ಮಗಳ ಬದುಕಿಗೆ ಮಾರಕವಾದ ಕುಂಡಲಿ
ಮಗಳ ಬದುಕಿಗೆ ಮಾರಕವಾದ ಕುಂಡಲಿ “ಗಂಗಾ, ನಾನು ಹೊರಡುವುದಕ್ಕೆ ತಡವಾಗುತ್ತಿದೆ, ಬೇಗ ನನ್ನ ಬುತ್ತಿಯನ್ನು ಕೊಡು” ಎಂದು ಐಯ್ನೋರ ತಿಪ್ಪಯ್ಯ ಮೇಷ್ಟ್ರು ಅಡುಗೆಮನೆಯಲ್ಲಿದ್ದ ತಮ್ಮ ಧರ್ಮಪತ್ನಿ ಗಂಗಮ್ಮನನ್ನು ಕೂಗಿದ ಸದ್ದು ಮುಂಬಾಗಿಲನ್ನು ಸೀಳಿ ಹೊರಬಂದು ಮೇಷ್ಟ್ರ ಮನೆಯ ಎದುರಿನ ರಸ್ತೆಯಲ್ಲಿ ನಡೆಯತ್ತಾ ಸಾಗಿದ್ದ ನನ್ನ ಕಿವಿಗಳನ್ನು ಅಪ್ಪಳಿಸಿತು. ಅನಿತ ದೂರದಲ್ಲಿಯೇ ಇದ್ದ ಅನಂತಶೆಟ್ಟಿ ಅಂಗಡಿಗೆ ಹೋಗಿ ತಾತನ ಶನಿವಾರದ ತಿರುಪತಿ ತಿಮ್ಮಪ್ಪನ ಪೂಜೆಗೆಂದು ತೆಂಗಿನಕಾಯಿ ತರಬೇಕಾಗಿದ್ದ ಆತುರದಲ್ಲಿದ್ದ ನಾನು ಈ ಮಾತುಗಳನ್ನು ಕೇಳಿಸಿಕೊಂಡು ಒಂದು ಕ್ಷಣ ರಸ್ತೆಯ…


















