Browsing: Featured

Flash News

ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ

‌‌‌                      ಸಿದ್ಧಸೂಕ್ತಿ : ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ. ಮಡಕೆ ಮಾಡಲು ಕುಂಬಾರಗೆ ಬೇಕು ವರುಷ, ಒಡೆಯಲು ದೊಣ್ಣೆಗೆ ಸಾಕು ನಿಮಿಷ! ಕಟ್ಟಡ ನಿರ್ಮಿಸಲು ಬೇಕು ವರ್ಷ ಹಲವು, ಕೆಡವಲು ಜೆಸಿಬಿಗೆ ಸಾಕು ಘಂಟೆ ಕೆಲವು! ಬಸ್ ತಯಾರಿಗೆ ಬೇಕು ಶ್ರಮ ಬಂಡವಾಳ, ಸುಡಲು ಸಾಕು ಕ್ಷಣ ಕೆಟ್ಟ ಮನದಾಳ! ಮರ ನೆಟ್ಟು ಬೆಳೆಸಲು ಬೇಕು ಶ್ರಮ ಹಲವಾರು ವರ್ಷ, ತುಂಡರಿಸಲು…

ಕಾಸಿಗೆ ತಕ್ಕ ಕಜ್ಜಾಯ

ಸಿದ್ಧಸೂಕ್ತಿ : ಕಾಸಿಗೆ ತಕ್ಕ ಕಜ್ಜಾಯ. ರುಬ್ಬಿದ ಅಕ್ಕಿ ಬೆಲ್ಲದಿ ಮಾಡಿದ ಸಿಹಿ ತಿಂಡಿ ಕಜ್ಜಾಯ. ಅಂಗಡಿಯಲಿ ಕಾಸಿಗೆ ತಕ್ಕ ಕಜ್ಜಾಯ. ಉತ್ತಮಕ್ಕೆ ಬೆಲೆ ಹೆಚ್ಚು.ಹೆಚ್ಚಿಗೆ ಹೆಚ್ಚು, ಕಡಿಮೆಗೆ ಕಡಿಮೆ! ಕಡಿಮೆಗೆ ಹೆಚ್ಚು ಬಯಸುವುದು, ಹೆಚ್ಚಿಗೆ ಕಡಿಮೆ ದೊರಕುವುದು ಅನ್ಯಾಯ. ಮನೆಯ ಕಜ್ಜಾಯಕ್ಕೆ ಕಾಸಿಲ್ಲ:ಆದರೆ ಅಕ್ಕಿ ಬೆಲ್ಲ ಅನಿಲ ಅನಲ ನೀರು ವಿದ್ಯುತ್ ಮನೆ ನಿರ್ವಹಣೆ ಎಲ್ಲಕ್ಕೂ ಬೇಕು ಕಾಸು! ಪುಕ್ಕಟೆ ಏನೂ ಸಿಗದು, ನಿಲ್ಲದು, ಜೀರ್ಣವಾಗದು, ಖುಷಿ ತರದು. ಪುಕ್ಕಟೆಯಲ್ಲೂ ಅಡಗಿದೆ ಹಿರಿಶ್ರಮ. ಜಗವಿದು…

ಗಾಳಿ ಬಿಟ್ಟಾಗ ತೂರಿಕೋ

     ಸಿದ್ಧಸೂಕ್ತಿ :                      ಗಾಳಿ ಬಿಟ್ಟಾಗ ತೂರಿಕೋ. ರೈತ ಕಣದಲಿ ರಾತ್ರಿ ಹಂತಿ ಹೊಡೆದು ಹಗಲು ರಾಶಿ ತೂರುವನು. ಗಾಳಿಗಾಗಿ ಕಾಯುವನು. ಗಾಳಿ ಬಿಟ್ಟಾಗ ಖುಷಿಪಟ್ಟು, ಊಟ ಬಿಟ್ಟು ತೂರುವನು! ಗಾಳಿ ನಮ್ಮದಲ್ಲ. ಕಳೆದ ಗಾಳಿ ಮತ್ತೆ ಸಿಗದು! ನಮ್ಮ ಅಧೀನವಲ್ಲದ ಅವಕಾಶಕ್ಕೆ ಕಾಯಬೇಕು, ಒದಗಿದಾಗ ಬಿಡದೇ ಬಳಸಬೇಕು. ಬಸ್ಸು ರೈಲು ವಿಮಾನ ಪರೀಕ್ಷೆ ಸಂದರ್ಶನ ನೇಮಕಾತಿ ವಿವಾಹ ಮುಹೂರ್ತಗಳು ನಿರ್ದಿಷ್ಟ…

ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ

ಸಿದ್ಧಸೂಕ್ತಿ : ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ. ಕಿನ್ನರಿ ತಂತೀ ವಾದ್ಯ. ರಾಗ ತಾಳ ಲಯಾನುಗುಣ ನುಡಿಸಿದ ಕಿನ್ನರಿ ಕಲಾರಸಿಕರ ಹೃನ್ಮನ ಸೂರೆಗೊಳ್ಳುವುದು! ಕೋಣನ ಮುಂದೆ ಕಿನ್ನರಿ ಬಾರಿಸಿದರೆ, ಅದೇನು ಬಲ್ಲುದು ಅದರ ಸ್ವಾದವ? ಕೋಣಮಾತ್ರವಲ್ಲ, ಕೋಣದಂತಿರುವ ಜನರೂ ಅರಿಯರು! ಬೋರ್ಗಲ್ಲ ಮೇಲೆ ನೀರು ನಿಲ್ಲದು, ಬಂಡೆಯ ಮೇಲೆ ಬೀಜ ನಾಟದು! ಪ್ರಯೋಜನಕಾರಿಯಲ್ಲದೆಡೆ ಪ್ರಯತ್ನ ಕೂಡದು. ಬದುಕ ಹಸನಾಗಲು, ಹೃದಯ ಶ್ರೀಮಂತವಾಗಲು ಸುರಿದಿವೆ ಅಗಣಿತ ಅವಕಾಶ. ಶಾಸ್ತ್ರ ವಿದ್ಯೆ ವಿದ್ವಾಂಸರು, ಸಂತ ಮಹಂತರು, ದೇಗುಲ ಮಠ ಗ್ರಂಥಾಲಯ…

ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು

ಸಿದ್ಧಸೂಕ್ತಿ : ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು. ಅಸಂಖ್ಯಾತ ವಿದ್ಯೆಗಳಲ್ಲಿ ಕೃಷಿಯೇ ಶ್ರೇಷ್ಠ. ಕೃಷಿ ನೀಡುವುದು ಅನ್ನ, ಅನ್ನ ಎಲ್ಲರಿಗೂ ಬೇಕು! ಭೂಮಿ ಬೀಜ ನೀರು ಗೊಬ್ಬರ ಬೆಳಕು ಆಕಾಶ ಗಾಳಿ ಕೃಷಿಗೆ ಮೂಲ. ಹೈನು ಗೊಬ್ಬರಕೆ ಪಶು ಪಕ್ಷಿ ಕ್ರಿಮಿ ಕೀಟ ಇಂಬು! ಹಣ್ಣು ನೀರಿಗೆ ವೃಕ್ಷಸಂಕುಲವೇ ಇಂಬು! ಇದು ಪ್ರಕೃತಿ, ದೈವದತ್ತ! ಕೃಷಿಕನಹೋ ದೈವಭಕ್ತ! ಸದಾ ಬೆವರಿಳಿಸಿ ದುಡಿವ ಯೋಗಿ! ಸುಳ್ಳು ಆಲಸ್ಯ ಲಂಚ ವಂಚನೆ ಅರಿಯದ ಮುಗ್ಧ! ಸಾವಯವ…

ಓಲೆಕಾರನಿಗೇಕೆ ಬರೆದ ಸುದ್ದಿಯ ಚಿಂತೆ?

                                      ‌‌‌ ಸಿದ್ಧಸೂಕ್ತಿ : ಓಲೆಕಾರನಿಗೇಕೆ ಬರೆದ ಸುದ್ದಿಯ ಚಿಂತೆ?  ಓಲೆಕಾರ =ಪತ್ರವಿತರಕ. ಬಂದ ಪತ್ರಗಳನ್ನು ಅವರವರಿಗೆ ತಲುಪಿಸುವ ಹೊಣೆ ಆತನದ್ದು. ಪತ್ರ ನಗುವಿನದೋ ಅಳುವಿನದೋ? ಹುಟ್ಟಿನದೋ ಸಾವಿನದೋ? ಸಾಲವಸೂಲಾತಿದೋ ನ್ಯಾಯದ್ದೋ? ಆ ಸುದ್ದಿಯ ಚಿಂತೆ ಅವಗೇಕೆ? ಓದಲಾರ, ತಲೆ ಕೆಡಿಸಿಕೊಳ್ಳಲಾರ! ಅದು ಪತ್ರ ಬರೆದವರ ಪಡೆದವರ ಸುದ್ದಿ. ಆತ ನಿರ್ಲಿಪ್ತ!…

