Girl in a jacket

Author kendhooli_editor

ದೇಶದಲ್ಲೆ ಮೊದಲಬಾರಿಗೆ ಕೃತ್ಯ ಸ್ಥಳ ಪರಿಶೀಲನಾ ಅಧಿಕಾರಿ ಹುದ್ದೆ ಸೃಷ್ಟಿ

ಬೆಂಗಳೂರು,ಜು,12:ಅಪರಾಧ ಕೃತ್ಯ ನಡೆದ ಸ್ಥಳವನ್ನು ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿ, ಸೂಕ್ಷ್ಮಾತಿಸೂಕ್ಷ್ಮ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಅಪರಾಧವನ್ನು ಪತ್ತೆ ಮಾಡಲು ದೇಶದಲ್ಲಿಯೇ ಮೊಟ್ಟ ಮೊದಲ ನುರಿತ ಹಾಗೂ ಪರಿಣಿತರ ‘ಕೃತ್ಯ ಸ್ಥಳ ಪರಿಶೀಲನಾ ಅಧಿಕಾರಿ’ ಹುದ್ದೆಯನ್ನು ಸೃಷ್ಟಿ ಮಾಡಲಾಗಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ನಾಳೆ ದಿನಾಂಕ 13 ಜುಲೈ 2021 ರಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ scene of crime officer ಹುದ್ದೆಗಳ ಆದೇಶ ಪ್ರತಿಯನ್ನು ಕೊಡಲಿದ್ದಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ದೇಶದಲ್ಲಿಯೇ…

ಹಿರಿಯ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹೃದಯಾಘಾತದಿಂದ ನಿಧನ

ಚಿಕ್ಕಮಗಳೂರು,ಜು,12: ಹಿರಿಯ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ(43) ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ. ಹಾಯ್ ಬೆಂಗಳೂರು ಪತ್ರಿಕೆ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಸುನೀಲ್ ಹೆಗ್ಗರವಳ್ಳಿ ಚಿಕ್ಕಮಗಳೂರಿನ ಗೋಣಿಬೀಡು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹಾಯ್ ಬೆಂಗಳೂರು ಪತ್ರಿಕೆಯ ವರದಿಗಾರರಾಗಿ ಅವರು ಮಾಡಿದ ಸಾಕಷ್ಟು ವರದಿಗಳು ದೊಡ್ಡ ಸಂಚಲನವನ್ನೇ ಮೂಡಿಸಿದ್ದವು. ರವಿ ಬೆಳಗೆರೆಯವರ ಅತ್ಯಾಪ್ತನಾಗಿದ್ದುಕೊಂಡು ನಂತರ ಅನಾರೋಗ್ಯದ ಸನ್ನಿವೇಶದಲ್ಲಿ ಪತ್ರಿಕೆಯನ್ನು ಸಂಪಾದಕನಾಗಿ ಮುನ್ನಡೆಸಿದ್ದರು. ಶೂಟೌಟ್ ವಿವಾದದ ಸನ್ನಿವೇಶದಲ್ಲಿ ರವಿ ಬೆಳಗೆರೆ ಅವರ ಮೇಲೆಯೇ ಸುಪಾರಿ ಆರೋಪ ಮಾಡಿ ಹಾಯ್ ಬೆಂಗಳೂರು ಕಚೇರಿಯಿಂದ…

ಜುಲೈ 19 ರಿಂದ ಸಂಸತ್ ಅಧಿವೇಶನ

ನವದೆಹಲಿ,ಜು,12: ಸಂಸತ್ತಿನ ಮುಂಗಾರು ಅಧಿವೇಶನವು ಜುಲೈ 19ರಿಂದ ಆರಂಭವಾಗಲಿದೆ ಎಂದು ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಸೋಮವಾರ ಮಾಹಿತಿ ನೀಡಿದ್ದಾರೆ. 19 ದಿನಗಳ ಕಾಲ ನಡೆಯಲಿರುವ ಸಂಸತ್ತಿನ ಮುಂಗಾರು ಅಧಿವೇಶನವು ಆಗಸ್ಟ್‌ 13ಕ್ಕೆ ಅಂತ್ಯಗೊಳ್ಳಲಿದೆ ಎಂದು ಬಿರ್ಲಾ ತಿಳಿಸಿದ್ದಾರೆ. ಸಾಮಾನ್ಯವಾಗಿ ಮುಂಗಾರು ಅಧಿವೇಶನವು ಜುಲೈ ಮೂರನೇ ವಾರದಲ್ಲಿ ಆರಂಭವಾಗಿ, ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಕೊನೆಗೊಳ್ಳುವುದು ವಾಡಿಕೆ. ಆದರೆ, ಈ ಬಾರಿ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿಯ ಶಿಫಾರಸಿನ ಮೇಲೆ ಅಧಿವೇಶನದ ಅವಧಿಯನ್ನು ನಿಗದಿಪಡಿಸಲಾಗಿದೆ. ಅಧಿವೇಶನದ ಅವಧಿಯಲ್ಲಿ ಕೋವಿಡ್‌…

