ರೈತನ ಬೆತ್ತಲೆ ಮಾಡಿ ಪುಟಗೋಸಿ ಎಸೆವ ಪ್ರಧಾನಿ
ರೈತನ ಬೆತ್ತಲೆ ಮಾಡಿ ಪುಟಗೋಸಿ ಎಸೆವ ಪ್ರಧಾನಿ ವಿಶ್ವದ ಗಮನ ಸೆಳೆದ ರೈತ ಆಂದೋಲನಕ್ಕೆ ವರ್ಷ ತುಂಬುವ ಹೊತ್ತಿನಲ್ಲಿ ಮೂರು ಕೃಷಿ ಕಾಯಿದೆಗಳನ್ನು ರದ್ದು ಮಾಡುವ ವಚನ ನೀಡಿದ್ದಾರೆ ಪ್ರಧಾನಿ. ’ಛಪ್ಪನ್ನೈವತ್ತಾರು’ ಇಂಚಿನ ಎದೆಗಾರಿಕೆಯ ಪ್ರಧಾನಿ ತಾವು ಆಡಿರುವ ಈ ನುಡಿಯನ್ನು ನಿರ್ವಂಚನೆಯಿಂದ ನಡೆಸಿಕೊಡಲಿ. ಮುಂಬರುವ ದಿನಗಳಲ್ಲಿ ಇವೇ ಕಾಯಿದೆಯ ಅನಿಷ್ಟಗಳು ಛದ್ಮ ವೇಷ ಹೊದ್ದು ಪ್ರತ್ಯಕ್ಷವಾಗದಿರಲಿ. ಒಂದು ಸಂದೇಹವನ್ನು ಮೋದಿಯವರು ಮತ್ತು ಅವರ ಪಕ್ಷ ನಿವಾರಿಸಬೇಕಿದೆ. ತಮ್ಮ ಮಾತುಗಳ ಕನ್ನಡಿಯಲ್ಲಿ ತಮ್ಮದೇ ಮುಖ ನೋಡಿಕೊಳ್ಳಬೇಕಿದೆ. ದೇಶದ…




















