Browsing: ರಾಷ್ಟ್ರೀಯ

ರಾಷ್ಟ್ರೀಯ

ಕೇರಳ ಸಚಿವ ಸಂಪುಟದಲ್ಲಿ ಹೊಸಬರಿಗೆ ಅವಕಾಶ, ಶೈಲಜಾಗೆ ಕೊಕ್

ತಿರುವನಂತಪುರಂ,ಮೇ,೧೮: ಕೋವಿಡ್ ಹರಿಡಿದ್ದ ಸಂದರ್ಭದಲ್ಲಿ ಕೇರಳದಲ್ಲಿ ಅದನ್ನು ಸಮರ್ಥವಾಗಿ ನಿಭಾಯಿಸಿ ಎಲ್ಲರ ಪ್ರಶಂಸೆಗೆ ಒಳಗಾಗಿದ್ದ ಆಗಿನ ಆರೋಗ್ಯ ಸಚಿವರಾಗಿದ್ದ ಕೆ.ಕೆ.ಶೈಲಜಾ ಅವರನ್ನು ಪಿಣಿರಾಯ್ ಅವರ ಸಚಿವ ಸಂಪುಟದಿಂದ ಹೊರಗುಳಿದಿದ್ದಾರೆ. ಬಹುತೇಕ ಈ ಬಾರಿ ಹೊಸ ಮುಖಗಳಿಗೆ ಅವಕಾಶ ನೀಡುವ ಮೂಲಕ ಸಿಪಿಐ(ಎಂ)ನ ರಾಜ್ಯ ಸಮಿತಿಯ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಎಂ.ಬಿ.ರಾಜೇಶ್ ಕೇರಳ ಸರಕಾರದ ನೂತನ ಸ್ಪೀಕರ್ ಆಗಿದ್ದು, ಕೆ.ಕೆ.ಶೈಲಜಾ ಅವರು ಪಕ್ಷದ ಪ್ರಮುಖ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎಂದು ಸಿಪಿಐಎಂ ಪ್ರಕಟಣೆಯಲ್ಲಿ ತಿಳಿಸಿದೆ. ಮುಖ್ಯಮಂತ್ರಿ ಪಿಣರಾಯಿ…

ದೊಡ್ಡ ಪ್ರಮಾಣದಲ್ಲಿ ಕೋವಿಡ್ ಲಸಿಕೆ ಹೆಚ್ಚಿಸಲು ಮೋದಿ ಸಲಹೆ

ನವದೆಹಲಿ,೧೮:sಸ್ಥಳೀಯ ಅವಶ್ಯಕತೆಗಳಿಗೆ ಅನುಗುಣವಾಗಿ ಹೊಸ ವಿಧಾನ ಅನುಸರಿಸುವಮೂಲಕ ದೊಡ್ಡಪ್ರಮಾಣದಲ್ಲಿ ಲಸಿಕೆ ಪೂರೈಕೆಯನ್ನು ಹೆಚ್ಚಿಸಲು ನಿರಂತರ ಪ್ರಯತ್ನ ಪಡಬೇಕುಎಂದು ಪ್ರಧಾನ ಮೋದಿ ಅವರು ಎಲ್ಲ ರಾಜ್ಯಗಳ ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. ೯ ರಾಜ್ಯಗಳ ೪೬ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಪ್ರಧಾನಿ ಮೋದಿ, ಕೋವಿಡ್-೧೯ ವಿರುದ್ಧದ ಹೋರಾಟದಲ್ಲಿ ರಾಜ್ಯ ಮತ್ತು ಜಿಲ್ಲೆ ಮಟ್ಟದ ಅಧಿಕಾರಿಗಳನ್ನು ’ಫೀಲ್ಡ್ ಕಮಾಂಡರ್ಸ್’ ಎಂದು ಮಂಗಳವಾರ ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ಸ್ಥಳೀಯ ಕಂಟೈನ್ ಮೆಂಟ್ ವಲಯಗಳು, ತ್ವರಿತಗತಿಯಲ್ಲಿ ಪರೀಕ್ಷೆ ಮತ್ತು ಜನರೊಂದಿಗೆ…

ಎರಡನೇ ಅಲೆಗೆ ೨೬೯ ವೈದ್ಯರು ಬಲಿ!

