Browsing: ರಾಜ್ಯ

ರಾಜ್ಯ

ಕೊಳೆತ ತರಕಾರಿಗಳಿಂದ ಬ್ಲಾಕ್ ಫಂಗಸ್ ಸೋಂಕು;ಸುಧಾಕರ್

ಬೆಂಗಳೂರು, ಜೂ.9- ಬ್ಲಾಕ್ ಫಂಗಸ್ ಬಗ್ಗೆ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಆತಂಕಕಾರಿ ವಿಷಯವೊಂದನ್ನು ತಿಳಿಸಿದ್ದಾರೆ. ಬ್ಲಾಕ್ ಫಂಗಸ್ ಅಪರೂಪದ ಸೋಂಕು. ಮಣ್ಣು, ಗಿಡಗಳು ಹಾಗೂ ಕೊಳೆಯುತ್ತಿರುವ ತರಕಾರಿಗಳಲ್ಲಿ ಕಂಡುಬರುವ ಶಿಲೀಂದ್ರ, ತೆರೆದ ಚರ್ಮ ಅಥವಾ ಉಸಿರಾಟದ ಮೂಲಕ ನಮ್ಮ ದೇಹ ಪ್ರವೇಶಿಸುತ್ತದೆ ಎಂದಿದ್ದಾರೆ. ಬ್ಲಾಕ್ ಫಂಗಸ್ ವಿರುದ್ಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಾಗೃತಿ ಅಭಿಯಾನವನ್ನು ಆರಂಭಿಸಿದೆ. ಅದರ ಭಾಗವಾಗಿ ಇಂದು ಟ್ವಿಟ್ ಮಾಡಿರುವ ಸಚಿವರು ಮಣ್ಣು, ಗಿಡ ಹಾಗೂ ಕೊಳೆಯುತ್ತಿರುವ…

ಮಾಜಿ ಸಚಿವ ಸಿ.ಎಂ.ಉದಾಸಿ ನಿಧನ

ಬೆಂಗಳೂರು,ಜೂ,೦೮: ಮಾಜಿ ಸಚಿವ ಹಾಗೂ ಹಾಲಿ ಹಾನಗಲ್ ಕ್ಷೇತ್ರದ ಬಿಜೆಪಿ ಶಾಸಕ ಸಿ.ಎಂ.ಉದಾಸಿ ನಿಧನರಾಗಿದ್ದಾರೆ. ಅವರಿಗೆ ೮೫ ವರ್ಷ ವಯಸ್ಸಾಗಿತ್ತು ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯಿಸಿರೆಳದಿದ್ದಾರೆ. ಹೃದಯ ಸಂಬಂಧಿ ಕಾಯಿಲೆಗೆ ಕಳೆದ ೧೫ ದಿನಗಳಿಂದ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಾರದ ಹಿಂದೆ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಮಂಗಳವಾರ ಬೆಳಿಗ್ಗೆ ಆರೋಗ್ಯದಲ್ಲಿ ಏರುಪೇರಾಗಿ, ಮಧ್ಯಾಹ್ನದ ವೇಳೆಗೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಅವರಿಗೆ…

ಉಳ್ಳವರು ಸಂತ್ರಸ್ತರಿಗೆ ನೆರವಾಗಿ: ಆರೂಢಭಾರತೀ ಸ್ವಾಮೀಜಿ

ಬೆಂಗಳೂರು,ಜೂ,08:ಯಾವುದೂ ಯಾರಿಗೂ ಶಾಶ್ವತವಲ್ಲ. ನಿನ್ನೆ ಇನ್ನಾರದ್ದೋ ಆಗಿದ್ದು ಇಂದು ನಮ್ಮದಾಗಿದೆ. ನಾಳೆ ಯಾರ ಪಾಲೆಂಬುದು ತಿಳಿದಿಲ್ಲ. ನಮ್ಮ ಲೆಕ್ಕಾಚಾರಗಳು ಯಥಾವತ್ತಾಗಿ ನಡೆಯುವುದಿಲ್ಲ ಎಂಬುದಕ್ಕೆ ಕೊರೊನಾ ದುಷ್ಕಾಲವೇ ಸಾಕ್ಷಿ. ಇಂದು ನಾವು ಚೆನ್ನಾಗಿರಬಹುದು. ನಾಳೆ ಏನಿದೆಯೋ? ಚೆನ್ನಾಗಿರುವಾಗಲೇ ನಮ್ಮಲ್ಲಿರುವುದನ್ನು ಇಲ್ಲದವರಿಗೆ ನೀಡೋಣ. ಇಂದು ಕೈ ಒಡ್ಡಿ ಪಡೆಯುವವನು ನಾಳೆ ನಮಗೇ ಕೈ ಎತ್ತಿ ಕೊಡುವವನಾದಾನು! ಎಂದು ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಡಾ ಆರೂಢಭಾರತೀ ಸ್ವಾಮೀಜಿ ಹೇಳಿದರು. ಅವರು ಇಂದು ಸಿದ್ಧಾರೂಢ ಮಿಷನ್, ಸಹಬಾಳ್ವೆ…

