Girl in a jacket

Author kendhooli_editor

ಟೋಕಿಯೋದಲ್ಲಿ ವಿದ್ಯುಕ್ತ ಚಾಲನೆಗೊಂಡ ಒಲಿಂಪಿಕ್ಸ್

ಟೋಕಿಯೋ,ಜು,23:ಕೊರೊನಾ ಸಂಕಷ್ಟದ ನಡುವೆ ಮುಂದಾಡಲಾಗಿದ್ದ ಒಲಿಂಪಿಕ್ಸ್ 2020 ಕೊನೆಗೂ ಇಲ್ಲಿನ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಜಗಮಗಿಸುವ ವಿದ್ಯುತ್ ಅಲಂಕಾರಗಳೊಂದಿಗೆ ವಿದ್ಯುಕ್ತ ಚಾಲನೆ ದೊರಕಿತು. ಜಪಾನ್‌ನ ರಾಜಧಾನಿ ಟೋಕಿಯೋದಲ್ಲಿ 32ನೇ ಒಲಿಂಪಿಯಾಡ್ ಕ್ರೀಡಾಕೂಟ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ನಡೆದಿದೆ. ಜಪಾನ್‌ನ ಖ್ಯಾತ ಟೆನಿಸ್ ಆಟಗಾರ್ತಿ ನವೋಮಿ ಒಸಾಕಾ ಈ ಬಾರಿಯ ಒಲಿಂಪಿಕ್ಸ್‌ಗೆ ವಿದ್ಯುಕ್ತ ಚಾಲನೆ ನೀಡಿದ್ದಾರೆ. ಟೋಕಿಯೋದಲ್ಲಿರುವ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಶುಕ್ರವಾರ ಟೋಕಿಯೋ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ನಡೆಯಿತು. ಈ ವೇಳೆ ಒಲಿಂಪಿಕ್ಸ್ ದೀಪಕ್ಕೆ ಅಗ್ನಿ ಸ್ಪರ್ಶ ಮಾಡುವ ಮೂಲಕ…

ಗುರುಸ್ಸಾಕ್ಷಾತ್ ಪರಂ ಬ್ರಹ್ಮ

ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಗುರುಸ್ಸಾಕ್ಷಾತ್ ಪರಂ ಬ್ರಹ್ಮ. ಗುರುವು ಸಾಕ್ಷಾತ್ ಪರಬ್ರಹ್ಮ. ಗುರು ದೊಡ್ಡವ. ಅವನು ಬ್ರಹ್ಮ ವಿಷ್ಣು ಮಹೇಶ್ವರಸಮಾನ. ಅಜ್ಞಾನವನ್ನು ಕಳೆದು ಸುಜ್ಞಾನ ಬೆಳಗುವವನು ಸದ್ಗುರು. ವ್ಯಾಸ ಶಂಕರ ಮಹಾವೀರ ಬುದ್ಧ ಬಸವ ನಿಜಗುಣ ಸಿದ್ಧಾರೂಢ ಪರಮಹಂಸರಂಥವರು ಸದ್ಗುರುಗಳು. ವ್ಯಾಸರುದಿಸಿದ ದಿನ ಗುರುಪೂರ್ಣಿಮೆ. ಜೀವಕ್ಕೆ ಬೆಲೆ ಬರುವುದು ಸುಜ್ಞಾನದಿಂದ!ಕೆಲಸ ಮಾಡುವ ಮುನ್ನ ಬೇಕು ಅದರ ಜ್ಞಾನ – ಇಚ್ಛೆ – ಕೃತಿ. ಇದು ಜೀವಕ್ರಮ! ಬದುಕ ಬುನಾದಿ, ಬಾಳ ನೀಡುವ ಜ್ಞಾನದಾತ,…