ನವದೆಹಲಿ, ಮೇ ೧೮:ಕೊರೊನಾ ಮಹಾಮಾರಿ ಬಂದಾಗಿನಿಂದಲೂ ವೈದ್ಯರು ನಿರಂತರವಾಗಿ ಚಿಕಿತ್ಸೆ ನೀಡುತ್ತಿದ್ದಾರೆ,ತಮ್ಮ ಬದುಕನ್ನು ಲೆಕ್ಕಿಸದೆ ಸೇವೆಯಲ್ಲಿಯೇ ನಿರತರಾಗಿದ್ದಾರೆ ಆದರೆ .ಇದರಿಂದ ಸಾವಿರಾರು ವೈದ್ಯರು ಬಲಿಯಾಗಿದ್ದಾರೆ ಎರಡನೇ ಅಲೆಯಲ್ಲಿ೨೬೯ ವೈದ್ಯರು ಸಾವನ್ನಪ್ಪಿದ್ದಾರೆ. ಭಾರತೀಯ ವೈದ್ಯಕೀಯ ಸಂಸ್ಥೆ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಮೊದಲ ಅಲೆ ಗೆ ೭೪೮ ಮಂದಿ ವೈದ್ಯರು ಸಾವನ್ನಪ್ಪಿದ್ದೆ ಎರಡನೇ ಅಲೆಗೆ ೨೬೯ ವೈದ್ಯರು ಸಾವನ್ನಪ್ಪಿದ್ದಾರೆ. ಎರಡನೇ ಅಲೆ ಎರಡು ತಿಂಗಳಲ್ಲೇ ೨೬೯ ಮಂದಿ ತುತ್ತಾಗಿದ್ದಾರೆ. ಅದರಲ್ಲಿ ಬಿಹಾರ್, ಉತ್ತರ ಪ್ರದೇಶ, ದೆಹಲಿ ರಾಜ್ಯಗಳಲ್ಲಿ ವೈದ್ಯರು…

ಭಾರತದಲ್ಲಿ ಇಳಿಕೆ ಕಂಡ ಕೊರೊನಾ ಸೋಂಕಿತರ ಸಂಖ್ಯೆ

ನವದೆಹಲಿ,ಮೇ,೧೮: ಕೋವಿಡ್-೧೯ ಸೋಂಕಿಗೆ ಭಾರತ ಸಮರೋಪಾದಿಯಲ್ಲಿ ಸೌಕರ್ಯ ಮತ್ತು ಜಾಗೃತಿ ವಹಿಸುತ್ತಿರುವ ಕಾರಣ ಮಂಗಳವಾರ ಇಂದು ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಬೆಳಿಗ್ಗೆ ೯ ಗಂಟೆಗೆ ಮುಕ್ತಾಯವಾದ ೨೪ ಗಂಟೆಗಳ ಅವಧಿಯಲ್ಲಿ ಒಟ್ಟು೨,೬೩,೫೩೩ ಮಂದಿಯಲ್ಲಿ ಸೋಂಕು ದೃಡಪಟ್ಟಿದ್ದು ಇದು ಕಳೆದ ೨೮ ಗಂಟೆಯಲ್ಲಿ ಕನಿಷ್ಠ ಪ್ರಮಾಣವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಹಲವು ದಿನಗಳಿಂದ ೪ ಲಕ್ಷದ ಆಸುಪಾಸಿನಲ್ಲಿ ದಾಖಲಾಗುತ್ತಿದ್ದ ಹೊಸ ಸೋಂಕಿತರ ಸಂಖ್ಯೆ ಇದೀಗ ೩ ಲಕ್ಷಕ್ಕಿಂತ ಕೆಳಗೆ ಇಳಿದಿರುವುದು, ೨ನೇ ಅಲೆಯ ಇಳಿಕೆಯ ಸುಳಿವಾಗಿರಬಹುದು…

