Browsing: ಕ್ರೀಡೆ

ಕ್ರೀಡೆ

ಒಲಿಂಪಿಕ್ಸ್ ;ಆತನುದಾಸ್‍ಗೆ ಜಯ, ಪ್ರೀ ಕ್ವಾರ್ಟರ್ ಫೈನಲ್ ಗೆ

ಟೋಕಿಯೋ, ಜು. 29; ಭಾರತದ ಹಾಕಿ ತಂಡ, ಪಿ.ವಿ.ಸಿಂಧು, ಬಾಕ್ಸರ್ ವಿಕಾಸ್ ಕುಮಾರ್, ಶೂಟರ್ ಮನು ಬಾಕರ್ ಅವರು ಗೆಲುವಿನ ಮಿಂಚು ಹರಿಸಿದ್ದರೆ, ಪುರುಷರ ಆರ್ಚರಿಯಲ್ಲಿ ಆತನು ದಾಸ್ ಕೂಡ ಪ್ರೀ ಕ್ವಾರ್ಟರ್ ಫೈನಲ್‍ಗೇರುವ ಮೂಲಕ ಪದಕ ಆಸೆಯನ್ನು ಮೂಡಿಸಿದ್ದಾರೆ. ಇಂದು ನಡೆದ ಪುರುಷರ ಸಿಂಗಲ್ಸ್ ಅರ್ಚರಿ 32ರಲ್ಲಿ ಭಾರತದ ಬಿಲ್ಲುಗಾರ ಆತನುದಾಸ್ ಅವರು ದಕ್ಷಿಣ ಕೊರಿಯಾದ ಎರಡು ಬಾರಿ ಒಲಿಂಪಿಕ್ಸ್ ವಿಜೇತರಾದ ಜಿನ್ ಹ್ಯೇಕ್ರ ಸವಾಲನ್ನು ಎದುರಿಸಿದರೂ ಕೂಡ 6-4 ರಿಂದ ಗೆಲ್ಲುವ ಮೂಲಕ ಪ್ರಿ…

ಹಾಕಿ `ಎ’ ಪಂದ್ಯದಲ್ಲಿ ಭಾರತಕ್ಕೆ ಜಯ

ಟೋಕಿಯೊ,ಜು,೨೭: ಇಲ್ಲಿನ ಒಲಿಂಪಿಕ್ಸ್‌ನಲ್ಲಿ ಭಾರತ ಮುನ್ನಡೆಗಳನ್ನು ಸಾಧಿಸುತ್ತಲೇ ಇದೆ ಎ ಗುಂಪಿನ ಹಾಕಿಯಲ್ಲಿ ಸ್ಪೇನ್ ವಿರುದ್ಧ ಭಾರತ ಜಯಗಳಿಸಿದೆ. ಭಾರತ ೩-೦ ಗೋಲುಗಳ ಅಂತರದಲ್ಲಿ ಜಯ ಸಾಧಿಸಿದೆ. ರೂಪಿಂದರ್ ಪಾಲ್ ಸಿಂಗ್ ಮತ್ತು ಸಿಮ್ರಾಂಜಿತ್ ಸಿಂಗ್ ಅವರ ಅದ್ಭುತ ಪ್ರದರ್ಶನವೇ ಈ ಗೆಲುವಿಗೆ ಕಾರಣವಾಗಿದೆ. ಮಿಡ್ ಫೀಲ್ಡರ್ ಸಿಮ್ರಾಂಜಿತ್ ೧೩ನೇ ನಿಮಿಷದಲ್ಲಿ ಭಾರತದ ಖಾತೆ ತೆರೆದರು. ಬಳಿಕ ೧೫ನೇ ನಿಮಿಷದಲ್ಲಿ ರೂಪಿಂದರ್ ಪಾಲ್ ಸಿಂಗ್ ಪೆನಾಲ್ಟಿ ಸ್ಟ್ರೋಕ್ ಮೂಲಕ ಎರಡನೇ ಗೋಲು ಬಾರಿಸಿದರು. ೫೧ನೇ ನಿಮಿಷದಲ್ಲಿ ಮತ್ತೊಂದು…

