Browsing: ಕ್ರೈಮ್

ಕ್ರೈಮ್

ಒಂಬತ್ತು ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ

ಬೆಂಗಳೂರು, ಜು,15:ಭ್ರಷ ಅಧಿಕಾರಿಗಳಿಗೆ ಸಿಂಹಸ್ವಪ್ನವಾದ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಒಂಬತ್ತ ಅಧಿಕಾರಿಗಳ ಮನೆ ,ಕಚೇರಿ ಮೇಲೆ ದಾಳಿ ನಡೆಸಿ ಅಪಾರ ಆಸ್ತಿ ದಾಖಲೆಗಳನ್ನು ಪತ್ತೆ ಹಚ್ಚಿದೆ. ಬೆಂಗಳೂರು, ಕೋಲಾರ, ಮಂಗಳೂರು ಬೀದರ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಸರ್ಕಾರಿ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಎಸಿಬಿ ಶಾಕ್ ನೀಡಿದೆ. ಅಧಿಕಾರಿಗಳ ಮನೆ,ಕಚೇರಿ ಸೇರಿದಂತೆ ಹಲವು ಕಡೆಗಳಲ್ಲಿ ದಾಳಿ ನಡೆಸಿದ ಎಸಿಬಿ ತಂಡ ಪರಿಶೀಲನೆಯಲ್ಲಿ ತೊಡಗಿವೆ. ಎಸಿಬಿ ದಾಳಿಗೆ ಒಳಗಾದ ಅಧಿಕಾರಿಗಳ ಮಾಹಿತಿ ಈ…

ಐಷರಾಮಿ ಕಾರುಗಳ ವಂಚಕರ ಬೃಹತ್ ಜಾಲ ಭೇಟೆಯಾಡಿದ ಸಿಸಿಬಿ ಪೊಲೀಸರು

ಬೆಂಗಳೂರು,ಜು.14- ಐಷಾ ರಾಮಿ ಕಾರುಗಳ ಮಾಲೀಕರನ್ನು ನಂಬಿಸಿ ಕಾರು ಪಡೆದು ಒತ್ತೆಯಿಡುತ್ತಿದ್ದ ಬೃಹತ್ ಜಾಲವನ್ನು ಭೇಟೆಯಾಡಿರುವ ಸಿಸಿಬಿ ಪೊಲೀಸರು, ಹಲವರನ್ನು ಬಂಧಿಸಿ 5 ಕೋಟಿ ಮೌಲ್ಯದ 39 ಕಾರುಗಳು ಹಾಗೂ 58 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರು ನಗರದ ನಿವಾಸಿಗಳಾದ ನಸೀಬ್, ಮೊಹಮ್ಮದ್ ಅಜುಂ ಮತ್ತು ಮಹೀರ್ ಖಾನ್ ಬಂಧಿತರು. ಆರೋಪಿಗಳು ಐಷಾರಾಮಿ ಕಾರುಗಳನ್ನು ಮರುಮಾರಾಟ ಮಾಡಿಸಿಕೊಡುತ್ತೇವೆ ಎಂದು ಮಾಲೀಕರನ್ನು ನಂಬಿಸಿ ಅವರಿಂದ ಕಾರುಗಳನ್ನು ಪಡೆದುಕೊಳ್ಳುತ್ತಿದ್ದರು. ತದನಂತರ ಮಾಲೀಕರ ಅನುಮತಿ ಇಲ್ಲದೆ ಬೇರೆಯವರ ಬಳಿ ಒತ್ತೆ ಇಡುತ್ತಿದ್ದರು.…

ಜೈಲಿನಲ್ಲಿದ್ದುಕೊಂಡೇ ಸ್ಕೆಚ್; ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ಪೊಲೀಸರ ದಾಳಿ

ಬೆಂಗಳೂರು, ಜು.10: ಜೈಲಿನಲ್ಲಿದ್ದುಕೊಂಡೆ ಕಿಡಿಗೇಡಿಗಳು ಇತ್ತೀಚೆಗೆ ನಗರದಲ್ಲಿ ನಡೆದ ಕೃತ್ಯಗಳಿಗೆ ಸ್ಕೆಚ್ ಹಾಕಿದ್ದರು ಎನ್ನುವ ಅಂಶ ಈಗ ಬಯಲಿಗೆ ಬಂದಿದೆ. ಈ ಆಧಾರದ ಮೇಲೆ ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಿಡೀರ್ ದಾಳಿ ನಡೆಸಿದರು. ಇತ್ತೀಚೆಗೆ ಶಾಸಕ ಆರವಿಂದ್ ಬೆಲ್ಲದ್ ಅವರು ನನ್ನ ದೂರವಾಣಿ ಕದ್ದಾಲಿಕೆ ಮಾಡುತ್ತಿರುವುದರ ಜತೆಗೆ ಜೈಲಿನಲ್ಲಿರುವ ವ್ಯಕ್ತಿಯೊಬ್ಬ ನನಗೆ ದೂರವಾಣಿ ಕರೆ ಮಾಡಿದ್ದ ಎಂದು ಆರೋಪಿಸಿದ್ದರು.ಇದರ ಜತೆಗೆ ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಹತ್ಯೆ ಹಾಗೂ ಗೋವಿಂದಪುರ ಪೊಲೀಸ್…

