Girl in a jacket

Author kendhooli_editor

ಗರ್ಭಾವಸ್ಥೆಯಲ್ಲಿ ಮಧುಮೇಹ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಲಹೆಗಳು

ಡಿ.ಆರ್.ರಾಧಾ ಎಸ್ ರಾವ್ ಎಂಬಿಬಿಎಸ್, ಎಂಎಸ್, ಎಂಆರ್‌ಸಿಒಜಿ ಸೀನಿಯರ್ ಕನ್ಸಲ್ಟೆಂಟ್ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ಅಪೊಲೊ ಕ್ರೆಡಲ್ ಮತ್ತು ಮಕ್ಕಳ ಆಸ್ಪತ್ರೆ , ಜಯನಗರ ಗರ್ಭಾವಸ್ಥೆಯಲ್ಲಿ ಮಧುಮೇಹ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಲಹೆಗಳು ಗರ್ಭಿಣಿಯರಲ್ಲಿ ಕಂಡುಬರುವ ಮಧುಮೇಹವನ್ನು ಗರ್ಭಧಾರಣೆಯ ಮಧುಮೇಹ ಎಂದು ಕರೆಯಲಾಗುತ್ತದೆ. ಈ ಸ್ಥಿತಿಯಲ್ಲಿ, ದೇಹವು ಇನ್ಸುಲಿನ್ ಅನ್ನು ಹೇಗೆ ಬಳಸಿಕೊಳ್ಳುತ್ತದೆ ಎಂಬ ಬದಲಾವಣೆಗಳಿಂದಾಗಿ, ಗರ್ಭಾವಸ್ಥೆಯಲ್ಲಿ ಅಧಿಕ ರಕ್ತಸಕ್ಕರೆ ಬೆಳೆಯುತ್ತದೆ. ಈ ಹಾರ್ಮೋನ್/ ಜೀವಕೋಶಗಳು ದೇಹದಲ್ಲಿನ ಶಕ್ತಿಗಾಗಿ ಸಕ್ಕರೆ ಅಥವಾ ಗ್ಲುಕೋಸ್ ಅನ್ನು ಹೀರಿಕೊಳ್ಳಲು…

ಆನೇಕಲ್;೫೬ ಆರೋಪಿಗಳ ಬಂಧನ ೭೪ ಲಕ್ಷ ಅಧಿಕ ಮೌಲ್ಯದ ವಸ್ತುಗಳ ವಶ

ನೇಕಲ್,ಜು.೧೫: ಸುಲಿಗೆ ಕಳ್ಳತನ ಸೇರಿದಂತೆ ೩೭ ಪ್ರಕರಣಗಳಲ್ಲಿ ಭಾಗಿಯಾಗಿದ್ದ ೫೬ ಆರೋಪಿಗಳನ್ನು ಬಂಧಿಸಿರುವ ಆನೇಕಲ್ ಉಪ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಈ ಸಂಬಂಧ ೭೪ ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರು ವರವಲಯದ ಸುತ್ತ ಹಲವಾರು ರಾಬರಿಗಳು ಮತ್ತು ಕಳ್ಳತನಗಳು ನಡೆಯುತ್ತಿದ್ದವು ಕೆಲವು ಕ್ಲಿಸ್ಟ್ ಪ್ರಕರಣಗಳನ್ನು ಬೆನ್ನು ಹತ್ತಿ ಪೊಲಿಸುರ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ . ಹಲವು ಕ್ಲಿಷ್ಟ ಪ್ರಕರಣಗಳನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ…

ಮೂಲ ದೇವರಿಗೆ ಮೂರೇ ಕಾಲು…!?