ರಿಚರ್ಡ್ ಆಂಟನಿಯಾಗಿ ರಕ್ಷಿತ್ ಶೆಟ್ಟಿ

ಹೊಂಬಾಳೆ ಫಿಲಂಸ್‌ನ ಮುಂದಿನ ಚಿತ್ರ ಘೋಷಣೆಯಾಗಿದ್ದು ಇದರ ನಿರ್ದೆಶನದ ಜವಾಬ್ದಾರಿ ಜೊತೆಗೆ ನಾಯಕ ಕೂಡಾ ರಕ್ಷಿತ್ ಶೆಟ್ಟಿ ಜವಾಬ್ದಾರಿ ಹೊತ್ತುಕೊಂಡಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.. ಚಿತ್ರದ ಹೆಸರು ’ರಿಚರ್ಡ್ ಆಂಟನಿ – ಲಾರ್ಡ್ ಆಫ್ ದ ಸೀ’ ಇದು ಚಿತ್ರದ ಟೈಟಲ್ ತೀವ್ರ ಕುತೂಹಲ ಮೂಡಿಸಿರುವ ಈ ಚಿತ್ರದ ಟೈಟಲ್ ಅಷ್ಟೆ ವಿಶೇಷವಾಗಿ ರಕ್ಷಿತ್ ಶೆಟ್ಟಿ ಈ ಚಿತ್ರದ ನಿರ್ದೇಶನದ ಹೊಣೆ ಹೊತ್ತು ಅತ್ಯಂತ ಕ್ರಿಯಾಶೀಲತೆಯನ್ನು ಇದರಲ್ಲಿ ತೊಡಗಿಸಲಿದ್ದಾರೆ ಎನ್ನುವುದು ಈಗಿನ ಹೊಸ ಸುದ್ದಿ. ಕೆಜಿಎಫ್, ಸಲಾರ್…

ಶಿವಣ್ಣಗೆ ೫೯ನೇ ಜನ್ಮದಿನದ ಸಂಭ್ರಮ

ಕನ್ನಡ ಚಿತ್ರರಂಗದ ಅತ್ಯಂತ ಬಿಜಿ ನಟ ಎಂದರೆ ಅದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ,ಅವರ ಎನರ್ಜಿ ಇನ್ನೂ ಯುವಕರಂತೆಯೇ ಇದೆ ಅವರ ಚಿತ್ರಗಳಲ್ಲಿ ಅವರ ಲವಲವಿಕೆ ನೋಡಿದರೆ ಹಾಗೆ ಅನಿಸದೆ ಇರಲಾರದು ಸದಾ ನಗು ನಗುತ್ತಲೇ ಇರುವ ಅವರಿಗೆ ಇಂದು ೫೯ ನೇ ಜನ್ಮದಿನದ ವಿಶೇಷ. ಕೊರೊನಾ ಸಂಕಷ್ಟದ ಈ ಸಮಯದಲ್ಲಿ ಅವರು ಜನ್ಮದಿನವನ್ನು ಆಚರಿಸಿಕೊಳ್ಳುತ್ತಿಲ್ಲ ಅಭಿಮಾನಿಗಳಿಗೂ ಕೂಡ ಯಾರು ಮನೆ ಮುಂದೆ ಬರಬೇಡಿ ನಾನು ಇರುವುದಿಲ್ಲ ಎಂದು ಹೇಳಿದ್ದಾರೆ ಅಲ್ಲದೆ. ಎಲ್ಲರಿಗೂ ಅವರ ಆರೋಗ್ಯ…

