Browsing: ಸಿನೆಮಾ

ಸಿನೆಮಾ

ನೀರಿನ ಸಮಸ್ಯೆ ಕುರಿತ ‘ಬೆಟ್ಟದ ದಾರಿ’ ಮಕ್ಕಳ ಚಿತ್ರ

ಉತ್ತರಕರ್ನಾಟಕ ಕೆಲವು ಭಾಗಗಳಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಸರ್ಕಾರದಿಂದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೂ ರಾಜಕೀಯದ ಕೆಸರಾಟದಿಂದ ಮುಂದೇ ಹೋಗುತ್ತಿಲ್ಲ. ಇದನ್ನು ಹೇಳಲು ಕಾರಣವಿದೆ. ’ಬೆಟ್ಟದ ದಾರಿ’ ಎನ್ನುವ ಮಕ್ಕಳ ಸಿನಿಮಾದ ಕತೆಯು ನೀರಿನದ್ದೆ ಆಗಿದೆ. ಕಾಲ್ಪನಿಕ ಬರದ ಊರಿನಲ್ಲಿ ನೀರು ಸಿಗದೆ ಜನರು ಪರದಾಡುತ್ತಿರುತ್ತಾರೆ. ಇದಕ್ಕೆ ಅಲ್ಲಿನ ಮುಖಂಡರು, ಶಾಸಕರು ಪ್ರಯತ್ನಪಟ್ಟರೂ ಪರಿಹಾರ ಸಿಗುವುದಿಲ್ಲ. ಕೊನೆಗೆ ಸ್ಥಳೀಯ ಮಕ್ಕಳು ಸೇರಿಕೊಂಡು ಚಾಣಾಕ್ಷತನದಿಂದ ಇದಕ್ಕೆ ಪರಿಹಾರ ಕಂಡುಹಿಡಿದು ಜನರು ನಿರಾಳರಾಗುವಂತೆ ಮಾಡುತ್ತಾರೆ. ಚಿಣ್ಣರುಗಳು ಇದನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು…

‘ತನುಜಾ’ ಚಿತ್ರಕ್ಕೆ ಬಣ್ಣಹಚ್ಚಿದ ಬಿಎಸ್‌ವೈ

ಈ ಹಿಂದೆ ಅವರೇ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ತನುಜಾ ಎಂಬ ಹೆಣ್ಣುಮಗಳು ಕೋವಿಡ್ ಕಾರಣದಿಂದ ನೀಟ್ ಪರೀಕ್ಷೆ ಬರೆಯಲಾಗದೆ ತನ್ನ ಅಸಹಾಯಕತೆಯನ್ನು ತೋಡಿಕೊಂಡಿದ್ದ ಸಂದರ್ಭದಲ್ಲಿ ಪತ್ರಕರ್ತ ವಿಶ್ವೇಶ್ವರ ಭಟ್ ಹಾಗೂ ಪ್ರದೀಪ್ ಈಶ್ವರ್ ಅವರ ಸಹಕಾರದಿಂದ ಪರೀಕ್ಷೆ ಬರೆದು ನೀಟ್ ಪಾಸಾಗಿದ್ದು ಇಡೀ ದೇಶದ ಗಮನ ಸೆಳೆದಿತ್ತು. ಪರೀಕ್ಷೆ ಬರೆಯಲು ಸುಮಾರು ೩೫೦ಕಿಮೀ ದೂರ ಪ್ರಯಾಣ ಮಾಡಿ ಬಂದು ಪರೀಕ್ಷೆ ಬರೆದಿದ್ದೆ ರೋಚಕತೆಯಿಂದ ಕೂಡಿದ್ದು, ಎಲ್ಲರ ಕುತೂಹಲ ಕೆರಳಿಸಿತು ಇದನ್ನೇ ಒನ್‌ಲೈನ್ ಸ್ಟೋರಿ ಆಗಿಸಿಕೊಂಡು ಸಾಮಾಜಿಕ ಕಳಕಳಿಯುಳ್ಳ ರಾಜ್ಯಪ್ರಶಸ್ತಿ…

ಹಿರಿಯ ಕಲಾವಿದೆ ಭಾರ್ಗವಿ ನಾರಾಣ್ ನಿಧನ

ಬೆಂಗಳೂರು,ಫೆ,14:ಹಿರಿಯ ನಟಿ ಭಾರ್ಗವಿ ನಾರಾಯಣ್ (84)ಇಂದು ಸಂಜೆ  ನಿಧನವಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಸಂಜೆ 7.30ಕ್ಕೆ ನಿಧನ ಹೊಂದಿದ್ದಾರೆ. ಎರಡು ಕನಸು, ಪಲ್ಲವಿ ಅನುಪಲ್ಲವಿ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಪ್ರಖ್ಯಾತ ರಂಗಭೂಮಿ ಹಿರಿಯ ಕಲಾವಿದೆ, ದೂರದರ್ಶನ ಧಾರವಾಹಿಗಳ ಮೌಲ್ಯಯುತ ಪಾತ್ರಗಳ ನಿರ್ವಹಣೆಯ ಅನುಭವಿಕ ಪಾತ್ರಧಾರಿ ಎಂದೇ ಪ್ರಸಿದ್ಧರಾಗಿರುವ ಭಾರ್ಗವಿ ನಾರಾಯಣ್ ಅವರು ಫೆಬ್ರುವರಿ 4, 1938ರ ವರ್ಷದಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ತಂದೆ ಡಾ. ಎಂ. ರಾಮಸ್ವಾಮಿ, ತಾಯಿ ನಾಮಗಿರಿಯಮ್ಮ. ಮಹಾರಾಣಿ ಕಾಲೇಜಿನಿಂದ ಬಿ.ಎಸ್ಸಿ.…

