Browsing: ವಾಣಿಜ್ಯ

ವಾಣಿಜ್ಯ

ಕೊರೊನಾ ಔಷಧಗಳ ಮೇಲಿನ ಜಿಎಸ್ ಟಿ ಕಡಿತ

ನ ವದೆಹಲಿ,ಜೂ.12: ಕೊರೋನಾ ವೈರಸ್ ಚಿಕಿತ್ಸೆಗಾಗಿ ಬಳಸುವ ಉಪಕರಣ, ಔಷಧಿ, ಇಂಜೆಕ್ಷನ್ ಮೇಲಿನ ತೆರಿಗೆ ನಿರ್ಧರಿಸಲು ಕರೆದಿದ್ದ 44ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಕೆಲ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದರಲ್ಲಿ ದೇಶದಲ್ಲಿ ಹೆಚ್ಚಾಗುತ್ತಿರುವ ಬ್ಲಾಕ್ ಫಂಗಸ್ ಚಿಕಿತ್ಸೆಯ ಚುಚ್ಚು ಮದ್ದಿನ ಮೇಲಿನ ಜಿಎಸ್ ಟಿ ಯನ್ನು ಸಂಪೂರ್ಣ ಕಡಿತಗೊಳಿಸಲಾಗಿದೆ. ಕೌನ್ಸಿಲ್ ಸಭೆ ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಮುಖ ನಿರ್ಧಾರಗಳನ್ನು ಘೋಷಿಸಿದರು. ಕೋವಿಡ್ ಸಂಬಂಧಿತ ಉಪಕರಣಗಳ ಮೇಲಿನ ತೆರಿಗೆ ಕಡಿತಗೊಳಿಸಲಾಗಿದೆ ಎಂದು ಸೀತಾರಾಮನ್ ಹೇಳಿದರು. ಚಿಕಿತ್ಸೆ…

ಬಿಟ್ಕಾಯಿನ್ನ‌ನಂತ ಕಿಪ್ಟೋಕರೆನ್ಸೆಗಳ ಬಗ್ಗೆ ರಿಜರ್ವಬ್ಯಾಂಕ್ ದೃಷ್ಟಿಕೋನಬದಲಾಗಿಲ್ಲ;ಶಕ್ತಿಕಾಂತ್ ದಾಸ್ ಸ್ಪಷ್ಟನೆ

ಮುಂಬೈ,ಜೂ,04: ಬಿಟ್‌ಕಾಯಿನ್‌ನಂತಹ ಕ್ರಿಪ್ಟೋಕರೆನ್ಸಿಗಳ ಬಗ್ಗೆ ರಿಸರ್ವ್ ಬ್ಯಾಂಕಿನ ದೃಷ್ಟಿಕೋನವು ಬದಲಾಗಿಲ್ಲ ಆ ಬಗ್ಗೆ ಕಳವಳಗಳನ್ನುಹೊಂದಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. ಆರ್‌ಬಿಐ ನೀತಿ ನಿರೂಪಣೆ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಯಾವುದೇ ಸಾರ್ವಭೌಮತ್ವವನ್ನು ಹೊಂದಿರದ ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮಾಡುವ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿರುವ ಆರ್‌ಬಿಐ ಈ ವಿಷಯದ ಬಗ್ಗೆ 2018 ರಲ್ಲಿ ಮೊದಲ ಬಾರಿಗೆ ಸುತ್ತೋಲೆ ಹೊರಡಿಸಿತ್ತು. ಅಂತಹಾ ಕ್ಷೇತ್ರಗಳಲ್ಲಿ ವ್ಯವಹರಿಸುವ, ನಿಯಂತ್ರಿಸುವ ಘಟಕಗಳನ್ನು ಅದು ನಿರ್ಬಂಧಿಸಿತ್ತು. ಆದಾಗ್ಯೂ, 2020…

