Browsing: ಅಂಕಣ

ಅಂಕಣ

ಅನ್ವೇಷಣೆಗಳ ಕರಾಳ ಹಾಗೂ ಬೆಳಕಿನ ಸಂಕೀರ್ಣ ಲೋಕ

ಅನ್ವೇಷಣೆಗಳ ಕರಾಳ ಹಾಗೂ ಬೆಳಕಿನ ಸಂಕೀರ್ಣ ಲೋಕ ಸಂಪ್ರದಾಯಿಕ ಚರಿತ್ರೆಯೆಂದರೆ ಏಕಮುಖಿಯಾದುದು. ಆಡಳಿತ ಮೂಲವಾದದು.ಪ್ರಭು ಪ್ರಧಾನವಾದುದು.ರಾಜಕೀಯವೇ ಮುಖ್ಯವಾದ ಇದರ ಆವರಣದೊಳಗೆ ಉತ್ಪಾದನಾ ಪ್ರಧಾನರ ಕಥನಗಳು ನಿರ್ಲಕ್ಷಕ್ಕೆ ಒಳಗಾಗಿವೆ.ತೆಳುವಾದ ಸರಳವಾದ ಚರಿತ್ರೆಯ ಈ ರೂಪಗಳ ಮಿತಿಯನ್ನ ಗ್ರಹಿಸಿಯೇ ಹೊಸ ಬಗೆಯ ಚರಿತ್ರೆಗಳನ್ನ ಕಟ್ಟುವ ರೂಪಿಸುವ ಪರಂಪರೆಗಳು ಈಗೀಗ ಗಟ್ಟಿಗೊಳ್ಳುತ್ತಿವೆ.ಜನ ಚರಿತ್ರೆ,ಮಹಿಳಾ ಚರಿತ್ರೆ,ಪ್ರಾದೇಶಿಕ ಚರಿತ್ರೆ,ಸಬಾಲ್ಟ್ರನ್ ಚರಿತ್ರೆ..ಹೀಗೆ ಹೊಸ ಹೊಸ ಅನ್ವೇಷಣಾ ಬರಹಗಳ ಕ್ರಮಗಳನ್ನ ಕಾಣಬಹುದಾಗಿದೆ. ಈ ನೆಲೆಯಲ್ಲಿ ಪರಂಪರೆಯ ಸಂಪ್ರದಾಯಿಕ ಚರಿತ್ರೆಯು ಗುರ್ತಿಸಲಾರದ ಚರಿತ್ರೆಯ ಬುನಾದಿಯಂತೆಯೇ ಆಗಿರುವ ಕಥನವೇ ರೈತರ…

ಮೋದಿ ಕ್ಷಮಾಯಾಚನೆ ಹಿಂದೆ -ಮುಂದೆ

ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸುವುದರ ಜೊತೆಗೇ ಜನರ ಕ್ಷಮೆಯನ್ನೂ ಕೋರಿದ್ದಾರೆ. ಪ್ರಧಾನಿಯೊಬ್ಬರು ಬಹಿರಂಗವಾಗಿ ಕ್ಷಮಾಯಾಚಿಸಿದ ಬಹು ಅಪರೂಪದ ಪ್ರಸಂಗವಿದು. ದುಡುಕಿನ ನಿರ್ಧಾರವಾಗಿ ತುರ್ತು ಪರಿಸ್ಥಿತಿ ಹೇರಿದ ಇಂದಿರಾಗಾಂಧಿ ತಾವು ಎಸಗಿದ ಪ್ರಮಾದಕ್ಕೆ ಪ್ರತಿಯಾಗಿ ಕ್ಷಮೆ ಕೋರದೆ ಜನಾಕ್ರೋಶಕ್ಕೆ ಈಡಾದ ರೀತಿ ಮೋದಿ ಜಾಗೃತಿಗೆ ಕಾರಣವಾಗಿರಬಹುದೆ…? ಮೋದಿ ಕ್ಷಮಾಯಾಚನೆ ಹಿಂದೆ -ಮುಂದೆ ಮಾಡಿದ್ದುಣ್ಣೊ ಮಹರಾಯ ಎನ್ನುವುದು ಕನ್ನಡದ ಸೊಗಸಾದ ಗಾದೆಗಳಲ್ಲಿ ಒಂದು. ಉಪ್ಪು ತಿಂದವರು ನೀರು ಕುಡಿಯಬೇಕು ಎನ್ನುವುದು ಮತ್ತೊಂದು. ಇಂಥ ಅರ್ಥಗರ್ಭಿತ…

