Browsing: ರಾಷ್ಟ್ರೀಯ

ರಾಷ್ಟ್ರೀಯ

ಭಾರತದಲ್ಲಿ ಹೊಸ ಮಾದರಿಯ ವೈರಸ್ ಪತ್ತೆ

ಪುಣೆ, ಜೂ,7: ನಿಧಾನಕ್ಕೆ ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಕಡಿಮೆಯಾಗುತ್ತಿರುವ ಈ ವೇಳೆ ಹೊಸ ಮಾದರಿಯ ವೈರಸ್ ಪತ್ತೆಯಾಗಿದೆ. ಇದನ್ನು B.1.1.28.2 ಕೊರೊನಾವೈರಸ್‌ ಎಂದು ಕರೆಯಲಾಗಿದ್ದು ಪುಣೆಯ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಪತ್ತೆ ಹಚ್ಚಿದೆ. ಬ್ರೆಜಿಲ್ ಮತ್ತು ಯುಕೆಯಿಂದ ಆಗಮಿಸಿದ ಪ್ರಯಾಣಿಕರಲ್ಲಿ ಸಂಗ್ರಹಿಸಿದ ಗಂಟಲು ಮತ್ತು ಮೂಗಿನ ದ್ರವಗಳಲ್ಲಿ ಈ ಹೊಸ ರೂಪಾಂತರಿ ಕೊರೊನಾ ವೈರಸ್‌ ಪತ್ತೆಯಾಗಿದೆ. ಸಿರಿಯನ್ ಹ್ಯಾಮ್ಸ್ಟರ್ ಮಾದರಿಯಲ್ಲಿ ಪತ್ತೆಯಾದ ರೂಪಾಂತರಿ ವೈರಸ್‌ನ ತೀವ್ರತೆಯನ್ನು ಪರೀಕ್ಷಿಸಲಾಗುತ್ತಿದ್ದು D614G ರೂಪಾಂತರಿಯೊಂದಿಗೆ ಹೋಲಿಕೆ ಮಾಡಲಾಗಿದೆ. ಹೊಸ…

ಜೂನ್ 21 ರ ನಂತರ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ- ಮೋದಿ

ನವದೆಹಲಿ,ಜೂ,07:ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾಡೊದ ಭಾಷಣದಲ್ಲಿ ಬಹುತೇಕ ವ್ಯಾಕ್ಸಿನ್ ಬಗ್ಗೆಯೇ ಮೀಸಲಿಟ್ಟಿದ್ದು ಸಲಿಕೆಯನ್ನು ನವೆಂಬರ್ ಹೊತ್ತಿಗೆ ಎಲ್ಲರಿಗೂ ಲಸಿಕೆ ಹಾಕಲಾಗುತ್ತದೆ ಎಂದರು. ಇನ್ನೂ ಲಸಿಕೆ ಬಗ್ಗೆ ಟೀಕಿಸುತ್ತಿದ್ದವರಿಗೆ ಉತ್ತರ ನೀಡಿದ ಮೋದಿ ಜೂನ್ 21 ರ ಬಳಿಕ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ನೀಡಲಾಗುವುದು ಎಂದು ಹೇಳಿದರು. ಈ ಮೊದಲು ಲಸಿಕೆ ವಿತರಣೆ ಸಂಬಂಧ ರಾಜ್ಯಗಳಿಗೆ ಶೇ. 50 ಜವಾಬ್ದಾರಿ ವಹಿಸಲಾಗಿತ್ತು. ಆದರೆ ಲಸಿಕೆ ವಿತರಣೆ ಕುರಿತು ಒಂದಷ್ಟು ಟೀಕೆಗಳು ವ್ಯಕ್ತವಾದ್ದರಿಂದ…