ಸಿದ್ಧಾರೂಢ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅಶ್ವಥ್ ನಾರಾಯಣ್

ಹುಬ್ಬಳ್ಳಿ,ಜು,೧೨: ಇಲ್ಲಿನ ಆರಾಧ್ಯ ದೈವವಾದ ಸಿದ್ಧಾರೂಢ ಮಠಕ್ಕೆ ಉಪ ಮುಖ್ಯಮಂತ್ರಿ ಡಾ.ಸಿ.ಎಸ್.ಅಶ್ವಥ್‌ನಾರಾಯಣ ಅವರು ಭೇಟಿ ನೀಡಿ ಸಿದ್ಧಾರೂಢರು ಮತ್ತು ಗುರುನಾಥರೂಢರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು ಹುಬ್ಬಳ್ಳಿ ಪ್ರವಾಸದಲ್ಲಿರುವ ಅವರು ಇಲ್ಲಿನ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಇದರ ಮಧ್ಯೆಯೇ ಬೆಳಂಬೆಳಗ್ಗೆ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿದ್ದಾರೆ. ಉಭಯ ಶ್ರೀಗಳ ಗದ್ದುಗೆ ದರ್ಶನ ಪಡೆದುಕೊಂಡು ವಿಶೇಷ ಪೂಜೆ ಸಲ್ಲಿಸಿದರು. ಡಿಸಿಎಂ ಅಶ್ವಥ್ ನಾರಾಯಣ್ ನಗರದಲ್ಲಿ ಇಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಇಂದು ಬೆಳಗ್ಗೆ ಕರ್ನಾಟಕ ವಿಶ್ವ…

ದರ್ಶನ್ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿದ ಮಹಿಳೆ-ದೂರು

ಮೈಸೂರು,ಜು,೧೨: ಚಾಲೇಂಜಿಂಗ್ ಸ್ಟಾರ್ ಸ್ಟಾರ್ ದರ್ಶನ್ ತಮ್ಮ ಹೆಸರಿನಲ್ಲಿ ಮಹಿಳೆಯೊಬ್ಬಳು ವಂಚನೆ ಮಾಡಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ. ಈ ಮೂಲಕ ದರ್ಶನ್ ಹೆಸರಿನಲ್ಲಿ ಇರುವ ಯಾವ ಆಸ್ತಿ ನಕಲಿ ಮಾಡಲಾಗಿದೆ ಯಾಕೆ ಈ ಘಟನೆ ನಡೆದಿದೆ ಇದರ ಹಿಂದೆ ಇರುವವರು ಯಾರು ಎನ್ನುವ ಕುತೂಹಲ ಕೆರಳಿಸಿದೆ. ೧೫ ದಿನಗಳ ಹಿಂದೆ ದರ್ಶನ್ ಬಳಿ ಓರ್ವ ಮಹಿಳೆ ಬಂದು, ನಿಮ್ಮ ಹೆಸರಿನಲ್ಲಿ ಶ್ಯೂರಿಟಿ ಹಾಕಿಕೊಂಡು ೨೫ ಕೋಟಿ ರೂ. ಸಾಲ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ದರ್ಶನ್ ಆಪ್ತ ರಾಬರ್ಟ್…

ರಾಜಸ್ಥಾನದಲ್ಲಿ ಸಿಡಿಲು ಬಡೆದು 11 ಮಂದಿ ಸಾವು

ಜೈಪುರ,ಜು:ನಿನ್ನೆ ರಾತ್ರಿ ಸಿಡಿಲು ಬಡೆದು 11ಮಂದಿ ಸಾವನ್ನಪ್ಪಿದ್ದು ಕೆಲವರು ಗಾಯಗೊಂಡ ಘಟನೆ ಸಮೀಪದ 12ನೇ ಶತಮಾನದ ಅಮೆರ್ ಪ್ಯಾಲೆಸ್‌ನಲ್ಲಿ ಜರುಗಿದೆ. ಅಮೆರ್‌ ಪ್ಯಾಲೆಸ್‌ನ ವಾಚ್‌ ಟವರ್‌ ಮೇಲೆ ಜನರು ಮಳೆಯಲ್ಲೇ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಸಿಡಿಲು ಬಡಿದ ಪರಿಣಾಮ ಈ ದುರಂತ ಸಂಭವಿಸಿದೆ. ಕೆಲವರು ಸಿಡಿಲಿನ ಭಯಕ್ಕೆ ವಾಚ್‌ ಟವರ್‌ ಮೇಲಿಂದ ಧುಮುಕಿ ಗಾಯಗೊಂಡಿದ್ದಾರೆ ಎಂದು ರಾಜಸ್ಥಾನ ಪೊಲೀಸರು ತಿಳಿಸಿದ್ದಾರೆ. ಸಿಡಿಲು ಬಡಿದಾಗ ವಾಚ್‌ ಟವರ್‌ ಮೇಲೆ 27 ಜನರು ಇದ್ದರು ಎನ್ನಲಾಗಿದೆ. ಘಟನೆ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ…