ಲ್ಯಾಂಡ್ ಡಿಲಿಂಗ್ ಹಿನ್ನಲೆ ಮಾರಕಾಸ್ತ್ರದಿಂದ ಹಲ್ಲೆ: ವ್ಯಕ್ತಿ ಸ್ಥಿತಿ ಗಂಭೀರ…!

ಹುಬ್ಬಳ್ಳಿ,ಜು09: ಲ್ಯಾಂಡ್ ಡಿಲಿಂಗ್ ಹಿನ್ನೆಲೆಯಲ್ಲಿವ್ಯಕ್ತಿಯ ಮೇಲೆ‌ ಮಾರಕಾಸ್ತ್ರಗಳಿಂದ ದಾಳಿ ಮಾಡಿರುವ ಘಟನೆ ಹುಬ್ಬಳ್ಳಿಯ ಬೆಂಗೇರಿಯ ಚಿಕ್ಕು ತೋಟದಲ್ಲಿ ನಡೆದಿದೆ. ವಿರೇಶ ತೆಗಡೆ ಎಂಬ ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆದಿದೆ. ಉದಯನಗರದ ರೌಡಿ ಶೀಟರ್ ಅಲ್ತಾಫ್ ಬೇಪಾರಿ ಹಾಗೂ ಆತನ ಸಹಚರರಿಂದ ವೀರೇಶ ನ ಮೇಲೆ ಮನಸ್ಸೋ ಇಚ್ಛೆ ಲಾಂಗ್ ದಾಳಿ ನಡೆದಿದೆ ಎನ್ನಲಾಗಿದೆ. ಹಿನ್ನೆಲೆ: ಎರಡು ಎಕರೆ ಜಮೀನನ್ನು ಬೇರೊಬ್ಬರಿಗೆ ಮಾರಿದ್ದ ಜಮೀನನ್ನು ಖಾಲಿ ಮಾಡಿಸಲು ಅಲ್ತಾಪ ಬೇಪಾರಿ ತನ್ನ ಮಧ್ಯಸ್ತಿಕೆಯಲ್ಲಿ ಡೀಲ್ ಮಾಡುವುದಾಗಿ ಮತ್ತು…

ಬೆಂಗಳೂರಿನಲ್ಲಿ ಭೀಮಾ ತೀರದ ಬಂದೂಕುಗಳ ಸದ್ದು..!!

writing-ಪರಶಿವ ಧನಗೂರು ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ, ಸಾಫ್ಟವೇರ್ ಸಿಟಿ, ಎಂದೆಲ್ಲಾ ಕರೆಸಿಕೊಳ್ಳುತ್ತಿದ್ದ ಬೆಂಗಳೂರು ನಗರ ಈಗ ಕ್ರೈಂಸಿಟಿ..! ಮಾಫಿಯಾಗಳ ಮಹಾಗರ..! ಗ್ಯಾಂಗ್ ಸ್ಟರ್ ಗಳ-ಗ್ಯಾಂಗ್ ವಾರ್ ಗಳ ಗಾರ್ಡನ್ ಸಿಟಿ..!ಕೊಲೆಗಳ ನಗರವೆಂಬ ಕುಖ್ಯಾತಿಗೆ ತುತ್ತಾಗಿದೆ. ಕೋರೋನ ಲಾಕ್ ಡೌನ್ ನಲ್ಲಿ ಯಾವುದೇ ಕ್ರೈಂ ರೇಟ್ ಇಲ್ಲದೆ ತಣ್ಣಗಿದ್ದ ಬೆಂಗಳೂರು ಮಹಾನಗರದಲ್ಲಿ, ಈಗ ಲಾಕ್ ಡೌನ್ ಸಡಿಲಾಗುತ್ತಿದ್ದಂತೆ ಮತ್ತೆ ಎಂದಿನಂತೆ ರೌಡಿಗಳು ತಮ್ಮ ಹಳೇ ಚಾಳಿ ಮುಂದುವರಿಸುತ್ತಿದ್ದು, ಜನಸಾಮಾನ್ಯರು ಬೆಚ್ಚಿ ಬೀಳುವಂತೆ, ಹಾಡುಹಗಲೇ ನಡುಬೀದಿಯಲ್ಲಿ ಕೊಲೆಗಳನ್ನು ಮಾಡೀ…

