Browsing: ಲೇಖನ

ಲೇಖನ

ಸಿಬಿಐ ತನಿಖಾ ಸಂಸ್ಥೆ ಹುಟ್ಟಿಗೆ ಕಾರಣರಾದ ಲಾಲ್ ಬಹಾದ್ದೂರು ಶಾಸ್ತ್ರಿ

ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು  ದೇಶದ ಶಾಂತಿ ಸುವ್ಯವಸ್ಥೆ ಹಾಗೂ ಶಕ್ತಿ ಶಾಲಿ ಭಾರತವನ್ನು ನಿರ್ಮಿಸುವ ನಿಟ್ಟಿನಲ್ಲಿ ಅವರು ತಗೆದು ಕೊಂಡ ಹಲವಾರು ಯೋಜನೆಗಳ ಕುರಿತು ಸಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಸಿಬಿಐ ಸಂಸ್ಥೆ ಹುಟ್ಟಿಗೆ ಕಾರಣರಾದ ಲಾಲ್ ಬಹಾದ್ದೂರ್ ಶಾಸ್ತ್ರಿ ಬರಹ; ದಿನೇಶ್ ಕಲ್ಲಳ್ಳಿ ಬಡತನದಲ್ಲಿಯೇ ಹುಟ್ಟಿ ಬಡತನದಲ್ಲಿಯೇ ಬೆಳೆದು ಬಡತನದಲ್ಲಿಯೇ ಮರಣ ಹೊಂದಿದ ಭಾರತದ ಏಕೈಕ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ .. ಪ್ರಧಾನಿಯಾಗಿ ಶಾಸ್ತ್ರೀಜಿ ಇಟ್ಟ ದಿಟ್ಟ…

ಸಿಎಂ ಬೊಮ್ಮಾಯಿ ಮಾಡಿದ ಭಾಷಣದ ಮೋಡಿ

ಸಿ.ರುದ್ರಪ್ಪ,ಹಿರಿಯ ಪತ್ರಕರ್ತರು ಬೆಂಗಳೂರು,ಸೆ,20:ಬೆಲೆ ಏರಿಕೆ ನಿಲುವಳಿ ಸೂಚನೆ ಚರ್ಚೆಗೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಇಂದು ವಿಧಾನಸಭೆಯಲ್ಲಿ ಸುಧೀರ್ಘ ಉತ್ತರ ನೀಡಿದರು.ತಮ್ಮ ಮೊದಲ ಪ್ರಯತ್ನದಲ್ಲಿಯೇ ಉತ್ತಮ ಸಂಸದೀಯ ಪಟುವಾಗಿ ವಿಜೃಂಭಿಸಿದರು.ಏಟಿಗೆ ಎದಿರೇಟು ;ಪಟ್ಟಿಗೆ ಪ್ರತಿ ಪಟ್ಟು;ಲಯಬದ್ಧ ಮಾತುಗಾರಿಕೆ;ನಾಟಕೀಯ ಸ್ಪರ್ಶ-ಒಟ್ಟಿನಲ್ಲಿ ತಾವೊಬ್ಬ ಪ್ರಚಂಡ ಭಾಷಣಕಾರರೆಂದು ಸಾಬೀತು ಪಡಿಸಿದರು.ಜೆ ಎಚ್ ಪಟೇಲರು ಮುಖ್ಯಮಂತ್ರಿಯಾಗಿ ಮಾಡಿದ ಮೊದಲ ಭಾಷಣವನ್ನು ನೆನಪಿಸುವಂತಿತ್ತು.ಅವರು ಅಡಿಗ-ಕುವೆಂಪು;ಕಾಫ್ಕ-ಕಾಮು;ರಷ್ಯಾ ಕ್ರಾಂತಿ-ಫ್ರೆಂಚ್ ಕ್ರಾಂತಿ ಹೀಗೆ ಪಟೇಲರು ತಮ್ಮ ಭಾಷಣದಲ್ಲಿ ಇಡೀ ಪ್ರಪಂಚದ ಪರ್ಯಟನೆ ಮಾಡಿ ಬಿಟ್ಟಿದ್ದರು.ಆಗ ವಿರೋಧ ಪಕ್ಷದ…

ತಾಲಿಬಾನ್ ನ ಉದಯದೊಂದಿಗೆ,ಆಫ್ಘಾನಿಸ್ತಾನದ ಪತನ

ಅಫ್ಘಾನಿಸ್ತಾನದಲ್ಲಿ ಮಹಿಳೆಯರು ತಾಲಿಬಾನ್‌ ಆಳ್ವಿಕೆಯಲ್ಲಿಇದ್ದ ಪರಿಸ್ಥಿತಿಯ ಕುರಿತಂತೆ ಮತ್ತು ಸದ್ಯದ ಪರಿಸ್ಥಿತಿಯಲ್ಲಿ ಉದಯ ಮತ್ತು ಪತನ ಕುರಿತಂತೆ ಮಾನಸ ಅವರು ಇಲ್ಲಿ ಆಫ್ಘಾನಿಸ್ತಾನದ ಬೆಳವಣಿಗೆ ಕುರಿತಂತೆ ವಿಶ್ಲೇಷಿಸಿದ್ದಾರೆ. ಮಾನಸ,ಬೆಂಗಳೂರು ತಾಲಿಬಾನ್ ನ ಉದಯದೊಂದಿಗೆ,ಆಫ್ಘಾನಿಸ್ತಾನದ ಪತನ ಆಫ್ಘಾನಿಸ್ತಾನದ ಯುವತಿಯೊಬ್ಬಳು (ನಟಿ), ತನ್ನ ೨೦ ರ ಆಸುಪಾಸಿನಲ್ಲಿ ಆಫ್ಘಾನಿಸ್ತಾನದ ಮಹಿಳೆಯರು ಯಾವಾಗಲೂ ತಾಲಿಬಾನ್ ಆಳ್ವಿಕೆಯ ಭಾರವನ್ನು ಹೊಂದಿದ್ದರು ಎಂದು ಹೇಳಿದ್ದಾರೆ. ಅವರು ಇಸ್ಲಾಮಿಕ್ ನಿಯಮಗಳ ತಾಲೀಬಾನೀಕೃತ ಆವೃತ್ತಿಗೆ ಒಳಪಟ್ಟರು( ಇಸ್ಲಾಮಿಕ್ ಭೋಧನೆಗಳಿಗೆ ವಿರುದ್ಧವಾದ),ಇದು ಅವರಿಗೆ ಮೂಲಭೂತ ಹಕ್ಕುಗಳಾದ,ಚಳವಳಿಯ ಸ್ವಾತಂತ್ರ್ಯ ಶಿಕ್ಷಣಕ್ಕೆ…