ತಬ್ಬಿಕೊಳೊ ವಿಶ್ವವನೆ ಮಂಕುತಿಮ್ಮ

ಸಿದ್ಧಸೂಕ್ತಿ : ತಬ್ಬಿಕೊಳೊ ವಿಶ್ವವನೆ ಮಂಕುತಿಮ್ಮ. ಜಂಜಾಟ ಬೇಡೆಂದು ಒಂಟಿತನ ಬಯಸುವರು. ಸಂನ್ಯಾಸ ಬದುಕಿಗೆ ಇದು ಆಗಬಹುದು. ಸಂಸಾರ ಜೀವನಕ್ಕೆ ಇದು ಎಂದಿಗೂ ಹೊಂದದು. ಒಂದೇ ತಾ ಸುಖಿಸಲಾರೆ ಎಂದಿತಂತೆ ಅದ್ವಿತೀಯ ಪರಬ್ರಹ್ಮ! ಸಂಗಾತಿಯನ್ನು ಬಯಸಿತಂತೆ! ಇದ್ದ ತಾನೊಂದೇ ಗಂಡ ಹೆಂಡತಿಯಾಯಿತಂತೆ! ಏಕಾಕೀ ನ ರಮತೇ. ಸ ದ್ವಿತೀಯಮೈಚ್ಛತ್. ಪತಿಶ್ಚ ಪತ್ನೀಶ್ಚಾಭವತ್ – ಎನ್ನುವುದು ಬೃಹದಾರಣ್ಯಕ ಉಪನಿಷತ್. ಬಹುಸ್ಯಾಂ ಪ್ರಜಾಯೇಯೇತಿ ಎನ್ನುವುದು ತೈತ್ತಿರೀಯ ಉಪನಿಷತ್. ಜಾಮೂನ್ ಮಿಕ್ಸ್ಗೆ ಸಕ್ಕರೆ, ಚಪಾತಿಗೆ ಪಲ್ಯ, ಅನ್ನಕ್ಕೆ ಸಾಂಬಾರು……

ಕಳ್ಳನ ನಂಬಿದರೂ ಕುಳ್ಳನ ನಂಬಬಾರದು

ಸಿದ್ಧಸೂಕ್ತಿ : ಕಳ್ಳನ ನಂಬಿದರೂ ಕುಳ್ಳನ ನಂಬಬಾರದು. ಕಳ್ಳನ ಮಾತು ಬಹುತೇಕ ಸುಳ್ಳು. ನಿಜದಂತೆ ನಟಿಸಿ ಕದಿಯುವನು, ವಂಚಿಸುವನು. ಆದರೂ ಕಳ್ಳ ಎಂದು ತಿಳಿದಿದ್ದರೆ ನಂಬಬಹುದು. ಕಳ್ಳನ ಕೈಗೇ ಬೀಗ ಇತ್ತರೆ? ಕಳವು ಕಷ್ಟ! ಕುಳ್ಳ ಗಾತ್ರದಲಿ ಕಡಿಮೆ. ಮಹತ್ತ್ವ ಅಳೆಯಲಾಗದು! ಬುದ್ಧಿ ಮಿಕ್ಕವರಿಗಿಂತ ಹಿರಿದು! ನಡೆ ಸಾಧನೆ ಊಹಿಸಲಾಗದು! ಬಹುತೇಕ ಕುಳ್ಳರು ವಿವಾದ ತಪ್ಪಿಗೆ ಸಿಲುಕರು. ಮೂಲೆಗುಂಪಾಗರು. ಸದಾ ಚಟುವಟಿಕೆ! ಬಲು ಜೋರು! ಲಾಲ್ ಬಹದ್ದೂರ್ ಶಾಸ್ತ್ರೀ ಉತ್ತಮ ನಿದರ್ಶನ! ಹುಲ್ಲಿನಂತೆ ಚುಟುಕಾಣಿಯಾಗಿರು, ಹಸಿರಾಗಿರುವುದು…

ಶತ್ರುಗಳ ಆಶೀರ್ವಾದ!