ರೈತನ ಬೆತ್ತಲೆ ಮಾಡಿ ಪುಟಗೋಸಿ ಎಸೆವ ಪ್ರಧಾನಿ

ರೈತನ ಬೆತ್ತಲೆ ಮಾಡಿ ಪುಟಗೋಸಿ ಎಸೆವ ಪ್ರಧಾನಿ ವಿಶ್ವದ ಗಮನ ಸೆಳೆದ ರೈತ ಆಂದೋಲನಕ್ಕೆ ವರ್ಷ ತುಂಬುವ ಹೊತ್ತಿನಲ್ಲಿ ಮೂರು ಕೃಷಿ ಕಾಯಿದೆಗಳನ್ನು ರದ್ದು ಮಾಡುವ ವಚನ ನೀಡಿದ್ದಾರೆ ಪ್ರಧಾನಿ. ’ಛಪ್ಪನ್ನೈವತ್ತಾರು’ ಇಂಚಿನ ಎದೆಗಾರಿಕೆಯ ಪ್ರಧಾನಿ ತಾವು ಆಡಿರುವ ಈ ನುಡಿಯನ್ನು ನಿರ್ವಂಚನೆಯಿಂದ ನಡೆಸಿಕೊಡಲಿ. ಮುಂಬರುವ ದಿನಗಳಲ್ಲಿ ಇವೇ ಕಾಯಿದೆಯ ಅನಿಷ್ಟಗಳು ಛದ್ಮ ವೇಷ ಹೊದ್ದು ಪ್ರತ್ಯಕ್ಷವಾಗದಿರಲಿ. ಒಂದು ಸಂದೇಹವನ್ನು ಮೋದಿಯವರು ಮತ್ತು ಅವರ ಪಕ್ಷ ನಿವಾರಿಸಬೇಕಿದೆ. ತಮ್ಮ ಮಾತುಗಳ ಕನ್ನಡಿಯಲ್ಲಿ ತಮ್ಮದೇ ಮುಖ ನೋಡಿಕೊಳ್ಳಬೇಕಿದೆ. ದೇಶದ…

ಬಗೆ ಬಗೆಯ ಆನಂದ!

ಬಗೆ ಬಗೆಯ ಆನಂದ! ತೈತ್ತಿರೀಯ ಉಪನಿಷತ್ತಿನ ಬ್ರಹ್ಮಾನಂದವಲ್ಲಿಯಲ್ಲಿ ಬಗೆ ಬಗೆಯ ಆನಂದಗಳನ್ನು, ಅವುಗಳ ಅಂತಸ್ಸತ್ತ್ವವನ್ನು ಸೊಗಸಾಗಿ ವಿವರಿಸಲಾಗಿದೆ. ಗುರು ವೈಶಂಪಾಯನನು ಶಿಷ್ಯ ಯಾಜ್ಞವಲ್ಕ್ಯನಿಗೆ ಏಳನೆಯ ಅನುವಾಕದಲ್ಲಿ ಹೀಗೆ ವಿವರಿಸಿದ್ದಾನೆ: ರಸೋ ವೈ ಸಃ. ರಸಗ್ಂ ಹ್ಯೇವಾಯಂ ಲಭ್ಧ್ವಾನಂದೀ ಭವತಿ. ಅವ್ಯಕ್ತಸ್ವರೂಪದ ಪರಮಾತ್ಮನು ವ್ಯಕ್ತಸ್ವರೂಪನಾಗಿ ತನ್ನಿಂದ ತಾನೇ ಆವಿರ್ಭಾವಗೊಂಡನು. ಇಂಥ ಈ ಪರಮಾತ್ಮನೇ ಸಕಲಸ್ವರೂಪದ ‘ರಸ’ ವಾಗಿದ್ದಾನೆ. ಇಂಥ ಪರಮಾತ್ಮನನ್ನು ತಿಳಿಯುವುದರಿಂದ ಮಾತ್ರವೇ ಆನಂದವನ್ನು ಹೊಂದುತ್ತಾನೆ. ಎಂಟನೆಯ ಅನುವಾಕದಲ್ಲಿ “ಸೈಷಾ ಆನಂದಸ್ಯ ಮೀಮಾಂಸಾ ಭವತಿ = ಇದು…

ಶೌಕತ್ ಆಲಿಯ ಮುಗ್ದಮನಸ್ಸಿನ ಸುತ್ತಲ ನೆನಪುಗಳು

ಶೌಕತ್ ಆಲಿಯ ಮುಗ್ದಮನಸ್ಸಿನ ಸುತ್ತಲ ನೆನಪುಗಳು… ಅದು ನಾನು ಆರನೇ ತರಗತಿಯಲ್ಲಿದ್ದಾಗಿನ ಸೆಪ್ಟೆಂಬರ್ ತಿಂಗಳ ಒಂದು ದಿನ ಅನ್ನಿಸುತ್ತದೆ, ನಮ್ಮ ಅಂದಿನ ವಿಜ್ಞಾನ ಪಿರಿಯಡ್ ಆ ದಿನದ ಕೊನೇ ಅವಧಿಯಾಗಿತ್ತು. ಪಿರಿಯಡ್ ಮುಗಿಯುದಕ್ಕೆ ಇನ್ನೇನು ಒಂದು ಹದಿನೈದು ನಿಮಿಷ ಬಾಕಿ ಎನ್ನುವಾಗಲೇ ಜವಾನ ತಮ್ಮಯ್ಯ ಒಂದು ಸಣ್ಣಗಾತ್ರದ ನೋಟ್ ಬುಕ್ ನೊಂದಿಗೆ ನಮ್ಮ ತರಗತಿಯ ಒಳಗೆ ಕಾಲಿಟ್ಟ. ತಮ್ಮಯ್ಯನ ನಿರೀಕ್ಷೆಯನ್ನು ನಾವು ದಿನದ ಮೊದಲನೇ ಪಿರಿಯಡ್ ನಿಂದಲೂ ಮಾಡುತ್ತಲೇ ಬಂದಿದ್ದೆವು. ಸಪೂರ ದೇಹದ, ಆರೋಗ್ಯಕರ ಕಂದು ದೇಹವರ್ಣದ,…

ಮಕ್ಕಳ ಸ್ಕೂಲ್‌ಮನೇಲಲ್ವೇ..