೨-ಡಿಜಿ ಔಷಧ ಅಧಿಕೃತ ಬಿಡುಗಡೆ

ನವದೆಹಲಿ,ಮೇ೧೭: ಕೊರೊನಾಗೆ ದೇಶಿ ಔಷಧ ೨-ಡಿಆಕ್ಸಿ-ಡಿ-ಗ್ಲುಕೋಸ್(೨-ಡಿಜಿ) ಹೆಸರಿನ ಪೌಡರ್ ಅನ್ನು ಇಂದು ಅಧಿಕೃತವಾಗಿ ಬಿಡುಗಡೆಗೊಳಿಸಲಾಯಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಆರೋಗ್ಯ ಸಚಿವ ಹರ್ಷವರ್ಧನ್ ಬಿಡುಗಡೆಗೊಳಿಸಿದರು.ಹೈದರಾಬಾದಿನ ಡಾ.ರೆಡ್ಡೀಸ್ ಲ್ಯಾಬ್ ಸಹಯೋಗದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಈ ಔಷಧವನ್ನು ಅಭಿವೃದ್ಧಿಪಡಿಸಿತ್ತು ಕಳೆದ ವಾರದ ಹಿಂದೆಯಷ್ಟೆ ಇದಕ್ಕೆ ಅನುಮೋದನೆ ನೀಡಲಾಗಿತ್ತು ಸೋಮವಾರ ೧೦ ಸಾವಿರಕ್ಕೂ ಹೆಚ್ಚು ಡೋಸ್ ಔಷಧವನ್ನು ದೆಹಲಿಯ ವಿವಿಧ ಆಸ್ಪತ್ರೆಗಳಿಗೆ ವಿತರಣೆ ಮಾಡಲಾಗಿದೆ. ಇದು ಜೆನರಿಕ್ ಔಷಧವಾದ ಕಾರಣ ಸಾಕಷ್ಟು ಪ್ರಮಾಣದಲ್ಲಿ ಉತ್ಪಾದಿಸಬಹುದು.…

ಗುಜರಾತ್ ತೀರದಲ್ಲಿ ಆರ್ಭಟಿಸಲಿದೆ ‘ತೌಕ್ತೆ’

ನವದೆಹಲಿ, ಮೇ,17:ಕಳೆದ ಮೂರ್ನಾಲ್ಕು ದಿನಗಳಿಂದ ಕರ್ನಾಟಕ, ಕೇರಳ ಮತ್ತು ಗೋವಾದ ಕರಾವಳಿ ಜಿಲ್ಲೆಗಳಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದ ತೌಕ್ತೆ ಚಂಡಮಾರುತ, ಮತ್ತಷ್ಟು ಶರವೇಗದಿಂದ ಇಂದು ಸಂಜೆ ಗುಜರಾತ್‌ ಕರಾವಳಿಗೆ ಅಪ್ಪಳಿಸಲಿದೆ ಎಂದು IMD ತಿಳಿಸಿದೆ. ಮೇ ೧೮ ರಂದು ಗುಜರಾತಿನ ಪೋರ್ ಬಂದರು ಮತ್ತು ಮಹುವಾಂನ್ ಬಂದರುಗಳಿಗೆ ಅಪ್ಪಳಿಸಲಿದ್ದು, ರಾಜ್ಯದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದ್ದಾರೆ. ಈಗಾಗಲೇ ಸ್ಥಳದಲ್ಲಿ NDRFನ 50 ತಂಡವು ಮೊಕ್ಕಾಮ ಹೂಡಿದ್ದು, ಜನರು ಆತಂಕಕ್ಕೆ ಒಳಗಾಗದಂತೆ ಧೈರ್ಯ ತುಂಬುವ ಕಾರ್ಯದಲ್ಲಿ…

24 ಗಂಟೆಯಲ್ಲಿ 3,11,170 ಕೊರೊನಾ ಪ್ರಕರಣಗಳು ದಾಖಲು

ನವದೆಹಲಿ,ಮೇ,16: ಕೋವಿಡ್-19 ಹೊಸ ಪ್ರಕರಣಗಳ ಸಂಖ್ಯೆ ದೇಶಾದ್ಯಂತ ಹೆಚ್ಚುತ್ತಲೇ ಇದ್ದು ಕಳೆದ 24ಗಂಟೆಯಲ್ಲಿ 3,11,170 ಪ್ರಕರಣಗಳನ್ನು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 2.46 ಕೋಟಿಗೆ ತಲಪಿದೆ ಈ ವೇಳೆ 4,077 ಸಾವುಗಳು ವರದಿಯಾಗಿವೆ. ಮೇ 16 ರ ಭಾನುವಾರ ಬೆಳಿಗ್ಗೆ 6 ರಿಂದ ಮೇ 30 ರವರೆಗೆ ಸಂಜೆ 6 ರಿಂದ ಪಶ್ಚಿಮ ಬಂಗಾಳ ಸರ್ಕಾರವು ಹದಿನೈದು ದಿನಗಳವರೆಗೆ ರಾಜ್ಯದಾದ್ಯಂತ ಸಂಪೂರ್ಣ ಲಾಕ್ ಡೌನ್ ಘೋಷಿಸಿದೆ. ಇಲ್ಲಿ ರಾತ್ರಿ ಕರ್ಫ್ಯೂ ವಿಧಿಸಿದ್ದು ಪ್ರತಿ ರಾತ್ರಿ 9 ರಿಂದ…

