ಸಿನೆಮಾ
ಗೋರೂರು ಕೃತಿ ‘ನಮ್ಮ ಊರಿನ ರಸಿಕರು’ ತೆರೆಯ ಮೇಲೆ
‘ಗೊರೂರು’ ಎಂದೇ ಚಿರಪರಿಚಿತರಾಗಿರುವ ಗೋರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಪ್ರಸಿದ್ಧ ‘ನಮ್ಮ ಊರಿನ ರಸಿಕರು’ ಕೃತಿಗೆ ತೆರೆಗೆ ಬರುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ, ಬ್ರಿಟಿಷ್ ರಾಜ್ ಮತ್ತು ಕ್ವಿಟ್ ಇಂಡಿಯಾ ಚಳವಳಿಯ ಮಧ್ಯೆದ ಈ ಕಥೆ ತನ್ನದೇ ಆದ ಕಥಾಹಂದರವನ್ನು ಹೊಂದಿದೆ. ಈ ಕಥೆಯು ಸಂತೋಷ, ದುಃಖ, ನವಿರಾದ ಹಾಸ್ಯ, ನಾಟಕ, ಶೋಷಣೆ, ರಾಜಕೀಯ, ನಿರೀಕ್ಷೆಗಳು, ನಿರ್ಧಾರಗಳು, ಸಂಕೀರ್ಣತೆಗಳು, ಜಾತಿವಾದ, ಅಭಿಪ್ರಾಯಗಳು, ಸ್ನೇಹ, ಸಂಬಂಧಗಳು ಮತ್ತು ಇನ್ನೂ ಅನೇಕ ಮಸಾಲಾಗಳಿಂದ ಕೂಡಿದೆ. ಪ್ರೀತಿಯಿಂದ ಶಾಮಣ್ಣ ಎಂದು ಕರೆಯಲ್ಪಡುವ ಶಾಮ…