ಬೆರಗು ಗೊಳಿಸಿದ ಡಕಾಯಿತನ ನಡೆ..!
ಬೆರಗು ಗೊಳಿಸಿದ ಡಕಾಯಿತನ ನಡೆ…! ನಾನು ಪ್ರಯಾಣಿಸುತ್ತಿದ್ದ ಲಕ್ಷುರಿ ಬಸ್ ಇಂದೋರ್ ನ ಹೊರವಲಯವನ್ನು ಪ್ರವೇಶಿಸಿದ ಸುಳಿವನ್ನು ಮುಚ್ಚಿದ ಕಿಟಿಕಿಯ ಪರದೆಗಳನ್ನೂ ಸೀಳಿ ಒಳತೂರುತ್ತಿದ್ದ ಹೆದ್ದಾರಿಯ ದಾರಿ ದೀಪಗಳ ಬೆಳಕಿನಿಂದ ಊಹಿಸಿದೆ. ಉರಿಯುವ ಕಣ್ಣುಗಳನ್ನು ಕಷ್ಟಪಟ್ಟು ತೆರೆದು ಕೈ ಗಡಿಯಾರವನ್ನು ನೋಡಿಕೊಂಡವನಿಗೆ ಸಮಯ ಮುಂಜಾನೆಯ ನಾಲ್ಕೂವರೆ ಎಂದು ಗೊತ್ತಾಯಿತು. ರಾತ್ರಿ ಹತ್ತರ ಸುಮಾರಿಗೆ ಅಹಮದಾಬಾದ್ ನ ಪಾಲಡಿಯ ಪವನ್ ಟ್ರಾವೆಲ್ಸ್ ಬಸ್ ನಲ್ಲಿ ಆಫೀಸ್ ನ ಕೆಲಸದ ನಿಮಿತ್ತ ಮಧ್ಯಪ್ರದೇಶದ ಇಂದೋರ್ ನಗರಕ್ಕೆ ಹೊರಟಿದ್ದ ನನಗೆ ರಾತ್ರಿಯಿಡೀ…