ಮನ ತಾಕುವ ಮಂಡಕ್ಕಿಯ ಪುರಾಣವು…

ಮನ ತಾಕುವ ಮಂಡಕ್ಕಿಯ ಪುರಾಣವು… ತುಂತುರು ಮಳೆಗೆ ನೆಲವೆಲ್ಲಾ ನೆನೆದ ಸೆರಗಂತೆ ತಂಡಿ ಹಿಡಿದು ಎಲ್ಲವನ್ನೂ ಎಲ್ಲರನ್ನೂ ನಡುಗಿಸುತಿತ್ತು.ಸೂರ್ಯ ಹುಟ್ಟಿ ಕೈಗೆ ಕಾಫಿಯ ಬಿಸಿ ತಾಗಿ ಹಬೆಯೊಳೆ ತೇಲಿದಂತೆಲ್ಲಾ ಜೀವಗಳ ಸಂಚಾರ.ಬಿದುರು ಪುಟ್ಟಿ ಎತ್ತಿದೊಡನೆಯೇ ನೆಗೆ ನೆಗೆದು ಕುಣಿಯುತ್ತಾ…ತಾಯಿ ಕೋಳಿಯ ಜೊತೆಗೆ ಅಂಗಳದ ತುಂಬಾ ಹತ್ತಿಯ ಬಣ್ಣ ಬಣ್ಣದ ಉಂಡೆಗಳಂತೆ ಸುಳಿವ ಕೋಳಿಮರಿಗಳು,ಪುಟಾಣಿಗಳನ್ನೇ ಎಗರಿಸಿ ಹೊತ್ತೊಯ್ಯಲೆಂದೇ ಹೊಂಚು ಹಾಕುವ ಕಾಗೆಗಳು,ಎಲ್ಲೆಲ್ಲೋ ದೂರದ ಮೋಡಗಳಿಂದ ಬಾಣದಂತೆ ಬಂದೆರಗೋ ಹದ್ದುಗಳು.., ಕಪ್ಪು ನೀರು ಕವಿದ ತಿಪ್ಪೆಗುಂಡಿಯಲಿ ಪೈಪೋಟಿಗೆ ಬಿದ್ದು ವಟಗುಟ್ಟುವ…

ಅಡ್ಡ ಹೆಸರುಗಳು ಮತ್ತು ಕದಿರೆಪ್ಪ ಮಾಸ್ಟರ್

ಅಡ್ಡ ಹೆಸರುಗಳು ಮತ್ತು ಕದಿರೆಪ್ಪ ಮಾಸ್ಟರ್ ನಮ್ಮ ಶಾಲೆಯಲ್ಲಿ ಮುಖ್ಯ ಶಿಕ್ಷಕರು ದಪ್ಪನೆಯ.. ಕಪ್ಪನೆಯ.. ಎತ್ತರದ ವ್ಯಕ್ತಿ ಹೆಸರು ಹೇಳಿದರೇನೇ  ಮಕ್ಕಳೆಲ್ಲಾ ನಡುಗುತ್ತಿದ್ದೆವು.  ಅವರ ಹೆಸರು ಕದಿರೆಪ್ಪ ಮಾಸ್ಟರ್.  ಶಾಲೆಯ ವಿಸ್ತೀರ್ಣ ಬಹುಶಃ ಒಂದು ಎಕರೆ. ಶಾಲೆ ಚೌಕಾಕಾರದ ಆ ಬಯಲಿನಲ್ಲಿ ಒಂದು ಅಂಚಿನಲ್ಲಿ ಮಧ್ಯಕ್ಕೆ ನೆಲೆಗೊಂಡಿತ್ತು. ಶಾಲೇ ಎಲ್ ಆಕಾರದಲ್ಲಿ ಇತ್ತು. ಮುಂಭಾಗದ ಗೇಟಿನಿಂದ ಶಾಲೆ ಬಹಳ ಸುಂದರವಾಗಿ ಕಾಣುತ್ತಿತ್ತು. ಗೇಟಿನ ಮತ್ತು ಶಾಲೆಯ ಮಧ್ಯದ ಭಾಗದಲ್ಲಿ ಪುಟ್ಟ ಗಣೇಶನ ಗುಡಿ ಇತ್ತು.  ಅದಕ್ಕೆ…

ನಿನ್ನುದ್ಧಾರವೆಷ್ಟಾಯ್ತೋ ಮಂಕುತಿಮ್ಮ

ಸಿದ್ಧಸೂಕ್ತಿ : ನಿನ್ನುದ್ಧಾರವೆಷ್ಟಾಯ್ತೋ ಮಂಕುತಿಮ್ಮ. “ಮುಖ್ಯಮಂತ್ರಿಯಾದರೆ ಹಾಗೆ ಹೀಗೆ ಮಾಡುವೆ” ವಿದ್ಯಾರ್ಥಿಭಾಷಣ ರೋಚಕ, ನಿಜ ಜೀವನ ಶೋಚ್ಯ! ತಾನೊಂದು ಬಗೆದರೆ ದೈವವೊಂದು ಬಗೆವುದು! ಎಲ್ಲ ಅಂದುಕೊಂಡಂತೆ ಆದರೆ ದುಃಖವೆಲ್ಲಿ? ಏಳುವುದರೊಳಗೊಬ್ಬ ಕಾಲೆಳೆದು ಕೆಡವುವನು! ಬಗ್ಗುಬಡಿಯುವುದರೊಳಗೆ ತಾ ನೆಲಕಚ್ಚುವನು! ಇಲಿ ಬಂದಿತೆಂದರೆ ಹುಲಿ ಬಂದಿತೆಂಬ ರೀತಿ ವಿವಾದ ಹುಟ್ಟಿಸಿ ಹೆಸರ ಮಾಡುವನು, ನಿಜ ಬಯಲಾಗಲು ಮಾನಗೇಡಿ! ಜಗವ ಉದ್ಧರಿಸುವೆ ಎಂದು ಬೀಗುವನು, ತಾ ನಿಂತ ನೆಲೆಯೇ ಹೋಳು! ನಂಬಿ ಕೊಟ್ಟ, ಮುಳುಗಿತು! ನಂಬಿ ಕೈ ಹಿಡಿದ, ಕೈ ಕಳಚಿತು!…

