Browsing: ಅಂಕಣ

ಅಂಕಣ

ಹಾಡೆಂಬ ಕಲಾರಾಧನೆಯ ಬೆಂಬತ್ತಿ…

ಹಾಡೆಂಬ ಕಲಾರಾಧನೆಯ ಬೆಂಬತ್ತಿ… ಆಗಿನ್ನೂ ಮನೆ ಮನೆ ಅಂಗಳಗಳಲ್ಲೇ ಜರುಗುತಿದ್ದ ಮದುವೆಗಳು.ಹಂದರದ ಕಂಬ ನೆಡುವ,ತೆಂಗಿನಗರಿಗಳನ್ನ ಹುಡುಕಿ ತರುವ,ಎಲ್ಲರೂ ಸೇರಿ ಮಾವಿನ ತೋರಣ ಕಟ್ಟುವ, ದೊಡ್ಡ ದೊಡ್ಡ ಹಂಡೆಗಳು,ಡ್ರಮ್ಮಗಳಿಗೆ ಊರಾಚೆಯ ಎರಡು ಮೂರು ಕಿಲೋಮೀಟರ್ ಗಳಿಂದ ಸರತಿ ಪ್ರಕಾರವಾಗಿ ಓಣಿಯ ಹರೆಯದವರೆಲ್ಲಾ ಸೇರಿ ನೀರು ಹೊತ್ತು ತರುವ,ಹೆಣ್ಣು ಮಕ್ಕಳು ಕೋಣೆ ತುಂಬಾ ಮನೆಗೊಂದು ಆಳಿನಂತೆ ಬಂದು ಕಲ ಕಲ ಮಾಡುತ್ತಾ ಅಡುಗೆಗೆ ತಯಾರಿ ನಡೆಸುತ್ತಿರುವಾಗಲೇ ಬಣಗಾರ ಕೆಂಚಪ್ಪನೋ,ಸಂಗದ ಮನೆ ಹೇಮಣ್ಣನೋ ಬಂದು ” ನಗು ನಗುತಾ ನಲೀ ನಲೀ…

ವಿಜಯನಗರ ಕಾಲದ ನೌಕಾಪಡೆಯೂ, ಸಮುದ್ರ ವ್ಯಾಪಾರವೂ . . .

ವಿಜಯನಗರ ಕಾಲದ ನೌಕಾಪಡೆಯೂ, ಸಮುದ್ರ ವ್ಯಾಪಾರವೂ . . . ಭಾರತೀಯರಿಗೂ ಸಮುದ್ರಕ್ಕೂ ಅವಿನಾಭಾವ ನಂಟಿದೆ. ಇದಕ್ಕೆ ಕಾರಣ ಭಾರತದ ಮೂರು ದಿಕ್ಕುಗಳಲ್ಲೂ ಹರಡಿರುವ ಸಮುದ್ರ. ಭಾರತದ ವಿದೇಶಿ ವ್ಯಾಪಾರ ಅದರಲ್ಲೂ ಸಮುದ್ರ ವ್ಯಾಪಾರದ ಪ್ರಾಚೀನತೆ ಸಿಂಧೂ ನಾಗರೀಕತೆಯವರೆಗೂ ಹೋಗುತ್ತದೆ. ಗುಜರಾತಿನ ಲೋಥಾಲ್ ಹಡಗುಕಟ್ಟೆಯು ಇದಕ್ಕೆ ಪ್ರಮುಖ ಆಧಾರವೆಂಬುದು ತಿಳಿದೇ ಇದೆ. ಸಿಂಧೂ ನಾಗರೀಕತೆಯ ಮುದ್ರಿಕೆ ಮತ್ತಿತರ ವಸ್ತುಗಳು ಪರ್ಶಿಯಾ, ಸುಮೇರಿಯ, ಈಜಿಪ್ಟ್ ಮೊದಲಾದ ನಾಗರೀಕತೆಗಳಲ್ಲಿ ಕಂಡುಬಂದಿರುವುದೂ ಮುಖ್ಯ. ಸಮುದ್ರದೊಂದಿಗಿನ ನಂಟು ದಕ್ಷಿಣ ಭಾರತದಲ್ಲಿ ಆಳ್ವಿಕೆ ಮಾಡಿದ…

