Browsing: ಸಿನೆಮಾ

ಸಿನೆಮಾ

ಶಿವಾಜಿ ಗಣೇಶನ್ ಅಭಿನಯದ ಪಂತುಲು ನಿರ್ಮಾಣದ ಮಕ್ಕಳ ರಾಜ್ಯ

ಶಿವಾಜಿ ಗಣೇಶನ್ ಅಭಿನಯದ  ಪಂತುಲು ನಿರ್ಮಾಣದ ಮಕ್ಕಳ ರಾಜ್ಯ ಬಿ.ಆರ್.ಪಂತುಲು ನಿರ್ಮಿಸಿ ನಿರ್ದೇಶಿಸಿದ ಕಪ್ಪು-ಬಿಳುಪು ಜಾನಪದ ಕಥಾ ಹಂದರದ ‘ಮಕ್ಕಳ ರಾಜ್ಯ‘ ಚಲನಚಿತ್ರ ೧೯೬೦ರಲ್ಲಿ ತೆರೆಗೆ ಬಂದಿತು. ಬಿ.ಆರ್.ಪಂತುಲು ಅವರ ಪದ್ಮಿನಿ ಪಿಕ್ಚರ್ಸ್ ಜೊತೆಯಲ್ಲಿ ಎಂ.ವಿ.ರಾಜಮ್ಮನವರ ಎಂ.ವಿ.ಆರ್ ಪ್ರೊಡಕ್ಷನ್ಸ್ ಜೊತೆಯಾಗಿ ಈ ಚಿತ್ರವನ್ನು ನಿರ್ಮಿಸಿದರು, ಮಕ್ಕಳ ಪಾತ್ರಗಳನ್ನೇ ಪ್ರಧಾನವಾಗಿಟ್ಟುಕೊಂಡು ತಯಾರಾದ ಮೊದಲ ಚಿತ್ರ ಇದು. ಈ ಚಿತ್ರದಲ್ಲಿ ಹಿರಿಯ ನಟರ ಅಭಿನಯಕ್ಕಿಂತಲೂ ಮಕ್ಕಳ ಅಭಿನಯವೇ ಪ್ರಮುಖವಾಗಿತ್ತು. ಆ ಕಾಲಕ್ಕೆ ಇದೊಂದು ಪ್ರಯೋಗಾತ್ಮಕ ಚಿತ್ರವೆಂದೇ ಹೇಳಬಹುದಿತ್ತು. ಎಸ್.ಆರ್.ಪುಟ್ಟಣ್ಣ ಕಣಗಾಲ್…

ಕತ್ತಿವರಸೆಯಲ್ಲ್ಲಿ ವಿಸ್ಮಯ ಮೂಡಿಸಿದ ರಾಜಕುಮಾರ್ ಕಲಾವಿದರಿಗೆ ಆಶ್ರಯ ನೀಡಿದ್ದ ಗುಗ್ಗುಮಹಲ್

ಕತ್ತಿವರಸೆಯಲ್ಲ್ಲಿ ವಿಸ್ಮಯ ಮೂಡಿಸಿದ ರಾಜಕುಮಾರ್  ಕಲಾವಿದರಿಗೆ ಆಶ್ರಯ ನೀಡಿದ್ದ ಗುಗ್ಗುಮಹಲ್ ಗಿರಿಜಾ ಮತ್ತು ಸೂರ್ಯಪ್ರಭಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ೧೯೬೦ರಲ್ಲಿ ಬಿಡುಗಡೆಗೊಂಡ ರಾಣಿ ಹೊನ್ನಮ್ಮ ಕಪ್ಪು ಬಿಳುಪು ಜಾನಪದ ಚಿತ್ರವನ್ನು ಟಿ.ಎಸ್.ಕರಿಬಸಯ್ಯ ನಿರ್ಮಿಸಿದರು. ಕು.ರ.ಸೀತಾರಾಮಶಾಸ್ತ್ರಿ ನಿರ್ದೇಶಿಸಿದ ಈ ಚಿತ್ರಕ್ಕೆ ಎಸ್.ರಾಮನಾಥನ್ ಮತ್ತು ಬಿ.ಎಸ್. ವಿಶ್ವನಾಥ್ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ರಾಜಕುಮಾರ್, ಲೀಲಾವತಿ, ಲಲಿತಾರಾವ್, ಬಾಲಕೃಷ್ಣ, ನರಸಿಂಹರಾಜು, ಲಕ್ಷ್ಮಿ, ವೀರಭದ್ರಯ್ಯ, ಈಶ್ವರಪ್ಪ, ಸುಬ್ಬಣ್ಣ, ರಾಮಚಂದ್ರಶಾಸ್ತ್ರಿ, ಗುಗ್ಗು, ಜಿ.ವಿ.ಅಯ್ಯರ್, ಶಿವಾಜಿರಾವ್ ಅಭಿನಯಿಸಿದರು. ಕು.ರ.ಸೀತಾರಾಮಶಾಸ್ತ್ರಿ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಗೀತೆಗಳನ್ನು ರಚಿಸಿದರು.…