ಆರ್ ಎಸ್ ನೋಡಿದರೆ ಸರ್ ಎಂ.ವಿ  ಮರೆಯದ ಹೆಸರು

ಜಿ.ಕೆ.ಹೆಬ್ಬಾರ್, ಶಿಕಾರಿಪುರ ಆರ್ ಎಸ್ ನೋಡಿದರೆ ಸರ್ ಎಂ.ವಿ  ಮರೆಯದ ಹೆಸರು ಇತ್ತೀಚಿನ ದಿನಗಳಲ್ಲಿ  ಸೇತುವೆ ನಿಮಿಸಿದವರು ಅವರು ಬದುಕಿದ್ದಾಗಲೇ ಕಟ್ಟಿದ ಸೇತುವೆಗಳು ಬಿದ್ದು ಹೋಗುತ್ತಿವೆ ಆದರೆ ಹಿಂದಿನ ಡ್ಯಾಂ ಸೇತುವೆಗಳು ಕಟ್ಟಿದ ವ್ಯಕ್ತಿ ನಿಧನ ರಾದರು ಅವರು ಕಟ್ಟಿದ ಸೇತುವೆಗಳು ಅಮಾರವಾಗಿವೆ ಅದಕ್ಕೆ ಸ ರ್ ಎಂ ವಿ.ನಿರ್ಮಿಸಿದ  ಕೆ ಆರ್ ಎಸ್ ಸಾಕ್ಷಿಯಾಗಿದೆ.  ಮೋಕ್ಷಗುಂಡಂ ವಿಶ್ವೇಶ್ವರಯ್ಯ ರವರು, ಭಾರತದ ಗಣ್ಯ ಅಭಿಯಂತರರಲ್ಲಿ ಒಬ್ಬರು. ಇವರು ೧೯೧೨ ರಿಂದ ೧೯೧೮ರವರೆಗೆ ಮೈಸೂರು ಸಂಸ್ಥಾನದ ದಿವಾನರಾಗಿದ್ದವರು. ಇವರ…

ಸಿಎಂ ಆಡಳಿತದಲ್ಲಿ ಮೇಜರ್ ಸರ್ಜರಿ ಮಾಡುವ ಅಗತ್ಯವಿದೆ

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸರಳತೆ ಮತ್ತು ಅಧಿಕಾರಿಗಳಿಗೆ ತಮ್ಮ ಕಾರ್ಯಗಳ ಕುರಿತು ಎಚ್ಚರಿಕೆ ನೀಡಿದರು..ಆದರೆ ಅಧಿಕಾರಿಗಳ ಆಸ್ತಿಗಳು ಹೇಗೆ ದ್ವಿಗಣವಾಗುತ್ತವೆ ಎನ್ನುವ ಕುರಿತು ಹಿರಿಯ ಪತ್ರಕರ್ತರಾದ ಸಿ.ರುದ್ರಪ್ಪ ಅವರು ಇಲ್ಲಿ ಬೆಳಕು ಚಲ್ಲಿದ್ದಾರೆ. ಸಿ.ರುದ್ರಪ್ಪ,ಹಿರಯಪತ್ರಕರ್ತರು ಸಿಎಂ ಆಡಳಿತದಲ್ಲಿ ಮೇಜರ್ ಸರ್ಜರಿ ಮಾಡುವ ಅಗತ್ಯವಿದೆ ಬೆಂಗಳೂರು,ಸೆ,10:CM ಇಮೇಜ್ :ಮಾಧ್ಯಮಗಳ ಸಂಭ್ರಮ -ಮುಖ್ಯಮಂತ್ರಿಯವರು ನಿನ್ನೆ TV ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಅವರ ಸ್ವಕ್ಷೇತ್ರ ಶಿಗ್ಗಾವಿಯಲ್ಲಿ ಕುಡಿಯುವ ನೀರಿನ ಘಟಕಗಳ ಅಸಮರ್ಪಕ ನಿರ್ವಹಣೆ ಬಗ್ಗೆ ಅವರ ಗಮನವನ್ನು ಸೆಳೆಯಲಾಯಿತು.ಆಗ ಅವರು ಹಾವೇರಿ ಡಿಸಿಗೆ…