ಶಿವರಾಣಿ ದೇವಿ ಎಂಬ ಬರೆಹಗಾರ್ತಿ ಮತ್ತು ಪ್ರೇಮ್ ಚಂದ್ ಪತ್ನಿ

ಶಿವರಾಣಿ ದೇವಿ ಎಂಬ ಬರೆಹಗಾರ್ತಿ ಮತ್ತು ಪ್ರೇಮ್ ಚಂದ್ ಪತ್ನಿ ಪ್ರಚಂಡ ಪ್ರಸಿದ್ಧ ಜೀವನ ಸಂಗಾತಿಯ ನೆರಳಿನಲ್ಲಿ ಕಳೆದೇ ಹೋದ ಪತ್ನಿಯರು, ಪತಿಯರಿಗೆ ಲೆಕ್ಕವಿಲ್ಲ. ಆದರೆ ಹಿಂದೀ ಉರ್ದುವಿನಲ್ಲಿ ಬರೆದವರು ಮಾನವತಾವಾದಿ ಲೇಖಕ ಮುನ್ಷಿ ಪ್ರೇಮ್ ಚಂದ್. ಅವರ ಪತ್ನಿ ಶಿವರಾಣಿ ದೇವಿ ಪತಿಯ ಪ್ರಕಾಶಮಯ ಪ್ರಭಾವಳಿಯಲ್ಲೂ ಕಳೆದ ಹೋಗದೆ ಹೊಳೆದವರು. ಸ್ವಂತ ಅಸ್ಮಿತೆ ಉಳಿಸಿಕೊಂಡವರು. ‘ನಮ್ಮ ಕನಸಿನ ರಾಷ್ಟ್ರೀಯತೆಯಲ್ಲಿ ಜನ್ಮಜಾತ ವರ್ಣಗಳ ಗಂಧಗಾಳಿಗೂ ಅವಕಾಶ ಇರದು. ಅದು ಶ್ರಮಿಕರು ಮತ್ತು ರೈತರ ಸಾಮ್ರಾಜ್ಯ. ಬ್ರಾಹ್ಮಣ ಕಾಯಸ್ಥ…

ಅಲ್ಲಾ ಕೋಳಿ ಬಾಯಲ್ಲಲ್ಲಿಲ್ಲಾ ಮತ್ತು ನಮಕ್ ಚುರಾಯ

ಅಲ್ಲಾ ಕೋಳಿ ಬಾಯಲ್ಲಲ್ಲಿಲ್ಲಾ ಮತ್ತು ನಮಕ್ ಚುರಾಯ ಆ ಸಣ್ಣ ಊರಿನಲ್ಲಿ ಮೂರು ದೇವಸ್ಥಾನಗಳಿದ್ದವು. ರಾಮ ಮಂದಿರ, ಆಂಜನೇಯ ಗುಡಿ, ಈಶ್ವರ ದೇವಾಲಯ, ಮತ್ತು ಇನ್ನೊಂದೆಡೆ ನಾಗರಕಟ್ಟೆ ದೇವಸ್ಥಾನ. ವರ್ಷದ ಬಹುಶಃ ಶ್ರಾವಣ ಅಥವ ಕಾರ್ತೀಕ ಮಾಸದಲ್ಲಿ ಈಶ್ವರ ದೇವಾಲಯದಲ್ಲಿ ಸಪ್ತಾಹ ನಡೆಸುತ್ತಿದ್ದರು. ಅದು ಯಾವ ಮಾಸವೆಂದು ಸರಿಯಾಗಿ ನೆನಪಿಲ್ಲ. ಏಳು ದಿನಗಳ ಕಾಲ ಊರಿನ ಎಲ್ಲಾ ಜನರು ಜಾತಿ, ಧರ್ಮ ಬೇಧ ಮರೆತು ಪಾಲ್ಗೊಂಡು ಹಾಡಿ ಕುಣಿದು ಭಕ್ತಿಯಿಂದ ಆಚರಿಸುತ್ತರು. ಕೋಲಾಟ, ದೇವರ ಕುಣಿತ, ಡೋಲು…

ಬೆರಗು ಗೊಳಿಸಿದ ಡಕಾಯಿತನ ನಡೆ..!

ಬೆರಗು ಗೊಳಿಸಿದ ಡಕಾಯಿತನ ನಡೆ…! ನಾನು ಪ್ರಯಾಣಿಸುತ್ತಿದ್ದ ಲಕ್ಷುರಿ ಬಸ್ ಇಂದೋರ್ ನ ಹೊರವಲಯವನ್ನು ಪ್ರವೇಶಿಸಿದ ಸುಳಿವನ್ನು ಮುಚ್ಚಿದ ಕಿಟಿಕಿಯ ಪರದೆಗಳನ್ನೂ ಸೀಳಿ ಒಳತೂರುತ್ತಿದ್ದ ಹೆದ್ದಾರಿಯ ದಾರಿ ದೀಪಗಳ ಬೆಳಕಿನಿಂದ ಊಹಿಸಿದೆ. ಉರಿಯುವ ಕಣ್ಣುಗಳನ್ನು ಕಷ್ಟಪಟ್ಟು ತೆರೆದು ಕೈ ಗಡಿಯಾರವನ್ನು ನೋಡಿಕೊಂಡವನಿಗೆ ಸಮಯ ಮುಂಜಾನೆಯ ನಾಲ್ಕೂವರೆ ಎಂದು ಗೊತ್ತಾಯಿತು. ರಾತ್ರಿ ಹತ್ತರ ಸುಮಾರಿಗೆ ಅಹಮದಾಬಾದ್ ನ ಪಾಲಡಿಯ ಪವನ್ ಟ್ರಾವೆಲ್ಸ್ ಬಸ್ ನಲ್ಲಿ ಆಫೀಸ್ ನ ಕೆಲಸದ ನಿಮಿತ್ತ ಮಧ್ಯಪ್ರದೇಶದ ಇಂದೋರ್ ನಗರಕ್ಕೆ ಹೊರಟಿದ್ದ ನನಗೆ ರಾತ್ರಿಯಿಡೀ…