ಹಲ್ಲೆ ಪ್ರಕರಣ; ಮಾಜಿ ಸಚಿವ ಪರಮೇಶ್ವರ್ ನಾಯಕ್ ಸಹೋದರ ಬಂಧನ

ವಿಜಯನಗರ, ಜು,04;ವೃದ್ದನ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂದಿಸಿದಂತೆ ಮಾಜಿ ಸಚಿವ ಪರಮೇಶ್ವರ್ ನಸಯಕ್ ಸಹೋದರನನ್ನು ಬಂಧಿಸಲಾಗಿದೆ. ಜೂನ್ 29ರಂದು ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಲಕ್ಷ್ಮೀಪುರ ತಾಂಡದಲ್ಲಿ ಮನೆಯ ಜಾಗದ ಕ್ಷುಲ್ಲಕ ವಿಚಾರವಾಗಿ ಶರಣ ನಾಯ್ಕ ಮೇಲೆ ಪಿ. ಟಿ. ಶಿವಾಜಿ ನಾಯ್ಕ ಹಲ್ಲೆ ಮಾಡಿದ್ದರು. ಹಲ್ಲೆಯಿಂದಾಗಿ ಗಾಯಗೊಂಡಿದ್ದ ಶರಣ ನಾಯ್ಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಾಣಗೆರೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂಬಂಧ…

ಬೆಂಗಳೂರಿನ ಭಕ್ಷಿಗಾರ್ಡನ್ನಿನ ರಕ್ತಚರಿತ್ರೆ..!

writing-ಪರಶಿವ ಧನಗೂರು ಭಕ್ಷಿಗಾರ್ಡನ್..! ಬೆಂಗಳೂರಿನ ಭಯಾನಕ ರಕ್ತಚರಿತ್ರೆಯ ಪುಟಗಳಿರುವ ವಿಚಿತ್ರವಾದ ವಿಭಿನ್ನ ಏರಿಯಾ! ಈ ಗಾರ್ಡನ್ ಗ್ಯಾಂಗ್ ವಾರ್ ನ ಮಾಫಿಯಾದ ಇತಿಹಾಸದ ಪುಟಗಳಲ್ಲಿ ಬೆಳಕಿಗೆ ಬರದ ಎಷ್ಟೋ ನಿಗೂಢ ಗುಪ್ತ ಕ್ರೂರ ಕತೆಗಳಿವೆ. ಪದೇ ಪದೇ ತನ್ನ ಅಪರಾಧ ಕೈತ್ಯಗಳಿಗಾಗಿ ಬೆಂಗಳೂರಿಗರನ್ನೂ ಬೆಚ್ಚಿ ಬೀಳಿಸುತ್ತ , ಹೆದರಿಸುತ್ತ ನರಳುತ್ತಾ ಹೊರಳುತ್ತಿದ್ದ ಬೆಂಗಳೂರಿನ ಹೈದಯ ಭಾಗದಲ್ಲಿರುವ ಭಕ್ಷಿಗಾರ್ಡನ್ ಈಗ ಮಾಜಿ ಮಹಿಳಾ ಕಾರ್ಪೋರೇಟರ್ ಬೀಕರ ಕೊಲೆಗೆ ಸಾಕ್ಷಿಯಾಗಿ, ರಾಜ್ಯದ ಜನಪ್ರತಿನಿಧಿಗಳನ್ನೇ ಬೆದರಿಸಿ, ನಿದ್ದೆಗೆಡಿಸಿದೆ. ಆಳುವ ಸರ್ಕಾರವೇ ತಣ್ಣಗೆ…