ಐಕಾನ್ ಗಳ ಭೇಟೆ

ರಾಜಕಾರಣಿಗಳು ಮತ್ತು ಸಾಂಸ್ಕೃತಿಕ ವಲಯದ ನಂಟು ಹಾಗೂ ಅವರ ನಡುವಳಿಕೆಗಳು ಹೇಗಿರುತ್ತವೆ ಎನ್ನುವ ಕುರಿತು ತಮ್ಮ ವೃತ್ತಿ ಅನುಭವದಲ್ಲಿ ಆದ ಕೆಲ ಘಟನೆಗಳನ್ನು ಹಿರಿಯ ಪತ್ರಕರ್ತ ಸಿ.ರುದ್ರಪ್ಪ ಅವರು ಅತ್ಯಂತ ಮನೋಜ್ಞವಾಗಿ ಇಲ್ಲಿ ಬಿಡಿಸಿಟ್ಟಿದ್ದಾರೆ. ಸಿ.ರುದ್ರಪ್ಪ,ಹಿರಿಯ ಪತ್ರಕರ್ತರು ಐಕಾನ್ ಗಳ ಭೇಟೆ ಬಿಜೆಪಿಯ ಸಜ್ಜನ ರಾಜಕಾರಣಿಯೊಬ್ಬರ ಬಗ್ಗೆ ಇತ್ತೀಚೆಗೆ ಒಂದೆರಡು ಒಳ್ಳೆಯ ಮಾತುಗಳನ್ನು ಬರೆದಿದ್ದೆ.”ನಿಮಗೆ ಅವರ ಇನ್ನೊಂದು ಮುಖ ಗೊತ್ತಿಲ್ಲವೇ”ಎಂದು ಕೆಲವರು ನನ್ನನ್ನು ಕೇಳಿದರು.”ಇಲ್ಲ..ಅದನ್ನು ತಿಳಿದುಕೊಳ್ಳುವ ಅಗತ್ಯವೂ ಇಲ್ಲ.ನನ್ನ ದೃಷ್ಟಿಯಲ್ಲಿ ಅವರು ಸಜ್ಜನರಾಗಿಯೇ ಇರಲಿ”ಎಂದು ಸ್ಪಷ್ಟಪಡಿಸಿದೆ.…

ಶ್ರಾವಣ ಮಾಸದ ಕೃಷ್ಣಾಷ್ಟಮಿ ಮತ್ತು ಮತ್ತು ಆಚರಣೆ

ಕೃಷ್ಟಜನ್ಮಾಷ್ಟಮಿ ಮತ್ತು ಅದರ ಆಚರಣೆ ಹೇಗೆ .ಈ ಆಚರಣೆ ಹೇಗೆ ಬಂತು ಎನ್ನುವ ಕುರಿತು ಸರ್ವಮಂಗಳ ಅವರು ಇಲ್ಲಿ ವಿವರವಾಗಿ ತಿಳಿಸಿದ್ದಾರೆ ಶ್ರಾವಣ ಮಾಸದ ಕೃಷ್ಣಾಷ್ಟಮಿ ಮತ್ತು ಮತ್ತು ಆಚರಣೆ ಸರ್ವಮಂಗಳ ಶ್ರಾವಣ ಮಾಸ ಕೃಷ್ಣ ಪಕ್ಷದ ಅಷ್ಟಮಿ ತಿಥಿ ಯಂದು ಮದ್ಯರಾತ್ರಿಯಲ್ಲಿ ವಸುದೇವನ ಪತ್ನಿಯಾದ ದೇವಕಿಯು ಶ್ರೀಕೃಷ್ಣನಿಗೆ ಜನ್ಮವಿತ್ತಳು…. ಸೂರ್ಯನು ಸಿಂಹ ರಾಶಿಯಲ್ಲಿರುವಾಗ ಜನ್ಮೋತ್ಸವವನ್ನು ವೈಭವದಿಂದ ಆಚರಿಸಬೇಕು. .. ಕೃಷ್ಣ ಜನ್ಮಾಷ್ಟಮಿ ವ್ರತ ಆಚರಿಸುವವರು ಸಪ್ತಜನ್ಮಗಳಲ್ಲಿ ಮಾಡಿದ ಪಾಪಗಳಿಂದ ಮುಕ್ತರಾಗುವರು. ಕೃಷ್ಣ ಜನ್ಮಾಷ್ಟಮಿ ಉಪವಾಸ…

ಸಾಮಾಜಿಕ ತಾರತಮ್ಯವನ್ನು ಹೋಗಲಾಡಿಸಿದ ನಾರಾಯಣ ಗುರು

ಜಿ.ಕೆ.ಹೆಬ್ಬಾರ್, ಶಿಖಾರಿಪುರ ಇಂದು ಸಮಾಜಿಕ ಹರಿಕಾರ ಸಮಾಜದಲ್ಲಿನ ಜಾತಿ ಜಾತಿಗಳ ನಡುವಿನ ಕಂದಕವನ್ನು ಹೋಗಲಾಡಿಸಿ ಸಾಮಾಜಿಕ ತಾರತಮ್ಯ ಹೋಗಲಾಡಿಸಿದವರು ನಾರಾಯಣ ಗುರು ಅವರ ಜನ್ಮದಿನ ಇಂದು ಆ ಪ್ರಯುಕ್ತ ಜಿ.ಕೆ.ಹೆಬ್ಬಾರ್ ಅವರು ಬರೆದ ಲೇಖನ ಸಾಮಾಜಿಕ ತಾರತಮ್ಯ ಹೋಗಲಾಡಿಸಿದ ನಾರಾಯಣ ಗುರು ಕೇರಳರಾಜ್ಯದಲ್ಲಿ ಜಾತಿ, ಮತಭೇದಗಳು ಹೆಚ್ಚಾಗಿದ್ದ ಕಾಲದಲ್ಲಿ ‘ನಾರಾಯಣ ಗುರು,’ ವೆಂಬ, ಒಬ್ಬ ಸಮಾಜಕ ಸುಧಾರಕ, ಉದಯಿಸಿ, ಸಮಾಜದ ತಾರತಮ್ಯಗಳನ್ನು ಕಡಿಮೆಮಾಡಲು ಇಡೀಜೀವನವನ್ನು ಮುಡಿಪಾಗಿಟ್ಟರು. ಅವರು ಪ್ರತಿಪಾದಿಸಿದ ತತ್ವ, ಜಗತ್ತಿನಲ್ಲಿರುವುದು, ” ಒಂದೇಜಾತಿ, ಒಂದೇ ಮತ,…

