Browsing: ಕ್ರೀಡೆ

ಕ್ರೀಡೆ

2022 ಮಾರ್ಚ್ 5 ರಂದು ಖೇಲೋ ಇಂಡಿಯಾ ಎರಡನೇ ಆವೃತ್ತಿಗೆ ಚಾಲನೆ

ಬೆಂಗಳೂರು, ಜು. 15:ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ ನ ಎರಡನೇ ಆವೃತ್ತಿಯನ್ನು 2022 ರ ಮಾರ್ಚ್ 5 ರಿಂದ ಆರಂಭಿಸಲು ದಿನಾಂಕ ನಿಗದಿ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಪ್ರಧಾನ ಮಂತ್ರಿಯವರನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ. ಬೆಂಗಳೂರಿನ ವಿಕಾಸ ಸೌಧದಲ್ಲಿ ಇಂದು ನಡೆದ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ. ಡಿಸಿಎಂ ಡಾ. ಅಶ್ವಥನಾರಾಯಣ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಅವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು. 158 ಯುನಿವರ್ಸಿಟಿಯಿಂದ…

ರಾಷ್ಟ್ರೀಯ ಅಥ್ಲೇಟಿಕ್ ಕ್ರೀಡಾ ಕೂಟದಲ್ಲಿ ಸಾಧನೆ ತೋರಿದ ಕರ್ನಾಟಕ ಪೊಲೀಸ್..

ಬೆಂಗಳೂರು,ಜೂ,28:ಪಂಜಾಬ್ ನ ಪಾಟಿಯಾಲದಲ್ಲಿ ನಡೆದ 60ನೇ ಅಂತ ರಾಜ್ಯ ಹಿರಿಯರ ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ತಂಡದ ಕ್ರೀಡಾಪಟು  ಬಿ. ಕೆ. ಕುಮಾರ್ ಸ್ವಾಮಿಪುರುಷರ 800 ಮೀಟರ್ ಓಟದಲ್ಲಿ ಐದನೇ ಸ್ಥಾನಗಳಿಸಿದ್ದಾರೆ. ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ  ಪುರುಷರ 800 ಮೀಟರ್ ಓಟದಲ್ಲಿ 1 ನಿಮಿಷ 51.86 ಸೆಕೆಂಡ್ ಗಳಲ್ಲಿ ಗುರಿತಲುಪಿ ಉತ್ತಮ ಸಮಯವನ್ನು ನೀಡುವುದರ ಮೂಲಕ 5ನೇ ಸ್ಥಾನ ಪಡೆದು  ರಾಜ್ಯಕ್ಕೆ 2 ಅಂಕಗಳನ್ನು ತಂದು ಕೊಟ್ಟು ಕರ್ನಾಟಕದ ಕೀರ್ತಿ ಪತಾಕೆಯನ್ನು ಅಂತಾರಾಜ್ಯ ಕ್ರೀಡಾಂಗಣದಲ್ಲಿ…

ದೀಪಿಕಾಗೆ ಒಂದೇ ದಿನ ಮೂರು ಚಿನ್ನದ ಪದಕ

ಪ್ಯಾರೀಸ್,ಜೂ,೨೮:ನಿನ್ನೆ ನಡೆದ ಮೆಗಾ-ಈವೆಂಟ್ ಅರ್ಚರಿ ವಿಶ್ವಕಪ್‌ನ ಹಂತ ಮೂರರಲ್ಲಿ ದೀಪಿಕಾ ಕುಮಾರಿ ಮೂರು ಚಿನ್ನದ ಪದಕ ಗಳಿಸುವ ಮೂಲಕ ಸಾಧನೆ ಗೈದಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್‌ಗೆ ಮುನ್ನ ನಡೆಯುವ ಈ ಈವೆಂಟ್‌ನಲ್ಲಿ ದೀಪಿಕಾ ಆಟ ಭರ್ಜರಿಯಿತ್ತು .ಮಹಿಳೆಯರ ವೈಯಕ್ತಿಕಸ್ಪರ್ಧೆಯ ಫೈನಲ್‌ನಲ್ಲಿ ದೀಪಿಕಾ ರಷ್ಯಾದ ಎಲೆನಾ ಒಸಿಪೋವಾ ಅವರನ್ನು ೬-೦ ಅಂತರದಲ್ಲಿ ಸೋಲಿಸಿ ಒಂದೇ ದಿನ ಹ್ಯಾಟ್ರಿಕ್ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಮಿಶ್ರ ಫೈನಲ್‌ನಲ್ಲಿ, ಒಲಿಂಪಿಕ್ಸ್‌ನಲ್ಲಿ ಅರ್ಚರಿಯಲ್ಲಿ ಭಾರತದ ಅತ್ಯುತ್ತಮ ಪದಕ ಭರವಸೆಯಿರುವ ದೀಪಿಕಾ ಮತ್ತು…

