ಕ್ರೀಡೆ
ಕುಸ್ತಿಪಟುಗಳ ತರಬೇತಿ ಶಿಬಿರ ರದ್ಧು
ನವದೆಹಲಿ,ಮೇ,16: ಸೋನಿಪತ್ ನಲ್ಲಿ ಓಲಂಪಿಕ್ ಆಯ್ಕೆ ಯಾದ ಕ್ರೀಡಾಪಟುಗಳ ತರಬೇತಿ ಶಿಬಿರವನ್ನು ರದ್ಧುಗೊಳಿಸಲಾಗಿದೆ. ಒಲಿಂಪಿಕ್ಸ್ಗೆ ತೆರಳಲಿರುವ ಪುರುಷ ಮತ್ತು ಮಹಿಳಾ ಕುಸ್ತಿಪಟುಗಳು ಮುಂದಿನ ಮಂಗಳವಾರ ಬಹಲ್ಗರ್ನಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರದ ಆವರಣದಲ್ಲಿ ಜಮಾಯಿಸಬೇಕಾಗಿತ್ತು. ಆದರೆ ಅದನ್ನು ರದ್ದು ಮಾಡಿ ಕುಸ್ತಿಪಟುಗಳನ್ನು ನೇರವಾಗಿ ಪಾಲೆಂಡ್ಗೆ ಕಳುಹಿಸಲು ನಿರ್ಧರಿಸಲಾಗಿದೆ. ಅಲ್ಲಿ ಜೂನ್ ಎಂಟರಿಂದ 13ರ ವರೆಗೆ ಟೋಕಿಯೊ ಒಲಿಂಪಿಕ್ಸ್ಗೆ ಸಂಬಂಧಿಸಿದ ರ್ಯಾಂಕಿಂಗ್ ಸೀರಿಸ್ ನಡೆಯಲಿದೆ. ಕ್ವಾರೆಂಟೇನ್ ಗೆ ಒಳಗಾಗಬೇಕಾಗಿರುವುದರಿಂದ ಬಹಲ್ಗರ್ನಲ್ಲಿ ನಡೆಯಬೇಕಾಗಿದ್ದ ತರಬೇತಿ ಶಿಬಿರವನ್ನು ರದ್ದುಮಾಡಲಾಗಿದೆ. ಅವರವರ ಅಖಾಡಗಳಲ್ಲೇ…