ಭೂದಾನಚಿತ್ರದಲ್ಲಿರಾಜಕುಮಾರ್‌ತಂದೆ, ಉದಯಕುಮಾರ್ ಮತ್ತುಕಲ್ಯಾಣಕುಮಾರ್ ಮಕ್ಕಳು

ಭೂದಾನಚಿತ್ರದಲ್ಲಿರಾಜಕುಮಾರ್‌ತಂದೆ, ಉದಯಕುಮಾರ್ ಮತ್ತುಕಲ್ಯಾಣಕುಮಾರ್ ಮಕ್ಕಳು ರಾಜಕುಮಾರ್, ಕಲ್ಯಾಣಕುಮಾರ್ ಹಾಗೂ ಉದಯಕುಮಾರ್ ಮೂರೂ ಮಂದಿ ನಾಯಕ ನಟರು ಪೂರ್ಣ ಪ್ರಮಾಣದಲ್ಲಿಒಂದೇಚಿತ್ರದಲ್ಲಿಅಭಿನಯಿಸಿದ ಭೂದಾನ ಕಪ್ಪುಬಿಳುಪು ಸಾಮಾಜಿಕಕಥಾ ಹಂದರದಚಿತ್ರಅನಂತಲಕ್ಷ್ಮೀ ಪಿಕ್ಚರ್ ಲಾಂಛನದಲ್ಲಿ೧೯೬೨ರಲ್ಲಿತೆರೆಕಂಡಿತು. ಪಿ.ಎನ್.ಗೋಪಾಲಕೃಷ್ಣ ಹಾಗೂ ಜಿ.ವಿ.ಅಯ್ಯರ್‌ಜಂಟಿಯಾಗಿ ನಿರ್ಮಾಣ ಮಾಡಿದ ಈ ಚಿತ್ರವನ್ನು ಮೊದಲ ಬಾರಿಗೆ ಜಿ.ವಿ.ಅಯ್ಯರ್ ನಿರ್ದೇಶಿಸಿದರಲ್ಲದೆ, ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಗೀತೆಗಳನ್ನು ರಚಿಸಿದರು. ಎಸ್.ಕೆ.ಭಗವಾನ್ ಹಾಗೂ ರಾಮಚಂದ್ರ ಸಹಾಯಕ ನಿರ್ದೇಶಕರಾಗಿಕಾರ್ಯನಿರ್ವಹಿಸಿದರು. ಉಳಿದಂತೆ ಅಶ್ವತ್, ನರಸಿಂಹರಾಜು, ಬಾಲಕೃಷ್ಣ, ಹೆಚ್.ರಾಮಚಂದ್ರಶಾಸ್ತ್ರಿ, ಲೀಲಾವತಿ, ಆದವಾನಿ ಲಕ್ಷ್ಮಿದೇವಿ ಮುಂತಾದವರುಅಭಿನಯಿಸಿದರು.ಜಿ.ಕೆ.ವೆಂಕಟೇಶ್ ಸಂಗೀತ ನೀಡಿದಚಿತ್ರದಲ್ಲಿ ಪುರಂದರದಾಸರಭಾಗ್ಯಾದ…

ಜ.26ರಂದು “ಬಡವ ರಾಸ್ಕಲ್” ಚಿತ್ರ ವೂಟ್‌ ಸೆಲೆಕ್ಟ್‌ ಓಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ ರಿಲೀಸ್

ಚಿತ್ರ ಮಂದಿರಗಳಲ್ಲಿ ಭರ್ಜರಿ ಯಶಸ್ಸು ಕಂಡ ಡಾಲಿ ದನಂಜಯ್ ಅಭಿನಯದ “ಬಡವ ರಾಸ್ಕಲ್” ಸಿನಿಮಾ ಜನವರಿ ೨೬ರಂದು “ವೂಟ್ ಸೆಲೆಕ್ಟ್” ಓಟಿಟಿ ಫ್ಲಾಟ್‌ಫಾರ್ಮ್ನಲ್ಲಿ ಬಿಡುಗಡೆಯಾಗುತ್ತಿದೆ. ಶಂಕರ್ ಗುರು ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರವು ರೊಮ್ಯಾಂಟಿಕ್ ಡ್ರಾಮದಲ್ಲಿ ಧನಂಜಯ್, ಅಮೃತ ಅಯ್ಯಂಗಾರ್, ರಂಗಾಯಣ ರಘು ಹಾಗೂ ತಾರಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸ್ವರ್ಶ ರೇಖಾ, ನಾಗಭೂಷಣ್, ಪೂರ್ಣ ಚಂದ್ರ ಮತ್ತು ಮಾಸ್ತಿ ಮಂಜು ಕೂಡ ಬಣ್ಣಹಚ್ಚಿದ್ದಾರೆ. ಶ್ರೀಮಂತ ರಾಜಕಾರಣಿಯ ಮಗಳು ಸಂಗೀತಾ (ಅಮೃತ) ಮತ್ತುಮಧ್ಯಮ ವರ್ಗ ಕುಟುಂಬದ…