ಮತ್ತೇ ತೈಲೋತ್ಪನ್ನಗಳ ದರ ಏರಿಕೆ

ನವದೆಹಲಿ,ಮೇ,೨೭: ಕಳೆದ ಎರಡು ದಿನ ತೈಲೋತ್ಪನ್ನಗಳ ದರ ಏರಿಕೆಯಾಗಿರಲಿಲ್ಲ ಇಂದು ಮತ್ತೇ ದಿಡೀರ್ ಬೆಲೆ ಏರಿಕೆಯಾಗಿದ್ದು, ಪೆಟ್ರೋಲ್ ಪ್ರತಿ ಲೀಟರ್‌ಗೆ ೨೫ ಪೈಸೆ , ಡೀಸೆಲ್ ೩೦ ಪೈಸೆ ಎರಿಕೆ ಕಂಡಿದೆ ಆ ಮೂಲಕ ದೇಶದ ಹಲವು ಭಾಗಗಳಲ್ಲಿ ಪೆಟ್ರೋಲ್ ದರ ೧೦೦ ರೂ ಗಡಿದಾಟಿದೆ. ಕಳೆದೊಂದು ವಾರದ ಅಂತರದಲ್ಲಿ ಸತತ ೬ನೇ ಬಾರಿಗೆ ತೈಲೋತ್ಪನ್ನಗಳ ದರ ಏರಿಕೆ ಮಾಡಲಾಗಿದೆ. ಇಂದಿನ ದರ ಏರಿಕೆ ಬಳಿಕ ದೆಹಲಿಯಲ್ಲಿ ಪೆಟ್ರೋಲ್ ೯೩.೭೪ರೂ ಮತ್ತು ಡೀಸೆಲ್ ೮೪.೬೭ರೂ ಗೆ ಏರಿಕೆಯಾಗಿದೆ.…

ಆರ್ ಬಿ ಐ ಹೆಚ್ಚುವರಿ ಹಣ 99,122 ಕೋಟಿ ರೂ ಕೇಂದ್ರಕ್ಕೆ ವರ್ಗಾವಣೆ

ನವದೆಹಲಿ, ಮೇ,21:ಆರ್ ಬಿ ಐ ಹೆಚ್ಚುವರಿ ಹಣ 99,122 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರಕ್ಕೆ ವರ್ಗಾವಣೆ ಮಾಡಲು ಒಪ್ಪಿಗೆ ನೀಡಿದೆ. ಈ ಸಂಬಂಧ ಆರ್ ಬಿ ಐ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದಲ್ಲಿ ನಡೆದ ಆರ್ ಬಿ ಐ ಮಂಡಳಿ ಯ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಆರ್‌ಬಿಐ ಮಂಡಳಿಯ ಪ್ರಕಾರ, ಪ್ರಸ್ತುತ ಆರ್ಥಿಕ ಪರಿಸ್ಥಿತಿ, ಜಾಗತಿಕ ಮತ್ತು ದೇಶೀಯ ಸವಾಲುಗಳು ಮತ್ತು ಕೋವಿಡ್ ಎರಡನೇ ಅಲೆ ಆರ್ಥಿಕತೆಯ ಮೇಲೆ ಉಂಟು ಮಾಡಿರುವ ಪ್ರತಿಕೂಲ ಪರಿಣಾಮವನ್ನು ತಗ್ಗಿಸುವ ಸಲುವಾಗಿ…

ಭಾರೀ ಏರಿಕೆ ಕಂಡ ಚಿನ್ನದ ಬೆಲೆ

ಮುಂಬ್ಯೆ,ಮೇ,೧೮: ಭಾರತದಲ್ಲಿ ಚಿನ್ನದ ಬೆಲೆ ಕೊಂಚ ಏರಿಕೆಯಾಗಿದೆ. ಎರಡು ದಿನಗಳ ಹಿಂದೆ ೧೦ ಗ್ರಾಂಗೆ ೨೨ ಕ್ಯಾರೆಟ್ ಚಿನ್ನದ ಬೆಲೆ ೪೫,೦೬೦ ರೂ ಇತ್ತು ಇಂದು೪೬,೩೪೦ ರೂಗೆ ಏರಿಕೆಯಾಗಿದೆ. ಅದರೆ ದೇಶದ ಬೇರೆ ಬೇರೆ ನಗರಗಳಲ್ಲಿ ಬೆಲೆಯಲ್ಲಿ ಒಂದಿಷ್ಟು ವ್ಯತ್ಯೆಯಗಳಾಗಿವೆ ಎಲ್ಲಿ ಯಾವ ನಗರದಲ್ಲಿ ಎಷ್ಟಿದೆ ಎನ್ನುವ ಮಾಹಿತಿ ಇಲ್ಲಿದೆ: ಬೆಂಗಳೂರಿನಲ್ಲಿ ೨೪ ಕ್ಯಾರೆಟ್ ೧೦ ಗ್ರಾಂ ಚಿನ್ನದ ಬೆಲೆ ೨ ದಿನಗಳ ಹಿಂದೆ ೪೮,೯೮೦ ರೂ. ಇದ್ದುದು ಇಂದು ೪೯,೨೭೦ ರೂ.ಗೆ ಏರಿಕೆಯಾಗಿದೆ. ೨೨ ಕ್ಯಾರೆಟ್‌ನ…