ವೃತ್ತಿಪರ ಕೋರ್ಸ್‌ಗಳಿಗೆ ಸಿಇಟಿ ಅಂಕಗಳು ಮಾತ್ರ ಪರಿಗಣನೆ-ಅಶ್ವತ್ಥ್‌ನಾರಾಯಣ

ಬೆಂಗಳೂರು,ಜೂ,೦೮:ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಈ ಬಾರಿ ಕೇವಲ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸುವ ಬಗ್ಗೆ ಸರ್ಕಾರ ತೀರ್ಮಾನಿಸಿದೆ ಎಂದು ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ. ಕೋವಿಡ್ ಸಾಂಕ್ರಾಮಿಕ ರೋಗದ ಎರಡನೇ ಅಲೆ ಕಾರಣ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ ಎಂದರು. ಈ ಸಂಬಂಧ ಬೆಂಗಳೂರಿನಲ್ಲಿ ಇಂದು ಉನ್ನತ ಅಧಿಕಾರಿಗಳ ಜತೆಸಮಾಲೋಚನೆ ನಡೆಸಿ ನಂತರ ಅವರು ಈ ವಿಷಯವನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು ಪಿಯುಸಿ ಅಂಕಗಳ ವಿಚಾರವಾಗಿ ನೀತಿಯಲ್ಲಿ ಅಗತ್ಯ ತಿದ್ದುಪಡಿ ತರಲಾಗುವುದು.ಪದವಿ ಕಾಲೇಜುಗಳಿಗೆ, ಇತರ…

ಕೊರೊನಾ ಸೋಂಕಿತರ ಪ್ರಮಾಣ ಕಡಿಮೆ, ಸಾವಿನ ಸಂಖ್ಯೆ ಜಾಸ್ತಿ ;ವಿವರಣೆ ನೀಡಿದ ಬಿಬಿಎಂಪಿ ಆಯುಕ್ತ

ಬೆಂಗಳೂರು, ಜೂ, ೮: ಕೊರೊನಾ ಸೋಂಕಿತರ ಪ್ರಮಾಣ ದಿನೇ ದಿನೇ ಕಡಿಮೆಯಾಗುತ್ತಿದ್ದರೂ ಕುಡ ಸಾವಿನ ಸಂಖ್ಯೆ ಹೆಚ್ಚಾಗುತ್ತಿತ್ತು ಈ ಕುರಿತು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ವಿವರಣೆ ನೀಡಿದ್ದಾರೆ, ಕಳೆದ ಒಂದು ತಿಂಗಳ ಹಿಂದಿನ ಪರಿಸ್ಥಿತಿ ಅವಲೋಕಿಸಿದರೆ ಸ್ಮಶಾನದಲ್ಲಿ ಕ್ಯೂ ಕೂಡಾ ಹಿಂದಿನ ರೀತಿಯಲ್ಲಿ ಇರಲಿಲ್ಲ. ಆದರೂ, ಬೆಂಗಳೂರಿನಲ್ಲಿ ಸಾವಿನ ಸಂಖ್ಯೆಯ ಅಂಕಿಅಂಶ ಕಮ್ಮಿಯಾಗಿರಲಿಲ್ಲ. ಈ ಬಗ್ಗೆ ಬಿಬಿಎಂಪಿ ಆಯುಕ್ತರಾದ ಗೌರವ್ ಗುಪ್ತ ಅಸಲಿ ಕಾರಣವನ್ನು ಬಿಚ್ಚಿಟ್ಟಿದ್ದು, ಸಾರ್ವಜನಿಕರು ಗಾಬರಿ ಪಡಬೇಕಾಗಿಲ್ಲ ಎಂದು ಹೇಳಿ, ಸಾವಿನ ಸಂಖ್ಯೆ…