ಕೋಲಾರ,ಬೀದರ್ ಮನೆ ಮೇಲೆ ದಾಳಿ,೯೧ ಕೆಜಿ ಡ್ರಗ್ಸ್ ವಶ

ಬೆಂಗಳೂರು,ಜೂ,೨೬: ಕಾರ್ಖಾ ನೆಗಳಲ್ಲಿ ಅಲ್ಪಾಜೋಲಮ್ ಪೌಡರ್ ತಯಾರಿಸಿ ಕೋಲಾರ ಮತ್ತು ಬೀದರ್ ಮಾಲೀಕರ ಮನೆ ಮೇಲೆ ದಾಳಿ ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ಘಟಕದ ೯೧ ಕೆಜಿ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ ಬೀದರ್ ಕಾರ್ಖಾನೆ ಹಾಗೂ ಮನೆಗಳ ಮೇಲೆ ಎನ್‌ಸಿಬಿ ದಾಳಿ ಮಾಡಿದೆ.ಕಾರ್ಖಾನೆಯಲ್ಲಿ ಆಲ್ಪಾಜೋಲಮ್ ಪೌಡರ್ ತಯಾರಿಸಿ ಕೋಲಾರ, ಬೀದರ್, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಮಾರಾಟ ಮಾಡಲಾಗುತ್ತಿತ್ತು ದರ್ ಕೈಗಾರಿಕೆಯಲ್ಲಿ ಡ್ರಗ್ಸ್ ಉತ್ಪಾದಿಸಲಾಗುತ್ತಿತ್ತು. ಆರೋಪಿ ಎನ್.ವಿ. ರೆಡ್ಡಿ ಅಕ್ರಮವಾಗಿ ಕಾರ್ಖಾನೆ ನಡೆಸುತ್ತಿದ್ದ. ಆತನ ನಿವಾಸದ ಮೇಲೂ ದಾಳಿ ಮಾಡಿ…

ಯುವಕನಿಗೆ ಕಿರುಕುಳ; ಕಾಮಕ ಶಿಕ್ಷಕನ ಬಂಧನ

ನೆಲಮಂಗಲ,ಜೂ,26:ಯುವಕನಿಗೆ ನೀಲಿಚಿತ್ರ ತೋರಿಸಿ ಲೈಂಗಿಕ ಕಿರುಕುಳ ಕೊಡುತ್ತಿದ್ದ ಯುವಕನಿಗೆ ನೀಲಿಚಿತ್ರ ತೋರಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದಆರೋಪದ ಮೇಲೆ ಶಿಕ್ಷಕನನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ದಾಬಸ್‌ಪೇಟೆ ಪೊಲೀಸರು ಬಂಧಿಸಿದ್ದಾರೆ. ಮಾರ್ಗದರ್ಶನ ತೋರಬೇಕಿದ್ದ ಶಿಕ್ಷಕನೊಬ್ಬ ಯುವಕನಿಗೆ ಕಾಮುಕನಾಗಿ ಕಾಡಿದ್ದಾನೆ. ಗುರುವಿನ ಸ್ಥಾನದಲ್ಲಿದ್ದ ಶಿಕ್ಷಕ ನೀಲಿ ಚಿತ್ರ ತೋರಿಸಿ ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಅರೋಪ ಕೇಳಿಬಂದಿದೆ. ಲೈಂಗಿಕ ದೌರ್ಜನ್ಯ ಅರೋಪ ಹಿನ್ನೆಲೆ ರಂಗನಾಥ್ ಎಂಬ ಮುಖ್ಯೋಪಾಧ್ಯಾಯನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮಾನಸಿಕ ಅಸ್ವಸ್ಥ ಮಕ್ಕಳ ಧರಿತ್ರಿ…

ಮಾಜಿ ಕಸರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣ; ಆರೀಪಿಗಳ ಸುಳಿವು

ಮಾಜಿ ಕಾರ್ಪೊರೇಟರ್​ ರೇಖಾ ಕದಿರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಸಿದಂತೆ ಅರೋಪಿಗಳ  ಸುಳಿವುದೊರೆತಿದ್ದು ಯಾವುದೇ ಸಂದರ್ಭದಲ್ಲಿ ಬಂಧಿಸುವ ಸಾಧ್ಯತೆಗಳಿವೆ . ಬೆಂಗಳೂರು ,ಜೂ, 25:ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಅವರ ಹತ್ಯೆ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರಿಗೆ ಹಣಕ್ಕಾಗಿ ಸಂಬಂಧಿಕರಿಂದಲೇ ಈ ಕೊಲೆ ನಡೆದಿರುವ ಬಗ್ಗೆ ಪ್ರಾಥಮಿಕ ತನಿಖೆ ವೇಳೆ ಬಹಿರಂಗವಾಗಿದೆ. ಆರೋಪಿಗಳ ಬಂಧನಕ್ಕೆ ಬೆಂಗಳೂರು ಪೊಲೀಸರು ತಂಡ ರಚನೆ ಮಾಡಿದ್ದು, ವಿವಿಧ ಆಯಾಮಗಳಲ್ಲಿ ತನಿಖೆಗೆ ಮುಂದಾಗಿದ್ದಾರೆ. ಅಲ್ಲದೆ, ಪ್ರಮುಖ ಆರೋಪಿಗಳಾದ ರೇಖಾರ ಸಂಬಂಧಿ ಪೀಟರ್ ಹಾಗೂ…