ಗುರುಶೋಧನೆ

‌‌‌‌‌‌        ಗುರುಶೋಧನೆ. ಆಕಾಶವು ಹೇಗೆ ನಾಶವಾಗುವುದು? ಸಿದ್ಧಬಾಲಕನ ಈ ಪ್ರಶ್ನೆಗೆ ವೀರಭದ್ರ ಸ್ವಾಮಿಗಳು ಹೇಳಿದ್ದು:”ಯೋಗ್ಯ ಗುರುವಿಗೆ ಈ ಪ್ರಶ್ನೆಯನ್ನು ಕೇಳತಕ್ಕದ್ದು” ಎಂದು. ಯೋಗ್ಯ ಗುರುವನ್ನು ಹುಡುಕಬೇಕೆಂದು ಸಿದ್ಧನು ಅಂದೇ ಮನಸ್ಸಿನಲ್ಲಿ ನಿರ್ಧರಿಸಿದನು. ಮರುದಿನ ಬೆಳಿಗ್ಗೆ ಎದ್ದು, ಯಾರಿಗೂ ಹೇಳದೇ ಮನೆ ಬಿಟ್ಟು ಹೊರಟನು. ದಾರಿಯಲ್ಲಿ ಮಿತ್ರರಾದ ಸೋಮ ಭೀಮರು ಕಣ್ಣಿಗೆ ಬಿದ್ದರು. ಸಿದ್ಧನನ್ನು ಕಂಡೊಡನೆಯೇ “ಸಿದ್ಧ ಎಲ್ಲಿಗೆ ಹೊರಟಿರುವಿ? ” ಎಂದು ಕೇಳಿದರು. ಆಗ ಸಿದ್ಧ ಹೀಗೆ ಉತ್ತರಿಸಿದ : “ಈ ಪ್ರಪಂಚವೆಲ್ಲವೂ…

ವೀಳೆಯದ ಬೇಡಿಕೆ, ವ್ಯಾಪಾರ ಮತ್ತು ವ್ಯಾಪಾರಿ ಸಂಘ

ವೀಳೆಯದ ಬೇಡಿಕೆ, ವ್ಯಾಪಾರ ಮತ್ತು ವ್ಯಾಪಾರಿ ಸಂಘ ವೀಳೆಯವು ದೇಹ ಮತ್ತು ಮನಸ್ಸಿಗೆ ಆರೋಗ್ಯ ಮತ್ತು ಆಹ್ಲಾದಕರ ಪರಸ್ಪರ ಸ್ನೇಹ, ಪ್ರೀತಿ, ಗೌರವ, ವಿಶ್ವಾಸ, ವಿನಿಮಯ ಮತ್ತು ಒಪ್ಪಂದದ ಸಾಮಗ್ರಿಯೂ, ಬಾಂಧವ್ಯದ ಬೆಸುಗೆಯೂ ಆಗಿದೆ. ವೀಳೆಯದೆಲೆಗೆ ಫಣಿಲಾ, ತಾಂಬೂಲ(ಸಂಸ್ಕೃತ), ಪಾನ್ (ಹಿಂದಿ), ನಾಗವಲ್ಲಿ(ಗುಜರಾತಿ), ವೆಟ್ಟಲೆ(ತಮಿಳು), ತಮಲಾಕು(ತೆಲುಗು), ವೆಟ್ಟಿಲ ಮಲಯಾಳಂ) ಎಂದೂ ಕರೆಯುವರು. ವೀಳೆಯದೆಲೆಯಲ್ಲಿ ಜಗತ್ತಿನಾದ್ಯಂತ 90 ವಿಧದ ತಳಿಗಳಿದ್ದು ಅವುಗಳಲ್ಲಿ 40 ತಳಿಗಳನ್ನು ಭಾರತದಲ್ಲಿ ಬೆಳೆಯಲಾಗುವುದೆಂದು ಅಧ್ಯಯನಗಳಿಂದ ತಿಳಿಯುವುದು, ಅವುಗಳಲ್ಲಿ ಇಂದು ಕಲ್ಕತ್ತಾ ಪಾನ್, ಬನಾರಸ್ ಪಾನ್,…

ಪ್ರಾಥಮಿಕ ಶಾಲಾ ಗುರುಗಳ ತಾಳ್ಮೆ ಮತ್ತು ಅವರ ನೀತಿ ಪಾಠ

ಪ್ರಾಥಮಿಕ ಶಾಲಾ ಗುರುಗಳ ತಾಳ್ಮೆ ಮತ್ತು ಅವರ ನೀತಿ ಪಾಠ ಈ ಹೊತ್ತು ನನ್ನ ಮನಸ್ಸು  ಬಾಲ್ಯದ ದಿನಗಳತ್ತ ಮುಖ ಮಾಡಿದೆ. ಬಾಲ್ಯದ ದಿನಗಳು ಎಂದಾಕ್ಷಣ ನನ್ನ ಮನಸ್ಸಿನಲ್ಲಿ ಮೂಡುವುದು ಪ್ರೈಮರಿ ಸ್ಕೂಲಿನ ದಿನಗಳು. ಆ ಹೊತ್ತಿನ ಗೆಳೆಯರ, ಗುರುಗಳ ನೆನಪುಗಳು ದಶಕಗಳ ನಂತರವೂ ಹಸಿರಾಗಿರುವುದು ಬಾಲ್ಯವನ್ನು ಪ್ರತಿಯೊಬ್ಬರೂ ಹೇಗೆ ತಮ್ಮ ಮನದ ಮೂಲೆಯಲ್ಲಿ ಜತನದಿಂದ ಜೋಪಾನವಾಗಿ ಕಾಪಾಡಿಕೊಂಡು ಬಂದಿರುತ್ತಾರೆ ಎನ್ನುವುದರ ಸೂಚಕವಾಗಿದೆ. ಶಾಲೆಗೆ ಸೇರುವ ಪೂರ್ವದಲ್ಲಿ ನನಗೆ ಗೆಳೆಯರು ಅಂತಹ ಯಾರೂ ಇರಲಿಲ್ಲ. ನನಗಿಂತ ಸುಮಾರು…

ವೀಳೆಯ ಮತ್ತು ರಣವೀಳ್ಯವೂ ..