100 ಗಡಿ ದಾಟಿದ ಪೆಟ್ರೋಲ್

ಬೆಂಗಳೂರು,ಜೂ,07:ತೈಲ ಬೆಲೆ ನಿರಂತರವಾಗಿ ಏರಿಕೆ ಕಾಣುತ್ತಿರುವ ಕಾರಣ ರಾಜ್ಯದ ಕೆಕ ಜಿಲ್ಲೆಗಳು ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 100 ಗಡಿ ದಾಟಿದೆ. ಕಳೆದ ವಾರವೇ ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ 100 ಗಡಿ ದಾಟಿದ್ದು ಈಗ ರಾಜ್ಯದ ಕೆಲ ಜಿಲ್ಲೆಗಳಲ್ಲಿ 100 ಗಡಿ ದಟಿದೆ. ಬಳ್ಳಾರಿ ಮತ್ತು ಶಿರಸಿಯಲ್ಲಿ ಪೆಟ್ರೋಲ್ ದರವು ಭಾನುವಾರ ₹100ರ ಗಡಿ ದಾಟಿದೆ. ಬಳ್ಳಾರಿಯಲ್ಲಿ ಲೀಟರ್ ಪೆಟ್ರೋಲ್ ದರ ₹100.08, ಶಿರಸಿಯಲ್ಲಿ ₹100.28 ಆಗಿದೆ. ರಾಜ್ಯದಲ್ಲಿ ಪೆಟ್ರೋಲ್ ಬೆಲೆ ₹100ಕ್ಕಿಂತ…

ದೇಶದಲ್ಲಿ ಕೊರೊನಾ ಪ್ರಕರಣ ಮತ್ತಷ್ಟು ಇಳಿಕೆ

ನವದೆಹಲಿ, ಜೂ,06:ಕೊರೊನಾ ಸೋಂಕಿತ ಒ್ರಕರಣಗಳು ದೇಶದಲ್ಲಿ ಮತ್ತಷ್ಟು ಇಳಿಮುಖವಾಗುತ್ತಾ ಸಾಗಿದ್ದು ಕಳೆದ 24 ಗಂಟೆಯಲ್ಲಿ, 1,14,460 ಕೋವಿಡ್ ಪ್ರಕರಣಗದೃಢಪಟ್ಟಿದೆ. ಇದು ಕಳೆದ 2 ತಿಂಗಳಲ್ಲೇ ಪತ್ತೆಯಾದ ಕನಿಷ್ಟ ಸಂಖ್ಯೆಯಾಗಿದೆ. ಇದೇ ವೇಳೆ ದೇಶದಲ್ಲಿ 2677 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಕೂಡ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿರುವುದು ಕಂಡು ಬಂದಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,88,09,339ಕ್ಕೆ ಏರಿಕೆಯಾಗಿದ್ದು, ಒಟ್ಟು ಸಾವಿಗೀಡಾದವರ ಸಂಖ್ಯೆ 3,46,759ಕ್ಕೆ ತಲುಪಿದೆ. ದೇಶದಲ್ಲಿ ದೈನಂದಿನ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ…

ಮಲ್ಯ ಆಸ್ತಿ ಮಾರಾಟಕ್ಕೆ ಗ್ರೀನ್ ಸಿಗ್ನಲ್

ನವದೆಹಲಿ,ಜೂ,05: ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ನ್ಯಾಯಾಲಯವು ಬ್ಯಾಂಕುಗಳಿಗೆ ವಿಜಯ್ ಮಲ್ಯಗೆ ಸೇರಿದ ಕೆಲವು ರಿಯಲ್ ಎಸ್ಟೇಟ್ ಆಸ್ತಿಗಳು ಮತ್ತು ಸೆಕ್ಯೂರಿಟಿಗಳನ್ನು ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟಿದೆ ಇದರೊಂದಿಗೆ ಪರಾರಿಯಾದ ಉದ್ಯಮಿಯ ಸಾಲವನ್ನು ವಸೂಲಿ ಮಾಡಲು ಅವಕಾಶ ಮಾಡಿಕೊಟ್ಟಿದೆ. ಪಿಎಂಎಲ್‌ಎ ನ್ಯಾಯಾಲಯ 5,600 ಕೋಟಿ ರೂ. ಬಾಕಿ ಸಾಲದ ಮೊತ್ತವನ್ನು ಹಿಂಪಡೆಯಲು ವಿಜಯ್ ಮಲ್ಯ ಅವರಿಗೆ ಸೇರಿದ ಕೆಲ ರಿಯಲ್ ಎಸ್ಟೇಟ್ ಆಸ್ತಿಗಳನ್ನು ಮತ್ತು ಸೆಕ್ಯೂರಿಟಿಯನ್ನು ಮಾರಾಟ ಮಾಡಲು ಬ್ಯಾಂಕುಗಳಿಗೆ ಅನುಮತಿ ನೀಡಿದೆ. ಇದು ಹಿಂದೆ…