ಹೆಂಡ ಸಾರಾಯಿ ಸಹವಾಸ, ಹೆಂಡತಿ ಮಕ್ಕಳು ಉಪವಾಸ

     ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಹೆಂಡ ಸಾರಾಯಿ ಸಹವಾಸ, ಹೆಂಡತಿ ಮಕ್ಕಳು ಉಪವಾಸ. ಮದ್ಯಸೇವನೆ ಎಲ್ಲೆಡೆ ಹರಡಿದ ಹೆಚ್ಚು ಅಪಾಯದ ದುಶ್ಚಟ. ಸಿರಿವಂತ ವಿದ್ಯಾವಂತರು ಹತ್ತಾರು ಸಾವಿರ ರೂ ಮೌಲ್ಯದ ಉತ್ತಮ ಮದ್ಯವನ್ನು ಹಿತಮಿತ ಸೇವಿಸುವುದುಂಟು. ಇದು ರಟ್ಟಾಗದೆಯೂ ಇರಬಹುದು! ಬಡವ ಕಡಿಮೆ ಮೌಲ್ಯದ ಕಳಪೆ ಮದ್ಯ ಸೇವಿಸಿ, ಎಚ್ಚರ ತಪ್ಪಿ, ಅಸಂಬದ್ಧ ಮಾತಾಡಿ, ಒದೆ ತಿಂದು, ರಸ್ತೆ – ಚರಂಡಿಯಲ್ಲಿ ಬಿದ್ದು ಉರುಳಾಡಿ, ತನ್ನ – ಕುಟುಂಬದ ಮರ್ಯಾದೆಯ ಹರಾಜಿಗಿಕ್ಕುವನು! ಮತ್ತು…

ಮಳೆಕೊಯ್ದು ಪದ್ದತಿಯನ್ನು ಅಳವಡಿಸಿಕೊಂಡ ಪ್ರಾಚೀನ ತಾಣ ಚಿತ್ರದುರ್ಗ

ಮಳೆಕೊಯ್ದು ಪದ್ದತಿಯನ್ನು ಅಳವಡಿಸಿಕೊಂಡ ಪ್ರಾಚೀನ ತಾಣ ಚಿತ್ರದುರ್ಗ ಇತ್ತೀಚೆಗೆ ಪ್ರಧಾನ ಮಂತ್ರಿಯವರು ಮಳೆ ನೀರು ಹಿಡಿಯಿರಿ(ಕ್ಯಾಚ್ ದ ರೈನ್)” ಎಂಬ ವಿಶೇಷ ಕಾರ್ಯಕ್ರಮದ ಮೂಲಕ ವಿಶ್ವ ಜಲದಿನವನ್ನು ಆಚರಿಸಿದ್ದರು. ಅಲ್ಲದೆ ಜಲ ಪ್ರಮಾಣ ವಚನವನ್ನೂ ಘೋಷಿಸಿದ್ದರು. ಈ ಅಭಿಯಾನವು ನೀರಿನ ಅಗತ್ಯವನ್ನು ಸಾರಿಹೇಳುವ ಮಳೆಕೊಯ್ಲು ಕಾರ್ಯಕ್ರಮವೇ ಆಗಿದ್ದಿತು. ಮಳೆಕೊಯ್ಲು ಎಂಬುದು ಇತ್ತೀಚೆಗೆ ಹೆಚ್ಚು ಹೆಚ್ಚಾಗಿ ಅನುಸರಿಸಿ ಅಳವಡಿಸಿಕೊಂಡ ಆಧುನಿಕ ಪರಿಭಾಷೆ. ಪರಿಸರ ಮತ್ತು ಹವಾಮಾನದಲ್ಲಾದ ವ್ಯತಿರಿಕ್ತ ಬದಲಾವಣೆಯಿಂದ ಪ್ರಚಲಿತಗೊಂಡ ಪದ್ಧತಿಯೂ ಹೌದು, ಇಡೀ ಭೂಮಂಡಲವು ಮಾನವ ನಿರ್ಮಿತ…