ಮಕ್ಕಳ ಸ್ಕೂಲ್‌ಮನೇಲಲ್ವೇ.. ” ನೋಡ್ರಿ ನಮ್ಮ ಹುಡುಗ ಹೆಂಗ ಇಂಗ್ಲೀಷ್‌ಮಾತಾಡುತ್ತೇ..” ” ರೀ ನಮ್ಮ ಹುಡುಗಿ ಮೊಬೈಲ್‌ಹೆಂಗ ಆಪರೇಟ್‌ಮಾಡುತ್ತೆ ಗೊತ್ತಾ..” ” ರೀ ನಮ್ಮ ಹುಡುಗ ನಮ್ಮ ರಿಲೇಟಿವ್ಸ ನೊಳಗೇ ಪಸ್ಟ ಗೊತ್ತಾ..” ಬನ್ನಿ ಬನ್ನಿ ಸಾರ್‌ಲೇ.. ಮಗನ್ನ ಕರಿಯೇ..! ಸರ್‌ನೋಡಿ ಇವನು ಎಲ್‌ಕೆ ಜಿ ಆಗಲೇ ಎಲ್ಲಾ ರೈಮ್ಸ ಹೇಳ್ತಾನೆ.ವರ್ಡ್ಸ ಎಲ್ಲಾ ಹೇಳ್ತಾನೆ.ನೋಡಿ ಟಾರ್ಟಾಯಿಸ್‌ಅಂದ್ರೇನೋ..? ಪಿಕಾಕ್‌ಅಂದ್ರೇನೋ..? ಫೆದರ್‌ಅಂದ್ರೇನೋ..?ಹೀಗೆ ಹೋದವರು ಬಂದವರ ನಡುವೆ ಮಗನನ್ನ ನಿಲ್ಲಿಸಿ ಪ್ರಶ್ನೆಗಳ ಸುರಿಮಳೆಗೈವವರಿಗೆ ಮಗುವಿಗಿಂತಲೂ ತಮ್ಮ ಪ್ರಿಸ್ಟೇಜ್‌ಹೆಚ್ಚಿದ ಖುಷಿ! ಮನೆಯಲ್ಲಿ ಮೊಬೈಲ್‌ಹಿಡಿದರೆ…

ತರಾಸು ಸಂಭಾಷಣೆ ರಚಿಸಿದ ಶಿವಲಿಂಗ ಸಾಕ್ಷಿ ನಟವರಗಂಗಾಧರಗೀತೆ ರಚಿಸಿದಕರೀಂಖಾನ್

ತರಾಸುಸಂಭಾಷಣೆರಚಿಸಿದ ಶಿವಲಿಂಗ ಸಾಕ್ಷಿ ನಟವರಗಂಗಾಧರಗೀತೆ ರಚಿಸಿದಕರೀಂಖಾನ್ ಶಿವಲಿಂಗ ಸಾಕ್ಷಿ:ಪ್ರಸಿದ್ಧ ಕಾದಂಬರಿಕಾರ ತ.ರಾ.ಸು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ರಚಿಸಿದ ಕಪ್ಪು-ಬಿಳುಪು ಭಕ್ತಿಪ್ರಧಾನಚಿತ್ರ ಶಿವಲಿಂಗಲಿಂಗ ಸಾಕ್ಷಿ ವೀನಸ್ ಫಿಲಂಎಕ್ಸ್‌ಛೇಂಜ್ ಲಾಂಛನದಲ್ಲಿ ೧೯೬೦೬ಲ್ಲಿ ತೆರೆಗೆ ಬಂದಿತು. ಡಿ.ಶಂಕರ್‌ಸಿಂಗ್ ನಿರ್ಮಾಣ ಮಾಡಿದಚಿತ್ರವನ್ನುಅವರೇಚಂದ್ರಮೋಹನ್ ಹೆಸರಿನಲ್ಲಿ ನಿರ್ದೇಶಸಿದರು. ಪ್ರತಿಮಾದೇವಿ, ರಮಾದೇವಿ, ಅಶ್ವತ್, ಉದಯಕುಮಾರ್, ಬಾಲಕೃಷ್ಣ್ಣ, ಚಿತ್ರದಲ್ಲಿ ಅಭಿನಯಿಸಿದರು.ಚಿತ್ರದ ಹಾಸ್ಯ ಸಂಭಾಷಣೆಯನ್ನು ನಟ ಟಿ.ಎನ್.ಬಾಲಕೃಷ್ಣ ಬರೆದರು. ಪಿ.ಶಾಮಣ್ಣ ಸಂಗೀತ ನೀಡಿದಚಿತ್ರದಲ್ಲಿ ಅಳವಡಿಸಿದ್ದ ೯ ಹಾಡುಗಳನ್ನು ಎಸ್.ಕೆ.ಕರೀಂಖಾನ್ ರಚಿಸಿದರು.ಮೈಸೂರಿನ ಪ್ರೀಮಿಯರ್ ಸ್ಟುಡಿಯೊದಲ್ಲಿಚಿತ್ರಚಿತ್ರೀಕರಣಗೊಂಡಿತು.ಕೈಲಾಸದರುದ್ರಕನ್ಯ ಹಾಗೂ ಅವಳ ಪ್ರಿಯಕರ ಶಿವನಿಂದ…

ಪಿಎಮ್ಮೊ ಸಿಎಮ್ಮೊ? ಯಾರು ಸತ್ಯ ಯಾರು ಮಿಥ್ಯ?