ಗರಿಷ್ಠ ಮಟ್ಟ ತಲುಪಿದ ಪೆಟ್ರೋಲ್,ಡೀಸೆಲ್ ಬೆಲೆ

ನವದೆಹಲಿ, ಮೇ,16:ತೈಲಬೆಲೆ ಏರಿಕೆ ಇಂದೂ ಕೂಡ ಮುಂದುವರೆದಿದೆ ಐದು ರಾಜ್ಯಗಳ ಚುನಾವಣೆ ನಂತರ ತೈಲ ಬೆಲೆಯಲ್ಲಿ ನಿರಂತರ ಏರಿಕೆ ಕಾಣುತ್ತಿದೆ,ಇಂದು ಭಾನುವಾರವೂ ಕೂಡ ಗರಿಷ್ಠ ಮಟ್ಟ ತಲುಪಿದೆ. ಪ್ರಾತಿನಿಧಿಕಪ್ರತಿ ಲೀಟರ್​ ಪೆಟ್ರೋಲ್​ ದರದಲ್ಲಿ 22 ರಿಂದ 24 ಪೈಸೆ ಏರಿಕೆಯಾಗಿದೆ. ಅದೇ ರೀತಿ ಪ್ರತಿ ಲೀಟರ್​ ಡೀಸೆಲ್​ ದರದಲ್ಲಿ 27 ರಿಂದ 29 ಪೈಸೆ ಹೆಚ್ಚಳವಾಗಿದೆ. ಕಳೆದ ಶುಕ್ರವಾರ ಪೆಟ್ರೋಲ್​ ಮತ್ತು ಡೀಸೆಲ್​ ದರ ಏರಿಕೆಯಾಗಿತ್ತು. ನಿನ್ನೆ ಶನಿವಾರ ಇಂಧನ ದರದಲ್ಲಿ ಯಾವುದೇ ಬದಲಾವಣೆಗಳು ಇರಲಿಲ್ಲ. ಬೆಲೆ…

175ವೇಗದಲ್ಲಿ ಅಪ್ಪಳಿಸಲಿದೆ ತೌಕ್ಟೆ ಚಂಡಮಾರುತ

ನವದೆಹಲಿ,ಮೇ,15: ಅರಬ್ಬಿಸಮುದ್ರದಲ್ಲಿವಾಯುಭಾರ ಕುಸಿತದಿಂದ ಗುಜರಾತ್ ಗೆ ತೌಕ್ಟೆ ಚಡ್ಡಮಾರುತ ಅಪ್ಪಳಿಸಲಿದ್ದು ಕಡಲತೀರವನ್ನು ದಾಟಿಬರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದು ಬೆಳಿಗ್ಗೆಯಿಂದಲೇ ತೌಕ್ಟೆ ಚಂಡಮಾರುತ ತೀವ್ರಗೊಳ್ಳಲಿದ್ದು ಇದೇ 16-19ವರೆಗೂ ಪ್ರತಿ ಗಂಟೆಗೆ160ರಿಂದ ಆರಂಭವಾಗಿ 175 ಕಿ.ವೇಗದಲ್ಲಿ ಚಂಡಮಾರುತ ಸಂಚರಿಸಲಿದೆ. ಮೇ.15 ರಂದು ಲಕ್ಷದ್ವೀಪದಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ. ಮೇ.15 ರಂದು ತಮಿಳುನಾಡಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಕೆಲವು ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆ ಸುರಿಯಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ. ಇನ್ನು…