ಕರ್ನಾಟಕದ ನೂತನ ರಾಜ್ಯಪಾಲರಾಗಿ ಥಾವರ್‍ಚಂದ್ ಗೆಹ್ಲೋಟ್ ಪ್ರಮಾಣ ವಚನ

ಬೆಂಗಳೂರು, ಜು, 11:ಕರ್ನಾಟಕದ ನೂತನ ರಾಜ್ಯಪಾಲರಾಗಿ ಥಾವರ್‍ಚಂದ್ ಗೆಹ್ಲೋಟ್ ಅವರು ಇಲ್ಲಿ ಇಂದು ಪ್ರಮಾಣ ವಚನ ಸ್ವಿಕರಿಸಿದರು. ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರು ರಾಜಭವನದ ಗಾಜಿನ ಮನೆಯಲ್ಲಿ ನಡೆದ ವಿಶೇóಷ ಸಮಾರಂಭದಲ್ಲಿ ಥಾವರ್‍ಚಂದ್ ಗೆಹ್ಲೋಟ್ ಅವರಿಗೆ ಪ್ರಮಾಣ ವಚನವನ್ನು ಬೋಧಿಸಿದರು. ನೂತನ ರಾಜ್ಯಪಾಲರು ಹಿಂದಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕಾದ ಸಮಾರಂಭದಲ್ಲಿ ನಿರ್ಗಮಿತ ರಾಜ್ಯಪಾಲ ವಜುಭಾಯಿ ರುಢಾಭಾಯಿ ವಾಲಾ ಹಾಗೂ ಮುಖ್ಯಮಂತ್ರಿ ಬಿ. ಎಸ್.…

ಬ್ಯಾರೇಜ್ ನಿರ್ಮಾಣಕ್ಕೆ ಭೂಮಿ ಪೂಜೆ

ಹುಬ್ಬಳ್ಳಿ ,ಜು.11: ಸಣ್ಣ ನೀರಾವರಿ ಇಲಾಖೆ ವತಿಯಿಂದ 94 ಲಕ್ಷ ರೂಪಾಯಿ ವೆಚ್ಚದಲ್ಲಿ ಹುಬ್ಬಳ್ಳಿಯ ಉಣಕಲ್ ಗ್ರಾಮದ ಸುಳ್ಳ ರಸ್ತೆಯಲ್ಲಿನ ಹಳ್ಳದ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಭೂಮಿ ಪೂಜೆ ನೆರವೇರಿಸಿದರು.ಬ್ಯಾರೇಜ್ ನಿರ್ಮಾಣದಿಂದ ಸುತ್ತಮುತ್ತಲಿನ ಸುಮಾರು 74 ಎಕರೆ ಕೃಷಿ ಭೂಮಿಗೆ ನೀರು ಲಭಿಸಲಿದೆ. ಸ್ಥಳೀಯ ರೈತರು ಹಳ್ಳವನ್ನು ಹಾದು ಹೊಲಗಳಿಗೆ ತೆರಳಲು ರಸ್ತೆಯ ಅನುಕೂಲವಾಗಲಿದೆ. ಈ ಸಂದರ್ಭದಲ್ಲಿ ಹುಡಾ ಅಧ್ಯಕ್ಷ…

ಆಡಳಿತ ವರ್ಗದ ಕಾರ್ಯ ಕ್ಷಮತೆ, ಖಾಸಗಿ ಕೆಲಸದ ಅದಕ್ಷತೆ

ಆಡಿಳತ ವರ್ಗದ ಕಾರ್ಯಕ್ಷಮತೆ,ಖಾಸಗಿ ಕೆಲಸದ ಅದಕ್ಷತೆ ಕೋಟ ಬಸ್ ನಿಲ್ದಾಣದಲ್ಲಿ ಸನ್ಯಾಲ್ ಕಾರನ್ನು ಹತ್ತಿ ರಾವತ್ ಭಾಟ ಅಣುಶಕ್ತಿ ಸ್ಥಾವರ (RAPP)ಕ್ಕೆ ಹೊರಟ ನನ್ನೊಟ್ಟಿಗಿದ್ದ ಕೋಟ ಆಫೀಸ್ ನ ಅಶೋಕ್ ಕುಮಾರ್ ಕುಲಶ್ರೇಷ್ಠ (AKK) ಬಹಳ ಅಸಮಾಧಾನಗೊಂಡಿದ್ದರು. ಸುಮಾರು 50 ಕಿ. ಮೀ.ಗಳ ದೂರದ ಹಾದಿಯ ಉದ್ದಕ್ಕೂ ನಾನು ಮತ್ತು ಸನ್ಯಾಲ್ ಆಡುತ್ತಿದ್ದ ಮಾತುಗಳನ್ನು ಕೇಳಿಸಿಕೊಳ್ಳುತಿದ್ದರೇ ಹೊರತು ತಾವಾಗಿಯೇ ಒಂದೇ ಒಂದು ಮಾತನ್ನೂ ಆಡಲಿಲ್ಲ. ನಾನು ಮಾಡಿದ ತಪ್ಪಿನ ಅರಿವು ನನಗಾಗಲೆ ಆಗತೊಡಗಿತ್ತು. AKK ಪ್ರತಿರೋಧದ…