ಓಲಂಪಿಕ್ ಗೆ ಆಯ್ಕೆಯಾದ ಕ್ರೀಡಾಪಟುಗಳಿಗೆ 10 ಲಕ್ಷ ರೂ ಘೋಷಣೆ

ಬೆಂಗಳೂರು, ಜೂನ, 26:ಟೋಕಿಯೋ ಓಲಂಪಿಕ್ ಗೆ ರಾಜ್ಯದ ಐವರು ಕ್ರೀಡಾಪಟುಗಳು ಸಂಭವನೀಯ ಪಟ್ಟಿಯಲ್ಲಿ ಸ್ಥಾನಪಡೆದಿದ್ದು, ಆಯ್ಕೆಯಾಗುವ ಕ್ರೀಡಾಪಟುಗಳಿಗೆ ತಲಾ ರೂ. 10 ಲಕ್ಷ ಪ್ರೋತ್ಸಾಹ ಧನ ಘೋಷಿಸಿ ಆದೇಶ ಹೊರಡಿಸಲಾಗಿದೆ. 2020 ರ ಓಲಂಪಿಕ್ ಕ್ರೀಡಾಕೂಟವು ಜಪಾನ್ ಟೋಕಿಯೋದಲ್ಲಿ ಜುಲೈ 23 ರಿಂದ ಸೆಪ್ಟಂಬರ್ 5 ರ ವರೆಗೆ ನಡೆಯಲಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣ ಗೌಡ ಈ ಸಂಬಂಧ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಕ್ರೀಡಾಪಟುಗಳಿಗೆ ಅಗತ್ಯ ನೆರವು ನೀಡುವುದು…

ರದ್ದಾದ ಟಿ.20 ಅ.7ರಂದು ಯುಎಇ ನಲ್ಲಿ ನಡೆಸಲು ನಿರ್ಧಾರ

ನವದೆಹಲಿ,ಜೂ,26:ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾದ ಕಾರಣ ಟಿ-20 ವಿಶ್ವಕಪ್ ಟೂರ್ನಿ ರದ್ದಾಗಿದ್ದು ಈಗ ಅಕ್ಟೋಬರ್ 17 ರಂದು ಯುಎಇಯಲ್ಲಿ ನಡೆಸಲು ನಿರ್ದರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಗೆ (ಐಸಿಸಿ) ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೂಚಿಸಿದೆ ಎಂದು ಹೇಳಲಾಗಿದೆ. ಟಿ–20 ವಿಶ್ವಕಪ್ ಪಂದ್ಯಗಳು ಅಬುದಾಭಿ, ಶಾರ್ಜಾ ಮತ್ತು ದುಬೈನಲ್ಲಿ ನಡೆಯಲಿದ್ದು, ಕ್ವಾಲಿಫಯರ್ ಸುತ್ತಿನ ಪಂದ್ಯಗಳನ್ನು ಒಮಾನ್ ಆಯೋಜಿಸಲಿದೆ. ಭಾರತದಲ್ಲಿ ಟೂರ್ನಿ ಆಯೋಜಿಸಲು ಸಾಧ್ಯವಾಗದಿದ್ದರೆ ಯುಎಇಯಲ್ಲಿ ನಡೆಸುವುದಾಗಿ ಬಿಸಿಸಿಐ ಈ ಹಿಂದೆಯೇ ತಿಳಿಸಿತ್ತು. ಟೂರ್ನಿಯ…

ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿರಾಟ್ ನ ಮತ್ತೊಂದು ಪರ್ವ

ಸೌತಾಂಪ್ಟನ್,ಜೂ,20: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಬಿರಿಸಿನ ಆಟದಿಂದ ಟೆಸ್ಟ್ ಕ್ರಿಕೆಟ್ ನಲ್ಲಿ ಮತ್ತೊಂದು ಪರ್ವ ಸೃಷ್ಟಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 7500+ ರನ್ ದಾಖಲೆ ಪಟ್ಟಿಗೆ ಕೊಹ್ಲಿ ಸೇರ್ಪಡೆಯಾಗಿದ್ದಾರೆ. ಶನಿವಾರ ನಡೆದ ಭಾರತ-ನ್ಯೂಜಿಲೆಂಡ್ ನಡುವಿನ ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ಸೌತಾಂಪ್ಟನ್‌ನ ಏಜಸ್ ಬೌಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ 40+ ರನ್ ಬಾರಿಸುವುದರೊಂದಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 7500+ ರನ್…