ತೋಟಗಾರಿಕೆ ಪಿತಾಮಹ ಮರಿಗೌಡರ ಸಸ್ಯಕ್ಷೇತ್ರದಕೊಡುಗೆ 

ಜೀವನಕ್ಕೆ ದವಸ ಧಾನ್ಯ ನಂಬಿದ್ದ ರೈತಾಪಿ ವರ್ಗಕ್ಕೆ ಫಲಪುಷ್ಪ ಬೆಳೆಸುವ ಕಾಂಚಾಣ ಮಾರ್ಗವನ್ನು ತೋರಿಸಿದ ಕೀರ್ತಿ ಡಾ. ಎಂ.ಎಚ್‌. ಮರಿಗೌಡ ಅವರದು. ದೇಶದ ನಕಾಶೆಯಲ್ಲಿ ‘ತೋಟಗಾರಿಕೆ ಬೀಡು’ ಎಂಬ ಖ್ಯಾತಿ ಕರ್ನಾಟಕಕ್ಕೆ ದೊರೆಯಲು ಕಾರಣಕರ್ತ ಎನ್ನುವ ಅಗ್ಗಳಿಕೆಯೂ ಅವರಿಗೇ ಸಲ್ಲಬೇಕು.ಕರ್ನಾಟಕದುದ್ದಕ್ಕೂ ನೂರಾರು ತೋಟಗಾರಿಕಾ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಿದ ಈ ಮಹಾನ್‌ ಸಾಧಕ  ತೋಟಗಾರಿಕೆ ಪಿತಾಮಹ ಎಂದೇ ಕರೆಯುವ  ಡಾ.ಎಂ.ಎಚ್, ಮರಿಗೌಡರ 105 ನೇ ಜನ್ಮದಿನದ ಪ್ರಯುಕ್ತ ಈ ಲೇಖನ ತೋಟಗಾರಿಕೆ ಪಿತಾಮಹ ಮರಿಗೌಡರ ಸಸ್ಯಕ್ಷೇತ್ರದಕೊಡುಗೆ  ತಿರುಮಕೂಡಲು ನರಸೀಪುರ…

ರಾಜಕೀಯವಿಡಂಬನೆಚಿತ್ರವೊಂದರಸುತ್ತ..!

ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಾರ್ಟೂನ್ ಮಹತ್ವ ಕುರಿತು ಮತ್ತು ಅದರ ಹಿಂದಿನ ಮತ್ತು ಇಂದಿನ ಬಳಕೆ ಪತ್ರಿಕೋದ್ಯಮದಲ್ಲಿ ಅದಕ್ಕಿರುವ ಮಾನ್ಯತೆ ಕುರಿತು ಹಿರಿಯ ಪತ್ರಕರ್ತರು ಅಂತ ಕಾರ್ಟೂನ್‌ಗಳಿಗೆ ಸಾಕ್ಷಿಯಾದ ಸಿ.ರುದ್ರಪ್ಪ ಅವರು ಅದರ ಕುರಿತು ನೀಡಿರುವ ಮಾಹಿತಿ ಇಲ್ಲಿದೆ ರಾಜಕೀಯವಿಡಂಬನೆಚಿತ್ರವೊಂದರಸುತ್ತ..! ಸಿ.ರುದ್ರಪ್ಪ ಇದುಪ್ರಸಿದ್ಧಕಲಾವಿದಶ್ರೀಯುತಪಿಮಹಮ್ಮದ್‌ಅವರುಸುಮಾರು೮ ವರ್ಷಗಳಹಿಂದೆರಚಿಸಿದರಾಜಕೀಯವಿಡಂಬನೆಯಚಿತ್ರ.ಆರ್ಕೆಲಕ್ಷ್ಮಣ್,ಕೆಶಂಕರಪಿಳ್ಳೈ,ಅಬುಅಬ್ರಹಾಂಮೊದಲಾದವರಸಾಲಿಗೆಸೇರುವಮಹಮ್ಮದ್‌ಅದ್ಭುತವಾದಕಾರ್ಟೂನಿಸ್ಟ್.”ಸರ್‌ಈಚಿತ್ರನನಗೆಬೇಕಿತ್ತು”ಎಂದುಮನವಿಮಾಡಿಕೊಂಡಾಗಅದನ್ನುತಕ್ಷಣಕಳುಹಿಸಿಕೊಟ್ಟರು.ನಾನುಅವರೊಂದಿಗೆಸ್ವಲ್ಪಹೊತ್ತುಲೋಕಾಭಿರಾಮವಾಗಿಮಾತನಾಡುತ್ತಾ”ಪ್ರಜಾವಾಣಿಯಲ್ಲಿನಿಮ್ಮಕಾರ್ಟೂನ್‌ಗಳು ಯಾವಾಗಲೂ ಪೊಬ್ಲಿಷ್ ಆಗುತ್ತಿದ್ದವು.ಆಯಾಕಾಲಘಟ್ಟದ ರಾಜಕೀಯ ಕಾಮೆಂಟರಿಯನ್ನುನಿಮ್ಮಕಾರ್ಟೂನ್ಗಳೇಹೇಳಿಬಿಡುತ್ತಿದ್ದವು.ಆದರೆವಿಜಯಕರ್ನಾಟಕದಲ್ಲಿನಿಮ್ಮಕಾರ್ಟೂನ್ಗಳುಒಂದುಮೂಲೆಯಲ್ಲಿಚಿಕ್ಕದಾಗಿಬರುತ್ತಿದ್ದವು.ಆದ್ದರಿಂದಹೆಚ್ಚು ಅನ್ ಆಕ್ಟೀವ್ ಆಗಿರಲಿಲ್ಲ”ಎಂದೆ.ಆದರೆಮಹಮ್ಮದ್ ಅವರು”ವಿಜಯಕರ್ನಾಟಕಒಂದುಕಾರ್ಪೊರೇಟ್ಸಂಸ್ಥೆಗೆಸೇರಿದಪತ್ರಿಕೆ.ಅವರಿಗೆಅವರದ್ದೇಆದಕೆಲವುನಿಲುವುಗಳುಇರುತ್ತವೆ”ಎಂದುವಿವರಿಸಿದರು.ಅವರದ್ದುಸ್ಥಿತಪ್ರಜ್ಞೆ,ಸರಳಮತ್ತುಸಹಜನಡವಳಿಕೆ ಹಾಗೂ ಮಾಗಿದವ್ಯಕ್ತಿತ್ವ. ಈ ಕಾರ್ಟೂನ್‌ಅನ್ನುಮಹಮ್ಮದ್  ವರು ಯಡಿಯೂರಪ್ಪ ಬಿಜೆಪಿವರಿಷ್ಠರ ವಿರುದ್ಧ ಬಂಡಾಯವೆದ್ದು kjp ರಚಿಸಿದಾಗಪ್ರಕಟಿಸಿದ್ದರು.ತಮಗೆದ್ರೋಹಮಾಡಿರುವ ಬಿಜೆಪಿ ವಿರುದ್ಧಸೇಡುತೀರಿಸಿಕೊಳ್ಳಲುಯಡಿಯೂರಪ್ಪಹೊಸಪಕ್ಷಕಟ್ಟಲುಮುಂದಾಗಿದ್ದರು.ತಮ್ಮೊಂದಿಗೆಹೊಸಪಕ್ಷಕ್ಕೆಸುಮಾರುಹತ್ತುಸಚಿವರುಮತ್ತುಐವತ್ತಕ್ಕೂಹೆಚ್ಚುಬಿಜೆಪಿಶಾಸಕರುಬರುತ್ತಾರೆಎಂಬಅತೀವವಿಶ್ವಾಸವನ್ನುಯಡಿಯೂರಪ್ಪಹೊಂದಿದ್ದರು.ಆದರೂಮನಸ್ಸಿನಒಂದು ಮೂಲೆಯಲ್ಲಿತಮ್ಮಬೆನ್ನಿಗೆಕೆಲವರುಚೂರಿಹಾಕಬಹುದೆಂಬಸಂಶಯಅವರಿಗೆಇದ್ದೇಇತ್ತು.ಆದರೆತಮಗೆಅಖಂಡನಿಷ್ಠೆಪ್ರದರ್ಶಿಸುತ್ತಿದ್ದಬಸವರಾಜಬೊಮ್ಮಾಯಿ,ಮುರುಗೇಶನಿರಾಣಿ,ವಿ.ಸೋಮಣ್ಣ,ಉಮೇಶ್ಕತ್ತಿಮುಂತಾದವರಬಗ್ಗೆಅವರಿಗೆಕಿಂಚಿತ್ತೂಸಂಶಯವಿರಲಿಲ್ಲ.ಸಮೃದ್ಧಖಾತೆಗಳನ್ನುನಿರ್ವಹಿಸಿದ್ದಈಸಚಿವರುಚುನಾವಣಾಖರ್ಚಿಗೆಸಂಪನ್ಮೂಲಒದಗಿಸಬಹುದೆಂಬವಿಶ್ವಾಸವೂಅವರಿಗೆಇತ್ತು.ಕನಿಷ್ಠ೨೫…

