Browsing: ರಾಜ್ಯ

ರಾಜ್ಯ

ಸಿಡಿ ಪ್ರಕರಣದಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ-ಬೊಮ್ಮಾಯಿ

ಬೆಂಗಳೂರು, ಮೇ ೨೮: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂದಿಸಿದಂತೆ ಎಸ್‌ಐಟಿ ತನಿಖೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಿಲ್ಲ ಅಲ್ಲದೆ ಎಸ್‌ಐಟಿ ಮುಖ್ಯಸ್ಥ ಸೋಮೇಂದರ್ ಮುಖರ್ಜಿ ರಜೆ ಮೇಲೆ ತೆರಳಿದ್ದಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ ಆರೋಪಿತ ಮಾಜಿ ಸಚಿವರ ಪರವಾಗಿ ಗೃಹ ಸಚಿವರಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ಪ್ರಕರಣದಲ್ಲಿ ಅವರು ಇಷ್ಟು ದಿನ ಬಿಟ್ಟು ಈಗಾ ಮಾತನಾಡಲು ಕಾರಣ ಇದೆ. ಹೈ ಕೋರ್ಟ್ ನಲ್ಲಿ ರಿಟ್…

ಕೋವಿಡ್ ನಿಯಂತ್ರಣಕ್ಕೆ ಶ್ರಮಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ತುಮಕೂರು, ಮೇ೨೮: ಜಿಲ್ಲೆಯಯಲ್ಲಿ ಎರಡನೇ ಹಂತದ ಕೊರೊನಾ ವೈರಸ್ ಸೋಂಕು ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಬೇಕು ಅಧಿಕಾರಿಗಳು ಬೇಜವಾಬ್ದಾರಿಯಾಗಿ ವರ್ತಿಸಬಾರದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ಸಭೆ ನಡೆಸಿ,ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು ನಂಚರ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಖಡಕ್ ಎಚ್ಚರಿಕೆ…

ಸಿಡಿ ಪ್ರಕರಣ ಹಳ್ಳ ಹಿಡಿಸಲು ಸಜ್ಜು-ಎಸ್‌ಐಟಿ ಮುಖ್ಯಸ್ಥರ ರಜೆ ಮೇಲೆ ಕಳಿಸಿದ ಸರ್ಕಾರ?

ಬೆಂಗಳೂರು, ಮೇ. ೨೭: ಇನ್ನೇನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ತಾರ್ಕಿಕ ಹಂತಕ್ಕೆ ಬಂದು ತಲುಪಿದ ಸಂದರ್ಭಲ್ಲೇ ಎಸ್‌ಐಟಿ ತನಿಖಾ ತಂಡದ ಮುಖ್ಯಸ್ಥ ಸೌಮೇಂದು ಮುಖರ್ಜಿ ರಜೆ ಮೇಲೆ ತೆರಳಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ನಾನವನಲ್ಲ ನಾನವನಲ್ಲ ಎಂದು ಹೇಳುತ್ತಿದ್ದ ರಮೇಶ್ ಜಾರಕಿಹೊಳಿ ಈಗ ನಾನವನೇ ಎಂದು ಹೇಳುವ ಮೂಲಕ ಈಗ ಈ ಪ್ರಕರಣ ತಾರ್ಕಿಕ ಹಂತಕ್ಕೆ ಬಂದು ನಿಲ್ಲುತ್ತಿದೆ ಎನ್ನುವ ಹೊತ್ತಿಗೆ ಸಮೇಂದು ಮುಖರ್ಜಿಯ ಅವರು ರಜೆ ಮೇಲೆ ಹೋಗಿರುವುದು ಈಗ…

