Browsing: ಅಂಕಣ

ಅಂಕಣ

ಭಾಷೆ ತಂದ ಗೊಂದಲ

ಭಾಷೆ ತಂದ ಗೊಂದಲ ನಮ್ಮೂರು ಸರ್ವ ಜಾತಿ ಮತ್ತು ಧರ್ಮಗಳ ಸಂಗಮವಾಗಿತ್ತು. ಊರಿನಿಂದ ಬಲಕ್ಕೆ ಸಾಗಿದರೆ ಮುತ್ತಗನಹಳ್ಳಿ ಸಿಗುತ್ತಿತ್ತು. ಆ ಊರಿನ ದಾರಿ ಮೊದಲಾಗುತ್ತಿದ್ದಂತೆ ದೊಡ್ಡ ದೊಡ್ಡ ಆಲದ ಮರ, ರಾಗಿ ಮರಗಳಿದ್ದವು. ಆ ಮರಗಳ ನೆರಳಲ್ಲಿ ದೊಡ್ಡ ದೊಡ್ಡ ಕಲ್ಲುಗಳು ಇದ್ದವು. ಆ ಕಲ್ಲುಗಳು ಅಲ್ಲೇ ಇದ್ದವುಗಳಲ್ಲ. ಅವನ್ನು ಹೊರಗಡೆಯಿಂದ ಶಿಲ್ಪಿಗಳು ತರಿಸಿಕೊಂಡು ಅದರಿಂದ ದೇವರ ಮೂರ್ತಿಗಳನ್ನು ಮಾಡುತ್ತಿದ್ದರು. ಶಿಲ್ಪಿಗಳು ಆ ಕಲ್ಲುಗಳ ಮೇಲೆ ಕೂತು ಉಳಿ ಮತ್ತು ಸುತ್ತಿಗೆಯಿಂದ ‘mಣ್ ಟಣ್’ ಶಬ್ದ ಮಾಡುತ್ತಾ…

ಗುರು ದೇವೋ ಮಹೇಶ್ವರಃ

ಗುರು ದೇವೋ ಮಹೇಶ್ವರಃ ಗುರು ಸೃಷ್ಟಿ , ಸ್ಥಿತಿ, ಲಯಕಾರನು. ಶಿಕ್ಷಕ ಅಥವ ಗುರು ಭೌತಿಕವಾಗಿ ಏನೂ ತಯಾರಿಸಲಾರದಿರಬಹುದು. ಆದರೆ ಹೀಗಿತ್ತು. ಹೀಗಿದೆ, ಹೀಗಿರಬೇಕು ಎಂದು ಕಲಿಸುತ್ತಾ ವಿದ್ಯಾರ್ಥಿಗಳನ್ನು ಗುರುಯತ್ತ ಕೊಂಡೊಯ್ಯುವ ಮಾರ್ಗವನ್ನು, ಧ್ಯೇಯವನ್ನು ವಿದ್ಯಾರ್ಥಿಗಳ ಮನದಲ್ಲಿ ಆಸಕ್ತಿಯನ್ನು ಮೂಡುವಂತೆ ಮಾಡುತ್ತಾನೆ. ಮಕ್ಕಳ , ವಿದ್ಯಾರ್ಥಿಗಳ ಮನದಲ್ಲಿನ ತಪ್ಪು ಕಲ್ಪನೆಗಳನ್ನು, ಕೆಟ್ಟ ಆಲೋಚನೆಗಳನ್ನು ದೂರ ಮಾಡಿ ಒಳಿತಿನೆಡೆಗೆ ಸಾಗಿಸುತ್ತಾನೆ. ಏನೂ ಕಾಣದ , ಅರಿಯದ ಅಂಧಕಾರದ ಮನಸ್ಸಿನಲ್ಲಿ ಬೆಳಕನ್ನು ಚೆಲ್ಲಿ ಒಂದು ಅಭೂತಪೂರ್ವವಾದ ಸಂಚಲನವನ್ನು ಉಂಟುಮಾಡುತ್ತಾನೆ. ಗುರುವಿಗೆ…