ಹಣ್ಣು ಮುಕ್ಕಿತು ಹೂವಿನ ಹಕ್ಕಿ

ಚಿತ್ರಲೇಖನ – ಹ.ಸ.ಬ್ಯಾಕೋಡ ಆವತ್ತು ಭಾನುವಾರ ಬೆಳಿಗ್ಗೆ ಮಗಳೊಂದಿಗೆ ಮನೆಯ ಹತ್ತಿರದ ಕೆರೆಯ ದಂಡೆ ಮೇಲೆ ವಾಯುವಿಹಾರಕ್ಕೆ ಹೋಗಿದ್ದೆ. ಆ ಕೆರೆ ದಂಡೆಯ ಮೇಲೆ ಕೊಡೆಯಾಕಾರದಲ್ಲಿ ಬೆಳೆದು ನಿಂತಿದ್ದ ಗಸಗಸೆ ಗಿಡ ಗಮನಸೆಳೆಯಿತು. ಅದರಲ್ಲೂ ವಿಶೇಷವಾಗಿ ಕಾಣಿಸಿತು. ಕಾರಣ ಗಿಡದ ತುಂಬ ಬಿಳಿ ಬಣ್ಣದ ಸಣ್ಣ ಸಣ್ಣ ಹೂವುಗಳು ಅರಳಿದ್ದವು. ಅವುಗಳನ್ನು ನೋಡಿದ ಮಗಳು ಶ್ರೀವೇದ, ‘ಅಪ್ಪಾ, ಹೂವು ಬೇಕು ಹೂ… ಎಂದು ಒಂದೇ ಸಮನೆ ಹಠಹಿಡಿದಳು. ಆ ಕೂಡಲೇ ನನ್ನ ಕೊರಳಲ್ಲಿದ್ದ ಕ್ಯಾಮರಾವನ್ನು ಪಕ್ಕದ ಕಲ್ಲು…