ಇಂದು ಪುನೀತ್ ನುಡಿನಮನ ಕಾರ್ಯಕ್ರಮ

ಬೆಂಗಳೂರು,ನ,೧೬: ಇತ್ತೀಚೆಗೆ ನಿಧನರಾದ ನಟ ಪುನೀತ್ ರಾಜಕುಮಾರ್ ಅವರ ಅಗಲಿಕೆ ಹಿನ್ನೆಲೆಯಲ್ಲಿ ಕರ್ನಾಟಕ ವಾಣಿಜ್ಯ ಮಂಡಳಿ ನಮನ ಸಲ್ಲಿಸಲಿದೆ ಇಂದು ಅರಮನೆ ಮೈದಾನದಲ್ಲಿ ನಡೆಯಲಿರುವ ಪುನೀತ್ ನಮನ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಸಜ್ಜಾಗಿದ್ದು ಮಧ್ಯಾಹ್ನ ಮೂರು ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು ಆರು ಗಂಟೆಯವರೆಗೂ ನಡೆಯಲಿದೆ ಪುನೀತ್ ನಮನ ಕಾರ್ಯಕ್ರಮದ ರೂಪು-ರೇಷೆಗಳು ಈಗಾಗಲೇ ಫೈನಲ್ ಆಗಿದೆ. ಡಾ. ನಾಗೇಂದ್ರ ಪ್ರಸಾದ್ ಬರೆದ ಸಾಹಿತ್ಯಕ್ಕೆ ಗುರುಕಿರಣ್ ರಾಗ ಸಂಯೋಜಿಸಿದ್ದಾರೆ. ಈ ಗೀತೆಯ ಮೂಲಕವೇ ಪುನೀತ್ ನಮನ ಕಾರ್ಯಕ್ರಮ ಆರಂಭಗೊಳ್ಳಲಿದೆ. ಸ್ಯಾಂಡಲ್‌ವುಡ್…

ರಾಗಿಣಿ ನಟನೆಯ “ಸಾರಿ” ಚಿತ್ರಕ್ಕೆ ಚಾಲನೆ

ಆ್ಯಕ್ಷನ್, ಕ್ರೈಂ, ಥ್ರಿಲ್ಲರ್ ಕಥಾಹಂದರ ಒಳಗೊಂಡಿರುವ ಸಾರಿ (ಕರ್ಮ ರಿಟರ್ನ್ಸ್) ಎಂಬ ನಾಯಕಿ ಪ್ರಧಾನ ಚಿತ್ರದ ಮೂಲಕ ನಟಿ ರಾಗಿಣಿ ದ್ವಿವೇದಿ ಅವರು ಬಹಳ ದಿನಗಳ ನಂತರ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಈ ಹಿಂದೆ ಮಾಡಿರದ ವಿಶೇಷ ಪಾತ್ರದಲ್ಲಿ ರಾಗಿಣಿ ಕಾಣಿಸಿಕೊಳ್ಳಲಿದ್ದಾರೆ. ಕಿಸ್ ಇಂಟರ್ನ್ಯಾಷನಲ್ ಪ್ರೊಡಕ್ಷನ್ (ಕೆನಡ)ಅಡಿಯಲ್ಲಿ ಆದ‌ ನವೀನ್ ಕುಮಾರ್ (ಕೆನಡಾ ) ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಬ್ರಹ್ಮ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ ಮಾಗಡಿ ರಸ್ತೆಯ,ಮಾಚೋಹಳ್ಳಿ ಇರುವ…

ನ.೧೬ ರಂದು ಬೆಂಗಳೂರಿನಲ್ಲಿ ‘ಪುನೀತ್ ನಮನ’ ಕಾರ್ಯಕ್ರಮ.

ಬೆಂಗಳೂರು,ನ, ೩: ಅಕಾಲಿಕ ಮರಣಕ್ಕೆ ತುತ್ತಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸಲು ಕನ್ನಡ ಚಿತ್ರೋದ್ಯಮ ನವೆಂಬರ್ ೧೬ ರಂದು ‘ಪುನೀತ್ ನಮನ’ ಕಾರ್ಯಕ್ರಮವನ್ನು ಆಯೋಜಿಸಿದೆ. ಸ್ಯಾಂಡಲ್ ವುಡ್ ವತಿಯಿಂದ ನವೆಂಬರ್ ೧೬ ರಂದು ೩ ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪುನೀತ್ ನಮನ ಕಾರ್ಯಕ್ರಮ ನಡೆಯಲಿದ್ದು, ಅಂದು ಸ್ಯಾಂಡಲ್ ವುಡ್ ನಟರು, ಕಲಾವಿದರು, ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿ ನಟ ಅಪ್ಪು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ. ಆದರೆ ಈಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಅವಕಾಶವಿಲ್ಲ ಕೇವಲ…