ಕನ್ನಡಕ್ಕಾದ ಅನ್ಯಾಯದ ಕುರಿತು ಕೇಂದ್ರೀಕರಿಸಬೇಕು-ಎಚ್‌ಡಿಕೆ

ಬೆಂಗಳೂರು,ಜೂ,೦೭: ಇತ್ತೀಚೆಗೆ ಅಮೇಜಾನ್ ಮತ್ತು ಗೂಗಲ್‌ನಲ್ಲಿ ಕನ್ನಡ ಭಾಷೆಯನ್ನು ಅವಹೇಳನಕಾರಿಯಾಗಿ ಬಿಂಬಿಸಿದ್ದ ಬಗ್ಗೆ ಸಾಕಷ್ಟು ಚರ್ಚೆಗಳಾಗಿದ್ದವು ಆದರೆ ಈ ವಿಚಾರ ಕೇವಲ ಚರ್ಚೆಗಷ್ಟೆ ಸೀಮಿತ ಮಾಡದೆ ಈ ಬಗ್ಗೆ ಕರ್ನಾಟಕಕ್ಕೆ ಸಿಗಬೇಕಾದ ನ್ಯಾಯದ ವಿಚಾರದಲ್ಲಿ ಕೇಂದ್ರೀಕೃತವಾಗಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕುಮಾರ ಸ್ವಾಮಿ, ರಾಜಕೀಯದಲ್ಲಿನ ಹಿಂದಿ ಪಾರಮ್ಯವನ್ನು ಕಣ್ಣಾರೆ ಕಂಡವನು ನಾನು. ಕನ್ನಡಿಗ ಎಚ್.ಡಿ ದೇವೇಗೌಡರು ೧೧ ತಿಂಗಳು ಪ್ರಧಾನ ಮಂತ್ರಿಯಾಗಿದ್ದರು. ಭಾಷೆಯ ವಿಚಾರದಲ್ಲಿ ಅವರೆಷ್ಟು ನೋವು…

ಮಾಜಿ ಸಚಿವ ಮುಮ್ತಾಜ್ ಅಲಿಖಾನ್ ನಿಧನ

ಬೆಂಗಳೂರು,ಜೂ,೦೭: ಮಾಜಿ ಸಚಿವ ಪ್ರೊ ಮುಮಾಜ್ ಆಲಿಖಾನ್ ಇಂದು ಬೆಳಿಗ್ಗೆ ನಿಧನಹೊಂದಿದಾರೆ. ಅವರಿಗೆ ೯೪ ವರ್ಷ ವಯಸ್ಸಾಗಿತ್ತು ಇಂದು ಬಳಿಗ್ಗೆ ಅವರು ಗಂಗಾನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಯೋಸಹಜ ಕಾಯಿಲಿಯಿಂದ ಸಾವನ್ನಪ್ಪಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಅವರಿಗೆ ಪತ್ನಿ, ಮಗಳು ಇದ್ದಾರೆ. ೨೦೦೮ರಲ್ಲಿ ಬಿ.ಎಸ್. ಯಡಿಯಾರಪ್ಪ ನೇತೃತ್ವದ ಸರ್ಕಾರದಲ್ಲಿ ಅವರು ಅಲ್ಪಸಂಖ್ಯಾತ ಕಲ್ಯಾಣ, ಹಜ್, ವಕ್ಫ್ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ೩೦ ವರ್ಷಗಳಿಂದ ಬೆಂಗಳೂರು ನಗರದ ಆರ್‌ಟಿನಗರದಲ್ಲಿ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಯನ್ನು ನಡೆಸುತ್ತಿದ್ದು,…

ಉಚಿತ ದಿನಸಿ ಕಿಟ್ ವಿತರಣೆ.