ವಿಶ್ವ್‌ಟೆಸ್ಟ್ ಚಾಂಪಿಯನ್‌ಶಿಪ್-ಮಳೆಯಿಂದ ರದ್ದು

ಸೌಥ್ಯಾಂಪ್ಟನ್,ಜೂ,೧೯:ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮೊದಲದಿನದಾಟ ಮಳೆಯಿಂದಾಗಿ ರದ್ದಾಗಿದೆ. ಎಡಬಿಡದೆ ಮಳೆ ಸುರಿಯುತ್ತಿರುವ ಕಾರಣ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದ ಮೊದಲ ದಿನದಾಟ ರದ್ದಾಗಿದ್ದು, ಬಿಟ್ಟು ಬಿಟ್ಟು ಆಗಮಿಸುತ್ತಿದ್ದ ಮಳೆಯಿಂದಾಗಿ ಪಂದ್ಯವನ್ನು ಆರಂಭಿಸುವ ಯಾವ ಅವಕಾಶಗಳು ಕೂಡ ಆಯೋಜಕರಿಗೆ ದೊರೆಯಲಿಲ್ಲ. ಟಾಸ್ ಅನ್ನು ಕೂಡ ಪದೇ ಪದೇ ಮುಂದೂಡಲಾಗಿತ್ತು. ನಂತರ ಭಾರತೀಯ ಕಾಲಮಾನ ೭:೨೦ರ ವೇಳೆಗೆ ವಾತಾವರಣವನ್ನು ಪರಿಶೀಲಿಸಿದ ಅಂಪೈರ್ ಗಳು ನಂತರ ಮೊದಲ ದಿನದಾಟವನ್ನು ಅಧಿಕೃತವಾಗಿ ಮುಂದೂಡಿದರು. ನಿಗದಿಯಂತೆ ಭಾರತೀಯ ಕಾಲಮಾನ ಮಧ್ಯಾಹ್ನ ೩ ಗಂಟೆಗೆ…

ಚೊಚ್ಚಲ ಪಂದ್ಯದಲ್ಲೆ96 ರನ್ ಗಳಿಸಿ ದಾಖಲೆ ಮೆರೆದ‌ ಶಫಾಲಿ ವರ್ಮಾ

ಬ್ರಿಸ್ಟಲ್,ಜೂ,18:ಇಂಗ್ಲೆಂಡ್ ಮತ್ತು ಭಾರತೀಯ ಕ್ರಿಕೆಟ್ ಮಹಿಳಾ ತಂಡಗಳ ನಡುವಿನ ಟೆಸ್ಟ್ ಪಂದ್ಯದಲ್ಲಿ ಶಫಾಲಿ ವರ್ಮಾ96 ರನ್ ಗಳಿಸಿ ದಾಖಲೆ ಮೆರದಿದ್ದಾರೆ. ಈ ಮೂಲಕ ಚೊಚ್ಚಲ ಪಂದ್ಯದಲ್ಲೇ ಸತೀ ಹೆಚ್ಚು ಅಂಕ ಗಳಿಸಿದ ಮೊದಲ ಭಾರತೀಯ ‌ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ಹಿಂದೆ ಈ ದಾಖಲೆ ಸಿ. ಕೌಲ್ ಅವರ ಹೆಸರಲ್ಲಿತ್ತು. ಅವರು 1995ರ ಫೆಬ್ರುವರಿಯಲ್ಲಿ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ 75 ರನ್ ಗಳಿಸಿದ್ದರು. ಸ್ಮೃತಿ–ಶಫಾಲಿ ಭರ್ಜರಿ ಜೊತೆಯಾಟ: ಸ್ಮೃತಿ ಮಂದಾನ ಹಾಗೂ ಶಫಾಲಿ ವರ್ಮಾ 167…