ರಾಜಕುಮಾರ್‌ಅರ್ಜುನನಾಗಿ ಅಭಿನಯಿಸಿದ ನಾಗಾರ್ಜುನ

ರಾಜಕುಮಾರ್‌ಅರ್ಜುನನಾಗಿ ಅಭಿನಯಿಸಿದ ನಾಗಾರ್ಜುನ ಮಹಾಭಾರತದ ಪ್ರಸಂಗವೊಂದನ್ನು ಆಧರಿಸಿದ, ರಾಜಕುಮಾರ್‌ಅರ್ಜುನನಾಗಿ ಅಭಿನಯಿಸಿದ ಕಪ್ಪುಬಿಳುಪು ಪೌರಾಣಿಕಚಿತ್ರನಾಗಾರ್ಜುನ ನಂದಿ ಪಿಕ್ಚsರ್ಸ್ ಲಾಂಛನದಲ್ಲಿ ೧೯೬೧ರಲ್ಲಿ ತೆರೆಗೆ ಬಂದಿತು. ಕೆ.ಎನ್.ಮಲ್ಲಿಕಾರ್ಜುನ ನಿರ್ಮಾಣದ ಈ ಚಿತ್ರವನ್ನುಕನ್ನಡದ ಮೊದಲ ಮಾತನಾಡುವಚಿತ್ರಸತಿ ಸುಲೋಚನ ನಿರ್ದೇಶನ ಮಾಡಿದ ವೈ.ವಿ.ರಾವ್ ನಿರ್ದೇಶಿಸಿದರು. ಆರ್.ಶ್ರೀನಿವಾಸ್ ಹಾಗೂ ಕುಂದಾನಿ ಸತ್ಯನ್ ಸಹಾಯಕ ನಿರ್ದೇಶಕರಾಗಿದ್ದರು. ರಾಜಕುಮಾರ್, ವರಲಕ್ಷ್ಮಿ, ವಿ.ನಾಗಯ್ಯ, ಸಂಧ್ಯಾ, ಕಾಂತಾರಾವ್, ಕೆ.ಎಸ್.ಅಶ್ವತ್, ಹರಿಣಿ, ನರಸಿಂಹರಾಜು, ರಾಜನಾಲ, ರಾಘವೇಂದ್ರರಾವ್, ರಮಾದೇವಿ ಮುಂತಾದವರುಅಭಿನಯಿಸಿದ ಈ ಚಿತ್ರದಲ್ಲಿ ಮದರಾಸು ಸಹೋದರಿಯರು ನೃತ್ಯ ಪ್ರದರ್ಶನ ನೀಡಿದ್ದರು. ರಾಜಕುಮಾರ್‌ಅರ್ಜುನನಾಗಿ, ವರಲಕ್ಷ್ಮಿಉಲೂಚಿಯಾಗಿ, ಕಾಂತಾರಾವ್…

ಆರ್.ಎನ್.ಸುದರ್ಶನ್‌ಚಿತ್ರರಂಗ ಪ್ರವೇಶಿಸಿದ ‘ವಿಜಯನಗರದ ವೀರಪುತ್ರ‘

ಆರ್.ಎನ್.ಸುದರ್ಶನ್‌ಚಿತ್ರರಂಗ ಪ್ರವೇಶಿಸಿದ ‘ವಿಜಯನಗರದ ವೀರಪುತ್ರ‘ ಆರ್.ನಾಗೇಂದ್ರರಾಯರು ತಮ್ಮ ಸ್ವಂತ ನಿರ್ಮಾಣ ಸಂಸ್ಥೆ ‘ಆರ್.ಎನ್.ಆರ್.ಪಿಕ್ಚರ‍್ಸ್‘ ಲಾಂಛನದಲ್ಲಿ ತೆರೆಗೆ ತಂದ ಕಪ್ಪು ಬಿಳುಪು ಚಿತ್ರ ‘ವಿಜಯನಗರದ ವೀರಪುತ್ರ‘ ೧೯೬೧ರಲ್ಲಿ ತೆರೆಕಂಡಿತು. ನಾಗೇಂದ್ರರಾಯರ ಪುತ್ರ ಆರ್.ಎನ್.ಸುದರ್ಶನ್ ಚಿತ್ರರಂಗಕ್ಕೆ ಪದರ್ಪಿಸಿದ ಚಿತ್ರವೆಂಬ ಹೆಗ್ಗಳಿಕೆಗೆ ಚಿತ್ರ ಪಾತ್ರವಾಗಿದೆ. ಸ್ವತಃಆರ್.ನಾಗೇಂದ್ರರಾಯರೇ ನಿರ್ದೇಶಿಸಿದ ಈ ಚಿತ್ರಕೆ ಅವರ ಮತ್ತೊಬ್ಬ ಪುತ್ರ ಆರ್.ಎನ್.ಕೃಷ್ಣಪ್ರಸಾದರು ವಿ.ಮನೋಹರ್‌ಅವರೊಂದಿಗೆ ಸೇರಿ ಛಾಯಾಗ್ರಹಣ ನೀಡಿದ್ದಾರೆ. ಎನ್.ಲಕ್ಷ್ಮಿನಾರಾಯಣ್ ಹಾಗೂ ವಿ.ಸೋಮಶೇಖರ್ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜಗುರುವರಾಯನ ಪಾತ್ರದಲ್ಲಿ ಆರ್.ನಾಗೇಂದ್ರರಾವ್, ಆತನ ಪುತ್ರ…