ನೀಲಕಂಠಪ್ಪನ ವ್ಯಕ್ತಿತ್ವ ಮತ್ತು ಆತನ ಕಾಯಕ ನಿಷ್ಠೆ

ನೀಲಕಂಠಪ್ಪನ ವ್ಯಕ್ತಿತ್ವ ಮತ್ತು ಆತನ ಕಾಯಕ ನಿಷ್ಠೆ ಹಿಂದಿನ ಸಂಚಿಕೆಯ ಮುಂದುವರೆದ ಭಾಗ ಶಿವಣ್ಣ ಅವರ ಅದ್ಭುತ ಗಮಕಕಲೆಯನ್ನು ಕೇಳಿಯೇ ಅನುಭವಿಸಬೇಕು. ಅಷ್ಟೇನೂ ಹೆಚ್ಚು ಓದಿರದಿದ್ದ ಶಿವಣ್ಣ ಅವರ ಸ್ಪಷ್ಟ ಉಚ್ಚಾರದ ಪಾರಾಯಣ ಅವರ ಗಮಕಕಲೆಯ ಹೆಗ್ಗುರುತು ಎನ್ನಬಹುದು. ಇನ್ನು ಕುಂಬಾರ ಏಕಾಂತಪ್ಪನವರ ಅರ್ಥಗಾರಿಕೆಯಂತೂ ಪುರಾಣಕಥೆ ಆಲಿಸುವವರನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುವಷ್ಟು ಶಕ್ತಿಶಾಲಿಯಾಗಿತ್ತು. ಇಡೀ ದಿನ ಹೊಲಗದ್ದೆಗಳಲ್ಲಿ ದುಡಿದು ಸಂಜೆಯ ವೇಳೆಯಲ್ಲಿ ಇಂತಹ ಧಾರ್ಮಿಕ ಪ್ರವಚನಗಳಿಗೆ ಕಿವಿಯಾಗುತ್ತಿದ್ದ ನನ್ನೂರವರು ಆ ಹೊತ್ತಿನಲ್ಲಿ ಅನಾಯಾಸವಾಗಿ ಸಂಪಾದಿಸುತ್ತಿದ್ದ ಕೋಟಿಪುಣ್ಯ ಇಂದೂ…

ವಿಜಯನಗರ ಮುಸ್ಲಿಮರು ಮತ್ತು ಗೋರಿಕೆಳಗಣ ಗ್ರಾಮ

ವಿಜಯನಗರ ಮುಸ್ಲಿಮರು ಮತ್ತು ಗೋರಿಕೆಳಗಣ ಗ್ರಾಮ ಹಂಪೆಯ ಬಜಾರುಗಳ ಅಧ್ಯಯನ ಸಂದರ್ಭದಲ್ಲಿ ವಿಜಯನಗರ ರಾಜಧಾನಿ ಪಟ್ಟಣವನ್ನು ಕುರಿತು ವಿದೇಶಿ ಪ್ರವಾಸಿಗರ ವರದಿ ಮತ್ತು ಶಾಸನಗಳನ್ನು ಪರಿಶೀಲಿಸಿ ದಾಖಲಿಸಿಕೊಳ್ಳುವ ಸಂದರ್ಭ ಅನಿವಾರ್ಯವಾಗಿ ಪುರಪಟ್ಟಣದ ಅನೇಕ ವಿಷಯಗಳು, ಅವುಗಳ ಸ್ಥಳನಾಮಗಳು ಕಣ್ಮುಂದೆ ಬಂದು ಹೋಗುತ್ತಿದ್ದವು. ಅವುಗಳಲ್ಲಿ ಗೋರಿಕೆಳಗಣ ಗ್ರಾಮ ಎಂಬ ಸ್ಥಳನಾಮವು ವಿಶೇಷವಾಗಿ ನನ್ನ ಗಮನವನ್ನು ಸೆಳೆಯಿತು. ಇದರ ಜಾಡನ್ನು ಹಿಡಿದು ಹೊರಟಾಗ ವಿಜಯನಗರ ಸಾಮ್ರಾಜ್ಯದಲ್ಲಿ ಮುಸ್ಲಿಮರು ಸೇನಾಯೋಧರಾಗಿ, ಅಶ್ವಾಳು-ಬಿಲ್ಲಾಳುಗಳಾಗಿ, ದಂಡನಾಯಕರಾಗಿ, ರಾಯಭಾರಿಗಳಾಗಿ ಕಾರ್ಯ ನಿರ್ವಹಿಸಿದ ಸಂಗತಿ ಅತ್ಯಾಕರ್ಷಕವಾಗಿ ಗೋಚರಿಸಿತ್ತು.…

ಸಂನ್ಯಾಸಿಯ ಸಹವಾಸ ಸಂನ್ಯಾಸಿಯನ್ನೇ ಮಾಡದು!

ಸಂನ್ಯಾಸಿಯ ಸಹವಾಸ ಸಂನ್ಯಾಸಿಯನ್ನೇ ಮಾಡದು! ಎಳೆಯ ವಯಸ್ಸಿನಲ್ಲಿಯೇ “ಮನೆಯನ್ನು ತೊರೆದು ಗುರುಶೋಧನೆಗೆ ಹೊರಟಿರುವೆ” ಎಂಬ ಸಿದ್ಧನ ಮಾತನ್ನು ಕೇಳಿ ಮಿತ್ರರಾದ ಸೋಮ-ಭೀಮರು ವಿರೋಧಿಸಿದರು “ನಮ್ಮನ್ನು ಹೆತ್ತ ತಂದೆ ತಾಯಿಗಳೇ ನಮಗೆ ದೇವರು! ಅವರನ್ನು ಬಿಟ್ಟು ತೆರಳುವುದು ಸರಿಯಲ್ಲ. ಇದು ಮುಪ್ಪಾವಸ್ಥೆಯಲ್ಲಿ ಮಾಡಬೇಕಾದ ಕೆಲಸ”-ಎಂದರು. ಆಗ ಸಿದ್ಧನು ತನ್ನ ವಿಚಾರವನ್ನು ಹೀಗೆ ಮಂಡಿಸಿದ: ನೀವು ಹೇಳುವುದು ಸರಿಯಾಗಿದೆ. ಇದನ್ನು ಹತ್ತಾರು ಸಾವಿರ ವರ್ಷಗಳ ಹಿಂದೆಯೇ ವೇದವೇ ಸಾರಿದೆ, “ಮಾತೃದೇವೋ ಭವ,ಪಿತೃದೇವೋ ಭವ” ತಾಯಿ ದೇವರೆಂದು ತಿಳಿದು ನಡೆದುಕೋ, ತಂದೆ…

ಒಂದೇ ಒಂದು ಜೀವದಾನ ಮತ್ತೊಂದು ನಿಬ್ಬೆರಗಿನ ಸಾಧನೆಗೆ ಹಾದಿಯಾಯ್ತು.!