ರಾಹುಲ್ ಗಾಂಧಿ ಜೊತೆ ಸಿದ್ದು ಪ್ರತ್ಯೇಕ ಮಾತುಕತೆ; ಪಕ್ಷದಲ್ಲಿ ತಳಮಳ

ಬೆಂಗಳೂರು, ಜು,21:ರಾಜ್ಯ ರಾಜಕೀಯ ಬೆಳವಣಿಗೆ ಹಾಗೂ ಮುಂದಿನ ಸಿಎಂ ವಿಚಾರವಾಗಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ಪ್ರತ್ಯೇಕವಾಗಿ ಮಾತನಾಡಿರುವುದು ಕಾಂಗ್ರೆಸ್ ನಾಯಕರಲ್ಲಿ ತಳಮಳಕ್ಕೆ ಕಾರಣವಾಗಿದೆ . ಮುಂದಿನ ಸಿಎಂ ವಿಚಾರವಾಗಿ ಸೃಷ್ಟಿಯಾಗಿರುವ ಬಿಕ್ಕಟ್ಟು ಪರಿಹರಿಸಕೆಂದೆ ದೆಹಲಿಗೆ ಕರೆಸಿಕೊಂಡು ಒಗ್ಗಟ್ಟಿನಲ್ಲಿ ಮುನ್ನಡೆಯಿರಿ ಎಂದು ಸೂಚಿಸಿದ್ದರಾದರೂ ಸಿದ್ದರಾಮಯ್ಯ ಜೊತೆಗಿನ ಪ್ರತ್ಯೇಕ ಮಾತುಕತೆ ಮಾತ್ರ ಎಲ್ಲರಲ್ಲೂ ಅಚ್ಚರಿಗೆ ಕಾರಣವಾಗಿದೆ. ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯಾದರೆ ಕಾಂಗ್ರೆಸ್‌ ಯಾವ ರೀತಿಯ ಹೆಜ್ಜೆ ಇಡಬಹುದು. ಮುಂದಿನ ಕಾರ್ಯತಂತ್ರ ಹಾಗೂ…

26ರಿಂದ ಡಿಗ್ರಿ ಕಾಲೇಜ್‌ ಆರಂಭ; ಈವರೆಗೆ 75% ವಿದ್ಯಾರ್ಥಿಗಳಿಗೆ ಲಸಿಕೆ: ಡಿಸಿಎಂ

ಬೆಂಗಳೂರು,ಜು,21: ಈ ತಿಂಗಳ 26ರಿಂದ ಪದವಿ ಕಾಲೇಜುಗಳ ಭೌತಿಕ ತರಗತಿಗಳು ಆರಂಭವಾಗುತ್ತಿದ್ದು, ಈವರೆಗೆ ಉನ್ನತ ಶಿಕ್ಷಣ ವಿಭಾಗದ ಶೇ.75ರಷ್ಟು ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಖಾತೆ ಸಚಿವರು ಆದ ಉಪ ಮಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು. ಬೆಂಗಳೂರಿನಲ್ಲಿ ಬುಧವಾರ ಟೊಕಿಯೋ ಒಲಿಂಪಿಕ್‌-2020 ಕ್ರೀಡಾಕೂಟದಲ್ಲಿ ಪಾಲ್ಗೊಂಡ ಕ್ರೀಡಾಪಟುಗಳಿಗೆ ಶುಭಕೋರುವ ವರ್ಚುಯಲ್‌ ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ ಅವರು ಮಾಧ್ಯಮಗಳ ಮಾತನಾಡಿದರು. ಈಗಾಗಲೇ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಕಾರ್ಯಕ್ರಮ ವೇಗವಾಗಿ ಸಾಗುತ್ತಿದೆ. ಸರಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ…

