ಅಂಕಣ
ಪ್ರಾಚೀನ ಶಿಲ್ಪಾವಶೇಷಗಳೂ, ನಂಬಿಕೆ-ಆಚರಣೆಗಳೂ. . .
ಪ್ರಾಚೀನ ಶಿಲ್ಪಾವಶೇಷಗಳೂ, ನಂಬಿಕೆ-ಆಚರಣೆಗಳೂ. . . ಪ್ರಾಚೀನ ಮಾನವನ ಜೀವನ ವಿಧಾನಗಳನ್ನು ತಿಳಿಸುವ ಮಹತ್ವದ ಕುರುಹುಗಳೆಂದರೆ ಅವಶೇಷಗಳು. ಅವುಗಳಲ್ಲಿ ಶಿಲಾಯುಧ, ಮಡಕೆ-ಕುಡಿಕೆ, ಶಿಲಾ ಸಮಾಧಿಗಳು; ಇತಿಹಾಸ ಕಾಲದ ಶಿಲಾಶಾಸನ, ಮೂರ್ತಿಶಿಲ್ಪ, ಉಬ್ಬುಶಿಲ್ಪ, ವೀರಗಲ್ಲು, ಮಾಸ್ತಿಗಲ್ಲು, ದೇವಾಲಯ, ಕೋಟೆ-ಕೊತ್ತಲ ಇತ್ಯಾದಿ ಸೇರಿವೆ. ಇವೆಲ್ಲವೂ ಪ್ರಾಚೀನರ ಚರಿತ್ರೆಯನ್ನು ಅರಿಯುವ ಮಹತ್ವದ ದಾಖಲೆಗಳೇ ಆಗಿವೆ. ಈ ಬಗೆಯ ಪ್ರಾಚೀನ ಅವಶೇಷಗಳ ಮೇಲೆ ಜನರು ಇಂದಿಗೂ ಇಟ್ಟುಕೊಂಡು ಆಚರಿಸುತ್ತಿರುವ ನಂಬಿಕೆ-ಆಚರಣೆಗಳು ವಿಶಿಷ್ಟವಾಗಿವೆ. ಈ ಬಗೆಯ ನಂಬಿಕೆಗಳಲ್ಲಿ ಅವಶೇಷಗಳ ರಕ್ಷಣೆಯ…