ಜಿಲ್ಲೆ
ಗ್ರಾಮೀಣ ಭಾಗದ ಯುವಕರಿಗೆ ತಂತ್ರಜ್ಞಾನದ ಶಿಕ್ಷಣ ನೀಡಿ ಉದ್ಯೋಗ ಸೃಷ್ಟಿಸಿದ ಕಿಯೋನಿಕ್ಸ್: ಡಿಸಿಎಂ ಡಿ.ಕೆ.ಶಿವಕುಮಾರ್ ಶ್ಲಾಘನೆ
ಬೆಂಗಳೂರು, ಏ.21-“ತಂತ್ರಜ್ಞಾನದಿಂದಲೇ ಅಭಿವೃದ್ಧಿ, ಸಂಪತ್ತು, ಶಿಕ್ಷಣ ಎನ್ನುವಂತಾಗಿದೆ. ಪ್ರತಿಯೊಂದು ಏಳಿಗೆಯೂ ಸಹ ತಂತ್ರಜ್ಞಾನದ ಮೂಲಕ ನೋಡುವಂತಾಗಿದೆ. ಗ್ರಾಮೀಣ ಭಾಗದ ಯುವಕರಿಗೆ ಹೊಸ ತಂತ್ರಜ್ಞಾನದ ಶಿಕ್ಷಣ ನೀಡಿರುವ ಕಿಯೋನಿಕ್ಸ್ ಉದ್ಯೋಗ ಸೃಷ್ಟಿ ಮಾಡಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಶ್ಲಾಘಿಸಿದರು. ಬೆಂಗಳೂರಿನಲ್ಲಿ ಕಿಯೋನಿಕ್ಸ್ ಸಂಸ್ಥೆಯ ಇ-ಕಾಮರ್ಸ್ ಪೋರ್ಟಲ್ ಅನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಉದ್ಘಾಟಿಸಿ ಮಾತನಾಡಿದರು. “ನೂತನ ತಂತ್ರಜ್ಞಾನದ ವಿಚಾರದಲ್ಲಿ ಕಿಯೋನಿಕ್ಸ್ ಸಂಸ್ಥೆ ದೇಶಕ್ಕೆ ಮಾದರಿ. ಅನೇಕ ರಾಜ್ಯಗಳಿಗೆ ತನ್ನ ಸೇವೆಯನ್ನು ನೀಡುತ್ತಿದೆ. ಇಂತಹ ಉತ್ತಮವಾದ…