ್ಯಾಚಾರ ಮಾಡಿ ವಿಕೃತ ಮೆರದ ಘಟನೆ ನಗರದ ಮುರುಗೇಶ್ ಪಾಳ್ಯದಲ್ಲಿ ನಡೆದಿದೆ. ಹೆಚ್‌ಎಸ್‌ಆರ್‌ ಲೇಔಟ್‌ನಿಂದ ಮುರುಗೇಶ್ ಪಾಳ್ಯಕ್ಕೆ ತೆರಳಲು ಯುವತಿ ಉಬರ್ ಕ್ಯಾಬ್ ಬುಕ್ ಮಾಡಿದ್ಲು. ಬುಕ್ ಮಾಡಿದ ಕೆಲವೇ ನಿಮಿಷಗಳಲ್ಲಿ ದೇವರಾಜ್ ಹಸೆರಿನ ಕ್ಯಾಬ್ ಡ್ರೈವರ್ ಪಿಕಪ್ ಪಾಯಿಂಟ್‌ಗೆ ಬಂದು ಯುವತಿಯನ್ನ ಕರೆದೊಯ್ದಿದ್ದಾನೆ. ಹೆಚ್‌ಎಸ್‌ಆರ್‌ ಲೇಔಟ್‌ನಿಂದ ಹೊರಟ ಕ್ಯಾಬ್ ಕೇವಲ 20 ನಿಮಿಷದಲ್ಲಿ ಮುರುಗೇಶ್ ಪಾಳ್ಯದಲ್ಲಿರುವ ಯುವತಿ ಮನೆ ಬಳಿಗೆ ಬಂದಿದೆ.…

ಅನೇಕಲ್ ಬಳಿ ರೇವೂಪಾರ್ಟಿ ಮೇಲೆ ಪೊಲೀಸರ ದಾಳಿ

ಬೆಂಗಳೂರು, ಸೆ,19:ಆನೇಕಲ್ ಸಮೀಪ ರೇವು ಪಾರ್ಟಿ ನಡೆಸುತ್ತಿದ್ದ ಪ್ರದೇಶದಲ್ಲಿ ಪೊಲೀಸರು ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಡ್ರಗ್ಸ್ ತಗೆದುಕೊಂಡವರು ನಶೆಯಲ್ಲಿ ಕುಣಿಯುತ್ತಿದ್ದವರು ಪೊಲೀಸರನ್ನು ಕಂಡು ಪರಾರಿಯಾಗಿದ್ದಾರೆ. ರೆಸಾರ್ಟ್ ಗೆ ಹೊಂದಿಕೊಂಡಿರುವ ನಿರ್ಜನ ಪ್ರದೇಶದಲ್ಲಿ ರೇವ್ ಪಾರ್ಟಿ ನಡೆಸಲಾಗಿದೆ. ಉದ್ಯಮಿಗಳ ಮಕ್ಕಳು, ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಡಿಜೆ. ಕಲರ್ ಫುಲ್ ಲೈಟಿಂಗ್, ಡ್ರಗ್ಸ್ ನೊಂದಿಗೆ ಭರ್ಜರಿ ಪಾರ್ಟಿ ನಡೆಸಿದ್ದಾರೆ. ಮಾಹಿತಿ ತಿಳಿದ ಪೊಲೀಸರು ದಾಳಿ ಮಾಡಿದ್ದಾರೆ. ಪೊಲೀಸ್ ದಾಳಿಯ ವೇಳೆ ಅಲ್ಲಿದ್ದವರು ಪರಾರಿಯಾಗಿದ್ದು, ಬೆನ್ನಟ್ಟಿದ…

ಟಾರ್ಗೆಟ್ ಇಂಡಿಯಾ!! ,ಭಾರತದ ನೆಲದಲ್ಲಿ ಬಾಂಬ್ ಬಿತ್ತುವ ಟಾಸ್ಕ್..!!