ವೀಳೆಯ ಮತ್ತು ರಣವೀಳ್ಯವೂ .. ವೀಳೆಯವು ಪರಂಪರಾಗತ ರೂಢಿ, ಸಂಪ್ರದಾಯಗಳ ಭಾಗವೇ ಆಗಿ ಬೆಳೆದುಬಂದಿರುವುದು ತಿಳಿದ ಸಂಗತಿ. ದೇವರ ನೈವೇದ್ಯವಾಗಿ, ಅಲಂಕಾರಿಕ ಸಾಮಗ್ರಿಯಾಗಿ ಎಲೆಪೂಜೆಯೆಂದೂ, ಮದುವೆಯ ಒಪ್ಪಂದಕ್ಕೆ ಮಹತ್ವದ ಪರಿಕರವಾಗಿಯೂ ಹಾಸುಹೊಕ್ಕಿದೆ. ವಿವಾಹ ಕಾರ್ಯಚಟುವಟಿಕೆಗಳಲ್ಲಿ ವೀಳೆಯಶಾಸ್ತ್ರ, ಈಳೆಶಾಸ್ತ್ರವೆಂದೇ ಜನಜನಿತವಾಗಿದೆ. ಈ ಶಾಸ್ತ್ರವೇ ಗಂಡುಹೆಣ್ಣಿನ ಮಾತುಕತೆಯ ಅಂತಿಮ ರೂಪ, ವೀಳೆಯ ಎಂಬುದು ಎಲೆ-ಅಡಕೆಗಳ ಸಂಯುಕ್ತ ರೂಪ. ಇದನ್ನು ತಾಂಬೂಲವೆಂದೇ ಕರೆಯುತ್ತೇವೆ. ಇದು ದೇಹದ ಆರೋಗ್ಯಕ್ಕೆ ಮದ್ದು ವೀಳೆಯ ದೇಹ ಮತ್ತು ಮನಸ್ಸಿಗೆ ಮುದ ನೀಡುವ ಪ್ರಮುಖ ಸಾಧನ. ತಾಂಬೂಲವು…

ಪೆಗಸಸ್ ಬೇಹುಗಾರಿಕೆ- ಜನತಂತ್ರದ ಬುಡಮೇಲು ಕೃತ್ಯ

ಪೆಗಸಸ್ ಬೇಹುಗಾರಿಕೆ- ಜನತಂತ್ರದ ಬುಡಮೇಲು ಕೃತ್ಯ ಭೀಮಾ ಕೋರೆಗಾಂವ್ ಆಪಾದಿತರ ಪೈಕಿ ಒಬ್ಬರಾದ ರೋನಾ ವಿಲ್ಸನ್ ಅವರ ಕಂಪ್ಯೂಟರಿನಲ್ಲಿ ಅಜ್ಞಾತ ಹ್ಯಾಕರ್ ಒಬ್ಬನು ಮೂವತ್ತು ದಸ್ತಾವೇಜುಗಳನ್ನು ’ನೆಟ್ಟಿದ್ದ’ ನೆಂದು ವಾಷಿಂಗ್ಟನ್ ಪೋಸ್ಟ್ ಈ ವರ್ಷದ ಶುರುವಿನಲ್ಲಿ ವರದಿ ಮಾಡಿತ್ತು. ಆರ್ಸೆನಾಲ್ ಕನ್ಸಲ್ಟಿಂಗ್ ಎಂಬ ವಿಧಿವಿಜ್ಞಾನ ಸಂಸ್ಥೆಯ ತನಿಖೆಯನ್ನು ಈ ವರದಿ ಆಧರಿಸಿತ್ತು. ಕಳೆದ ತಿಂಗಳು ಇದೇ ವಿಧಿವಿಜ್ಞಾನ ಸಂಸ್ಥೆ ಆಪಾದಿತರಲ್ಲಿ ಒಬ್ಬರಾದ ಸುರೇಂದ್ರ ಗಾಡ್ಲಿಂಗ್ ಎಂಬ ದಲಿತ ಹಕ್ಕುಗಳ ಹೋರಾಟಗಾರರ ಕಂಪ್ಯೂಟರಿನ ಹಾರ್ಡ್ ಡ್ರೈವ್ ನ್ನು ವಿಶ್ಲೇಷಿಸಿತ್ತು.…