ಮುಂದೂಡಿದ್ದ ಐಪಿಎಲ್ ಪಂದ್ಯದ ಪಟ್ಟಿ ಪ್ರಕಟ

ನವದೆಹಲಿ,ಜು,25: ಕೋವಿಡ್ 19 ಕಾರಣದಿಂದ ಮುಂದೂಡಲ್ಪಟ್ಟಿರುವ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ ಸೆಪ್ಟೆಂಬರ್​ 19ರಿಂದ ಚೆನ್ನೈ ಸೂಪರ್​ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್​ ನಡುವೆ ಪುನರಾರಂಭಗೊಳ್ಳಲಿದೆ.​ ಯುನೈಟೆಡ್ ಅರಬ್​ ಎಮಿರೇಟ್ಸ್​ನಲ್ಲಿ ಐಪಿಎಲ್​ನ ದ್ವಿತಿಯಾರ್ಧದ ಪಂದ್ಯಗಳನ್ನು ನಡೆಸಲು ಬಿಸಿಸಿಐ ಅವಿರತವಾಗಿ ಶ್ರಮಿಸುತ್ತಿದೆ. ಸೆಪ್ಟೆಂಬರ್​ 19ರಿಂದ ಪುನಾರಂಭಗೊಂಡರೆ ಅಕ್ಟೋಬರ್​ 10ರಂದು ಎಲಿಮಿನೇಟರ್​ ನಡೆಯುತ್ತೆ. ಕ್ವಾಲಿಫೈಯರ್ 1 ಮತ್ತು 2 ಕ್ರಮವಾಗಿ ಅಕ್ಟೋಬರ್​ 11 ಮತ್ತು 12ರಂದು ನಿಗದಿಯಾಗಿದೆ. ಅಕ್ಟೋಬರ್​ 15ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಕುರಿತು ಎಎನ್​ಐ…

ಪ್ರಿ-ಕ್ವಾರ್ಟರ್‌ಗೆ ಮೇರಿ ಕೋಮ್

ಟೋಕಿಯೊ,ಜು,೨೫:ಮೇರಿ ಕೋಮ್ಸ್ ಇಲ್ಲಿನ ಒಲಿಂಪಿಕ್ಸ್ ಮಹಿಳಾ ಬಾಕ್ಸಿಂಗ್‌ನಲ್ಲಿ ಪ್ರೀ-ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಮೇರಿ ಕೋಮ್ ಆರು ಬಾರಿ ವಿಶ್ವ ಚಾಂಪಿಯನ್ ಆಗಿದ್ದು ಈ ಬಾರಿ ಫೈನಲ್‌ನಲ್ಲಿ ಗೆದ್ದರೆ ಆರನೇ ಬಾರಿ ಫೈನಲ್ಲನಲ್ಲಿ ಗೆಲುವು ಸಾಧಿಸುವ ಮೂಲಕ ದಾಖಲೆ ಬರೆಯುವ ಸಾಧ್ಯತೆಗಳಿವೆ. ಭಾನುವಾರ ನಡೆದ ಮಹಿಳೆಯರ ೫೧ ಕೆ.ಜಿ ವಿಭಾಗದಲ್ಲಿ ನಡೆದ ರೌಂಡ್ ೩೨ರ ಹಂತದ ಪಂದ್ಯದಲ್ಲಿ ಮೇರಿ ಕೋಮ್ ಅವರು ಡೊಮಿನಿಕಾದ ಮಿಗುಲಿನಾ ಹೆರ್ನಾಂಡೆಜ್ ವಿರುದ್ಧ ಗೆಲುವು ದಾಖಲಿಸಿ ಮಿಂಚಿದರು ೨೦೧೨ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ…

ವಿಶ್ವ ಕುಸ್ತಿಯಲ್ಲಿ ಚಿನ್ನದ ಪದಕ ಪಡೆದ‌‌.ಪ್ರಿಯಾ ಮಲಿಕ್

ಹಂಗೇರಿ,ಜು,25: ಟೋಕಿಯೋ ದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನನಲ್ಲಿ,ಭಾರತದ ಕುಸ್ತಿ ಪಟು ಪ್ರಿಯಾ ಮಲಿಕ್ ಅವರು ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಹಂಗೇರಿಯ ಬುಡಾಪೆಸ್ಟ್ ನಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನ 73 ಕೆಜಿ ವಿಭಾಗದಲ್ಲಿ ಪ್ರಿಯಾ ಮಲಿಕ್ ಬೆಲಾರಸ್ ನ ಕುಸ್ತಿಪಟುವನ್ನು 5-0 ಅಂತರದಲ್ಲಿ ಸೋಲಿಸುವ ಮೂಲಕ ಈ ಸಾಧನೆ ಮಾಡಿದ್ದು ಪ್ರಿಯಾ ಮಲ್ಲಿಕ್ ಅವರ ಈ ಸಾಧನೆಗೆ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ. ಇನ್ನು ಟೋಕಿಯೋ ಒಲಿಂಪಿಕ್ಸ್ ನಲ್ಲಿ…