ಮೂಲ ದೇವರಿಗೆ ಮೂರೇ ಕಾಲು…!? ಬೇಸಿಗೆ ಎಂದರೆ ಶಾಲೆಗೆ ಬಿಡುವು ‘ಇನ್ನೇನು ಎಲ್ಲಾ ಅರಾಮು’ ಎಂಬುದು ನಗರದ ಮಕ್ಕಳ ಹೇಳಿಕೆಯಾದರೆ,ಹಳ್ಳಿಯ ಒಕ್ಕಲ ಮಕ್ಕಳಿಗೆ ಹಲವು ತಯಾರಿಗಳ ಕಾಲ.ಹೊತ್ತೇರುವ ತನಕ ರೈತರು ಕೃಷಿ ಪರಿಕರಗಳನ್ನ ಹೊತ್ತು ಬಡಿಗೇರು,ಕಮ್ಮಾರು ಅಂತ ತಿರುಗಾಡುತ್ತಾ,ಎತ್ತುಗಳಿಗೆ ಲಾಲ್ ಕಟ್ಟಿಸುವುದು,ಹೊಲ ಹಸನು ಮಾಡುವುದು, ಗೊಬ್ಬರ ಹೇರುವುದು,ಮೇರೆಯ ಬದಿ ಕಳ್ಳಿ ಸಾಲು,ಮುಳ್ಳು ಬೇಲಿಗಳ ಸಮ ಮಾಡಿ ಏನು ಬಿತ್ತುವುದು ಎಂದು ತಯಾರಾದರೆ,ಅಪ್ಪ ಅವ್ವರಿಗೆ ಸಹಾಯಕರಾಗುವ ಕೆಲಸ ಮಕ್ಕಳದೇ.ದನ, ಎಮ್ಮೆ ಮೇಯಿಸಲು ಹೋಗುವವರು,ಕುರಿ ಆಡುಗಳನ್ನ ಕಾಯುವವರು ಇವರೇ!ಮನೆಯ ರಾಸುಗಳಿಗೆ…

ದರ್ಶನ್ ವಿರುದ್ಧ ಹಲ್ಲೆ ಆರೋಪ; ಗೃಹಸಚಿವರಿಗೆ ದೂರು ನೀಡಿದ ಇಂದ್ರಜಿತ್ ಲಂಕೇಶ್

ಬೆಂಗಳೂರು,ಜು,15: ನಟ ದರ್ಶನ್ ಹೆಸರಲ್ಲಿ ವಂಚನೆ ನಡೆದಿದೆ ಎನ್ನುವ ಪ್ರಕರಣ ತಣ್ಣಗಾಗುತ್ತಿದ್ದಂತೆ ,ನಿರ್ದೇಶಕ, ಪತ್ರಕರ್ತ ಇಂದ್ರಜಿತ್ ಲಂಕೇಶ್, ದರ್ಶನ್ ಮತ್ತು ಅವರ ತಂಡದ ವಿರುದ್ದ ಹಲ್ಲೆ ಆರೋಪ ಮಾಡಿದ್ದಾರೆ. ಈ ಮೂಲಕ ಪ್ರಕರಣ ಮತ್ತೊಂದು ಟ್ವಿಸ್ಟ್ ಪಡೆದಿದ್ದು ದರ್ಶನ್ ಮತ್ತು ಅವರ ತಂಡ ದಲಿತ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದು ಅದನದನು ಮೈಸೂರು ಪೊಲೀಸರು ಒತ್ತಡಕ್ಕೆ ಮಣಿದು ಮುಚ್ಚಿಹಾಕಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್ ನಲ್ಲಿ ಸಪ್ಲೈಯರ್ ಗೆ ನಟ…

ಒಂಬತ್ತು ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ

ಬೆಂಗಳೂರು, ಜು,15:ಭ್ರಷ ಅಧಿಕಾರಿಗಳಿಗೆ ಸಿಂಹಸ್ವಪ್ನವಾದ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಒಂಬತ್ತ ಅಧಿಕಾರಿಗಳ ಮನೆ ,ಕಚೇರಿ ಮೇಲೆ ದಾಳಿ ನಡೆಸಿ ಅಪಾರ ಆಸ್ತಿ ದಾಖಲೆಗಳನ್ನು ಪತ್ತೆ ಹಚ್ಚಿದೆ. ಬೆಂಗಳೂರು, ಕೋಲಾರ, ಮಂಗಳೂರು ಬೀದರ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಸರ್ಕಾರಿ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಎಸಿಬಿ ಶಾಕ್ ನೀಡಿದೆ. ಅಧಿಕಾರಿಗಳ ಮನೆ,ಕಚೇರಿ ಸೇರಿದಂತೆ ಹಲವು ಕಡೆಗಳಲ್ಲಿ ದಾಳಿ ನಡೆಸಿದ ಎಸಿಬಿ ತಂಡ ಪರಿಶೀಲನೆಯಲ್ಲಿ ತೊಡಗಿವೆ. ಎಸಿಬಿ ದಾಳಿಗೆ ಒಳಗಾದ ಅಧಿಕಾರಿಗಳ ಮಾಹಿತಿ ಈ…