ರಾಷ್ಟ್ರಪತಿ ಪ್ರಶಸ್ತಿಗೆ ಭಾಜನವಾದರಾಜಕುಮಾರ್‌ಅಭಿನಯದಜಗಜ್ಯೋತಿ ಬಸವೇಶ್ವರ

ರಾಷ್ಟ್ರಪತಿ ಪ್ರಶಸ್ತಿಗೆ ಭಾಜನವಾದರಾಜಕುಮಾರ್‌ಅಭಿನಯದಜಗಜ್ಯೋತಿ ಬಸವೇಶ್ವರ ಶಶಿಕಲಾ ಚಿತ್ರ ಲಾಂಛನದಲ್ಲಿಐತಿಹಾಸಿಕ ಕಪ್ಪು-ಬಿಳುಪು ಚಿತ್ರಜಗಜ್ಯೋತಿ ಬಸವೇಶ್ವರ ೧೯೫೯ರಲ್ಲಿ ತೆರೆಗೆ ಬಂದಿತು. ಟಿ.ವಿ.ಸಿಂಗ್ ಠಾಕೂರ್ ನಿರ್ದೇಶನದಚಿತ್ರಕ್ಕೆ ಜಿ.ವಿ. ಅಯ್ಯರ್ ಹಾಗೂ ಭಗವಾನ್ ಸಹಾಯಕ ನಿರ್ದೇಶಕರಾಗಿಕಾರ್ಯನಿರ್ವಹಿಸಿದರು.ಈ ಚಿತ್ರ ರಾಷ್ಟ್ರಪತಿಗಳ ಅರ್ಹತಾಪತ್ರ ಪ್ರಶಸ್ತಿಗೆ ಭಾಜನವಾಯಿತು.ದೊರೆ ಭಗವಾನ್‌ಖ್ಯಾತಿಯ ಭಗವಾನ್ ಈ ಚಿತ್ರದ ಮೂಲಕ ಸಹಾಯಕ ನಿರ್ದೇಶಕರಾಗಿಚಿತ್ರರಂಗ ಪ್ರವೇಶಿಸಿದರು. ಹೊನ್ನಪ್ಪ ಭಾಗವತರ್, ರಾಜಕುಮಾರ್, ಅನಿಲ್‌ಕುಮಾರ್, ಚಿ.ಉದಯಶಂಕರ್, ಚಂದ್ರಯ್ಯಸ್ವಾಮಿ, ಕೆ.ಎಸ್.ಅಶ್ವತ್, ಬಿ.ಸರೋಜಾದೇವಿ, ಟಿ.ಎನ್.ಬಾಲಕೃಷ್ಣ, ಜಿ.ವಿ.ಅಯ್ಯರ್, ಸಂಧ್ಯಾ, ಲೀಲಾವತಿ, ಚಿ.ಸದಾಶಿವಯ್ಯ, ನರಸಿಂಹರಾಜು, ಹೆಚ್.ರಾಮಚಂದ್ರಶಾಸ್ತ್ರಿ, ಈಶ್ವರಪ್ಪ, ವೀರಭದ್ರಪ್ಪ, ವೆಂಕಟಸುಬ್ಬಯ್ಯ, ಆರ್.ಎನ್.ಮಾಗಡಿ, ಹುಲಿಮನೆಸೀತಾರಾಮಶಾಸ್ತ್ರಿ,…

‘ಓ ಮೈ ಲವ್’ ಚಿತ್ರಕ್ಕೆ ಏನಾಯ್ತೋ ಕಾಣೆ ಹಾಡಿನ ಚಿತ್ರೀಕರಣ

ಜಿಸಿಬಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಜಿ. ರಾಮಾಂಜಿನಿ ಕಥೆ ಬರೆದು ಬಹುಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಓ ಮೈ ಲವ್ ಚಿತ್ರಕ್ಕೆ ಕಳೆದ ವಾರ ವಿ. ನಾಗೇಂದ್ರ ಪ್ರಸಾದ್ ರಚಿಸಿದ “ ಏನಾಯ್ತೋ ಕಾಣೆ.. ಏನಾಯ್ತೋ ಕಾಣೆ ತಂಗಾಳಿ ಸುರಿದಂತೆ ತಂಪಾದೆ ನಾನೆ….” ಹಾಡನ್ನು ವಿ. ಮುರಳಿ ನೃತ್ಯ ನಿರ್ದೇಶನದಲ್ಲಿ ನಾಯಕ ಅಕ್ಷಿತ್ ಶಶಿಕುಮಾರ್, ನಾಯಕಿ ಕೀರ್ತಿ ಕಲ್ಕರೆ, ದೀಪಿಕಾ ಆರಾದ್ಯ ,ಅಕ್ಷತಾ ,ಶೌರ್ಯ. ಸುವೇದ್ ಅಭಿನಯಿಸಿದಈ ಹಾಡನ್ನು ಯಲಹಂಕದ ನಿಟ್ಟಿ ಮೀನಾಕ್ಷಿ ಕಾಲೇಜಿನಲ್ಲಿ ಚಿತ್ರೀಕರಿಸಲಾಯಿತು. ಚಿತ್ರೀಕರಣದೊಂದಿಗೆ ಸುಮಾರ್…

ಐತಿಹಾಸಿಕ ವಿಭಿನ್ನ ಚಿತ್ರ ‘ಅಲ್ಲಮ ಪ್ರಭು’