ಸುರೇಶ್ ರೈನಾ ‘ಬಿಲೀವ್’ ಪುಸ್ತಕ ಬಿಡುಗಡೆ

ಮುಂಬೈ,ಜೂ,೧೪: ಟೀಂ ಇಂಡಿಯಾದ ಮಾಜಿ ಆಟಗಾರ ಸುರೇಶ್ ರೈನ್ ಬರೆದಿರುವ ಅವರ ಆತ್ಮಚರಿತ್ರೆ ‘ಬಿಲೀವ್ ಎಂಬ ಪುಸ್ತಕ ಇಂದು ಬಿಡುಗಡೆಗೊಂಡಿದೆ ಭಾರತೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದ ರೈನಾ ಆತ್ಮೀಯ ಗೆಳೆಯ ಮಹೇಂದ್ರ ಸಿಂಗ್ ಧೋನಿಯೊಂದಿಗೆ ೨೦೨೦ರ ಆಗಸ್ಟ್‌ನಲ್ಲಿ ಅಂತರಾಷ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದರು. ಇದೀಗ ನಿವೃತ್ತಿಯ ಬಳಿಕ ತಮ್ಮ ವೈಯಕ್ತಿಕ ಬದುಕು ಮತ್ತು ಕ್ರಿಕೆಟ್ ವೃತ್ತಿ ಜೀವನದ ಕುರಿತಾಗಿ ಆತ್ಮಚರಿತ್ರೆಯೊಂದನ್ನು ಬರೆದಿದ್ದಾರೆ. ರೈನಾ ತಮ್ಮ ಆತ್ಮ ಚರಿತ್ರೆಗೆ ಸಚಿನ್ ತೆಂಡುಲ್ಕರ್ ಅವರು ನೀಡಿರುವ ಸ್ಪೂರ್ತಿಯ ಪದ ‘ಬಿಲೀವ್’…

ಶ್ರೀಲಂಕಾ ಟೂರ್ನಿಗೆ ಭಾರತ ತಂಡ ಪ್ರಕಟ,ಶಿಖರ್ ದವನ್ ಗೆ ನಾಯಕತ್ವ

ಮುಂಬೈ,ಜೂ,11:ಜುಲೈ ತಿಂಗಳಲ್ಲಿ ಶ್ರೀಲಂಕಾದಲ್ಲಿ ನಡಯಲಿರುವ ಟೂರ್ನಿಗೆ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ಎಡಗೈ ದಾಂಡಿಗ ಶಿಖರ್ ಧವನ್ ಗೆ ತಂಡದ ಸಾರಥ್ಯ ನೀಡಲಾಗಿದೆ. ಶ್ರೀಲಂಕಾ ಪ್ರವಾಸಕ್ಕಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ತಂಡವನ್ನು ಪ್ರಕಟಿಸಿದ್ದು, ನಾಯಕ ಕೊಹ್ಲಿ ಮತ್ತು ಇತರೆ ಹಿರಿಯ ಆಟಾಗರರ ತಂಡ ಇಂಗ್ಲೆಂಡ್ ಪ್ರವಾಸದಲ್ಲಿರುವುದರಿಂದ ಶಿಖರ್ ಧವನ್ ಗೆ ತಂಡದ ನಾಯಕತ್ವ ನೀಡಲಾಗಿದೆ. ಅಂತೆಯೇ ಭುವನೇಶ್ವರ್ ಕುಮಾರ್ ಅವರನ್ನು ತಂಡದ ಉಪನಾಯಕನನ್ನಾಗಿ ಮಾಡಲಾಗಿದೆ. ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಲಂಕಾ ಪ್ರವಾಸಕ್ಕೆ ಹೊಸ ಪ್ರತಿಭೆಗಳಿಗೆ ಅವಕಾಶ…

ಫ್ರೆಂಚ್ ಓಪನ್ ಟೆನಿಸ್; ೧೫ನೇ ಬಾರಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ನಡಾಲ್

ಪ್ಯಾರೀಸ್,ಜೂ,೦೮:ರಾಫೆಲ್ ನಡಾಲ್ ಆರಂಭಿಕ ಹಿನ್ನಡೆಯ ಹೊರತಾಗಿಯೂ ಸರಿಯಾದ ಸಮಯದಲ್ಲಿ ತಮ್ಮ ಅನುಭವವನ್ನು ಬಳಸಿಕೊಂಡು ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದ್ದಾರೆ. ಇಟಲಿಯ ಯುವ ಆಟಗಾರ ಜೆನಿಕ್ ಸಿನ್ನರ್ ೭-೫, ೬-೩, ೬-೦ ಸೆಟ್‌ಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ೧೫ನೇ ಬಾರಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಕೇವಲ ೧೯ ವರ್ಷದ ಇಟಲಿ ಆಟಗಾರ ಸಿನ್ನರ್ ಮೊದಲ ಸೆಟ್‌ನಲ್ಲೇ ನಡಾಲ್ ಅವರನ್ನು ತಬ್ಬಿಬ್ಬುಗೊಳಿಸುವಲ್ಲಿ ಯಶಸ್ವಿಯಾದರು. ವಿಶ್ವ ೧೯ನೇ ಶ್ರೇಯಾಂಕಿತ ಆಟಗಾರ ಸಿನ್ನರ್ ರಣತಂತ್ರಕ್ಕೆ ನಡಾಲ್…