ಸ್ವಂತ ಮಕ್ಕಳ ಮೇಲೆ ಹಲ್ಲೆ ಮಾಡಿದ ಪಾಪಿ ತಂದೆ ಬಂಧನ

ಬೆಂಗಳೂರು ,ಜೂ, ೨೩; ಮಲತಾಯಿ ಮಾತು ಕೇಳಿ ಮೂವರು ಮಕ್ಕಳ ಮೇಲೆ ತಂದೆಯೇ ಅಮಾನುಷವಾಗಿ ಹಲ್ಲೆ ಮಾಡಿದ ಪಾಪಿ ತಂದೆಯನ್ನು ಜೆಪಿ ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸೆಲ್ವಾ ಕ್ರೂಸರ್ ಚಾಲಕನಾಗಿದ್ದು. ಆತನ ಎರಡನೇ ಹೆಂಡತಿ ಮಾತು ಕೇಳಿ ತನ್ನ ಸ್ವಂತ ಮಕ್ಕಳ ಭುಜ, ಮೊಣಕೈ ಮತ್ತು ಪಾದಗಳಿಗೆ ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ನೋವನ್ನು ತಡೆಯಲಾರದೆ ಮಕ್ಕಳು ಕಿರುಚುತ್ತಾ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಈ ವೇಳೆ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿ ಮಕ್ಕಳನ್ನು ರಕ್ಷಿಸಿದ್ದಾರೆ.…

ಅಕ್ರಮ ಪಿಸ್ತೂಲ್; ಓರ್ವನ ಬಂಧನ

ವಿಜಯಪುರ,ಜೂ,21:ಅಕ್ರಮವಾಗಿ ಗನ್ ಹೊಂದಿದ್ದ ವ್ಯಕ್ತಿಯನ್ನು ಬಂಧಿಸಿರುವ ಭೀಮಾತೀರದ ಪೊಲೀಸರು ನಾಡ ಪಿಸ್ತೂಲ್, ನಾಲ್ಕು ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲೋಣಿ ಕೆ. ಡಿ ಗ್ರಾಮದ ಮಹಾದೇವ ಅಣ್ಣಾರಾಯ್ ಪಾಂಡ್ರೇ ಬಂಧಿತ ಆರೋಪಿ. ಬಂಧಿತನಿಂದ ಒಂದು ನಾಡ ಪಿಸ್ತೂಲ್, ನಾಲ್ಕು ಜೀವಂತ ಗುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ‌. ನಾಡ ಪಿಸ್ತೂಲ್ ಗನ್ ಬೆಲೆ ಸುಮಾರು 30 ಸಾವಿರ ಹಾಗೂ ನಾಲ್ಕು ಗುಂಡುಗಳ ಬೆಲೆ 1 ಸಾವಿರ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಕುರಿತು ಇಂಡಿ…

ಯುವತಿ ಮೇಲೆ ಅತ್ಯಾಚಾರವೆಸಗಿ ಗ್ರಾ.ಪಂ.ಸದಸ್ಯ ನಾಪತ್ತೆ

ಆನೇಕಲ್,ಜೂ,೧೭: ಗ್ರಾಮಪಂಚಾಯಿತ ಸದಸ್ಯನೊಬ್ಬ ಯುವತಿಯನ್ನು ಮನೆಗೆ ಕರೆಸಿಕೊಂಡು ಆಕೆಗೆ ಗನ್ ತೋರಿಸಿ ಅತ್ಯಚರವೆಸಗಿದ ಘಟನೆ ಬನ್ನೇರುಘಟ್ಟ ಸಮೀಪದ ಶಾನಬೋಗನ ಹಳ್ಳಿಯಲ್ಲಿ ಜರುಗಿದೆ. ಬಿಲ್ಲವಾರದಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಅಹಮದ್ ಪಾಷಾಅತ್ಯಾಚಾರ ಮಾಡಿದ್ದು ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.ಫೇಸ್‌ಬುಕ್‌ನಲ್ಲಿ ಯುವತಿಯ ಪರಿಚಯವಾಗಿದ್ದು ಆಕೆಗೆ ಮಾಡಲಿಂಗ್ ಕ್ಷೇತ್ರದಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ಮೂಡಿಸಿದ್ದ. ಹೆಬ್ಬಾಳ ಮೂಲದ ಆ ಯುವತಿಗೆತಾನು ಬನ್ನೇರುಘಟ್ಟ ಕಾರ್ಪೋರೇಟರ್ ಎಂದೂ ಹೇಳಿಕೊಂಡಿದ್ದ. ಲಾಕ್‌ಡೌನ್ ಹಿನ್ನೆಲೆ ಬಡವರಿಗೆ ಆಹಾರ್ ಕಿಟ್ ವಿತರಣೆ ಮಾಡುತ್ತಿರುವ ಫೋಟೋಗಳನ್ನೂ ಆಕೆಗೆ ವಾಟ್ಸಪ್ ಮೂಲಕ…