ಒಂದೇ ಒಂದು ಜೀವದಾನ ಮತ್ತೊಂದು ನಿಬ್ಬೆರಗಿನ ಸಾಧನೆಗೆ ಹಾದಿಯಾಯ್ತು.! ನಿನಗೇನು ಹುಚ್ಚಾ!? ಆಸೆಗೂ ಒಂದು ಮಿತಿ ಇರಬೇಕು ಏ…ಹುಡುಗಿ ಈ ಸ್ಥಿತಿಯಲ್ಲಿ ಅದು ಸಾಧ್ಯವಾ!? ಕನಸಿಗೆ ಒಂದು ಮಿತಿ ಇದೆ. ಅತಿಯ ಪರಮಾವಧಿ ಇದು. ಸುಮ್ನೆ ಇರು.ಅಂದವರೆದಷ್ಟೋ!? ಮಾತು ಕೇಳಿ ನಕ್ಕವರೆಷ್ಟೋ!? ಪಾಪ ಏನೋ ಆಗಿದೆ ಎಂದು ಮರುಗಿದವರೆಷ್ಟೋ!? ಆದರೆ ತನ್ನದೇ ಛಲ ಮತ್ತು ಎಡೆ ಬಿಡದ ಪರಿಶ್ರಮದಿಂದ 2011 ರ ಬೆಳಿಗ್ಗೆ 10-55 ಕ್ಕೆ ಅತ್ಯುನ್ನತ ಶಿಖರ ಮೌಂಟ್ ಎವರೆಸ್ಟ್ ಏರಿದ ವಿಶ್ವದ ಮೊಟ್ಟ ಮೊದಲ…

ಶ್ರಾವಣಮಾಸದಲ್ಲಿ ಶನಿಮಹಾತ್ಮೆ ಪುರಾಣದ ವೈಶಿಷ್ಟ್ಯ

ಶ್ರಾವಣಮಾಸದಲ್ಲಿ ಶನಿಮಹಾತ್ಮೆ ಪುರಾಣದ ವೈಶಿಷ್ಟ್ಯ ವಾಡಿಕೆಯಂತೆ ಆ ವರ್ಷವೂ ದಸರೆಯ ಒಂದು ದಿನ ಮನೆಯಲ್ಲಿ ಶ್ರೀ ಶನಿಮಹಾತ್ಮನ ಪುರಾಣವನ್ನು ಓದುವ ವಾರ್ಷಿಕ ಮಹತ್ವದ ಧಾರ್ಮಿಕ ಆಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಪುರಾಣಪಾರಾಯಣಕ್ಕೆ ಮುನ್ನ ಮನೆಯಲ್ಲಿ ಹಿರಿಯರೊಬ್ಬರು ಪಾವಗಡದ ಶನಿದೇವರ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರುವುದೂ ಕೂಡ ನಾವು ಹಲವಾರು ವರ್ಷಗಳಿಂದ ತಪ್ಪದೇ ನಡೆಸಿಕೊಂಡು ಬಂದಿದ್ದ ನೇಮ. ಅದರ ಪ್ರಕಾರವಾಗಿಯೇ ಕಳೆದ ವಾರದ ಹಿಂದೆಯಷ್ಟೇ ನನ್ನ ತಾತನವರು ಪಾವಗಡಕ್ಕೆ ಹೋಗಿ ಬಂದಿದ್ದರು. ಸುಮಾರು ಎರಡು ತಾಸುಗಳ ಪುರಾಣಪಾರಾಯಣವಿತ್ತಾರೂ ಅದಕ್ಕಾಗಿ ಹತ್ತು…

ವಿಜಯನಗರ ಕಾಲದ ಅಣೆಕಟ್ಟೆಗಳು ಮತ್ತು ಪರಿಸರಸ್ನೇಹಿ ತಂತ್ರಜ್ಞಾನವೂ . . .

ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಿದ ಅಣೆಕಟ್ಟೆ ಮತ್ತು ಕಾಲುವೆಗಳಿಗೆ ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿದೆ. ಆದರೆ ವಿಜಯನಗರ ಕಾಲz ಮೊದಲ ಅಣೆಕಟ್ಟೆಯಾಗಿ ನಿರ್ಮಾಣಗೊಂಡದ್ದು ಹಂಪೆಯ ಬಳಿಯ ತುರ್ತು ಅಣೆಕಟ್ಟು. ಇದನ್ನು ಶಾಸನದಲ್ಲಿ “ಚಿಂತಾಯಕ ದೇವಂಣನು ಕಟ್ಟಿಸಿದ ಕಟ್ಟೆ ಶ್ರೀ ವಿರೂಪಾಕ್ಷ ಸದಣೂ ಬೊಮೋಜ ಮಾಡಿದ ಎಂದಿದೆ. ವಿರೂಪಾಕ್ಷ ಕ್ಷೇತ್ರದಲ್ಲಿ ಚಿಂತಾಯಕ ದೇವಂಣನು ಬೊಮ್ಮೋಜನಿಂದ ಇದನ್ನು ನಿರ್ಮಿಸಿದ ಎಂಬುದು ಶಾಸನಸ್ಥ ಸಂಗತಿ. ಬುಕ್ಕರಾಯನ ಕಾಲದಲ್ಲಿ ಇದು ನಿರ್ಮಾಣವಾಯಿತೆಂದು ಹೇಳಲಾಗುತ್ತದೆ. ವಿಜಯನಗರ ಕಾಲದ ಅಣೆಕಟ್ಟೆಗಳು ಮತ್ತು ಪರಿಸರಸ್ನೇಹಿ ತಂತ್ರಜ್ಞಾನವೂ .…

ಜನಪದ ಮತ್ತು ಆಧುನಿಕ ಕಾವ್ಯ ಕಲ್ಪನೆಯ ಸಾಮ್ಯತೆಗಳು..

ಆಧುನಿಕ ಮನುಷ್ಯನೆಂದಾಗ ಸಂಪ್ರದಾಯದ ಕೊಂಡಿಗಳನ್ನು ಸಡಿಲಿಸಿಕೊಂಡವರು ಎಂಬ ಅರ್ಥ ಹೊಳೆದರೆ, ಆಧುನಿಕ ಆಲೋಚನೆ ಎಂದಾಗ ಸಂಪ್ರದಾಯದ ಜುಗುಟುತನಗಳನ್ನು ಮೀರಿ ವೈಚಾರಿಕವಾಗಿ ಯೊಚಿಸುವುದು ಎಂದರ್ಥವಾಗುತ್ತದೆ. ಆಧುನೀಕರಣ ಎಂದರೆ ಹೊಸ ಹೊಸ ಆಲೋಚನೆ, ನಮ್ಮಲ್ಲೇ ಪೂರ್ವದಿಂದಲೂ ಇರುವ ಜಾನಪದ ಜ್ಞಾನವನ್ನು ತಳ್ಳಿಕೊಂಡು ಬಂದ ಜ್ಞಾನ, ವಿಜ್ಞಾನ, ತಂತ್ರಜ್ಞಾನಗಳ ಬಲವನ್ನು ಬಿಂಬಿಸುತ್ತದೆ. ಜನಪದ ಮತ್ತು ಆಧುನಿಕ ಕಾವ್ಯ ಕಲ್ಪನೆಯ ಸಾಮ್ಯತೆಗಳು.. ಆಧುನಿಕ ಈ ಪದದ ಬಳಕೆ ಅನೇಕ ರೀತಿಗಳಲ್ಲಿ ನಮ್ಮಲ್ಲಿ ಬಳಕೆಯಾಗುತ್ತಲಿದೆ. ಒಂದು ರೀತಿಯಲ್ಲಿ ಆಧುನಿಕ ಅನ್ನುವ ಪದವೇ ಕೆಲವರಿಗೆ ಆಶಾವಾದದ…

ಮೀಸಲಾತಿ ನೀತಿಗೆ ಕಾಯಕಲ್ಪದ ಅಗತ್ಯ

ಮೀಸಲಾತಿಯನ್ನು ಇದುವರೆಗೆ ಅನುಭವಿಸಿರುವವರು ಇತರರಿಗೆ ದಾರಿ ಮಾಡಿಕೊಡುವ ಔದಾರ್ಯದ ನಡವಳಿಕೆಗೆ ಇಂದಲ್ಲ ನಾಳೆ ಚಾಲನೆ ದೊರೆಯಬೇಕಿದೆ. ಈಗಿರುವ ಮೀಸಲಾತಿ ಪ್ರಮಾಣದಲ್ಲಿ ಎಲ್ಲರಿಗೂ ನ್ಯಾಯ ದೊರಕಿಸುವುದು ಅಸಾಧ್ಯ. ಮೀಸಲಾತಿ ನೀತಿ ಜಾರಿಗೆ ಬಂದ ನಂತರದಲ್ಲಿ ಅದರ ಲಾಭ ಪಡೆದಿರುವ ಉದ್ಯೋಗಸ್ಥರು, ರಾಜಕಾರಣಿಗಳು, ಅಧಿಕಾರಿ ನೌಕರ ಸಮುದಾಯ ಇತ್ಯಾದಿ ಮೂರುಮೂರು ಪೀಳಿಗೆ ಜನ ತ್ಯಾಗಕ್ಕೆ ಮುಂದಾಗಬೇಕಿದೆ. ಮೀಸಲಾತಿಯಿಂದ ಅನುಕೂಲದ ಹಂತ ಏರಿದವರನ್ನು ಪಟ್ಟಿಯಿಂದ ತೆಗೆದುಹಾಕಿ ಅವಕಾಶ ವಂಚಿತರಿಗೆ ಜಾಗ ಕಲ್ಪಿಸಬೇಕೆಂಬ ಒತ್ತಾಯದ ಜನಾಂದೋಳನ ಹಿಂದೊಮ್ಮೆ ನಡೆದಿತ್ತು. ಅಂಥದೇ ಆಂದೋಲನಕ್ಕೆ ಜನ…