ನಾಯಕರನ್ನು ಭೇಟಿಯಾಗಲು ದೆಹಲಿಗೆ ಆಗಮಿಸಿದ ರೇಣುಕಾಚಾರ್ಯ

ನವದೆಹಲಿ, ಜು. ೨೧: ಬಿಎಸ್‌ವೈ ಅಧಿಕಾರಿದಂದ ಕೆಳಗಿಳಿಯುವುದು ಖಚಿತವಾಗುತ್ತಿದ್ದಂತೆ ಬಿಜೆಪಿ ನಾಯಕರು ದೆಹಲಿಗೆ ಬರುತ್ತಿದ್ದಾರೆ. ಇದರ ಭಾಗವಾಗಿ ಈಗ ಅವರ ಆಪ್ತ ರೇಣುಕಾಚಾರ್ಯ ಅವರು ದಿಡೀರ್ ನಿನ್ನೆ ರಾತ್ರಿ ಇಲ್ಲಿಗೆ ಆಗಮಿಸಿದ್ದಾರೆ ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸದಂತೆ ನಡೆಯುತ್ತಿರುವ ಒತ್ತಡ ಹೇರುವ ತಂತ್ರದ ಮುಂದುವರಿದ ಭಾಗವಾಗಿ ರೇಣುಕಾಚಾರ್ಯ ಅವರು ದೆಹಲಿಗೆ ಆಗಮಿಸಿದ್ದು ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಹಿನ್ನಲೆಯಲ್ಲಿ ಅವರು ಇಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್…

ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಇಂದು ವಿದ್ಯುಕ್ತ ಚಾಲನೆ

ಟೋಕಿಯೋ,ಜು, ೨೧:ಕೊನೆಗೂ ಒಂದು ವರ್ಷದ ಬಳಿಕ ಇಲ್ಲಿನ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಇಂದು ವಿದ್ಯುಕ್ತ ಚಾಲೆನೆ ಸಿಕ್ಕಿದೆ.ಕೊರೊನಾ ಹಿನ್ನೆಲೆಯಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಮುಂದೂಡಲಾಗಿತ್ತು . ಆತಿಥೇಯ ಜಪಾನ್ ಮತ್ತು ಆಸ್ಟ್ರೇಲಿಯಾ ನಡುವಿನ ಸಾಫ್ಟ್ ಬಾಲ್ ಪಂದ್ಯದ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ಸಿಕ್ಕಿತು. ೨೦೧೧ರ ಸುನಾಮಿ ಮತ್ತು ಪರಮಾಣು ದುರಂತದಲ್ಲಿ ಭಾರೀ ಸಂಕಷ್ಟಕ್ಕೀಡಾಗಿದ್ದ ಫುಕುಶಿಮಾ ಎಂಬ ಪ್ರದೇಶದಲ್ಲಿ ನಡೆದ ಈ ಪಂದ್ಯದಲ್ಲಿ ಆತಿಥೇಯರು ೮-೧ರಿಂದ ಗೆದ್ದು ಬೀಗಿದರು. ಒಲಿಂಪಿಕ್ಸ್ ಕ್ರೀಡಾಕೂಟ ಇಂದು ಆರಂಭವಾದರೂ ಅಧಿಕೃತವಾಗಿ ಚಾಲನೆಗೊಳ್ಳುವುದು ಜುಲೈ ೨೩, ಶುಕ್ರವಾರದಂದು.…

ಮನೆಯೊಳಗೆ ಮಠ ನಿನಗೆ ಮಂಕುತಿಮ್ಮ

ಸಿದ್ಧಸೂಕ್ತಿ : ಮನೆಯೊಳಗೆ ಮಠ ನಿನಗೆ ಮಂಕುತಿಮ್ಮ. ಸಂಸಾರದಲ್ಲಿ ತಂದೆ ತಾಯಿ ಅಜ್ಜ ಅಜ್ಜಿ ಸಹೋದರ ಸಹೋದರಿ ಅತ್ತೆ ಮಾವ ಗಂಡ ಹೆಂಡತಿ ಮಕ್ಕಳ ಹೊಣೆ. ನಿಭಾಯಿಸಲು ಪರದಾಡಬೇಕು. ಸಂಸಾರ ದುಃಖ.ಸಂನ್ಯಾಸಿಯಾಗಿ ಮಠ ಸೇರಿದರೆ ಇದಿಲ್ಲ!ಉಚಿತ ಪ್ರಸಾದ, ಪಾದ ಕಾಣಿಕೆ, ವಸ್ತ್ರ ಗೌರವ ಸಮ್ಮಾನ ಪೂಜೆ ಸೇವೆ ಎಲ್ಲ ಲಭ್ಯ! ಸಂನ್ಯಾಸ ಸುಖ! ಎನ್ನುವರುಂಟು. ಸಂನ್ಯಾಸವೇನು ಹೊಣೆಗೇಡಿತನವೇ? ಕಾಷಾಯ ತೊಟ್ಟರೆ ಸಂನ್ಯಾಸವೇ? ಭಾವ ನಿರ್ಭಾವ ಆಗುವುದು ಸಂನ್ಯಾಸ! ನಾಯಮಾತ್ಮಾ ಬಲಹೀನೇನ ಲಭ್ಯಃ=ಸಂನ್ಯಾಸ ಆತ್ಮಜ್ಞಾನ ನಿಷ್ಠೆಗಳು ಬಲಹೀನನಿಗೆ ದಕ್ಕವು.…

ಹಿಂದೆ ಗುರುವಿದ್ದು, ಮುಂದೆ ಗುರಿ ಇರಲು ಉನ್ನತಿ!