ಡಿಸೆಂಬರ್ 24 ಆಡಿಯೋ ಬಿಡುಗಡೆ

ಎಂಜಿ ಎನ್ ಪ್ರೊಡಕ್ಷನ್ ತಯಾರಾಗುತ್ತಿರುವ ಡಿಸೆಂಬರ್ 24 ಚಿತ್ರಕ್ಕೆ ದೇವು ಹಾಸನ್ ಇದೇ ಮೊದಲಬಾರಿಗೆ ಸಿನಿಮಾ ನಿರ್ಮಾಪಕರಾಗುತ್ತಿದ್ದಾರೆ. ಹುಲಿಯೂರು ದುರ್ಗದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಅವರು ನಿರ್ಮಾಣ ಮಾಡಿರುವ ಚಿತ್ರ ಡಿಸೆಂಬರ್‌ 24. ಹಾರರ್, ಥ್ರಿಲ್ಲರ್, ಕಥಾನಕ ಹೊಂದಿರುವ ಈ ಚಿತ್ರದ ಮೋಷನ್ ಪೋಸ್ಟರ್ ಹಾಗೂ ಆಡಿಯೋ ಬಿಡುಗಡೆ ಕಾರ್ಯಕ್ರಮ ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನೆರವೇರಿತು. ನಟ ಶ್ರೀನಗರ ಕಿಟ್ಟಿ ಮುಖ್ಯ ಅತಿಥಿಯಾಗಿ ಆಗಮಿಸಿ ಶುಭ ಕೋರಿದರು. ನಾಗರಾಜ್ ಎಂಜಿ ಗೌಡ ಕಥೆ, ಚಿತ್ರಕಥೆ…

ಶ್ರೀ ಶೈಲ ಮಹಾತ್ಮೆಯಲ್ಲಿಬಾಲನಟಿಯಾಗಿಜಯಲಲಿತ ಮಾಯಾಮಂತ್ರಗಳ ಚಿತ್ರಆಶಾಸುಂದರಿ

ಶ್ರೀ ಶೈಲ ಮಹಾತ್ಮೆಯಲ್ಲಿಬಾಲನಟಿಯಾಗಿಜಯಲಲಿತ ಮಾಯಾಮಂತ್ರಗಳ ಚಿತ್ರಆಶಾಸುಂದರಿ ಶ್ರೀಶೈಲ ಮಹಾತ್ಮೆಚಿತ್ರದಲ್ಲಿ ಪಾತ್ರವೊಂದನ್ನು ಮಾಡಿದ್ದ ನಟಿ ಸಂಧ್ಯಾ ಮದರಾಸಿನ ಸ್ಟುಡಿಯೊದಲ್ಲಿಚಿತ್ರೀಕರಣ ನಡೆಯುತ್ತಿದ್ದ ವೇಳೆ ತಮ್ಮ ಮಗಳನ್ನು ಕರೆದುಕೊಂಡು ಹೋಗಿದ್ದರು. ಬೆಂಗಳೂರಿನ ಕಾನ್ವೆಂಟ್‌ಒಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಈ ಬಾಲೆ ಚಿತ್ರೀಕರಣವನ್ನುಕುತೂಹಲದಿಂದ ನೋಡುತ್ತಾ ಕುಳಿತಿದ್ದಳು.ಬಾಲನಟಿಯಾಗಿನೃತ್ಯದ ಪಾತ್ರ ನಿರ್ವಹಿಸಬೇಕಾಗಿದ್ದ ಶಾಲಾ ಬಾಲಕಿಯೊಬ್ಬಳು ಅಂದಿನ ಚಿತ್ರೀಕರಣಕ್ಕೆಗೈರುಹಾಜರಾಗಿದ್ದುಚಿತ್ರದ ನಿರ್ಮಾಪರು ಹಾಗೂ ನಿರ್ದೇಶಕರಲ್ಲಿ ತಳಮಳ ತಂದಿತ್ತು. ನಿರ್ದೇಶಕಆರೂರು ಪಟ್ಟಾಭಿಯವರಕಣ್ಣಿಗೆಚಿತ್ರೀಕರಣ ವೀಕ್ಷಿಸುತ್ತಿದ್ದ ಬಾಲಕಿ ಕಾಣಿಸಿದಳು. ತಾಯಿ ಸಂಧ್ಯಾಅವರೊಂದಿಗೆ ಮಾತನಾಡಿ ಪಾತ್ರ ನಿರ್ವಹಿಸಲು ಸಮ್ಮತಿ ಪಡೆದು, ಬಣ್ಣ ಹಚ್ಚಿಸಿದರು. ಆ ಬಾಲಕಿ…

ಗಂಡುಲಿ ಚಿತ್ರದ ಟ್ರೈಲರ್ ಬಿಡುಗಡೆ

ಕೆಲವರ್ಷಗಳ ಹಿಂದೆ ಇಂಜಿನಿಯರ್ಸ್ ಎಂಬ ಚಿತ್ರ ಬಂದಿತ್ತು. ಅದರ ನಿರ್ದೇಶಕ ಹಾಗೂ ನಾಯಕನೂ ಆಗಿದ್ದ ವಿನಯ್ ರತ್ನಸಿದ್ಧಿ ಅವರೀಗ ಮತ್ತೊಂದು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇನ್ನೇನು ತೆರೆಗೆ ಬರಲು ಅಣಿಯಾಗಿ ನಿಂತಿರುವ ಈ ಚಿತ್ರದ ಹೆಸರು ಗಂಡುಲಿ. ‌ವಿನಯ್ ರತ್ನಸಿದ್ದಿ ಜೊತೆ ನಾಯಕಿಯಾಗಿ ಛಾಯಾದೇವಿ ನಟಿಸಿದ್ದು, ನಾಯಕನ ತಾಯಿಯ ಪಾತ್ರವನ್ನು ಹಿರಿಯ ಕಲಾವಿದೆ ಸುಧಾನರಸಿಂಹರಾಜು ನಿರ್ವಹಿಸಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಹೆಚ್ಚು ಹೆಚ್ಚು ವೀಕ್ಷಣೆಯಾಗುವ ಮೂಲಕ ಜನರಲ್ಲಿ ಕುತೂಹಲ ಮೂಡಿಸಿದೆ. ಅಲ್ಲದೆ ಚಿತ್ರವನ್ನು ಬರುವ…