12ನೇ ಶತಮಾನದ ಇತಿಹಾಸವುಳ್ಳ ಶ್ರೀ ಅಲ್ಲಮಪ್ರಭು ಚಿತ್ರದ ಚಿತ್ರೀಕರಣ ಇತ್ತೀಚೆಗೆ ಮುಕ್ತಾಯಗೊಂಡಿತು. ಡಾ.ಸಂಜಯ್ ಮತ್ತು ಅಂಕಿತಾ ಶಿವ-ಪಾರ್ವತಿಯಾಗಿ‌ ಅಭಿನಯಿಸಿದ ವಿಭಿನ್ನವಾದ ಹಾಡನ್ನು ಚಿತ್ರೀಕರಣದ ಕೊನೆಯ ಭಾಗವಾಗಿ ಬೆಂಗಳೂರಿನಲ್ಲಿ ಚಿತ್ರಿಸಲಾಯಿತು. ಚಿತ್ರವು ಕನ್ನಡ ಮಾತ್ರವಲ್ಲದೆ‌ ತೆಲುಗು, ಹಿಂದಿ, ಮರಾಠಿ, ಮಲಯಾಳಂ ಭಾಷೆಯಲ್ಲಿ ತಯಾರಾಗುತ್ತಿರುವುದಾಗಿ ನಿರ್ಮಾಪಕರಲ್ಲೊಬ್ಬರಾದ‌ ಮಾಧವಾನಂದ‌.ವೈ ತಿಳಿಸಿದ್ದಾರೆ. ಇವರಿಗೆ ಮಹಾವೀರಪ್ರಭು‌ ನಿರ್ಮಾಣದಲ್ಲಿ ಜೊತೆಗೂಡಿದ್ದಾರೆ. ಈ ಚಿತ್ರವನ್ನು ಶರಣ್ ಗದ್ವಾಲ್ ನಿರ್ದೇಶನ ಮಾಡುತ್ತಿದ್ದು, ಆರ್.ಗಿರಿ ಛಾಯಾಗ್ರಾಹಕರಾಗಿದ್ದಾರೆ. ಕುಮಾರ್ ಈಶ್ವರ್‌ ಸಂಗೀತ, ಬಿ.ಎಸ್.ಕೆಂಪರಾಜ್ ಸಂಕಲನ, ರಮೇಶ್ ಬಾಬು ವರ್ಣಾಲಂಕಾರ, ಬೆಳ್ಳಿ ಚುಕ್ಕಿ…

ಗ್ರಾಮೀಣ ಭಾಷೆ ಬಳಕೆಯಲ್ಲೂ ಸೈ ಎನಿಸಿಕೊಂಡ ರಾಜಕುಮಾರ್

ಗ್ರಾಮೀಣ ಭಾಷೆ ಬಳಕೆಯಲ್ಲೂ ಸೈ ಎನಿಸಿಕೊಂಡ ರಾಜಕುಮಾರ್ ರಾಜಕುಮಾರ್ ಬಿ.ಸರೋಜಾದೇವಿ ಒಟ್ಟಾಗಿ ಅಭಿನಯಿಸಿದ ಮೊದಲ ಚಿತ್ರ ಹಾಗೂ ನಾಯಕ ನಾಯಕಿಯರು ಮೊದಲ ಬಾರಿಗೆ ಗ್ರಾಮ್ಯ ಭಾಷೆಯನ್ನು ಬಳಸಿದ ಕಪ್ಪು-ಬಿಳುಪು, ಸಾಮಾಜಿಕ ಚಿತ್ರ ಅಣ್ಣತಂಗಿ ೧೯೫೮ರಲ್ಲಿ ಗಿರಿಜಾ ಪ್ರೊಡಕ್ಷನ್ಸ್ ಲಾಂಛನದಡಿ ಬಿಡುಗಡೆಗೊಂಡಿತು. ಟಿ.ಎಸ್.ಕರಿಬಸಯ್ಯ ನಿರ್ಮಾಣ ಮಾಡಿದ ಚಿತ್ರವನ್ನು ಕು.ರ.ಸೀತಾರಾಮಶಾಸ್ತ್ರಿ ನಿರ್ದೇಶಿಸಿದರು. ಕಂದಗಲ್ ವೀರಣ್ಣ ಸಹಾಯಕ ನಿರ್ದೇಶಕರಾಗಿದ್ದರು. ರಾಜಕುಮಾರ್, ಈಶ್ವರಪ್ಪ, ಕೆ.ಎಸ್.ಅಶ್ವತ್, ಟಿ.ಎನ್.ಬಾಲಕೃಷ್ಣ, ನರಸಿಂಹರಾಜು, ಗಣಪತಿಭಟ್, ಆರ್.ಎನ್.ಮಾಗಡಿ, ವಾಸುದೇವ ಗಿರಿಮಾಜಿ, ಗುಗ್ಗು, ಬಿ.ಜಯಮ್ಮ, ಬಿ.ಸರೋಜಾದೇವಿ, ವಿದ್ಯಾವತಿ, ಲಕ್ಷ್ಮೀದೇವಿ ಅಭಿನಯಿಸಿದರು. ತಮಿಳಿನ…

