ಸಿನೆಮಾ
ಐತಿಹಾಸಿಕ ವಿಭಿನ್ನ ಚಿತ್ರ ‘ಅಲ್ಲಮ ಪ್ರಭು’
12ನೇ ಶತಮಾನದ ಇತಿಹಾಸವುಳ್ಳ ಶ್ರೀ ಅಲ್ಲಮಪ್ರಭು ಚಿತ್ರದ ಚಿತ್ರೀಕರಣ ಇತ್ತೀಚೆಗೆ ಮುಕ್ತಾಯಗೊಂಡಿತು. ಡಾ.ಸಂಜಯ್ ಮತ್ತು ಅಂಕಿತಾ ಶಿವ-ಪಾರ್ವತಿಯಾಗಿ ಅಭಿನಯಿಸಿದ ವಿಭಿನ್ನವಾದ ಹಾಡನ್ನು ಚಿತ್ರೀಕರಣದ ಕೊನೆಯ ಭಾಗವಾಗಿ ಬೆಂಗಳೂರಿನಲ್ಲಿ ಚಿತ್ರಿಸಲಾಯಿತು. ಚಿತ್ರವು ಕನ್ನಡ ಮಾತ್ರವಲ್ಲದೆ ತೆಲುಗು, ಹಿಂದಿ, ಮರಾಠಿ, ಮಲಯಾಳಂ ಭಾಷೆಯಲ್ಲಿ ತಯಾರಾಗುತ್ತಿರುವುದಾಗಿ ನಿರ್ಮಾಪಕರಲ್ಲೊಬ್ಬರಾದ ಮಾಧವಾನಂದ.ವೈ ತಿಳಿಸಿದ್ದಾರೆ. ಇವರಿಗೆ ಮಹಾವೀರಪ್ರಭು ನಿರ್ಮಾಣದಲ್ಲಿ ಜೊತೆಗೂಡಿದ್ದಾರೆ. ಈ ಚಿತ್ರವನ್ನು ಶರಣ್ ಗದ್ವಾಲ್ ನಿರ್ದೇಶನ ಮಾಡುತ್ತಿದ್ದು, ಆರ್.ಗಿರಿ ಛಾಯಾಗ್ರಾಹಕರಾಗಿದ್ದಾರೆ. ಕುಮಾರ್ ಈಶ್ವರ್ ಸಂಗೀತ, ಬಿ.ಎಸ್.ಕೆಂಪರಾಜ್ ಸಂಕಲನ, ರಮೇಶ್ ಬಾಬು ವರ್ಣಾಲಂಕಾರ, ಬೆಳ್ಳಿ ಚುಕ್ಕಿ…