ಈ ದೇಶ ಕಂಡರಿಯದ ಭೀಕರ ಸವಾಲು ಕೊರೊನಾ; ರಘುರಾಮ್

ನವದೆಹಲಿ, ಮೇ,16:ಈ ದೇಶದಲ್ಲಿ ಎಂದೂ ಕಂಡರಿಯದ ಭೀಕರ ಸವಾಲುಗಳನ್ನು ಎದುರಿಸುತ್ತಿದೆ.ಒಂದು ಕಡೆ ಚಿಕಿತ್ಸೆ ಸಿಗದೆ ಕೊರೊನಾ ರೋಗಿಗಳು ಸಾಯಿತ್ತಿದ್ದರೆ ಇನ್ನೊಂದೆಡೆ ಸಣ್ಣ ಮತ್ತು ಮಧ್ಯಮ ಕ್ಷೇತ್ರಗಳು ದಿವಾಳಿಯತ್ತ ಸಾಗುತ್ತಿವೆ ಎಂದು ರಿಜರ್ವ್‌ಬ್ಯಾಂಕು ಮಾಜಿ ಗೌವರ್ನರ್ ರಘುರಾಮ್ ರಾಜನ್ ಕಳವಳ ವ್ಯಕ್ತಪಡಿಸಿದ್ದಾರೆ. ಚಿಕಾಗೋ ವಿಶ್ವವಿದ್ಯಾನಿಲಯ ದೆಹಲಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.. ಹಲವಾರು ಕಡೆ ಕೊರೊನಾ ರೋಗಿಗಳಿಗೆ ಕನಿಷ್ಠ ಚಿಕಿತ್ಸೆ ಸಿಗದೆ ಒದ್ದಾಡುತ್ತಿದ್ದಾರೆ ಇಂತವರ ಪಾಲಿಗೆ ಸರ್ಕಾರ ಇಲ್ಲವೇ ಇಲ್ಲ ಎಂಬ ಭಾವನೆ ಬಂದಿದ್ದರೆ ಅದು ಸತ್ಯ.ಕೊರೊನಾ ಮಹಾಮಾರಿ ದಿನೇ…

28 ರಂದು ಜಿಎಸ್ ಟಿ ಮಂಡಳಿ ಸಭೆ: ಕೋವಿಡ್ ಪರಿಕರಗಳ ಕುರಿತು ಚರ್ಚೆ

ನವದೆಹಲಿ,ಮೇ,16:ಇದೇ‌ ತಿಂಗಳ 28 ರಂದು ಜಿಎಸ್ ಟಿ ಮಂಡಳಿ ಸಭೆ ನಡೆಯಲಿದ್ದು .ಈ ವೇಳೆ ಕೋವಿಡ್ ಔಷಧೀಯ ಪರಿಕರಗಳ ಮೇಲಿನ ತೆರಿಗೆ ದರಗಳ ಕುರಿತು ಚರ್ಚಿಸುವ ಸಾಧ್ಯತೆಗಳಿವೆ. ಜಿಎಸ್ ಟಿ ವ್ಯವಸ್ಥೆಯಿಂದ ರಾಜ್ಯಗಳ‌ಮೇಲಿನ ವರಮಾನ ಕೊರತೆಯನ್ನು ಯಾವ ರೀತಿ ತುಂಬಿಕೊಡಬಹುದು ಎನ್ನುವ ವಿಷಯ ಕುರಿತು ಚರ್ಚೆಗೆ ಬರಲಿವೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ನೇತೃತ್ವದಲ್ಲಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಭೆ ನಡೆಯಲಿದೆ. ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ…

error: Content is protected !!