ದೇಶದಲ್ಲಿ ಕೊರೊನಾ ಸೋಂಕಿತರ ದಾಖಲಾರ್ಹ ಏರಿಕೆ

ನವದೆಹಲಿ, ಮೇ,14: ದಿನೇ ದಿನೇ ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು ಕಳೆದ 24 ಗಂಟೆಯಲ್ಲಿ 3,43,144 ಹೊಸ ಪ್ರಕರಣಗಳು ದಾಖಲಾಗಿವೆ. ಈ ವೇಳೆ ಕೊರೊನಾಗೆ ನಾಲ್ಕು ಸಾವಿರ ಜನ ಬಲಿಯಾಗಿದ್ದಾರೆ.ದೇಶದಲ್ಲಿ ಸೋಂಕಿತರ ಸಂಖ್ಯೆ ದಾಖಲೆಮಟ್ಟದಲ್ಲಿ ಏರಿಕೆಯಾಗುತ್ತಿದೆ ಈ ಕಾರಣ ಸಕ್ರಿಯ ಪ್ರಕರಣಗಳ ಸಂಖ್ಯೆ 37,04,893 ಕ್ಕೆ ಏರಿಕೆಯಾಗಿದೆ. ಹೀಗಾಗಿ ದೇಶದಲ್ಲಿ ‌ಒಂದೇ ದಿನ 18,75,515 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ,31,13,24,100 ಎಂದು ಐಸಿಎಂಆರ್ ಮಾಹಿತಿ ನೀಡಿದೆ. ಇನ್ನು ಭಾರತದಲ್ಲಿ ಒಂದೇ ದಿನ 18,75,515 ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು,…

ಲಾಕ್ ಡೌನ್ ಹಿನ್ನೆಲೆ; ದೆಹಲಿಯಲ್ಲಿ ಕೊರೊನಾ ಪ್ರಕರಣ ಇಳಿಕೆ

ನವದೆಹಲಿ,ಮೇ,14: ದೇಶದ ರಾಜದಾನಿ ನವದೇಹಲಿಯಲ್ಲಿ ಈಗ ಕೊರೊನಾ ಪ್ರಮಾಣ ಇಳಿಕೆಯಾಗಿದೆ. ಕಳೆದ ಒಂದು ತಿಂಗಳಿಂದ ಆತಂಕ ಮೂಡಿಸಿದ್ದಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ದ್ವಿತೀಯ ಅಲೆಯು, ರಾಷ್ಟ್ರ ಕೊರೊನಾ ಸೋಂಕು ಪ್ರಮಾಣದಲ್ಲಿ ಭಾರೀ ಇಳಿಕೆ ಕಂಡಿದೆ. ಲಾಕ್‌ಡೌನ್‌ ನಾಲ್ಕನೇ ವಾರ ಮುಂದುವರಿದ ಪರಿಣಾಮ ಸೋಂಕಿತರ ಶೇಕಡಾವಾರು ಪ್ರಮಾಣ ಇದೇ ಮೊದಲ ಬಾರಿಗೆ ಶೇ 15ಕ್ಕಿಂತ ಕಡಿಮೆ ದಾಖಲಾಗಿದೆ. ಸತತ 6 ದಿನಗಳಿಂದ ಸೋಂಕಿತರ ಸಂಖ್ಯೆ ಕಡಿಮೆಯಾಗಿ, ಗುಣಮುಖರಾದವರ ಸಂಖ್ಯೆ ಹೆಚ್ಚುತ್ತ ಸಾಗಿರುವುದು ಸಾರ್ವಜನಿಕರ ಆತಂಕವನ್ನು ಕೊಂಚ ಮಟ್ಟಿಗೆ ಕಡಿಮೆ…

ಅತೀ ಹೆಚ್ಚು ಕೋವಿಡ್ ದಾಖಲಾಗಿರುವ ದೇಶದ ಜಿಲ್ಲೆಗಳ ಡಿಸಿಗಳೊಂದಿಗೆ ಮೋದಿ ಸಂವಾದ

ನವದೆಹಲಿ,ಮೇ,14:ದಿನೇ ದಿನೇ ಕೋವಿಡ್-19 ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅತೀ ಹೆಚ್ಚು ದಾಖಲಾಗಿರುವ ದೇಶದದೇಶಾದ್ಯಂತ 100 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ. ಇದೇ ಮೊದಲ ಬಾರಿಗೆ ಜಿಲ್ಲಾ ಮಟ್ಟದ ಆಡಳಿತಾಧಿಕಾರಿಗಳೊಂದಿಗೆ ಪ್ರಧಾನಿ ಸಂವಾದ ನಡೆಸುತ್ತಿದ್ದಾರೆ ಮೇ.18 ಹಾಗೂ 20 ರಂದು ಈ ಸಂವಾದ ನಡೆಯಲಿದೆ. ಮೊದಲ ಸಭೆಯಲ್ಲಿ 9 ರಾಜ್ಯಗಳಿಂದ 46 ಜಿಲ್ಲೆಗಳ ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳಿ ಭಾಗಿಯಾಗಲಿದ್ದಾರೆ ಹಾಗೂ 10 ರಾಜ್ಯಗಳ 54 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಎರಡನೇ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಈ ಸಭೆಯಲ್ಲಿ ಆಯಾ ರಾಜ್ಯದ…