ಭಾರತ ರತ್ನ ಸಿ.ಎನ್.ಆರ್.ರಾವ್ ಗೆ ಇನಿ ಅಂತರಾಷ್ಟ್ರೀಯ ಪ್ರಶಸ್ತಿ

ಬೆಂಗಳೂರು,ಮೇ,28:ಭಾರತ ರತ್ನ ಖ್ಯಾತ ವಿಜ್ಞಾನಿ ಸಿ.ಎನ್.ಆರ್,ರಾವ್ ಅವರಿಗೆ ‘ಇನಿ’ ಅಂತರಾಷ್ಟ್ರೀಯ ಪ್ರಶಸ್ತಿ ದೊರಕಿದೆ. ನವೀಕರಿಸಬಹುದಾದ ಇಂಧನ ಮೂಲಗಳು ಮತ್ತು ಇಂಧನ ಶೇಖರಣೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ ನ ಮಹತ್ವದ ಸಾಧನೆಗೆ ಈ ಪ್ರಶಸ್ತಿ ಗೆ ಪಾತ್ರರಾಗಿದ್ದಾರೆ ಎಂದು ಜವಾ ಹರ್ ಲಾಲ್ ನೆಹರೂ ವೈಜ್ಞಾನಿಕ ಸಂಶೋ ಧನಾ ಕೇಂದ್ರದ ಪ್ರಕಟಣೆ ತಿಳಿಸಿದೆ. ಈ ಪ್ರಶಸ್ತಿ ಇಂಧನ ಕೇಂದ್ರದ ಮುಂಚೂಣಿ ಮತ್ತು ಅತ್ಯುನ್ನತ ಪ್ರಶಸ್ತಿಯಾಗಿದ್ದು, ಇಂಧನ ಸಂಶೋ ಧನೆಯ ನೋಬೆಲ್‌ ಪ್ರಶಸ್ತಿ ಎಂದೇ ಪರಿಗಣಿಸಲಾಗುತ್ತದೆ. ಪ್ರೊ.ರಾವ್‌ ಅವರು ಜಲಜನಕ ಆಧಾರಿತ…

ಶಿಕ್ಷಕರ ನಿಧಿಯಿಂದ ಸಂಕಷ್ಟದಲ್ಲಿರುವ ಶಿಕ್ಷಕರಿಗೆ ಸಹಾಯಮಾಡಲು ರಾಜ್ಯಪಾಲರಿಗೆ ಮನವಿ

ಬೆಂಗಳೂರು,ಮೇ:೨೭: ಕೊರೋನಾ ಸಂಕಷ್ಟದ ಕಾಲದಲ್ಲಿ ಅನುದಾನ ರಹಿತ ಶಾಲೆಗಳು ಹಲವಾರು ತೊಂದರೆಗಳನ್ನು ಅನುಭವಿಸುತ್ತಿದೆ ಹೀಗಾಗಿ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಕಲ್ಯಾಣ ನಿಧಿಯಿಂದ ಸಂಕಷ್ಟಕ್ಕೊಳಗಾಗಿರುವ ರಾಜ್ಯ ಅನುದಾನ ರಹಿತ ರಾಜ್ಯಪಠ್ಯಕ್ರಮದ ಶಾಲೆಗಳ ಶಿಕ್ಷಕರಿಗೆ 2020-21 ನೇ ಸಾಲಿಗೆ ಆರ್ಥಿಕ ಸಹಾಯ ಮಾಡುವಂತೆ ಈಜಿಪುರದ ಚಿನ್ಮಯ ವಿದ್ಯಾ ಕೇಂದ್ರ ಪ್ರೌಢಶಾಲೆ ರಾಜ್ಯಪಾಲರಲ್ಲಿ ಮನವಿ ಮಾಡಿದೆ. ಈ ಕುರಿತಂತೆ ಸುಧೀರ್ಘ ಮನವಿ ಪತ್ರವನ್ನು ನೀಡಿರುವ ಚಿನ್ಮಯ ವಿದ್ಯಾ ಕೇಂದ್ರ ಪ್ರೌಢಶಾಲೆಯ ಕಾರ್ಯದರ್ಶಿ ಡಾ.ವಿ.ರಾಘವೇಂದ್ರರಾವ್ ಅವರು, ಅನುದಾನರಹಿತ ಶಾಲೆಗಳು ರಾಜ್ಯದಲ್ಲಿ ಹಲವಾರು ತೊಂದರೆಗಳನ್ನು…

ಮೇಕೆದಾಟು ಯೋಜನೆ ವಿವಾದ; ಕಾನೂನು ಹೋರಾಟಕ್ಕೆ ನಿರ್ಧಾರ;ಬೊಮ್ಮಾಯಿ

ಬೆಂಗಳೂರು,ಮೇ,27:ಮೇಕೆದಾಟು ಯೋಜನೆಯಲ್ಲಿ ಪರಿಸರ ನಾಶ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲು ಸಮೀತಿ ರಚನೆ ಮಾಡಿರುವ ರಾಷ್ಟ್ರೀಯ ಹಸಿರು ಪೀಠದ ಆದೇಶವನ್ನು ಪ್ರಶ್ನಿಸುವ ಮೂಲಕ ಕಾನೂನು ಹೋರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೆಂಗಳೂರಿನಲ್ಲಿ ಈ ಸಂಬಂಧ ಸಿಎಂ ಬಿಎಸ್ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ  ನಡೆದ ಸಭೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ…