ಸಿನೇಮಾ ಟೆಂಟ್ ಮತ್ತು ಹಾಡಿನ ಹುಚ್ಚು

ಸಿನೇಮಾ ಟೆಂಟ್ ಮತ್ತು ಹಾಡಿನ ಹುಚ್ಚು ನಮ್ಮೂರು ಒಂದು ಮುನ್ನೂರು ಮನೆಗಳಿದ್ದ ಊರಾಗಿತ್ತು. ಅಲ್ಲಿ ಸರ್ಕಾರಿ ಆಯುರ್ವೇದಿಕ್ ಆಸ್ಪತ್ರೆ ಇತ್ತು, ಪ್ರಾಣಿಗಳ ಆಸ್ಪತ್ರೆ ಇತ್ತು, ಸರ್ಕಾರಿ ಶಾಲೆ ಹತ್ತನೇ ತರಗತಿವರೆಗೆ ಇತ್ತು. ಮತ್ತು ಮಂದಿರ ಮಸೀದಿ ಇದ್ದವು. ಈ ಊರೊಂದು ಅದ್ಭುತವಾಗಿತ್ತು. ಯಾವುದೇ ಜಗಳವಿಲ್ಲ , ಗಲಾಟೆಯಿರಲಿಲ್ಲ. ಇವೆಲ್ಲದರೊಂದಿಗೆ ಒಂದು ಟೆಂಟ್ ಸಹ ಇತ್ತು. ನಾ ಮೊದಲೇ ಒಮ್ಮೆ ನಿಮಗೆ ಹೇಳಿದ್ದೆ. ಟೆಂಟ್ ಗೇಟ್ ಕೀಪರ್ ಖಾದರ್ ತಾತ ಅಂತ. ಆ ಟೆಂಟ್ ಕೆಲವು ವರ್ಷಗಳ ನಂತರ…

ಮನುವಾದ ಸುಣ್ಣವಾದರೆ ತಾಲೀಬಾನ್ ಬೆಣ್ಣೆ ಹೇಗಾದೀತು?

ಮನುವಾದ ಸುಣ್ಣವಾದರೆ ತಾಲೀಬಾನ್ ಬೆಣ್ಣೆ ಹೇಗಾದೀತು? ನಿರಂತರ ಬಾಹ್ಯ ಮತ್ತು ಆಂತರಿಕ ದಾಳಿಗಳಿಗೆ ಗುರಿಯಾಗುತ್ತಲೇ ಬಂದಿರುವ ಪುಟ್ಟ ದೇಶ ಅಫ್ಘಾನಿಸ್ತಾನ. ಯಾರೂ ಗೆಲ್ಲಲಾಗದ ನೆಲವೆಂಬ ಪ್ರತೀತಿ. ‘ಸಾಮ್ರಾಜ್ಯಗಳ ಸಮಾಧಿ’ ಎಂದೇ ಇತಿಹಾಸ ಪ್ರಸಿದ್ಧ ದಾಳಿಕೋರರು, ಧರ್ಮಾಂಧರು, ಭಯೋತ್ಪಾದಕರು, ಅತೀವ ಬಡತನ, ಭ್ರಷ್ಟಾಚಾರದ ತಿರುಗಣಿಗೆ ಸಿಲುಕಿ ನಲುಗಿರುವ ನತದೃಷ್ಟ ನಾಡು. ಮೂರೂಕಾಲು ಕೋಟಿಯ ಪೈಕಿ  ಶೇ.99.7ರಷ್ಟು ಜನ ಇಸ್ಲಾಮ್ ಅನುಯಾಯಿಗಳು. ಇಸ್ಲಾಮ್ ಕಾಲಿಟ್ಟ ಹೊತ್ತಿನಲ್ಲಿ ಈ ದೇಶದ ಬಹುಸಂಖ್ಯಾತರು ಬೌದ್ಧರು ಮತ್ತು ಜರತುಷ್ಟ್ರರು. ಎರಡನೆಯ ವಿಶ್ವಯುದ್ಧದ ನಂತರ ಸೂಪರ್…