ಮನ ತಾಕುವ ಮಂಡಕ್ಕಿಯ ಪುರಾಣವು…

ಮನ ತಾಕುವ ಮಂಡಕ್ಕಿಯ ಪುರಾಣವು… ತುಂತುರು ಮಳೆಗೆ ನೆಲವೆಲ್ಲಾ ನೆನೆದ ಸೆರಗಂತೆ ತಂಡಿ ಹಿಡಿದು ಎಲ್ಲವನ್ನೂ ಎಲ್ಲರನ್ನೂ ನಡುಗಿಸುತಿತ್ತು.ಸೂರ್ಯ ಹುಟ್ಟಿ ಕೈಗೆ ಕಾಫಿಯ ಬಿಸಿ ತಾಗಿ ಹಬೆಯೊಳೆ ತೇಲಿದಂತೆಲ್ಲಾ ಜೀವಗಳ ಸಂಚಾರ.ಬಿದುರು ಪುಟ್ಟಿ ಎತ್ತಿದೊಡನೆಯೇ ನೆಗೆ ನೆಗೆದು ಕುಣಿಯುತ್ತಾ…ತಾಯಿ ಕೋಳಿಯ ಜೊತೆಗೆ ಅಂಗಳದ ತುಂಬಾ ಹತ್ತಿಯ ಬಣ್ಣ ಬಣ್ಣದ ಉಂಡೆಗಳಂತೆ ಸುಳಿವ ಕೋಳಿಮರಿಗಳು,ಪುಟಾಣಿಗಳನ್ನೇ ಎಗರಿಸಿ ಹೊತ್ತೊಯ್ಯಲೆಂದೇ ಹೊಂಚು ಹಾಕುವ ಕಾಗೆಗಳು,ಎಲ್ಲೆಲ್ಲೋ ದೂರದ ಮೋಡಗಳಿಂದ ಬಾಣದಂತೆ ಬಂದೆರಗೋ ಹದ್ದುಗಳು.., ಕಪ್ಪು ನೀರು ಕವಿದ ತಿಪ್ಪೆಗುಂಡಿಯಲಿ ಪೈಪೋಟಿಗೆ ಬಿದ್ದು ವಟಗುಟ್ಟುವ…

ಅಡ್ಡ ಹೆಸರುಗಳು ಮತ್ತು ಕದಿರೆಪ್ಪ ಮಾಸ್ಟರ್

ಅಡ್ಡ ಹೆಸರುಗಳು ಮತ್ತು ಕದಿರೆಪ್ಪ ಮಾಸ್ಟರ್ ನಮ್ಮ ಶಾಲೆಯಲ್ಲಿ ಮುಖ್ಯ ಶಿಕ್ಷಕರು ದಪ್ಪನೆಯ.. ಕಪ್ಪನೆಯ.. ಎತ್ತರದ ವ್ಯಕ್ತಿ ಹೆಸರು ಹೇಳಿದರೇನೇ  ಮಕ್ಕಳೆಲ್ಲಾ ನಡುಗುತ್ತಿದ್ದೆವು.  ಅವರ ಹೆಸರು ಕದಿರೆಪ್ಪ ಮಾಸ್ಟರ್.  ಶಾಲೆಯ ವಿಸ್ತೀರ್ಣ ಬಹುಶಃ ಒಂದು ಎಕರೆ. ಶಾಲೆ ಚೌಕಾಕಾರದ ಆ ಬಯಲಿನಲ್ಲಿ ಒಂದು ಅಂಚಿನಲ್ಲಿ ಮಧ್ಯಕ್ಕೆ ನೆಲೆಗೊಂಡಿತ್ತು. ಶಾಲೇ ಎಲ್ ಆಕಾರದಲ್ಲಿ ಇತ್ತು. ಮುಂಭಾಗದ ಗೇಟಿನಿಂದ ಶಾಲೆ ಬಹಳ ಸುಂದರವಾಗಿ ಕಾಣುತ್ತಿತ್ತು. ಗೇಟಿನ ಮತ್ತು ಶಾಲೆಯ ಮಧ್ಯದ ಭಾಗದಲ್ಲಿ ಪುಟ್ಟ ಗಣೇಶನ ಗುಡಿ ಇತ್ತು.  ಅದಕ್ಕೆ…

ಹಿಂದೆ ಗುರುವಿದ್ದು, ಮುಂದೆ ಗುರಿ ಇರಲು ಉನ್ನತಿ!

ಗುರುಪೂರ್ಣಿಮೆಯ ಪ್ರಯುಕ್ತ ವಿಶೇಷ ಲೇಖನ. ಹಿಂದೆ ಗುರುವಿದ್ದು, ಮುಂದೆ ಗುರಿ ಇರಲು ಉನ್ನತಿ! ಗುರು ದೊಡ್ಡವನು. ಗುರುತರ ಹೊಣೆಯುಳ್ಳವನು. ಜ್ಞಾನವುಳ್ಳವನು. ಅಜ್ಞಾನ ಕಳೆಯುವವನು. ಪ್ರಸಿದ್ಧ ಶ್ಲೋಕವೊಂದು ಹೀಗಿದೆ; ಗುಕಾರಸ್ತ್ವಂಧಕಾರಸ್ತು ರುಕಾರಸ್ತೇಜ ಉಚ್ಯತೇ| ಅಂಧಕಾರ ನಿರೋಧತ್ವಾತ್ ಗರುರಿತ್ಯಭಿಧೀಯತೇ|| ಗುಕಾರ ಕತ್ತಲೆಯ ಪ್ರತೀಕ. ರುಕಾರ ಬೆಳಕಿನ ಪ್ರತೀಕ. ಗೊತ್ತಿಲ್ಲದಿರುವುದು, ತಿಳಿಯದಿರುವುದು, ಅಜ್ಞಾನ. ಇದೇ ಕತ್ತಲೇ = ಅಂಧಕಾರ. ತಿಳಿವು =ಅರಿವು=ಜ್ಞಾನ=ವಿದ್ಯೆಯೇ ಬೆಳಕು! ನಮ್ಮೊಳಗಿನ ಅಜ್ಞಾನ ಕತ್ತಲೆಯನ್ನು ಜ್ಞಾನಬೆಳಕಿನಿಂದ ಹೊಡೆದೋಡಿಸುವುವವನೇ ಗುರು. ಬದುಕಿನಲ್ಲಿ ಜ್ಞಾನದಂಥ ಶ್ರೇಷ್ಠ ಪವಿತ್ರ ವಸ್ತು ಇನ್ನಾವುದೂ…