ಭಾರತದಲ್ಲಿ ಇಳಿಮುಖಕಾಣುತ್ತಿರುವ ಕೋವಿಡ್-೧೯

ನವದೆಹಲಿ,ಜೂ, ೦೫: ಸದ್ಯ ದೇಶದಲ್ಲಿ ದಿನ ದಿನ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದು ಒಂದು ರೀತಿ ನಿಟ್ಟುಸಿರು ಬಿಟ್ಟಂತಾಗಿದೆ.ಕಳೆದ ೨೪ ಗಂಟೆಯಲ್ಲಿ ೧,೨೦,೫೨೯ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ೩,೩೮೦ ಮಂದಿ ಮೃತಪಟ್ಟಿದ್ದು, ಶುಕ್ರವಾರ ಒಂದೇ ದಿನ ೧,೯೭,೮೯೪ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಹಾಗೆಯೇ ಆರೋಗ್ಯ ಸಚಿವಾಲಯದ ಪ್ರಕಾರ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ೨,೮೬,೯೪,೮೭೯ಕ್ಕೆ ಏರಿಕೆಯಾಗಿದ್ದು, ಇದುವರೆಗೆ ದೇಶದಲ್ಲಿ ಒಟ್ಟು ೨,೬೭,೯೫,೫೪೯ ಮಂದಿ ಗುಣಮುಖರಾಗಿದ್ದಾರೆ. ಹೊಸ ಸೋಂಕಿತರ ಭಾರೀ ಇಳಿಕೆ ಕಾಣುತ್ತಿರುವುದು ದೇಶದ ಜನರಲ್ಲಿ…

ಕೊರೊನಾ ಉಲ್ಬಣಕ್ಕೆ ಸರ್ಕಾರದ ಗೊಂದಲವೇ ಕಾರಣ:ಅಮಥ್ರ್ಯಸೇನ್

ಮುಂಬೈ,ಜೂ.೫: ಇಷ್ಟೊಂದು ದೊಡ್ಡ ಮಟ್ಟದ ಕೊರೊನಾ ಉಲ್ಬಣಕ್ಕೆ ಸರ್ಕಾರದ ನಿರ್ಲಕ್ಷ್ಯ ಹಾಗೂ ಗೊಂದಲವೇ ಕಾರಣ ಎಂದು ಎಂದು ನೋಬಲ್ ಪ್ರಶಸ್ತಿ ಪುರಸ್ಕೃತ ಆರ್ಥಶಾಸ್ತ್ರಜ್ಞ ಅಮಥ್ರ್ಯಸೇನ್ ಅಭಿಪ್ರಾಯಪಟ್ಟಿದ್ದಾರೆ. ರಾಷ್ಟ್ರ ಸೇವಾ ದಳ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಫಾರ್ಮಾ ಉದ್ಯಮ ಸಾಕಷ್ಟು ಅಭಿವೃದ್ಧಿ ಹೊಂದಿದೆ.ಇರುವ ಸೌಲಭ್ಯ ಸದುಪಯೋಗಪಡಿಸಿಕೊಂಡು ಕೊರೊನಾ ಸೋಂಕನ್ನು ಹೋಗಲಾಡಿಸಬಹುದಾಗಿತ್ತು. ಅದಕ್ಕೆ ಸರ್ಕಾರ ಅವಕಾಶ ನೀಡಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಎರಡನೆ ಅಲೆ ಕಾಣಿಸಿಕೊಂಡಾಗ ಒಂದು ದಿನದಲ್ಲೇ ೪ ಲಕ್ಷಕ್ಕೂ ಹೆಚ್ಚು ಸೋಂಕು ಪ್ರಕರಣಗಳು…

ಭಾರತೀಯಾ ನೌಕಪಡೆಗೆ ಆರು ಜಲಾಂರ್ಗಾಮಿ ನೌಕೆಗಳ ನಿಮರ್ಮಾಣಕ್ಕೆ ಅನುಮೋದನೆ

ನವದೆಹಲಿ,ಜೂ,04:ತಮ್ಮ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಭಾರತೀಯ ನೌಕಾಪಡೆಗಾಗಿ ಆರು ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸುವ ಮೆಗಾ ಯೋಜನೆಗೆ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಹೆಚ್ಚುತ್ತಿರುವ ಚೀನಾ ಅತಿಕ್ರಮಣವನ್ನು ನಿರ್ವಹಿಸುವ ನಿಟ್ಟಿನಲ್ಲಿ ಮತ್ತು ನೌಕಾಪಡೆಗಳ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ರಕ್ಷಣಾ ಇಲಾಖೆ ಮತ್ತೆ ಆರು ಹೊಸ ಸಬ್ ಮೆರಿನ್ ಗಳ ನಿರ್ಮಾಣಕ್ಕೆ ಅಸ್ತು ಎಂದಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) ಸಭೆಯಲ್ಲಿ ಈ…