ಮತ್ತೆ ಮೈದುಂಬಿಕೊಂಡಿದೆ ಮಾಗೋಡು ಜಲಪಾತ

ಮತ್ತೆ ಮೈದುಂಬಿಕೊಂಡಿದೆ ಮಾಗೋಡು ಜಲಪಾತ ಚಿತ್ರಲೇಖನ – ಹ.ಸ.ಬ್ಯಾಕೋಡ ಮಳೆಗಾಲ ಆರಂಭವಾಯಿತೆಂದರೆ ಸಾಕು ಕರಾವಳಿಯಲ್ಲಿ ಜಲಪಾತಗಳ ಅಬ್ಬರ ಆರಂಭವಾಗುತ್ತದೆ. ಮಲೆನಾಡಿನ ಪಶ್ಚಿಮ ಘಟ್ಟಕ್ಕೆ ಹೊಂದಿಕೊಂಡಿರುವ ಉತ್ತರ ಮತ್ತು ದಕ್ಷಿಣ ಕರಾವಳಿಯ ಘಟ್ಟದ ಮೇಲಿನ ಕೆಲ ಜಲಪಾತಗಳು ಮಳೆಗಾಲದಲ್ಲಿ ಮೈದುಂಬಿ ಹರಿಯುತ್ತವೆ. ಅದೇ ಜಲಪಾತಗಳು ಸುಡುಬಿಸಿಲಿನ ಬೇಸಿಗೆಯಲ್ಲಿ ನೀರಿಲ್ಲದೆ ಒಣಗಿ ಜಲಪಾತಗಳ ಜಾಗದಲ್ಲಿ ಕೇವಲ ಬಂಡೆಗಲ್ಲು ಗೋಚರಿಸುತ್ತಿರುತ್ತವೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಘಟ್ಟದ ಪ್ರದೇಶ ಯಲ್ಲಾಪುರ ಸಮೀಪದ ಮಾಗೋಡು ಜಲಪಾತ ಮಾತ್ರ ಎಲ್ಲ ಜಲಪಾತಗಳಿಗಿಂತ…

ಕನ್ನಡಿಗರು ಮರೆಯಲಾಗದ ಜಯದೇವಿತಾಯಿ ಲಿಗಾಡೆ

ಕನ್ನಡ ಸಾಹಿತ್ಯ ಲೋಕದ ಮಹಾನ್ ಸಾಧಕಿ.ಕರ್ನಾಟಕ ಏಕೀಕರಣಕ್ಕೆ ಹೋರಾಟಗಾರ್ತಿ.ಕನ್ನಡವೇ ಉಸಿರಾಗಿಸಿಕೂಂಡು ಬದುಕಿದ ಶರಣೆ “ಜಯದೇವಿತಾಯಿ ಲಿಗಾಡೆ “ಅವರ  ಜನುಮ ದಿನದ ಈ  ಸಂದರ್ಭದಲ್ಲಿ ಅವರನ್ನು ನೆನದು   ಅವರ ಕುರಿತು ‘ಕೆಂಧೂಳಿ’ ಲೇಖನದ ಮೂಲಕ ಗೌರವ ಸಲ್ಲಿಸುತ್ತದೆ ಕನ್ನಡಿಗರು ಮರೆಯಲಾಗದ ಜಯದೇವಿತಾಯಿ ಲಿಗಾಡೆ ಜಯದೇವಿತಾಯಿ ಲಿಗಾಡೆ ಅವರು ಕುಟುಂಬವತ್ಸಲೆ, ಸಾಹಿತ್ಯಸಾಧಕಿ, ಸಮಾಜಸೇವಕಿ ಹೀಗೆ ತ್ರಿವೇಣಿ ಸಂಗಮವಾಗಿದ್ದ ಈ ಜಂಗಮತಾಯಿ ತಾಯ್ನುಡಿಯ ಸೇವೆಗಾಗಿ ಸವೆದರು. ಕನ್ನಡ ನುಡಿಗೆ, ಕನ್ನಡ ನಾಡಿಗೆ ತನ್ನನ್ನು ಅರ್ಪಿಸಿಕೊಂಡು ಅಜರಾಮರ ಕೀರ್ತಿಪಾತ್ರರಾದ ಶ್ರೀಮತಿ ಜಯದೇವಿ ತಾಯಿ…

ಕನ್ನಡದ ನಿಲುವಿನಲ್ಲಿ ಸರ್ಕಾರದ ದೋರಣೆ

ತುರುವನೂರು ಮಂಜುನಾಥ ಮೊನ್ನೆ ಅಮೆಜಾನ್ ಮತ್ತು ಗೂಗಲ್ ಗಳು ಕನ್ನಡಭಾಷೆಗೆ ಅವಮಾನ ಮಾಡಿದ ವಿಷಯವನ್ನು ಸರ್ಕಾರ ಅಷ್ಟೊಂದು ಗಂಭೀರವಾಗಿ ಪರಿಗಣಿಸಲಿಲ್ಲ, ಒಂದು ಹೇಳಿಕೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಕೊಟ್ಟು ಸುಮ್ಮನಾಗಿ ಬಿಟ್ಟರು. ಆದರೆ ಅದರ ಹಿಂದೆ ಅಡಗಿರುವ ಉದ್ದೇಶವೇನು ಎನ್ನುವುದನ್ನು ಕೆದಕಲಿಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರವಾಗಲಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಾಗಲಿ ಅದರ ಹಿಂದೆ ಬೀಳಲಿಲ್ಲ ಆದ ಒಂದು ಘಟನೆಗೆ ಹೇಳಿಕೆಗಳನ್ನು ಬಿಡುಗಡೆ ಮಾಡಿ ತೆಪ್ಪಗಾಗಿಬಿಟ್ಟವು. ಇದು ಅಷ್ಟೊಂದು ಬೇಕಾಬಿಟ್ಟಿ ಕೆಲಸವೇ? ಒಂದು…

