Flash News
ಗುರು
ಸಿದ್ಧಸೂಕ್ತಿ : ಗುರು. ಜ್ಞಾನದಾತಾ.ವೀರಶೈವ ಲಿಂಗಾಯತರ ಅಷ್ಟಾವರಣಗಳಲ್ಲಿ ಒಂದು. ಅರಿವೇ ಗುರು. ಒಂದಕ್ಷರ ಕಲಿಸಿದಾತ, ಒಂದಿನಿತು ಜ್ಞಾನ ನೀಡಿದಾತ. ಗುರುತರ ಹೊಣೆಗಾರ. ಎಲ್ಲರಿಗೂ ಶ್ರೇಷ್ಠ, ಎಲ್ಲರಿಗೂ ಬೇಕು! ಗುರುವಿದ್ದರೆ ಗುರಿ, ಇಲ್ಲದಿದ್ದರೆ ಕುರಿ! ಗುರುಗಳನೇಕರು. ನಿಜಗುಣ ಶಿವಯೋಗಿಗಳ ಪ್ರಕಾರ ಆರು ವಿಧ. ಹಣ ಕೀಳುವ ಗುರುಗಳು ಬಹಳ. ಹೃದಯ-ಭವತಾಪ ಕಳೆಯುವ ಗುರು ವಿರಳ. ಕಳ್ಳತನ ಕಲಿಸಿದರೆ ಕಳ್ಳ ಗುರು. ಒಳಿತನ್ನು ಕಲಿಸಿದರೆ ಉತ್ತಮ ಗುರು. ಆತ್ಮ ವಿದ್ಯೆಯನ್ನು ಧಾರೆಯೆರೆದು ಮುಕ್ತಿಸುಖವನ್ನು ಉಣಿಸಿ ಜನ್ಮ…