Browsing: ಕ್ರೀಡೆ

ಕ್ರೀಡೆ

ಕುಸ್ತಿಪಟುಗಳ ತರಬೇತಿ ಶಿಬಿರ ರದ್ಧು

ನವದೆಹಲಿ,ಮೇ,16: ಸೋನಿಪತ್ ನಲ್ಲಿ ಓಲಂಪಿಕ್ ಆಯ್ಕೆ ಯಾದ ಕ್ರೀಡಾಪಟುಗಳ ತರಬೇತಿ ಶಿಬಿರವನ್ನು ರದ್ಧುಗೊಳಿಸಲಾಗಿದೆ. ಒಲಿಂಪಿಕ್ಸ್‌ಗೆ ತೆರಳಲಿರುವ ಪುರುಷ ಮತ್ತು ಮಹಿಳಾ ಕುಸ್ತಿಪಟುಗಳು ಮುಂದಿನ ಮಂಗಳವಾರ ಬಹಲ್‌ಗರ್‌ನಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರದ ಆವರಣದಲ್ಲಿ ಜಮಾಯಿಸಬೇಕಾಗಿತ್ತು. ಆದರೆ ಅದನ್ನು ರದ್ದು ಮಾಡಿ ಕುಸ್ತಿಪಟುಗಳನ್ನು ನೇರವಾಗಿ ಪಾಲೆಂಡ್‌ಗೆ ಕಳುಹಿಸಲು ನಿರ್ಧರಿಸಲಾಗಿದೆ. ಅಲ್ಲಿ ಜೂನ್ ಎಂಟರಿಂದ 13ರ ವರೆಗೆ ಟೋಕಿಯೊ ಒಲಿಂಪಿಕ್ಸ್‌ಗೆ ಸಂಬಂಧಿಸಿದ ರ‍್ಯಾಂಕಿಂಗ್ ಸೀರಿಸ್ ನಡೆಯಲಿದೆ. ಕ್ವಾರೆಂಟೇನ್ ಗೆ ಒಳಗಾಗಬೇಕಾಗಿರುವುದರಿಂದ ಬಹಲ್‌ಗರ್‌ನಲ್ಲಿ ನಡೆಯಬೇಕಾಗಿದ್ದ ತರಬೇತಿ ಶಿಬಿರವನ್ನು ರದ್ದುಮಾಡಲಾಗಿದೆ. ಅವರವರ ಅಖಾಡಗಳಲ್ಲೇ…

ಟೀಂ ಇಂಡಿಯಾ ಇಂದಿನ ಸುಸ್ತಿತಿಗೆ ದ್ರಾವಿಡ್ ಕಾರಣ-ಗ್ರೇಗ್‌ಚಾಪಲ್

ಸಿಡ್ನಿ,ಮೇ,೧೪: ಭಾರತದ ಕ್ರಿಕೆಟ್ ತಂಡದಲ್ಲಿ ಪ್ರತಿಭೆಗಳಿಗೆ ಭಂಡಾರವನ್ನೇ ಹೊಂದಿದೆ ಇಂತ ಸುಸ್ತಿತಿಗೆ ರಾಹುಲ್ ದ್ರಾವಿಡ್ ಅವರ ಕೊಡುಗೆಯೇ ಕಾರಣ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಗ್ರೇಗ್ ಚಾಪೆಲ್ ಹೇಳಿದ್ದಾರೆ. ಆಸ್ಟ್ರೇಲಿಯಾದ ಕ್ರಿಕೆಟ್ ವೆಬ್ ಸೈಟ್‌ನ ಸಂದರ್ಶನದಲ್ಲಿ ನೀಡಿದ ಹೇಳಿಕೆಯಲ್ಲಿ ಭಾರತೀಯ ಕ್ರಿಕೆಟ್‌ತಂಡ ಇಂದು ವಿಶ್ವದಲ್ಲಿ ಅನಭಿಶಕ್ತ ದೊರೆಯಾಗಿ ಮೆರೆಯುತ್ತಿದೆಎಂದರೆ ಅದಕ್ಕೆ ದ್ರಾವಿಡ್ ಅವರೇ ಕಾರಣ ಅವರ ನೀಡಿರುವ ತರಬೇತಿ ನಿಜಕ್ಕೂ ಮೆಚ್ಚುವಂತದ್ದು ಎಂದು ಅವರು ಹೇಳಿದ್ದಾರೆ. ’ಆಸ್ಟ್ರೇಲಿಯಾದಲ್ಲಿನ ದೇಶಿ ಕ್ರಿಕೆಟ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ಭಾರತ ಮತ್ತು…