ಒಲಿಂಪಿಕ್ಸ್; ಮೊದಲ ದಿನವೇ ಬೆಳ್ಳಿಪದಕ ಗೆದ್ದ ಮೀರಾ

ಟೋಕಿಯೋ,ಜು,೨೪: ಟೋಕಿಯೊ ಒಲಿಂಪಿಕ್ಸ್ -೨೦೨೦ರಲ್ಲಿ ಭಾರತದ ಪದಕ ಬೇಟೆಯ ಅಭಿಯಾನ ಆರಂಭವಾಗಿದೆ. ಜಪಾನ್ ನ ಟೋಕಿಯೊ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಡೆದ ಮಹಿಳಾ ೪೯ ಕೆಜಿ ವಿಭಾಗದಲ್ಲಿ ವೇಟ್ ಲಿಫ್ಟರ್ ಸೈಖೋಮ್ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ. ೪೯ ಕೆ ಜಿ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ನಾಲ್ಕು ಸುತ್ತಿನ ಪ್ರಯತ್ನಗಳಲ್ಲಿ ಚಾನು ಒಟ್ಟು ೨೦೨ ಕೆಜಿ  ಎತ್ತಿದ್ದಾರೆ. ಚೀನಾದ ಝಿಹೈ ಹು ಒಟ್ಟು ೨೧೦ ಕೆಜಿ ತೂಕ ಎತ್ತಿ ಚಿನ್ನದ ಪದಕ ಗಳಿಸಿ ಹೊಸ ಒಲಿಂಪಿಕ್…

ಟೋಕಿಯೋದಲ್ಲಿ ವಿದ್ಯುಕ್ತ ಚಾಲನೆಗೊಂಡ ಒಲಿಂಪಿಕ್ಸ್

ಟೋಕಿಯೋ,ಜು,23:ಕೊರೊನಾ ಸಂಕಷ್ಟದ ನಡುವೆ ಮುಂದಾಡಲಾಗಿದ್ದ ಒಲಿಂಪಿಕ್ಸ್ 2020 ಕೊನೆಗೂ ಇಲ್ಲಿನ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಜಗಮಗಿಸುವ ವಿದ್ಯುತ್ ಅಲಂಕಾರಗಳೊಂದಿಗೆ ವಿದ್ಯುಕ್ತ ಚಾಲನೆ ದೊರಕಿತು. ಜಪಾನ್‌ನ ರಾಜಧಾನಿ ಟೋಕಿಯೋದಲ್ಲಿ 32ನೇ ಒಲಿಂಪಿಯಾಡ್ ಕ್ರೀಡಾಕೂಟ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ನಡೆದಿದೆ. ಜಪಾನ್‌ನ ಖ್ಯಾತ ಟೆನಿಸ್ ಆಟಗಾರ್ತಿ ನವೋಮಿ ಒಸಾಕಾ ಈ ಬಾರಿಯ ಒಲಿಂಪಿಕ್ಸ್‌ಗೆ ವಿದ್ಯುಕ್ತ ಚಾಲನೆ ನೀಡಿದ್ದಾರೆ. ಟೋಕಿಯೋದಲ್ಲಿರುವ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಶುಕ್ರವಾರ ಟೋಕಿಯೋ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ನಡೆಯಿತು. ಈ ವೇಳೆ ಒಲಿಂಪಿಕ್ಸ್ ದೀಪಕ್ಕೆ ಅಗ್ನಿ ಸ್ಪರ್ಶ ಮಾಡುವ ಮೂಲಕ…

ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಇಂದು ವಿದ್ಯುಕ್ತ ಚಾಲನೆ

ಟೋಕಿಯೋ,ಜು, ೨೧:ಕೊನೆಗೂ ಒಂದು ವರ್ಷದ ಬಳಿಕ ಇಲ್ಲಿನ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಇಂದು ವಿದ್ಯುಕ್ತ ಚಾಲೆನೆ ಸಿಕ್ಕಿದೆ.ಕೊರೊನಾ ಹಿನ್ನೆಲೆಯಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಮುಂದೂಡಲಾಗಿತ್ತು . ಆತಿಥೇಯ ಜಪಾನ್ ಮತ್ತು ಆಸ್ಟ್ರೇಲಿಯಾ ನಡುವಿನ ಸಾಫ್ಟ್ ಬಾಲ್ ಪಂದ್ಯದ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ಸಿಕ್ಕಿತು. ೨೦೧೧ರ ಸುನಾಮಿ ಮತ್ತು ಪರಮಾಣು ದುರಂತದಲ್ಲಿ ಭಾರೀ ಸಂಕಷ್ಟಕ್ಕೀಡಾಗಿದ್ದ ಫುಕುಶಿಮಾ ಎಂಬ ಪ್ರದೇಶದಲ್ಲಿ ನಡೆದ ಈ ಪಂದ್ಯದಲ್ಲಿ ಆತಿಥೇಯರು ೮-೧ರಿಂದ ಗೆದ್ದು ಬೀಗಿದರು. ಒಲಿಂಪಿಕ್ಸ್ ಕ್ರೀಡಾಕೂಟ ಇಂದು ಆರಂಭವಾದರೂ ಅಧಿಕೃತವಾಗಿ ಚಾಲನೆಗೊಳ್ಳುವುದು ಜುಲೈ ೨೩, ಶುಕ್ರವಾರದಂದು.…

ಮತ್ತೇ ಅಗ್ರಸ್ಥಾನಕ್ಕೇರಿದಿ ಮಿಥಾಲಿ

ದುಬೈ,ಜು,೨೦:ಎಐಸಿಸಿ ಏಕದಿನ ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ೭೬೨ ಅಂಕಗಳೊಂದಿಗೆ ಮತ್ತೊಮ್ಮೆ ಅಗ್ರಸ್ಥಾನಕ್ಕೆ ಏರಿದ್ದಾರೆ ೧೬ ವರ್ಷಗಳ ಹಿಂದೆ ಮೊದಲ ಬಾರಿಗೆ ಅಗ್ರ ಸ್ಥಾನ ಅಲಂಕರಿಸಿದ್ದ ಮಿಥಾಲಿ, ಒಂಬತ್ತನೇ ಬಾರಿಗೆ ಬ್ಯಾಟುಗಾರ್ತಿಯರ ರ‍್ಯಾಂಕಿಂಗ್ ಪಟ್ಟಿಯಲ್ಲಿ ಪ್ರಥಮ ಸ್ಥಾನಕ್ಕೆ ಏರಿದ್ದಾರೆ.ಬೌಲರ್‌ಗಳ ಪಟ್ಟಿಯಲ್ಲಿ, ಐದನೇ ಸ್ಥಾನದಲ್ಲಿರುವ ಝುಲನ್ ಗೋಸ್ವಾಮಿ ಟಾಪ್ ೧೦ ರಲ್ಲಿರುವ ಏಕೈಕ ಭಾರತೀಯರಾಗಿದ್ದಾರೆ. ಆಲ್ ರೌಂಡರ್ ವಿಭಾಗದಲ್ಲಿ ದೀಪ್ತಿ ಶರ್ಮಾ ೫ನೇ ಸ್ಥಾನ ಪಡೆದಿದ್ದಾರೆಮಹಿಳಾ ಟಿ ೨೦ ಆಟಗಾರ್ತಿಯರ ರ‍್ಯಾಂಕಿಂಗ್‌ನಲ್ಲಿ…