ಉಚಿತ ದಿನಸಿ ಕಿಟ್ ವಿತರಣೆ. ಕೋವಿಡ್ ಮಹಾರೋಗದಿಂದ ಜನಜೀವನ ತತ್ತರಿಸಿದೆ. ಅನೇಕರಿಗೆ ಹೊತ್ತಿನ ಊಟಕ್ಕೂ ತೊಂದರೆಯಾಗಿದೆ. ಇದನ್ನು ಮನಗಂಡು, ಶ್ರೀ ಸಿದ್ಧಾರೂಢ ಮಿಷನ್, ಸಹಬಾಳ್ವೆ ಸಂಸ್ಥೆ ಹಾಗೂ ಸೌಖ್ಯ ನ್ಯಾಚುರಲ್ ಫುಡ್ ಪ್ರೈ. ಲಿ. ಈ ಮೂರೂ ಸಂಸ್ಥೆಗಳು ಜೊತೆಯಾಗಿ, ಸಂಕಷ್ಟಕ್ಕೆ ಒಳಗಾದ ಶ್ರಮಿಕರು, ಕೂಲಿ ಕಾರ್ಮಿಕರು, ಬಡವರು ಹಾಗೂ ಆವಶ್ಯಕತೆ ಇರುವವರಿಗೆ, ದಾನಿಗಳ ನೆರವಿನಿಂದ ಹಂತ ಹಂತವಾಗಿ, ಬೆಂಗಳೂರು ಮೈಸೂರು ಹುಬ್ಬಳ್ಳಿ ಮೊದಲಾದ ಕಡೆಗಳಲ್ಲಿ, ಉಚಿತ ದಿನಸಿ ಕಿಟ್ ಗಳನ್ನು ವಿತರಿಸಲು ಮುಂದಾಗಿವೆ.ದಿನಾಂಕ 8.6.2021 ರಂದು…

ಶಿಲ್ಪಾ,ಸಿಂಧೂರಿ ಎತ್ತಂಗಡಿ

ಬೆಂಗಳೂರು,ಜೂ,06:ಇಬ್ಬರು ಅಧಿಕಾರಿಗಳ ಕಿತ್ತಾಟದಿಂದ ಸರ್ಕಾರಕ್ಕೆ ತೀವ್ರ ತಲೆನೋವಾಗಿದ್ದ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್‌ ಅವರನ್ನು ವರ್ಗಾವಣೆ ಮಾಡುವ ಮೂಲಕ ಕಿತ್ತಾಟಕ್ಕೆ ಇತಿಶ್ರೀ ಹಾಡಿದೆ. ರೋಹಿಣಿ ಅವರನ್ನು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಅವರು ಇದೇ ಹುದ್ದೆಯಲ್ಲಿದ್ದರು. ಶಿಲ್ಪಾ ನಾಗ್ ಅವರನ್ನು ಆವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ನಿರ್ದೇಶಕರಾಗಿ (ಇ– ಆಡಳಿತ) ವರ್ಗಾವಣೆ ಮಾಡಲಾಗಿದೆ. ವಾಣಿಜ್ಯ ತೆರಿಗೆ ಇಲಾಖೆಯ (ಜಾರಿ) ಹೆಚ್ಚುವರಿ ಆಯುಕ್ತರಾಗಿದ್ದ…

ಕೊರೊನಾ ಪ್ಯಾಕೇಜ್:ಮೊದಲ ಹಂತದ ಕಂತಿನ ೭೪೯.೫೫ ಕೋಟಿ ರೂ ಬಿಡುಗಡೆ

ಬೆಂಗಳೂರು ,ಜೂ,೦೫: ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಶ್ರಮಿಕ ವರ್ಗಕ್ಕೆ ಘೋಷಣೆ ಮಾಡಿದ್ದ ಆರ್ಥಿಕ ಪ್ಯಾಕೇಜ್‌ನ ಮೊದಲ ಕಂತಿನ ೭೪೯.೫೫ ಕೋಟಿ ರೂಗಳ ಮೊತ್ತದ ಹಣವನ್ನು ಇಂದು ಬಿಡುಗಡೆ ಮಾಡಲಾಗಿದೆ. ಗೃಹ ಕಚೇರಿ ಕೃಷ್ಣದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹಾಧನವನ್ನು ನೇರವಾಗಿ ಅವರುಗಳ ಬ್ಯಾಂಕ್‌ಖಾತೆಗಳಿಗೆ ಜಮಾ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಡಿಬಿಟಿ ಮೂಲಕ ಫಲಾನುಭವಿಗಳ ಬ್ಯಾಂಕ್ , ಖಾತೆಗೆ ಕಟ್ಟಡ ಕಾರ್ಮಿಕರಿಗೆ ತಲಾ ೩…