Writing; ಪರಶಿವ ಧನಗೂರು ಟಾರ್ಗೆಟ್ ಇಂಡಿಯಾ!! ಭಾರತದ ನೆಲದಲ್ಲಿ ಬಾಂಬ್ ಬಿತ್ತುವ ಟಾಸ್ಕ್..!! ಈ ಪಾಪಿ ಪಾಕಿಸ್ತಾನಕ್ಕೆ ಬುದ್ಧಿ ಬರುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಮತ್ತೆ ತನ್ನ ಹಳೇ ಚಾಳಿ ಮುಂದುವರಿಸಿರುವ ಕೊಳಕು ಮನಸ್ಸಿನ ಭಯೋತ್ಪಾದಕರ ನೆಲೆಬೀಡಾದ ಈ ಪಾಕಿಸ್ತಾನ ಭಾರತದ ಮೇಲೆ ಹೆಚ್ಚಿನ ಹಿಂಸಾತ್ಮಕ-ವಿಧ್ವಂಸಕ ದಾಳಿಗೆ ಈಗ ಮತ್ತೊಂದು ಬ್ರಹತ್ ಸಂಚು ರೂಪಿಸಿ ಕುಳಿತಿರುವ ಸಾಧ್ಯತೆಯೇ ಗೋಚರಿಸುತ್ತಿದೆ! ಅತ್ತ ಆಫ್ಘಾನಿಸ್ತಾನದದಲ್ಲಿ ಕ್ರೂರ ಭಯೋತ್ಪಾದಕ ತಾಲಿಬಾನಿಗಳಿಗೆ ಅಧಿಕಾರ ಸಿಗುತ್ತಿದ್ದಂತೆ ಮತ್ತಷ್ಟು ರೆಕ್ಕೆ ಪುಕ್ಕ ಕಟ್ಟಿ…

ಕೌಟುಂಬಿಕ ಕಲಹ ಒಂದೇ ಕುಟುಂಬದ ಐವರು ಆತ್ಮಹತ್ಯೆ

ಬೆಂಗಳೂರು,ಸೆ,17:ಕಂದಮ್ಮನನ್ನು ಕೊಂದು ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ತಿಗಳರಪಸಳ್ಯದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.ಶಾಸಕರ  ಪತ್ರಿಕ ಸಂಪಾದಕ ಶಂಕರ್ ಕುಟುಂಬದ ಐದು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು ಶಂಕರ್ ಪತ್ನಿ ಭಾರತಿ(50), ಮಗಳು ಸಿಂಚನ(33), 2ನೇ ಮಗಳು ಸಿಂಧುರಾಣಿ (30), ಮಗ ಮಧುಸಾಗರ್(27), ಹಾಗೂ 9 ತಿಂಗಳ ಮಗು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಸಿಂಚನ ಮಗಳು ಬದುಕುಳಿದಿದ್ದಾಳೆ. ನಾಲ್ಕು ದಿನಗಳ ಹಿಂದೆ ಬ್ಯಾಡರ್ ಹಳ್ಳಿಯ ಚೇತನ್ ಸರ್ಕಲ್ 4 ಕ್ರಾಸ್ ನಲ್ಲಿರೋ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರೋ…

ಹಾಸ್ಯ ನಟ ರಾಜು ತಾಳಿಕೋಟೆ ವಿರುದ್ಧ ಹಲ್ಲೆ ಆರೋಪ

ವಿಜಯಪುರ,ಸೆ,೧೪: ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟ ರಾಜು ತಾಳಿಕೋಟೆ ವಿರುದ್ಧ ಸೋದರಳಿಯನ ಪತ್ನಿ ಮೇಲೆ ಹಲ್ಲೆ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಕೌಟುಂಬಿಕ ಕಲಹದಿಂದಾಗಿ, ಅಕ್ಕನ ಪುತ್ರ ಫಯಾಜ್ ಕರಜಗಿ ಪರವಾಗಿ ನಿಂತು ರಾಜು ಅವರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಫಯಾಜ್ ಅವರ ಪತ್ನಿಯ ಮೇಲೆ ಹಲ್ಲೆ ನಡೆಸಿ, ಬಲವಂತಾಗಿ ವಿಷ ಕುಡಿಸಿರುವ ಆರೋಪ ಮಾಡಲಾಗಿದ್ದು, ಪ್ರಸ್ತುತ ಸನಾ ಕರಜಗಿ(ಫಯಾಜ್ ಪತ್ನಿ) ವಿಜಯಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಸನಾ ಕರಜಗಿ ಅವರ ತಾಯಿ ಫಾತಿಮಾ…

ಕಾವೇರಿ ವನ್ಯಧಾಮ ವಲಯದಲ್ಲಿ ಮರಿ ವೀರಪ್ಪನ್ ಗಳ ಹಾವಳಿ!!