ಭಾರತೀಯ ಕ್ರೀಡಾಪಟುಗಳು ಅಭ್ಯಾಸ ಆರಂಭ

ಟೋಕಿಯೋ, ಜು, ೧೯: ಇಲ್ಲಿ ನಡೆಯಲಿರುವ ಓಲಿಂಪಿಕ್ಷ್ ಕ್ರೀಡೆಗೆ ಭಾರತೀಯ ಕ್ರೀಡಾಪಟುಗಳ ಮೊದಲ ತಂಡ ನಿನ್ನೆ ತಲುಪಿದ್ದು ಇಂದು ಮೈದಾನಕ್ಕಿಳಿದು ಅಭ್ಯಾಸದಲ್ಲಿ ತೊಡಗಿದ್ದರು.ಆದರೆ ಈಗ ಕೋವಿಡ್ ಆತಂಕ ಇಲ್ಲಿ ಆವರಿಸಿಕೊಂಡಿರುವುದು ಎಲ್ಲ ಕ್ರೀಡಾಪಟುಗಳಿಗೂ ಭಯ ಆವರಿಸಿದೆ. ಆರ್ಚರ್‌ಗಳಾದ ದೀಪಿಕಾ ಕುಮಾರಿ ಹಾಗೂ ಅತನು ದಾಸ್, ಟೇಬಲ್ ಟೆನ್ನಿಸ್ ಆಟಗಾರರಾದ ಜಿ ಸಥಿಯನ್ ಹಾಗೂ ಎ ಶರತ್ ಕಮಾಲ್, ಶಟ್ಲರ್‌ಗಳಾದ ಪಿವಿ ಸಿಂಧು ಮತ್ತು ಬಿ ಸಾಯಿ ಪ್ರಣೀತ್ ಹಾಗೂ ಜಿಮ್ನ್ಯಾಸ್ಟಿಕ್ ಪಟು ಪ್ರಣತಿ ನಾಯಕ್ ತಮ್ಮ ಅಭ್ಯಾಸವನ್ನು…

ನೂತನ ಮೈಲುಗಲ್ಲು ಸಾಧಿಸಿದ ಶಿಖರ್ ಧವನ್

ಕೊಲಂಬೊ,ಜು,೧೯: ಭಾರತ ಕ್ರಿಕೆಟ್ ತಂಡದ ನಾಯಕ ಶಿಖರ್ ಧವನ್ ಏಕದಿನ ಕ್ರಿಕಟ್‌ನಲ್ಲಿ ಆರಂಭಿಕನಾಗಿ ೧೦ ಸಾವಿರ ರನ್ ಬಾರಿಸುವ ಮೂಲಕ ನೂತನ ಮೈಲಿಗಲ್ಲು ಸಾಧಿಸಿದ್ದಾರೆ. ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಧವನ್ ೮೬ರನ್(೯೫ ಎಸೆತ, ೬ ಬೌಂಡರಿ, ೧ ಸಿಕ್ಸ್) ಸಿಡಿಸಿ ಮಿಂಚಿದ್ದರು. ಇದೇ ಪಂದ್ಯದಲ್ಲಿ ೧೦,೦೦೦ರನ್ ಮೈಲಿಗಲ್ಲು ನೆಟ್ಟಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್, ಸುನಿಲ್ ಗವಾಸ್ಕರ್ ಹಾಗೂ ರೋಹಿತ್ ಶರ್ಮಾ ಬಳಿಕ ಆರಂಭಿಕನಾಗಿ ೧೦ ಸಾವಿರ…

2022 ಮಾರ್ಚ್ 5 ರಂದು ಖೇಲೋ ಇಂಡಿಯಾ ಎರಡನೇ ಆವೃತ್ತಿಗೆ ಚಾಲನೆ

ಬೆಂಗಳೂರು, ಜು. 15:ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ ನ ಎರಡನೇ ಆವೃತ್ತಿಯನ್ನು 2022 ರ ಮಾರ್ಚ್ 5 ರಿಂದ ಆರಂಭಿಸಲು ದಿನಾಂಕ ನಿಗದಿ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಪ್ರಧಾನ ಮಂತ್ರಿಯವರನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ. ಬೆಂಗಳೂರಿನ ವಿಕಾಸ ಸೌಧದಲ್ಲಿ ಇಂದು ನಡೆದ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ. ಡಿಸಿಎಂ ಡಾ. ಅಶ್ವಥನಾರಾಯಣ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಅವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು. 158 ಯುನಿವರ್ಸಿಟಿಯಿಂದ…

ರಾಷ್ಟ್ರೀಯ ಅಥ್ಲೇಟಿಕ್ ಕ್ರೀಡಾ ಕೂಟದಲ್ಲಿ ಸಾಧನೆ ತೋರಿದ ಕರ್ನಾಟಕ ಪೊಲೀಸ್..