ಧರ್ಮಮೀರಿದ ಮಾನವೀಯತೆ

ದರ್ಮಮೀರಿದ ಮಾನವೀಯತೆ ಅದು ೨೦೦೪ರ ಏಪ್ರಿಲ್ ತಿಂಗಳ ೨೩ನೇ ತಾರೀಖಿನ ರಾತ್ರಿ ಒಂಬತ್ತರ ಸಮಯ. ಮೊದಲನೇ ಬಾರಿಗೆ ಮಸ್ಕತ್ ನ ಸೀಬ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನನಗೆ ಹೊರಗಿನ ವಾತಾವರಣದ ಹಬೆಯಂತಹ ಬಿಸಿಗಾಳಿ ಸ್ವಾಗತ ಕೋರಿತ್ತು. ಅಪರಿಚಿತ ನೆಲದಲ್ಲಿ ಕಾಲಿಟ್ಟ ಹೊತ್ತು ಸಹಜವಾಗಿಯೇ ನನ್ನಲ್ಲಿ ಅರಿಯದ ಒಂದು ಆತಂಕ ಮನೆಮಾಡಿತ್ತು. ನನ್ನ ಉದ್ಯೋಗ, ವಾಸಮಾಡಲಿರುವ ಮನೆ ಇಂತಹ ಹಲವು ಹತ್ತು ವಿಷಯಗಳು ಪೂರ್ವನಿರ್ಧಾರವಾಗಿದ್ದಾರೂ ನಮ್ಮದಲ್ಲದ ನೆಲದಲ್ಲಿ ಬದುಕನ್ನು ಮತ್ತೆ ಕಟ್ಟಬೇಕಾದ ಅನಿವಾರ್ಯತೆಯೊಂದು ನನ್ನೆದುರು ಧುತ್ತೆಂದು ನಿಂತಿತ್ತು.…

ವಿಜಯನಗರ ಕಾಲದ ಅಣೆಕಟ್ಟೆಗಳು ಮತ್ತು ಪರಿಸರಸ್ನೇಹಿ ತಂತ್ರಜ್ಞಾನವೂ . . .

ವಿಜಯನಗರ ಕಾಲದ ಅಣೆಕಟ್ಟೆಗಳು ಮತ್ತು ಪರಿಸರಸ್ನೇಹಿ ತಂತ್ರಜ್ಞಾನವೂ . .  ಮುಂದುವರಿದ ಭಾಗ. . . ವಿಜಯನಗರ ಅರಸರು ಕೃಷಿ ನೀರಾವರಿಗೆ ಆದ್ಯತೆ ನೀಡಿದ್ದುದು ತಿಳಿದ ಸಂಗತಿ. ಅದು ಮಳೆಯ ನೀರನ್ನು ಕೆರೆ, ಕಾಲುವೆಗಳ ಮೂಲಕ ತಡೆದು ಕೃಷಿ ಬೆಳೆ ಮತ್ತು ಗ್ರಾಮ-ನಗರಗಳ ಬಳಕೆಗೆ ಅತ್ಯಂತ ವ್ಯವಸ್ಥಿತವಾಗಿ ನಿರ್ಮಿಸಿಕೊಂಡಿದ್ದರು. ಅದರಲ್ಲೂ ರಾಜಧಾನಿಯ ಪಕ್ಕದಲ್ಲೇ ಹರಿಯುತ್ತಿದ್ದ ತುಂಗಭದ್ರಾ ನದಿಯನ್ನು, ಅದರ ನೀರನ್ನು ವಿನಿಯೋಗಿಸಿಕೊಂಡ ಕ್ರಮ ಅನನ್ಯವಾದದ್ದು. ಅವರ ಪ್ರಯತ್ನದಿಂದ ಅನೇಕ ಅಣೆಕಟ್ಟೆಗಳು ಐದುನೂರು ವರ್ಷಗಳ ಹಿಂದೆಯೇ ನಿರ್ಮಾಣವಾಗಿವೆ. ಅಲ್ಲದೆ…

ದಂತ ಕಥೆಗೆ ಯಾರ ಗುಣಗಾನದ ಅಗತ್ಯವಿಲ್ಲ…

ದಂತ ಕಥೆಗೆ ಯಾರ ಗುಣಗಾನದ ಅಗತ್ಯವಿಲ್ಲ… ಅವಳು ಹುಡುಗಿ. ಅವಳು ಕೈಲಾಗದವಳು ! ಮದುವೆಯಾಗಿ ಮನೆಯೊಳಗೇ ಇರಬೇಕಾದವಳು !! ಎಂಬ ಸಾಂಪ್ರದಾಯಿಕ ಹೇಳಿಕೆಗಳನ್ನ ತನ್ನ ಜೀವನ ಸಂಘರ್ಷಗಳಿಂದಲೇ ಮಣಿಸಿ ಹರ್ಷ ಕಂಡವಳು ಮೇರಿ ಕೋಮ್. ಎಲ್ಲರಂತೆ ಸಾಮಾನ್ಯ ಕನಸುಗಳನ್ನ ಕಾಣದೆ ತನ್ನ ಹರೆಯದ ವಾಂಛೆಗಳನ್ನ ಬಾಕ್ಸಿಂಗ್ ರಿಂಗ್ ನೊಳಗೇ ಕೂಡಿ ಹಾಕಿದವಳು. ಬ್ಯಾಕ್ಸಿಂಗ್…ಬಾಕ್ಸಿಂಗ್..ಬಾಕ್ಸಿಂಗ್!!! ಎಂದು ನಿದ್ದೆ ಎಚ್ಚರಗಳಲ್ಲೂ ಧ್ಯಾನಿಸಿದವಳು ಮೇರಿ ಕೋಮ್. ” ಏನೇ ನೀನು ಬರು ಬರುತ್ತಾ ಹುಡುಗನಂತೆ ಆಡುತ್ತಿದ್ದೀಯ?, ನಿನ್ನ ಮುಖಕ್ಕೆ ಏಟು ಬಿದ್ದರೆ…