ಸಂದಿರುವುದನ್ನ ಋಣ ಮಂಕುತಿಮ್ಮ

ಸಿದ್ಧಸೂಕ್ತಿ : ಸಂದಿರುವುದನ್ನ ಋಣ ಮಂಕುತಿಮ್ಮ. ಅನ್ನ=ಭೋಗ. ಋಣ=ಸಂಬಂಧ. ಪಾರಣಿ/ಣೆ=ವ್ರತ ಉಪವಾಸದ ನಂತರದ ಊಟ. ಬದುಕು ಅನಿಶ್ಚಿತ. ಇವರು ಹೀಗಿರುವರೆಂದು ಹೇಳಲಾಗದು! ಏರಿಳಿವು ತಪ್ಪದು. ಬೆಳಿಗ್ಗೆ ಮದುವೆ, ಸಂಜೆ ಮರಣ! ನಿನ್ನೆ ಹುಟ್ಟು, ಇಂದು ಸಾವು, ನಾಳೆ ಸತ್ತವರ ತಿಥಿ! ಇಂದು ಮೃಷ್ಟಾನ್ನ ಭೋಜನ, ನಾಳೆ ಭಿಕ್ಷಾನ್ನ, ಅನ್ನಕ್ಕೆ ಪರದಾಟ! ಇಂದು ಉಪವಾಸ, ನಾಳೆ ಊಟ! ಕೈಗೆ ಬಂದ ತುತ್ತು, ಬಾಯಿಗೆ ಬರಲಿಲ್ಲ! ಧಾನ್ಯ ಧಾನ್ಯ ಮೇ ಲಿಖಾ ಹೈ ಖಾನೇವಾಲಾ ಕಾ ನಾಮ್! ಬೆಳೆದ ಮಗನ/ಮಗಳ…

ಐಷರಾಮಿ ಕಾರುಗಳ ವಂಚಕರ ಬೃಹತ್ ಜಾಲ ಭೇಟೆಯಾಡಿದ ಸಿಸಿಬಿ ಪೊಲೀಸರು

ಬೆಂಗಳೂರು,ಜು.14- ಐಷಾ ರಾಮಿ ಕಾರುಗಳ ಮಾಲೀಕರನ್ನು ನಂಬಿಸಿ ಕಾರು ಪಡೆದು ಒತ್ತೆಯಿಡುತ್ತಿದ್ದ ಬೃಹತ್ ಜಾಲವನ್ನು ಭೇಟೆಯಾಡಿರುವ ಸಿಸಿಬಿ ಪೊಲೀಸರು, ಹಲವರನ್ನು ಬಂಧಿಸಿ 5 ಕೋಟಿ ಮೌಲ್ಯದ 39 ಕಾರುಗಳು ಹಾಗೂ 58 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರು ನಗರದ ನಿವಾಸಿಗಳಾದ ನಸೀಬ್, ಮೊಹಮ್ಮದ್ ಅಜುಂ ಮತ್ತು ಮಹೀರ್ ಖಾನ್ ಬಂಧಿತರು. ಆರೋಪಿಗಳು ಐಷಾರಾಮಿ ಕಾರುಗಳನ್ನು ಮರುಮಾರಾಟ ಮಾಡಿಸಿಕೊಡುತ್ತೇವೆ ಎಂದು ಮಾಲೀಕರನ್ನು ನಂಬಿಸಿ ಅವರಿಂದ ಕಾರುಗಳನ್ನು ಪಡೆದುಕೊಳ್ಳುತ್ತಿದ್ದರು. ತದನಂತರ ಮಾಲೀಕರ ಅನುಮತಿ ಇಲ್ಲದೆ ಬೇರೆಯವರ ಬಳಿ ಒತ್ತೆ ಇಡುತ್ತಿದ್ದರು.…

ರಾಷ್ಟ್ರೀಯ ಡಿಫೆನ್ಸ್ ಅಕಾಡೆಮಿ ಮಾದರಿಯಲ್ಲಿ ಕರ್ನಾಟಕ ಪೊಲೀಸ್ ಅಧಿಕಾರಿಗಳಿಗೆ ತರಬೇತಿ;ಬೊಮ್ಮಾಯಿ