ಭಾರತ-ಶ್ರೀಲಂಕ ವೇಳಾಪಟ್ಟಿ ಪ್ರಕಟ

ನವದೆಹಲಿ,ಜೂ,07: ಶ್ರೀಲಂಕಾ ವಿರುದ್ಧ ಭಾರತದ ಪರ್ಯಾಯ ತಂಡವು ಆಡಲಿರುವ ತಲಾ ಮೂರು ಏಕದಿನ ಹಾಗೂ ಟ್ವೆಂಟಿ–20 ಪಂದ್ಯಗಳ ಕ್ರಿಕೆಟ್‌ ಸರಣಿಯು ಜುಲೈ 13ರಿಂದ 25ರವರೆಗೆ ನಡೆಯಲಿದೆ. ಆಯ್ಕೆಗಾರರು ಶಿಖರ್ ಧವನ್ ಅಥವಾ ಹಾರ್ದಿಕ ಪಾಂಡ್ಯ ನಾಯಕತ್ವದಲ್ಲಿ ಸಾಕಷ್ಟು ಯುವ ಆಟಗಾರರನ್ನು ಆಯ್ಕೆ ಮಾಡುವ ನಿರೀಕ್ಷೆಯಿದೆ. ಸಂಪೂರ್ಣ ಫಿಟ್ ಆಗಿರುವ ಶ್ರೇಯಸ್ ಅಯ್ಯರ್‌ ಕೂಡ ನಾಯಕತ್ವದ ರೇಸ್‌ನಲ್ಲಿದ್ದಾರೆ. ಸೋನಿ ಸ್ಪೋರ್ಟ್ಸ್ ವಾಹಿನಿಯು ಜಾಲತಾಣಗಳ ಮೂಲಕ ಸರಣಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮೂರು ಏಕದಿನ ಪಂದ್ಯಗಳು ಕ್ರಮವಾಗಿ ಜುಲೈ 13, 16…

ಐಪಿಎಲ್ ಪುನಾರಂಭಿಸಲು ಬಿಸಿಸಿಐ ನಿರ್ಧಾರ

ನವದೆಹಲಿ,ಮೇ,೨೯ :ಕೋವಿಡ್ ಅಟ್ಟಹಾಸದಿಂದ ರದ್ದಾಗಿದ್ದ ೧೪ನೇ ಆವೃತ್ತಿಯ ಐಪಿಎಲ್ ಪಂದ್ಯವಾಳಿಯನ್ನು ಪುನಾರಂಭಿಸಲು ಬಿಸಿಸಿಐ ನಿರ್ಧರಿಸಿದೆ. ಈ ಪಂದ್ಯಗಳು ಭಾರತದ ಬದಲಾಗಿಎ ಅರಬ್‌ನಲ್ಲಿ (ಯುನೈಟೆಡ್ ಅರಬ್ ಎಮಿರೇಟ್ಸ್-ಯುಎಇ) ನಡೆಯಲಿದೆ. ಬಾಕಿ ಉಳಿದ ೩೧ ಪಂದ್ಯಗಳು ನಡೆಯಲಿದ್ದು ಆ ಕುರಿತು ಎಲ್ಲೆಲ್ಲಿ ನಡೆಯಲಿವೆ ಎನ್ನುವುದನ್ನು ಶೀಘ್ರ ಪ್ರಕಟಿಸಲಾಗುವುದು ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದಾರೆ ಇಂದು ವಿಶೇಷ ಸಾಮಾನ್ಯ ಸಭೆ ನಡೆಸಿದ ಬಳಿಕ ಬಿಸಿಸಿಐ ಈ ನಿರ್ಧಾರ ತೆಗೆದುಕೊಂಡಿದೆ. ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಭಾರತದಲ್ಲಿ ಮಳೆಗಾಲ ಇರುವುದರಿಂದ ಯುಎಇನಲ್ಲಿ ಬಾಕಿ ಉಳಿದಿರುವ…