ಭಾರತದಲ್ಲಿ ಹತೋಟಿಗೆ ಬಂದ ಕೊರೊನಾ ಪ್ರಕರಣಗಳು;ಒಂದೇ ದಿನ 1,34,154 ಮಂದಿಗೆ ಸೋಂಕು

ನವದೆಹಲಿ, ಜೂ,03:ಕೋವಿಡ್-೧೯ ಸರ್ಕಾರ ತಗೆದು ಕೊಂಡ ನಿಯಂತ್ರಣ ಕ್ರಮದಿಂದ ಸದ್ಯ ಒಂದು ಹಂತದವರೆಗೂ ಹತೋಟಿಗೆ ಬಂದಂತೆ ಕಾಣುತ್ತಿದೆ. ಪ್ರತಿನಿತ್ಯ ಹೊಸ ಪ್ರಕರಣಕ್ಕಿಂತ ಗುಣಮುಖರ ಸಂಖ್ಯೆ 1,00,000ಕ್ಕಿಂತಲೂ ಹೆಚ್ಚಿದ್ದು, ಸಾವಿನ ಪ್ರಮಾಣದಲ್ಲೂ ಇಳಿಮುಖ ಕಂಡು ಬಂದಿದೆ. ದೇಶದಲ್ಲಿ ಒಂದೇ ದಿನ 1,34,154 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 2,11,499 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಂದೇ ದಿನ ಕೊರೊನಾವೈರಸ್ ಮಹಾಮಾರಿಗೆ 2,887 ಮಂದಿ ಪ್ರಾಣ ಬಿಟ್ಟಿದ್ದಾರೆ. ಭಾರತದಲ್ಲಿ ಒಟ್ಟು…

ಕೋವಿಡ್ ಶೀಲ್ಡ್,ಕೋವ್ಯಾಕ್ಸಿನ್ ಖರೀದಿ ಕುರಿತ ಅಂಕಿ- ಅಂಶ ಸಲ್ಲಿಸಲು ಕೇದ್ರಕ್ಕೆ ಸುಪ್ರೀಂ ಆದೇಶ

ನವದೆಹಲಿ,ಜೂ,02: ಕೊರೊನಾ ಸೋಂಕಿತ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಖರೀದಿ ಮಾಡಿರುವ ಕೋವಿಶೀಲ್ಡ್, ಕೋವ್ಯಾಕ್ಸಿನ್ ಹಾಗೂ ಸ್ಪುಟ್ನಿಕ್ V ಲಸಿಕೆಗಳ ಅಂಕಿ-ಸಂಖ್ಯೆಗಳ ಕುರಿತು ಪ್ರಮಾಣಪತ್ರ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಎರಡು ವಾರಗಳಲ್ಲಿ ಎಲ್ಲಾ ವಿವರಗಳನ್ನೂ ಪ್ರಮಾಣಪತ್ರದಲ್ಲಿ ಸಲ್ಲಿಸುವಂತೆ ಕೋರ್ಟ್ ಹೇಳಿದೆ. ಸಂಗ್ರಹ ಮಾಡಿರುವ ಲಸಿಕೆಗಳ ದಿನಾಂಕ, ಸಂಗ್ರಹಕ್ಕೆ ಆದೇಶ ನೀಡಿದ ದಿನಾಂಕ, ಲಸಿಕೆಗಳ ಪ್ರಮಾಣ ಸಹಿತ ಸರ್ಕಾರಕ್ಕೆ ಮಾಹಿತಿ ನೀಡಬೇಕೆಂದು ಕೋರ್ಟ್ ಹೇಳಿದೆ. ಇನ್ನು ಶೇಕಡವಾರು ಜನಸಂಖ್ಯೆಗೆ ನೀಡಿರುವ ಲಸಿಕೆಯ ವಿವರಗಳನ್ನೂ ಕೋರ್ಟ್…