ಮೈಸೂರು,ಜು,14:ಆಡಳಿತಾತ್ಮಕ ಸುಧಾರಣೆಗೆ ಎಲ್ಲರೂ ಕಾಲಕ್ಕೆ ತಕ್ಕಂತೆ ಬದಲಾಗಬೇಕು.‌ ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ( NDA)ಮಾದರಿಯಲ್ಲಿ ಅತ್ಯುತ್ತಮ ಗುಣಮಟ್ಟದ ತರಬೇತಿ ನೀಡಲು ತೀರ್ಮಾನಿಸಲಾಗಿದೆ ಎಂದು ಗೃಹ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ್ ಬೊಮ್ಮಾಯಿ ತಿಳಿಸಿದರು. ಬುಧವಾರ ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿ ಆವರಣದಲ್ಲಿ ಏರ್ಪಡಿಸಲಾಗಿದ್ದ 35ನೇ ಪ್ರೊಬೆಷನರಿ ಪೋಲೀಸ್ ಉಪ ಅಧೀಕ್ಷಕರು ಹಾಗೂ ಅಬಕಾರಿ ಉಪ ಅಧೀಕ್ಷಕರು ಮತ್ತು 43 ಮೇ ತಂಡದ ಪ್ರೊಬೇಶನರಿ ಪೊಲೀಸ್ ಉಪ ನಿರೀಕ್ಷಕರ ನಿರ್ಗಮನ…

ಅಕ್ರಮ ಗಣಿಗಾರಿಕೆ ವಿರುದ್ಧ ಸಿಬಿಐ ತನಿಖೆಗೆ ಸುಮಲತಾ ಒತ್ತಾಯ

ಮೈಸೂರು,ಜು.14: ಕೆಆರ್ ಎಸ್ ಡ್ಯಾಂ ಸುತ್ತಮುತ್ತ ತಲೆ ಎತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ದ ಸಿಬಿಐ ತನಿಖೆ ನಡೆಸುವಂತೆ ಸಂಸದೆ ಸುಮಲತಾ ಅಂಬರೀಶ್ ಒತ್ತಾಯಿಸಿದ್ದಾರೆ. ಮಾಧ್ಯಮಗಳೊಂದಿಗೆ ಮೈಸೂರಿನಲ್ಲಿ ಮಾತನಾಡಿದ ಅವರು, ನಾನು ಕೆಆರ್‌ಎಸ್ ಬಿರುಕು ಬಿಟ್ಟಿದೆ ಅಂತ ಹೇಳಿಲ್ಲ. ಬಿರುಕು ಬಿಟ್ಟಿದೆಯಾ ಅಂತ ಸಭೆಯಲ್ಲಿ ಕೇಳಿದ್ದೇನೆ ಎಂದು ಕೆಆರ್‌ಎಸ್ ಕಲಹ ವಿಚಾರಕ್ಕೆ ಸುಮಲತಾ ಸ್ಪಷ್ಟನೆ ಕೊಟ್ಟಿದ್ದಾರೆ. ಮುಂದುವರೆದ ಅವರು, ನನಗೆ ಈಗಲೂ ಶೇಕಡ 50ರಷ್ಟು ಆತಂಕ ಇದೆ. ಗಣಿಗಾರಿಕೆಯಿಂದ ಕೆಆರ್‌ಎಸ್ ಬಿರುಕಾಗುತ್ತೆ ಎಂಬ ಆತಂಕ ಇದೆ. ನಾನು ಇದನ್ನೇ…

