ನಿಂತ ನೀರಲ್ಲಿ ಗೀತೆಗಳ ಗುನು ಗುನು ಸದ್ದು
ಡಾ.ಶಿವಕುಮಾರ್ ಕಂಪ್ಲಿ ಪ್ರಾಧ್ಯಾಪಕರು. ದಾವಣಗೆರೆ ವಿಶ್ವವಿದ್ಯಾಲಯ ನಿಂತ ನೀರಲ್ಲಿ ಗೀತೆಗಳ ಗುನು ಗುನು ಸದ್ದು ಕವಿ ಕಥನಗಳು ಅಂತರಂಗ ಮತ್ತು ಬಹಿರಂಗದ ಕಾಲ,ಸಮಾಜ,ಧರ್ಮ ಮತ್ತು ರಾಜಕಾರಣಗಳ ನಾನಾ ಮುಖಗಳನ್ನ ತಮ್ಮ ತಮ್ಮ ಆವರಣಗಳಿಂದ ಬಿಡಿಸಿ ಹೇಳುತ್ತವೆ. ಭಿನ್ನ ಭಾಷೆಯ ಕವಿ ಕಥನಗಳು ನಮ್ಮ ಪರಿಸರಕ್ಕಿಂತಲೂ ಭಿನ್ನ ಅನುಭವಲೋಕವನ್ನ ,ಸನ್ನಿವೇಶ, ಸಮುದಾಯಗಳ ಸಾಂಸ್ಕೃತಿಕ ನಡೆಗಳನ್ನ ಒಡೆದು ತೋರುತ್ತವೆ.ಈ ನೆಲೆಯಲ್ಲಿ ಭಿನ್ನ ಭಾಷಿಕ ಬರಹಗಳು ಜಡತ್ವವನ್ನ ನೀಗಿಸಬಲ್ಲವು.ನಮ್ಮ ಬರಹಗಳಿಗೆ ಬಹುಮುಖಿ ರೂಪಗಳನ್ನ ಕಾಣಿಸಬಲ್ಲವು. ತಮ್ಮ ತಾಜಾಸೊಗಡಿನಿಂದ ವಿಸ್ಮಯ ಮತ್ತು ಕುತೂಹಲ…