ಗುರುಪೂರ್ಣಿಮೆಯ ಪ್ರಯುಕ್ತ ವಿಶೇಷ ಲೇಖನ. ಹಿಂದೆ ಗುರುವಿದ್ದು, ಮುಂದೆ ಗುರಿ ಇರಲು ಉನ್ನತಿ! ಗುರು ದೊಡ್ಡವನು. ಗುರುತರ ಹೊಣೆಯುಳ್ಳವನು. ಜ್ಞಾನವುಳ್ಳವನು. ಅಜ್ಞಾನ ಕಳೆಯುವವನು. ಪ್ರಸಿದ್ಧ ಶ್ಲೋಕವೊಂದು ಹೀಗಿದೆ; ಗುಕಾರಸ್ತ್ವಂಧಕಾರಸ್ತು ರುಕಾರಸ್ತೇಜ ಉಚ್ಯತೇ| ಅಂಧಕಾರ ನಿರೋಧತ್ವಾತ್ ಗರುರಿತ್ಯಭಿಧೀಯತೇ|| ಗುಕಾರ ಕತ್ತಲೆಯ ಪ್ರತೀಕ. ರುಕಾರ ಬೆಳಕಿನ ಪ್ರತೀಕ. ಗೊತ್ತಿಲ್ಲದಿರುವುದು, ತಿಳಿಯದಿರುವುದು, ಅಜ್ಞಾನ. ಇದೇ ಕತ್ತಲೇ = ಅಂಧಕಾರ. ತಿಳಿವು =ಅರಿವು=ಜ್ಞಾನ=ವಿದ್ಯೆಯೇ ಬೆಳಕು! ನಮ್ಮೊಳಗಿನ ಅಜ್ಞಾನ ಕತ್ತಲೆಯನ್ನು ಜ್ಞಾನಬೆಳಕಿನಿಂದ ಹೊಡೆದೋಡಿಸುವುವವನೇ ಗುರು. ಬದುಕಿನಲ್ಲಿ ಜ್ಞಾನದಂಥ ಶ್ರೇಷ್ಠ ಪವಿತ್ರ ವಸ್ತು ಇನ್ನಾವುದೂ…

ದ್ವಿತೀಯ ಪಿಯು ಫಲಿತಾಂಶ ಪ್ರಕಟ;ದ.ಕ.ಜಿಲ್ಲೆ ಪ್ರಥಮಸ್ಥಾನ

ಬೆಂಗಳೂರು,ಜು,೨೦:ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು,ಫಿಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮಸ್ಥಾನ ಗಳಿಸಿಕೊಂಡಿದೆ. ಪ್ರಾಥಮಿಮಿ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಕುರಿತು ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದರು,.ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ೪,೫೦,೭೦೬ ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ. ೧,೪೭,೦೫೬ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಹಾಗೂ ೬೮,೭೨೯ ವಿದ್ಯಾರ್ಥಿಗಳು ಜಸ್ಟ್ ಪಾಸಾಗಿದ್ದಾರೆ. ವಿದ್ಯಾರ್ಥಿಗಳಿಗೆ ಎಸ್ ಎಂ ಎಸ್ ಮೂಲಕ ಫಲಿತಾಂಶ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಪರೀಕ್ಷೆ ಇಲ್ಲದೆ…