ಸ್ವಾಮಿ- ಒಡೆಯ

ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ             ‌‌‌ ಸಿದ್ಧಸೂಕ್ತಿ : ಸ್ವಾಮಿ- ಒಡೆಯ ಸ್ವಾಮಿ=ಒಡೆಯ. ಈ ಸ್ವತ್ತಿಗೆ ಈತ ಸ್ವಾಮಿ, ಆ ಸ್ವತ್ತಿಗೆ ಆತ ಒಡೆಯ. ಸ್ವಾಮಿ =ಯಜಮಾನ. ನಾಯಿಗಿರುವ ಸ್ವಾಮಿನಿಷ್ಠೆ ಕೂಲಿಗನಿಗಿಲ್ಲ! ಸ್ವಾಮಿ =ಗಂಡ. ಪಾರ್ವತೀ ಲಕ್ಷ್ಮೀ ಸರಸ್ವತಿಯರು ತಮ್ಮ ಪತಿದೇವರ ಪಾದಗಳಿಗೆ ನಮಸ್ಕರಿಸಿ”ಸ್ವಾಮಿ, ಆಶೀರ್ವದಿಸಿ” ಎನ್ನುವರಂತೆ. ಸುಸಂಸ್ಕೃತ ಭಾರತೀಯ ನಾರಿ ಪತಿ ಹೆಸರ ನೇರ ಹೇಳಳು! ಒತ್ತಾಶೆಗೆ ಹೇಳಬೇಕೆಂದಾಗ ಒಡಪು ಬಳಸುವುದುಂಟು! ಸ್ವಾಮಿ =ಅಧಿಕಾರಿ,ನ್ಯಾಯಾಧೀಶ, ಮಂತ್ರಿ ಇತ್ಯಾದಿ. ವಕೀಲ ವಾದಿಸುವಾಗ,ನ್ಯಾಯಾಧೀಶನಿಗೆ,…

ಮೇಕೆದಾಟು ಯೋಜನೆ,ಸರ್ವಪಕ್ಷ ಸಭೆ ಅನಿವಾರ್ಯ-ಎಂ.ಬಿ.ಪಾಟೀಲ್

ವಿಜಯಪುರ,ಜು,೧೩: ಮೇಕೆ ದಾಟು ಯೋಜನೆಗೆ ತಮಿಳು ಸರ್ಕಾರದ ಅಗತ್ಯವಿಲ್ಲ ಎಂದಿರುವ ಮಾಜಿ ಸಚಿವ ಎಂ.ಬಿ.ಪಾಟೀಲ್ ರಾಜ್ಯ ಸರ್ಕಾರ ಕೂಡಲೇ ಸರ್ವಪಕ್ಷಸಭೆ ಕರೆದು ಚರ್ಚಿಸಿ ಕೇಂದ್ರದ ಮೇಲೆ ಒತ್ತಡ ತರುವ ಅನಿವಾರ್ಯತೆ ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕದಾಟು ಕಾನೂನು ಬದ್ಧವಾದ ಯೋಜನೆ, ಇದು ನಮ್ಮ ರಾಜ್ಯದ ಹಕ್ಕು. ಇದಕ್ಕೆ ತಮಿಳುನಾಡಿನ ಅನುಮತಿ ಅಗತ್ಯವಿಲ್ಲ ಎಂದು ಹೇಳಿದರು. ತಮಿಳುನಾಡಿನ ಆಕ್ಷೇಪದ ಬಗ್ಗೆ ರಾಜ್ಯ ಸರ್ಕಾರ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಸರ್ಕಾರಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ತಿಳಿಸಿದರು.…

 ಪ್ರಶಾಂತ್ ಕಿಶೋರ್, ರಾಹುಲ್ ಗಾಂಧಿ ಭೇಟಿ-ರಾಷ್ಟ್ರ ರಾಜಕಾರಣದಲ್ಲಿ ಸಂಚಲನ

ನವದೆಹಲಿ,ಜು,೧೩:ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಮಂಗಳವಾರ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ದೆಹಲಿಯ ರಾಹುಲ್ ಗಾಂಧಿ ನಿವಾಸಕ್ಕೆ ತೆರಳಿದ ಪ್ರಶಾಂತ್ ಕಿಶೋರ್ ಗಂಟೆಗಳ ಕಾಲ ಕಾಂಗ್ರೆಸ್ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹಾಗೂ ಕೆ.ಸಿ. ವೇಣುಗೋಪಾಲ್ ಹಾಜರಿದ್ದರು. ಜೂನ್ ೨೧ರಂದು ಪ್ರಶಾಂತ್ ಕಿಶೋರ್ ಹಾಗೂ ಶರದ್ ಪವಾರ್ ಚರ್ಚೆ ನಡೆಸಿದ್ದು ದೇಶದಲ್ಲಿ ಹೊಸ ರಾಜಕೀಯ ಸಾಧ್ಯತೆಗಳ ಕುರಿತು ಚರ್ಚೆ ಆರಂಭವಾಗಿತ್ತು. ೨…

ಮೇಕೆದಾಟು ಯೋಜನೆಗೆ ಕೇಂದ್ರ ಗ್ರೀನ್ ಸಿಗ್ನಲ್?