ಬೆಂಗಳೂರು,ಜೂ,28:ಪಂಜಾಬ್ ನ ಪಾಟಿಯಾಲದಲ್ಲಿ ನಡೆದ 60ನೇ ಅಂತ ರಾಜ್ಯ ಹಿರಿಯರ ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ತಂಡದ ಕ್ರೀಡಾಪಟು  ಬಿ. ಕೆ. ಕುಮಾರ್ ಸ್ವಾಮಿಪುರುಷರ 800 ಮೀಟರ್ ಓಟದಲ್ಲಿ ಐದನೇ ಸ್ಥಾನಗಳಿಸಿದ್ದಾರೆ. ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ  ಪುರುಷರ 800 ಮೀಟರ್ ಓಟದಲ್ಲಿ 1 ನಿಮಿಷ 51.86 ಸೆಕೆಂಡ್ ಗಳಲ್ಲಿ ಗುರಿತಲುಪಿ ಉತ್ತಮ ಸಮಯವನ್ನು ನೀಡುವುದರ ಮೂಲಕ 5ನೇ ಸ್ಥಾನ ಪಡೆದು  ರಾಜ್ಯಕ್ಕೆ 2 ಅಂಕಗಳನ್ನು ತಂದು ಕೊಟ್ಟು ಕರ್ನಾಟಕದ ಕೀರ್ತಿ ಪತಾಕೆಯನ್ನು ಅಂತಾರಾಜ್ಯ ಕ್ರೀಡಾಂಗಣದಲ್ಲಿ…

ದೀಪಿಕಾಗೆ ಒಂದೇ ದಿನ ಮೂರು ಚಿನ್ನದ ಪದಕ

ಪ್ಯಾರೀಸ್,ಜೂ,೨೮:ನಿನ್ನೆ ನಡೆದ ಮೆಗಾ-ಈವೆಂಟ್ ಅರ್ಚರಿ ವಿಶ್ವಕಪ್‌ನ ಹಂತ ಮೂರರಲ್ಲಿ ದೀಪಿಕಾ ಕುಮಾರಿ ಮೂರು ಚಿನ್ನದ ಪದಕ ಗಳಿಸುವ ಮೂಲಕ ಸಾಧನೆ ಗೈದಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್‌ಗೆ ಮುನ್ನ ನಡೆಯುವ ಈ ಈವೆಂಟ್‌ನಲ್ಲಿ ದೀಪಿಕಾ ಆಟ ಭರ್ಜರಿಯಿತ್ತು .ಮಹಿಳೆಯರ ವೈಯಕ್ತಿಕಸ್ಪರ್ಧೆಯ ಫೈನಲ್‌ನಲ್ಲಿ ದೀಪಿಕಾ ರಷ್ಯಾದ ಎಲೆನಾ ಒಸಿಪೋವಾ ಅವರನ್ನು ೬-೦ ಅಂತರದಲ್ಲಿ ಸೋಲಿಸಿ ಒಂದೇ ದಿನ ಹ್ಯಾಟ್ರಿಕ್ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಮಿಶ್ರ ಫೈನಲ್‌ನಲ್ಲಿ, ಒಲಿಂಪಿಕ್ಸ್‌ನಲ್ಲಿ ಅರ್ಚರಿಯಲ್ಲಿ ಭಾರತದ ಅತ್ಯುತ್ತಮ ಪದಕ ಭರವಸೆಯಿರುವ ದೀಪಿಕಾ ಮತ್ತು…

ಓಲಂಪಿಕ್ ಗೆ ಆಯ್ಕೆಯಾದ ಕ್ರೀಡಾಪಟುಗಳಿಗೆ 10 ಲಕ್ಷ ರೂ ಘೋಷಣೆ

ಬೆಂಗಳೂರು, ಜೂನ, 26:ಟೋಕಿಯೋ ಓಲಂಪಿಕ್ ಗೆ ರಾಜ್ಯದ ಐವರು ಕ್ರೀಡಾಪಟುಗಳು ಸಂಭವನೀಯ ಪಟ್ಟಿಯಲ್ಲಿ ಸ್ಥಾನಪಡೆದಿದ್ದು, ಆಯ್ಕೆಯಾಗುವ ಕ್ರೀಡಾಪಟುಗಳಿಗೆ ತಲಾ ರೂ. 10 ಲಕ್ಷ ಪ್ರೋತ್ಸಾಹ ಧನ ಘೋಷಿಸಿ ಆದೇಶ ಹೊರಡಿಸಲಾಗಿದೆ. 2020 ರ ಓಲಂಪಿಕ್ ಕ್ರೀಡಾಕೂಟವು ಜಪಾನ್ ಟೋಕಿಯೋದಲ್ಲಿ ಜುಲೈ 23 ರಿಂದ ಸೆಪ್ಟಂಬರ್ 5 ರ ವರೆಗೆ ನಡೆಯಲಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣ ಗೌಡ ಈ ಸಂಬಂಧ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಕ್ರೀಡಾಪಟುಗಳಿಗೆ ಅಗತ್ಯ ನೆರವು ನೀಡುವುದು…