ಸಿಎಸ್ ವಾಪಾಸ್ ಕಳೆಸಲಾಗದು-ಮೋದಿಗೆ ಪತ್ರ ಬರೆದ ಮಮತಾ

ಕೋಲ್ಕತಾ,ಮೇ,೩೧: ಪಶ್ಚಿಮ ಬಂಗಾಳ ಮುಖ್ಯ ಕಾರ್ಯದರ್ಶಿ ಅಲಪನ್ ಬಂಡೋಪಾಧ್ಯಾಯ ಅವರ ಸೇವೆಯನ್ನು ಹಿಂಪಡಡೆಯವಂತೆ ಕೇಂದ್ರ ಸರ್ಕಾರ ನೀಡಿದ ಅದೇಶದ ಮೂಲಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕೇಂದ್ರ ಸರ್ಕಾರದ ನಡುವೆ ಮತ್ತೊಂದು ಸಂಘರ್ಷ ಮುಂದುವರೆದಿದೆ. ಯಾವುದೇ ಕಾರಣಕ್ಕೂ ಮುಖ್ಯಕಾರ್ಯದರ್ಶಿ ಅವರನ್ನು ಬಿಟ್ಟುಕೊಡುವುದಿಲ್ಲ ಎಂದು ಮಮತಾ ಪ್ರಧಾನಿ ಮೋದಿಯವರಿಗೆ ಪತ್ರವನ್ನು ರವಾನಿಸಿದ್ದಾರೆ ಈ ಕುರಿತು ಇಂದು ೫ ಪುಟಗಳ ಪತ್ರವನ್ನು ಪ್ರಧಾನಿಗೆ ಬರೆದಿರುವ ಸಿಎಂ ಮಮತಾ, ಮೂರು ತಿಂಗಳ ವಿಸ್ತರಣೆ ನೀಡಿ ಮುಖ್ಯ ಕಾರ್ಯದರ್ಶಿಗಳ ಸೇವೆಯನ್ನು ವಿಸ್ತರಿಸಿ ಇದೀಗ…

ಸೆಟ್ರಲ್ ವಿಸ್ಟ್ರಾ ಯೋಜನೆ ಸ್ಥಗಿತಗೊಳಿಸಲು ಕೋರಿದ್ದ ಅರ್ಜಿ ವಜಾ

ನವದೆಹಲಿ,ಮೇ,೩೧: ಸೆಂಟ್ರಲ್ ವಸ್ಟಾ ನಿರ್ಮಾಣವನ್ನು ಸ್ಥಗಿತಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿ ಈ ಯೋಜನೆ ಒಂದು ರಾಷ್ಟ್ರೀಯ ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದು ಹೇಳಿದೆ. ಅಲ್ಲದೆ ಈ ಅರ್ಜಿ ನಿಜವಾದ ಅರ್ಜಿಯಲ್ಲಿ ಇದು ಅರ್ಜಿದಾರರ ಪ್ರೇರಿತವಾಗಿದೆ ಹಾಗಾಗಿ ಅರ್ಜಿಯನ್ನು ೧,೦೦,೦೦೦ ವೆಚ್ಚದೊಂದಿಗೆ ವಜಾಗೊಳಿಸಲಾಗಿದೆ ಎಂದು ನ್ಯಾಯಪೀಠ ತಿಳಿಸಿದೆ ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ವಿಭಾಗೀಯ ಪೀಠವು ಸೆಂಟ್ರಲ್ ವಿಸ್ಟಾ ಅವೆನ್ಯೂದಲ್ಲಿನ ಕೆಲಸವು ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್‌ನಲ್ಲಿನ ಕೆಲಸದ…

ಭಾರತದಲ್ಲಿ 1,52,734 ಕೋವಿಡ್ ಪ್ರಕರಣ ದೃಡ

ನವದೆಹಲಿ,ಮೇ31:ಕೋವಿಡ್ ಸೋಂಕಿರತ ಸಂಖ್ಯೆ ಕಳೆದ ಒಂದು ವಾರದಲ್ಲಿ ಇಳಿಕೆ ಕಂಡಿದ್ದು ಇಂದು ಕೊಂಚ ಏರಿಕೆಯಾಗಿದೆ. ಕಳೆದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 1,52,734 ಕೋವಿಡ್ ಪ್ರಕರಣಗಳು ದೃಢಪಟ್ಟಿದೆ. ಇದು ಕಳೆದ 50 ದಿನಗಳಲ್ಲಿಯೇ ಕನಿಷ್ಟ ಸಂಖ್ಯೆಯಾಗಿದೆ. ಇದೇ ವೇಳೆ ಒಂದೇ ದಿನ 3,128 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,80,47,534ಕ್ಕೆ ಏರಿಕೆಯಾಗಿದೆ. ಒಟ್ಟು ಸಾವಿಗೀಡಾದವರ ಸಂಖ್ಯೆ 3,29,100ಕ್ಕೆ ತಲುಪಿದೆ. ದೇಶದಲ್ಲಿ ದೈನಂದಿನ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 20,26,092ಕ್ಕೆ…