ಹಾವೇರಿಯ ಜಂಗಮನಕೊಪ್ಪದಲ್ಲಿ ಹಾಲು ಸಂಸ್ಕರಣಾ ಡೇರಿ ಸ್ಥಾಪನೆಗೆ ಸರ್ಕಾರದ ಒಪ್ಪಿಗೆ;ಬೊಮ್ಮಾಯಿ

ಬೆಂಗಳೂರುು,ಮೇ,27:ಧಾರವಾಡ ಹಾಲು ಒಕ್ಕೂಟದ ವತಿಯಿಂದ ಹಾವೇರಿ ಜಿಲ್ಲೆಯ ಜಂಗಮನಕೊಪ್ಪ ಗ್ರಾಮದಲ್ಲಿ 1 ಲಕ್ಷ ಲೀಟರ್ ಸಾಮರ್ಥ್ಯದ ಹಾಲು ಸಂಸ್ಕರಣಾ ಡೇರಿ ಹಾಗೂ ಅಲ್ಟ್ರಾ ಹೀಟ್ ಟ್ರೀಟ್ಮೆಂಟ್ ಪ್ಯಾಕಿಂಗ್ ಘಟಕವನ್ನು 90 ಕೋಟಿ ರೂಪಾಯಿ ವೆಚ್ಚದಲ್ಲಿ (ಪಿಪಿಪಿ) ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸುವ ಮಹತ್ವಾಕಾಂಕ್ಷಿ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ ಎಂದು  ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ತಿಳಿಸಿದರು. ಬೆಂಗಳೂರಿನಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಾವೇರಿ ಜಿಲ್ಲೆಯ ಹಾಲು ಉತ್ಪಾದಕರ…

ಜಿಂದಾಲ್‌ಗೆ ನೀಡಿದ್ದ ಭೂಮಿ ವಾಪಾಸ್

ಬೆಂಗಳೂರು, ಮೇ ೨೭: ಜಿಂದಾಲ್ ಕಂಪನಿಗೆ ನೀಡಲಾಗಿದ್ದ ಭೂಮಿಯನ್ನು ರಾಜ್ಯ ಸರ್ಕಾರ ವಾಪಾಸ್ ಪಡೆಯಲು ಇಂದು ನಡೆದ ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ. ಬಳ್ಳಾರಿಯ ಜಿಂದಾಲ್ ಕಂಪನಿಗೆ ೩,೬೬೭ ಎಕರೆ ಭೂಮಿಯನ್ನು ಮಾರಾಟ ಮಾಡಿತ್ತು, ಆದರೆ ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಭೂಮಿಯನ್ನು ಹಿಂಪಡೆಯುವ ನಿರ್ಧಾರಕ್ಕೆ ಸರ್ಕಾರ ಬಂದಿದೆ. ಈ ಸಂಸ್ಥೆಯಿಂದ ರಾಜ್ಯ ಸರ್ಕಾರಕ್ಕೆ ೧೦೭೮ ಕೋಟಿ ರೂ.ಗಳ ರಾಜಧನ ಬರಬೇಕಾಗಿದೆ ಎಂದು ತಿಳಿದುಬಂದಿದೆ, ಈ ಕುರಿತು ಹೈಕೋರ್ಟ್ , ಸುಪ್ರೀಂಕೋರ್ಟ್ ಮತ್ತು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದಲ್ಲಿ…