ರದ್ದಾದ ಟಿ.20 ಅ.7ರಂದು ಯುಎಇ ನಲ್ಲಿ ನಡೆಸಲು ನಿರ್ಧಾರ

ನವದೆಹಲಿ,ಜೂ,26:ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾದ ಕಾರಣ ಟಿ-20 ವಿಶ್ವಕಪ್ ಟೂರ್ನಿ ರದ್ದಾಗಿದ್ದು ಈಗ ಅಕ್ಟೋಬರ್ 17 ರಂದು ಯುಎಇಯಲ್ಲಿ ನಡೆಸಲು ನಿರ್ದರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಗೆ (ಐಸಿಸಿ) ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೂಚಿಸಿದೆ ಎಂದು ಹೇಳಲಾಗಿದೆ. ಟಿ–20 ವಿಶ್ವಕಪ್ ಪಂದ್ಯಗಳು ಅಬುದಾಭಿ, ಶಾರ್ಜಾ ಮತ್ತು ದುಬೈನಲ್ಲಿ ನಡೆಯಲಿದ್ದು, ಕ್ವಾಲಿಫಯರ್ ಸುತ್ತಿನ ಪಂದ್ಯಗಳನ್ನು ಒಮಾನ್ ಆಯೋಜಿಸಲಿದೆ. ಭಾರತದಲ್ಲಿ ಟೂರ್ನಿ ಆಯೋಜಿಸಲು ಸಾಧ್ಯವಾಗದಿದ್ದರೆ ಯುಎಇಯಲ್ಲಿ ನಡೆಸುವುದಾಗಿ ಬಿಸಿಸಿಐ ಈ ಹಿಂದೆಯೇ ತಿಳಿಸಿತ್ತು. ಟೂರ್ನಿಯ…

ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿರಾಟ್ ನ ಮತ್ತೊಂದು ಪರ್ವ

ಸೌತಾಂಪ್ಟನ್,ಜೂ,20: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಬಿರಿಸಿನ ಆಟದಿಂದ ಟೆಸ್ಟ್ ಕ್ರಿಕೆಟ್ ನಲ್ಲಿ ಮತ್ತೊಂದು ಪರ್ವ ಸೃಷ್ಟಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 7500+ ರನ್ ದಾಖಲೆ ಪಟ್ಟಿಗೆ ಕೊಹ್ಲಿ ಸೇರ್ಪಡೆಯಾಗಿದ್ದಾರೆ. ಶನಿವಾರ ನಡೆದ ಭಾರತ-ನ್ಯೂಜಿಲೆಂಡ್ ನಡುವಿನ ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ಸೌತಾಂಪ್ಟನ್‌ನ ಏಜಸ್ ಬೌಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ 40+ ರನ್ ಬಾರಿಸುವುದರೊಂದಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 7500+ ರನ್…

ವಿಶ್ವ್‌ಟೆಸ್ಟ್ ಚಾಂಪಿಯನ್‌ಶಿಪ್-ಮಳೆಯಿಂದ ರದ್ದು

ಸೌಥ್ಯಾಂಪ್ಟನ್,ಜೂ,೧೯:ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮೊದಲದಿನದಾಟ ಮಳೆಯಿಂದಾಗಿ ರದ್ದಾಗಿದೆ. ಎಡಬಿಡದೆ ಮಳೆ ಸುರಿಯುತ್ತಿರುವ ಕಾರಣ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದ ಮೊದಲ ದಿನದಾಟ ರದ್ದಾಗಿದ್ದು, ಬಿಟ್ಟು ಬಿಟ್ಟು ಆಗಮಿಸುತ್ತಿದ್ದ ಮಳೆಯಿಂದಾಗಿ ಪಂದ್ಯವನ್ನು ಆರಂಭಿಸುವ ಯಾವ ಅವಕಾಶಗಳು ಕೂಡ ಆಯೋಜಕರಿಗೆ ದೊರೆಯಲಿಲ್ಲ. ಟಾಸ್ ಅನ್ನು ಕೂಡ ಪದೇ ಪದೇ ಮುಂದೂಡಲಾಗಿತ್ತು. ನಂತರ ಭಾರತೀಯ ಕಾಲಮಾನ ೭:೨೦ರ ವೇಳೆಗೆ ವಾತಾವರಣವನ್ನು ಪರಿಶೀಲಿಸಿದ ಅಂಪೈರ್ ಗಳು ನಂತರ ಮೊದಲ ದಿನದಾಟವನ್ನು ಅಧಿಕೃತವಾಗಿ ಮುಂದೂಡಿದರು. ನಿಗದಿಯಂತೆ ಭಾರತೀಯ ಕಾಲಮಾನ ಮಧ್ಯಾಹ್ನ ೩ ಗಂಟೆಗೆ…