ಬಿಟ್ ಕಾಯಿನ್ ಹಗರಣ ರಾಜ್ಯ ಸಕಾರವನ್ನು ಆತಂಕದ ಮಡುವಿಗೆ ದೂಡಿದೆ. ತಪ್ಪು ತಮ್ಮದಲ್ಲ ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿ ಮತ್ತು ಕಾಂಗ್ರೆಸ್ಸು ಮನಸ್ಸು ಕದಡಿ ಹೋಗಿರುವ ಜನಕ್ಕೆ ಸಮಾಧಾನ ತರುವಲ್ಲಿ ಸೋಲುತ್ತಿವೆ. ದಿನದಿನವೂ ಹೊಸ ಹೊಸ ಬಗೆಯ ತಿರುವನ್ನು ಪಡೆಯುತ್ತಿರುವ ಪ್ರಕರಣದಲ್ಲಿ ನಿಜ ಆರೋಪಿಗಳಿಗೆ ಶಿಕ್ಷೆ ಆಗುತ್ತದೆಯೇ ಅಥವಾ ಬಹುತೇಕ ಹಗರಣಗಳಂತೆ ಇದೂ ಕೂಡಾ ಗೋರಿಯಲ್ಲಿ ಹೂತು ಹೋಗುತ್ತದೆಯೆ? ಪಿಎಮ್ಮೊ ಸಿಎಮ್ಮೊ? ಯಾರು ಸತ್ಯ ಯಾರು ಮಿಥ್ಯ? ಈ ಪ್ರಶ್ನೆ ಈ ಹೊತ್ತು ಭಾರತದಲ್ಲಿ ಬಹುದೊಡ್ಡ ಸಂಚಲನವನ್ನೇ ಮಾಡುತ್ತಿದೆ.…

ನಿವೃತ್ತರಾಗಿಬಿಡಬೇಕಿತ್ತು  ಜವಾಹರಲಾಲ ನೆಹರೂ

ನಿವೃತ್ತರಾಗಿಬಿಡಬೇಕಿತ್ತು  ಜವಾಹರಲಾಲ ನೆಹರೂ ತಾಯಿ ಭಾರತಿಯ ಹೆಮ್ಮೆಯ ಪುತ್ರ ರತ್ನವೆಂದು ನರೇಂದ್ರ ಮೋದಿಯವರನ್ನೂ,  ಜವಾಹರಲಾಲ್ ನೆಹರೂ ಎಂದರೆ ಯಾರದು ಎಂದು ಕೇಳುವಂತಹ ಭವಿತವ್ಯವನ್ನೂ ಜೊತೆ ಜತೆಗೆ ರೂಪಿಸುವ ಘನ ಪ್ರಯತ್ನ ದೇಶದಲ್ಲಿ ಹಗಲಿರುಳು ಜರುಗಿದೆ. ಅವರ ತಪ್ಪುತಡೆಗಳನ್ನಷ್ಟೇ ಎತ್ತಿ ಭೂತಗಾಜಿನಡಿ ಇರಿಸಿ ತೋರಲಾಗುತ್ತಿದೆ. ತಪ್ಪುಗಳ ಮಾಡದಿರುವ ನಾಯಕನಿದ್ದಾನೆಯೇ? ಅವರು ಮಾಡಿದ ದೊಡ್ಡ ತಪ್ಪುಗಳ ಪೈಕಿ ದೀರ್ಘಕಾಲ ಅಧಿಕಾರಕ್ಕೆ ಅಂಟಿಕೊಂಡದ್ದೂ ಒಂದು. ನ್ಯಾಯ ಮತ್ತು ಸಮಾನತೆಯನ್ನು ಸಾಧಿಸಲು ಕಾಂಗ್ರೆಸ್ ಸಮಾಜವಾದೀ ಹಾದಿಯಲ್ಲಿ ನಡೆಯಬೇಕಿದೆ ಎಂಬ ಮಾತನ್ನು ನೆಹರೂ 1930ರಲ್ಲೇ…

ಗ್ರಾಮೀಣ ಪ್ರದೇಶದಲ್ಲಿನ ನಾಟ್ಯಕಲಾ ಸಂಘಗಳ ಬವಣೆ

ಗ್ರಾಮೀಣ ಪ್ರದೇಶದಲ್ಲಿನ ನಾಟ್ಯಕಲಾ ಸಂಘಗಳ ಬವಣೆ ನಾನು ಹೈಸ್ಕೂಲಿನ ಮೊದಲನೇ ವರ್ಷದಲ್ಲಿದಾಗ ನಮ್ಮೂರಿಗೆ ಆಗಮಿಸಿದ ಉತ್ತರಕರ್ನಾಟಕ ಮೂಲದ ಸಂಗಮೇಶ್ವರ ನಾಟ್ಯ ಕಲಾಸಂಘವು ಬಯಲುಸೀಮೆಯ ಬರಡುಭೂಮಿಗೆ ಕಲಾಗಂಗೆಯನ್ನು ಹರಿಸಿದ ಭಗೀರಥಸ್ವರೂಪದ ಉಜ್ವಲಪ್ರಯತ್ನಕ್ಕೆ ಪ್ರೇರಕರೂಪಿಯಾಗಿತ್ತು. ಆ ಹೊತ್ತು ಕಲೆಯ ವಿಷಯದಲ್ಲಿ ನಮ್ಮೂರು ಬಡತನದಿಂದ ಬಳಲುತ್ತಿತ್ತು ಎಂದೇ ಹೇಳಬೇಕು. ಆರ್ಥಿಕವಾಗಿ ಸಬಲವಲ್ಲದ ಊರೊಂದು ಸಾಂಸ್ಕೃತಿಕವಾಗಿ ಶ್ರೀಮಂತ ಎಂದು ಕರೆಸಿಕೊಳ್ಳುವ ಸಾಧ್ಯತೆಗಳು ತೀರಾ ಕಡಿಮೆ ಎಂದೇ ನಾನು ಭಾವಿಸುತ್ತೇನೆ. ಹೊಟ್ಟೆ ತುಂಬಾ ಉಂಡು, ಮೈತುಂಬಾ ಬಟ್ಟೆ ಹೊದ್ದುಕೊಂಡ ತರುವಾಯವೆ ಮನುಷ್ಯಜೀವ ಕಲೆಯ ನೆಲೆಯೊಂದನ್ನು…

ಮನೋರಂಜನೆಯ ಜಿಗಿತಗಳ ಹಿಂದೆ..