ಬಣ್ಣದ ಬುಗರಿ

ಬಣ್ಣದ ಬುಗರಿ ಹೊರಾಂಗಣದ ಆಟಗಳಲ್ಲಿ ಗೋಲಿ, ಬಗರಿ, ಲಗೋರಿ ಇವು ಸಣ್ಣ ಸಣ್ಣ ಮಕ್ಕಳು ಇಷ್ಟ ಪಡುವ ಅತ್ಯಂತ ಸರಳ ಆಟಗಳು. ನಾವೂ ಸಹ ಬಾಲ್ಯದಲ್ಲಿ ಇವನ್ನು ಆಟವಾಡಿಯೇ ಬೆಳೆದೆವು. ಇವು ಗಂಡು ಮಕ್ಕಳ ಆಟಗಳೆಂದು ಗೊತ್ತಿದ್ದರೂ ಕೆಲವೊಮ್ಮೆ ಆಟ ಆಡುತ್ತಿದ್ದೆವು. ಹೆಣ್ಣುಮಕ್ಕಳ ಆಟಗಳಾದ ಕುಂಟುಬಿಲ್ಲೆ, ಮತ್ತು ಬೆಟ್ಟ ಹತ್ತುವ ಆಟಗಳು ಪರಿಕರಗಳೇನೂ ಇಲ್ಲದೆ ಆಡುವ ಆಟಗಳಾಗಿದ್ದವು. ನಮ್ಮ ಮನೆಯು ಶಾಲೆಯ ಪಕ್ಕದಲ್ಲೇ ಇದ್ದ ಕಾರಣ ಸದಾ ಮಕ್ಕಳ ಕಲರವ ಇರುತ್ತಿತ್ತು. ಅದರೊಂದಿಗೆ ಆಟ ಪಾಠಗಳೂ ಇರುತ್ತಿದ್ದವು.…

ಬುಡೇನ್ ಸಾಬ್ ಮತ್ತು ಆತನ ವ್ಯಕ್ತಿತ್ವ ರೂಪ

ಬುಡೇನ್ ಸಾಬ್ ಮತ್ತು ಆತನ ವ್ಯಕ್ತಿತ್ವ ರೂಪ ಇಂಥದ್ದೇ ಶ್ರಾವಣ ಮಾಸದ ಚುರುಕು ಬಿಸಿಲ ದಿನ ಒಂದರ ಉತ್ತರಾರ್ಧ ಅದು. ಮೂರ್ನಾಲ್ಕು ದಿನಗಳಿಂದ ‘ಧೋ’ ಎಂದು ಸುರಿದ ಮಳೆ ತನ್ನ ರೌದ್ರನರ್ತನಕ್ಕೆ ತಾತ್ಕಾಲಿಕ ವಿರಾಮ ನೀಡಿದಂತಿತ್ತು. ಅವತ್ತು ಬುಧವಾರದ ದಿನ ಇರಬೇಕು ಅನ್ನಿಸುತ್ತದೆ. ವೈ. ವೃಷಭೇಂದ್ರಯ್ಶ (YV) ಮೇಷ್ಟ್ರು ಎಂಟನೇ ತರಗತಿಯವರಾದ ನಮಗೆ ಸಾಯಂಕಾಲದ ಕೊನೆಯ ಪಿರಿಯಡ್ ನಲ್ಲಿ ಜೀವಶಾಸ್ತ್ರದ ಪಾಠ ಮಾಡುತ್ತಿದ್ದರು. ಅವರು ಅಂದು ಪಾಠಮಾಡುತ್ತಿದ್ದ ವಿಷಯ ಕೂಡಾ ನನಗೆ ಚೆನ್ನಾಗಿ ನೆನಪಿದೆ. ದ್ಯುತಿಸಂಶ್ಲೇಷಣಾ ಕ್ರಿಯೆ…

ವಿಜಯನಗರ ಕಾಲದ ಅಣೆಕಟ್ಟೆಗಳು ಮತ್ತು ಪರಿಸರಸ್ನೇಹಿ ತಂತ್ರಜ್ಞಾನವೂ . . .

ವಿಜಯನಗರ ಕಾಲದ ಅಣೆಕಟ್ಟೆಗಳು ಮತ್ತು ಪರಿಸರಸ್ನೇಹಿ ತಂತ್ರಜ್ಞಾನವೂ . . . ನಮ್ಮ ಹಳ್ಳಿಗಳಲ್ಲಿ ಒಂದು ನಾಣ್ಣುಡಿ ಸಾಮಾನ್ಯವಾಗಿದೆ. ಅದೆಂದರೆ “ಧರ್ಮದ ಊರಿನ ಮುಂದೆ ಮಳೆ ಬಂದರೆ, ಕರ್ಮದ ಊರಿನ ಮುಂದೆ ಹಳ್ಳ ಹರಿಯಿತು ಎಂಬುದು. ಕಳೆದ ಇಪ್ಪತ್ತೆಂಟು ವರ್ಷಗಳ ನನ್ನ ಅನುಭವದಲ್ಲಿ ೨೦೦೯ನ್ನು ಹೊರತುಪಡಿಸಿದರೆ ಬಳ್ಳಾರಿ ಜಿಲ್ಲೆಯಲ್ಲಿ ಮಳೆ ಸುರಿದದ್ದು ತೀರ ಅಪರೂಪವೇ. ಆದರೆ ಇಲ್ಲಿನ ತುಂಗಭದ್ರೆ ಮಾತ್ರ ಪ್ರತಿವರ್ಷವೂ ಮೈದುಂಬಿ ಹರಿದು ತನ್ನ ಕಬಂದಬಾಹುಗಳಿಂದ ಪ್ರವಾಹವನ್ನು ನಿರಂತರವಾಗಿ ಸೃಷ್ಟಿಸುತ್ತಾ ಬಂದಿದ್ದಾಳೆ. ಬಿಸಿಲ ಬೇಗೆ ಮತ್ತು…