ಚೊಚ್ಚಲ ಪಂದ್ಯದಲ್ಲೆ96 ರನ್ ಗಳಿಸಿ ದಾಖಲೆ ಮೆರೆದ‌ ಶಫಾಲಿ ವರ್ಮಾ

ಬ್ರಿಸ್ಟಲ್,ಜೂ,18:ಇಂಗ್ಲೆಂಡ್ ಮತ್ತು ಭಾರತೀಯ ಕ್ರಿಕೆಟ್ ಮಹಿಳಾ ತಂಡಗಳ ನಡುವಿನ ಟೆಸ್ಟ್ ಪಂದ್ಯದಲ್ಲಿ ಶಫಾಲಿ ವರ್ಮಾ96 ರನ್ ಗಳಿಸಿ ದಾಖಲೆ ಮೆರದಿದ್ದಾರೆ. ಈ ಮೂಲಕ ಚೊಚ್ಚಲ ಪಂದ್ಯದಲ್ಲೇ ಸತೀ ಹೆಚ್ಚು ಅಂಕ ಗಳಿಸಿದ ಮೊದಲ ಭಾರತೀಯ ‌ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ಹಿಂದೆ ಈ ದಾಖಲೆ ಸಿ. ಕೌಲ್ ಅವರ ಹೆಸರಲ್ಲಿತ್ತು. ಅವರು 1995ರ ಫೆಬ್ರುವರಿಯಲ್ಲಿ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ 75 ರನ್ ಗಳಿಸಿದ್ದರು. ಸ್ಮೃತಿ–ಶಫಾಲಿ ಭರ್ಜರಿ ಜೊತೆಯಾಟ: ಸ್ಮೃತಿ ಮಂದಾನ ಹಾಗೂ ಶಫಾಲಿ ವರ್ಮಾ 167…

ಸುರೇಶ್ ರೈನಾ ‘ಬಿಲೀವ್’ ಪುಸ್ತಕ ಬಿಡುಗಡೆ

ಮುಂಬೈ,ಜೂ,೧೪: ಟೀಂ ಇಂಡಿಯಾದ ಮಾಜಿ ಆಟಗಾರ ಸುರೇಶ್ ರೈನ್ ಬರೆದಿರುವ ಅವರ ಆತ್ಮಚರಿತ್ರೆ ‘ಬಿಲೀವ್ ಎಂಬ ಪುಸ್ತಕ ಇಂದು ಬಿಡುಗಡೆಗೊಂಡಿದೆ ಭಾರತೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದ ರೈನಾ ಆತ್ಮೀಯ ಗೆಳೆಯ ಮಹೇಂದ್ರ ಸಿಂಗ್ ಧೋನಿಯೊಂದಿಗೆ ೨೦೨೦ರ ಆಗಸ್ಟ್‌ನಲ್ಲಿ ಅಂತರಾಷ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದರು. ಇದೀಗ ನಿವೃತ್ತಿಯ ಬಳಿಕ ತಮ್ಮ ವೈಯಕ್ತಿಕ ಬದುಕು ಮತ್ತು ಕ್ರಿಕೆಟ್ ವೃತ್ತಿ ಜೀವನದ ಕುರಿತಾಗಿ ಆತ್ಮಚರಿತ್ರೆಯೊಂದನ್ನು ಬರೆದಿದ್ದಾರೆ. ರೈನಾ ತಮ್ಮ ಆತ್ಮ ಚರಿತ್ರೆಗೆ ಸಚಿನ್ ತೆಂಡುಲ್ಕರ್ ಅವರು ನೀಡಿರುವ ಸ್ಪೂರ್ತಿಯ ಪದ ‘ಬಿಲೀವ್’…

error: Content is protected !!