Writing: ಪರಶಿವ ಧನಗೂರು ಕಾವೇರಿ ವನ್ಯಧಾಮ ವಲಯದಲ್ಲಿ ಮರಿ ವೀರಪ್ಪನ್ ಗಳ ಹಾವಳಿ!! ಒಂದು ಕಾಲಕ್ಕೆ ದಂತಚೋರ, ಕಾಡುಗಳ್ಳ,ನರಹಂತಕ ವೀರಪ್ಪನ್ ಹಾವಳಿಯಿಂದ ಕುಖ್ಯಾತಿ ಪಡೆದಿದ್ದ ಕರ್ನಾಟಕ ತಮಿಳುನಾಡು ಗಡಿಯ ಕಾವೇರಿ ವನ್ಯಧಾಮ ಅರಣ್ಯ ಪ್ರದೇಶದಲ್ಲಿ ಈಗ ಮತ್ತೆ ಕಾಡುಗಳ್ಳ ಮರಿವೀರಪ್ಪನ್ ಗಳ ಕಾಟ ಮಿತಿಮೀರುತ್ತಿದೆ! ಕಳೆದವಾರ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಬಳಿಯ ಬಸವನಬೆಟ್ಟ ಕಾವೇರಿ ವನ್ಯಧಾಮ ಅರಣ್ಯ ವಲಯದಲ್ಲಿ ರಾತ್ರಿವೇಳೆ ಎರಡು ಜಿಂಕೆ ಗಳನ್ನು ಗುಂಡಿಟ್ಟು ಕೊಂದು ಬೇಟೆಯಾಡುತಿದ್ದ ಮೂವರು ಕಾಡುಗಳ್ಳರ ಮೇಲೆ ಗುಂಡಿನ…

ಡಬಲ್ ಮರ್ಡರ್ ವ್ಯಕ್ತಿಗಳ ಚಹರೆ ಪತ್ತೆ;ಗಾಂಜಾ ಏಟಿಗೆ ಬಲಿಯಾದ್ರಾ ಇಬ್ಬರು?

ಬೆಂಗಳೂರು,ಸೆ,02: ನಗರದ ಹೊರವಲಯದ ಆನೇಕಲ್ ತಾಲ್ಲೂಕಿನ ಸಿಂಗೇನ ಅಗ್ರಹಾರದ ಗೋಲ್ಡ್ ಕಾಯಿನ್ ಕ್ಲಬ್ ಎದುರಿನ ನಿರ್ಜನ ನೀಲಗಿರಿ ತೋಪಿನಲ್ಲಿ ನಡೆದಿದ್ದ ಡಬಲ್ ಮರ್ಡರ್ ವ್ಯಕ್ತಿಗಳ ಮಾಹಿತಿ ಲಭ್ಯವಾಗಿದ್ದು ರವಿಕುಮಾರ್ ಮತ್ತುಕೊಲ್ಕತ್ತಾ ಮೂಲದ ಚಂದನ್ ಗುಪ್ತಾ ಎಂಬುದು ಗೊತ್ತಾಗಿದೆ. ಘಟನಾ ಸ್ಥಳದ ಸಮೀಪದ ಏರಿಯಾದ ನಿವಾಸಿ ರವಿಕುಮಾರ್. ಚಂದನ್ ಹುಸ್ಕೂರು ಸಮೀಪದ ಘಟ್ಟಹಳ್ಳಿಯಲ್ಲಿ ವಾಸವಿದ್ದನೆನ್ನಲಾಗಿದೆ. ಘಟನಾ ಸ್ಥಳಕ್ಕೆ ಐಜಿಪಿ ಚಂದ್ರಶೇಖರ್, ಎಎಸ್ಪಿ ಲಕ್ಷ್ಮಿ ಗಣೇಶ್, ಡಿವೈಎಸ್ಪಿ ಮಲ್ಲೇಶ್  ಆಗಮಿಸಿ ಸ್ಥಳಪರಿಶೀಲನೆ ನಡೆಸಿ ಈ ನಿಗೂಢ ಕೋಲೆಗಳ ಹಿಂದಿನ ಸತ್ಯ…

error: Content is protected !!