ಕಾಣುವ ಬೆಳಕು ಮತ್ತು ಕಾಣದ ಇರುಳು…

ಕಾಣುವ ಬೆಳಕು ಮತ್ತು ಕಾಣದ ಇರುಳು… ಇಳೆ ಮತ್ತು ಮಳೆಗಳ ಕಥನ ಭೂಮಿಯ ಫಲಗಳ ಕಥನ ಮಾತ್ರವಲ್ಲ, ಬಹು ಜೀವಿಗಳ ಬದುಕಿನ ವಿರುದ್ದ ವಿನ್ಯಾಸಗಳ ನೋವಿನ ತಾರ್ಕಿಕ ಕಥನವೂ ಹೌದು.” ರೈತ ಬಡವನಾದರೂ ಭೂಮಿ ಬಡವಲ್ಲ” ಎಂಬ ಗಾದೆ ಉದಾರ ನೆಲೆಯಿಂದ ಕೂಡಿದೆ.ಹಳ್ಳಿಗಳ ಒಡಲಾಳದ ಜಮೀನ್ದಾರಿ ವ್ಯವಸ್ಥೆ ಭೂಮಿ ನಂಬಿದ ಕೂಲಿ ರೈತರನ್ನ ಬಡವರನ್ನಾಗಿಸಿದ ರೀತಿಗಳನ್ನ ಬಗೆಯ ಬೇಕಿದೆ. ಅಶ್ವಿನಿ ಮಳೆ ಆರಂಭದಂದು ಕೂರಿಗೆ,ರಂಟೆ,ಕುಂಟೆಗಳ ಪೂಜೆಯನ್ನ ಪ್ರಾರಂಭಿಸುವಂತೆಯೇ ದನಕರುಗಳಿಗೆ ನೇಗಿಲು,ನೊಗಗಳಿಗೆ,ಕೃಷಿಯ ಎಲ್ಲಾ ಪರಿಕರಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ನೆಲ…

ದೈವ ಗುಟ್ಟದು ತಿಳಿಯೆ ಮಂಕುತಿಮ್ಮ!

ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ದೈವ ಗುಟ್ಟದು ತಿಳಿಯೆ ಮಂಕುತಿಮ್ಮ! ದೈವರಹಸ್ಯ ನಾ ತಿಳಿಯಲಾರೆ! ಎಲ್ಲೋ ಯಾವುದೋ ತಣ್ಣೀರನ್ನು ಹೀರಿ ಬೆಳೆದ ಬೇಳೆ, ಮತ್ತಿನ್ನೆಲ್ಲೋ ಯಾವುದೋ ಬಿಸಿ ನೀರಿನಲ್ಲಿ ಕ್ವಥ ಕ್ವಥ ಬೇಯುವುದು! ಯಾವನೋ ಬೆಳೆಯುವನು, ಯಾವನೋ ತಿನ್ನುವನು! ಯಾವನೋ ಕಟ್ಟುವನು ಯಾವನೋ ನೆಲೆಸುವನು! ಮನೆಯಲ್ಲಿ ಮಗು ಮೇಕೆ ದನ ಕರುಗಳನ್ನು ಮುದ್ದಿಸಿ ಬೆಳೆಸುವ ಕೈಗಳು, ಕಸಾಯಿಖಾನೆಯಲ್ಲಿ ಹಸು ಕುರಿ ಕರುಗಳ ತುಂಡರಿಸುವವು! ಹಾಲುಂಡು ನುಡಿಗಲಿತು ನಕ್ಕು ನಲಿಸಿದ ಮುದ್ದು ಮುಖದಿಂದ, ಹೆತ್ತ-ಹಿರಿಯರಿಗೆ ಕಠೋರ ವಾಗ್ಬಾಣ!…

ಜೈಲಿನಲ್ಲಿದ್ದುಕೊಂಡೇ ಸ್ಕೆಚ್; ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ಪೊಲೀಸರ ದಾಳಿ