‘ಶಿವನ ಪಾದ’ ದ ಜರ್ನಿಯ ಸುತ್ತಾ…

ಸೀ ಶೋರ್ ಸ್ಟುಡಿಯೋಸ್ ಮೂಲಕ ಸಂದೀಶ್ ಹೆಚ್.ಟಿ. ಹಾಗೂ ಪೆರುಮಾಳ್ ವಿ. ಅವರ ನಿರ್ಮಾಣದ *ಶಿವನ ಪಾದ* ಲವ್, ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ಹಾರರ್ ಟಚ್ ಹೊಂದಿರುವ ಕ್ರೈಮ್ ಕಥಾನಕ ಇರುವ ಚಿತ್ರ. ಈ ಹಿಂದೆ ಬಂಗಾರಿ, ಬೆಟ್ಟದ ದಾರಿ, ನಡಗಲ್ಲು, ಅಲ್ಲದೆ ತಮಿಳಿನ ಕಾದಲ್ ಪೈತ್ಯಂ ಚಿತ್ರಗಳನ್ನು ನಿರ್ದೇಶಿಸಿದ್ದ ಮಾಚಂದ್ರು ಅವರು ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ಅರ್ಧದಷ್ಟು ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಶೇ.೫೦ರಷ್ಟು ಶೂಟಿಂಗ್ ಮಾತ್ರ ಬಾಕಿಯಿದೆ. ಉಳಿದ ಮಾತಿನಭಾಗ ಹಾಗೂ ೨…

ಪಕ್ಕಾ ಲವ್ ಮನೋರಂಜನಾ ಚಿತ್ರ ‘ ಸುಕನ್ಯ ದ್ವೀಪ’

ಸುಕನ್ಯ ದ್ವೀಪ ಎನ್ನುವ ಟೈಟಲ್ ಕೇಳಿದೊಡನೆ ಇದೊಂದು ಸಸ್ಪೆನ್ಸ್ ಚಿತ್ರವಿರಬಹುದು ಎಂದುಕೊಳ್ಳುತ್ತಾರೆ. ಆದರೆ ಅಂಥಾ ಯಾವುದೇ ಸಸ್ಪೆನ್ಸ್ , ಥ್ರಿಲ್ಲರ್ ಇರದೆ ಪಕ್ಕಾ ಫ್ಯಾಮಿಲಿ ಲವ್ ಎಂಟರ್‌ಟೈನರ್ ಕಥಾಹಂದರಕ್ಕೆ ಹಾಸ್ಯದ ಟಚ್ ಕೊಟ್ಟು ನಿರೂಪಿಸುವ ಪ್ರಯತ್ನವನ್ನು ನಿರ್ದೇಶಕ ಎಂ.ಡಿ. ಅಫ್ಜಲ್ ಮಾಡಿದ್ದಾರೆ. ಸೂಪರ್ ಸ್ಟಾರ್ ಪತ್ರಿಕೆಯ ಸಂಪಾದಕರೂ ಆದ ಇವರು ಈಗಾಗಲೇ ಮೊಬೈಲ್ ರಾಜ ಎನ್ನುವ ಚಿತ್ರ ನಿರ್ದೇಶಿಸಿದ್ದು, ಅದಿನ್ನೂ ಬಿಡುಗಡೆಯಾಗಿಲ್ಲ, ಈಗಾಗಲೇ ಒಂದು ಹಂತದ ಶೂಟಿಂಗ್ ಮುಗಿಸಿರುವ ಚಿತ್ರತಂಡ ಎರಡನೇ ಹಂತಕ್ಕೆ ಅಣಿಯಾಗಿದ್ದು, ಅದಕ್ಕೂ ಮುನ್ನ…

ಚಡ್ಡಿ ದೋಸ್ತ್ ಸಿನಿಮಾ ನೋಡಿ ಗೋಲ್ಡ್ ಕಾಯಿನ್ ಗೆಲ್ಲಿ

ಹಾಸ್ಯದ ಜೊತೆ ಸ್ನೇಹ, ಪ್ರೀತಿಯ ಕಥಾನಕ ಹೊಂದಿದ, ರೆಡ್ ಅಂಡ್ ವೈಟ್ ಸೆವೆನ್ ರಾಜ್ ನಿರ್ಮಾಣದ ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ಚಿತ್ರವು ಕಳೆದ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗಿ, ಎಲ್ಲಾ ಕಡೆಯಿಂದ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ದಿನದಿಂದ ದಿನಕ್ಕೆ ಚಿತ್ರದ ಕಲೆಕ್ಷನ್ ಕೂಡ ಇಂಪ್ರೂವ್ ಆಗ್ತಿದೆ. ಕಾಮಿಡಿಯೊಂದಿಗೆ ಆರಂಭವಾಗುವ ಚಿತ್ರದ ಕ್ಲೈಮ್ಯಾಕ್ಸ್ ಸೀನ್ ಪ್ರೇಕ್ಷಕರ ಕಣ್ಣನ್ನು ಒದ್ದೆಯಾಗಿಸುತ್ತದೆ. ಆಸ್ಕರ್ ಕೃಷ್ಣ ನಿರ್ದೇಶನದ ಈ ಚಿತ್ರಕ್ಕೆ ಲೋಕೇಂದ್ರಸೂರ್ಯ. ಕಥೆ, ಚಿತ್ರಕಥೆ, ಸಂಭಾಷಣೆ ರಚಿಸಿದ್ದಾರೆ. ನಿರ್ಮಾಪಕ ಸೆವೆನ್ ರಾಜ್ ಒಬ್ಬ…