ಬೆಂಗಳೂರಲ್ಲಿ ಇಂದು ೫,೯೭೭ ಸೋಂಕಿತರು ಪತ್ತೆ

ಬೆಂಗಳೂರು,ಮೇ,೨೭: ಕೊರೊನಾ ಸಂಕಷ್ಟ ಎದುರಿಸಲು ಸರ್ಕಾರ ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದೆ ಇದರ ಪರಿಣಾಮವಾಗಿ ಸೋಂಕಿತರ ಸಂಖ್ಯೆ ಇಳಿಕೆ ಕಾಣುತ್ತಿದೆ ಬಂಗಳೂರಿನಲ್ಲಿ ಇಂದು ೫೯೭೭ ಮಂದಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಬೆಂಗಳೂರಿನ ವಿವಿಧ ವಾರ್ಡ್‌ಗಳಲ್ಲಿನ ಸೋಂಕಿತರ ಸಂಖ್ಯೆ ಈ ರೀತಿ ಇದೆ: ಬೊಮ್ಮನಹಳ್ಳಿಯಲ್ಲಿ-೫೪೭, ದಾಸರಹಳ್ಳಿ-೨೧೫, ಬೆಂಗಳೂರು ಪೂರ್ವ-೭೮೩, ಮಹಾದೇವಪುರ-೯೮೭, ಆರ್‌ಆರ್ ನಗರ-೪೪೨, ಬೆಂಗಳೂರು ದಕ್ಷಿಣ-೬೧೬, ಬೆಂಗಳೂರು ಪಶ್ಚಿಮ-೪೭೯, ಯಲಹಂಕ-೪೬೪, ಹೊರವಲಯದ ತಾಲೂಕುಗಳಲ್ಲಿ ೪೪೮ ಜನರಲ್ಲಿ ಸೋಂಕು ದೃಢಪಟ್ಟಿದೆ. ಒಟ್ಟು ೬೧೧ ಮಂದಿ ಕೋವಿಡ್ ಸೋಂಕಿತರು ಪಾಲಿಕೆ ಸಂಪರ್ಕಕ್ಕೆ ಸಿಗದೆ…

ಟೂಲ್ ಪ್ಲಾಜಾದಲ್ಲಿ ಕ್ಯೂ ಜಾಸ್ತಿ ಇದ್ದರೆ,ಟೂಲ್ ಕಟ್ಟಬೇಕಿಲ್ಲ

ನವದೆಹಲಿ,ಮೇ,27: ವಾಹನ ಚಾಲಕರಿಗೆ ಇದೊಂದು ಗುಡ್ ನ್ಯೂಸ್, ಇನ್ನೂ ಮುಂದೆ ಟೂಲ್ ಪ್ಲಾಜಾಗಳಲ್ಲಿ ಕ್ಯೂ ಜಾಸ್ತಿ ಇದ್ದರೆ ಟೂಲ್ ಶುಲ್ಕ ಕಟ್ಟುವ ಹಾಗಿಲ್ಲ. ಈ ಬಗ್ಗೆ ಶೀಘ್ರ ಹೊಸ ರೂಲ್ಸ್ ಜಾರಿಯಾಗಲಿದ್ದು, 100 ಮೀಟರ್ ಕ್ಯೂ ಇದ್ದರೆ ಟೋಲ್ ಶುಲ್ಕ ಕಟ್ಟಬೇಕಾಗಿಲ್ಲಟ್ರಾಫಿಕ್ ಜಾಮ್ ತಪ್ಪಿಸಲು ಈ ಮಾರ್ಗ ಹುಡುಕಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶೀಘ್ರವೇ ಹೊಸ ನಿಯಮ ಜಾರಿಗೊಳಿಸಲಿದ್ದು, ಹೆದ್ದಾರಿಗಳ ಪ್ಲಾಜಾದಲ್ಲಿ ಟ್ರಾಫಿಕ್ ಜಾಮ್ ತಪ್ಪಿಸಲು ಕ್ರಮ ಕೈಗೊಂಡಿದೆ. ಪ್ಲಾಜಾದಿಂದ 100 ಮೀಟರ್ ದೂರದಲ್ಲಿ ಹಳದಿ ಗೆರೆ…

ಮೇಕೆದಾಟು ಯೋಜನೆ; ನಾಳೆ ಕಾನೂನು ತಜ್ಞರೊಂದಿಗೆ ಸಭೆ- ಬೊಮ್ಮಾಯಿ

ಬೆಂಗಳೂರು, ಮೇ,26:ಮೇಕೆದಾಟು ಯೋಜನೆ ಸಂಬಂಧಿಸಿದಂತೆ ನಾಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕಾನೂನು ತಜ್ಞರ ಉನ್ನತಮಟ್ಟದ ಸಭೆ ನಡಯಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿನ ಟೌನ್ ಹಾಲ್ ಬಳಿ ಬೆಂಗಳೂರು ನಗರ ಸಂಚಾರ ಪೊಲೀಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು‌. ರಾಷ್ಟ್ರೀಯ ಹಸಿರು ಪೀಠ ಮೇಕೆದಾಟು ಯೋಜನೆಗೆ ಸಂಬಂಧಪಟ್ಟಂತೆ ಸೋಮೋಟೋ ದೂರು ದಾಖಲಿಸಿಕೊಂಡಿದೆ. ಇದಕ್ಕೆ ಸಂಬಂಧಪಟ್ಟಂತೆ ಸಮಿತಿ ರಚನೆ ಮಾಡಿದೆ. ಮೇಕೆದಾಟು ಯೋಜನೆಗೆ ಭೇಟಿ ನೀಡಬೇಕು.…

