Flash News
ಸಂದಿರುವುದನ್ನ ಋಣ ಮಂಕುತಿಮ್ಮ
ಸಿದ್ಧಸೂಕ್ತಿ : ಸಂದಿರುವುದನ್ನ ಋಣ ಮಂಕುತಿಮ್ಮ. ಅನ್ನ=ಭೋಗ. ಋಣ=ಸಂಬಂಧ. ಪಾರಣಿ/ಣೆ=ವ್ರತ ಉಪವಾಸದ ನಂತರದ ಊಟ. ಬದುಕು ಅನಿಶ್ಚಿತ. ಇವರು ಹೀಗಿರುವರೆಂದು ಹೇಳಲಾಗದು! ಏರಿಳಿವು ತಪ್ಪದು. ಬೆಳಿಗ್ಗೆ ಮದುವೆ, ಸಂಜೆ ಮರಣ! ನಿನ್ನೆ ಹುಟ್ಟು, ಇಂದು ಸಾವು, ನಾಳೆ ಸತ್ತವರ ತಿಥಿ! ಇಂದು ಮೃಷ್ಟಾನ್ನ ಭೋಜನ, ನಾಳೆ ಭಿಕ್ಷಾನ್ನ, ಅನ್ನಕ್ಕೆ ಪರದಾಟ! ಇಂದು ಉಪವಾಸ, ನಾಳೆ ಊಟ! ಕೈಗೆ ಬಂದ ತುತ್ತು, ಬಾಯಿಗೆ ಬರಲಿಲ್ಲ! ಧಾನ್ಯ ಧಾನ್ಯ ಮೇ ಲಿಖಾ ಹೈ ಖಾನೇವಾಲಾ ಕಾ ನಾಮ್! ಬೆಳೆದ ಮಗನ/ಮಗಳ…