ಹೊರಡು ಕರೆ ಬರಲ್ ಅಳದೆ ಮಂಕುತಿಮ್ಮ
ಸಿದ್ಧಸೂಕ್ತಿ : ಹೊರಡು ಕರೆ ಬರಲ್ ಅಳದೆ ಮಂಕುತಿಮ್ಮ. ಸಾವೆಂದರೆ ಭಯ! ತಪ್ಪಿಸಲಾಗದು! ಉತ್ತಮ ಆರೋಗ್ಯ ಎಚ್ಚರಿಕೆಯಿಂದ ಮುಂದಕ್ಕೆ ತಳ್ಳಬಹುದಷ್ಟೇ! ನಿದ್ರೆ ಪ್ರತಿದಿನದ ಪ್ರಾಯೋಗಿಕ ಸಾವು! ಅದಕ್ಕೆ ಭಯ ಅಳುವು ಬೇಡ. ಅದು ಕಬಳಿಸುವ ಮೊದಲು ನಾವೇ ಅದಕ್ಕೆ ಕಾಯೋಣ! ಊರಿಗೆ ಹೊರಡಲು ಸಿದ್ಧರಾಗಿ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುವಂತೆ, ಬಸ್ ಬರುತ್ತಲೇ ಉತ್ಸಾಹದಿಂದ ಬಸ್ ಹತ್ತಲು ಮುನ್ನುಗ್ಗುವಂತೆ! ಇದಕ್ಕೆ ಬೇಕು ಶಿಸ್ತಿನ ಬದುಕು. ಅಗತ್ಯ ಕೆಲಸ ಸಣ್ಣದೋ ದೊಡ್ಡದೋ, ಎಲ್ಲ ಪವಿತ್ರ. ಅಲ್ಲಿಲ್ಲ…