‌‌‌‌                         ಸಿದ್ಧಸೂಕ್ತಿ : ಶತ್ರುಗಳ ಆಶೀರ್ವಾದ! ವಾಹನದಲ್ಲಿ ಬರೆದಿತ್ತು:ಶತ್ರುಗಳ ಆಶೀರ್ವಾದ. ಆಶ್ಚರ್ಯ! ಗುರು- ಹಿರಿ-ಕಿರಿ – ಹಿತೈಷಿಗಳು ಆಶೀರ್ವದಿಸಬಲ್ಲರು. ಅದು ನೀಡುವುದು ಉತ್ತಮ ಫಲ ಅಭಿವೃದ್ಧಿ! ಯಡಿಯೂರಪ್ಪರ ಆಶೀರ್ವಾದ ಬೊಮ್ಮಾಯಿಯ ಮುಖ್ಯಮಂತ್ರಿಯಾಗಿಸಿದಂತೆ! ಆದರೆ ಶತ್ರುಗಳು ಶಪಿಸುವರು, ಆಶೀರ್ವದಿಸರು! ಶಾಪ ಕಂಟಕ, ವರವಲ್ಲ! ನಿಜ. ಆದರೂ ಶತ್ರುಗಳ ಶಾಪ ಕಾಟವೂ ವರವಾಗಬಲ್ಲುದು! ಶ್ರೀಗಂಧವನ್ನು ತೇಯ್ದಂತೆ ಹೆಚ್ಚು ಸುವಾಸನೆ ಬೀರುವಂತೆ, ಚಿನ್ನಕ್ಕೆ ಪುಟ…

ತಿಂದು ನಿನ್ನನ್ನ ಋಣ ತೀರುತಲೆ ಪಯಣ!

ಸಿದ್ಧಸೂಕ್ತಿ : ತಿಂದು ನಿನ್ನನ್ನ ಋಣ ತೀರುತಲೆ ಪಯಣ! ಹುಟ್ಟಿದ ಸ್ಥಳ ದಿನ ಗೊತ್ತು. ಸಾವಿನ ಸ್ಥಳ ದಿನ ಹೇಗೆ ತಿಳಿದಿಲ್ಲ! ಎಲ್ಲೋ ಹುಟ್ಟು, ಎಲ್ಲೋ ಅಭಿವೃದ್ಧಿ, ಎಲ್ಲೋ ಹೇಗೋ ಸಾವು! ಯತ್ನ ದುಡಿಮೆ ಪರಿಶ್ರಮಗಳು ಬದಲಿಸಬಲ್ಲವಾದರೂ, ವಿಧಿ ಲಿಖಿತ ಬಲ್ಲವರಾರು? ಬದಲಿಸುವವರಾರು? ಯತ್ನಿಸದೇ ಮುಖ್ಯಮಂತ್ರಿ ಆದವರುಂಟು, ಜಗದ್ಗುರುವಾದವರುಂಟು, ಯತ್ನಿಸಿಯೂ ವಿಫಲರಾದವರುಂಟು! ಅಲ್ಪಮತದವರು – ಗೆಲ್ಲದವರು, ಪ್ರಧಾನಿಯಾದವರುಂಟು, ಏಕ ಮತದಿಂದ ಪತನರಾದವರುಂಟು! ಬಹುಮತವಿದ್ದರೂ ಅಧಿಕಾರದಿಂದ ಇಳಿದವರುಂಟು! ತಿನ್ನಲಿಲ್ಲದವ ನೂರು ದಾಟಿದ್ದುಂಟು, ಸಾವಿರ ಕೋಟಿಯವ ಬೇಗ ನರಳಿ…