ಈವಾರ ತೆರೆಗೆ,’ ಜನುಮದ ಜಾತ್ರೆ’

ಶ್ರೀ ಮಣಿಕುಪ್ಪೆ ಆಂಜನೇಯ ಸ್ವಾಮಿ ಪ್ರೊಡಕ್ಷನ್ ಲಾಂಛನ ದಲ್ಲಿ ದೊಡ್ಮನೆ ಮಂಜುನಾಥ್ ಎಂ ಅವರ ನಿರ್ಮಾಣದ ಈ ಚಿತ್ರವನ್ನು ಈ ವಾರ ರಾಜ್ಯದ್ಯಂತ ತೆರೆಗೆ ತರುತ್ತಿದ್ದಾರೆ. ಆಟೋ ಚಾಲಕನಾಗಿದ್ದುಕೊಂಡೇ ಜನುಮದಜಾತ್ರೆ ಎಂಬ ಸಿನಿಮಾ ನಿರ್ದೇಶನ ಮಾಡಿರುವ ಆಟೋ ಆನಂದ್ . ಪಕ್ಕಾ ಹಳ್ಳಿ ಸೊಗಡಿನಲ್ಲಿ ನಡೆಯುವ ಪ್ರೇಮಕಥೆಯ ಚಿತ್ರ ಇದಾಗಿದ್ದು, ಮಲೆ ಮಹದೇಶ್ವರ ಬೆಟ್ಟ, ಮಂಡ್ಯ, ತುಮಕೂರು, ಕೊರಟಗೆರೆ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಎಲ್ಲಾ ಪ್ರೇಮ ಕಥೆಗಳ ಹಾಗೆ ಇದೂ ಕೂಡ ಗ್ರಾಮೀಣ ಪರಿಸರದ ಹಿನ್ನೆಲೆಯಲ್ಲಿ…

ಸೈಮಾ ೨೦೧೯ ಪ್ರಶಸ್ತಿ ಪ್ರಕಟ; ಪ್ರಶಸ್ತಿಗಳನ್ನು ಬಾಚಿಕೊಂಡ ʻಯಜಮಾನʼ

ಸೈಮಾ ೨೦೧೯ ಪ್ರಶಸ್ತಿಗಳ ವಿತರಣೆ ಸಮಾರಂಭ ಶನಿವಾರ ಹೈದರಾಬಾದ್‌ನಲ್ಲಿ ನಡೆದಿದ್ದು, ದರ್ಶನ್ ನಟನೆಯ ’ಯಜಮಾನ’ ಸಿನಿಮಾಕ್ಕೆ ಕನ್ನಡ ವಿಭಾಗದಲ್ಲಿ ಹೆಚ್ಚು ಪ್ರಶಸ್ತಿಗಳು ಲಭ್ಯವಾಗಿವೆ ’ಯಜಮಾನ’ ಸಿನಿಮಾದ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ನಟ ದರ್ಶನ್‌ಗೆ ನೀಡಲಾಗಿದೆ. ಅತ್ಯುತ್ತಮ ನಟಿ ಪ್ರಶಸ್ತಿಯನ್ನು ’ಆಯುಶ್‌ಮಾನ್ ಭವ’ ಸಿನಿಮಾದ ನಟನೆಗೆ ರಚಿತಾ ರಾಮ್ ಪಡೆದುಕೊಂಡಿದ್ದಾರೆ. ’ಅವನೇ ಶ್ರೀಮನ್ನಾರಾಯಣ’ ಸಿನಿಮಾದ ನಟನೆಗೆ ರಕ್ಷಿತ್ ಶೆಟ್ಟಿಗೆ ವಿಮರ್ಶಕರ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದೆ. ದರ್ಶನ್ ಕಾರ್ಯಕ್ರಮಕ್ಕೆ ಗೈರಾಗಿದ್ದ ಕಾರಣ ನಿರ್ಮಾಪಕಿ ಶೈಲನಾ ನಾಗ್ ಪ್ರಶಸ್ತಿಯನ್ನು…

ವಿಶೇಷತೆಗಳ ಗುಚ್ಚ `ತ್ರಿವೇದಂ’

ಹೊಸಬರ ತ್ರಿವೇದಂ ಚಿತ್ರದಲ್ಲಿ ಹಲವು ವಿನೂತನಗಳು ಇರುವುದು ವಿಶೇಷ. ಸಾಮಾನ್ಯವಾಗಿ ನೈಜ ಕತೆಯನ್ನು ಆದರಿಸಿದ ಚಿತ್ರಗಳು ಬಂದಿವೆ, ಬರುತ್ತಲೆ ಇದೆ. ಆದರೆ ಇದರಲ್ಲಿ ಮೂರು ಸತ್ಯ ಘಟನೆಗಳು ಬೇರೆ ಬೇರೆ ಸ್ಥಳಗಳಲ್ಲಿ ನಡೆದಿದೆ. ೨೦೧೨ರಲ್ಲಿ ಬೆಂಗಳೂರಿನ ಕುರುಬರಹಳ್ಳಿ, ಆರು ವರ್ಷದ ಕೆಳಗೆ ಮಂಡ್ಯಾ ಮತ್ತು ಹನ್ನರೆಡು ವರ್ಷದ ಹಿಂದೆ ಮೈಸೂರು ಆಸುಪಾಸುದಲ್ಲಿ ಜರುಗಿದೆ. ಅಂದರೆ ತ್ರಿವಳಿ ಕತೆಗಳನ್ನು ಒಗ್ಗೂಡಿಸಿ ಒಂದು ಸಿನಿಮಾ ಮಾಡಲು ಹೊರಟಿದ್ದಾರೆ. ಹಾಗಂತ ಒಂದಕ್ಕೊಂದು ಸಂಬಂದವಿರುವುದಿಲ್ಲ ಹಾಗೂ ಸಮಾನಾಂತರವಾಗಿ ಸಾಗುತ್ತದೆ. ಎಲ್ಲವು ಪ್ರೀತಿ ಕುರಿತಾಗಿದ್ದು…