ಮತ್ತೇ ರಾಜಕಾರಣಕ್ಕೆ ಬರುವ ಇಂಗಿತ ವ್ಯಕ್ತಪಡಿಸಿರುವ ಶಶಿಕಲಾ

ಚೆನ್ನೈ,ಮೇ,೩೦: ತಮಿಳುನಾಡಿನಲ್ಲಿ ಎಐಡಿಎಂಕೆ ಪಕ್ಷದಲ್ಲಿ ಆಂತರಿಕ ಕಿತ್ತಾಟಗಳ ಈ ಸಂದರ್ಭದಲ್ಲಿ ಶಶಿಕಲಾ ಸಕ್ರಿಯ ರಾಜಕಾರಣಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ್ದು ಇದಕ್ಕೆ ಸಂಬಂಧಿಸಿದ ಆಡಿಯೋ ಒಂದು ಬಹಿರಂಗವಾರುವುದು ತಮಿಳುನಾಡಿನಲ್ಲಿ ಸಂಚಲನ ಮೂಡಿಸಿದೆ. ಪಕ್ಷದಲ್ಲಿ ಆಗಿರುವ ಎರಡು ಬಣಗಳಿಂದ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದೆ ಹೀಗಾಗಿ ರಾಜ್ಯದಲ್ಲಿ ಮತ್ತೇ ಪಕ್ಷವನ್ನು ಸರಿದಾರಿಗೆ ತರಬೇಕು ಎಂದರೆ ಅದಕ್ಕೆ ಶಶಿಕಲಾಗೆ ಮಾತ್ರ ಸಾದ್ಯ ಈ ಹಿನ್ನೆಲೆಯಲ್ಲಿ ಇಬ್ಬರು ನಾಯಕರು ಮಾತನಾಡಿರುವ ಆಡಿಯೋ ಕ್ಲಿಪ್ ಈಗ ಬಹಿರಂಗವಾಗಿದೆ. ಮಾಜಿ ಸಿಎಂ ಎಡಪ್ಪಾಡಿ ಕೆ ಪಳನಿಸ್ವಾಮಿ…

ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ಅನಾಥರಿಗೆ ಪರಿಹಾರ ಘೋಷಿಸಿದ ಮೋದಿ

ದೆಹಲಿ,ಮೇ,29: ಕೊರೊನಾ ಸೋಂಕಿನಿಂದ ಪೋಷಕರನ್ನು ಕಳೆದುಕೊಂಡು ಅನಾಥ ಮಕ್ಕಳಿಗೆ ಕೇಂದ್ರ ಸರ್ಕಾರ ಪರಿಹಾರ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಕೇರ್ಸ್ ಅಡಿ ಈ ಯೋಜನೆ ಘೋಶಿಸಿದ್ದು, ಅನಾಥ ಮಕ್ಕಳಿಗೆ 18 ವರ್ಷ ತುಂಬಿದಾಗ ಪ್ರತಿ ತಿಂಗಳು ಅಂದರೆ 5 ವರ್ಷಗಳ ಕಾಲ ಸ್ಟೈಫಂಡ್ ನೀಡಲಾಗುವುದು. 23 ವರ್ಷ ತುಂಬಿದ ಮೇಲೆ ಪಿಎಂ ಕೇರ್ಸ್ ನಿಂದ 10 ಲಕ್ಷ ರೂಪಾಯಿ ನಗದು ಹಣ ನೀಡಲಾಗುವುದು ಎಂದು ಹೇಳಿದ್ದಾರೆ. ಕೋವಿಡ್ ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳು…