ಕದ್ದು ಹೋಳಿಗೆ ಕೊಟ್ಟರೆ, ಬೆಲ್ಲ ಇಲ್ಲಂದ್ರಂತೆ

ಸಿದ್ಧಸೂಕ್ತಿ : ಕದ್ದು ಹೋಳಿಗೆ ಕೊಟ್ಟರೆ, ಬೆಲ್ಲ ಇಲ್ಲಂದ್ರಂತೆ! ಅತ್ತೆಗೆ ಹೆದರಿ ಸೊಸೆ ಗುಟ್ಟಲಿ ಹೋಳಿಗೆ ಮಾಡುತ್ತಿದ್ದಳು.ಬೆಲ್ಲದ ಕೊರತೆ! ಹೊರಗೆ ಮಕ್ಕಳಾಡುತ್ತಿದ್ದವು. ಬಾಯಾರಿ ಬಂದ ಮಗು ಹೋಳಿಗೆ ಕಂಡು ಬೇಡಿತು.ಯಾರಿಗೂ ಹೇಳಬೇಡವೆಂದು ಕೈಗಿತ್ತಳು!ತಿಂದು ಸುಮ್ಮನಿರಬೇಕಿತ್ತು. ಬೆಲ್ಲ ಹಾಕಿಲ್ಲವೆಂದು ಗುಟ್ಟಲಿ ಹೇಳಬಹುದಿತ್ತು.ತಿನ್ನುತ್ತ ಹೊರ ಓಡಿ ಹೋಳಿಗೆಗೆ ಬೆಲ್ಲ ಇಲ್ಲವೆಂದು ಕಿರುಚಿತು! ಗುಟ್ಟು ರಟ್ಟಾಯಿತು! ಗುಟ್ಟು ರಟ್ಟಾಗದೇ ಉಳಿಯುವುದು ಕಷ್ಟ.ಕೆಲವು ಗುಟ್ಟು ರಟ್ಟಾಗಬಾರದು. ಗುಟ್ಟು ತಿಳಿದವನು ಹೊಣೆಗೇಡಿಯಾಗಬಾರದು. ಕಂಡವರಿಗೆಲ್ಲ ಯಾರಿಗೂ ಹೇಳಬೇಡವೆನುತ ಗುಟ್ಟು ತಿಳಿಸಬಾರದು. ಖಾಸಗಿತನ ಸಾರ್ವಜನಿಕವಾಗಬಾರದು. ಗುಟ್ಟು…

ಎಲ್ಲ ಬರಿ ಗೊಣಗಾಟ

‌‌‌‌                     ಸಿದ್ಧಸೂಕ್ತಿ : ಎಲ್ಲ ಬರಿ ಗೊಣಗಾಟ. ಬಾಳು ದುಸ್ತರ ಕಠಿಣ. ಹೊರಗೆ ಝಗ ಝಗ, ಒಳಗೆ ಚಿಂತೆಯ ತಳಮಳ! ಆನೆಯ ಭಾರ ಆನೆಗೆ. ಇರುವೆಯ ಭಾರ ಇರುವೆಗೆ! ಎಂತಾದರೂ ಚಿಂತೆ ಬಿಡದು. ನಿಶ್ಚಿಂತರಾದವರ ನಾನೊಬ್ಬರನು ಕಾಣೆ. ಜೀವನದುದ್ದಕ್ಕೂ ಅದಿಲ್ಲ, ಇದಿಲ್ಲವೆಂಬ ಗೊಣಗಾಟ! ಅದನ್ನು ಮಾಡಬೇಕು ಆಗುತ್ತಿಲ್ಲ, ಇದನ್ನು ಮಾಡಬೇಕು ಆಗುತ್ತಿಲ್ಲ, ಮಗ ಐಎಎಸ್ ಅಧಿಕಾರಿ ಆಗಬೇಕೆಂಬಾಶೆ, ಮಗನಿಗೆ ಒಲವಿಲ್ಲ! ಮಗಳನ್ನು ಡಾಕ್ಟರ್…

ಗುರುಸ್ಸಾಕ್ಷಾತ್ ಪರಂ ಬ್ರಹ್ಮ

ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಗುರುಸ್ಸಾಕ್ಷಾತ್ ಪರಂ ಬ್ರಹ್ಮ. ಗುರುವು ಸಾಕ್ಷಾತ್ ಪರಬ್ರಹ್ಮ. ಗುರು ದೊಡ್ಡವ. ಅವನು ಬ್ರಹ್ಮ ವಿಷ್ಣು ಮಹೇಶ್ವರಸಮಾನ. ಅಜ್ಞಾನವನ್ನು ಕಳೆದು ಸುಜ್ಞಾನ ಬೆಳಗುವವನು ಸದ್ಗುರು. ವ್ಯಾಸ ಶಂಕರ ಮಹಾವೀರ ಬುದ್ಧ ಬಸವ ನಿಜಗುಣ ಸಿದ್ಧಾರೂಢ ಪರಮಹಂಸರಂಥವರು ಸದ್ಗುರುಗಳು. ವ್ಯಾಸರುದಿಸಿದ ದಿನ ಗುರುಪೂರ್ಣಿಮೆ. ಜೀವಕ್ಕೆ ಬೆಲೆ ಬರುವುದು ಸುಜ್ಞಾನದಿಂದ!ಕೆಲಸ ಮಾಡುವ ಮುನ್ನ ಬೇಕು ಅದರ ಜ್ಞಾನ – ಇಚ್ಛೆ – ಕೃತಿ. ಇದು ಜೀವಕ್ರಮ! ಬದುಕ ಬುನಾದಿ, ಬಾಳ ನೀಡುವ ಜ್ಞಾನದಾತ,…