ಮನೋರಂಜನೆಯ ಜಿಗಿತಗಳ ಹಿಂದೆ.. ಹಿಂದೆ ಬಯಲೆಂಬೋ ಪಾಠಶಾಲೆಯಂತಿದ್ದ ಹಳ್ಳಿಗಳ ಬಯಲಾಟಗಳು ಹಬ್ಬ ಬಂದಾಗ ಊರ ಎದೆಯ ಭಾಗದಲ್ಲಿ ಎಲ್ಲರಿಗೂ ಮೊದಲೆಂಬಂತೆ ಚಾಪೆಹಾಸಿ ಜಾಗ ಗೊತ್ತುಮಾಡಿಕೊಂಡು ಸಂಭ್ರಮ ಹಂಚಿಕೊಳ್ಳುತ್ತಿದ್ದ ನಮಗೆ ಮೆಲ್ಲಗೆ ಜಾತ್ರೆಗಳಲ್ಲಿ ಸಾಮಾಜಿಕ ನಾಟಕಗಳೆಂಬ ಕಂಪನಿ ಟೆಂಟುಗಳು ಮನೋರಂಜನೆಯ ಮೂಲವಾಗತೊಡಗಿದವು.ಅಭಿನಯದ ದೃಷ್ಟಿಯಲ್ಲಿ ಬಯಲಾಟದ ನಟರು ಮಾಡುತಿದ್ದ ಮೋಡಿ ಯಾಕೋ ಏನೋ ಹಳ್ಳಿ ಒಳಗಿನ ಸಾಮಾಜಿಕ ನಾಟಕಗಳ ನಟರು ಮಾಡುತ್ತಿರಲಿಲ್ಲ.ಈ ನಾಟಕಗಳ ನಟರು ಉಡುಪಿಗೆ,ಮೇಕಪ್ಪಿಗೆ,ಸೆಟ್ ಗೆ ಮಹತ್ವ ನೀಡಿದಷ್ಟು ನಟನೆಯ ವೈವಿಧ್ಯಕ್ಕೆ ಮಹತ್ವ ನೀಡುತ್ತಿರಲಿಲ್ಲ.ಕೆಲವು ನಾಟಕಗಳ ನಟರಂತೂ ದೂರದ…

ಜೆಡಿಎಸ್: ಸೋತ ಪ್ರಯೋಗ

ಪಶ್ಚಿಮ ಬಂಗಾಳದಲ್ಲಿ ಪ್ರಾದೇಶಿಕ ಪಕ್ಷ ತೃಣಮೂಲ ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿರುವ ಮುಸ್ಲಿಂ ಸಮುದಾಯ ಕರ್ನಾಟಕದಲ್ಲಿ ಜೆಡಿಎಸ್ ಜೊತೆ ನಿಂತೀತೆಂಬ ಮಾಜಿ ಸಿಎಂ ಕುಮಾರಸ್ವಾಮಿಯವರ ಲೆಕ್ಕಾಚಾರ ಸಿಂದಗಿ, ಹಾನಗಲ್ ಉಪ ಚುನಾವಣೆಯಲ್ಲಿ ತಲೆಕೆಳಗಾಗಿದೆ. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ಸಿಗರನ್ನೂ, ಕಮ್ಯೂನಿಸ್ಟರನ್ನೂ ಅಪ್ರಸ್ತುತರನ್ನಾಗಿಸಿರುವ ಮಮತಾ ಬ್ಯಾನರ್ಜಿ, ಬಂಡೆಗಲ್ಲಿನಂತೆ ನಿಶ್ಚಲರಾಗಿದ್ದಾರೆ. ಇಲ್ಲಿ ಆ ಪ್ರಯೋಗ ಅಷ್ಟೆಲ್ಲ ಸುಲಭದ ಕಾರ್ಯವಲ್ಲ. ಜೆಡಿಎಸ್: ಸೋತ ಪ್ರಯೋಗ ಕಲಿಯುವ ಮನಸ್ಸುಳ್ಳವರಿಗೆ ಕಲಿಯಬಹುದಾದ ಪಾಠ, ಸಿಂದಗಿ ಮತ್ತು ಹಾನಗಲ್ ಉಪಚುನಾವಣಾ ಫಲಿತಾಂಶದಲ್ಲಿದೆ. ಈ ಎರಡು ಕ್ಷೇತ್ರದ ಜಯವಾಗಲೀ ಅಪಜಯವಾಗಲೀ ರಾಜ್ಯ…