ದಕ್ಷಿಣ ಆಫ್ರಿಕ ಮತ್ತು ಗಾಂಧೀಜಿಯ ಧಾರ್ಮಿಕತೆ

ಗಾಂಧಿ ಎನ್ನುವ ಮಹಾತ್ಮನನ್ನು ನಾವು ನೆನಸಿಕೊಳ್ಳುವುದು ಕೇವಲ ಅವರ ಜಯಂತಿ ಮತ್ತು ಹುತ್ಮಾತದಿನ ಬಿಟ್ಟರೆ ಮತ್ತೇ ಅವರ ಬಗ್ಗೆ ಎಲ್ಲಿಯೂ ಪ್ರಸ್ತಾಪ ಮಾಡುವುದಿಲ್ಲ ಮಾಡಿದರೆ ಅದು ವಿಚಾರದಾರೆಗಳು ಅವರ ಸೈದ್ದಾಂತಿಕ ವಿಷಯಗಳ ಬಗ್ಗೆ ಪ್ರಸ್ತಾಪಗಳು ನಡೆಯುತ್ತಿರುತ್ತವೆ ಆದರೆ ದಕ್ಷಿಣ ಆಫ್ರಿಕಾದಲ್ಲಿ ಪ್ರತಿವರ್ಷ ಈ ಸಮಯದಲ್ಲಿ ನೆನಪು ಮಾಡಿಕೊಳ್ಳುತ್ತಾರೆ ಇನ್ನೊಂದು ವಿಶೇಷ ಎಂದರೆ ೧೮೯೩ ರಲ್ಲಿ ಅಲ್ಲಿನ ಪೀಟರ‍್ಮಾರ್ಟಿಸ್‌ಬರ್ಗನಲ್ಲಿ ರೈಲಿನಿಂದ ಹೊರತಳ್ಳಿದ ವಿಚಾರ ಇದೆಯಲ್ಲ ಇದರ ಬಗ್ಗೆ ಒಂದು ಗಂಭೀರ ಚರ್ಚೆಗಳು ನಡೆಯುತ್ತವೆ. ಯಾಕೆಂದರೆ ಆ ಘಟನೆಯಿಂದಲೇ ಗಾಂಧಿ…

ಪರಿಸರ ಮತ್ತು ಮಾನವ ಕಾಳಜಿ

ಜಗತ್ತಿಗೆ ಮತ್ತೊಂದು ಪರಿಸರ ದಿನ ಬಂದಿದೆ. ಗಿಡ ನೆಡುತ್ತೇವೆ, ಫೋಟೊ ತೆಗೆಸಿಕೊಳ್ಳುತ್ತೇವೆ. ನೆಟ್ಟ ಗಿಡ ನಾಳೆ ಚಿಗುರೊಡೆಯಿತೋ ಇಲ್ಲವೋ ಎಂದು ನೋಡುವ ವ್ಯವಧಾನ ನಮಗಿಲ್ಲ. ಮುಂದಿನ ವರ್ಷ ಅದೇ ಗುಂಡಿಯಲ್ಲಿ ಮತ್ತೆ ಗಿಡ ನೆಡುತ್ತೇವೆ. ಕಳೆದ ವರ್ಷ ನೆಟ್ಟ ಗಿಡ ಅದೃಷ್ಟವಶಾತ್‌ ದೊಡ್ಡದಾಗಿದ್ದರೆ, ಈ ಬಾರಿ ಸ್ವಲ್ಪ ಆಚೆಗೆ ಇನ್ನೊಂದು ಗಿಡ ನೆಟ್ಟರಾಯಿತು ಎಂಬ ಸಮಾಧಾನ. ಪರಿಸರ ಅಂದರೆ ಇಷ್ಟೇನಾ? ಗಿಡ ನೆಟ್ಟ ಪ್ರಮಾಣಕ್ಕಿಂತ, ಬೆಳೆದ ಮರಗಳ ಮಾರಣಹೋಮ ಅದೆಷ್ಟೋ ದೊಡ್ಡ ಪ್ರಮಾಣದಲ್ಲಿ ನಡೆದಿದೆಯಲ್ಲವೇ? ಯಾರದೋ ಮೇಲಿನ…

ಜಾರ್ಜ್ ಫೆರ್ನಾಂಡಿಸ್ ಮತ್ತು ಅವರ ಹೋರಾಟ

ಇಂದು ಸಮಾಜವಾದಿ ಹೋರಾಟಗಾರ ಜಾರ್ಜ್ ಫೆರ್ನಾಂಡಿಸ್ ಅವರ ಜನ್ಮದಿನದ ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಸಿ.ರುದ್ರಪ್ಪ ಅವರು ಬರೆದ ಈ ಲೇಖನ ಅವರ ಹೋರಾಟದ ಕುರಿತು ಬೆಳಕು ಚೆಲ್ಲಿದ್ದಾರೆ. ನಮ್ಮ ಊರು ಮತ್ತು ಸೋಷಿಯಲಿಸ್ಟ್ ಹೋರಾಟದ ಕರ್ಮ ಭೂಮಿ ಸಾಗರದಲ್ಲಿ ಅವರ ಹೆಸರು ಕೇಳಿದರೆ ನಮ್ಮ ಮನಸುಗಳಲ್ಲಿ ಮಿಂಚಿನ ಸಂಚಾರವಾಗುತ್ತಿತ್ತು.೧೯೭೫ ರಲ್ಲಿ ತುರ್ತು ಪರಿಸ್ಥಿತಿ ಮೊದಲು ಸಂಪೂರ್ಣ ಕ್ರಾಂತಿಯ ಕಹಳೆ ಮೊಳಗಿಸಲು ನಮ್ಮ ಊರಿಗೆ ಜಾರ್ಜ್ ಬಂದಿದ್ದರು.ರಾತ್ರಿ ಹನ್ನೆರಡರವರೆಗೂ ಸಾವಿರಾರು ಜನರು ಅವರ ಭಾಷಣಕ್ಕೆ ಕಾದು ನಿಂತಿದ್ದೆವು.ಭಾಷಣಕ್ಕೆ…

ಗಿರಿಶ್ ಕರ್ನಾಡ್ ಎಂಬ ಅಗಾಧ ಪ್ರತಿಭೆಯ ನೆನದು..

