ಹಾಡುಹಗಲೇ ಬ್ಯಾಂಕಿಗೆ ನುಗ್ಗಿ ರೌಡಿ ಹತ್ಯೆ
ಬೆಂಗಳೂರು, ಜು.19:ಪತ್ನಿಯ ಜೊತೆಗೆ ಬ್ಯಾಂಕ್ ಗೆ ಹೋಗಿದ್ದ ವೇಳೆ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಮಾಡಿದ ಘಟನೆ ಹಾಡುಹಗಲೆ ನಡೆದಿದೆ. ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನ ಯೂನಿಯನ್ ಬ್ಯಾಂಕ್ ನಲ್ಲಿ ರೌಡಿ ಬಬ್ಲು ಮತ್ತು ಆತನ ಪತ್ನಿ ವ್ಯವಹಾರ ನಡೆಸುತ್ತಿದ್ದಾಗ ಈ ಕೃತ್ಯ ಜರುಗಿದೆ ಅಂತ ಪೊಲೀಸರು ತಿಳಿಸಿದ್ದಾರೆ. ಇಂದು ಮಧ್ಯಾಹ್ನ ಪತ್ನಿ ಜತೆ ಕೋರಮಂಗಲ 8ನೆ ಬ್ಲಾಕ್‍ನಲ್ಲಿರುವ ಯೂನಿಯನ್ ಬ್ಯಾಂಕ್ ಶಾಖೆ (ಕಾಪೆರ್ರೇಷನ್ ಬ್ಯಾಂಕ್)ಗೆ ಬಬ್ಲು ಬಂದಿದ್ದನು. ಆತನನ್ನು ಹಿಂಬಾಲಿಸಿ ಬಂದ ದುಷ್ಕರ್ಮಿಗಳು ಬ್ಯಾಂಕ್‍ನೊಳಗೆ…