ಬೆಂಗಳೂರು, ಜು. ೧೩: ಮೇಕೆ ದಾಟು ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಯಾವುದೇ ನಿರ್ಧಾರ ತಗೆದುಕೊಂಡಿದ್ದರೂ ಕೇಂದ್ರ ಸರ್ಕಾರ ತಮ್ಮದೆ ನಿರ್ಧಾರವನ್ನು ತಗೆದುಕೊಳ್ಳುತ್ತದೆ ಎಂದು ಹೇಳುವ ಮೂಲಕ ಮೇಕೆದಾಟು ಯೋಜನೆಗೆ ಗ್ರೀನ್ ಸಿಗ್ನಲ್ ನೀಡುವ ದಾಟಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಮಹತ್ವದ ಜಲ ಜೀವನ್ ಮಿಷನ್ ಯೋಜನೆ ಕುರಿತು ವಿಧಾನಸೌಧದಲ್ಲಿ ಮಹತ್ವದ ಸಭೆ ನಡೆದಿದೆ. ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ…

ಮಾಸ್ಟರ್ ಚೆಫ್ ತಮಿಳು ಆವೃತ್ತಿಯಲ್ಲಿ ಆಗಸ್ಟ್ ರಿಂದ ದೂರದರ್ಶನಕ್ಕೆ ಲಗ್ಗೆ

ರಾಮನಗರ ಜು 13: ಆಹಾರ ಪ್ರಿಯರನ್ನು ಒಗ್ಗೂಡಿಸುವ ಉದ್ದೇಶದೊಂದಿಗೆ ಇನ್ನೋವೇಟಿವ್ ಫಿಲ್ಮ್ ಅಕಾಡೆಮಿ (ಐಎಫ್‍ಎ) ಇಂದು ಬಹು ನಿರೀಕ್ಷಿತ ಪಾಕಶಾಲೆಯ ಪ್ರದರ್ಶನ – ಮಾಸ್ಟರ್ ಚೆಫ್ ತಮಿಳು ಆವೃತ್ತಿ ಬಿಡುಗಡೆ ದಿನಾಂಕವನ್ನು ರಾಮನಗರದ ಬಿಡದಿಯಲ್ಲಿರುವ ಇನ್ನೋವೇಟಿವ್ ಫಿಲ್ಮ್‍ಸಿಟಿಯಲ್ಲಿ ನಡೆದ ಸಮಾರಂಭದಲ್ಲಿ ಘೋಷಿಸಿದೆ. ಪ್ರಾದೇಶಿಕ ಸ್ವರೂಪದಲ್ಲಿ ಅಂತರರಾಷ್ಟ್ರೀಯ ಗೌರವಾನ್ವಿತ ಪ್ರದರ್ಶನವನ್ನು ದೂರದರ್ಶನ ಪರದೆಗಳಿಗೆ ತರುವ ಮೂಲಕ, ಐಎಫ್‍ಎ ಎಂಡೆಮೋಲ್ ಶೈನ್ ಸಹಯೋಗದೊಂದಿಗೆ ಆಗಸ್ಟ್, 2021 ರಿಂದ ಪ್ರಾರಂಭವಾಗುವ ಮನೆ ಅಡುಗೆ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲು ಸಜ್ಜಾಗಿದೆ. ಕಾರ್ಯಕ್ರಮದ ಬಿಡುಗಡೆಯ ಭಾಗವಾಗಿ…