ಮತ್ತೇ ಅಗ್ರಸ್ಥಾನಕ್ಕೇರಿದಿ ಮಿಥಾಲಿ

ದುಬೈ,ಜು,೨೦:ಎಐಸಿಸಿ ಏಕದಿನ ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ೭೬೨ ಅಂಕಗಳೊಂದಿಗೆ ಮತ್ತೊಮ್ಮೆ ಅಗ್ರಸ್ಥಾನಕ್ಕೆ ಏರಿದ್ದಾರೆ ೧೬ ವರ್ಷಗಳ ಹಿಂದೆ ಮೊದಲ ಬಾರಿಗೆ ಅಗ್ರ ಸ್ಥಾನ ಅಲಂಕರಿಸಿದ್ದ ಮಿಥಾಲಿ, ಒಂಬತ್ತನೇ ಬಾರಿಗೆ ಬ್ಯಾಟುಗಾರ್ತಿಯರ ರ‍್ಯಾಂಕಿಂಗ್ ಪಟ್ಟಿಯಲ್ಲಿ ಪ್ರಥಮ ಸ್ಥಾನಕ್ಕೆ ಏರಿದ್ದಾರೆ.ಬೌಲರ್‌ಗಳ ಪಟ್ಟಿಯಲ್ಲಿ, ಐದನೇ ಸ್ಥಾನದಲ್ಲಿರುವ ಝುಲನ್ ಗೋಸ್ವಾಮಿ ಟಾಪ್ ೧೦ ರಲ್ಲಿರುವ ಏಕೈಕ ಭಾರತೀಯರಾಗಿದ್ದಾರೆ. ಆಲ್ ರೌಂಡರ್ ವಿಭಾಗದಲ್ಲಿ ದೀಪ್ತಿ ಶರ್ಮಾ ೫ನೇ ಸ್ಥಾನ ಪಡೆದಿದ್ದಾರೆಮಹಿಳಾ ಟಿ ೨೦ ಆಟಗಾರ್ತಿಯರ ರ‍್ಯಾಂಕಿಂಗ್‌ನಲ್ಲಿ…

ಸಣ್ಣ ರೈತರ ಹೆಸರಲ್ಲಿ ನಿರಾಣಿ ೮ಸಾವಿರ ಕೋಟಿರೂ ಸಾಲ ಪಡೆದು ವಂಚನೆ-ಆರೋಪ

ಬೆಂಗಳೂರು.ಜು,೨೦:ಸಣ್ಣ ರೈತರ ಹೆಸರಿನಲ್ಲಿ ೮ಸಾವಿರ ಕೋಟಿ ರೂ ಸಾಲ ಪಡೆದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ವಂಚಿಸಿದ್ದಾರೆ ಎಂದು ದಿ ಹೆಲ್ಪಿಂಗ್ ಸಿಟಿಜನ್ ಆಂಡ್ ಪೀಪಲ್ಸ್ ಕೋರ್ಟ್ ಸಂಸ್ಥಾಪಕ ಆಲಂ ಪಾಷಾ ಗಂಭೀರ ಆರೋಪ ಮಾಡಿದ್ದಾರೆ. ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು,ಸಚಿವ ನಿರಾಣಿಯವರು ಮುಧೋಳ, ಬೆಳಗಾವಿ, ಬಾಗಲಕೋಟೆ ಭಾಗದ ಸಾವಿರಾರು ಸಣ್ಣ ರೈತರ ಹೆಸರಲ್ಲಿ ಬೆಳೆ ಸಾಲ ಪಡೆದು ವಂಚಿಸಿದ್ದಾರೆ. ಪಡೆದ ಬೆಳೆ ಸಾಲವನ್ನು ನಕಲಿ ಹೆಸರಲ್ಲಿ ಶ್ರೀ ವಿಜಯ…

ಸಿಎಂ ಬದಲಾವಣೆ-ಬೆಜಿಪಿ ವಲಸಿಗಸಚಿವರ ರಹಸ್ಯಸಭೆ

ಬೆಂಗಳೂರು,ಜು,೨೦: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬದಲಾಗುತ್ತಾರೆ ಎನ್ನುವುದು ಖಾತ್ರಿಯಾಗುತ್ತಿದ್ದಂತೆ ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಬಂದಿದ್ದ ವಲಸಿಗರು ರಹಸ್ಯಸಭೆ ನಡೆಸಿದ್ದಾರೆ ಸಚಿವರಾದ ಡಾ,ಕೆ,ಸುಧಾಕರ್,ಬೈರತಿ ಬಸವರಾಜ್,ಕೆ.ನಾರಾಯಣಗೌಡ,ಬಿ.ಸಿ.ಪಾಟೀಲ್ ಎಸ್.ಟಿ.ಸೋಮಶೇಖರ್ ಮೊದಲಾದವರು ಖಾಸಗಿ ಹೊಟೇಲ್ ಒಂದರಲ್ಲಿ ರಹಸ್ಯ ಸಭೆ ನಡೆಸಿ ಮುಂದಿನ ನಡೆ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಸರ್ಕಾರ ಹಾಗೂ ಪಕ್ಷದೊಳಗೆ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಗೊತ್ತಾಗಿದೆ. ಒಂದು ವೇಳೆ ವರಿಷ್ಠರ ಸೂಚನೆಯಂತೆ ಯಡಿಯೂರಪ್ಪ ಅವರು ತಮ್ಮ ಸ್ಥಾನಕ್ಕೆ…