ಕೊರೊನಾ ಸಂದರ್ಭದಲ್ಲೂ ಲೋಕೋಪಯೋಗಿ ಇಲಾಖೆ ಶೇ೯೯ ಸಾಧನೆ

ಬೆಂಗಳೂರು,ಜೂ.೫: ಕೊರೊನಾ ಸಂಕಷ್ಟದಲ್ಲೂ ಇಲಾಖೆ ೨೦೨೦-೨೧ ಸಾಲಿನಲ್ಲಿ ೧೦,೮೯೩ ಕೋಟಿ ಅನುದಾನದಲ್ಲಿ ೧೦,೭೪೩ ಕೋಟಿ ಆರ್ಥಿಕ ಪ್ರಗತಿ (ಶೇ ೯೯) ಸಾಧಿಸಿದೆ’ ಎಂದು ಉಪ ಮುಖ್ಯಮಂತ್ರಿಯೂ ಆಗಿರುವ ಲೋಕೋಪಯೋಗಿ ಸಚಿವ ಗೋವಿಂದ ಎಂ ಕಾರಜೋಳ ತಿಳಿಸಿದರು ಶನಿವಾರ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘೨೦೧೯-೨೦ ಸಾಲಿನಲ್ಲಿ ೯,೦೩೩ ಕೋಟಿ ೮,೭೮೮ ಕೋಟಿ ಆರ್ಥಿಕ ಪ್ರಗತಿ (ಶೇ ೯೭) ಪ್ರಗತಿ ಸಾಧಿಸಲಾಗಿತ್ತು’ ಎಂದರು.ವಿವಿಧ ಯೋಜನೆಗಳಡಿ ಒಟ್ಟಾರೆ ೧೨೧೨೫ ಕಿಮೀ ರಸ್ತೆ ಅಭಿವೃದ್ಧಿಗೆ ? ೧೨,೧೨೨ ಕೋಟಿ ವೆಚ್ಚ ಮಾಡಲಾಗಿದೆ.…

ಶಿಲ್ಪಾ ರಾಜೀನಾಮೆ ಕುರಿತು ಸೋಮವಾರ ನಿರ್ಧಾರ?

ಮೈಸೂರು,ಜೂ,೦೫: ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ನೀಡಿರುವ ರಾಜೀನಾಮೆಯನ್ನು ಸ್ವೀಕರಿಸಿರುವ ಮುಖ್ಯಕಾರ್ಯದರ್ಶಿ ಈ ಕುರಿತು ಸೋಮವಾರ ನಿರ್ಧಾರ ಮಾಡುವ ಸಾಧ್ಯತೆಗಳಿವೆ ಮೈಸೂರು ಜಿಲ್ಲಾಧಿಕಾರಿ ವಿರುದ್ಧ ಅಕ್ರೋಶ ವ್ಯಕ್ತಪಡಿಸಿರುವ ಶಿಲ್ಪಾ ಅವರು ರಾಜೀನಾಮೆ ಸಲ್ಲಿಸಿದ್ದರು ಈ ಕುರಿತು ನಿನ್ನೆ ಮುಖ್ಯಕಾರ್ಯದರ್ಶಿ ರವಿಕುಮಾರ್ ಅವರು ಇಬ್ಬರು ಅಧಿಕಾರಿಗಳ ಜೊತೆ ಪ್ರತ್ಯೇಕವಾಗಿ ಚರ್ಚಿಸಿದ್ದರು. ಈ ವೇಳೆ ಶಿಲ್ಪಾ ನೀಡಿದ ರಾಜೀನಾಮೆಯನ್ನು ಪಡೆದಿದ್ದ ರವಿಕುಮಾರ್ ವರು ಮುಖ್ಯಮಂತ್ರಿ ಅವರಿಗೆ ಈ ಇಬ್ಬರು ಅಧಿಕಾರಿಗಳ ಕುರಿತು ವರದಿ ಸಲ್ಲಿಸಿ ಆ ನಂತರ ಮೈಸೂರಿನಲ್ಲಿ ಐಎಎಸ್…

ಹಸಿದವರ ನೆರವಿಗೆ ಧಾವಿಸಿ :ಡಾ ಆರೂಢಭಾರತೀ ಸ್ವಾಮೀಜಿ.