ರಸ್ತೆಗೆ ಟೊಮೊಟೊ ಸುರಿದು ಪ್ರತಿಭಟನೆ

ರಾಮನಗರ ಜು 13: ಬೆಲೆ ಕುಸಿತದಿಂದ ಕಂಗೆಟ್ಟ ರೈತರು ರಾಮನಗರದ ಎಂಪಿಎಂಸಿ ಬಳಿಯ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟೊಮೊಟೊ ಸುರಿದು ಸೋಮವಾರ ರೈತರು ಪ್ರತಿಭಟನೆ ನಡೆಸಿದರು. ನಗರದ ಎಪಿಎಂಸಿ ಎದುರು ಬೆಂಗಳೂರು ಮೈಸೂರು ರಾಷ್ಟ್ರೀಯ ತಡೆದ ರೈತರು ತಾವು ಬೆಳೆದ ಟೊಮೊಟೊವನ್ನು ರಸ್ತೆ ಸುರಿದ ಕೇಂದ್ರ ಹಾಗೂ ರಾಜ್ಯ ಸರಕಾಗಳ ವಿರುದ್ಧ ಧಿಕ್ಕಾರ ಕೂಗಿದರು. ಬೆಳೆ ಇಳಿಕೆಯನ್ನು ತಡೆಯಬೇಕು ಎಂದು ಆಗ್ರಹಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಚನ್ನಪಟ್ಟಣದ ರೈತ ಸುಜೀವನ್ ಕುಮಾರ್ ಮಾತನಾಡಿ,…

ಜುಲೈ ೪ ರಿಂದಲೇ ಆರಂಭವಾಗಿದೆಯಂತೆ ಕೋವಿಡ್ ಮೂರನೇ ಅಲೆ!

ಹೈದರಾಬಾದ್,ಜು,೧೩: ಕೋವಿಡ್-೧೯ ಮೂರನೇ ಅಲೆ ಬರುತ್ತದೆ ಎನ್ನುವ ದಾವಂತದಲ್ಲಿರುವಾಗಲೇ ಹೈದರಾಬಾದ್‌ನಲ್ಲಿ ವಿಜ್ಞಾನಿಯೊಬ್ಬರು ಕಳೆದ ಜುಲೈ ೪ ರಿಂದಲೇ ಆರಂಭವಾಗಿದೆ ಎಂಬ ಅಘತಾಕಾರಿ ಮಾಹಿತಿಯನ್ನು ನೀಡಿದ್ದಾರೆ ಹೈದರಾಬಾದ್ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಸೇವೆ ಸಲ್ಲಿಸಿದ ಹಿರಿಯ ಭೌತವಿಜ್ಞಾನಿ ಡಾ.ವಿಪಿನ್ ಶ್ರೀವಾಸ್ತವ ಅವರು, ಭಾರತದಲ್ಲಿ ಕೋವಿಡ್-೧೯ ಸೋಂಕಿನ ಹರಡುವಿಕೆಯನ್ನು ವಿವರವಾಗಿ ವಿಶ್ಲೇಷಿಸಿದ್ದು, ಜುಲೈ ೪ ರಿಂದಲೇ ಮೂರನೇ ಅಲೆ ಪ್ರಾರಂಭವಾಗಿರಬಹುದು ಎಂದು ಹೇಳಿದ್ದಾರೆ. ಕಳೆದ ೪೬೩ ದಿನಗಳಲ್ಲಿ ದೇಶದಲ್ಲಿ ಸೋಂಕು ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆಯನ್ನು ಅಧ್ಯಯನ ಮಾಡಲು ವಿಶೇಷ ವಿಧಾನವನ್ನು…

ಡಾ ಆರೂಢಭಾರತೀ ಸ್ವಾಮೀಜಿಗಳಿಂದ ಡಾ ವೀರೇಂದ್ರ ಹೆಗ್ಗಡೆ ಭೇಟಿ.

ಧರ್ಮಸ್ಥಳ, ಜು,13:ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಡಾ ಆರೂಢಭಾರತೀ ಸ್ವಾಮೀಜಿ ಇಂದು ಬೆಳಿಗ್ಗೆ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಅಂತಾರಾಷ್ಟ್ರೀಯ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ ಮತ್ತು ಸಂಸ್ಕೃತ ಗುರುಕುಲದ ಬಗ್ಗೆ ಹಾಗೂ ಚೇರಂಬಾಣೆಯ ಶ್ರೀ ಸಿದ್ಧಾರೂಢಾಶ್ರಮದ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಿದರು. ಇದೇ ಸಂದರ್ಭದಲ್ಲಿ ಸಿದ್ಧಸೂಕ್ತಿಯ ಮೊದಲ ಭಾಗವನ್ನು ಅರ್ಪಿಸಲಾಯಿತು. ಡಾ ವೀರೇಂದ್ರ ಹೆಗ್ಗಡೆ ಅವರು ಡಾ ಆರೂಢಭಾರತೀ ಸ್ವಾಮೀಜಿಯವರ ಕಾರ್ಯಚಟುವಟಿಕೆಗಳ ಬಗ್ಗೆ…