ಸ್ವಾತಂತ್ರ್ಯಹೋರಾಟಗಾರ ಶತಾಯುಷಿ ಎಚ್.ಎಸ್.ದೊರೆಸ್ವಾಮಿ ನಿಧನ

ಬೆಂಗಳೂರು, ಮೇ,26:ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ ಎಚ್.ಎಸ್.ದೊರೆಸ್ವಾಮಿ ಹೃದಯಾಘಾತದಿಂದ ಇಂದು ಮಧ್ಯಾಹ್ನ ನಿಧನರಾಗಿದ್ದಾರೆ. ಅವರಿಗೆ 104 ವರ್ಷ ವಯಸ್ಸಾಗಿತ್ತು.ಇತ್ತೀಚೆಗಷ್ಟೆ ಅವರಿಗೆ ಕೊರೊನಾ ಸೋಕು ತಗುಲಿದ್ದು ಗುಣಮುಖರಾಗಿದ್ದರು.ಆದರೆ ಕೆಲ ದಿನಗಳ ಹಿಂದೆ ತೀವ್ರ ಹೃದಯಾಘಾತವಾದಾಗ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯಿಸಿರೆಳದಿದ್ದಾರೆ. ೧೯೧೮ ಏಪ್ರಿಲ್  ೧೦ ರಂದು ಹಾರೋಹಳ್ಳಿಯಲ್ಲಿ ಜನಸಿದ್ದ ಅವರು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗಿಯಾಗಿದ್ದರು,ನಂತರ ಜೈಲುವಾಸ ಅನುಭವಿಸಿದ್ದರು.ಗಾಂಧಿ ಅನುಯಾಯಿಯಾದ ಅವರು ಅವರ ಸಿದ್ದಾಂತಗಳನ್ನು ಅಳವಡಿಸಿಕೊಂಡಿದ್ದರು.೧೪ ತಿಂಗಳುಗಳಕಾಲ ಜೈಲುವಾಸ ಅನುಭವಿಸಿ ಹೊರಬಂದ ನಂತರ ಅವರು ಪತ್ರಿಕೆಯನ್ನು…

ಅವಶ್ಯಕತೆ ಪೂರೈಸುವಲ್ಲಿ ವೀರ ಶೈವ ಸಮಾಜ ಸೇವೆ ಅನನ್ಯ

ವರದಿ; ಜಿ ಕೆ ಹೆಬ್ಬಾರ್ ಶಿಕಾರಿಪುರ ಶಿಕಾರಿಪುರ,ಮೇ,೨೬;ದೇಶ .ಹಾಗೂ ರಾಜ್ಯ ಹಿಂದೆಂದೂ ಕಂಡರಿಯದ ಒಂದು ಸಂದಿಗ್ಧ ಸ್ಥಿತಿಯಲ್ಲಿ ಇದ್ದು ಈ ಕೂ ರೋ ನಾ ಹೆಮ್ಮರಿಯನ್ನು ಕಟ್ಟಿ ಹಾಕುವುದರ ಜೊತೆಗೆ ಸಾರ್ವಜನಿಕರ ಜೀವ ಕಾಪಾಡುವ ಮತ್ತು ತುರ್ತು ಸೇವೆ ಸಲ್ಲಿಸುವುದು ಎಲ್ಲರ ಆದ್ಯ ಕರ್ತವ್ಯ ಅಂತಹ ಸೇವೆಯಲ್ಲಿ ನಮ್ಮ ವೀರ ಶೈವ ಸಮಾಜ ಪೂರಕವಾಗಿ ಕೆಲಸಮಾಡಿ ತೋರಿಸುತ್ತಿದೆ ಸಮಾಜ ಮುಖಿಯಾಗಿ ಅವರಸೇವೆ ಅನನ್ಯ ಎಂದು ಸಂಸದ ರಾಘವೇಂದ್ರ ತಿಳಿಸಿದರು. ಅವರು ಶಿಕಾರಿಪುರದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಅಖಿಲ…

ವಿಕಲಚೇತನರು, ಅನಾಥಾಶ್ರಮದ ವಯೋವೃದ್ಧರಿಗೆ ಲಸಿಕೆಗೆ ವ್ಯವಸ್ಥೆ..!