ಪಿಸ್ತೂಲು ಮಾರಾಟದಡಿ ರೌಡಿ ಬಂಧನ

ಬೆಂಗಳೂರು,ಜೂ,೧೩:ಜಪ್ತಿ ಮಾಡಲಾದ ಪಿಸ್ತೂಲ್‌ಕಾಡುಬೀಸನಹಳ್ಳಿ ಸೋಮ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದಡಿ ರೌಡಿ ರೋಹಿತ್ ಹಾಗೂ ಸಹಚರರನ್ನು ಇತ್ತೀಚೆಗಷ್ಟೇ ಸಿಸಿಬಿ ಪೊಲೀಸರು ಬಂಧಿಸಿದ್ದರು. ಕೃತ್ಯ ಎಸಗಲು ರೌಡಿ ಲೋಹಿತ್‌ಗೆ ಪಿಸ್ತೂಲ್ ಮಾರಿದ್ದ ಆರೋಪದಡಿ ಕಲಬುರ್ಗಿ ರೌಡಿ ಸುಂಕರಿ ಅಲಿಯಾಸ್ ಮಾರ್ಕೇಟ್ ಸತೀಶ್‌ನನ್ನೂ ಸೆರೆ ಹಿಡಿದಿದ್ದಾರೆ. ‘ಹತ್ಯೆ ಸಂಚು ಪ್ರಕರಣದ ತನಿಖೆಯಲ್ಲಿ ಮಹತ್ವದ ಮಾಹಿತಿಗಳು ಸಿಕ್ಕಿವೆ. ರೌಡಿ ಸತೀಶ್, ಅಕ್ರಮವಾಗಿ ರಾಜ್ಯದಲ್ಲಿ ನಾಡ ಪಿಸ್ತೂಲ್ ಮಾರುತ್ತಿದ್ದ ಸಂಗತಿಯೂ ಬಯಲಾಗಿದೆ. ಆತನ ಜೊತೆಯಲ್ಲಿ ಇಬ್ಬರು ಸಹಚರರನ್ನು ಬಂಧಿಸಲಾಗಿದೆ. ಅವರಿಂದ ೩ ನಾಡ…

ಸಿಡಿ ಪ್ರಕರಣ-ಸ್ಟ್ರಿಂಗ್‌ಗೂ ಮುನ್ನವೇ ರಾಸಲೀಲೆ ವೀಡಿಯೋ ಆಗಿತ್ತು

ಬೆಂಗಳೂರು,ಜೂ,೧೨: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಲೇ ಇದೆ.ಈಗ ಮತ್ತೊಂದು ಸತ್ಯ ಬಯಲಾಗಿದೆ. ಸ್ಟ್ರಿಂಗ್ ಮಾಡುವ ಮೊದಲೇ ರಾಸಲೀಲೆ ವೀಡಿಯೋ ಆಗಿದ್ದರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹೌದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನರೇಶ್ ಮತ್ತು ಶ್ರವಣ್ ಅವರನ್ನು ವಿಚಾರಣೆಗೊಳಪಡಿಸಿದಾಗ ಈ ಸತ್ಯವನ್ನು ಬಾಯಿಬಿಟ್ಟಿದ್ದಾರೆ, ರಾಸಲೀಲೆ ವಿಡಿಯೋ ಮಾಡುವ ಸಂಬಂಧ ಯುವತಿಗೆ ಸ್ಟಿಂಗ್ ಕ್ಯಾಮರ ಕೊಡಿಸಿದ್ದು ನಾವು ಎಂದು ಶ್ರವಣ್ ಒಪ್ಪಿಕೊಂಡಿದ್ದಾನೆ. ಅವರು ಹೇಳಿರುವ ಇಂಟರೆಸ್ಟಿಂಗ್ ವಿಚಾರ ಏನಂದ್ರೆ ಸ್ಟಿಂಗ್ ಕ್ಯಾಮರದಲ್ಲಿ ವಿಡಿಯೋ…