ಒಲಂಪಿಕ್‌ನಲ್ಲಿ ಆಡುವ ಅವಕಾಶ ಕಳೆದುಕೊಂಡ ಸೈನಾ

ನವದೆಹಲಿ,ಮೇ,೨೮: ಒಲಂಪಿಕ್ ನಲ್ಲಿ ಆಡುವ ಕನಸು ಹೊತ್ತಿದ್ದ ಕದಂಬಿ ಶ್ರೀಕಾಂತ್ ಕೊರೊನಾ ಹಿನ್ನಲೆಯಲ್ಲಿ ರ‍್ಯಾಂಕಿಂಗ್‌ನಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿತ್ತು ಆದರೆ ಇಂದು ವಿಶ್ವಬ್ಯಾಡ್ಮಿಂಟನ್‌ಫೆಡರೇಷನ್ ರ‍್ಯಾಂಕಿಂಗ್‌ನಲ್ಲಿ ಯಾವುದೆ ಬದಲಾವಣೆ ಇಲ್ಲ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಈ ಇಬ್ಬರು ಈಗ ಒಲಂಪಿಕ್‌ನಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಕಿದಂಬಿ ಶ್ರೀಕಾಂತ್ ಮತ್ತು ಸೈನಾ ನೆಹ್ವಾಲ್ ನಿರೀಕ್ಷೆಯಿಂದ ಕಾಯುತ್ತಿದ್ದರು.ಟೋಕಿಯೊ ಒಲಿಂಪಿಕ್ಸ್‌ನ ಅರ್ಹತಾ ಅವಧಿ ಜೂನ್ ೧೫ರಂದು ಮುಕ್ತಾಯಗೊಳ್ಳಲಿದೆ. ಆದರೆ ಅದಕ್ಕೂ ಮುನ್ನ ಯಾವುದೇ ಟೂರ್ನಿಯನ್ನು ಆಯೋಜಿಸಲಾಗುವುದಿಲ್ಲ. ರ‍್ಯಾಂಕಿಂಗ್‌ನಲ್ಲಿ ಬದಲಾವಣೆಯೂ…

ಐಪಿಎಲ್ ಉಳಿದ ಪಂದ್ಯಗಳು ಸೆಪ್ಟಂಬರ್ ಮೂರನೆ ವಾರ

ಮುಂಬೈ,ಮೇ,೨೫: ಕೋವಿಡ್ ಅಟ್ಟಹಾಸದಿಂದ ದೇಶದೆಲ್ಲಡೆ ಆತಂಕ ಉಂಟುಮಾಡಿದ್‌ದ ಕಾರಣ ಐಪಿಎಲ್ ಪಂದ್ಯಗಳನ್ನು ಮುಂದೂಡಲಾಗಿತ್ತು ಈಗ ಐಪಿಎಲ್ ಪಂದ್ಯಗಳನ್ನು ಸೆಪ್ಟಂಬರ್ ಮೂರನೇ ವಾರ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಸೆಪ್ಟೆಂಬರ್ ೧೯ ರಿಂದ ಅಕ್ಟೋಬರ್ ೧೦ ರವರೆಗೆ ಈ ಆವೃತ್ತಿಯ ಉಳಿದ ಪಂದ್ಯಗಳು ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದಕ್ಕೆ ಸಂಬಂಧಿಸಿದ ವೇಳಾಪಟ್ಟಿ ಶೀಘ್ರದಲ್ಲೇ ಹೊರಬೀಳಲಿದೆ . ಅಕ್ಟೋಬರ್ ೧೦ ರಂದು ಐಪಿಎಲ್‌ನ ೧೪ನೇ ಆವೃತ್ತಿಯ ಅಂತಿಮ ಪಂದ್ಯ ನಡೆಯುವ ಸಾಧ್ಯತೆ ಇದೆ. ಇದರಲ್ಲಿ ೧೦ ಡಬಲ್ ಹೆಡರ್ ಪಂದ್ಯಗಳು,…