ಕುಮಾರ ನಿಜಗುಣ ಸ್ವಾಮೀಜಿ ಇನ್ನಿಲ್ಲ

ಡಾ ಆರೂಢಭಾರತೀ ಸ್ವಾಮೀಜಿ ಬೆಂಗಳೂರು, ಜು,20:ಮೈಸೂರು ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಚಿಲಕವಾಡಿಯ ಶ್ರೀ ನಿಜಗುಣ ಶಿವಯೋಗಿ ಕ್ಷೇತ್ರದ ಶ್ರೀ ಕುಮಾರ ನಿಜಗುಣ ಸ್ವಾಮೀಜಿಯವರು(88) ಇಂದು ಬೆಳಿಗ್ಗೆ 2 ಘಂಟೆಗೆ ಮೈಸೂರಿನಲ್ಲಿ ಲಿಂಗೈಕ್ಯರಾದರು. ಇಂದು ಮಧ್ಯಾಹ್ನ ಚಿಲಕವಾಡಿಯ ಶ್ರೀ ನಿಜಗುಣ ಕ್ಷೇತ್ರದಲ್ಲಿ ಹರ ಗುರು ಚರಮೂರ್ತಿಗಳ ಭಕ್ತಾದಿಗಳ ಸಮ್ಮುಖದಲ್ಲಿ ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ಸಮಾಧಿ ಮಾಡಲಾಗುವುದು. ಶ್ರೀಗಳು ವಯೋವೃದ್ಧ ಹಿರಿಯ ಸಂನ್ಯಾಸಿಗಳು. ಗೃಹಸ್ಥಾಶ್ರಮದಲ್ಲಿ ವಕೀಲರಾಗಿದ್ದವರು. ಸಿದ್ಧಗಂಗೆಯ ಶ್ರೀ ಶಿವಕುಮಾರ ಮಹಾ ಸ್ವಾಮಿಗಳವರಿಂದ ಸಂನ್ಯಾಸ ದೀಕ್ಷೆ ಪಡೆದವರು. ಕೊಳ್ಳೇಗಾಲ…

ಓದು ಒಕ್ಕಾಲು, ಬುದ್ಧಿ ಮುಕ್ಕಾಲು

‌‌     ‌‌  ‌‌‌‌      ಸಿದ್ಧಸೂಕ್ತಿ : ಓದು ಒಕ್ಕಾಲು, ಬುದ್ಧಿ ಮುಕ್ಕಾಲು. ಕಾಲು=ಒಂದರ ಸಮ ನಾಲ್ಕು ಭಾಗ ಪೈಕಿ ಒಂದು. ಒಕ್ಕಾಲು= ಒಂದು ಕಾಲು. ಮುಕ್ಕಾಲು= ಮೂರು ಕಾಲು.ಓದಿಗಿಂತ ಬುದ್ಧಿ ದೊಡ್ಡದು.ಅದಕ್ಕೇ ಗೌರವ ಡಾಕ್ಟರೇಟ್! ಜ್ಞಾನ – ಸಾಧನೆಗೆ ಓದು ಬೇಕು. ಪದವಿ ಉದ್ಯೋಗ ಉನ್ನತ ಸ್ಥಾನ ಮಾನ ಅದರಿಂದ! ಓದು ಮಗು, ಬುದ್ಧಿ ತಾಯಿ! ಬುದ್ಧಿ ಜ್ಞಾನ ವಿಕಾಸವೇ ಕೃಷಿ ಪಶುಸಂಗೋಪನೆ ಕಟ್ಟಡ ರಸ್ತೆ ಸೇತುವೆ ಯಂತ್ರ ತಂತ್ರ ಮಂತ್ರ…