ಪ್ರಾಚೀನ ಸಂಸ್ಕೃತಿಯ ಬಹುದೊಡ್ಡ ಎಡೆ ಜಟಂಗಿರಾಮೇಶ್ವರ ಬೆಟ್ಟ

ಪ್ರಾಚೀನ ಸಂಸ್ಕೃತಿಯ ಬಹುದೊಡ್ಡ ಎಡೆ ಜಟಂಗಿರಾಮೇಶ್ವರ ಬೆಟ್ಟ ಜಟಂಗಿ ಅಥವಾ ಜಟಂಗಿರಾಮೇಶ್ವರ ಬೆಟ್ಟವು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಅತಿ ಎತ್ತರದ ಶಿಖರ. ಇಲ್ಲಿನ ಬೆಟ್ಟಗಳನ್ನು ಚಿಕ್ಕ ಮತ್ತು ದೊಡ್ಡ ಜಟಂಗಿ ಬೆಟ್ಟಗಳೆಂದು ಕರೆಯುತ್ತಾರೆ. ಚಿಕ್ಕ ಬೆಟ್ಟದ ಮೇಲೆ ಚಾರಿತ್ರಿಕ ಕುರುಹುಗಳಾದ ಅಶೋಕನ ಬಂಡೆಗಲ್ಲು ಶಾಸನ, ಶಿಲಾಶಾಸನ, ವೀರಗಲ್ಲು, ರಾಮೇಶ್ವರ ಮತ್ತಿತರ ಅನೇಕ ಪ್ರಾಚೀನ ದೇವಾಲಯಗಳಿದ್ದರೆ, ದೊಡ್ಡ ಬೆಟ್ಟದ ಮೇಲೆ ಕಾಶೀಪುರಾದಿsಶ್ವರ ದೇಗುಲ, ಜಟಾಯುವಿನ ಸಮಾಧಿ, ವರ್ಣಚಿತ್ರ ಮತ್ತು ಶಾಸನಗಳಿವೆ. ಜಟಂಗಿ ಬೆಟ್ಟಕ್ಕೆ ಅಲ್ಲಿನ ದೇವಾಲಯದ ಹಿನ್ನೆಲೆಯಲ್ಲಿ…

ಇಂಗ್ಲೀಷ್ ಮಾತನಾಡುವ ಹುಚ್ಚಿಗೆ ಬೆಳಂಬೆಳಗ್ಗೆಯ ಮನೆಗಳಿಗೆ ಭೇಟಿ

ಇಂಗ್ಲೀಷ್ ಮಾತನಾಡುವ ಹುಚ್ಚಿಗೆ ಬೆಳಂಬೆಳಗ್ಗೆಯ ಮನೆಗಳಿಗೆ ಭೇಟಿ ನನ್ನ ಒಂಬತ್ತನೇ ತರಗತಿಯ ಮಧ್ಯವಾರ್ಷಿಕ ಪರೀಕ್ಷೆಯ ನಂತರದಲ್ಲಿ ತಿಪ್ಪೇರುದ್ರಪ್ಪ ಮೇಷ್ಟ್ರು ನಮ್ಮ ಮನೆಗೆ ಬಂದು ಹೋಗುವ ಪರಿಪಾಠ ಶುರುವಾಯಿತು. ಆಸ್ಪತ್ರೆಯ ತನ್ನ ದಿನನಿತ್ಯದ ಭೇಟಿಯ ಹೊರತಾಗಿಯೂ ಊರ ಹಲವು ಉಳ್ಳವರ ಮನೆಗಳಿಗೆ ಬೆಳಗುಬೈಗುಗಳಲ್ಲಿ ನಿಯಮಿತವಾಗಿ ಭೇಟಿಕೊಡುವ ಸಂಪ್ರದಾಯವನ್ನು ಮೇಷ್ಟ್ರು ನಿವೃತ್ತಿಯ ತದನಂತರದಲ್ಲಿ ತಪ್ಪದೇ ಪಾಲಿಸಿಕೊಂಡು ಬಂದವರೇ. ಮೇಷ್ಟ್ರಿಗೆ ನಾಲಗೆ ಇದ್ದ ಕಾರಣಮಾತ್ರದಿಂದಾಗಿ ಈ ಭೇಟಿಗಳು ಅನೂಚಾನವಾಗಿ ನಡೆಯುತ್ತಿದ್ದವು ಎಂದು ಈಗ ನನಗನ್ನಿಸುತ್ತದೆ. ಮೇಷ್ಟ್ರ ನಾಲಗೆಗೆ ಇದ್ದ ಎರಡು…

ಬಡಪಾಯಿ ಎಮ್ಮೆಗಳಿಗೂ ಥ್ಯಾಂಕ್ಸ್ ಹೇಳೋಣ ಬನ್ನಿ

ಬಡಪಾಯಿ ಎಮ್ಮೆಗಳಿಗೂ ಥ್ಯಾಂಕ್ಸ್ ಹೇಳೋಣ ಬನ್ನಿ ದುರ್ಗಾ- ಮಹಿಷ ಕದನ ಮತ್ತು ಮಹಿಷಾಸುರ ಮರ್ದನದ ಪರಿಣಾಮ ಇದ್ದೀತು. ನಮ್ಮ ಎಲ್ಲ ಜಾನುವಾರುಗಳ ಪೈಕಿ ನಿಕೃಷ್ಟವೆಂದು ಕಳಂಕ ಹೊತ್ತ ಪ್ರಾಣಿಯಿದು. ಪರಮ ಕ್ರೌರ್ಯಕ್ಕೆ ಗುರಿಯಾಗುವ ಜೀವಿ. ಮನಸೇಚ್ಛೆ ಬಡಿತ ತಿನ್ನುತ್ತದೆ, ದೇವಿಯ ಮುಂದೆ ಕತ್ತು ಕಡಿಸಿಕೊಂಡು ಬಲಿಯಾಗುತ್ತದೆ. ಮೇವು ನೀರಿಲ್ಲದೆ ನೂರಾರು ಕಿ.ಮೀ. ದೂರ ಹಿಂಸೆಯ ಸಾಗಣೆಗೆ ತುತ್ತಾಗಿ ಕಸಾಯಿ ಖಾನೆಗಳಲ್ಲಿ ಅತ್ಯಂತ ಯಾತನೆಯ ಮರಣಕ್ಕೆ ಗುರಿಯಾಗುತ್ತದೆ. ಕಪ್ಪು ವರ್ಣವನ್ನು ಕೀಳೆಂದೂ, ಗೌರವರ್ಣವನ್ನು ಮೇಲೆಂದೂ ನೂರಾರು ವರ್ಷಗಳಿಂದ ನಿತ್ಯ…