ಎನ್ಕ್ರಿಪ್ಟ್ ವ್ಯವಸ್ಥೆಯ ಅಭಿವೃದ್ಧಿಯ ನೋಟದ ಸುತ್ತಾ..?!

ಎನ್ಕ್ರಿಪ್ಟ್ ವ್ಯವಸ್ಥೆಯ ಅಭಿವೃದ್ಧಿಯ ನೋಟದ ಸುತ್ತಾ..?! ಸಣ್ಣದಾಗಿ ನಿದ್ದೆ ಬಂದಂತಾಗಿ ವಾಚು ನೋಡಿಕೊಂಡವನು ಒಂದು ಕ್ಷಣ ಗಾಬರಿಯಾದೆ. ಆದಾಗಲೇ ರಾತ್ರಿ ಒಂದೂವರೆ ಗಂಟೆಯಾಗಿತ್ತು. ತಮ್ಮ ಮುಂದೆ ಇರುವ ಬಿಳಿಬೋರ್ಡ್ ಮೇಲೆ ಇನ್ನೂ ಬರೆಯುತ್ತಲೇ ಸಾಗಿದ AGM ಬಿ. ವಿ. ಆಚಾರ್ಯ (BVA) ಇನ್ನೂ ಒಂದೆರಡು ತಾಸುಗಳ ಮಟ್ಟಿಗೆ ಹೊತ್ತಲ್ಲದ ಹೊತ್ತಿನಲ್ಲಿ ಸಾಗುತ್ತಿದ್ದ ಮೀಟಿಂಗ್ ನಲ್ಲಿ ತಮ್ಮ ಮಾತುಗಳನ್ನು ಮುಗಿಸಿದಂತೆ ತೋರಿ ಬರಲಿಲ್ಲ. ನನ್ನ ಬಲಬದಿಗೆ ಕುಳಿತ ಸಹೋದ್ಯೋಗಿ ನಟರಾಜನ್ ಕಡೆಗೆ ತಿರುಗಿದೆ. BVA ಬರೆಯುತ್ತಿದ್ದ ಸಾಲುಗಳನ್ನು ತದೇಕಚಿತ್ತನಾಗಿ…

ಮಳೆಕೊಯ್ಲು ಪದ್ಧತಿಯನ್ನು ಅಳವಡಿಸಿದ ಭಗೀರಥ ಬಯಕಾರ ರಾಮಪ್ಪಯ್ಯ

ಮಳೆಕೊಯ್ಲು ಪದ್ಧತಿಯನ್ನು ಅಳವಡಿಸಿದ ಭಗೀರಥ ಬಯಕಾರ ರಾಮಪ್ಪಯ್ಯ ಮಳೆಕೊಯ್ಲು ಎಂಬ ಪದ್ಧತಿ ಪ್ರಾಚೀನವೆಂಬುದು ತಿಳಿದ ಸಂಗತಿ. ಮಳೆಯ ನೀರನ್ನು ಅಡ್ಡಗಟ್ಟಿ ತಡೆದು ವರ್ಷಪೂರ್ತಿ ಬಳಸಿಕೊಂಡ ಪ್ರಾಚೀನರ ತಿಳುವಳಿಕೆ ಅಪರಿಮಿತವಾದದ್ದು, ವಿಜಯನಗರ ಕಾಲದಲ್ಲಿ ಇದು ಸ್ವಲ್ಪ ಹೆಚ್ಚೇ ಇತ್ತು. ಇದಕ್ಕೆ ಸಾಮ್ರಾಜ್ಯದ ಹರಹು, ವಿಸ್ತಾರ ಮತ್ತು ಸಂಪನ್ಮೂಲಗಳು ಕಾರಣವಿರಬೇಕು, ಈ ಅವಧಿಯಲ್ಲಿ ಅರಸ ಸಾಮಂತ, ಮಾಂಡಲಿಕ, ಅಧಿಕಾರಿಗಳಿಂದ ಅನೇಕ ಅಭಿವೃದ್ಧಿ ಚಟುವಟಿಕೆಗಳು ನಡೆದಿವೆ, ಇದಕ್ಕೆ ಲಕ್ಷ್ಮೀಧರನ ಶಾಸನದಲ್ಲಿರುವ “ಕೆರೆಯಂ ಕಟ್ಟಿಸು ಭಾವಿಯಂ ಸವೆಸು ದೇವಾಗಾರಮಂ ಮಾಡಿಸು ಸೆರೆಯೊಳ್…