ಬೆಂಗಳೂರು,ಜೂ,04:ಕೊರೊನಾ ಮಹಾಮಾರಿ ಇಡೀ ಜನಜೀವನವನ್ನೇ ತಲ್ಲಣಗೊಳಿಸಿದೆ. ಜನತೆ ಸ್ವಾರ್ಥ ತ್ಯಜಿಸಿ ಮಾನವೀಯತೆ ಮೆರೆಯಬೇಕು. ಹಸಿದವರಿಗೆ ಅನ್ನದಾನದಂಥ ನೆರವಿಗೆ ಧಾವಿಸಬೇಕು ” ಎಂದು ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಡಾ ಆರೂಢಭಾರತೀ ಸ್ವಾಮೀಜಿ ಹೇಳಿದರು. ಅವರು ಇಂದು ಕೆಂಗೇರಿಯ ಕೋಟೆ ಬೀದಿಯಲ್ಲಿ ದೇಶಭಕ್ತಿ ಫೌಂಡೇಶನ್, ಕಲಾ ಕದಂಬ ಆರ್ಟ್ ಸೆಂಟರ್ ಹಾಗೂ ಒಳಿತಿಗಾಗಿ ಮಿಡಿಯುವ ಮನಸುಗಳ ತಂಡ ಇವುಗಳ ಸಹಯೋಗದಲ್ಲಿ ನಡೆದ ಅನ್ನಗಂಗಾ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಕೆಂಗೇರಿಯಲ್ಲಿ ಈ ಯೋಜನೆ ಕಳೆದ ಹದಿನೈದು…

ರಾಜ್ಯದಲ್ಲಿ ಕೊರೊನಾ ಸೋಂಕಿತರ ಪ್ರಕರಣ ಇಳಿಮುಖ

ಬೆಂಗಳೂರು,ಜೂ,04: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೊಂಕಿತರ ಪ್ರಕರಣಗಳು ಇಳಿಮುಖವಾಗುತ್ತಿವೆ .ಇಂದು 16,068 ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ 26,69,514ಕ್ಕೆ ಏರಿಕೆಯಾಗಿದೆ. ಇನ್ನು ಕಳೆದ 24 ಗಂಟೆಯಲ್ಲಿ ಮಹಾಮಾರಿಗೆ 364 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 30,895ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಗಳೂರಿನಲ್ಲಿ ಇಂದು 3,221 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 11,77,496ಕ್ಕೆ ಏರಿಕೆಯಾಗಿದೆ. ಇನ್ನು ನಗರದಲ್ಲಿ ಸೋಂಕಿಗೆ…

ಮೈಸೂರು ಜಿಲ್ಲಾ ಆಡಳಿತದಲ್ಲಿ ಅಯೋಮಯ-ಉಸ್ತುವಾರಿ ಸಚಿವರ ವೈಫಲ್ಯ

ಬೆಂಗಳೂರು,ಜೂ,೦೪: ಮೈಸೂರು ಜಿಲ್ಲಾ ಆಳಿತ ವ್ಯವಸ್ಥೆಯೇ ಹದಗೆಟ್ಟಿದೆ, ಅಸಮರ್ಥ ಉಸ್ತುವಾರಿ ಸಚಿವರಿಂದ ಇಡೀ ವ್ಯವಸ್ಥೆ ಹಾಳುಗೆಟ್ಟಂತಿದೆ. ಮೈಸೂರಿನಲ್ಲಿ ಕಳೆದ ಆರು ತಿಂಗಳಿನಿಂದಲೂ ಜಿಲ್ಲಾಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮಧ್ಯೆ ನಿರಂತರವಾಗಿ ಮಾತಿನ ಸಮರಗಳು. ಏಟಿಗೆ-ಎದುರೇಟು ನಡೆಯುತ್ತಲೇ ಇದೆ ಇದರ ಮುಂದುವರೆದ ಭಾಗವಾಗಿ ಈಗ ಪಾಲಿಕೆ ಆಯುಕ್ತರೇ ರಾಜೀನಾಮೆ ಕೊಟ್ಟಿದ್ದಾರೆ ಎಂದರೆ ಇದರಲ್ಲಿ ಉಸ್ತುವಾರಿ ಸಚಿವ ಸೋಮಶೇಖರ್ ಅವರ ವೈಫಲ್ಯವಂತೂ ಎದ್ದು ಕಾಣುತ್ತದೆ. ಇದು ಕಳೆದ ಎರಡು ತಿಂಗಳಿನಿಂದಲೂ ಇಬ್ಬರಲ್ಲೂ ಆಂತರಿಕ ಕಚ್ಚಾಟ ನಡೆಯುತ್ತಿತ್ತು, ಜೊತೆಗೆ ಜನಪ್ರತಿನಿಧಿಗಳು ರೋಹಿಣಿ ವಿರುದ್ಧ…