ದೂರವಾಣಿ ವಿನಿಮಯ ಕರೆಗಳ ಕನ್ವರ್ಟ್; ಇಬ್ಬರ ಬಂಧನ

ಬೆಂಗಳೂರು, ಜೂ,09: ಅನಧಿಕೃತ ದೂರವಾಣಿ ವಿನಿಮಯ ಕರೆಗಳನ್ನು ಕನ್ವರ್ಟ್ ಮಾಡುತ್ತಿದ್ದ ತಂಡವನ್ನು ಬೇದಿಸಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಇಬ್ರಾಹಿಂ ಪುಲ್ಲಟ್ಟಿ ಮೊಹಮ್ಮದ್ ಕುಟ್ಟಿ ಹಾಗೂ ಗೌತಮ್ ಎನ್ನುವರನ್ನು ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ತಿಳಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಟಿ ನಡೆಸಿದ ಅವರು, ಬಿಟಿಎಂ ಲೇಔಟ್‌ನ 6 ಕಡೆ ದಾಳಿ ನಡೆಸಿ ಆರೋಪಿಗಳನ್ನು ಸೆರೆಹಿಡಿದಿದ್ದೇವೆ. ಬಂಧಿತ ಆರೋಪಿಗಳಿಂದ 960 ಸಿಮ್ ಕಾರ್ಡ್‌ಗಳು, 30 ಸಿಮ್ ಬಾಕ್ಸ್ ಡಿವೈಸ್ ವಶಕ್ಕೆ ಪಡೆಯಲಾಗಿದೆ. ಇದರಿಂದಲೇ ISD ಕರೆಗಳನ್ನು…

ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳಿಗೆ ಶಿಕ್ಷೆ ಪ್ರಕಟ

ಉಡುಪಿ, ಜೂ, ೦೮: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಆರೋಪವನ್ನು ಸಾಬೀತು ಪಡಿಸಿದ್ದು ಶಿಕ್ಷೆಯನ್ನು ಪ್ರಕಟಿಸಿದೆ ಉದ್ಯಮಿ ಭಾಸ್ಕರ್ ಶೆಟ್ಟಿಯನ್ನು ಕೊಲೆ ಮಾಡಿ ನಂತರ ಹೋಮಕುಂಡದಲ್ಲಿ ಸುಟ್ಟಿದ್ದ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ, ಪುತ್ರ ನವನೀತ್ ಶೆಟ್ಟಿ ಹಾಗೂ ರಾಜೇಶ್ವರಿ ಗೆಳೆಯ ನಿರಂಜನ ಭಟ್‌ಗೆ ಶಿಕ್ಷೆ ಪ್ರಕಟವಾಗಿದೆ. ಉಡುಪಿ ಜಿಲ್ಲಾ ನ್ಯಾಯಾಲಯದಿಂದ ಜೂನ್ ೮ಕ್ಕೆ ಶಿಕ್ಷೆ ತೀರ್ಪು ಪ್ರಕಟ ದಿನಾಂಕ ಮುಂದೂಡಲಾಗಿತ್ತು. ಮೂರು ಪ್ರಮುಖ ಆರೋಪಿಗಳು ದೋಷಿಗಳು ಎಂದು ಕೋರ್ಟ್ ತೀರ್ಪು ನೀಡಿದೆ.…

ಭಾರತೀಯ ಕುಸ್ತಿಗೆ ಕಳಂಕ ಮೆತ್ತಿದ ಕ್ರಿಮಿನಲ್..!

