ಬಾಯಾಗ ಬಸಪ್ಪ ಹೊಟ್ಯಾಗ ವಿಷಪ್ಪ!
ಸಿದ್ಧಸೂಕ್ತಿ : ಬಾಯಾಗ ಬಸಪ್ಪ ಹೊಟ್ಯಾಗ ವಿಷಪ್ಪ(ಹೊರಗ ಬಸಪ್ಪ ಒಳಗ ವಿಷಪ್ಪ) ಬಾಯಲ್ಲಿ ಬಸವ! ಶಿವ! ಹರಿ! ವಿಷ್ಣು! ಗೋವಿಂದ! ರಾಮ! ಕೃಷ್ಣ! ಎಂದು ಜಪಿಸುವರು ಹಲರು! ಅಂತರಂಗವೂ ಹಾಗಿದ್ದರೆ ಬಲು ಚೆನ್ನ! ಅಂಥವರ ತನು ಭಾವ ಶುದ್ಧ! ಹಾಗಿರರು ಕೆಲರು. ಹೊರಗೆ ಗುರು ದೇವರ ಜಪಃ! ಒಳಗೆ ವಿಷ ಸಂಚಿನ ತಪಃ! ತೋರಿಕೆಗೆ ಮಠ ಮಂದಿರ ಮಸೀದಿ ಚರ್ಚ್ ಗೆ ನುಗ್ಗುವರು, ತಲೆ ಬಾಗುವರು. ಕುಂಕುಮ ಟೋಪಿ ಶಿಲುಬೆ ವೇಷ ಧರಿಸುವರು, ಪೂಜೆ…



