ಬೆಂಗಳೂರು,ಮೇ,೨೫: ಅನಾಥಶ್ರಮಗಳಲ್ಲಿನ ವೃದ್ಧರಿಗೆ ಮತ್ತು ವಿಕಲ ಚೇತನಿರಿಗೆ ಬೆಂಗಳೂರು ನಗರ ಜಿಲ್ಲಾಡಿಳ ಅಲ್ಲಿಯೇ ಲಸಿಕೆ ಹಾಕಲು ನಿರ್ಧರಿಸಿದೆ ಪಂಚಾಯ್ತಿ, ರೆವಿನ್ಯೂ ಹಾಗೂ ಹೆಲ್ತ್ ಆಫೀಸರ್ಸ್ ನಿಂದ ಮ್ಯಾಪಿಂಗ್ ಮಾಡುವ ಕೆಲಸ ನಡೆಯುತ್ತಿದೆ. ಬೆಂಗಳೂರಿನಲ್ಲಿ ವಿಶೇಷ ಚೇತನರು ಬರೋಬ್ಬರಿ ೫೯ ಸಾವಿರ ಮಂದಿ ಇದ್ದಾರೆ. ಅದರಲ್ಲಿ ೪೫ ವರ್ಷ ಮೇಲ್ಪಟ್ಟವರು ಬರೋಬ್ಬರಿ ೧೯,೯೧೧ ಮಂದಿ ಇಷ್ಟು ಮಂದಿಯ ಮ್ಯಾಪಿಂಗ್ ಮಾಡಿ ಅವರಿರೋ ಸ್ಥಳಕ್ಕೆ ವಾಹನ ವ್ಯವಸ್ಥೆ ಮಾಡಿ, ವಿಶೇಷ ಚೇತನರಿರೋ ಮನೆ ಮನೆಗೆ ತೆರಳಿ ತಮ್ಮ ವಾಹನದಲ್ಲಿ ಸ್ಥಳೀಯ…

ಕೋವಿಡ್ ಪರೀಕ್ಷೆ ಮಾದರಿ ಕೊಡುವುದು ತಡ ಮಾಡಿದ ಲ್ಯಾಬ್‌ಗಳಿಗೆ ದಂಡ

ಬೆಂಗಳೂರು, ಮೇ ೨೫; ಲ್ಯಾಬ್‌ಗಳು ಮೋವಿಡ್ ಮಾದರಿ ಪರೀಕ್ಷೆಗಳನ್ನು ತಡ ಮಾಡಿದರೆ ಅಂತವುಗಲಿಗೆ ದಂಡವಿದಲಾಗುತ್ತಿದ್ದು ಈಗಾಗಲೇ ೪೦ ಲ್ಯಾಬ್‌ಗಳಿಗೆ ದಂಡ ಹಾಕಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ್‌ನಾರಾಯಣ ತಿಳಿಸಿದ್ದಾರೆ. ಈಗಾಗಲೇ ಒಟ್ಟು೨೦.೨೦ ಲಕ್ಷ ರೂ ದಂಡವನ್ನು ವಿಧಿಸಲಾಗಿದ್ದು ೩೧ ಖಾಸಿಗಿ ಲ್ಯಾಬ್,೯ ಸರ್ಕಾರಿ ಲ್ಯಾಬ್‌ಗಳು ಸಏರಿ ೪೦ ಲ್ಯಾಬ್‌ಗಳಿಗೆ ದಂಡ ಹಾಕಲಾಗಿದೆ ಎಂದು ರಾಜ್ಯದಲ್ಲಿ ಕೋವಿಡ್ ಪರೀಕ್ಷೆಯ ನೋಡೆಲ್ ಅಧಿಕಾರಿಯಾದ ಶಾಲಿನಿ ರಜನೀಶ್ ಸಚಿವರಿಗೆ ಈ ಕುರಿತು ವಿವರಗಳನ್ನು ನೀಡಿದ್ದಾರೆ. ಕೋವಿಡ್ ಟಾಸ್ಕ್ ಪೋರ್ಸ್ ಅಧ್ಯಕ್ಷರೂ ಆಗಿರುವ…