ಸ್ಪಿನ್ ಮಾಂತ್ರಿಕ ಅನಿಲ್‌ಕುಂಬ್ಳೆ ಬಗ್ಗೆ ಶ್ರೀಲಂಕಾ,ಪಾಕಿಸ್ತಾನ ಕ್ರಿಕೆಟಿಗರ ಪ್ರಶಂಸೆ

ನವದೆಹಲಿ,ಮೇ,೨೨:ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ಗ್ ಐಸಿಸಿ ಹಾಲ್ ಆಫ್ ಮೇಮಸ್‌ಗೆ ಆಯ್ಕೆಯಾಗಿರು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಲೆಗ್ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಅವರನ್ನು ಶ್ರೀಲಂಕಾಹಾಗೂ ಪಾಕಿಸ್ತಾನ ಕ್ರಿಕೆಟ್ ಆಟಗಾರರು ಪ್ರಶಂಸಿದ್ದಾರೆ. ಇತರ ದೇಶಗಳ ಅತ್ಯುತ್ತಮ ಆಟಗಾರರ ಸಾಧನೆಗಳನ್ನು ಆಚರಿಸಿದ ಬಳಿಕ, ಐಸಿಸಿಯು ಅನಿಲ್ ಕುಂಬ್ಳೆಯವರು ಕ್ರಿಕೆಟ್‌ನಲ್ಲಿ ಮಾಡಿರುವ ಅದ್ಭುತ ದಾಖಲೆಗಳನ್ನು ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿದೆ. ಅನಿಲ್ ಕುಂಬ್ಳೆ ಅವರನ್ನು, “ಸಾರ್ವಕಾಲಿಕ ಅತಿ ಶ್ರೇಷ್ಟ ಬೌಲರ್‌ಗಳಲ್ಲಿ ಒಬ್ಬರು” ಎಂದು ಕರೆದಿರುವ ಐಸಿಸಿ, ಅವರು ಕ್ರಿಕೆಟ್‌ನಲ್ಲಿ…

ಏಕ ದಿನ ಟಿ20 ಪಂದ್ಯದ ಕೋಚ್ ಆಗಿ ದ್ರಾವಿಡ್ ನೇಮಕ

ನವದೆಹಲಿ, ಮೇ,20:ಜುಲೈನಲ್ಲಿ ಶ್ರೀಲಂಕಾ ವಿರುದ್ಧ ಭಾರತ ತಂಡ ಆಡಲಿರುವ ಏಕದಿನ ಟಿ20 ಸರಣಿ ಪಂದ್ಯಗಳ ಕೋಚ್ ಆಗಿ ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿಖ್ಯಸ್ಥ ರಾಹುಲ್ ದ್ರಾವಿಡ್ ನೇಮಕವಾಗಿದ್ದಾರೆ. 2014ರಲ್ಲಿ ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ರಾಹುಲ್ ದ್ರಾವಿಡ್ ಬ್ಯಾಟಿಂಗ್ ಸಲಹೆಗಾರನಾಗಿ ಕೆಲಸ ಮಾಡಿದ್ದರು.ಈ ಮಾಹಿತಿಯನ್ನು ಎಎನ್ ಐ ಸುದ್ದಿಸಂಸ್ಥೆಗೆ ತಿಳಿಸಿರುವ ಬಿಸಿಸಿಐ ಅಧಿಕಾರಿ, ಈ ಸಮಯದಲ್ಲಿ ಕೋಚ್ ರವಿ ಶಾಸ್ತ್ರಿ, ಭರತ್ ಅರುಣ್ ಮತ್ತು ವಿಕ್ರಮ್ ರಾಥೋರ್ ಅವರು ಇಂಗ್ಲೆಂಡಿನಲ್ಲಿ ಟೆಸ್ಟ್ ಸರಣಿಯಲ್ಲಿ ನಿರತರಾಗಿರುವುದರಿಂದ ರಾಹುಲ್ ದ್ರಾವಿಡ್ ಅವರನ್ನು ನಿಯೋಜಿಸಲಾಗುತ್ತಿದೆ…

ಹಗಲು-ರಾತ್ರಿ ಪಿಂಕ್ ಪಂದ್ಯ ಆಡಲಿದ್ದಾರೆ ಮಹಿಳಾ ಕ್ರಿಕೆಟಿಗರು

ಕೋಲ್ಕೊತ್ತಾ,ಮೇ,೨೦: ಇದೇ ಮೊದಲ ಬಾರಿಗೆ ಭಾರತ ಮಹಿಳಾ ಕ್ರಿಕೇಟಿಗರು ಹಗಲು-ರಾತ್ರಿ ಪಿಂಕ್ ಬಾಲ್ ಕ್ರಿಕೆಟ್ ಆಡಲಿದ್ದಾರೆ. ಈ ಬಗ್ಗೆ ಭಾರತೀಯ ಕ್ರಿಕೆಟ್ ಮಂಡಳಿ ಇಂತಹ ಮಹತ್ವದ ನಿರ್ಧಾರವನ್ನು ತಗೆದುಕೊಂಡಿದೆ ಈ ಕುರಿತಂತೆ ಟ್ವೀಟ್ ಮಾಡಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಷಾ, ಇದೇ ವರ್ಷಾಂತ್ಯದಲ್ಲಿ ಭಾರತ ಕ್ರಿಕೆಟ್ ತಂಡದ ವನಿತೆಯರು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದಾರೆ. ಆ ವೇಳೆ ಅವರು ಆಸ್ಟ್ರೇಲಿಯಾ ತಂಡದ ವಿರುದ್ಧ ಮೊದಲ ಬಾರಿಗೆ ಹಗಲು-ರಾತ್ರಿ ಪಿಂಕ್ ಬಾಲ್ ಟೆಸ್ಟ್ ಕ್ರಿಕೆಟ್ ಆಡಲಿದ್ದಾರೆ. ಭಾರತೀಯ ಮಹಿಳಾ ಕ್ರಿಕೆಟ್…