ಅವರು ಅತ್ಯಂತ ಕ್ರಿಯಾಶೀಲಾ ಮತ್ತು ಪ್ರಗತಿಪರ ಚಿಂತಕರು ಸೈದ್ದಾಂತಿಕನಿಲುವುಗಳ ಬದ್ಧತೆಯಲ್ಲೇ ಬದುಕಿದ ಮಹಾನ್ ಪ್ರತಿಭೆ ರಂಗಭೂಮಿ ತಜ್ಞರು,ನಟರು ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಟ್ಟದ್ದ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ತಮ್ಮದೇ ಆದ ಹೆಸರನ್ನು ಪಡೆದುಕೊಂಡ ಗಿರೀಶ್ ಕಾರ್ನಾಡ್ ಅವರ ಜನ್ಮ ದಿನ ಇಂದು ಆ ನಿಮಿತ್ತವಾಗಿ ಅವರ ಕುರಿತ ಒಂದು ಲೇಖನ. ಪುರಾಣ,ಇತಿಹಾಸ,ಜಾನಪದ ಸೊಗಡುಗಳ ಅಂಶಗಳನ್ನಿಟ್ಟುಕೊಂಡು ಬರೆದ ಅವರ ನಾಟಕಗಳು ಪಡೆದ ಯಶಸ್ಸು ಅವರನ್ನು ಉತ್ತಂಗಕ್ಕೇರಿಸಿತು ಸಾಹಿತ್ಯದ ವಲಯದಲ್ಲಿ ಹೆಚ್ಚು ಗುರುತಿಸಿಕೊಂಡರು ಸದಾ ಒಂದಲ್ಲೊಂದು ಚಿಂತನೆಯಲ್ಲಿಯೇ ತೊಡಗಿರುತ್ತಿದ್ದ…

ಬಸವಣ್ಣ ಮತ್ತು ಸಾಮಾಜಿಕ ಆಂದೋಲನ

ಬಸವಣ್ಣ೧೨ನೆಯ ಶತಮಾನವನ್ನು ಭರತಖಂಡದ ಧಾರ್ಮಿಕ ಪರಂಪರೆಯಲ್ಲಿ ಒಂದು ಚಿರಸ್ಮರಣೀಯ ಘಟ್ಟವನ್ನಾಗಿಸಿದ ಮಹಾವ್ಯಕ್ತಿ. ಇವರ ವ್ಯಕ್ತಿತ್ವ ಬಹುಮುಖವಾದುದಾದರೂ ಇವರನ್ನು ಕುರಿತು ಅನೇಕ ವ್ಯಕ್ತಿತ್ಚ ರಚಿತವಾಗಿದ್ದರೂ ಅವುಗಳಲ್ಲಿ ಯಾವುದರಲ್ಲೂ ಇವರ ವ್ಯಕ್ತಿತ್ವದ ಸಮಗ್ರ ಯಥಾವತ್ತಾದ ಚಿತ್ರಣ ಮೂಡಿ ಬಂದಿಲ್ಲ. ಅವೆಲ್ಲ ಪವಾಡಗಳಲ್ಲಿ ಹುದುಗಿ ಹೋಗಿವೆ. ಆದರೆ ೧೪೦೦ಕ್ಕೂ ಹೆಚ್ಚು ಸಂಖ್ಯೆಯಲ್ಲಿ ದೊರೆತಿರುವ ಇವರ ವಚನಗಳಿಂದ ಹಾಗೂ ಪುರಾಣಗಳಲ್ಲಿ ಸೂಚಿತವಾಗಿರುವ ಘಟನೆಗಳಿಂದ ಚಾರಿತ್ರಿಕ ಅಂಶಗಳನ್ನು ಹೆಕ್ಕಿ ತೆಗೆದು ಇವರ ಜೀವನಚಿತ್ರ & ಸಾಧನೆಗಳನ್ನೂ ಕಾಣಬೇಕಾಗಿದೆ. ಬಸವಣ್ಣನವರ ಬದುಕನ್ನು ವಿವಿಧ ಪುರಾಣಗಳ ನೆರವಿನಿಂದ…

‘ಅಮ್ಮ’ನಿಲ್ಲದ ‘ಅಮ್ಮನ ದಿನ’

ಜಿ.ಎನ್ ,ಶಿವಮೂರ್ತಿ ಐಎಎಸ್(ಬೆಂಗಳೂರು ಜಿಲ್ಲಾಧಿಕಾರಿಯಾಗಿದ್ದ ) ಅವರು ಅಮ್ಮನ ಕುರಿತು ಬರೆದ ಲೇಖನ .. ಪ್ರತಿ ಭಾನುವಾರ ಬೆಳಗಿನ ಹೊತ್ತಿಗೆ ಫೋನ್ ರಿಂಗಾಯಿತೆಂದರೆ ಅದು ಅಮ್ಮನ ಕರೆ ಎಂದೆ ಸಂಭ್ರಮದಿಂದ ಕರೆಯನ್ನು ಸ್ವೀಕರಿಸಿ ಆ ಧ್ವನಿಯ ಆಲಿಕೆಯಲ್ಲಿ ಅನಂದ ಪಡೆದುತ್ತಿದ್ದೆವು ,ಆದರೆ ಕಳೆದ ಮೂರು ವಾರಗಳಿಂದ ಆ ಧ್ವನಿಯ ಸದ್ದು ಮಮತೆಯ ಮಾತುಗಳು, ಬದುಕಿನ ನಡೆಯ ಆದರ್ಶದ ನುಡಿಗಳು ಇಲ್ಲದೆ ನಿನ್ನಂತೆಯೇ ಮನೆಯ ಪೋನ್ ಶಾಶ್ವತವಾಗಿ ಮೌನತಾಳಿದೆ. ಇಂದು ‘ಅಮ್ಮನ ದಿನ ‘ನೀನಲ್ಲದ ಈ ದಿನವನ್ನು ಯಾವ…

error: Content is protected !!