ಎಲ್ಲೆಲ್ಲೂ ಗ್ಯಾಸ್ ತಿಪ್ಪೇರುದ್ರಪ್ಪಮೇಷ್ಟು ಮತ್ತು ಅವರ ಮಾತು

ಎಲ್ಲೆಲ್ಲೂ ಗ್ಯಾಸ್ ತಿಪ್ಪೇರುದ್ರಪ್ಪಮೇಷ್ಟು ಮತ್ತು ಅವರ ಮಾತು “ಡಾಕ್ಟ್ರೇ, ಈ ಜನ ಬಾಯಿ ಕಟ್ಟುವುದಿಲ್ಲ ಸಿಕ್ಕಸಿಕ್ಕಿದ್ದು ತಿಂದು, ಔಷಧಿಗಳನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳದೆ ತಮ್ಮ ಆರೋಗ್ಯವನ್ನು ಹಾಳುಮಾಡಿಕೊಂಡು ಪರಿಸ್ಥಿತಿ ತೀರಾ ಬಿಗಡಾಯಿಸಿದಾಗ ಮಾತ್ರ ಆಸ್ಪತ್ರೆಗೆ ಓಡಿ ಬರುತ್ತಾರೆ. ಇಂತಹವರಿಗೆ ಎಂತಹ ಚಿಕಿತ್ಸೆ ಮಾಡಿದರೂ ಪ್ರಯೋಜನವಿಲ್ಲ” ಎಂದು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾಕ್ಟರ್ ಶಿವಶಂಕರ ಮೋಟೆಬೆನ್ನೂರ ಅವರ ಟೇಬಲ್ ಎದುರಿಗಿದ್ದ ಮರದ ಕುರ್ಚಿಯೊಂದರಲ್ಲಿ ಪೂರ್ತಿ ಹಿಂದಕ್ಕೆ ಒರಗಿದಂತೆ ಕುಳಿತು ಕಾಲುಗಳನ್ನು ನೀಳವಾಗಿ ಚಾಚಿ, ಮೂಗಿನ ತುದಿಗೆ…

ದೇವ -ದೇವರ ನಡುವೆ

ದೇವ -ದೇವರ ನಡುವೆ ಹೌದು ಹಳ್ಳಿ ಅವ್ವನೆಂಬ ಶಕ್ತಿಯ ತವರು.ಅಪ್ಪನೆಂಬ ಬೆವರಿನ ತಾಣ.ಅನೇಕರ ಬಾಲ್ಯದ ತಾಯಿಬೇರುಗಳ ಹಲವು ಕವಲುಗಳ ಈ ಊರ ನೆನಪುಗಳು ಇವತ್ತಿಗೂ ವಿಶಿಷ್ಟ.ಈಗ ಊರುಗಳು ಮೆಲ್ಲಗೆ ತನ್ನ ಹಳ್ಳಿತನ ಕಳಚಿಕೊಂಡು ನಿಧಾನಕ್ಕೆ ನಗರದಂತೆ ಮೇಕಪ್ ಮಾಡಿಕೊಳ್ಳುತ್ತಿವೆ.ಇಲ್ಲಿ ಹಳೆಯ ಧೂಳು ತುಂಬಿದ ಕಾಲುದಾರಿಗಳು ನಾಶವಾಗಿವೆ.ಚರಂಡಿಗಳಲ್ಲದ ಓಣಿಗಳಲ್ಲಿ ಈಗ ಪಂಚಾಯ್ತಿಗಳಿಂದ ಬದಲಾಗಿವೆ. ತಳವರ್ಗಗಳನ್ನ ಕೇರಿಗಳೆಂದು ದೂರ ವಿಟ್ಟಿದ್ದ ಜನರು ಈಗ ಅವುಗಳ ಪಕ್ಕ ಪಕ್ಕದಲ್ಲೇ ಬಣ್ಣ ಬಣ್ಣದ ರಂಗಿನ ಬೆಡಗಿಯರಂತಹ ಮನೆಗಳನ್ನ ಕಟ್ಟಿಕೊಂಡಿದ್ದಾರೆ.ಕೂಲಿ ಜನರ…