ಪಂತುಲು ನಿರ್ಮಿಸಿದ ಸುಂದರ ಐತಿಹಾಸಿಕ ಚಿತ್ರ ಕಿತ್ತೂರು ಚೆನ್ನಮ್ಮ

ಪಂತುಲು ನಿರ್ಮಿಸಿದ ಸುಂದರ ಐತಿಹಾಸಿಕ ಚಿತ್ರ ಕಿತ್ತೂರು ಚೆನ್ನಮ್ಮ ‘ಕಿತ್ತೂರು ಚೆನ್ನಮ್ಮ‘ ಬಿ.ಆರ್.ಪಂತುಲು ತಮ್ಮ ‘ಪದ್ಮಿನಿ ಪಿಕ್ಚರ್ಸ್‘ ಲಾಂಛನದಲ್ಲಿ ನಿರ್ಮಿಸಿ, ನಿರ್ದೇಶಿಸಿದ ಕಪ್ಪು ಬಿಳುಪು ಐತಿಹಾಸಿಕ ಚಿತ್ರ. ೧೯೬೧ರಲ್ಲಿ ತೆರೆಗೆ ಬಂದಿತು. ರಾಜಕುಮಾರ್ ಮೊದಲ ಬಾರಿಗೆ ಪಂತುಲು ಚಿತ್ರದಲ್ಲಿ ಅಭಿನಯಿಸಿದರು. ‘ಕಿತ್ತೂರು ಚೆನ್ನಮ್ಮ‘ನ ಪಾತ್ರದಲ್ಲಿ ಬಿ.ಸರೋಜಾದೇವಿ ಅಭಿನಯ ನೀಡಿದ್ದರು. ಇನ್ನೂ ಹರೆಯದ ವಯಸ್ಸಿನಲ್ಲಿದ್ದರೂ ಸರೋಜಾದೇವಿಯವರು ಪ್ರೌಢ ವಯಸ್ಸಿನ, ಗಂಭೀರ ಗುಣಗಳನ್ನು ಹೊಂದಿದ್ದ ಚೆನ್ನಮ್ಮನ ಪಾತ್ರದಲ್ಲಿ ಅತ್ಯಂತ ಸಹಜವಾಗಿ ಅಭಿನಯಿಸಿದ್ದರು. ರಾಜಕುಮಾರ್ ಕಿತ್ತೂರಿನ ರಾಜ ಮಲ್ಲಸರ್ಜನಾಗಿ ಅಭಿನಯಿಸಿದ್ದು, ರುದ್ರಾಂಬೆಯಾಗಿ…

ಡಿಸೆಂಬರ್ 18 ರಂದು ಗಂಡುಲಿ ಚಿತ್ರದ ಟ್ರೈಲರ್ ಬಿಡುಗಡೆ

‌‌‌‌‌ ವಿನಯ್ ರತ್ನಸಿದ್ದಿ ಅವರ ನಿರ್ದೇಶನವಿರುವ ಗಂಡುಲಿ ಚಿತ್ರವೀಗ ಬಿಡುಗಡೆಯ ಹಂತ ತಲುಪಿದ್ದು ಚಿತ್ರದ ಟ್ರೈಲರ್‌ ಇದೆ ಶನಿವಾರ ಬಿಡುಗಡೆಯಾಗಲಿದೆ. ಗಂಡುಲಿ ಚಲನಚಿತ್ರವು ಕುಟುಂಬ ಸಮೇತ ಕೂತು ನೋಡುವಂತ ಚಲನಚಿತ್ರವಾಗಿದ್ದು, ಇದು ಆಕ್ಶನ್, ಸಸ್ಪೆನ್ಸ್, ಕಾಮಿಡಿ ಮತ್ತು ಫ್ಯಾಮಿಲಿ ಸೆಂಟಿಮೆಂಟ್ ಇಂದ ಕೂಡಿದೆ. ಇದರಲ್ಲಿ 5 ಆಕ್ಶನ್ಗಳಿದ್ದು, 3 ಹಾಡುಗಳಿದ್ದು. ನಾಯಕನ ಪಾತ್ರವನ್ನೂ ಕೂಡ ನಿರ್ದೇಶಕ ವಿನಯ್ ಅವರೇ ನಿರ್ವಹಿಸಿದ್ದಾರೆ. ಟೈಟಲ್ ಸಾಂಗ್ ಅನ್ನು “ಅನಿರುದ್ ಶಾಸ್ತ್ರಿ” ರವರು ಹಾಡಿದ್ದು, ಡುಯೆಟ್ ಸಾಂಗ್ ಅನ್ನು “ವಿಜಯ್ ಪ್ರಕಾಶ್”…