ಬಂಗಾಳದ ಅಭಿವೃದ್ಧಿಗಾಗಿ ಮೋದಿ ಕಾಲುಹಿಡಿಯಲು ಸಿದ್ದ-ದೀದಿ

ಕೋಲ್ಕತ್ತ,ಮೇ29: ಪಶ್ಚಿಮ ಬಂಗಾಳದ ಕಲ್ಯಾಣ ಮತ್ತು ಅಮೂಲಾಗ್ರ ಅಭಿವೃದ್ಧಿಗಾಗಿ ಪ್ರಧಾನಿ ಮೋದಿಯವರು ಕಾಲು ಹಿಡಿಯಲೂ ಸಿದ್ದ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಆದರೆ,ಮೋದಿ ಮತ್ತು ಅಮಿತ್ ಉದ್ದೇಶ ಪೂರ್ವಕವಾಗಿ ತೊಂದರೆ ಕೊಡುತ್ತಿದ್ದಾರೆ..ನನಗೆ ನನ್ನ ರಾಜ್ಯದ ಅಭಿವೃದ್ಧಿ ಗೆ ಏನುಬೇಕಾದರೂ ಮಾಡಬಲ್ಲೆ ಎಂದಿದ್ದಾರೆ. ರಾಜ್ಯದ ಮುಖ್ಯ ಕಾರ್ಯದರ್ಶಿ ಅಲಪನ್‌ ಬಂಡೋಪಾಧ್ಯಾಯ ಅವರನ್ನು ವಾಪಸ್‌ ಕರೆಸಿಕೊಳ್ಳುವ ನಿರ್ಧಾರವನ್ನು ಹಿಂಪಡೆಯಬೇಕು. ಕೋವಿಡ್ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸಲು ಅವರಿಗೆ ಅನುವು ಮಾಡಿಕೊಡಬೇಕು ಎಂದು ಅವರು…

ಮತ್ತೇ ಪೆಟ್ರೋಲ್ ಬೆಲೆ ಏರಿಕೆ!

ಮುಂಬೈ,ಮೇ,೨೯: ತೈಲ ಬೆಲೆ ಏರಿಕೆ ನಿತ್ಯ ಏರಿಕೆಯಾಗುತ್ತಲೇ ಇದೆ ಈಗಾಗಲೇ ೧೦೦ಗಡಿಯತ್ತ ಬಂದು ನಿಂತಿದ್ದು ದೇಶದ ಮಹಾನಗರ ಮುಂಬೈನಲ್ಲಿ ೧೦೦ ಗಡಿದಾಟಿದೆ. ಈ ತಿಂಗಳಲ್ಲಿ ೧೫ನೇ ಬಾರಿಗೆ ತೈಲ ಬೆಲೆ ಏರಿಕೆಯಾಗಿದ್ದು, ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್ ದರ ಲೀಟರ್‌ಗೆ ೧೦೦ ಗಡಿಯನ್ನು ದಾಟಿದೆ ಮತ್ತು ಡೀಸೆಲ್ ದರ ಲೀಟರ್‌ಗೆ ೯೨.೧೭ಕ್ಕೆ ಏರಿಕೆಯಾಗಿದೆ. ದೇಶದ ಮಹಾನಗರಗಳಲ್ಲಿ ಪೆಟ್ರೋಲ್ ದರವು ಲೀಟರ್‌ಗೆ ೨೬ ಪೈಸೆ ಮತ್ತು ಡೀಸೆಲ್ ದರವು ಲೀಟರ್‌ಗೆ ೩೦ ಪೈಸೆ ಹೆಚ್ಚಾಗಿದೆ ಎಂದು ಭಾರತೀಯ…

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖ

ನವದೆಹಲಿ, ಮೇ ೨೯: ದೇಶದಲ್ಲಿ ಕಳೆದ ೨೪ ಗಂಟೆಯಲ್ಲಿ ಹೊಸದಾಗಿ ೧,೭೩,೭೯೦ ಕೊರೊನಾ ಸೋಂಕಿತರು ಪತ್ತೆಯಾಗಿದ್ದರೆ೩೬೧೭ ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದೆ ಅದೇ ರೀತಿ ಸಾವುಗಳು ಕೂಡ ಕಡಿಮೆಯಾಗುತ್ತಿವೆ.ಯಾವಾಗ ಬೇಕಾದರೂ ಕೊರೊನಾದ ಮೂರನೇ ಅಲೆ ಶುರುವಾಗಬಹುದು. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏನೋ ಕಡಿಮೆಯಾಗುತ್ತಿದೆ ಆದರೆ ಸಾವಿನ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ. ಒಟ್ಟು ೨,೭೭,೨೯,೨೪೭ ಪ್ರಕರಣಗಳಿವೆ, ಇದುವರೆಗೆ ೨,೫೧,೭೮,೦೧೧ ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್…