ಸರ್ಕಾರಿ ಶಾಲಾ ಮಕ್ಕಳಿಗೆ ಸ್ಮಾರ್ಟ್ ಫೋನ್ ನೀಡಲು ಚಿಂತನೆ; ಸುರೇಶ್ ಕುಮಾರ್

ಮೈಸೂರು,ಮೇ24: ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣವಂಚಿತರಾಗಬಾರದು ಹಾಗಾಗಿ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೂ ಉಚಿತ ಸ್ಮಾರ್ಟ್ ಫೋನು ನೀಡುವ ಕುರಿತು ಚಿಂತನೆ ನಡೆದಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಮೈಸೂರಿನ ಡಿಡಿಪಿಐ ಕಚೇರಿಗೆ ದಿಢೀರ್‌ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ‘ಸ್ಮಾರ್ಟ್‌ಫೋನ್‌ ವಿತರಣೆ ಸಂಬಂಧ ಈಗಾಗಲೇ ಎಲ್ಲ ಶೈಕ್ಷಣಿಕ ಜಿಲ್ಲೆಯಲ್ಲೂ ಸರ್ವೇ ನಡೆಸಲಾಗಿದೆ’ ಎಂದು ಹೇಳಿದರು. ‘ಹಳ್ಳಿಗಳ ಬಡ ವಿದ್ಯಾರ್ಥಿಗಳು ಆನ್‌ಲೈನ್‌ ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣ ವಂಚಿತ…

ರಾಜ್ಯದಲ್ಲಿ ಮತ್ತೇ ಆಮ್ಲಜನಕ ಬಿಕ್ಕಟ್ಟು, ಬಳ್ಳಾರಿಯ ಆಮ್ಲಜನಕ ಘಟಕ ಸ್ಥಗಿತ

ಬೆಂಗಳೂರು: ರಾಜ್ಯಸರ್ಕಾರದ ಎಡವಟ್ಟುಗಳಿಂದ ಬಳ್ಳಾರಿಯಲ್ಲಿ ಉತ್ಪಾದನೆಯಾಗುವ ಆಮ್ಲಜನಕ ಘಟಕದಲ್ಲಿ ತೊಂದರೆ ಕಾಣಿಸಿಕೊಂಡಿದ್ದು ಈಗ ಮತ್ತೊಮ್ಮೆ ಆಮ್ಲಜನಕ ಕೊರತೆ ಉಂಟಾಗಿದೆ. ಸರ್ಕಾರಕ್ಕೆ ಇಷ್ಟೆಲ್ಲಾ ಅನುಭವಗಳಾದರೂ ಕೂಡ ಒಂದು ಆಮ್ಲಜನಕವನ್ನು ನಿರ್ವಹಣೆ ಮಾಡುವ ಕುರಿತು ಅದನ್ನು ಶೀಘ್ರ ಸರಿಪಡಿಸುವ ತಂತ್ರಜ್ಞಾನದ ಕೊರತೆ ಎದ್ದು ಕಾಣುತ್ತಿದೆ ಇನ್ನೂ ಸಚಿವರು ಸಹಮತ ಇಲ್ಲದೆ ಇರುವ ಕಾರಣ ಇಂತ ಅನಾಹುತಗಳು ಮೇಲಿಂದ ಮೇಲಾಗುತ್ತಿವೆ ಆದರೂ ಇನ್ನೂ ಸರ್ಕಾರಕ್ಕೆ ಬುದ್ದಿ ಬಂದಿಲ್ಲ ಎಂದರೆ ನಿಜಕ್ಕೂ ಇದು ಈ ರಾಜ್ಯದ ದುರಂತವೇ ಸರಿ ಎನ್ನಬೇಕು. ಬಳ್ಳಾರಿ ಜಿಲ್ಲೆಯ…