ರಾಜ್‌ಕುಮಾರ್ ಅತ್ಯುದ್ಬುತ ಅಭಿನಯದ ಭಕ್ತಕನಕದಾಸ

ರಾಜ್‌ಕುಮಾರ್ ಅತ್ಯುದ್ಬುತ ಅಭಿನಯದ ಭಕ್ತಕನಕದಾಸ ಶ್ಯಾಮಪ್ರಸಾದ್ ಮೂವೀಸ್ ಲಾಂಛನದಲ್ಲಿ ೧೯೬೦ರಲ್ಲಿ ತೆರೆ ಕಂಡ ಕಪ್ಪು-ಬಿಳುಪು ಭಕ್ತಿಪ್ರಧಾನ ಚಿತ್ರ ಭಕ್ತ ಕನಕದಾಸ ವೈ.ಆರ್.ಸ್ವಾಮಿ ನಿರ್ದೇಶಿಸಿದರು. ಬೆಂಗಳೂರಿನ ಅಬಕಾರಿ ಕಂಟ್ರಾಕ್ಟರ್ ಡಿ.ಆರ್.ನಾಯ್ಡು ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ರಾಜಕುಮಾರ್ ಅತ್ಯುತ್ತಮ ಅಭಿನಯದ ಉತ್ಕೃಷ್ಟ ಚಿತ್ರವಾದ ಭಕ್ತ ಕನಕದಾಸ ಚಿತ್ರ ಕೇಂದ್ರ ಸರ್ಕಾರದ ಅರ್ಹತಾ ಪ್ರಶಸ್ತಿ ಪಡೆಯಿತು. ರಾಜಕುಮಾರ್ ಅವರೊಂದಿಗೆ ಉದಯಕುಮಾರ್, ಕೃಷ್ಣಕುಮಾರಿ, ಕೆ.ಎಸ್.ಅಶ್ವತ್ಥ್, ಹೆಚ್.ರಾಮಚಂದ್ರಶಾಸ್ತ್ರಿ, ಜಯಾ, ಸೋರಟ್ ಅಶ್ವತ್ಥ್, ಸಿ.ವಿ.ಶಿವಶಂಕರ್, ರತ್ನಾಕರ್, ವಾಸುದೇವ ಗಿರಿಮಾಜಿ, ಎಂ.ಎಸ್.ಸುಬ್ಬಣ್ಣ, ಜಯಶ್ರೀ, ಲಕ್ಷ್ಮೀದೇವಿ ಅಭಿನಯಿಸಿದರು.…

ಶಿವಾಜಿ ಗಣೇಶನ್ ಅಭಿನಯದ ಪಂತುಲು ನಿರ್ಮಾಣದ ಮಕ್ಕಳ ರಾಜ್ಯ

ಶಿವಾಜಿ ಗಣೇಶನ್ ಅಭಿನಯದ  ಪಂತುಲು ನಿರ್ಮಾಣದ ಮಕ್ಕಳ ರಾಜ್ಯ ಬಿ.ಆರ್.ಪಂತುಲು ನಿರ್ಮಿಸಿ ನಿರ್ದೇಶಿಸಿದ ಕಪ್ಪು-ಬಿಳುಪು ಜಾನಪದ ಕಥಾ ಹಂದರದ ‘ಮಕ್ಕಳ ರಾಜ್ಯ‘ ಚಲನಚಿತ್ರ ೧೯೬೦ರಲ್ಲಿ ತೆರೆಗೆ ಬಂದಿತು. ಬಿ.ಆರ್.ಪಂತುಲು ಅವರ ಪದ್ಮಿನಿ ಪಿಕ್ಚರ್ಸ್ ಜೊತೆಯಲ್ಲಿ ಎಂ.ವಿ.ರಾಜಮ್ಮನವರ ಎಂ.ವಿ.ಆರ್ ಪ್ರೊಡಕ್ಷನ್ಸ್ ಜೊತೆಯಾಗಿ ಈ ಚಿತ್ರವನ್ನು ನಿರ್ಮಿಸಿದರು, ಮಕ್ಕಳ ಪಾತ್ರಗಳನ್ನೇ ಪ್ರಧಾನವಾಗಿಟ್ಟುಕೊಂಡು ತಯಾರಾದ ಮೊದಲ ಚಿತ್ರ ಇದು. ಈ ಚಿತ್ರದಲ್ಲಿ ಹಿರಿಯ ನಟರ ಅಭಿನಯಕ್ಕಿಂತಲೂ ಮಕ್ಕಳ ಅಭಿನಯವೇ ಪ್ರಮುಖವಾಗಿತ್ತು. ಆ ಕಾಲಕ್ಕೆ ಇದೊಂದು ಪ್ರಯೋಗಾತ್ಮಕ ಚಿತ್ರವೆಂದೇ ಹೇಳಬಹುದಿತ್ತು. ಎಸ್.ಆರ್.ಪುಟ್ಟಣ್ಣ ಕಣಗಾಲ್…