ಪಂಚಭಾಷಾ ತಾರೆ, ನಿರ್ಮಾಪಕಿ ಪಂಡರಿಬಾಯಿ

ಪಂಚಭಾಷಾ ತಾರೆ, ನಿರ್ಮಾಪಕಿ ಪಂಡರಿಬಾಯಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ೧೯೨೮ರ ಸೆಪ್ಟೆಂಬರ್ ೧೮ರಂದು ಜನಿಸಿದ ಪಂಡರಿಬಾಯಿಯವರ ತಂದೆ ರಂಗರಾವ್ ಖ್ಯಾತ ಕೀರ್ತನಕಾರರು. ಜನಿಸಿದಾಗ ಗೀತಾ ಎಂದು ಹೆಸರು ಇರಿಸಿದ್ದರಾದರೂ, ಪಂಡರಾಪುರಕ್ಕೆ ಹೋಗಿ ಬಂದ ನಂತರ ಮಗಳ ಹೆಸರನ್ನು ಪಂಡರಿಬಾಯಿ ಎಂದು ಬದಲಿಸಿದರು. ತಾಯಿ ಕಾವೇರಿಬಾಯಿ ಭಟ್ಕಳದಲ್ಲಿ ಶಾಲಾ ಶಿಕ್ಷಕಿ. ಸಹೋದರ ವಿಮಲಾನಂದದಾಸ್ ಬಾಲ್ಯದಲ್ಲೇ ಹರಿಕಥಾ ವಿದ್ವಾಂಸರಾಗಿ ಖ್ಯಾತಗೊಂಡಿದ್ದರು. ನಾಟಕಗಳಲ್ಲಿ ಸಹ ಅಭಿನಯಿಸಿದವರು. ವಿಮಲಾನಂದದಾಸ್ ಮುಂದೆ ಕೆಲವು ಕನ್ನಡ ಚಲನಚಿತ್ರಗಳಲ್ಲಿಯೂ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದರು. ಪಂಡರಿಬಾಯಿ ತಮ್ಮ…

‘ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ’ ಮುಂದಿನ ವಾರ ತೆರೆಗೆ

ಸೆವೆನ್ ರಾಜ್ ಪ್ರೊಡಕ್ಷನ್ ಅಡಿಯಲ್ಲಿ ರೆಡ್ ಅಂಡ್‌ ವೈಟ್ ಖ್ಯಾತಿಯ ಸೆವೆನ್ ರಾಜ್‌ ಅವರ ನಿರ್ಮಾಣದ ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ಹಾಸ್ಯದ ಜೊತೆ ಸ್ನೇಹ, ಪ್ರೀತಿಯ ಕಥಾನಕ ಹೊಂದಿದ ಚಿತ್ರ. ಸೆ.೧೭ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರಕ್ಕೆ ಆಸ್ಕರ್ ಕೃಷ್ಣ ಆ್ಯಕ್ಚನ್ ಕಟ್ ಹೇಳುವುದರೊಂದಿಗೆ ನಾಯಕನಾಗೂ ನಟಿಸಿದ್ದಾರೆ. ಹಿಂದೆ ಮನಸಿನ ಮನಸಿನ ಮರೆಯಲಿ ಎಂಬ ಅಪ್ಪಟ ಪ್ರೇಮಕಥಾನಕದ ಸಿನಿಮಾ ಮಾಡಿದ್ದ ಆಸ್ಕರ್ ಕೃಷ್ಣ ಅವರ ನಿರ್ದೇಶನದ ಮತ್ತೊಂದು ಮಾಸ್ ಎಂಟರ್‌ಟೈನರ್ ಚಿತ್ರ ಇದಾಗಿದೆ. ನಿರ್ಮಾಪಕ ಸೆವೆನ್ ರಾಜ್…