ನಿನ್ನುದ್ಧಾರವೆಷ್ಟಾಯ್ತೋ ಮಂಕುತಿಮ್ಮ

ಸಿದ್ಧಸೂಕ್ತಿ : ನಿನ್ನುದ್ಧಾರವೆಷ್ಟಾಯ್ತೋ ಮಂಕುತಿಮ್ಮ. “ಮುಖ್ಯಮಂತ್ರಿಯಾದರೆ ಹಾಗೆ ಹೀಗೆ ಮಾಡುವೆ” ವಿದ್ಯಾರ್ಥಿಭಾಷಣ ರೋಚಕ, ನಿಜ ಜೀವನ ಶೋಚ್ಯ! ತಾನೊಂದು ಬಗೆದರೆ ದೈವವೊಂದು ಬಗೆವುದು! ಎಲ್ಲ ಅಂದುಕೊಂಡಂತೆ ಆದರೆ ದುಃಖವೆಲ್ಲಿ? ಏಳುವುದರೊಳಗೊಬ್ಬ ಕಾಲೆಳೆದು ಕೆಡವುವನು! ಬಗ್ಗುಬಡಿಯುವುದರೊಳಗೆ ತಾ ನೆಲಕಚ್ಚುವನು! ಇಲಿ ಬಂದಿತೆಂದರೆ ಹುಲಿ ಬಂದಿತೆಂಬ ರೀತಿ ವಿವಾದ ಹುಟ್ಟಿಸಿ ಹೆಸರ ಮಾಡುವನು, ನಿಜ ಬಯಲಾಗಲು ಮಾನಗೇಡಿ! ಜಗವ ಉದ್ಧರಿಸುವೆ ಎಂದು ಬೀಗುವನು, ತಾ ನಿಂತ ನೆಲೆಯೇ ಹೋಳು! ನಂಬಿ ಕೊಟ್ಟ, ಮುಳುಗಿತು! ನಂಬಿ ಕೈ ಹಿಡಿದ, ಕೈ ಕಳಚಿತು!…

ಮನೆಯೊಳಗೆ ಮಠ ನಿನಗೆ ಮಂಕುತಿಮ್ಮ

ಸಿದ್ಧಸೂಕ್ತಿ : ಮನೆಯೊಳಗೆ ಮಠ ನಿನಗೆ ಮಂಕುತಿಮ್ಮ. ಸಂಸಾರದಲ್ಲಿ ತಂದೆ ತಾಯಿ ಅಜ್ಜ ಅಜ್ಜಿ ಸಹೋದರ ಸಹೋದರಿ ಅತ್ತೆ ಮಾವ ಗಂಡ ಹೆಂಡತಿ ಮಕ್ಕಳ ಹೊಣೆ. ನಿಭಾಯಿಸಲು ಪರದಾಡಬೇಕು. ಸಂಸಾರ ದುಃಖ.ಸಂನ್ಯಾಸಿಯಾಗಿ ಮಠ ಸೇರಿದರೆ ಇದಿಲ್ಲ!ಉಚಿತ ಪ್ರಸಾದ, ಪಾದ ಕಾಣಿಕೆ, ವಸ್ತ್ರ ಗೌರವ ಸಮ್ಮಾನ ಪೂಜೆ ಸೇವೆ ಎಲ್ಲ ಲಭ್ಯ! ಸಂನ್ಯಾಸ ಸುಖ! ಎನ್ನುವರುಂಟು. ಸಂನ್ಯಾಸವೇನು ಹೊಣೆಗೇಡಿತನವೇ? ಕಾಷಾಯ ತೊಟ್ಟರೆ ಸಂನ್ಯಾಸವೇ? ಭಾವ ನಿರ್ಭಾವ ಆಗುವುದು ಸಂನ್ಯಾಸ! ನಾಯಮಾತ್ಮಾ ಬಲಹೀನೇನ ಲಭ್ಯಃ=ಸಂನ್ಯಾಸ ಆತ್ಮಜ್ಞಾನ ನಿಷ್ಠೆಗಳು ಬಲಹೀನನಿಗೆ ದಕ್ಕವು.…