ಬೆಂಗಳೂರು, ಜು.10: ಜೈಲಿನಲ್ಲಿದ್ದುಕೊಂಡೆ ಕಿಡಿಗೇಡಿಗಳು ಇತ್ತೀಚೆಗೆ ನಗರದಲ್ಲಿ ನಡೆದ ಕೃತ್ಯಗಳಿಗೆ ಸ್ಕೆಚ್ ಹಾಕಿದ್ದರು ಎನ್ನುವ ಅಂಶ ಈಗ ಬಯಲಿಗೆ ಬಂದಿದೆ. ಈ ಆಧಾರದ ಮೇಲೆ ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಿಡೀರ್ ದಾಳಿ ನಡೆಸಿದರು. ಇತ್ತೀಚೆಗೆ ಶಾಸಕ ಆರವಿಂದ್ ಬೆಲ್ಲದ್ ಅವರು ನನ್ನ ದೂರವಾಣಿ ಕದ್ದಾಲಿಕೆ ಮಾಡುತ್ತಿರುವುದರ ಜತೆಗೆ ಜೈಲಿನಲ್ಲಿರುವ ವ್ಯಕ್ತಿಯೊಬ್ಬ ನನಗೆ ದೂರವಾಣಿ ಕರೆ ಮಾಡಿದ್ದ ಎಂದು ಆರೋಪಿಸಿದ್ದರು.ಇದರ ಜತೆಗೆ ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಹತ್ಯೆ ಹಾಗೂ ಗೋವಿಂದಪುರ ಪೊಲೀಸ್…

ಅಕ್ರಮ ಗಣಿಗಾರಿಕೆ ವಿರುದ್ಧ ನನ್ನ ಹೋರಾಟ ನಿಲ್ಲೊಲ್ಲ; ಸುಮಲತಾ

ಬೆಂಗಳೂರು,ಜು,10: ಅಕ್ರಮ ಗಣಿಗಾರಿಕೆ ವಿರುದ್ಧ ನನ್ನ ಹೋರಾಟ ನಿಲ್ಲಲ್ಲ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೇನೆ‌ ಎಂದಿರುವ ಸಂಸದೆ ಸುಮಲತಾ ಅವರು,ರವೀಂದ್ರ ಶ್ರೀಕಂಠಯ್ಯ ಹೇಳಿದಂತೆ ನಡೆದುಕೊಳ್ಳಲಾಗಲ್ಲ. ಒಬ್ಬ ಸಂಸದೆಯಾಗಿ ನನ್ನ ಜವಾಬ್ದಾರಿ ನನಗೆ ಗೊತ್ತಿದೆ ಎಂದು ತಿರುಗೇಟು ನೀಡಿದ್ದಾರೆ. ಟಿ.ಎ. ಶರವಣ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ಕೇಳಿದಾಗ ಶರವಣ ಯಾರು ಎಂಬುದೇ ನನಗೆ ಗೊತ್ತಿಲ್ಲ. ಹಾಗಾಗಿ ಅವರ ಪ್ರಶ್ನೆಗಳಿಗೆ ಉತ್ತರಿಸುವ ಅಗತ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ನಾನು ದಿಶಾ ಸಭೆಯಲ್ಲಿ ಮಾತಾಡಿದ್ದನ್ನೇ ಪ್ರಸ್ತಾಪಿಸಿದ್ದಾರೆ. ಅಕ್ರಮ ಗಣಿಗಾರಿಕೆ ವಿಚಾರವನ್ನು ನಾನು…

ಅನ್ನದಾತುರಕ್ಕಿಂತ ಚಿನ್ನದಾತುರ ತೀಕ್ಷ್ಣ

ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ‌‌‌‌‌‌‌                    ಸಿದ್ಧಸೂಕ್ತಿ : ಅನ್ನದಾತುರಕ್ಕಿಂತ ಚಿನ್ನದಾತುರ ತೀಕ್ಷ್ಣ ಬದುಕಿಗೆ ಬೇಕು ನೆಲ ಜಲ ಗಾಳಿ ಆಕಾಶ ಅಗ್ನಿ ಆಹಾರ! ಪರಮಾತ್ಮ ಸೃಜಿಸಿ ಸೃಜಿಸುತ್ತಲಿಹನು. ಎಲ್ಲವನು ತಾನು ತನ್ನವರೇ ನುಂಗುವ ದಾಹ ನರನಿಗೆ. ಹೊಟ್ಟೆ ತುಂಬುವಷ್ಟು ಉಣ್ಣುವ ತವಕ ತಪ್ಪಲ್ಲ! ತಾನು ತನ್ನವರೇ ಉಣುವ ಆಶೆ ಇಣುಕುವುದು ತಪ್ಪು! ಪಂಕ್ತಿಯಲಿ ಲಾಡು ಕೈಚೀಲ ಸೇರುವುದು! ಇತರ ಜೀವರಾಶಿಗೆ ಅಂದಂದಿನ ಆಹಾರ, ಸ್ವಲ್ಪ…