ಜೀವನ ವಿಧಾನ

ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಜೀವನವಿಧಾನ. ಹಿರಿಯರು ಹೇಳಿದ್ದು :ನೂರು ವರ್ಷದ ಆಯುಷ್ಯವನ್ನು ನಾಲ್ಕು ಸಮಭಾಗ ಮಾಡಿ. ಮೊದಲ ಭಾಗ ಶಿಕ್ಷಣ – ಸಂಸ್ಕಾರ ಕಲಿಕೆಗಿರಲಿ. ಎರಡನೆಯ ಭಾಗ ಸಂಸಾರಹೊಣೆ ಸಂಪಾದನೆಗಿರಲಿ. ಮೂರನೆಯ ಭಾಗ ಧ್ಯಾನ ಜಪ ತಪ ಸೇವೆ ಧರ್ಮ ಅಧ್ಯಾತ್ಮಕ್ಕಿರಲಿ. ನಾಲ್ಕನೆಯ ಭಾಗ ತ್ಯಾಗ – ಆನಂದಮಯ! ಹೀಗಿಲ್ಲದಿರೆ ಬಾಳು ಚಿಂತೆ ದುಃಖದ ಸಾಗರ! ಪ್ರಥಮೇ ವಯಸಿ ನಾಧೀತಂ. ದ್ವಿತೀಯೇ ನಾರ್ಜಿತಂ ಧನಂ. ತೃತೀಯೇ ನ ತಪಸ್ತಪ್ತಂ. ಚತುರ್ಥೇ ಕಿಂ ಕರಿಷ್ಯತಿ?. ಬ್ರಹ್ಮಚರ್ಯ…

ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರಕ್ಕೆ 14.33 ಕೋಟಿ ರೂಪಾಯಿ

ಬೆಂಗಳೂರು,ಜು,12:ಒಟ್ಟು 14. 33 ಕೋಟಿ ರೂಪಾಯಿ ವೆಚ್ಚದ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಕ್ರಿಯಾ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. . ಬೆಂಗಳೂರಿನಲ್ಲಿ ಪ್ರಾಧಿಕಾರದ ಅಧ್ಯಕ್ಷರಾದ ಬಿ ಎಸ್ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಅನುಮೋದನೆ ನೀಡಲಾಯಿತು. 2021- 22 ನೇ ಸಾಲಿಗೆ ಅನ್ವಯವಾಗುವಂತೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಕಾಗಿನೆಲೆಯಲ್ಲಿ ಪ್ರಕೃತಿ ಚಿಕಿತ್ಸಾ ಕೇಂದ್ರ, ವಸ್ತುಸಂಗ್ರಹಾಲಯದ ಮುಂದುವರಿದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು, ಬಾಡ ಗ್ರಾಮದಲ್ಲಿ ಸಂಗೀತ ಕಾರಂಜಿ ಹಾಗೂ ಕನಕದಾಸರ ಅರಮನೆಯ ದರ್ಬಾರ್ ಹಾಲ್…

ಎಸ್ಸೆಸ್ಸೆಲ್ಸಿ: ಭರವಸೆ ಮೂಡಿಸಿದ ತೀರ್ಪು-ಸುರೇಶ್ ಕುಮಾರ್

ಬೆಂಗಳೂರು,ಜು,12: ಈ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನು ತಿರಸ್ಕರಿಸುವ ಮೂಲಕ ರಾಜ್ಯ ಉಚ್ಚ ನ್ಯಾಯಾಲಯ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆ ನಡೆಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪುರಸ್ಕರಿಸಿದ್ದು, ರಾಜ್ಯದ ವಿದ್ಯಾರ್ಥಿಗಳು ಮತ್ತು ಶಿಕ್ಷಣ ಇಲಾಖೆಗೆ ಭರವಸೆ ಮೂಡಿಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ. ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪರೀಕ್ಷೆ ಸಂಬಂಧದಲ್ಲಿ ಈ ವರ್ಷ ಕೈಗೊಂಡಿರುವ ಸರಳೀಕೃತ ಪರೀಕ್ಷಾ ವ್ಯವಸ್ಥೆ…

1 66 67 68 69 70 99
Girl in a jacket