ಓದು ಒಕ್ಕಾಲು, ಬುದ್ಧಿ ಮುಕ್ಕಾಲು

‌‌     ‌‌  ‌‌‌‌      ಸಿದ್ಧಸೂಕ್ತಿ : ಓದು ಒಕ್ಕಾಲು, ಬುದ್ಧಿ ಮುಕ್ಕಾಲು. ಕಾಲು=ಒಂದರ ಸಮ ನಾಲ್ಕು ಭಾಗ ಪೈಕಿ ಒಂದು. ಒಕ್ಕಾಲು= ಒಂದು ಕಾಲು. ಮುಕ್ಕಾಲು= ಮೂರು ಕಾಲು.ಓದಿಗಿಂತ ಬುದ್ಧಿ ದೊಡ್ಡದು.ಅದಕ್ಕೇ ಗೌರವ ಡಾಕ್ಟರೇಟ್! ಜ್ಞಾನ – ಸಾಧನೆಗೆ ಓದು ಬೇಕು. ಪದವಿ ಉದ್ಯೋಗ ಉನ್ನತ ಸ್ಥಾನ ಮಾನ ಅದರಿಂದ! ಓದು ಮಗು, ಬುದ್ಧಿ ತಾಯಿ! ಬುದ್ಧಿ ಜ್ಞಾನ ವಿಕಾಸವೇ ಕೃಷಿ ಪಶುಸಂಗೋಪನೆ ಕಟ್ಟಡ ರಸ್ತೆ ಸೇತುವೆ ಯಂತ್ರ ತಂತ್ರ ಮಂತ್ರ…

ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ

ಸಿದ್ಧಸೂಕ್ತಿ : ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ. ಎನಗಿಂತ ಕಿರಿಯರಿಲ್ಲ ಎನ್ನುವ ವಿನಮ್ರರು ವಿರಳ. ಎನಗಿಂತ ಹಿರಿಯರಿಲ್ಲ. ಎನ್ನ ಸಮನಾರು? ಎಂದು ಅಹಮಿಕೆ ಬೀಗುವ ಜನರಧಿಕ! ತನ್ನ ತನ್ನವರ ಅಲ್ಪ ಸಾಧನೆಯನ್ನು ಉಬ್ಬಿಸುವರಿಂತು:ತುರ್ತು ವಾಹನಕ್ಕೆ ಕರೆ ಮಾಡಿ ಕಳಿಸಿದೆ ಬದುಕಿದ. ಇಲ್ಲದಿರೆ ಆತನ ಸಾವು ಖಚಿತ! ಅವನಿಗೆ ಸಾವಿರ ಕೊಟ್ಟು ಓದಿಸಿದೆ. ಇಲ್ಲದಿರೆ ಆತ ಅಧಿಕಾರಶೂನ್ಯ! ಹೆಜ್ಜೆ ಹೆಜ್ಜೆಗೂ ಕೇಳುವುದು, ಲೆಕ್ಕವಿಲ್ಲದ ಈ ಮಾತು! ಜಾತ್ರೆ ಕಾರ್ಯಕ್ರಮಗಳ ಪತ್ರಿಕೆ ಬ್ಯಾನರ್ ಗಳಲ್ಲಿ ದೇವರು – ಮುಖ್ಯಸ್ಥರ ಚಿತ್ರದ…