ಸವಾಲುಗಳ ಮಣಿಸಿ ಗೆದ್ದು ನಕ್ಕ ರೇಖಾ

  ಸವಾಲುಗಳ ಮಣಿಸಿ ಗೆದ್ದು ನಕ್ಕ ರೇಖಾ    ” ನಾನು ಯಶಸ್ಸಿನ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಅದು ನನಗೆ ಅನ್ಯ ಪದ”ಎನ್ನುವ ಅಭಿನೇತ್ರಿ ರೇಖಾ ಹುಟ್ಟಿದ್ದು ಚನೈನಲ್ಲಿ. ತಂದೆ ತಮಿಳ,ತಾಯಿ ತೆಲುಗು,ರೇಖಾ ಎಂಬ ನಟಿ ಕನ್ನಡದ ಮೂಲಕ ನಾಯಕಿಯಾಗಿ ಪ್ರವೇಶಿಸಿ ನೆಲೆಗೊಂಡದ್ದು ಹಿಂದಿ ಚಿತ್ರರಂಗದಲ್ಲಿ. ಏಕರೂಪೀ ಪಾತ್ರಗಳಿಗೆ ಅಂಟಿಕೊಳ್ಳದೇ ಸದಾ ಹೊಸ ಪ್ರಯೋಗಗಳ ಮೂಲಕ ತನ್ನ ಚರಿಷ್ಮಾವನ್ನ ಚಲನಶೀಲಗೊಳಿಸಿಕೊಂಡಾಕೆ.ಹಾಗೆ ನೋಡಿದರೆ ರೇಖಾ ಸಿನಿಮಾಕ್ಕೆ ಬಂದಿದ್ದೇ ಆಕಸ್ಮಿಕ.ಮನೆಯ ಆರ್ಥಿಕ ತೊಂದರೆ ನಿವಾರಿಸಲಿಕ್ಕಾಗಿ ಅಮ್ಮ ಈಕೆಗೆ ಬಣ್ಣ ಹಚ್ಚಿಸಿದಳು.ಮುಂದೆ ಬಾಲಿವುಡ್…

ಗ್ರಾಮೀಣ ಪ್ರದೇಶಗಳಲ್ಲಿ ಲಸಿಕೆ ಅಭಿಯಾನದ ಪರಿಸ್ಥಿತಿ

ಗ್ರಾಮೀಣ ಪ್ರದೇಶಗಳಲ್ಲಿ ಲಸಿಕೆ ಅಭಿಯಾನದ ಪರಿಸ್ಥಿತಿ ಬೆಳ್ಳಂಬೆಳಿಗ್ಗೆ ಮನೆಯಲ್ಲಿ ಯಾರದೋ ಜೋರುದನಿಯ ಮಾತುಗಳನ್ನು ಕೇಳಿ ನನಗೆ ಎಚ್ಚರವಾಯಿತು. ರಾತ್ರಿ ಜಯವಾಣಿ ಟೂರಿಂಗ್ ಟಾಕೀಸ್ ನಲ್ಲಿ ಮಯೂರ ಚಲನಚಿತ್ರವನ್ನು ನೋಡಿ ಮನೆಗೆ ಬಂದು ಮಲಗಿದಾಗ ಸಮಯ ರಾತ್ರಿ ಹನ್ನೆರಡನ್ನು ದಾಟಿತ್ತು. ಮಯೂರವರ್ಮನ ಗುಂಗಿನಲ್ಲಿಯೆ ದಿಂಬಿಗೆ ತಲೆಯಿಟ್ಟವನಿಗೆ ಯಾವಾಗ ನಿದ್ದೆ ಬಂತೋ ಗೊತ್ತಿರಲಿಲ್ಲ. ರಾತ್ರಿ ಆದ ಕಡಿಮೆ ನಿದ್ದೆಯ ಪರಿಣಾಮವೋ ಏನೋ ಕಣ್ಣುಗಳು ಉರಿಯುತ್ತಿದ್ದವು. ಬಹಳ ಕಷ್ಟಪಟ್ಟು ಕಣ್ಣುಗಳನ್ನು ತೆರೆದವನಿಗೆ ಗೋಡೆ ಮೇಲಿದ್ದ ಗಡಿಯಾರದ ಮುಳ್ಳು ಏಳರ ಆಸುಪಾಸಿನಲ್ಲಿ ಇದ್ದದ್ದು…

1 4 5 6 7 8 10
error: Content is protected !!