ಕುರಿಗಾಹಿಗಳ ಜತೆ ಊಟಸವಿದ ಪುನಿತ್ ರಾಜ್ ಕುಮಾರ್

ನಟ ಪುನಿತ್ ರಾಜ್ ಕುಮಾರ್ ಕುರಿಗಾಹಿಗಳ ಜೊತೆ ಕಾಲಕಳೆದು ಅವರೊಂದಿಗೆ ಬೋಜನ ಸ್ವೀಕರಿಸುವ ಮೂಲಕ ಎಲ್ಲರ ಗಮನ ಸೆಳದಿದ್ದಾರೆ ಗಂಗಾವತಿಯ ಅಂಜನಾದ್ರಿ ಬೆಟ್ಟದಲ್ಲಿಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭಾನುವಾರ ಕೊಪ್ಪಳದ ಗಂಗಾವತಿ ಸನಿಹದಲ್ಲಿರುವ ಅಂಜನಾದ್ರಿ ಬೆಟ್ಟಕ್ಕೆ ದೇವರ ದರ್ಶನಕ್ಕೆ ತೆರಳಿದ್ದರು. ಕೊರೋನಾ ನಿಯಮಗಳ ಕಾರಣಕ್ಕೆ ಪುನೀತ್ ರಾಜಕುಮಾರ್ ಗೆ ಪ್ರವೇಶಾವಕಾಶ ಸಿಗಲಿಲ್ಲ. ಇದರಿಂದ ಬೇಸರಗೊಳ್ಳದೇ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಓಡಾಟ ನಡೆಸಿದ ಪುನೀತ್ ರಾಜಕುಮಾರ್, ಗಂಗಾವತಿ ಸಮೀಪದ ಹಳ್ಳಿಗಳಿಗೆ ಭೇಟಿ ನೀಡಿದರು. ಕುರಿಗಾಹಿಗಳ ಬಳಿ ತೆರಳಿದ ಪುನೀತ್ ಅವರ…

ಪ್ರೀತಿ ಮತ್ತು ಕ್ರೈ ಕಥೆಯ ಸಾಮರ್ಥ್ಯಾ

ಕಾರ್ತಿಕ್ ಮೂವೀಸ್ ಲಾಂಛನದಲ್ಲಿ ರಾಜರಬಂಡಿ ಕಾರ್ತಿಕ್ ನಿರ್ಮಿಸುತ್ತಿರುವ ಸಾಮರ್ಥ್ಯಾ ಚಿತ್ರಕ್ಕೆ ಇತ್ತೀಚೆಗೆ ಕಂಠೀರವ ಸ್ಟುಡಿಯೋವಿನಲ್ಲಿ ಮುಹೂರ್ತ ಆಚರಿಸಿಕೊಂಡಿದ್ದು ಚಿತ್ರದ ಪ್ರಥಮ ದೃಶ್ಯಕ್ಕೆ ಸಾ.ರಾ.ಗೋವಿಂದು ಕ್ಲಾಪ್ ತೋರಿದಾಗ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್ ರವರು ಕ್ಯಾಮೆರಾ ಚಾಲನೆ ನೀಡಿದರು.ಚಿತ್ರರಂಗದ ಮೇರು ವ್ಯಕ್ತಿಗಳ ಸಮ್ಮುಖದಲ್ಲಿ ನಡೆದ – ಈ ಚಿತ್ರದ ನಿರ್ದೇಶನ ಹೆಚ್.ವಾಸು. ಇದು ಇವರ ೨೪ನೇ ಚಿತ್ರ. ಚಿತ್ರಕ್ಕೆ ಸಂಭಾಷಣೆ ಶಶಿ, ಛಾಯಾಗ್ರಹಣ-ಎ.ವಿ. ಕೃಷ್ಣಕುಮಾರ್ (ಕೆ.ಕೆ), ಸಂಗೀತ-ಅರುಣ್ ಆಂಡ್ರ್ಯು, ಸಾಹಿತ್ಯ-ಕೆ. ಕಲ್ಯಾಣ್, ವಿ ನಾಗೇಂದ್ರ ಪ್ರಸಾದ್, ವಿಶ್ವಾ.ಜಿ,…

ನಶೆಯ ಜೊತೆ ನಡೆಯುತ್ತದೆ ಮೈಮಾಟದ ದಂಧೆ!

writing-ಪರಶಿವ ಧನಗೂರು ಇಡೀ ದಕ್ಷಿಣ ಭಾರತೀಯ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿದ್ದ ಹೈಟೆಕ್ ಸಿಂಥೆಟಿಕ್ ಡ್ರಗ್ಸ್ ರಾಕೆಟ್ ಮತ್ತೆ ಸದ್ದು ಮಾಡುತ್ತಿದೆ. ಡ್ರಗ್ಸ್ ಪೂರೈಕೆ ದಂಧೆಯಲ್ಲಿ ತೊಡಗಿದ್ದ ಕಾರಣಕ್ಕೆ ಬೆಂಗಳೂರಿನ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿ ಜೈಲು ಪಾಲಾಗಿದ್ದ ಖ್ಯಾತ ಕನ್ನಡದ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಯ ಡ್ರಗ್ಸ್ ಪತ್ತೆಗೆ ಹೈದರಾಬಾದ್ ಲ್ಯಾಬಿಗೆ ಕಳುಹಿಸಿದ್ದ ಕೂದಲಿನ ಎಫ್ ಎಸ್ ಎಲ್ ವರದಿಯಲ್ಲಿ ಪಾಸಿಟಿವ್ ಬಂದಿದ್ದು, ಇಬ್ಬರು ನಟಿಯರು ಮತ್ತೊಮ್ಮೆ ಬೆಂಗಳೂರಿನ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಜೈಲಿನ…

1 2 3 4 5 6 8
error: Content is protected !!