ಮಹಿಳಾ ಕ್ರಿಕೆಟ್ ತಂಡಕ್ಕೆ ಕೋಚ್ ಆಗಿ ಶಿವ್ ಸುಂದರ್ ದಾಸ್

ನವದೆಹಲಿ,ಮೇ,೧೮:ಭಾರತೀಐ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮೆನ್ ಶಿವಸುಂದರ್ ದಾಸ್ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ.ಹೀಗಾಗಿ ಇಂಗ್ಲೆಂಡ್ ಪ್ರವಾಸದ ವೇಳೆ ದಾಸ್ ಮಹಿಳಾ ಕ್ರಿಕೆಟ್‌ಗರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಶಿವ್ ಸುಂದರ್ ದಾಸ್ ಭಾರತ ತಂಡದ ಪರ ೨೦೦೦-೦೨ರ ವರೆಗೆ ೨೩ ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ೨೩ ಟೆಸ್ಟ್ ಪಂದ್ಯಗಳಲ್ಲಿ ೩೪.೮೯ರ ಸರಾಸರಿಯಂತೆ ೧೩೨೬ ರನ್ ಗಳಿಸಿದ್ದಾರೆ. ಇದರಲ್ಲಿ ೨ ಶತಕಗಳು ಮತ್ತು ೯ ಅರ್ಧ ಶತಕಗಳು ಸೇರಿವೆ. ’ಇದೊಂದು ಒಳ್ಳೆಯ ಅನುಭವವಾಗಲಿದೆ. ನಾನು ಇದಕ್ಕಾಗಿ…

ಕುಸ್ತಿಪಟುಗಳ ತರಬೇತಿ ಶಿಬಿರ ರದ್ಧು

ನವದೆಹಲಿ,ಮೇ,16: ಸೋನಿಪತ್ ನಲ್ಲಿ ಓಲಂಪಿಕ್ ಆಯ್ಕೆ ಯಾದ ಕ್ರೀಡಾಪಟುಗಳ ತರಬೇತಿ ಶಿಬಿರವನ್ನು ರದ್ಧುಗೊಳಿಸಲಾಗಿದೆ. ಒಲಿಂಪಿಕ್ಸ್‌ಗೆ ತೆರಳಲಿರುವ ಪುರುಷ ಮತ್ತು ಮಹಿಳಾ ಕುಸ್ತಿಪಟುಗಳು ಮುಂದಿನ ಮಂಗಳವಾರ ಬಹಲ್‌ಗರ್‌ನಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರದ ಆವರಣದಲ್ಲಿ ಜಮಾಯಿಸಬೇಕಾಗಿತ್ತು. ಆದರೆ ಅದನ್ನು ರದ್ದು ಮಾಡಿ ಕುಸ್ತಿಪಟುಗಳನ್ನು ನೇರವಾಗಿ ಪಾಲೆಂಡ್‌ಗೆ ಕಳುಹಿಸಲು ನಿರ್ಧರಿಸಲಾಗಿದೆ. ಅಲ್ಲಿ ಜೂನ್ ಎಂಟರಿಂದ 13ರ ವರೆಗೆ ಟೋಕಿಯೊ ಒಲಿಂಪಿಕ್ಸ್‌ಗೆ ಸಂಬಂಧಿಸಿದ ರ‍್ಯಾಂಕಿಂಗ್ ಸೀರಿಸ್ ನಡೆಯಲಿದೆ. ಕ್ವಾರೆಂಟೇನ್ ಗೆ ಒಳಗಾಗಬೇಕಾಗಿರುವುದರಿಂದ ಬಹಲ್‌ಗರ್‌ನಲ್ಲಿ ನಡೆಯಬೇಕಾಗಿದ್ದ ತರಬೇತಿ ಶಿಬಿರವನ್ನು ರದ್ದುಮಾಡಲಾಗಿದೆ. ಅವರವರ ಅಖಾಡಗಳಲ್ಲೇ…

error: Content is protected !!