ಪತ್ರಕರ್ತರು ದೇಶದ ಕನ್ನಡಿ- ಜಾಧವ್

ಶಿಕಾರಿಪುರ,ಜೂ,೦೪:ಪ್ರಜಾ ಪ್ರಭುತ್ವದ ನಾಲ್ಕನೇ ಅಂಗವಾಗಿ ಕೆಲಸ ಮಾಡುತ್ತಿರುವ ಹಾಗೂ ಕೂ ರೋ ನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ಸುದ್ದಿ ಮಾಡಿ ಸಮಾಜದಲ್ಲಿ ಗುರುತಿಸಿ ಕೊಂಡಿರುವ ಪತ್ರಕರ್ತರು ದೇಶವನ್ನು ಪ್ರತಿಬಿಂಬಿಸುವ ಕನ್ನಡಿ. ಎಂದು ಬೀಳಕಿ ಆಯುಷ್‌ಮಾ ಇಲಾಖೆಯ ಆಯುರ್ವೇದ ಆಸ್ಪತ್ರೆ ವೈದ್ಯ ಡಾ.ಖೇಮು ಜಾಧವ್ ಅಭಿಪ್ರಾಯಿಸಿದರು. ಅವರು ಶಿಕಾರಿಪುರದ ಸುದ್ದಿ ಮನೆಯಲ್ಲಿ ಪತ್ರಕರ್ತರಿಗೆ ಆಯುರ್ವೇದದ ಮೆಡಿಕಲ್ ಕಿಟ್ ವಿತರಿಸಿ ಮಾತನಾಡಿದರು.ಆಯುಷ್ಮಾನ್ ಇಲಾಖೆಯ ಎಂಟುನೂರು ನಲವತ್ತು ಸಿಬ್ಬಂದಿಗಳು ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡುತ್ತಲೇ ಪ್ರತಿಭಟಿತ್ತಿದ್ದಾರೆ ಆದರೆ ಸರ್ಕಾರ…

ಪ್ರೊ.ವಸಂತ ಕುಷ್ಠಗಿ ನಿಧನ

ಬೆಂಗಳೂರು, ಜೂ,04:ಕನ್ನಡದ ಹಿರಿಯ ಬರಹಗಾರ, ಕವಿ,ಪ್ರೊ. ವಸಂತ ಕುಷ್ಟಗಿ ಅವರು ಇಂದು ನಿಧನರಾಗಿದ್ದಾರೆ. ಕನ್ನಡ ಪುಸ್ತಕಲೋಕಕ್ಕೆ ತಮ್ಮ ಅನನ್ಯ ಕಾವ್ಯ ಪ್ರತಿಭೆಯಿಂದ ಮಹತ್ವದ ಕೊಡುಗೆ ಕೊಟ್ಟ ಲೇಖಕರಲ್ಲಿ ಪ್ರೊಫೆಸರ್ ವಸಂತ ಕುಷ್ಟಗಿ ಅವರೂ ಒಬ್ಬರು. ಕಲ್ಬುರ್ಗಿ ಮೂಲದ ವಸಂತ ಕುಷ್ಟಗಿ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ಎಂ. ಎ. ಪದವಿ ಪಡೆದ ನಂತರ ಬೀದರ್ ನ ಭೂಮಿ ರೆಡ್ಡಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಆನಂತರ ವಿವಿಧ ಕಾಲೇಜುಗಳಲ್ಲಿ ಅನೇಕ ಹಂತದ ಹುದ್ದೆಗಳನ್ನು ನಿರ್ವಹಿಸಿ, ಪ್ರಾಂಶುಪಾಲರಾಗಿ ನಿವೃತ್ತರಾದರು. ರಮನಂದ ತೀರ್ಥ ಸಂಶೋಧನಾ…