writing-ಪರಶಿವ ಧನಗೂರು ದುಬೈ ನಲ್ಲಿ ಕುಳಿತಿರುವ ಕುಖ್ಯಾತ ಗ್ಯಾಂಗ್ ಸ್ಟರ್ ಕಾಲಾ ಜತೇಡಿಯಾನ ಹುಡುಗನನ್ನು ಕೊಂದು ದೆಹಲಿಯಾಚೆಗಿನ ಅಂತಾರಾಷ್ಟ್ರೀಯ ಭೂಗತ ಜಗತ್ತಿನ ದ್ವೇಷ ಕಟ್ಟಿಕೊಂಡಿರುವ ಒಲಿಂಪಿಕ್ ಕುಸ್ತಿ ಪಟು ಸುಶೀಲ್ ಕುಮಾರ್ ಈಗ ಕುಂತಲ್ಲೇ ಬೆವೆತು ಹೋಗಿದ್ದಾನೆ. ಹಲವಾರು ವರ್ಷ ಉತ್ತರಪ್ರದೇಶ, ಜಾರ್ಖಂಡ್, ಹರಿಯಾಣ ಮೂಲದ ಗ್ಯಾಂಗ್ ಸ್ಟರ್ ಗಳ ಅಂಡರ್ವರ್ಲ್ಡ್ ನಂಟಿನಲ್ಲಿದ್ದ ಕುಸ್ತಿ ಪಟು ಸುಶೀಲ್ ಕುಮಾರ್ ಗೆ ಭೂಗತ ಜಗತ್ತು ಮರಾಮೋಸದ ಕತ್ತಲ ಜಗತ್ತು ಅದು ಬೆನ್ನಹಿಂದಿನಿಂದ ಯಾಮಾರಿಸಿ ಬಾರಿಸುತ್ತಾರೆ ಎಂಬುದು ಗೊತ್ತು. ರೌಡಿಸಂ…

ಕೊಲೆ ಯತ್ನ-ನಾಲ್ವರು ರೌಡಿಶೀಟರ್‌ಗಳ ಬಂಧನ

ಬೆಂಗಳೂರು,ಮೇ,೩೦: ತನ್ನ ಎದುರಾಳಿ ತಂಡದ ರೌಡಿಶೀಟರ್ ಕೊಲೆಗೆ ಸಂಚು ರೂಪಿಸಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ರೌಡಿಶೀಟರ್ ಗಳಾದ ಸೋಮ, ಮಧು, ಸುಮಂತ್ ಹಾಗೂ ಮುನಿಮಲ್ಲಪ್ಪ ಬಂಧಿತ ಆರೋಪಿಗಳು. ಬಂಧಿತರು ವಿರೋಧಿ ಬಣದಲ್ಲಿದ್ದ ರೌಡಿಶೀಟರ್ ರೋಹಿತ್ ಹತ್ಯೆಗೆ ಸಂಚುರೂಪಿಸಿದ್ದರು. ರೋಹಿತ್ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದನು. ವರ್ತೂರು ಕೆರೆ ಕೊಡಿ ಬಳಿ ರೋಹಿತ್ ಬರಲಿದ್ದಾನೆ ಎಂಬ ಮಾಹಿತಿ ಅರಿತ ಆರೋಪಿಗಳು ಮಾರಕಾಸ್ತ್ರ ಹಿಡಿದು ಕೊಲೆಗೆ ಸಂಚು ರೂಪಿಸಿದ್ದರು. ಈ ಕುರಿತು ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸಿಸಿಬಿ…

ಸಿಡಿ ಪ್ರಕರಣ; ರಮೇಶ್ ಜಾರಕಿಹೊಳಿಗೆ ಕ್ಲಿನ್ ಚಿಟ್..!?

ಬೆಂಗಳೂರು,ಮೇ,೨೯ : ಅಂತೂ ಇಂತೂ ನಿರೀಕ್ಷೆಯಂತೆಯೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಕ್ಲೀನ್ ಚಿಟ್ ನೀಡುವ ಎಲ್ಲಾ ಸಾಧ್ಯತೆಗಳು ಇವೆ. ಎಸ್‌ಐಟಿ ಸದ್ಯದಲ್ಲೇ ರಮೇಶ್ ಜಾರಕಿಹೊಳಿ ಈ ಸಿಡಿ ಕೇಸ್‌ಗೆ ಸಂಬಂಧಿಸಿದಂತೆ ‘ಬಿ ರಿಪೋರ್ಟ್ ಸಲ್ಲಿಸಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದೆ. ಸಾಕ್ಷ್ಯಾಧಾರಗಳ ಕೊರೆತೆ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿಗೆ ಕ್ಲಿನ್ ಚಿಟ್ ಕೊಡಲು ಅಧಿಕಾರಿಗಳು ಮುಂದಾಗಿದ್ದಾರೆ. ಅವರ ವಿರುದ್ಧ ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಾಲಯಕ್ಕೆ ಸಲ್ಲಿಸಿ ಪ್ರಕರಣವನ್ನು ಸಮಾಪ್ತಿಗೊಳಿಸಲಿದೆ. ಮಾರ್ಚ್ ೨೬ ರಂದು ಕಬ್ಬನ್ ಪಾರ್ಕ್…

error: Content is protected !!