3ನೇ ಅಲೆಗೆ ಆಮ್ಲಜನಕ ಸೇರಿದಂತೆ ಎಲ್ಲಾ ವೈದ್ಯಕೀಯ ಸೌಂಕರ್ಯಗಳ ಸಿದ್ದತೆ ಮಾಡಿಕೊಂಡ ಕೇಂದ್ರ

ನವದೆಹಲಿ,ಜು10: ಕೋವಿಡ್‌–19ರ ಎರಡನೇ ಅಲೆ ಸಂದರ್ಭದಲ್ಲಿ ಆದ ಕೆಲ ವೈದ್ಯಕೀಯ ಸೌಕರ್ಯಗಳ ತೊಂದರೆಯಿಂದ ಪಾಠ ಕಲೆತ ಕೇಂದ್ರ ಈಗ ಮೂರನೇ ಅಲೆ ಮುಂಜಾಗೃತೆ ವಹಿಸಿ ಬೇಕಾದ ಎಲ್ಲಾ ಸೌಕರ್ಯಗಳಿಗೆ ಮುಂದಾಗಿದೆ. ದೇಶದಾದ್ಯಂತ ವೈದ್ಯಕೀಯ ಆಮ್ಲಜನಕ ಪೂರೈಕೆ ಹೆಚ್ಚಳದ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ್ದಾರೆ. 1500ಕ್ಕೂ ಹೆಚ್ಚು ಪಿಎಸ್‌ಎ ಮಾದರಿಯ ಆಮ್ಲಜನಕ ಉತ್ಪಾದನೆ ಘಟಕಗಳು ಶೀಘ್ರವೇ ಕಾರ್ಯಾರಂಭ ಮಾಡಲಿವೆ ಎಂಬ ಮಾಹಿತಿಯನ್ನು ಪ್ರಧಾನಿಗೆ ಅಧಿಕಾರಿಗಳು ನೀಡಿದ್ದಾರೆ. ಈ ಘಟಕಗಳ ಮೂಲಕ, ನಾಲ್ಕು…

ಇಂಡಿ ತಾಲೂಕಿನ 23 ಕೆರಗಳ ತುಂಬಿಸುವ ಯೋಜನೆಗೆ ಅನುದಾನ ನೀಡಲು ಎಂ.ಬಿ ಪಾಟೀಲ್ ಮನವಿ

ಬೆಂಗಳೂರು,ಜು0 9. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ 23 ಕೆರೆಗಳನ್ನು ತುಂಬಿಸುವ ಯೋಜನೆಗೆ ಅನುದಾನ ಒದಗಿಸುವಂತೆ ಕೋರಿ ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು ಬೆಂಗಳೂರಿನಲ್ಲಿಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿ ಮಾಡಿ ವಿನಂತಿಸಿದ್ದಾರೆ. ಮುಖ್ಯಮಂತ್ರಿಗಳ ಗೃಹ ಕಛೇರಿಯಲ್ಲಿ ಯಡಿಯೂರಪ್ಪನವರನ್ನು ಭೇಟಿ ಮಾಡಿ, ಚರ್ಚಿಸಿದ ಎಂ.ಬಿ.ಪಾಟೀಲ್‍ರವರು ಭೀಮಾನದಿ ಪಾತ್ರದಲ್ಲಿ ನೀರಿನ ಕೊರತೆಯ ಕಾರಣ ಇಂಡಿ ಭಾಗದ ಕೆಲವು ಪ್ರದೇಶಕ್ಕೆ ನೀರಾವರಿ ಸೌಕರ್ಯ ಕಲ್ಪಿಸಲಾಗಿಲ್ಲ. ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಕೃಷ್ಣಾ ನದಿ ನೀರನ್ನು ಎತ್ತಿ, ಭೀಮಾ ಭಾಗದ ಈ ಹಳ್ಳಿಗಳಿಗೆ…

1 67 68 69 70 71 99
Girl in a jacket