ಜನಾರ್ಧನ ರೆಡ್ಡಿ ಬಳ್ಳಾರಿ ಭೇಟಿಗೆ ಮನವಿ ಅರ್ಜಿ ವಿಚಾರಣೆಗೆ ಒಪ್ಪಿಗೆ ನೀಡಿದ ಸುಪ್ರೀಂ

ನವದೆಹಲಿ,ಮೇ,೨೪: ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನಿನ ಮೇಲೆ ಹೊರಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಬಳ್ಳಾರಿಗೆ ಹೋಗಲು ಅವಕಾಶಕ್ಕೆ ಸಲ್ಲಿಸಲಾದ ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆಗೆ ಒಪ್ಪಿಗೆ ನೀಡಿದೆ. ಬಹು ಕೋಟಿ ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪಿ ರೆಡ್ಡಿ ಅವರು ೨೦೧೫ ರಿಂದ ಜಾಮೀನಿನ ಮೇಲೆ ಜೈಲಿಂದ ಹೊರಗಿದ್ದಾರೆ. ಆದರೆ ಅವರಿಗೆ ಬಳ್ಲಾರಿಗೆ ಭೇಟಿ ಕೊಡುವುದನ್ನು ಹಾಗೇ ಆಂಧ್ರಪ್ರದೇಶದ ಅನಂತಪುರ ಮತ್ತು ಕಡಪಾ ಭೇಟಿಗೆ ನಿಷೇಧಿಸುವುದು ಸೇರಿದಂತೆ ಹಲವು ಷರತ್ತುಗಳನ್ನು ಸುಪ್ರೀಂ…

ರಾಜ್ಯದಲ್ಲಿ ೩೦೦ಕ್ಕೂ ಹೆಚ್ಚು ಬ್ಲ್ಯಾಕ್ ಫಂಗಸ್ ಸೋಂಕಿತರು ಪತ್ತೆ-ಸುಧಾಕರ್

ಬೆಂಗಳೂರು,ಮೇ,೨೪: ಕಪ್ಪು ಶಿಲೀಂದ್ರ ಸಮಿತಿ ನೀಡಿರುವ ಪ್ರಾಥಮಿಕ ವರದಿಯಲ್ಲಿ ರಜ್ಯದಲ್ಲಿ ೩೦೦ಕ್ಕೂ ಅಧಿಕ ಬ್ಲಾಕ್ ಫಂಗಸ್ ಸೋಂಕಿತರು ಇರುವುದು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ಡಾ,ಸುಧಾಕರ್ ತಿಳಿಸಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸೋಂಕು ಎಲ್ಲಿಂದ ಬರುತ್ತಿದೆ ಎಂದು ಪತ್ತೆ ಮಾಡಲು ಸಮಿತಿ ರಚಿಸಿದ್ದು, ಈ ಸಮಿತಿ ವರದಿ ನೀಡಿದೆ. ಸ್ಟೀರಾಯಿಡ್ ಜೊತೆಗೆ ಹ್ಯುಮಿಡಿಫೈರ್ ನಲ್ಲಿ ನಲ್ಲಿ ನೀರು ಬಳಕೆ, ಐಸಿಯು ವೆಂಟಿಲೇಟರ್ ಅನ್ನು ಇನ್ನೊಬ್ಬರಿಗೆ ಬಳಸುವಾಗ, ಒಂದೇ ಮಾಸ್ಕ್ ದೀರ್ಘಕಾಲ ಬಳಕೆ, ಟ್ಯೂಬ್, ಹಾಸಿಗೆ…

ರಾಜ್ಯದೆಲ್ಲಡೆ ಮನೆ-ಮನೆಗೂ ತೆರಳಿ ಕೊರೊನಾ ಸೋಂಕು ಪರೀಕ್ಷೆ-ಅಶೋಕ್

ಬೆಂಗಳೂರು, ಮೇ ೨೪: ಇನ್ನೂ ಮುಂದೆ ರಾಜ್ಯದ ಎಲ್ಲಾ ಕಡೆಯೂ ಕೊರೊನಾ ಸೋಂಕಿತರ ಮನೆ-ಮನೆಗೂ ಹೋಗಿ ಪರೀಕ್ಷಿಸಲು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಕಂದಾಯಸಚಿವ ಹಾಗೂ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷ ಆರ್,ಅಶೋಕ್ ಅವರು ತಿಳಿಸಿದ್ದಾರೆ. ಈ ಮೂಲಕ ರಾಜ್ಯದ ಪ್ರತಿ ಗ್ರಾಮಗಳಲ್ಲಿಯೂ ಕೂಡ ಪ್ರತಿ ಮನೆಗಳಿಗೂ ತೆರಳಿ ವಿಶೇಷ ತಂಡ ಕೊರೊನಾ ಸೋಂಕಿತರನ್ನು ಗುರುತಿಸಲಾಗುತ್ತದೆ ಈ ಕುರಿತಂತೆ ಕಂದಾಯ ಇಲಾಖೆ ಪ್ರದಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಅವರು ಶೀಘ್ರದಲ್ಲಿಯೇ ಸುತ್ತೋಲೆ ಹೊರಡಿಸಲಿದ್ದಾರೆ ಎಂದು ಅವರು ಹೇಳಿದರು.…

1 27 28 29 30 31 33
error: Content is protected !!