ಬಾವೈಕ್ಯತೆ ಸಾರುವ ಅಪರೂಪದ ವಿದ್ಯಾಸಂಸ್ಥೆ-ಶಿವಾನಂದ ತಗಡೂರು

ಶಿಕಾರಿಪುರ,ಜು,೧೯:ನಾನು ಊಹೇ ಕೂಡ ಮಾಡಿರಲಿಲ್ಲ ಬಹುಶಃ ಕೋಮು ಸೌಹಾರ್ದಯುತ ಸಂಸ್ಥೆ ಇದಾಗಿರಬೇಕೆಂದು ಕೊಂಡಿದ್ದೆ.ಆದರೆ ಸಂಸ್ಕಾರ ಬಾವೈಕ್ಯತೇ ಸಾರುವ ಅಪರೂಪದ ವಿದ್ಯಾಸಂಸ್ಥೆ ಎಂದು ಕಾರ್ಯನಿರತ ಪತ್ರಕರ್ತರ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಬಣ್ಣಿಸಿದರು. ಅವರು ನಗರದ ಜುಬೇದ ವಿದ್ಯಾ ಸಂಸೆ ಹಮ್ಮಿಕೊಂಡಿದ್ದ ವಿಶೇಷ ಸನ್ಮಾನ ಸಮಾರಂಭ ದಲ್ಲಿ ಬಾಗಿವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು. ಇಲ್ಲಿ ಕಾಯಕದ ವಿದ್ಯಾ ಸಂಸ್ಥೆ ಇರುವುದು ಬಹಳ ಹೆಮ್ಮೆಯ ಸಂಗತಿ.ಸುಮಾರು ಹದಿನೇಳು ಎಕರೆ ಪ್ರದೇಶದಲ್ಲಿ ಜಾತಿಭೇದ ವಿಲ್ಲದೆ ಸಮಾಜ ಮುಖಯಾಗಿ ಕಾರ್ಯ ನಿರ್ವಹಿಸುತ್ತಿರುವ ಕೀರ್ತಿಗೆ…

ಭಾರತೀಯ ಕ್ರೀಡಾಪಟುಗಳು ಅಭ್ಯಾಸ ಆರಂಭ

ಟೋಕಿಯೋ, ಜು, ೧೯: ಇಲ್ಲಿ ನಡೆಯಲಿರುವ ಓಲಿಂಪಿಕ್ಷ್ ಕ್ರೀಡೆಗೆ ಭಾರತೀಯ ಕ್ರೀಡಾಪಟುಗಳ ಮೊದಲ ತಂಡ ನಿನ್ನೆ ತಲುಪಿದ್ದು ಇಂದು ಮೈದಾನಕ್ಕಿಳಿದು ಅಭ್ಯಾಸದಲ್ಲಿ ತೊಡಗಿದ್ದರು.ಆದರೆ ಈಗ ಕೋವಿಡ್ ಆತಂಕ ಇಲ್ಲಿ ಆವರಿಸಿಕೊಂಡಿರುವುದು ಎಲ್ಲ ಕ್ರೀಡಾಪಟುಗಳಿಗೂ ಭಯ ಆವರಿಸಿದೆ. ಆರ್ಚರ್‌ಗಳಾದ ದೀಪಿಕಾ ಕುಮಾರಿ ಹಾಗೂ ಅತನು ದಾಸ್, ಟೇಬಲ್ ಟೆನ್ನಿಸ್ ಆಟಗಾರರಾದ ಜಿ ಸಥಿಯನ್ ಹಾಗೂ ಎ ಶರತ್ ಕಮಾಲ್, ಶಟ್ಲರ್‌ಗಳಾದ ಪಿವಿ ಸಿಂಧು ಮತ್ತು ಬಿ ಸಾಯಿ ಪ್ರಣೀತ್ ಹಾಗೂ ಜಿಮ್ನ್ಯಾಸ್ಟಿಕ್ ಪಟು ಪ್ರಣತಿ ನಾಯಕ್ ತಮ್ಮ ಅಭ್ಯಾಸವನ್ನು…

ನೂತನ ಮೈಲುಗಲ್ಲು ಸಾಧಿಸಿದ ಶಿಖರ್ ಧವನ್

ಕೊಲಂಬೊ,ಜು,೧೯: ಭಾರತ ಕ್ರಿಕೆಟ್ ತಂಡದ ನಾಯಕ ಶಿಖರ್ ಧವನ್ ಏಕದಿನ ಕ್ರಿಕಟ್‌ನಲ್ಲಿ ಆರಂಭಿಕನಾಗಿ ೧೦ ಸಾವಿರ ರನ್ ಬಾರಿಸುವ ಮೂಲಕ ನೂತನ ಮೈಲಿಗಲ್ಲು ಸಾಧಿಸಿದ್ದಾರೆ. ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಧವನ್ ೮೬ರನ್(೯೫ ಎಸೆತ, ೬ ಬೌಂಡರಿ, ೧ ಸಿಕ್ಸ್) ಸಿಡಿಸಿ ಮಿಂಚಿದ್ದರು. ಇದೇ ಪಂದ್ಯದಲ್ಲಿ ೧೦,೦೦೦ರನ್ ಮೈಲಿಗಲ್ಲು ನೆಟ್ಟಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್, ಸುನಿಲ್ ಗವಾಸ್ಕರ್ ಹಾಗೂ ರೋಹಿತ್ ಶರ್ಮಾ ಬಳಿಕ ಆರಂಭಿಕನಾಗಿ ೧೦ ಸಾವಿರ…

1 64 65 66 67 68 99
Girl in a jacket