ಸ್ಮಾರಕ ಪರಂಪರೆ ಮತ್ತು ಸಾಂಸ್ಕೃತಿಕ ಸಂಗತಿಗಳು

ಸ್ಮಾರಕ ಪರಂಪರೆ ಮತ್ತು ಸಾಂಸ್ಕೃತಿಕ ಸಂಗತಿಗಳು ಚರಿತ್ರೆಯ ರಚನೆಯಲ್ಲಿ ಆಕರಗಳ ಪಾತ್ರ ಬಹುಮುಖ್ಯ. ಆಕರಗಳನ್ನು ಸಾಹಿತ್ಯಕ ಮತ್ತು ಪುರಾತತ್ವೀಯ ಆಕರಗಳೆಂದು ವಿಭಾಗಿಸಲಾಗಿದೆ. ಪುರಾತತ್ವೀಯ ಆಕರಗಳಲ್ಲಿ ಸ್ಮಾರಕಗಳಿಗೆ ವಿಶೇಷ ಮಹತ್ವವಿದೆ. ಕರ್ನಾಟಕದ ಸಾಂಸ್ಕೃತಿಕ ಇತಿಹಾಸ ರಚನೆಗೆ ನೆರವಾಗುವ ಆಕರ ಸಾಮಗ್ರಿಗಳಲ್ಲಿ ಸ್ಮಾರಕಗಳಿಗಿಂತ ಪ್ರಮುಖ ಸಾಧನ ಮತ್ತೊಂದಿಲ್ಲ. ಅವುಗಳಲ್ಲಿ ಪ್ರಾಗಿತಿಹಾಸ ಕಾಲದ ಶಿಲಾ ಉಪಕರಣ-ಬೃಹತ್ ಶಿಲಾಸಮಾಧಿಗಳಿಂದ ಹಿಡಿದು ದೇವಾಲಯ, ಮಸೀದಿ, ಚರ್ಚು, ಕೋಟೆ-ಕೊತ್ತಲ, ಅರಮನೆ, ಮಹಲ್ ಇತ್ಯಾದಿ ಸೇರಿವೆ. ಈ ಬಗೆಯ ಸ್ಮಾರಕಗಳು ಪ್ರಾಚೀನ ಪರಂಪರೆಯ ಧ್ಯೋತಕಗಳು. ಇವು ಪ್ರಾಚೀನರ…

ಆಡಿದ ಮಾತೇ ತಿರುಗುಬಾಣ

ದೇವಸ್ಥಾನ, ಚರ್ಚು, ಗುರುದ್ವಾರ ಹೀಗೆ ಯಾವುದಕ್ಕೂ ಅವರವರ ಭಾವಕ್ಕೆ ಅನುಗುಣವಾಗಿ ಅದನ್ನು ಹೋಲಿಸಿಕೊಳ್ಳಬಹುದು. ಶಾಸಕ ಪಾಟೀಲರು ಈ ಬಗೆಯ ಭಾನಗಡಿಗಳನ್ನು ಮಾಡಿಕೊಳ್ಳುವುದಕ್ಕೆ ಹೊಸಬರೇನೂ ಅಲ್ಲ. ನಾನು ಬಾದಶಹಾ ಎಂಬ ಸಿನಿಮೀ ಶೈಲಿಯ ಡೈಲಾಗ್‌ನಲ್ಲಿ ಹೇಳಿರುವಂತೆ ಅವರಿಗೆ ಏನು ಮಾಡಬೇಕು ಎನ್ನುವುದು ಗೊತ್ತಿದೆ. ಗೊತ್ತಿಲ್ಲದೇ ಇರುವುದು ಎಂದರೆ ತಾವು ಏನನ್ನು ಮಾಡಬಾರದು; ಏನನ್ನು ಹೇಳಬಾರದು ಎನ್ನುವುದು. ಆಡಿದ ಮಾತೇ ತಿರುಗುಬಾಣ ನಾನು ಬಾದಶಹಾ ಇದ್ದೀನಿ. ಕಾರ್ಪೊರೇಟರು, ಕೌನ್ಸಿಲರುಗಳು ಏನೂ ಅಲ್ಲ. ಏನು ಮಾಡಬೇಕು ಎನ್ನುವುದು ನನಗೆ ಗೊತ್ತಿದೆ…. ಇದು…

ಕಾಯಕಯೋಗಿಯ ಬದುಕಿನ ತುಡಿತಗಳು

ಕಾಯಕ ಯೋಗಿಯ ಬದುಕಿನ ತುಡಿತಗಳು “ಏನಪ್ಪಾ, ಕುರುಗೋಡಪ್ಪ, ಇನ್ನೂ ಎಷ್ಟು ದಿನ ಅಂತ ನನ್ನ ಮೊಮ್ಮಗನನ್ನು ಅಲೆಸಬೇಕು ಎಂದಿದ್ದೀಯ? ಇವತ್ತು, ನಾಳೆ ಅನ್ನುತ್ತಲೇ ಎರಡು ವಾರಗಳಿಂದ ಬಟ್ಟೆಕೊಡದೆ ಏಕೆ ಸತಾಯಿಸುತ್ತಿದ್ದೀಯ?” ಎಂದು ಏರಿದ ಧ್ವನಿಯಲ್ಲಿ ನನ್ನ ಅವ್ವ ದರ್ಜಿ ಕುಂಬಾರರ ಕುರುಗೋಡಪ್ಪನನ್ನು ಬಸ್ ಸ್ಟ್ಯಾಂಡ್ ನಲ್ಲಿ ದುರ್ಗಕ್ಕೆ ಹೋಗುವ ಮಹಾದೇವಿ ಬಸ್ಸಿಗಾಗಿ ಕಾಯುತ್ತಿದ್ದ ಹತ್ತಾರು ಪ್ರಯಾಣಿಕರು ಜಮಾಯಿಸುವ ರೀತಿಯಲ್ಲಿ ಬಸ್ ಸ್ಟ್ಯಾಂಡ್ ಬದಿಯಲ್ಲೇ ಇದ್ದ ಆತನ ಅಂಗಡಿ ಕಮ್ ಮನೆಯ ಹಜಾರದಲ್ಲಿ ವಿಚಾರಣೆ ನಡೆಸುವುದಕ್ಕೆ ಮೊದಲಿಟ್ಟ ಹೊತ್ತು…

1 2 3 4 5 6 10
error: Content is protected !!