ಭಾರತದಲ್ಲಿ ಒಂದೇ ದಿನ 3,66,161 ಮಂದಿಗೆ ಕೊರೊನಾ

ನವದೆಹಲಿ ,10: ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದ್ದು , ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,66,161 ಮಂದಿಗೆ ಹೊಸದಾಗಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಾಖಲಾಗಿವೆ . ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,66,161 ಮಂದಿಗೆ ಹೊಸದಾಗಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಾಖಲಾಗಿವೆ . ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 2,26,62,575 ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಲ್ಲಿ 3,754 ಕೊರೊನಾ…

ಎರಡು ದಿನಗಳ ನಂತರ ಮತ್ತೆ ಪೆಟ್ರೋಲ್‌-ಡೀಸೆಲ್‌ ದರದಲ್ಲಿ ಏರಿಕೆ

ಮುಂಬೈ,10: ಇಂಧನ ಬೆಲೆ ಏರಿಕೆಗೆ ಎರಡು ದಿನಗಳ ಬ್ರೇಕ್​ ಕೊಟ್ಟಿದ್ದ ತೈಲ ಮಾರುಕಟ್ಟೆ ಕಂಪನಿಗಳು ಇದೀಗ ಮತ್ತೆ ಇಂದು ಲೀಟರ್‌ ಪೆಟ್ರೋಲ್​ಗೆ 26 ಪೈಸೆ ಹಾಗೂ ಡೀಸೆಲ್​ಗೆ 34 ಪೈಸೆ ಹೆಚ್ಚಳ ಮಾಡಿವೆ. ಹೀಗಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್​​ ಪೆಟ್ರೋಲ್​ ಬೆಲೆ 91.53 ರೂ. ಹಾಗೂ ಡೀಸೆಲ್​ ಬೆಲೆ 82.06 ರೂ.ಗೆ ಏರಿಕೆಯಾಗಿದೆ. ಇದೇ ನಿಯಮ ದೇಶದ ಎಲ್ಲಾ ಮೆಟ್ರೋ ನಗರಗಳಿಗೂ ಅನ್ವಯವಾಗುತ್ತದೆ. ಬೆಂಗಳೂರು, ಕೋಲ್ಕತ್ತಾ, ಮುಂಬೈ ಹಾಗೂ ಚೆನ್ನೈ ನಗರಗಳಲ್ಲಿನ ಇಂಧನ ಬೆಲೆ…

ಕೋವಿಡ್‌ ಹಳ್ಳಿಗಳೂ ಅವಲಂಬಿತವಾಗಿವೆ –ರಾಹುಲ್ ಗಾಂಧಿ

ನವದೆಹಲಿ10; ಕರೋನಾ ಎರಡನೇ ಅಲೆಯ ಹಟ್ಟಹಾಸ ನಗರಗಳಲ್ಲಷ್ಟೇ ಅಲ್ಲದೆ ಗ್ರಾಮೀಣ ಪ್ರದೇಶದಲ್ಲಿಯೂ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದೆ. ಆ ದೇವರ ಕರುಣೆಯಿಂದಲೇ ಇಂದು ನಗರ ಮತ್ತು ಹಳ್ಳಿಗಳು ಉಳಿದಿವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೇಂದ್ರ ಸರ್ಕಾರಕ್ಕೆ ಪರೋಕ್ಷವಾಗಿ ಚಾಟಿಬೀಸಿದಂತಿದೆ. ಭಾರತದ ಹಳ್ಳಿಗಳಲ್ಲಿಯೂ COVID-19 ಪ್ರಕರಣಗಳು ಶೀಘ್ರವಾಗಿ ಹಬ್ಬುತ್ತಿರುವುದರ ಬಗ್ಗೆ ಟ್ವಿಟರ್‌ನಲ್ಲಿ ಮಾಧ್ಯಮಯೊಂದರ ವರದಿಯನ್ನು ಉಲ್ಲೇಖಿಸಿದ ಅವರು ನಗರಗಳ ನಂತರ ಈಗ ದೇಶದ ಹಳ್ಳಿಗಳೂ ದೇವರ ಮೇಲೆ ಅವಲಂಬಿತವಾಗಿವೆ (ಪರಮಾತ್ಮ ನಿರ್ಭರ್) ಎಂದು ರಾಹುಲ್ ಗಾಂಧಿ ಟ್ವೀಟ್…

1 7 8 9
error: Content is protected !!