ಕತ್ತಿವರಸೆಯಲ್ಲ್ಲಿ ವಿಸ್ಮಯ ಮೂಡಿಸಿದ ರಾಜಕುಮಾರ್ ಕಲಾವಿದರಿಗೆ ಆಶ್ರಯ ನೀಡಿದ್ದ ಗುಗ್ಗುಮಹಲ್

ಕತ್ತಿವರಸೆಯಲ್ಲ್ಲಿ ವಿಸ್ಮಯ ಮೂಡಿಸಿದ ರಾಜಕುಮಾರ್  ಕಲಾವಿದರಿಗೆ ಆಶ್ರಯ ನೀಡಿದ್ದ ಗುಗ್ಗುಮಹಲ್ ಗಿರಿಜಾ ಮತ್ತು ಸೂರ್ಯಪ್ರಭಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ೧೯೬೦ರಲ್ಲಿ ಬಿಡುಗಡೆಗೊಂಡ ರಾಣಿ ಹೊನ್ನಮ್ಮ ಕಪ್ಪು ಬಿಳುಪು ಜಾನಪದ ಚಿತ್ರವನ್ನು ಟಿ.ಎಸ್.ಕರಿಬಸಯ್ಯ ನಿರ್ಮಿಸಿದರು. ಕು.ರ.ಸೀತಾರಾಮಶಾಸ್ತ್ರಿ ನಿರ್ದೇಶಿಸಿದ ಈ ಚಿತ್ರಕ್ಕೆ ಎಸ್.ರಾಮನಾಥನ್ ಮತ್ತು ಬಿ.ಎಸ್. ವಿಶ್ವನಾಥ್ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ರಾಜಕುಮಾರ್, ಲೀಲಾವತಿ, ಲಲಿತಾರಾವ್, ಬಾಲಕೃಷ್ಣ, ನರಸಿಂಹರಾಜು, ಲಕ್ಷ್ಮಿ, ವೀರಭದ್ರಯ್ಯ, ಈಶ್ವರಪ್ಪ, ಸುಬ್ಬಣ್ಣ, ರಾಮಚಂದ್ರಶಾಸ್ತ್ರಿ, ಗುಗ್ಗು, ಜಿ.ವಿ.ಅಯ್ಯರ್, ಶಿವಾಜಿರಾವ್ ಅಭಿನಯಿಸಿದರು. ಕು.ರ.ಸೀತಾರಾಮಶಾಸ್ತ್ರಿ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಗೀತೆಗಳನ್ನು ರಚಿಸಿದರು.…

ಇಂದು ಪುನೀತ್ ನುಡಿನಮನ ಕಾರ್ಯಕ್ರಮ

ಬೆಂಗಳೂರು,ನ,೧೬: ಇತ್ತೀಚೆಗೆ ನಿಧನರಾದ ನಟ ಪುನೀತ್ ರಾಜಕುಮಾರ್ ಅವರ ಅಗಲಿಕೆ ಹಿನ್ನೆಲೆಯಲ್ಲಿ ಕರ್ನಾಟಕ ವಾಣಿಜ್ಯ ಮಂಡಳಿ ನಮನ ಸಲ್ಲಿಸಲಿದೆ ಇಂದು ಅರಮನೆ ಮೈದಾನದಲ್ಲಿ ನಡೆಯಲಿರುವ ಪುನೀತ್ ನಮನ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಸಜ್ಜಾಗಿದ್ದು ಮಧ್ಯಾಹ್ನ ಮೂರು ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು ಆರು ಗಂಟೆಯವರೆಗೂ ನಡೆಯಲಿದೆ ಪುನೀತ್ ನಮನ ಕಾರ್ಯಕ್ರಮದ ರೂಪು-ರೇಷೆಗಳು ಈಗಾಗಲೇ ಫೈನಲ್ ಆಗಿದೆ. ಡಾ. ನಾಗೇಂದ್ರ ಪ್ರಸಾದ್ ಬರೆದ ಸಾಹಿತ್ಯಕ್ಕೆ ಗುರುಕಿರಣ್ ರಾಗ ಸಂಯೋಜಿಸಿದ್ದಾರೆ. ಈ ಗೀತೆಯ ಮೂಲಕವೇ ಪುನೀತ್ ನಮನ ಕಾರ್ಯಕ್ರಮ ಆರಂಭಗೊಳ್ಳಲಿದೆ. ಸ್ಯಾಂಡಲ್‌ವುಡ್…

ರಾಗಿಣಿ ನಟನೆಯ “ಸಾರಿ” ಚಿತ್ರಕ್ಕೆ ಚಾಲನೆ

ಆ್ಯಕ್ಷನ್, ಕ್ರೈಂ, ಥ್ರಿಲ್ಲರ್ ಕಥಾಹಂದರ ಒಳಗೊಂಡಿರುವ ಸಾರಿ (ಕರ್ಮ ರಿಟರ್ನ್ಸ್) ಎಂಬ ನಾಯಕಿ ಪ್ರಧಾನ ಚಿತ್ರದ ಮೂಲಕ ನಟಿ ರಾಗಿಣಿ ದ್ವಿವೇದಿ ಅವರು ಬಹಳ ದಿನಗಳ ನಂತರ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಈ ಹಿಂದೆ ಮಾಡಿರದ ವಿಶೇಷ ಪಾತ್ರದಲ್ಲಿ ರಾಗಿಣಿ ಕಾಣಿಸಿಕೊಳ್ಳಲಿದ್ದಾರೆ. ಕಿಸ್ ಇಂಟರ್ನ್ಯಾಷನಲ್ ಪ್ರೊಡಕ್ಷನ್ (ಕೆನಡ)ಅಡಿಯಲ್ಲಿ ಆದ‌ ನವೀನ್ ಕುಮಾರ್ (ಕೆನಡಾ ) ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಬ್ರಹ್ಮ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ ಮಾಗಡಿ ರಸ್ತೆಯ,ಮಾಚೋಹಳ್ಳಿ ಇರುವ…

ನ.೧೬ ರಂದು ಬೆಂಗಳೂರಿನಲ್ಲಿ ‘ಪುನೀತ್ ನಮನ’ ಕಾರ್ಯಕ್ರಮ.