ಅಂದು ಅವನೊಡನೆ ಠೂ ಬಿಟ್ಟಿದ್ದು

ಅಂದು ಅವನೊಡನೆ ಠೂ ಬಿಟ್ಟಿದ್ದು ನಮ್ಮೂರಿನ ಆ ಸುಂದರ ಪರಿಸರ ನನ್ನ ಇರುವಿನವರೆಗೂ ಕಣ್ಣಮುಂದೆಯೇ ಇರುತ್ತದೆ. ಏಕೆಂದರೆ ಚಿಕ್ಕಂದಿನಲ್ಲಿ ಮಕ್ಕಳ ಮನಸ್ಸು ಅರಳುವಾಗ ಜೇಡಿಮಣ್ಣಿನಂತೆ ಮೃದುವಾಗಿರುತ್ತದೆ. ಅದನ್ನು ಹೇಗೆ ಬೇಕಾದರೂ ವಿನ್ಯಾಸಗೊಳಿಸಬಹುದು. ಬಿಳಿಯ ಹಾಳೆಯಂತೆ ನಿರ್ಮಲವಾಗಿರುತ್ತದೆ ಅದರ ಮೇಲೆ ಏನು ಬರೆದರೂ ಅಳಿಸಿಹೋಗದು. ಅಂತೆಯೇ ಆ ಸುಂದರ ಸೊಬಗಿನ ಪರಿಸರ ನನ್ನ ಮನಸ್ಸಿನಿಂದ ಎಂದೂ ದೂರಾಗದು. ‘ಒಡಲನೂಲಿನಿಂದ ಜೇಡ ಜಾಲ ನೇಯುವಂತೆ’ ಎಂಬ ಬೇಂದ್ರೆಯವರ ತೋಂತನದಂತೆ ಒಡಲು ಇರುವವರೆಗೂ ಬಾಲ್ಯದ ನೋಟದ ಜಾಲ ನೇಯುತ್ತಲೇ ಇರುತ್ತದೆ. ನಮ್ಮೂರಿನ…

ಮೂಲ ದೇವರಿಗೆ ಮೂರೇ ಕಾಲು…!?

ಮೂಲ ದೇವರಿಗೆ ಮೂರೇ ಕಾಲು…!? ಬೇಸಿಗೆ ಎಂದರೆ ಶಾಲೆಗೆ ಬಿಡುವು ‘ಇನ್ನೇನು ಎಲ್ಲಾ ಅರಾಮು’ ಎಂಬುದು ನಗರದ ಮಕ್ಕಳ ಹೇಳಿಕೆಯಾದರೆ,ಹಳ್ಳಿಯ ಒಕ್ಕಲ ಮಕ್ಕಳಿಗೆ ಹಲವು ತಯಾರಿಗಳ ಕಾಲ.ಹೊತ್ತೇರುವ ತನಕ ರೈತರು ಕೃಷಿ ಪರಿಕರಗಳನ್ನ ಹೊತ್ತು ಬಡಿಗೇರು,ಕಮ್ಮಾರು ಅಂತ ತಿರುಗಾಡುತ್ತಾ,ಎತ್ತುಗಳಿಗೆ ಲಾಲ್ ಕಟ್ಟಿಸುವುದು,ಹೊಲ ಹಸನು ಮಾಡುವುದು, ಗೊಬ್ಬರ ಹೇರುವುದು,ಮೇರೆಯ ಬದಿ ಕಳ್ಳಿ ಸಾಲು,ಮುಳ್ಳು ಬೇಲಿಗಳ ಸಮ ಮಾಡಿ ಏನು ಬಿತ್ತುವುದು ಎಂದು ತಯಾರಾದರೆ,ಅಪ್ಪ ಅವ್ವರಿಗೆ ಸಹಾಯಕರಾಗುವ ಕೆಲಸ ಮಕ್ಕಳದೇ.ದನ, ಎಮ್ಮೆ ಮೇಯಿಸಲು ಹೋಗುವವರು,ಕುರಿ ಆಡುಗಳನ್ನ ಕಾಯುವವರು ಇವರೇ!ಮನೆಯ ರಾಸುಗಳಿಗೆ…