ರಾಜ್ಯದಲ್ಲೂ ದ್ವತೀಯ ಪಿಯುಸಿ ಪರೀಕ್ಷೆ ರದ್ದು-ಸುರೇಶ್ ಕುಮಾರ್

ಬೆಂಗಳೂರು, ಜೂ,04: ಕೋವಡ್ ತೀವ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಪರೀಕ್ಷೆ ರದ್ದು ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಘೋಷಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಛಿ ನಡೆಸಿ ಮಾತನಾಡಿದ ಅವರು, ರಾಜ್ಯದ ಶಿಕ್ಷಣ ತಜ್ಞರು, ಸಚಿವರು, ಹಿರಿಯ ಪತ್ರಕರ್ತರು, ಪೋಷಕರು ಹಾಗೂ ವಿದ್ಯಾರ್ಥಿಗಳ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದರು. ಕೊರೊನಾವೈರಸ್ ಹಾವಳಿ ನಡುವೆ ಪರೀಕ್ಷೆ ನಡೆಸಬೇಕೋ ಬೇಡವೋ ಎಂಬ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗಿದೆ. ರಾಜ್ಯದಲ್ಲಿ ಒಂದು ವರ್ಗವು ಪರೀಕ್ಷೆ ಬೇಡ ಎನ್ನುತ್ತಿದ್ದರೆ, ಇನ್ನೊಂದು…

ಜೂ.14 ರವರೆಗೂ ಲಾಕ್ ಡೌನ್ ವಿಸ್ತರಣೆ; 500 ಕೋಟಿ ಪ್ಯಾಕೇಜ್

ಬೆಂಗಳೂರು, ಜೂ, 03; ನಿರೀಕ್ಷೆಯಂತೆ ಕರ್ನಾಟಕದಲ್ಲಿ ಲಾಕ್‌ಡೌನ್ ಒಂದು ವಾರಗಳ ಕಾಲ ವಿಸ್ತರಣೆ ಮಾಡಲಾಗಿದೆ. ಜೂನ್ 14ರ ತನಕ ಲಾಕ್‌ಡೌನ್ ವಿಸ್ತರಣೆ ಮಾಡಿದ್ದು, ಕೆಲವು ವಿನಾಯಿತಿಗಳನ್ನು ಸರ್ಕಾರ ಘೋಷಣೆ ಮಾಡಿದೆ. ಗುರುವಾರ ಸಂಜೆ ವಿಧಾನಸೌಧದಲ್ಲಿ ಸಚಿವರ ಜೊತೆ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, “ಜೂನ್ 14ರ ತನಕ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ” ಎಂದು ಘೋಷಿಸಿದರು. “ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಂದಿದೆ. ಆದರೂ ವೈರಾಣು ಹರಡುವಿಕೆ ತಡೆಯಬೇಕಿದೆ. ಆರೋಗ್ಯ ಪರಿಣಿತರ ಸಲಹೆ ಪಾಲಿಸಬೇಕಿದೆ. ಆದ್ದರಿಂದ ಜೂನ್…

ಗೂಗಲ್ ಸಂಸ್ಥೆ ವಿರುದ್ಧ ಕಾನೂನು ಕ್ರಮ – ಅರವಿಂದ ಲಿಂಬಾವಳಿ

ಬೆಂಗಳೂರು,ಜೂ,03:ಕನ್ನಡವನ್ನು ಕೆಟ್ಟ ಭಾಷೆಯೆಂದು ಬಿಂಬಿಸಿದ ಗೂಗಲ್ ಸಂಸ್ಥೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ  ಅರವಿಂದ ಲಿಂಬಾವಳಿ ಹೇಳಿದ್ದಾರೆ. ಭಾರತದ ಕೆಟ್ಟ ಭಾಷೆ ಯಾವುದು ಎಂದು ನೆಟ್ಟಿಗರು ಗೂಗಲ್ ನಲ್ಲಿ ಪ್ರಶ್ನೆ ಮಾಡಿದರೆ ಕನ್ನಡ ಎಂಬ ಉತ್ತರ ಬರುತ್ತಿತ್ತು. ಈ ವಿಚಾರವನ್ನು ಸಚಿವ ಅರವಿಂದ ಲಿಂಬಾವಳಿ ಅವರ ಗಮನಕ್ಕೆ ತಂದಾಗ , ಅವರು ಇದು ಅತ್ಯಂತ ಖಂಡನೀಯ ಸಂಗತಿ. ಗೂಗಲ್ ಆಗಲಿ ,ಬೇರೆ ಯಾರೇ ಆಗಲಿ ಕನ್ನಡ ಭಾಷೆ…

1 25 26 27 28 29 33
error: Content is protected !!