ಹೊರಡು ಕರೆ ಬರಲ್ ಅಳದೆ ಮಂಕುತಿಮ್ಮ

ಸಿದ್ಧಸೂಕ್ತಿ : ಹೊರಡು ಕರೆ ಬರಲ್ ಅಳದೆ ಮಂಕುತಿಮ್ಮ. ಸಾವೆಂದರೆ ಭಯ! ತಪ್ಪಿಸಲಾಗದು! ಉತ್ತಮ ಆರೋಗ್ಯ ಎಚ್ಚರಿಕೆಯಿಂದ ಮುಂದಕ್ಕೆ ತಳ್ಳಬಹುದಷ್ಟೇ! ನಿದ್ರೆ ಪ್ರತಿದಿನದ ಪ್ರಾಯೋಗಿಕ ಸಾವು! ಅದಕ್ಕೆ ಭಯ ಅಳುವು ಬೇಡ. ಅದು ಕಬಳಿಸುವ ಮೊದಲು ನಾವೇ ಅದಕ್ಕೆ ಕಾಯೋಣ! ಊರಿಗೆ ಹೊರಡಲು ಸಿದ್ಧರಾಗಿ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುವಂತೆ, ಬಸ್ ಬರುತ್ತಲೇ ಉತ್ಸಾಹದಿಂದ ಬಸ್ ಹತ್ತಲು ಮುನ್ನುಗ್ಗುವಂತೆ! ಇದಕ್ಕೆ ಬೇಕು ಶಿಸ್ತಿನ ಬದುಕು. ಅಗತ್ಯ ಕೆಲಸ ಸಣ್ಣದೋ ದೊಡ್ಡದೋ, ಎಲ್ಲ ಪವಿತ್ರ. ಅಲ್ಲಿಲ್ಲ…

ತಣ್ಣಗಿರಿಸಾತ್ಮವನು ಮಂಕುತಿಮ್ಮ

ಸಿದ್ಧಸೂಕ್ತಿ :                 ತಣ್ಣಗಿರಿಸಾತ್ಮವನು ಮಂಕುತಿಮ್ಮ. ಬಹುತೇಕರಿಗೆ ಕ್ಷಣ ಕ್ಷಣ ಆತಂಕ! ಇವತ್ತು ಹೀಗೆ, ನಾಳೆ ಏನು ಕಾದಿದೆಯೋ? ಎಂಬ ಲೆಕ್ಕ! ಶತ್ರುವಿಗೆ ಗಂಡು ಮಗು ಹುಟ್ಟಿದರೆ, ಇವರಿಗೆ ನಡುಕ! ಪಕ್ಕದ ಮನೆಯವರಿಗೆ ಕೊರೋನಾ ಬಂದರೆ ಇವರ ಆತಂಕ ಹೇಳಲಾಗದು! ಗಂಡನಿಗೆ ಕೋರೋನಾ, ಹೆಂಡತಿಗೆ ಖಿನ್ನತೆ! ಗಂಡನ ಕೊರೋನಾ ವಾಸಿ, ಹೆಂಡತಿಯ ಖಿನ್ನತೆ ಗಟ್ಟಿ! ಇಂಥವರೊಬ್ಬರು ನಮ್ಮ ಬಳಿ ಬಂದಾಗ ಕೇಳಿದೆ:ಈ ನಿಮ್ಮ ಗಂಡ ಹುಟ್ಟಿರುವುದನ್ನು ಖಾತರಿಪಡಿಸಿಕೊಂಡ…

ಒಲಿದರೆ ನಾರಿ,ಮುನಿದರೆ ಮಾರಿ

‌‌‌                 ಸಿದ್ಧಸೂಕ್ತಿ : ಒಲಿದರೆ ನಾರಿ, ಮುನಿದರೆ ಮಾರಿ. ಒಲಿದರೆ ಸ್ತ್ರೀ ತಾಯಿ ಸಹೋದರಿ ಹೆಂಡತಿ ಮಗಳು ಸೊಸೆ ಅತ್ತೆ! ತಿರುಗಿಬಿದ್ದರೆ ಸರ್ವನಾಶಕಿ! ದೇಹ ದುರ್ಬಲೆ, ಮನೋಹೃದಯ ಸುಕೋಮಲೆ! ಪ್ರೀತಿ ದಯೆ ಕರುಣೆ ತಾಳ್ಮೆ ತ್ಯಾಗ ಗುಣಮಹಾಸಾಗರೆ! ಆದರ್ಶ ಹೆಣ್ಣು ಎಲ್ಲರ ಕಣ್ಣು ಬೆಳಕು ಬೇಕು! ಯತ್ರ ನಾರ್ಯಸ್ತು ಪೂಜ್ಯಂತೇ, ರಮಂತೇ ತತ್ರ ದೇವತಾಃ=ಪೂಜ್ಯ ನಾರಿಯರಿರುವಲ್ಲಿ ದೇವತೆಗಳಿರುವರು. ಗೃಹಿಣೀ ಗೃಹಮುಚ್ಯತೇ=ಮಡದಿಯೇ ಮನೆ.ಸ್ತ್ರೀ ಇಲ್ಲದ ಮನೆ ಕಳೆಗಟ್ಟದು.…

error: Content is protected !!