ಏಕಕಾಲದಲ್ಲಿ ಎರಡು ತಂಡಗಳು ಕಣಕ್ಕಿಳಿಯಲಿವೆ; ಗಂಗೋಲಿ

ನವದೆಹಲಿ,10: ಟೀಂ ಇಂಡಿಯಾ ಜುಲೈ ತಿಂಗಳಿನಲ್ಲಿ ಇಂಗ್ಲೆಂಡ್ ಹಾಗೂ ಶ್ರೀಲಂಕಾ ವಿರುದ್ದ ಸರಣಿ ಆಡಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಈ ಮೂಲಕ ಇಂಗ್ಲೆಂಡ್‌ ಹಾಗೂ ಶ್ರೀಲಂಕಾಕ್ಕೆ ಪ್ರತ್ಯೇಕ ತಂಡಗಳು ತೆರಳಲಿವೆ ಎನ್ನುವ ಸುಳಿವನ್ನು ಗಂಗೂಲಿ ನೀಡಿದ್ದಾರೆ. ಟೀಂ ಇಂಡಿಯಾ ಜೂನ್‌ನಲ್ಲಿ ಇಂಗ್ಲೆಂಡ್‌ಗೆ ತೆರಳಲಿದ್ದು ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾಗೂ ಇಂಗ್ಲೆಂಡ್‌ ವಿರುದ್ಧ 5 ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಡಲಿದೆ. ಇದೇ ವೇಳೆ ಜುಲೈನಲ್ಲಿ ಭಾರತ ತಂಡ ಶ್ರೀಲಂಕಾಕ್ಕೆ ತೆರಳಲಿದ್ದು, 3…

ಐಪಿಎಲ್ ಮುಂದೂಡಿಕೆ,ಅರ್ ಸಿಬಿಗೆ ಲಾಭ

ಬೆಂಗಳೂರು,10;ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಸಕ್ತ ಐಪಿಎಲ್ ಸೀಸನ್​ನಲ್ಲಿ ಆಡಿರುವ 7 ಪಂದ್ಯಗಳಲ್ಲಿ 5 ಗೆಲುವು ದಾಖಲಿಸಿ 3ನೇ ಸ್ಥಾನದಲ್ಲಿದೆ. ಆರಂಭದಿಂದಲೇ ಭರ್ಜರಿ ಪ್ರದರ್ಶನದೊಂದಿಗೆ ಗಮನ ಸೆಳೆದಿದ್ದ ಆರ್​ಸಿಬಿ ಈ ಬಾರಿ ಕಪ್ ಗೆಲ್ಲುವ ಫೇವರೇಟ್ ತಂಡಗಳಲ್ಲಿ ಗುರುತಿಸಿಕೊಂಡಿತ್ತು. ಆದರೀಗ ಐಪಿಎಲ್ ಮುಂದೂಡಲಾಗಿದೆ. ಇದಾಗ್ಯೂ ಟೂರ್ನಿಯನ್ನು ಪೂರ್ಣಗೊಳಿಸುವುದಾಗಿ ಬಿಸಿಸಿಐ ಘೋಷಿಸಿದೆ. ಆದರೆ ಈ ಮುಂದೂಡಿಕೆಯಿಂದ ಆರ್​ಸಿಬಿ ಅತ್ಯುತ್ತಮ ಲಾಭ ಪಡೆದುಕೊಳ್ಳಲಿದೆ. ಹೌದು, ಐಪಿಎಲ್ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದ್ದು, ಇದರಿಂದ ಆರ್​ಸಿಬಿ ತನ್ನ ತಂಡವನ್ನು ಪೂರ್ಣ ಪ್ರಮಾಣದಲ್ಲಿ ರಚಿಸಿಕೊಳ್ಳಬಹುದು. ಏಕೆಂದರೆ…

1 4 5 6
error: Content is protected !!