ಕೊರೊನಾ ಸೋಂಕಿಗೆ ಹೆತ್ತವರ ಕಳೆದುಕೊಂಡ ಅನಾಥ ಮಕ್ಕಳಿಗೆ ತಕ್ಷಣ ಪರಿಹಾರ ನೀಡಲು ಸುಪ್ರೀಂ ಸೂಚನೆ

ನವದೆಹಲಿ,ಮೇ,28:ಕೊರೊನಾ ಸೋಂಕಿನಿಂದ ಹೆತ್ತವರನ್ನು ಕಳೆದುಕೊಂಡ ಅನಾಥವಾಗಿರುವ ಮಕ್ಕಳಿಗೆ ತಕ್ಷಣವೇ ಪರಿಹಾರ ನೀಡುವಂತೆ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ನ್ಯಾಯಮೂರ್ತಿಗಳಾದ ಎಲ್‌.ಎನ್. ರಾವ್ ಮತ್ತು ಅನಿರುದ್ಧ ಬೋಸ್ ಅವರನ್ನೊಳಗೊಂಡ ರಜಾ ಪೀಠವು, ಸಾಂಕ್ರಾಮಿಕ ರೋಗದಿಂದ ಹೆತ್ತವರನ್ನು ಕಳೆದುಕೊಂಡ ಅನಾಥ ಮಕ್ಕಳನ್ನು ಗುರುತಿಸಿ, ಅವರ ಬಗೆಗಿನ ಸಮಗ್ರ ಮಾಹಿತಿಯನ್ನು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಎನ್‌ಸಿಪಿಸಿಆರ್) ‘ಬಾಲ್ ಸ್ವರಾಜ್’ ವೆಬ್‌ಸೈಟ್‌ಗೆ ಶನಿವಾರ ಸಂಜೆಯೊಳಗೆ ಅಪ್‌ಲೋಡ್ ಮಾಡಬೇಕು ಎಂದು ಆಯಾ ಜಿಲ್ಲಾಡಳಿತಗಳಿಗೆ ನಿರ್ದೇಶನ ನೀಡಿದೆ. ‘ಮಹಾರಾಷ್ಟ್ರದಲ್ಲಿ ಕೋವಿಡ್‌ನಿಂದಾಗಿ 2,900ಕ್ಕೂ…

ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ

ಚೆನ್ನೈ, ಮೇ ೨೭; ತಮಿಳುನಾಡಿನಲ್ಲಿ ಯಾವುದೇ ಸರ್ಕಾರಗಳು ಬಂದರು ಮೊದಲು ಕರ್ನಾಟಕದ ಆಣೆಕಟ್ಟುಗಳ ಮೇಲೆಯೇ ಕಣ್ಣು, ಕಾವೇರಿ,ಮೇಕೆದಾಟು ಹೀಗೆ ಕರ್ನಾಟಕದ ಯೋಜನೆಗಳನ್ನು ವಿರೋಧಿಸುತ್ತಲೇ ಅಲ್ಲಿನ ಜನರ ವಿಶ್ವಾಸ ಪಡೆಯುವ ತಂತ್ರಗಾರಿಕೆ ಮಾಡುತ್ತವೆ ಹೀಗೂ ಕೂಡ ಅದೇ ದಾರಿಯಲ್ಲಿ ಹೊಸ ಸರ್ಕಾರ ಸಾಗಿದೆ ಮೇಕೆದಾಟು ಬಳಿ ಆಣೆಕಟ್ಟು ನಿರ್ಮಾಣ ಮಾಡುವುದನ್ನು ವಿರೋಧಿಸಿರುವ ಹೊಸ ಸರ್ಕಾರ ಯಾವುದೆ ಕಾರಣಕ್ಕೂ ಆಣೆಕಟ್ಟು ಕಟ್ಟಲು ಬಿಡುವುದಿಲ್ಲ ಎಂದು ಖ್ಯಾತೆ ತಗೆದಿದೆ ತಮಿಳುನಾಡಿನ ಜಲಸಂಪನ್ಮೂಲ ಸಚಿವ ದೊರೈ ಮುರುಗನ್ ಈ ಕುರಿತು ಮಾತನಾಡಿದ್ದಾರೆ. ಮೇಕೆದಾಟು…

1 5 6 7 8 9
error: Content is protected !!