ಮಳೆಕೊಯ್ದು ಪದ್ದತಿಯನ್ನು ಅಳವಡಿಸಿಕೊಂಡ ಪ್ರಾಚೀನ ತಾಣ ಚಿತ್ರದುರ್ಗ

ಮಳೆಕೊಯ್ದು ಪದ್ದತಿಯನ್ನು ಅಳವಡಿಸಿಕೊಂಡ ಪ್ರಾಚೀನ ತಾಣ ಚಿತ್ರದುರ್ಗ ಇತ್ತೀಚೆಗೆ ಪ್ರಧಾನ ಮಂತ್ರಿಯವರು ಮಳೆ ನೀರು ಹಿಡಿಯಿರಿ(ಕ್ಯಾಚ್ ದ ರೈನ್)” ಎಂಬ ವಿಶೇಷ ಕಾರ್ಯಕ್ರಮದ ಮೂಲಕ ವಿಶ್ವ ಜಲದಿನವನ್ನು ಆಚರಿಸಿದ್ದರು. ಅಲ್ಲದೆ ಜಲ ಪ್ರಮಾಣ ವಚನವನ್ನೂ ಘೋಷಿಸಿದ್ದರು. ಈ ಅಭಿಯಾನವು ನೀರಿನ ಅಗತ್ಯವನ್ನು ಸಾರಿಹೇಳುವ ಮಳೆಕೊಯ್ಲು ಕಾರ್ಯಕ್ರಮವೇ ಆಗಿದ್ದಿತು. ಮಳೆಕೊಯ್ಲು ಎಂಬುದು ಇತ್ತೀಚೆಗೆ ಹೆಚ್ಚು ಹೆಚ್ಚಾಗಿ ಅನುಸರಿಸಿ ಅಳವಡಿಸಿಕೊಂಡ ಆಧುನಿಕ ಪರಿಭಾಷೆ. ಪರಿಸರ ಮತ್ತು ಹವಾಮಾನದಲ್ಲಾದ ವ್ಯತಿರಿಕ್ತ ಬದಲಾವಣೆಯಿಂದ ಪ್ರಚಲಿತಗೊಂಡ ಪದ್ಧತಿಯೂ ಹೌದು, ಇಡೀ ಭೂಮಂಡಲವು ಮಾನವ ನಿರ್ಮಿತ…

ಆಡಳಿತ ವರ್ಗದ ಕಾರ್ಯ ಕ್ಷಮತೆ, ಖಾಸಗಿ ಕೆಲಸದ ಅದಕ್ಷತೆ

ಆಡಿಳತ ವರ್ಗದ ಕಾರ್ಯಕ್ಷಮತೆ,ಖಾಸಗಿ ಕೆಲಸದ ಅದಕ್ಷತೆ ಕೋಟ ಬಸ್ ನಿಲ್ದಾಣದಲ್ಲಿ ಸನ್ಯಾಲ್ ಕಾರನ್ನು ಹತ್ತಿ ರಾವತ್ ಭಾಟ ಅಣುಶಕ್ತಿ ಸ್ಥಾವರ (RAPP)ಕ್ಕೆ ಹೊರಟ ನನ್ನೊಟ್ಟಿಗಿದ್ದ ಕೋಟ ಆಫೀಸ್ ನ ಅಶೋಕ್ ಕುಮಾರ್ ಕುಲಶ್ರೇಷ್ಠ (AKK) ಬಹಳ ಅಸಮಾಧಾನಗೊಂಡಿದ್ದರು. ಸುಮಾರು 50 ಕಿ. ಮೀ.ಗಳ ದೂರದ ಹಾದಿಯ ಉದ್ದಕ್ಕೂ ನಾನು ಮತ್ತು ಸನ್ಯಾಲ್ ಆಡುತ್ತಿದ್ದ ಮಾತುಗಳನ್ನು ಕೇಳಿಸಿಕೊಳ್ಳುತಿದ್ದರೇ ಹೊರತು ತಾವಾಗಿಯೇ ಒಂದೇ ಒಂದು ಮಾತನ್ನೂ ಆಡಲಿಲ್ಲ. ನಾನು ಮಾಡಿದ ತಪ್ಪಿನ ಅರಿವು ನನಗಾಗಲೆ ಆಗತೊಡಗಿತ್ತು. AKK ಪ್ರತಿರೋಧದ…

ಕಾಣುವ ಬೆಳಕು ಮತ್ತು ಕಾಣದ ಇರುಳು…

ಕಾಣುವ ಬೆಳಕು ಮತ್ತು ಕಾಣದ ಇರುಳು… ಇಳೆ ಮತ್ತು ಮಳೆಗಳ ಕಥನ ಭೂಮಿಯ ಫಲಗಳ ಕಥನ ಮಾತ್ರವಲ್ಲ, ಬಹು ಜೀವಿಗಳ ಬದುಕಿನ ವಿರುದ್ದ ವಿನ್ಯಾಸಗಳ ನೋವಿನ ತಾರ್ಕಿಕ ಕಥನವೂ ಹೌದು.” ರೈತ ಬಡವನಾದರೂ ಭೂಮಿ ಬಡವಲ್ಲ” ಎಂಬ ಗಾದೆ ಉದಾರ ನೆಲೆಯಿಂದ ಕೂಡಿದೆ.ಹಳ್ಳಿಗಳ ಒಡಲಾಳದ ಜಮೀನ್ದಾರಿ ವ್ಯವಸ್ಥೆ ಭೂಮಿ ನಂಬಿದ ಕೂಲಿ ರೈತರನ್ನ ಬಡವರನ್ನಾಗಿಸಿದ ರೀತಿಗಳನ್ನ ಬಗೆಯ ಬೇಕಿದೆ. ಅಶ್ವಿನಿ ಮಳೆ ಆರಂಭದಂದು ಕೂರಿಗೆ,ರಂಟೆ,ಕುಂಟೆಗಳ ಪೂಜೆಯನ್ನ ಪ್ರಾರಂಭಿಸುವಂತೆಯೇ ದನಕರುಗಳಿಗೆ ನೇಗಿಲು,ನೊಗಗಳಿಗೆ,ಕೃಷಿಯ ಎಲ್ಲಾ ಪರಿಕರಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ನೆಲ…

1 5 6 7 8 9 10
error: Content is protected !!