ಬೆಂಗಳೂರು
ಕೌಶಲ್ಯ ಅಭಿವೃದ್ಧಿಗೆ ಹೂಡಿಕೆ ಮಾಡಿ: ಉದ್ಯಮಿಗಳಿಗೆ ಸಚಿವ ಎಂಟಿಬಿ ನಾಗರಾಜ್ ಕರೆ
ಬೆಂಗಳೂರು,ಅ,18: ಕೌಶಲ್ಯ ಅಭಿವೃದ್ಧಿ ಗಾಗಿ ಹೂಡಿಕೆ ಮಾಡುವುದು ಉದ್ಯಮಗಳಿಗೆ ಎಷ್ಟು ಲಾಭದಾಯಕವೋ ಹಾಗೆಯೇ ಅದು ಉದ್ಯೋಗಿಗಳಿಗೂ ಪ್ರಯೋಜನಕಾರಿ.ಹಾಗಾಗಿ,ಉದ್ಯಮಿಗಳು ಕೌಶಲ್ಯಾಭಿವೃದ್ಧಿ ಕ್ಷೇತ್ರದಲ್ಲಿ ಹೆಚ್ಚು ಹೂಡಿಕೆಗೆ ಆದ್ಯತೆ ನೀಡಬೇಕು ಎಂದು ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜು ಕರೆ ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದಾಬಸ್ ಪೇಟೆಯ ಸೋಂಪುರ ಕೈಗಾರಿಕಾ ಪ್ರದೇಶದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ-ಎಫ್ ಕೆಸಿಸಿಐ ನಿರ್ಮಿಸಲು ಉದ್ದೇಶಿಸಿರುವ ‘ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಸ್ಕಿಲ್ ಡೆವಲಪ್‌ಮೆಂಟ್’…