ಬೆಂಗಳೂರು,ನ, ೩: ಅಕಾಲಿಕ ಮರಣಕ್ಕೆ ತುತ್ತಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸಲು ಕನ್ನಡ ಚಿತ್ರೋದ್ಯಮ ನವೆಂಬರ್ ೧೬ ರಂದು ‘ಪುನೀತ್ ನಮನ’ ಕಾರ್ಯಕ್ರಮವನ್ನು ಆಯೋಜಿಸಿದೆ. ಸ್ಯಾಂಡಲ್ ವುಡ್ ವತಿಯಿಂದ ನವೆಂಬರ್ ೧೬ ರಂದು ೩ ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪುನೀತ್ ನಮನ ಕಾರ್ಯಕ್ರಮ ನಡೆಯಲಿದ್ದು, ಅಂದು ಸ್ಯಾಂಡಲ್ ವುಡ್ ನಟರು, ಕಲಾವಿದರು, ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿ ನಟ ಅಪ್ಪು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ. ಆದರೆ ಈಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಅವಕಾಶವಿಲ್ಲ ಕೇವಲ…

ರಾಷ್ಟ್ರಪತಿ ಪ್ರಶಸ್ತಿಗೆ ಭಾಜನವಾದರಾಜಕುಮಾರ್‌ಅಭಿನಯದಜಗಜ್ಯೋತಿ ಬಸವೇಶ್ವರ

ರಾಷ್ಟ್ರಪತಿ ಪ್ರಶಸ್ತಿಗೆ ಭಾಜನವಾದರಾಜಕುಮಾರ್‌ಅಭಿನಯದಜಗಜ್ಯೋತಿ ಬಸವೇಶ್ವರ ಶಶಿಕಲಾ ಚಿತ್ರ ಲಾಂಛನದಲ್ಲಿಐತಿಹಾಸಿಕ ಕಪ್ಪು-ಬಿಳುಪು ಚಿತ್ರಜಗಜ್ಯೋತಿ ಬಸವೇಶ್ವರ ೧೯೫೯ರಲ್ಲಿ ತೆರೆಗೆ ಬಂದಿತು. ಟಿ.ವಿ.ಸಿಂಗ್ ಠಾಕೂರ್ ನಿರ್ದೇಶನದಚಿತ್ರಕ್ಕೆ ಜಿ.ವಿ. ಅಯ್ಯರ್ ಹಾಗೂ ಭಗವಾನ್ ಸಹಾಯಕ ನಿರ್ದೇಶಕರಾಗಿಕಾರ್ಯನಿರ್ವಹಿಸಿದರು.ಈ ಚಿತ್ರ ರಾಷ್ಟ್ರಪತಿಗಳ ಅರ್ಹತಾಪತ್ರ ಪ್ರಶಸ್ತಿಗೆ ಭಾಜನವಾಯಿತು.ದೊರೆ ಭಗವಾನ್‌ಖ್ಯಾತಿಯ ಭಗವಾನ್ ಈ ಚಿತ್ರದ ಮೂಲಕ ಸಹಾಯಕ ನಿರ್ದೇಶಕರಾಗಿಚಿತ್ರರಂಗ ಪ್ರವೇಶಿಸಿದರು. ಹೊನ್ನಪ್ಪ ಭಾಗವತರ್, ರಾಜಕುಮಾರ್, ಅನಿಲ್‌ಕುಮಾರ್, ಚಿ.ಉದಯಶಂಕರ್, ಚಂದ್ರಯ್ಯಸ್ವಾಮಿ, ಕೆ.ಎಸ್.ಅಶ್ವತ್, ಬಿ.ಸರೋಜಾದೇವಿ, ಟಿ.ಎನ್.ಬಾಲಕೃಷ್ಣ, ಜಿ.ವಿ.ಅಯ್ಯರ್, ಸಂಧ್ಯಾ, ಲೀಲಾವತಿ, ಚಿ.ಸದಾಶಿವಯ್ಯ, ನರಸಿಂಹರಾಜು, ಹೆಚ್.ರಾಮಚಂದ್ರಶಾಸ್ತ್ರಿ, ಈಶ್ವರಪ್ಪ, ವೀರಭದ್ರಪ್ಪ, ವೆಂಕಟಸುಬ್ಬಯ್ಯ, ಆರ್.ಎನ್.ಮಾಗಡಿ, ಹುಲಿಮನೆಸೀತಾರಾಮಶಾಸ್ತ್ರಿ,…

‘ಓ ಮೈ ಲವ್’ ಚಿತ್ರಕ್ಕೆ ಏನಾಯ್ತೋ ಕಾಣೆ ಹಾಡಿನ ಚಿತ್ರೀಕರಣ

ಜಿಸಿಬಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಜಿ. ರಾಮಾಂಜಿನಿ ಕಥೆ ಬರೆದು ಬಹುಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಓ ಮೈ ಲವ್ ಚಿತ್ರಕ್ಕೆ ಕಳೆದ ವಾರ ವಿ. ನಾಗೇಂದ್ರ ಪ್ರಸಾದ್ ರಚಿಸಿದ “ ಏನಾಯ್ತೋ ಕಾಣೆ.. ಏನಾಯ್ತೋ ಕಾಣೆ ತಂಗಾಳಿ ಸುರಿದಂತೆ ತಂಪಾದೆ ನಾನೆ….” ಹಾಡನ್ನು ವಿ. ಮುರಳಿ ನೃತ್ಯ ನಿರ್ದೇಶನದಲ್ಲಿ ನಾಯಕ ಅಕ್ಷಿತ್ ಶಶಿಕುಮಾರ್, ನಾಯಕಿ ಕೀರ್ತಿ ಕಲ್ಕರೆ, ದೀಪಿಕಾ ಆರಾದ್ಯ ,ಅಕ್ಷತಾ ,ಶೌರ್ಯ. ಸುವೇದ್ ಅಭಿನಯಿಸಿದಈ ಹಾಡನ್ನು ಯಲಹಂಕದ ನಿಟ್ಟಿ ಮೀನಾಕ್ಷಿ ಕಾಲೇಜಿನಲ್ಲಿ ಚಿತ್ರೀಕರಿಸಲಾಯಿತು. ಚಿತ್ರೀಕರಣದೊಂದಿಗೆ ಸುಮಾರ್…

1 2 3 4 5 6 8
error: Content is protected !!